Gd information....thank u sir.. Such a brilliant boy....wow..... On Jun 25, 2016 9:37 PM, "HAREESHKUMAR K Agasanapura" <[email protected]> wrote:
> http://www.ejnana.com/2016/06/blog-post_25.html?m=1 > > *ಯಾವ ಸ್ವರ್ಗದ ಹೂವೋ ಈ ಟೆರೆನ್ಸ್ ಟಾವೋ!* > > *ರೋಹಿತ್ ಚಕ್ರತೀರ್ಥ* > > > <https://4.bp.blogspot.com/-VXkVyKp1rQ0/V25QUvHuW5I/AAAAAAAAfBk/r-TS8lXPgmsk4IwUl-yU91fpszJLgCwPQCLcB/s1600/Tao_terence_download_2.jpg> > > ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಗಣಿತ ತರಗತಿ. > ಕ್ಯಾಲ್ಕುಲಸ್ಸಿನ ಮೇಲೆ ಯಾವುದೋ ಗಹನ ಪ್ರಶ್ನೆಯನ್ನು ಪ್ರೊಫೆಸರ್ ಬೋರ್ಡಿನ ಮೇಲೆ > ಬಿಡಿಸುತ್ತಿದ್ದಾರೆ. ಗಣಿತದ ಸಿಕ್ಕುಸಿಕ್ಕಾದ ಸಾಲುಗಳನ್ನು ಒಡೆಯುತ್ತ ಒಂದೊಂದು ಹೆಜ್ಜೆ > ಮುಂದುವರಿಯುತ್ತಲೇ ಅವರಿಗೆ ಹಾದಿ ತಪ್ಪಿದ ಅರಿವಾಗಿದೆ. ಜಿಂಕೆಯ ಹಿಂದೆ ಹೋಗಿ ದಾರಿ ತಪ್ಪಿದ > ದುಷ್ಯಂತನಂತೆ ಬೆಪ್ಪಾಗಿ ನಿಂತಿದ್ದಾರೆ. ಅವರ ಲೆಕ್ಕದ ತಲೆಬುಡ ಅರ್ಥವಾಗದಿದ್ದರೂ > ವಿದ್ಯಾರ್ಥಿಗಳು ಈ ಶೋಕದಲ್ಲಿ ನಾವೂ ಭಾಗವಹಿಸಬೇಕು ಎನ್ನುವಂತೆ ಜೋಲುಮುಖ ಮಾಡಿ > ಕೂತಿದ್ದಾರೆ. ಅಷ್ಟರಲ್ಲಿ ಆ ನೀರವ ಮೌನವನ್ನು ಸೀಳಿಕೊಂಡು ಒಂದು ಪುಟಾಣಿ ಕೀರಲು ದನಿ > ಬಂದಿದೆ. ಆ ಚೋಟುದ್ದದ ಹುಡುಗ ಎದ್ದುನಿಂತು ಗುರುಗಳು ಎಲ್ಲಿ ತಪ್ಪಿದ್ದಾರೆ ಎನ್ನುವುದನ್ನು > ಕರಾರುವಾಕ್ಕಾಗಿ ತೋರಿಸಿ, ಮುಂದಿನ ಸಾಲುಗಳನ್ನು ಹೇಗೆ ಬರೆದರೆ ಈ ತೊಂದರೆಯಿಂದ ಪಾರಾಗಬಹುದು > ಎನ್ನುವ ದಾರಿ ತೋರುತ್ತಾನೆ. ಕ್ಷಣಕಾಲ ಎಲ್ಲವನ್ನೂ ಮರೆತು ಅವನ ಮುಖವನ್ನೇ > ನೆಟ್ಟದೃಷ್ಟಿಯಿಂದ ನೋಡುವ ಗುರುಗಳು "ವಾಹ್! ಎಂತಹ ಸುಂದರ ಪರಿಹಾರ! ಮತ್ತದಕ್ಕೆ ಎಷ್ಟೊಂದು > ಅರ್ಥಪೂರ್ಣವಾದ ನಿರೂಪಣೆ!" ಎಂದು ಮನದುಂಬಿ ಹೇಳಿ ಚಪ್ಪಾಳೆ ತಟ್ಟಿಯೇಬಿಡುತ್ತಾರೆ. > ಹುಡುಗನಿಗೆ ಕ್ಲಾಸಿನ ಮುಂದೆ ದೊಡ್ಡವನಾದೆನೆಂಬ ಮುಜುಗರ, ಹಿತವಾದ ರೋಮಾಂಚನ, ಎದೆಯಲ್ಲಿ > ಖುಷಿಯ ತಬಲ. > > ಯಾಕೆಂದರೆ ಅವನಿಗಿನ್ನೂ ಆಗ, ನಂಬಿದರೆ ನಂಬಿ, ಕೇವಲ ಒಂಬತ್ತು ವರ್ಷ! > ಅವನು ಎಷ್ಟೊಂದು ಸಣ್ಣ ಗುಬ್ಬಚ್ಚಿಯೆಂದರೆ, ಇಪ್ಪತ್ತರ ಹರೆಯದ ಹುಡುಗರಿಗಾಗಿ ಮಾಡಿದ > ಡೆಸ್ಕು ಕೂಡ ಅವನಿಗೆ ಎಟುಕುತ್ತಿರಲಿಲ್ಲ! ಅದಕ್ಕೆಂದೇ, ಇನ್ನೇನು ಒನ್-ಟೂ-ತ್ರೀ ಎಂದೊಡನೆ > ಚಿಗರೆಯಂತೆ ಓಡಬೇಕೆಂದು ಓಟಗಾರರು ಕೂತಿರುತ್ತಾರಲ್ಲ, ಹಾಗೆ ಕೂತು ಪಾಠ > ಕೇಳಿಸಿಕೊಳ್ಳುತ್ತಿದ್ದ ಜಿಂಕೆಮರಿ ಅದು! ಅವನ ಹೆಸರು ಟೆರೆನ್ಸ್ ಟಾವೋ. ಜಗತ್ತಿನೆಲ್ಲ > ಬಾಲಪ್ರತಿಭೆಗಳನ್ನು ಒಟ್ಟುಸೇರಿಸಿ ಪಂದ್ಯ ಏರ್ಪಡಿಸಿದರೂ ಅದರಲ್ಲೂ ಮೊದಲಿಗನಾಗಿ ಬರಲು > ಹವಣಿಸುತ್ತಿದ್ದ ಈ ಹುಡುಗ, ಅದಾಗಲೇ ಶಾಲೆ ಬಿಡಿ, ಕಾಲೇಜಿನ ಗಣಿತವನ್ನೂ ಅರೆದು > ಕುಡಿದಾಗಿತ್ತು. ಪದವಿಯ ಕೊನೆಯ ವರ್ಷದಲ್ಲಿ ಹುಡುಗರು ಅಭ್ಯಸಿಸುವ ಗಣಿತ ಪಾಠಗಳು ಅವನಿಗೆ > ಬೋರು ಹೊಡೆಸಿ ನಿದ್ದೆ ಬರಿಸುತ್ತಿದ್ದವು. ಯಾಕೆಂದರೆ ಟಾವೋ ಎರಡನೇ ವಯಸ್ಸಿಗೇ ಟಿವಿ > ನೋಡುತ್ತ ಓದಲು ಕಲಿತವನು. ಅಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ನೋಡುತ್ತ ಅದು ಯಾಕೆ > ಹಾಗೆ, ಇದು ಯಾಕೆ ಹೀಗೆ ಎಂದು ತರ್ಕದ ಪ್ರಶ್ನೆ ಹಾಕಿ ಅಪ್ಪಮ್ಮನನ್ನೇ > ಗಾಬರಿಗೊಳಿಸುತ್ತಿದ್ದವನು. ಎರಡೂವರೆ ವರ್ಷದ ಈ ಮಗು ಒಮ್ಮೆ ಆರು ವರ್ಷದ ಹುಡುಗನನ್ನು > ಹತ್ತಿರ ಕೂರಿಸಿಕೊಂಡು ಕೂಡು-ಕಳೆ ಲೆಕ್ಕ ಹೇಳಿಕೊಡುತ್ತಿದ್ದುದನ್ನು ನೋಡಿದ ತಂದೆಗೆ > ನಿಜಕ್ಕೂ ಆಘಾತವಾಯಿತು. ಟೆರೆನ್ಸ್ ಮೂರನೇ ಕ್ಲಾಸಿನಲ್ಲಿದ್ದಾಗ, ಹನ್ನೆರಡನೇ ಕ್ಲಾಸಿನ > ಹುಡುಗರ ಜೊತೆ ಚೆಸ್ ಆಡಿ ಚೆಕ್‌ಮೇಟ್ ಕೊಟ್ಟುಬಿಡುತ್ತಿದ್ದ! ಐದನೇ ಕ್ಲಾಸಿಗೆ > ಬರುವಷ್ಟರಲ್ಲಿ ಜ್ಯಾಮೆಟ್ರಿಯನ್ನು ಓದಿಮುಗಿಸಿ ಬೀಜಗಣಿತ, ಅಂಕಗಣಿತಗಳ ಪುಸ್ತಕದಲ್ಲಿ ಎಲ್ಲಾ > ಅಭ್ಯಾಸ ಲೆಕ್ಕಗಳನ್ನು ಮಾಡಿಬಿಟ್ಟಿದ್ದ. ಒಂಬತ್ತನೇ ವಯಸ್ಸಿಗೆ ಅವನು ಹೋಗಿ > ಕೂರುತ್ತಿದ್ದದ್ದು ಮನೆ ಪಕ್ಕದಲ್ಲಿದ್ದ ಅಡಿಲೇಡ್ ಯೂನಿವರ್ಸಿಟಿಯ ಎಮ್ಮೆಸ್ಸಿ > ಕ್ಲಾಸುಗಳಲ್ಲಿ! > > ಟೆರೆನ್ಸ್ ಹುಟ್ಟಿದ್ದು ೧೯೭೫ರ ಜುಲೈ ೧೭ರಂದು. ಅವನದ್ದು ಆಸ್ಟ್ರೇಲಿಯದಲ್ಲಿ ತಳ ಊರಿದ > ಚೈನೀಸ್ ಕುಟುಂಬ. ಅಪ್ಪ ಬಿಲ್ಲಿ ಟಾವೋ ಮಕ್ಕಳ ವೈದ್ಯ. ತಾಯಿ ಗ್ರೇಸ್, ಹಾಂಗ್‌ಕಾಂಗ್ > ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಭೌತವಿಜ್ಞಾನಗಳನ್ನು ಅಧ್ಯಯನ ಮಾಡಿದ್ದಳು. ಇವರಿಬ್ಬರೂ > ಮದುವೆಯಾಗಿ ೧೯೭೦ರ ದಶಕದಲ್ಲಿ ಹಾಂಗ್‌ಕಾಂಗಿನಿಂದ ಆಸ್ಟ್ರೇಲಿಯಕ್ಕೆ ಬಂದು ನೆಲೆಸಿದರು. > ಅಲ್ಲೇ ಹುಟ್ಟಿದ ಟೆರೆನ್ಸ್, ಒಂದು ರೀತಿಯಲ್ಲಿ ಎರಡು ಸಂಸ್ಕೃತಿಗಳ ಮಿಶ್ರಫಲ ಎಂದೇ > ಹೇಳಬಹುದು. ಮನೆಯಲ್ಲಿ ಸಾಂಪ್ರದಾಯಿಕ ಚೈನೀಸ್ ಜೀವನಕ್ರಮ ಇದ್ದರೂ ಹೊರಗೆ ಆಧುನಿಕ > ಆಸ್ಟ್ರೇಲಿಯನ್ ಆಗಿ ಬೆಳೆಯುತ್ತಿದ್ದವನು ಟೆರೆನ್ಸ್. ಐದು ವರ್ಷದ ಎಳೆಗರುವಾಗಿದ್ದಾಗಲೇ ಅವನ > ಸಾಮರ್ಥ್ಯವೇನು ಎನ್ನುವುದು ಹೆತ್ತವರಿಗೆ ಸಂಪೂರ್ಣವಾಗಿ ಅರ್ಥವಾಗಿಬಿಟ್ಟಿತ್ತು. ಹಾಗಾಗಿಯೇ > ಅವನಿಗೆ ಯಾವುದರಲ್ಲೂ ಒತ್ತಡ ಹೇರದೆ, ತನ್ನಿಷ್ಟದಂತೆ ಮುಂದುವರಿಯಲು ಬಿಟ್ಟರು. ಕಾಲೇಜಿನ > ಪಾಠಗಳನ್ನು ಕೇಳಿಸಿಕೊಳ್ಳಬೇಕೆಂದು ಈ ನರ್ಸರಿ ಮಗು ಬಯಸಿದಾಗ, ಕಾಲೇಜಿನ ಆಡಳಿತ ಮಂಡಳಿ ಜೊತೆ > ಮಾತಾಡಿ ಅದನ್ನೂ ವ್ಯವಸ್ಥೆ ಮಾಡಿದರು. ಗಣಿತ ಪ್ರಪಂಚದಲ್ಲಿ ಒಲಿಂಪಿಯಾಡ್ ಸ್ಪರ್ಧೆಗೆ ಒಂದು > ವಿಶೇಷ ಸ್ಥಾನವಿದೆ. ಅದರಲ್ಲಿ ಗೆಲ್ಲುವುದು ಬಿಡಿ, ಭಾಗವಹಿಸಿ ಬರುವುದೇ ಒಲಿಂಪಿಕ್ ಚಿನ್ನದ > ಪದಕಕ್ಕೆ ಸಮ ಎಂದು ಗಣಿಸುತ್ತಾರೆ. ಅಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ > ಮೊದಲ ಬಾರಿಗೆ ಭಾಗವಹಿಸುವ ಮೂಲಕವೇ ಟೆರೆನ್ಸ್ ದಾಖಲೆ ಬರೆದ. ಯಾಕೆಂದರೆ, ೧೯೮೬ರಲ್ಲಿ > ಒಲಿಂಪಿಯಾಡ್ ಬರೆಯಲು ಕೂತಾಗ ಅವನಿಗೆ ಇನ್ನೂ ಹನ್ನೊಂದು ವರ್ಷವೂ ಪೂರ್ತಿ ತುಂಬಿರಲಿಲ್ಲ! > ೧೯೮೬ರಿಂದ ಸತತ ಮೂರು ವರ್ಷ ಟೆರೆನ್ಸ್ ಅಂತಾರಾಷ್ಟ್ರೀಯ ಒಲಿಂಪಿಯಾಡ್‌ಗೆ ಆಯ್ಕೆಯಾದದ್ದೂ > ಒಂದು ದಾಖಲೆ. ಅದರಲ್ಲಿ ಕ್ರಮವಾಗಿ ಕಂಚು, ಬೆಳ್ಳಿ, ಚಿನ್ನದ ಪದಕಗಳನ್ನು ಗಳಿಸಿದ್ದೂ ಒಂದು > ದಾಖಲೆ. ಈ ಮೂರು ಪದಕಗಳಲ್ಲಿ ಒಂದನ್ನೂ ಅವನಷ್ಟು ಕಿರಿಯ ವಯಸ್ಸಿನಲ್ಲಿ ಪಡೆದ ಬೇರೆ > ಹುಡುಗರಿಲ್ಲ; ಇಂದಿಗೂ! > > ಟೆರೆನ್ಸ್ ಹದಿನಾಲ್ಕನೇ ವಯಸ್ಸಿಗೆ ರೀಸರ್ಚ್ ಸೈನ್ಸ್ ಇನ್ಸ್ಟಿಟ್ಯೂಟ್‌ಗೆ ಸೇರಿದ. > ಹದಿನೈದನೇ ವಯಸ್ಸಲ್ಲಿ ತನ್ನ ಮೊದಲ ಸಂಶೋಧನಾ ಲೇಖನ ಪ್ರಕಟಿಸಿದ! ಹದಿನಾರನೇ ವರ್ಷಕ್ಕೆ ತನ್ನ > ಊರಲ್ಲೇ ಇದ್ದ ಫ್ಲಿಂಡರ್ಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಮಾಸ್ಟರ್ ಡಿಗ್ರಿ ಪಡೆದ. > "ಅಲ್ಲಯ್ಯ ಟೆರೆನ್ಸ್, ನೀನು ಜಗತ್ತಿನ ಅತ್ಯಂತ ಪ್ರತಿಭಾಂತ ಶಿಶು. ಯಾವುದಾದರೂ ಪ್ರತಿಷ್ಠಿತ > ವಿಶ್ವವಿದ್ಯಾಲಯ ಸೇರಿ ಪ್ರಸಿದ್ಧನಾಗುವುದು ಬಿಟ್ಟು ನಾವು ಹೆಸರು ಕೇಳದ ಸಂಸ್ಥೆಯಲ್ಲಿ > ಪದವಿಗೆ ಸೇರಿದೆಯಲ್ಲ?" ಎಂದು ಬೇರೆಯವರು ಕೇಳಿದಾಗ "ಫ್ಲಿಂಡರ್ಸ್‌ನಲ್ಲಿ ಒಳ್ಳೊಳ್ಳೆಯ > ಗುರುಗಳಿದ್ದರು, ಈಗಲೂ ಇದ್ದಾರೆ. ಇಷ್ಟಕ್ಕೂ ನಾನು ಯಾರನ್ನೂ-ಯಾವುದನ್ನೂ ಕನಿಷ್ಠ-ಗರಿಷ್ಠ > ಎಂಬ ಮಾನದಂಡ ಇಟ್ಟುಕೊಂಡು ಅಳೆಯುವವನಲ್ಲ. ಫ್ಲಿಂಡರ್ಸ್ ನನ್ನ ಪ್ರೀತಿಯ ಮಾತೃಸಂಸ್ಥೆ. ಅದು > ನನಗೆ ಬೇಕಾದ್ದೆಲ್ಲವನ್ನೂ ತುಸು ಹೆಚ್ಚೇ ಕೊಟ್ಟಿದೆ" ಎಂದು ಅಭಿಮಾನದಿಂದ ಟೆರೆನ್ಸ್ > ಹೇಳಿಕೊಳ್ಳುತ್ತಿದ್ದ. ಅಲ್ಲಿ ೧೯೯೨ರಲ್ಲಿ ಪದವಿಪತ್ರ ಹಿಡಿದು ಹೊರಬರುವ ಹೊತ್ತಿಗಾಗಲೇ ಅವನ > ಕೀರ್ತಿ ಜಗದಗಲ ವ್ಯಾಪಿಸಿಯಾಗಿತ್ತು. ದೊಡ್ಡ ದೊಡ್ಡ ಸಂಸ್ಥೆಗಳು ಈ ಬ್ರಹ್ಮರ್ಷಿಯನ್ನು ತಮ್ಮ > ಬುಟ್ಟಿಗೆ ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವು. ಕೊನೆಗೆ ಅಮೆರಿಕದ > ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ರೀಸರ್ಚ್ ಮಾಡಲು ಸೇರುವುದೆಂದು ನಿಕ್ಕಿಯಾಯಿತು. > ಅಲ್ಲಿನ ಸಂದರ್ಶಕರು, "ನೀನು ಜಗದ್ವಿಖ್ಯಾತ ಎಂದು ನಮಗೆ ಗೊತ್ತು. ಆದರೂ ನಮ್ಮ ಸಂಸ್ಥೆಯನ್ನು > ಸೇರುವವರು ಶಿಫಾರಸು ಪತ್ರ ತರಬೇಕು ಎನ್ನುವುದು ನಿಯಮ. ಹಾಗಾಗಿ ನಿನ್ನಲ್ಲಿ ಅಂಥಾದ್ದೇನಾದರೂ > ಪತ್ರ ಇದ್ದರೆ ಕೊಡು" ಎಂದಾಗ ಟೆರೆನ್ಸ್ ಕೊಟ್ಟದ್ದೇನು ಗೊತ್ತೆ? "ಸಂಸ್ಥೆಗಳಿಗೆ > ವಿದ್ಯಾರ್ಥಿಗಳು ಎಡತಾಕುವುದು ಸಾಮಾನ್ಯ. ಆದರೆ, ಸಂಸ್ಥೆಗಳೇ ಮೇಲೆಬಿದ್ದು > ಆರಿಸಿಕೊಳ್ಳಬೇಕಾದ ಮಾಣಿಕ್ಯವಿದ್ದರೆ ಅದು ಇವನೇ" ಎಂದು ಬರೆದಿದ್ದ ಪತ್ರ. ಅದನ್ನು > ಕೊಟ್ಟಿದ್ದವರು ಗಣಿತಭೀಷ್ಮ ಪಾಲ್ ಏರ್ಡಿಶ್! > > ೧೯೯೬ರಲ್ಲಿ ಡಾಕ್ಟರೇಟ್ ಮುಗಿಸಿದಾಗ ಟೆರೆನ್ಸ್‌ಗೆ ೨೨. ಅಲ್ಲಿಂದ ಮುಂದೆ ಅಧ್ಯಾಪಕನಾಗಿ > ಅವನು ಸೇರಿದ್ದು ಲಾಸ್ ಏಂಜಲೀಸ್‌ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯವನ್ನು. > ಮುಂದಿನ ಮೂರೇ ವರ್ಷದಲ್ಲಿ ಆ ಸಂಸ್ಥೆ ಅವನನ್ನು ಪೂರ್ಣಾವಧಿ ಪ್ರೊಫೆಸರ್ ಆಗಿ > ನೇಮಿಸಿಬಿಟ್ಟಿತು. ಅದು ಮಾತ್ರವಲ್ಲ; ಅಮೆರಿಕದ ಯಾವ ಸಂಸ್ಥೆಯಲ್ಲೂ ಯಾವ ವ್ಯಕ್ತಿಯೂ ೨೪ > ವರ್ಷಕ್ಕೆ ಪ್ರೊಫೆಸರ್ ಹುದ್ದೆಗೆ ಏರಿದ ಉದಾಹರಣೆ ಇರಲಿಲ್ಲ. ಬಿಡಿ, ಇದುವರೆಗೂ ಆ > ದಾಖಲೆಯನ್ನು ಮುರಿಯಲು ಜಗತ್ತಿನ ಯಾವ ಮೇಧಾವಿಗೂ ಸಾಧ್ಯವಾಗಿಲ್ಲ! ಪಂಡಿತ ವಲಯದಲ್ಲಿ ಅತ್ಯಂತ > ಪ್ರತಿಷ್ಠಿತ ಬಹುಮಾನವಾದ ಕ್ಲೇ ಸಂಸ್ಥೆಯ ಸಂಶೋಧನಾ ಪ್ರಶಸ್ತಿಯನ್ನು ಅವನಿಗೆ ೨೦೦೩ರಲ್ಲಿ > ಪ್ರದಾನ ಮಾಡಲಾಯಿತು. ಗಣಿತಲೋಕದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಫೀಲ್ಡ್ಸ್ ಪದಕ > ಕೊಡುತ್ತಾರೆ. ನಲವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ, ಅತ್ಯಂತ ದೊಡ್ಡ ಸಾಧನೆ ಮಾಡಿದ > ಗಣಿತಜ್ಞರಿಗಷ್ಟೇ ಕೊಡುವ ಈ ಪ್ರಶಸ್ತಿಯನ್ನು ಗಣಿತದ ನೊಬೆಲ್ ಎಂದೂ ಹೇಳುವುದುಂಟು. ೨೫ನೇ > ಅಂತಾರಾಷ್ಟ್ರೀಯ ಗಣಿತ ಕಾಂಗ್ರೆಸ್ ೨೦೦೬ರಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆದಾಗ, ಆ ವರ್ಷದ > ಫೀಲ್ಡ್ಸ್ ಪದಕವನ್ನು ೩೦ ವರ್ಷದ ಟೆರೆನ್ಸ್‌ಗೆ ಕೊಡಬೇಕು ಎಂದು ಜಗತ್ತಿನ ಎಲ್ಲ ಮಹಾನ್ > ಗಣಿತಜ್ಞರೂ ಸೇರಿ ನಿರ್ಣಯ ಪಾಸು ಮಾಡಿದರು. "ಅವನಿಗಿನ್ನೂ ೩೦ ವರ್ಷ, ನಲವತ್ತರ ಹತ್ತಿರ > ಸರಿಯುತ್ತಿರುವ ಬೇರೆ ಗಣಿತಜ್ಞರಿಗೆ ಕೊಡಬಹುದಲ್ಲ" ಎಂದು ರಾಜಕೀಯ ಮಾತಾಡುವ ಒಬ್ಬನೂ > ಅಲ್ಲಿರಲಿಲ್ಲ ಎನ್ನುವುದೇ ವಿಶೇಷ. ಒನ್ಸ್ ಅಗೈನ್, ಅತ್ಯಂತ ಕಿರಿಯ ವಯಸ್ಸಿಗೆ ಈ ಪ್ರಶಸ್ತಿಯ > ಗರಿ ಸಿಕ್ಕಿಸಿಕೊಂಡ ದಾಖಲೆ ಟೆರೆನ್ಸ್ ಹೆಸರಲ್ಲಿ ಬರೆಯಲ್ಪಟ್ಟಿತು! ಅದೇ ವರ್ಷ ಅವನಿಗೆ > ಚೆನ್ನೈನ ಒಂದು ಸಂಸ್ಥೆ ಕೊಡುವ ಸಾಸ್ತ್ರ ರಾಮಾನುಜನ್ ಬಹುಮಾನವೂ ಬಂತು. ಮರು ವರ್ಷ ರಾಯಲ್ > ಸೊಸೈಟಿ ಅವನನ್ನು ತನ್ನ ಸದಸ್ಯನಾಗಿ ಆರಿಸಿತು. ಅದೇ ಸಮಯದಲ್ಲಿ "ವರ್ಷದ ಆಸ್ಟ್ರೇಲಿಯನ್" > ಪಟ್ಟಿಯಲ್ಲೂ ಟೆರೆನ್ಸ್ ಹೆಸರು ಕಾಣಿಸಿಕೊಂಡಿತ್ತು. > > ಬಹುಶಃ ಈ ಹುಡುಗ ಪ್ರಶಸ್ತಿಗಳನ್ನು ಸ್ವೀಕರಿಸುವುದಕ್ಕೆ ಜಗತ್ತು ಸುತ್ತುವುದರಲ್ಲೇ > ಕಳೆದುಹೋಗಿದ್ದಾನೆಂದು ಭಾವಿಸಿದ್ದರೆ, ಸ್ಸಾರಿ ಕಣ್ರೀ, ಈತ ಬರೆದಷ್ಟು ಸಂಶೋಧನಾ > ಲೇಖನಗಳನ್ನು ಮತ್ತು ಕಂಡುಹಿಡಿದಷ್ಟು ಹೊಸ ಫಲಿತಾಂಶಗಳನ್ನು ಬೇರಾರೂ ಮಾಡಿಲ್ಲ ಎಂದು ಯಾವ > ಸಂಶಯವಿಲ್ಲದೆ ಹೇಳಬಹುದು. ಇದುವರೆಗೆ ಆತ ಬರೆದಿರುವ ಅತ್ಯಂತ ಗಹನವಾದ ರೀಸರ್ಚ್ ಪೇಪರುಗಳೇ > ೩೦೦ ದಾಟುತ್ತವೆ. ೨೦೧೩ರ ಹೊತ್ತಿಗಾಗಲೇ ಟೆರೆನ್ಸ್ ತನ್ನ ಬಿಡುವಿಲ್ಲದ ಕೆಲಸಕಾರ್ಯಗಳು > ಮತ್ತು ಅಧ್ಯಾಪನದ ನಡುವೆಯೂ ಉನ್ನತ ಗಣಿತಕ್ಕೆ ಸಂಬಂಧಿಸಿದ ೧೭ ಪುಸ್ತಕಗಳನ್ನು ಬರೆದಿದ್ದ! > ಗಣಿತ ಪ್ರಪಂಚದಲ್ಲಿ ವಿದ್ವಾಂಸರ ಬೌದ್ಧಿಕ ಮಟ್ಟವನ್ನು ಅಳೆಯಲು ಏರ್ಡಿಶ್ ಸಂಖ್ಯೆ ಎಂಬ > ತಮಾಷೆಯ ಕಾನ್ಸೆಪ್ಟ್ ಒಂದಿದೆ. ಮಹಾನ್ ಗಣಿತಜ್ಞರಾಗಿದ್ದ ಏರ್ಡಿಶ್ ಅವರ ಜೊತೆ ಸ್ವತಃ ಕೂತು > ಸಂಶೋಧನಾ ಪ್ರಬಂಧ ಬರೆದವರ ಏರ್ಡಿಶ್ ಸಂಖ್ಯೆ ೧. ಇನ್ನು ಅಂಥವರ ಜೊತೆ (ಅಂದರೆ ಏರ್ಡಿಶ್ > ಸಂಖ್ಯೆ ೧ ಆಗಿರುವವರ ಜೊತೆ) ಸಹಲೇಖಕರಾದವರ ಏರ್ಡಿಶ್ ಸಂಖ್ಯೆ ೨. ಈ ಪಟ್ಟಿ ಹೀಗೇ > ಮುಂದುವರಿದು, ಇಂದು ಏರ್ಡಿಶ್ ಸಂಖ್ಯೆ ೧೫ ಆಗಿರುವವರೂ ಇದ್ದಾರೆ. ಸಂಖ್ಯೆ ಚಿಕ್ಕದಾದಷ್ಟೂ > ಆತ ಏರ್ಡಿಶ್ ಎಂಬ ಗಣಿತ ಶಿಖರಕ್ಕೆ ಹತ್ತಿರದಲ್ಲಿದ್ದಾನೆಂಬುದೊಂದು ಅಲಿಖಿತ ಸಿದ್ಧಾಂತ. > ಟೆರೆನ್ಸ್‌ಗೆ ಏರ್ಡಿಶ್ ಅಂತರಂಗದ ಗೆಳೆಯರೇ ಆಗಿದ್ದರು. ೭೨ ವರ್ಷದ ಆ ಮನುಷ್ಯ ಹತ್ತು ವರ್ಷದ > ಈ ಪುಟಾಣಿ ಮೊಲದ ಜೊತೆ ಕೂತು ಗಹನವಾದ ಗಣಿತ ಸಮಸ್ಯೆಗಳನ್ನು ಗಂಭೀರವಾಗಿ ಕೂತು > ಚರ್ಚಿಸುವುದಿತ್ತು. ಅಂದ ಹಾಗೆ, ಟೆರೆನ್ಸ್‌ನ ಏರ್ಡಿಶ್ ಸಂಖ್ಯೆ ೨. > > ಇದೆಲ್ಲ ಸರಿ ಮಾರಾಯ್ರೇ, ಆದರೆ ಈತ ಮಾಡಿದ ಸಂಶೋಧನೆಯಾದರೂ ಏನು ಎನ್ನುತ್ತೀರೋ? > ಮೇಲುಮೇಲಿಂದ ಹೇಳಬೇಕಾದರೆ, ಟೆರೆನ್ಸ್ ಮುಖ್ಯವಾಗಿ ಸಂಖ್ಯಾ ಸಿದ್ಧಾಂತ, ಹಾರ್ಮೋನಿಕ್ > ಅನಾಲಿಸಿಸ್, ಸಂಭವನೀಯತಾ ಸಿದ್ಧಾಂತ, ಡೈನಮಿಕಲ್ ಸಿಸ್ಟಮ್ಸ್ ಎಂಬ ಕೆಲವು ವಿಷಯಗಳಲ್ಲಿ ಕೆಲಸ > ಮಾಡಿದ್ದಾನೆ. ಇವಿಷ್ಟರಲ್ಲಿ ನಮ್ಮಂತಹ "ಕೆಳ ಹುಬ್ಬಿನ" ಸಾಮಾನ್ಯರಿಗೆ ಅರ್ಥವಾಗಬಹುದಾದ್ದು > ಸಂಖ್ಯಾ ಸಿದ್ಧಾಂತ ಒಂದೇ. ಈ ಗಣಿತ ಶಾಖೆಯ ವಿಶೇಷವೇನೆಂದರೆ, ಅದರಲ್ಲಿ ಬರುವ ಸಮಸ್ಯೆಗಳನ್ನು > ನಿರೂಪಿಸುವುದು ತುಂಬಾ ಸುಲಭ; ಅಷ್ಟೇ ಕಷ್ಟ ಅವುಗಳ ಸಾಧನೆ! ಉದಾಹರಣೆಗೆ, ೧ಕ್ಕಿಂತ > ದೊಡ್ಡದಾದ ಯಾವುದೇ ಬೆಸ ಸಂಖ್ಯೆಯನ್ನು ಗರಿಷ್ಠ ಐದು ಪರಿಮೇಯ (Prime number)ಗಳ > ಮೊತ್ತವಾಗಿ ಬರೆಯಬಹುದು - ಎನ್ನುವುದು ಒಂದು ಫಲಿತಾಂಶ. ಹಾಗೆಯೇ, ಪರಿಮೇಯಗಳ ಅನಂತ > ಸಾಮ್ರಾಜ್ಯದಲ್ಲಿ ಯಾವುದೇ ಅಳತೆಯ, ಯಾವುದೇ ಸಾಮಾನ್ಯಾಂತರ (Common difference) ವಿರುವ > ಅಗಣಿತ ಸಮಾಂತರ ಶ್ರೇಢಿಗಳನ್ನು ಹೆಕ್ಕಿ ತೆಗೆಯಬಹುದು - ಎನ್ನುವುದು ಇನ್ನೊಂದು. ಟೆರೆನ್ಸ್ > ಇಲ್ಲದೇ ಹೋಗಿದ್ದರೆ ಈ ಎರಡಕ್ಕೂ ಸಾಧನೆ ಬರೆಯುವವರು ಮುಂದಿನ ಐನೂರು ವರ್ಷಗಳಲ್ಲಿ > ಹುಟ್ಟುತ್ತಿದ್ದರೋ ಇಲ್ಲವೋ ಅನುಮಾನ. "ಅವನ ಪ್ರಬಂಧಗಳು ದೇವರೇ ಬರೆದ ಕಾವ್ಯದಂತಿರುತ್ತವೆ" > ಎಂದು ಸಹೋದ್ಯೋಗಿ ಬೆನ್ ಗ್ರೀನ್ ಹೇಳಿದ್ದುಂಟು. ಉನ್ನತ ಗಣಿತಕ್ಕೂ ಕಾವ್ಯಸೌಂದರ್ಯಕ್ಕೂ > ಹತ್ತಿರದ ನಂಟು ಎನ್ನುವುದನ್ನು ಟೆರೆನ್ಸ್ ಕೂಡ ಅಲ್ಲಗಳೆಯುವುದಿಲ್ಲ. > > ಇಷ್ಟೆಲ್ಲ ಬಿರುದುಬಾವಲಿಗಳನ್ನು ಕತ್ತಿಗೆ ಸುತ್ತಿಕೊಂಡಿರುವ ಈ ಮನುಷ್ಯ, ಮನುಷ್ಯನಾಗಿ > ಹೇಗಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದ್ದದ್ದೇ. ಆದರೆ, ಟೆರೆನ್ಸ್‌ನನ್ನು ಹತ್ತಿರದಿಂದ > ನೋಡಿದವರಿಗೆ ಒಮ್ಮೆ, "ನಿಜವಾಗಿಯೂ ನಾವು ಅಷ್ಟೆಲ್ಲ ಸಾಧನೆಗಳ ಗುಡುಗು-ಸಿಡಿಲುಗಳನ್ನು > ಕೇಳಿದ್ದು ಈತನ ಮೇಲೆಯಾ?" ಎಂದು ಅನುಮಾನ ಮುತ್ತಿಕೊಳ್ಳುತ್ತದೆ. ಕ್ಯಾಲಿಫೋರ್ನಿಯ ವಿವಿಯ > ಕ್ಯಾಂಪಸ್ಸಿನಲ್ಲಿ ಗುಂಪಿನಲ್ಲಿ ಗೋವಿಂದನಂತೆ ಕಳೆದುಹೋಗುವ, ಹೆಚ್ಚೆಂದರೆ > ಪೌರಸ್ತ್ಯದೇಶದಿಂದ ಬಂದ ಒಬ್ಬ ಪದವಿ ವಿದ್ಯಾರ್ಥಿಯಂತೆ ಕಾಣುವ ಟೆರೆನ್ಸ್ ಸರಳ-ಸಜ್ಜನಿಕೆಯ > ನಿರ್ಲಿಪ್ತಮೂರ್ತಿ. ಹೂದೋಟದ ಮಾಲಿಯಿರಲಿ ಯೂನಿವರ್ಸಿಟಿ ಛಾನ್ಸಲರ್ ಇರಲಿ, ಅವನ ದನಿ, ಗೌರವ > ಒಂದೇ. ಅನ್ಯಗ್ರಹದಿಂದ ಬಂದಿಳಿದ ಜೀವಿಯನ್ನು ಕಾಣಬಂದವರಂತೆ ಕೆಲ ಹುಡುಗರು ಕುತೂಹಲಕ್ಕಾಗಿ > ಅವನ ಕೊಠಡಿ ಬಡಿದು ಒಳಬರುವುದುಂಟು. ಯಾವುದೋ ಗಹನ ಲೆಕ್ಕಾಚಾರದಲ್ಲಿ ಕಳೆದುಹೋಗಿರುವ > ಟೆರೆನ್ಸ್ ತಲೆಯೆತ್ತಿ "ಏನು ಬಂದಿರಿ?" ಎಂದು ಕೇಳುತ್ತಾನೆ. "ಯಾ..ಕೂ ಇಲ್ಲ, ಸುಮ್ಮನೆ > ಟೆರೆನ್ಸ್ ಎಂಬ ಅತಿಮಾನುಷ ವ್ಯಕ್ತಿಯನ್ನು ನೋಡಿಹೋಗೋಣ ಅಂತ ಬಂದೆವು" ಎಂದು ಹುಡುಗರು > ನಡುಗುತ್ತ ಹೇಳಿದಾಗ, ಪಿತ್ಥ ನೆತ್ತಿಗೇರಿ ಕೂಗಾಡಬೇಕಿದ್ದ ಟೆರೆನ್ಸ್ ಎಲ್ಲ ಮರೆತು > ಮಗುವಿನಂತೆ ಬಾಯಿಕಳೆದು ನಗುತ್ತಾನೆ. ಪಂಡಿತರು, ಅದರಲ್ಲೂ ಗಣಿತಜ್ಞರು ಇಷ್ಟೊಂದು > ಸ್ವಚ್ಛಂದವಾಗಿ ನಗುತ್ತಾರಾ ಎಂದು ನಮ್ಮನಿಮ್ಮಂತೆ ಆ ಹುಡುಗರೂ ಚಕಿತರಾಗಿ ನಿಲ್ಲುತ್ತಾರೆ. > > *೧೫ ಫೆಬ್ರವರಿ ೨೦೧೫ರ ವಿಜಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ. ಈ > ವ್ಯಕ್ತಿಚಿತ್ರದ ಜೊತೆಗೆ ದೇಶ-ವಿದೇಶದ ಹಲವು ಗಣಿತಜ್ಞರ ಕತೆಗಳಿರುವ "ದೇವರ ತೋಟದ ಸೇಬು > ತಿಂದವನು" ಕೃತಿ ತಾರೀಖು ೨೬ ಜೂನ್ ೨೦೧೬ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ > ಬಿಡುಗಡೆಯಾಗಲಿದೆ.* > > Hareeshkumar K > GHS HUSKURU > MALAVALLI TQ > MANDYA DT > MOB 9880328224 > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
