Excellent artical. Thank u sir
On Aug 11, 2016 5:55 AM, "HAREESHKUMAR K Agasanapura" <[email protected]>
wrote:

> http://m.prajavani.net/article/2016_08_11/430078
>
> *ನಮಗೀಗ ವಕೀಲರಲ್ಲ, ವಿಜ್ಞಾನಿಗಳು ಬೇಕು*
>
> 11 Aug, 2016
>
> ನಾಗೇಶ್ ಹೆಗಡೆ
>
> <https://www.facebook.com/sharer/sharer.php?u=http%3A%2F%2Fgoo.gl%2Ft60ONQ>
> <https://twitter.com/intent/tweet?text=%E0%B2%A8%E0%B2%AE%E0%B2%97%E0%B3%80%E0%B2%97+%E0%B2%B5%E0%B2%95%E0%B3%80%E0%B2%B2%E0%B2%B0%E0%B2%B2%E0%B3%8D%E0%B2%B2%2C+%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%97%E0%B2%B3%E0%B3%81+%E0%B2%AC%E0%B3%87%E0%B2%95%E0%B3%81+http%3A%2F%2Fgoo.gl%2Ft60ONQ>
> <https://plus.google.com/share?url=http%3A%2F%2Fgoo.gl%2Ft60ONQ>
> <http://www.pinterest.com/pin/find/?url=http%3A%2F%2Fgoo.gl%2Ft60ONQ>
> <http://www.linkedin.com/shareArticle?mini=true&title=%E0%B2%A8%E0%B2%AE%E0%B2%97%E0%B3%80%E0%B2%97+%E0%B2%B5%E0%B2%95%E0%B3%80%E0%B2%B2%E0%B2%B0%E0%B2%B2%E0%B3%8D%E0%B2%B2%2C+%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%97%E0%B2%B3%E0%B3%81+%E0%B2%AC%E0%B3%87%E0%B2%95%E0%B3%81+&url=http%3A%2F%2Fgoo.gl%2Ft60ONQ>
>
> ಮಹಾದಾಯಿಯ ನೀರಿಗಾಗಿ ಹುಬ್ಬಳ್ಳಿ- ಧಾರವಾಡದ ಜೋಡಿ ನಗರದಲ್ಲಿ ಹಳೇ ಟಯರ್‌ಗಳು ಹೊತ್ತಿ
> ಉರಿಯುತ್ತಿದ್ದಾಗ ಅಲ್ಲೇ ಹೊರವಲಯದಲ್ಲಿ ಕಂಟ್ರಿ ಕ್ಲಬ್‌ನ ಜಲರಂಜನ ಉದ್ಯಾನದಲ್ಲಿ ನೀರು
> ಜಲಪಾತದಂತೆ ಭೋರ್ಗರೆದು ಚಿಮ್ಮಿ ಚೆಲ್ಲಾಡುತ್ತಿತ್ತು. ಪೆಪ್ಸಿ ಫ್ಯಾಕ್ಟರಿಯಲ್ಲಿ
> ಅಂತರ್ಜಲವನ್ನು ಮೇಲಕ್ಕೆತ್ತಿ ಸಿಹಿಪೇಯದ ಬಾಟಲಿಗಳನ್ನು ತುಂಬಿಸುವ ಕೆಲಸ ನಿರಂತರ
> ನಡೆಯುತ್ತಿತ್ತು. ತುಸುದೂರದ ಸಕ್ಕರೆ ಕಾರ್ಖಾನೆಗಳಲ್ಲಿ ಪಂಪ್‌ಗಳು ತೆರಪಿಲ್ಲದೆ
> ದುಡಿಯುತ್ತಿದ್ದವು. ಅವೆಲ್ಲಕ್ಕಿಂತ ಮುಖ್ಯ ಸಂಗತಿ ಏನೆಂದರೆ, ಇತ್ತ ಟಿವಿ ಚಾನೆಲ್‌ಗಳಲ್ಲಿ
> ನೀರಿನ ವಿಷಯವಾಗಿ ರಾಜಕೀಯ ಕೆಸರೆರಚಾಟ ನಡೆಯುತ್ತಿದ್ದಾಗ ಕನಿಷ್ಠ ಆರು ಕೋಟಿ ಲೀಟರ್ ಕೊಳಚೆ
> ನೀರು ಆ ಜೋಡಿ ನಗರದ ಸುತ್ತಲಿನ ಹಳ್ಳಕೊಳ್ಳಗಳ ಚಾನೆಲ್‌ಗಳಲ್ಲಿ ದುರ್ನಾತ ಧಾರೆಯಾಗಿ ದಿನವೂ
> ಹರಿಯುತ್ತಿತ್ತು. ಅದರಲ್ಲಿ ಕೆಲಪಾಲು ಉಣಕಲ್ ಕೆರೆಗೂ ಹೋಗಿ, ಕಣ್ಣು ಹಾಯಿಸಿದಷ್ಟು ದೂರಕ್ಕೂ
> ಕೆರೆಯಲ್ಲಿ ಜಲಕಳೆ ತುಂಬಿತ್ತು.
>
> ಆಧುನಿಕ ನಾಗರಿಕತೆ ಎಂದರೆ ಜಲಕ್ರೀಡೆ ಬೇಕು, ತಂಪುಪೇಯ ಬೇಕು, ಸಕ್ಕರೆ- ಮದ್ಯಸಾರ ಎಲ್ಲ
> ಬೇಕೇಬೇಕು. ಜೊತೆಗೆ ನಲ್ಲಿಯಲ್ಲಿ ನೀರು ಬೇಕು. ಅದನ್ನು ಎಲ್ಲಿಂದಾದರೂ ಹೇಗಾದರೂ ತರಿಸಿ
> ಕೊಡುವಂತೆ ಪ್ರಖ್ಯಾತ ವಕೀಲರನ್ನು ಮುಂದಿಟ್ಟುಕೊಂಡು ಹೋರಾಡಬೇಕು. ಹೋರಾಡುವಂತೆ ಜನತೆಗೆ
> ಕುಮ್ಮಕ್ಕು ನೀಡಬೇಕು. ಮತ್ತೆ ಅವರನ್ನು ನಿಯಂತ್ರಿಸಲು ಪೊಲೀಸರನ್ನು ಕಳಿಸಬೇಕು.
>
> ನಮೀಬಿಯಾದ ರಾಜಧಾನಿ ವಿಂಢೋಕ್ ನಗರಕ್ಕೆ ಬನ್ನಿ. ಆಫ್ರಿಕಾದ ಕ್ರೂರ ಮರುಭೂಮಿ ಇರುವ ದೇಶ
> ನಮೀಬಿಯಾ. ಕುರುಚಲು ಗಿಡಗಂಟಿಗಳ ನಡುವೆ ಹೇರಳ ವನ್ಯಜೀವಿಗಳು, ಅವನ್ನು ನೋಡಲು ಬರುವ
> ಪ್ರವಾಸಿಗರೇ ಅಲ್ಲಿನ ಪ್ರಮುಖ ಆದಾಯ ಮೂಲ. ವಿಂಢೋಕ್ ಸುತ್ತಮುತ್ತ ಮಳೆ ತೀರಾ ಕಮ್ಮಿ. ನಮ್ಮ
> ಹುಬ್ಬಳ್ಳಿ-ಧಾರವಾಡ ಅಥವಾ ಕೋಲಾರಕ್ಕೆ ಹೋಲಿಸಿದರೆ ಅರ್ಧದಷ್ಟು ಮಳೆ ಅಷ್ಟೆ; ನದಿ ಗಿದಿ ಏನೂ
> ಇಲ್ಲ. ಅಲ್ಲಿನ ನೀರಿನ ನೇರ ಮರುಬಳಕೆ ವ್ಯವಸ್ಥೆ ಇಡೀ ಜಗತ್ತಿಗೇ ಮಾದರಿಯಾಗಿದೆ.
> ಎಷ್ಟೆಂದರೆ, ಕಳೆದ ಮಾರ್ಚ್ 22ರಂದು ‘ವಿಶ್ವ ಜಲದಿನ’ದ ಸಂದರ್ಭದಲ್ಲಿ ಅಲ್ಲಿ ಜಾಗತಿಕ
> ಸಮ್ಮೇಳನ ಏರ್ಪಡಿಸಲಾಗಿತ್ತು.
>
> ಬಳಸಿ ಚೆಲ್ಲಿದ ಕೊಳಚೆ ನೀರನ್ನು ಶುದ್ಧೀಕರಿಸಿ ಮತ್ತೆ ಕುಡಿಯುವ ನೀರಿಗೇ ಸೇರಿಸುವ
> ವ್ಯವಸ್ಥೆ ಅಲ್ಲಿದೆ. ಚರಂಡಿಯಲ್ಲಿ ಹರಿಯುವ ಕಕ್ಕಸು ನೀರನ್ನು ಮರುಬಳಕೆ ಮಾಡಲು ಅನೇಕ
> ವಿಧಾನಗಳಿವೆ. ಸಾಕಷ್ಟು ಶುದ್ಧಗೊಳಿಸಿ, ವಾಹನ ತೊಳೆಯಲು ಅಥವಾ ಉದ್ಯಾನ ಬೆಳೆಸಲು ಬಳಸಬಹುದು.
> ಅಥವಾ ನದಿಯಂತೆ ಹರಿಸಿ, ಕೆರೆಗೆ ತುಂಬಿಸಿ ಕೃಷಿಗೆ, ಕೊಳವೆ ಬಾವಿಗಳಿಗೆ ಮರುಪೂರಣಕ್ಕೆ
> ನೀಡಬಹುದು. ‘ನೇರ ಮರುಬಳಕೆ’ ಎಂದರೆ ಅದು ಆದರ್ಶದ ಪರಮೋಚ್ಚ ವಿಧಾನ. ಈ ವಿಧಾನದಲ್ಲಿ
> ವಿಂಢೋಕ್ ನಗರ ಜಗತ್ತಿನ ನಂಬರ್ 1 ಸ್ಥಾನಕ್ಕೇರಿದರೆ, ಎರಡನೆಯ ಸ್ಥಾನವೂ ಅಲ್ಲೇ ಪಕ್ಕದ
> ದಕ್ಷಿಣ ಆಫ್ರಿಕಾದ ಬ್ಯೂಫೋರ್ಟ್ ಪಟ್ಟಣದಲ್ಲಿದೆ. ನಂತರದ ಸ್ಥಾನ ಸಿಂಗಪೂರ್‌ಗೆ. ಅಲ್ಲಿ
> ನೀರಿನ ಬೇಡಿಕೆಯ ಮೂರರಲ್ಲೊಂದು ಪಾಲು ಕಕ್ಕಸು ಚರಂಡಿಯಿಂದಲೇ ಬರುತ್ತದೆ. ಅದು ನಿಜವಾದ
> ಮಲ-ಪ್ರಭಾ! ನಂತರದ ಸ್ಥಾನಗಳಲ್ಲಿ ಇಸ್ರೇಲಿನ ಹೈಫಾ, ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿ
> ಇತ್ಯಾದಿ ನೂರಾರಿವೆ.
>
> ಮಹಾದಾಯಿಯ ನೀರು ನಮಗೆ ಏಕೆ ಬೇಕೆಂದರೆ ನಮ್ಮ ಮಲಪ್ರಭಾದ ನೀರು ನಮಗೆ ಸಾಲುತ್ತಿಲ್ಲವಂತೆ.
> ಯಾಕೆ ಸಾಲುತ್ತಿಲ್ಲ ಎಂದರೆ, ಸಕ್ಕರೆ ಕಾರ್ಖಾನೆಗಳಿಗಾಗಿ ಕಬ್ಬು ಬೆಳೆಯಲೆಂದು ಭಾರೀ
> ಪ್ರಮಾಣದ ನೀರು ಬಳಕೆಯಾಗುತ್ತಿದೆ. ಬೈಲಹೊಂಗಲದ ಸುತ್ತಮುತ್ತ ಕಬ್ಬಿನ ಹೊಲಗಳೇ ಕಾಣುತ್ತವೆ.
> ಅಲ್ಲಿನ ರೈತರಿಗೆ ನೀರಿನ ಯುಕ್ತ ಬಳಕೆಯ ವಿಧಾನ ಕಲಿಸಿದ್ದೇವೆಯೆ? ಒಂದು ಕಿಲೊ ಸಕ್ಕರೆ
> ತಯಾರಿಸಲು ನಮ್ಮಲ್ಲಿ 2,450 ಲೀಟರ್ ನೀರು ವೆಚ್ಚವಾಗುತ್ತಿದೆ. ವಿಶ್ವ ಜಲಸಂಸ್ಥೆ ಪ್ರಕಾರ
> 1,500 ಲೀಟರ್ ನೀರು ಧಾರಾಳ ಸಾಕು. ಪ್ರತಿ ಕಿಲೊ ಸಕ್ಕರೆಗೆ ನಾವು ಸಾವಿರ ಲೀಟರ್ ಹೆಚ್ಚುವರಿ
> ನೀರನ್ನು ಬಳಸಿ ಆಕಾಶಕ್ಕೆ ತೂರುತ್ತಿದ್ದೇವೆ.
>
> ಲಖ್ನೋದಲ್ಲಿರುವ ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ನೀರಿನ ಉಳಿತಾಯದ
> ಎಷ್ಟೊಂದು ಕ್ರಮಗಳನ್ನು ಸೂಚಿಸಿದ್ದಾರೆ. ಲೇಸರ್ ಮೀಟರ್ ಬಳಸಿ ನೆಲ ಸಪಾಟು ಮಾಡಿ, ಆಮೇಲೆ
> ಕಬ್ಬಿನ ಪಾತಿ ಮಾಡಿ. ಎಲ್ಲ ಪಾತಿಗಳಿಗೂ ಒಮ್ಮೆಗೇ ನೀರು ಹರಿಸುವ ಬದಲು ಪಾತಿ ಬಿಟ್ಟು
> ಪಾತಿಗೆ ಪಾಳಿಯಲ್ಲಿ ನೀರುಣಿಸಿ. ನೀರು ಆವಿಯಾಗದಂತೆ ದಟ್ಟ ಮುಚ್ಚಿಗೆ ಮಾಡಿ; ಹನಿ ನೀರಾವರಿ
> ವ್ಯವಸ್ಥೆ ಮಾಡಿಕೊಳ್ಳಿ; ನೆನಪಿಡಿ- ಕಮ್ಮಿ ನೀರಿನಲ್ಲಿ ಬೆಳೆದ ಕಬ್ಬಿನಲ್ಲಿ ಸಕ್ಕರೆ ಅಂಶ
> ಹೆಚ್ಚಿರುತ್ತದೆ. ಶೇ 30ರಷ್ಟು ಹೆಚ್ಚಿನ ಆದಾಯ ಸಿಗುತ್ತದೆ. ನಮ್ಮ ರೈತರಿಗೆ ಇದನ್ನು
> ಮನದಟ್ಟು ಮಾಡಿದ್ದೇವೆಯೆ? ಕಬ್ಬಿನಲ್ಲಿ ಸಕ್ಕರೆ ಅಂಶ ಎಷ್ಟಿದೆಯೆಂದು ನೋಡಿ ಬೆಲೆ ನಿಗದಿ
> ಮಾಡುವ ವ್ಯವಸ್ಥೆ ನಮ್ಮ ಕಾರ್ಖಾನೆಗಳಲ್ಲಿ ಇದೆಯೆ? ರೈತರ ನೀರಿನ ಬಳಕೆ ವೈಖರಿ ನೋಡಿ ಸಾಲ
> ನೀಡುವ ವ್ಯವಸ್ಥೆ ಬ್ಯಾಂಕುಗಳಲ್ಲಿದೆಯೆ?
>
> ಮಲಪ್ರಭಾ ಜಲಾಶಯ ತುಂಬುತ್ತಲೇ ಇಲ್ಲ ಎಂದು ಮಳೆರಾಯನನ್ನು ಶಪಿಸಿದ್ದೇವೆ. ಆದರೆ ನೈಜ ಸಂಗತಿ
> ಬೇರೆಯದೇ ಇದೆ. ಜಲಾಶಯದ ಕಡೆ ನೀರನ್ನು ಸಾಗಿಸಿ ತರಬೇಕಾದ ಎಲ್ಲ ಹಳ್ಳಕೊಳ್ಳಗಳ ಸುತ್ತ ಕಳೆದ
> 30 ವರ್ಷಗಳಲ್ಲಿ ಪಂಪ್‌ಸೆಟ್ ಮತ್ತು ಕೊಳವೆ ಬಾವಿಗಳ ಸಂಖ್ಯೆ ಅಪಾರವಾಗಿ ಹೆಚ್ಚಾಗಿದೆ.
> ಅಲ್ಲೆಲ್ಲ ನೀರಿನ ಮಿತ ಬಳಕೆ ಸಾಧ್ಯವಿತ್ತು. ಕಡಿಮೆ ನೀರನ್ನು ಬಳಸಿ ಜಾಸ್ತಿ ಫಸಲು ತೆಗೆಯುವ
> ಎಷ್ಟೊಂದು ಸುಧಾರಿತ ವಿಧಾನಗಳ ಬಗ್ಗೆ, ಬದಲೀ ಬೆಳೆಗಳ ಬಗ್ಗೆ ಹೈದರಾಬಾದಿನಲ್ಲಿರುವ
> ಇಕ್ರಿಸ್ಯಾಟ್ ಎಂಬ ಅಮೆರಿಕನ್ ಸಂಸ್ಥೆ ರೈತರಿಗಾಗಿ ಜ್ಞಾನವನ್ನು ಇಂಗ್ಲಿಷಿನಲ್ಲಿ
> ಸೃಷ್ಟಿಸಿದೆ.
>
> ಅವೆಲ್ಲ ರೈತ ಮಕ್ಕಳನ್ನು ತಲುಪಬೇಕಿತ್ತು. ಶಾಲಾ ಪಠ್ಯಗಳಲ್ಲಂತೂ ಅದರ ಬಗ್ಗೆ ಚಕಾರ ಇಲ್ಲ.
> ಬೀಜ, ಗೊಬ್ಬರ ಕಂಪನಿಗಳು ಹಳ್ಳಿಗಳಲ್ಲಿ ಬಾನೆತ್ತರ ಜಾಹೀರಾತಿಗೆ ಸುರಿಯುವ ಹಣದ ಒಂದು
> ಪಾಲನ್ನು ರೈತ ಮಕ್ಕಳ ಮೇಲೆ ಸುರಿಸಬಹುದಿತ್ತು. ನೀರಿನ ಉಳಿತಾಯದ ಚಂದದ ಪುಸ್ತಕಗಳನ್ನು ನೀಡಿ
> ಎಪಿಎಮ್‌ಸಿಗಳು ಮಕ್ಕಳಿಗೆ ರಸಪ್ರಶ್ನೆ ಹಬ್ಬ ಮಾಡಬಹುದಿತ್ತು. ನೀರಿನ ತುಟಾಗ್ರತೆಯಲ್ಲೂ
> ಸಮೃದ್ಧ ಬೆಳೆ ಬೆಳೆದ ರೈತನನ್ನು ಗುರುತಿಸಿ ಮೆರೆಸಬಹುದಿತ್ತು.
>
> ಸಮುದ್ರಕ್ಕೂ ಮಹಾದಾಯಿ ನೀರು ಬೇಕು ಎಂದಾಗ ನಾವೆಲ್ಲ ನಕ್ಕಿದ್ದೇವೆ. ಅರಲ್ ಸಮುದ್ರಕ್ಕೆ
> ಸೇರುತ್ತಿದ್ದ ಎರಡು ನದಿಗಳನ್ನು ತಿರುಗಿಸಿ ಸೋವಿಯತ್ ಸಂಘದವರು ಹತ್ತಿ ಬೆಳೆದರು. 68 ಸಾವಿರ
> ಚದರ ಕಿ.ಮೀ ವಿಸ್ತಾರವಾಗಿದ್ದ ಆ ಸಮುದ್ರಗಾತ್ರದ ಜಲಾಶಯ ಒಣಗಿ 3,300 ಚ.ಕಿ.ಮೀಗೆ ಇಳಿದಿದೆ.
> ನಾಲ್ಕು ರಾಷ್ಟ್ರಗಳ 7 ಕೋಟಿ ಜನರಿಗೆ ನೀರುಣಿಸುತ್ತಿದ್ದ ಆಫ್ರಿಕಾದ ಚಾಡ್ ಸರೋವರ ಈಗ ಶೇ
> 97ರಷ್ಟು ಒಣಗಿದೆ. ಜಗತ್ತಿನ ಪ್ರಮುಖ ಎಂಟು ನದಿಗಳು ಸಮುದ್ರಕ್ಕೆ ಸೇರುವ ಮೊದಲೇ
> ಬತ್ತುತ್ತಿವೆ. ವೇದಗಳಲ್ಲಿ, ಚರಿತ್ರೆಯಲ್ಲಿ ಅಷ್ಟೆಲ್ಲ ಮಹತ್ವದ ಸ್ಥಾನ ಪಡೆದಿದ್ದ ಸಿಂಧೂ
> ನದಿ ಹಿಮಾಲಯದಿಂದ ನಿರಂತರ ನೀರನ್ನು ಸಾಗಿಸಿ ತರುತ್ತಿದ್ದರೂ ಸಾಗರ ಸೇರುವ 600 ಕಿ.ಮೀ
> ಮೊದಲೇ ಇಲ್ಲದಂತಾಗುತ್ತಿದೆ.
>
> ಅಲ್ಲಿ ಸಾಗರದಂಚಿನ ಶೇ 80ರಷ್ಟು ಕಾಂಡ್ಲ ವನಗಳು ನಾಶವಾಗಿವೆ. ಡಾಲ್ಫಿನ್‌ಗಳು
> ನಿರ್ವಂಶವಾಗುವ ಹಂತಕ್ಕೆ ಬಂದಿವೆ. ಕೃಷಿಗಾಗಿ, ಉದ್ಯಮಕ್ಕಾಗಿ ನೀರನ್ನು ಕೊಳಚೆ ಮಾಡಿ
> ಆವಿಯಾಗಿಸಿದ್ದು ಸಾಲದೆಂದು ಈಗ ಕಾಲಾಬಾಗ್ ಎಂಬಲ್ಲಿ ವಿದ್ಯುತ್ತಿಗಾಗಿ ಹೊಸದೊಂದು ಬೃಹತ್
> ಅಣೆಕಟ್ಟು ನಿರ್ಮಿತವಾಗುತ್ತಿದೆ. ಅತ್ತ ಬೈಬಲ್ಲಿನ ಉಗಮದೊಂದಿಗೆ ತಳಕು ಹಾಕಿಕೊಂಡಿರುವ
> ಜೋರ್ಡನ್ ನದಿಯೂ ಸಮುದ್ರ ಸೇರುತ್ತಿಲ್ಲ. ಜಿಗಿದು ಆಚೆ ದಂಡೆ ಸೇರಬಹುದು. ಏನಾಯಿತು
> ನೀರೆಲ್ಲ? ‘ಅದೆಲ್ಲ ಹಣ್ಣು ತರಕಾರಿ, ಧಾನ್ಯ, ಮೊಟ್ಟೆ, ಮಾಂಸದ ರೂಪದಲ್ಲಿ ರಫ್ತಾಗಿ
> ಹೋಗಿದೆ’ ಎಂದು ‘ಹೋಮ್’ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ.
>
> ‘16 ಸಾವಿರ ಮನೆಗಳಿಗೆ ಸಾಲುವಷ್ಟು ನೀರನ್ನು ನಿತ್ಯವೂ (ಧಾರವಾಡದ) ಪೆಪ್ಸಿ ಫ್ಯಾಕ್ಟರಿ
> ಬಳಸಿಕೊಳ್ಳುತ್ತಿದೆ’ ಎಂದು ಗೋವಾದವರು ವಾದಿಸಿದ್ದರು. ಪೆಪ್ಸಿ, ಕೋಕಾಕೋಲಾ ಕಂಪನಿಗಳು ಭೂಗತ
> ಬರಗಾಲ ಸೃಷ್ಟಿಸಿ, ಅಂತರ್ಜಲಕ್ಕೆ ಕೊಳಕು ತುಂಬುತ್ತಿವೆ ಎಂಬ ಆರೋಪದ ಮೇಲೆ ಇತರ
> ರಾಜ್ಯಗಳಲ್ಲಿ ಅದೆಷ್ಟೊ ಪ್ರತಿಭಟನೆ, ಮೊಕದ್ದಮೆ ಎದುರಿಸಿ ಅವು ಕೆಲವೆಡೆ ಕಾಲು ಕಿತ್ತ
> ಉದಾಹರಣೆಗಳಿವೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಪ್ಲಾಚಿಮಾಡಾ ಎಂಬಲ್ಲಿ ಕೋಕಾಕೋಲಾ ಕಂಪನಿ
> ವಿರುದ್ಧ ಜನರು ಸಾವಿರ ದಿನಗಳ ಸತ್ಯಾಗ್ರಹ ನಡೆಸಿ 2005ರಲ್ಲಿ ಫ್ಯಾಕ್ಟರಿ
> ಸ್ಥಗಿತಗೊಂಡಿತ್ತು. ಅದೇ ಜಿಲ್ಲೆಯಲ್ಲಿ ಪೆಪ್ಸಿ ವಿರುದ್ಧ ಜನಾಂದೋಲನ ನಡೆದ ಮೇಲೆ ಕಂಪನಿಗೆ
> ಏಳು ಲಕ್ಷ ಲೀಟರಿನ ಬದಲು 2.34 ಲಕ್ಷ ಲೀಟರ್ ಮಾತ್ರ ನೀಡಬೇಕೆಂದು ವಿಧಾನಸಭೆಯ ಸದನ ಸಮಿತಿ
> ನಿಗದಿಪಡಿಸಿತ್ತು.
>
> ಮೊನ್ನೆ ಮೇ ತಿಂಗಳಲ್ಲಿ ಪೇಯದ ಉತ್ಪಾದನೆಯನ್ನು (ಮಳೆ ಬರುವವರೆಗೆ) ಪೂರ್ತಿ ನಿಲ್ಲಿಸುವಂತೆ
> ಪುದುಸ್ಸೆರಿ ಪಂಚಾಯ್ತಿ ಒಮ್ಮತದ ನಿರ್ಣಯ ಕೈಗೊಂಡಿತ್ತು. ಕೋಕಾಕೋಲಾ ಕಂಪನಿ ವಿರುದ್ಧದ ಸಮರ
> ಈಗಲೂ ಅಲ್ಲಿ ಮುಗಿದಿಲ್ಲ. ದಲಿತರ ಬದುಕನ್ನು ಸಂಕಷ್ಟಕ್ಕೆ ತಳ್ಳಿದ್ದಕ್ಕೆ ಈ ಕಂಪನಿಯ
> ವಿರುದ್ಧ ಪೊಲೀಸರು ಈಚೆಗೆ ಮತ್ತೆ ಮೊಕದ್ದಮೆ ಹೂಡಿದ್ದಾರೆ. ಇತ್ತ ಧಾರವಾಡದ ಪೆಪ್ಸಿ
> ಫ್ಯಾಕ್ಟರಿ ಪರವಾಗಿ ನಮ್ಮ ವಕೀಲರು ಏನೇನು ವಾದಿಸಿದರೊ ಗೊತ್ತಿಲ್ಲ. ಮಹಾದಾಯಿಯ ಅಂತಿಮ
> ತೀರ್ಪು ಇಂದಲ್ಲ ನಾಳೆ ನಮ್ಮದೇ ಆಗಲಿದೆ ಎಂದು ಹೇಳುತ್ತಿದ್ದಾರೆ.
>
> ಭವಿಷ್ಯವಂತೂ ನಮ್ಮ ಕೈಯಲ್ಲಿಲ್ಲ. ಆದರೆ ಭೂತಕಾಲ ಇದೆಯಲ್ಲ? ನಮ್ಮ ಹಿಂದಿನವರು
> ಗೋರಕ್ಷಣೆಗಿಂತ ಮೊದಲು ಜಲರಕ್ಷಣೆಗೆ ಆದ್ಯತೆ ನೀಡಿದ್ದರು, ಮಳೆಗಾಲದಲ್ಲಿ ಪೋಲಾಗುವ ನೀರನ್ನು
> ಬೇಸಿಗೆಗಾಗಿ ಹೇಗೆ ರಕ್ಷಿಸಿಕೊಳ್ಳುತ್ತಿದ್ದರು ಎಂಬುದಕ್ಕೆ ಎಷ್ಟೊಂದು ಸಾಕ್ಷ್ಯಗಳಿವೆ:
> ಗುಜರಾತಿನ ಧೋಲಾವೀರ ಎಂಬ ಬರಗಾಲ ಪೀಡಿತ ಹಳ್ಳಿಯಲ್ಲಿ ಉತ್ಖನನ ನಡೆಸಿದಾಗ, ಅಲ್ಲಿನ
> ಪುರಾತನರು ಮಳೆನೀರಿನ ಸಂಗ್ರಹಕ್ಕೆ ಚಮತ್ಕಾರಿಕ ಬಾಂದಾರಗಳನ್ನು, ಒಳಗಾಲುವೆಗಳನ್ನು
> ಕಟ್ಟಿದ್ದು ಬೆಳಕಿಗೆ ಬಂದಿತ್ತು.
>
> ಗಂಗಾ ನದಿಯಲ್ಲಿ ಮಳೆಗಾಲದಲ್ಲಿ ಕೆನ್ನೀರ ಧಾರೆ ಹರಿಯುತ್ತಿದ್ದಾಗ ಅದರಲ್ಲಿನ ಹೂಳನ್ನೆಲ್ಲ
> ಸೋಸಿ ಶುದ್ಧ ಕುಡಿಯುವ ನೀರನ್ನಾಗಿ ಹೇಗೆ ಪರಿವರ್ತಿಸುತ್ತಿದ್ದರು ಎಂಬುದಕ್ಕೆ ಅಲಹಾಬಾದಿನ
> ಬಳಿಯ ಶೃಂಗವೀರಪುರ ಎಂಬಲ್ಲಿ ಕ್ರಿಸ್ತಪೂರ್ವ ಉದಾಹರಣೆಗಳಿವೆ. ಬಂಗಾಳಕ್ಕೆ ಆಗಾಗ
> ಬಂದೆರಗುತ್ತಿದ್ದ ಬರಗಾಲವನ್ನು ಹೇಗೆ ನಿಯಂತ್ರಿಸಬೇಕು ಎಂಬುದು ತಿಳಿಯದೆ ಬ್ರಿಟಿಷರು
> ಲಂಡನ್ನಿನಿಂದ ವಿಲಿಯಂ ವಿಲ್‌ಕಾಕ್ಸ್ ಎಂಬಾತನನ್ನು 1920ರಲ್ಲಿ ಕರೆಸಿದಾಗ ಆತ ಬಂದು
> ಎಲ್ಲವನ್ನೂ ನೋಡಿ, ‘ನೆರೆ ನಿಯಂತ್ರಣದ ಅತ್ಯುತ್ತಮ ವಿಧಾನಗಳೆಲ್ಲ ಬಂಗಾಳದ ಹಳ್ಳಿಗಳಲ್ಲೇ
> ಸಿಗುತ್ತವೆ ನೋಡಿ’ ಎಂದು ಹೇಳಿ ಮರಳಿ ಹೋಗಿದ್ದ. ಜಲಸಾಕ್ಷರತೆಯ ಅಂಥ ಕಥನಗಳೆಲ್ಲ ಚರಿತ್ರೆಯ
> ಪುಟಗಳಲ್ಲಿ ಕಳೆದು ಹೋಗಿವೆ; ಹೊಸ ಕಥನಗಳು ವಿಜ್ಞಾನಿಗಳ ಪ್ರಬಂಧಗಳಲ್ಲಿ ಕಾಣೆಯಾಗಿವೆ.
>
> ನೀರಿನ ವಿಷಯ ಬಂದಾಗ ದಿನಗಳೆದಂತೆ ನಾವು ಕೊಳಕರಾಗುತ್ತಿದ್ದೇವೆ,
> ಜಗಳಗಂಟಿಗಳಾಗುತ್ತಿದ್ದೇವೆ, ಕುಲಕಂಟಕರಾಗುತ್ತಿದ್ದೇವೆ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ
> ಮುಖಂಡರೂ ‘ಕಾನೂನಿನ ಚೌಕಟ್ಟಿನಲ್ಲಿ’ ಹೋರಾಡುತ್ತೇವೆ ಎನ್ನುತ್ತ ವಕೀಲರತ್ತ
> ಧಾವಿಸುತ್ತಾರೆಯೇ ವಿನಾ, ವೈಜ್ಞಾನಿಕ ವಿಧಾನದಲ್ಲಿ ನೀರನ್ನು ನಿಭಾಯಿಸುತ್ತೇವೆ ಎನ್ನುತ್ತ
> ವಿಜ್ಞಾನಿಗಳತ್ತ ಬರುವವರು ಮಾತ್ರ ಯಾರೂ ಇಲ್ಲ. ಹೂಳು ತುಂಬಿದ ಕೆರೆಗಳಿಗೇ ನದಿಯನ್ನು
> ತಿರುಗಿಸುವ ಯೋಜನೆ ಹಾಕುತ್ತೇವೆ ವಿನಾ, ಮಳೆನೀರನ್ನು ಯುಕ್ತವಾಗಿ ಬಳಸುವ ಯೋಜನೆ
> ಹಾಕುತ್ತಿಲ್ಲ.
>
> *ನಮ್ಮ ವಿಜ್ಞಾನಿಗಳೂ ಅಷ್ಟೆ: *ನೀರಿನ ಬಗ್ಗೆ ಪ್ರಬಂಧ ಮಂಡನೆಗೆಂದು ವಿದೇಶಗಳಿಗೆ
> ಧಾವಿಸುತ್ತಾರೆ (ಸೆ. 1ರಿಂದ ಹತ್ತು ದಿನ ಹೊನುಲುಲುವಿನಲ್ಲಿ ಜಾಗತಿಕ ಜಲ ಸಮ್ಮೇಳನ ಇದೆ)
> ವಿನಾ ನಾಯಕಮಣಿಗಳು ‘ಶಾಶ್ವತ ನೀರಾವರಿ’ ಹೆಸರಿನಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾಗ
> ವಿವೇಕದ ನಾಲ್ಕು ಮಾತುಗಳನ್ನು ಹೇಳುವುದಿಲ್ಲ. ಶಾಶ್ವತ ನೀರಾವರಿ ಎಂದರೆ ಮಳೆ ನೀರು ಸಂಗ್ರಹ,
> ಮಿತಬಳಕೆ, ಮರುಬಳಕೆಯೇ ವಿನಾ ನದಿಗಳನ್ನು ತಿರುಗಿಸುವುದಲ್ಲ- ಜಲಸಾಕ್ಷರತೆಯ ಮೂಲಕ
> ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸಬಹುದೆಂದು ವಿಶ್ವಸಂಸ್ಥೆ ಅಷ್ಟೊಂದು ಉದಾಹರಣೆಗಳ ಮೂಲಕ
> ಹೇಳುತ್ತಿದೆಯಾದರೂ ಬಲಾಢ್ಯರ ಯಂತ್ರಗಳಿಗೇ ಆದ್ಯತೆ ನೀಡುವುದು ತಪ್ಪುತ್ತಿಲ್ಲ.
>
> ಜಗತ್ತೇ ಹೀಗಿದೆಯೊ ಏನೊ. ಮುಂದಿನ ಪೀಳಿಗೆಯ ಕ್ಷೇಮಚಿಂತನೆಗಿಂತ ತನ್ನ ಸ್ವಾರ್ಥವೇ
> ಮುಖ್ಯವೆಂದು ತೋರಿಸಲು ಅಕಬರನ ಆಸ್ಥಾನದಲ್ಲಿ ಬೀರಬಲ್ಲ  ಒಂದು ಪ್ರಾತ್ಯಕ್ಷಿಕೆ
> ನಡೆಸಿದನಂತೆ: ಖಾಲಿ ತೊಟ್ಟಿಯಲ್ಲಿ ಕೋತಿಯ ತಾಯಿ-ಮರಿಯನ್ನು ನಿಲ್ಲಿಸಿ ನೀರು ತುಂಬುತ್ತ
> ಹೋದನಂತೆ. ಕತ್ತಿನವರೆಗೆ ನೀರು ಬಂದಾಗ ಮರಿಯನ್ನು ತಾಯಿ ತಲೆಯ ಮೇಲೆ ಕೂರಿಸಿತಂತೆ. ನೀರು
> ಮೂಗಿನವರೆಗೂ ಬಂದಾಗ ಮರಿಯನ್ನು ಕೆಳಕ್ಕೆ ಹಾಕಿ ಅದರ ಮೇಲೆ ನಿಂತಿತಂತೆ. ಆ ಕತೆ ನಿಜವೊ
> ಸುಳ್ಳೊ ಗೊತ್ತಿಲ್ಲ. ನಾವಂತೂ ಹಾಗೇ ಮಾಡುತ್ತಿದ್ದೇವೆ. ನಾಳಿನ ಪೀಳಿಗೆಯ
> ಹಿತಾಸಕ್ತಿಗಳನ್ನೆಲ್ಲ ಕಾಲ್ಕೆಳಗೆ ಅದುಮಿ ಟಿವಿ ಕ್ಯಾಮರಾಗಳ ಎದುರು ವಿಜೃಂಭಿಸುತ್ತಿದ್ದೇವೆ.
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to