http://m.prajavani.net/article/2016_08_11/430071
*ವಿಶ್ವವಿದ್ಯಾಲಯವೂ ಮೂಢನಂಬಿಕೆಯೂ* 11 Aug, 2016 ಎಂ. ಅಬ್ದುಲ್ ರೆಹಮಾನ್ ಪಾಷ <https://www.facebook.com/sharer/sharer.php?u=http%3A%2F%2Fgoo.gl%2FzS4pGS> <https://twitter.com/intent/tweet?text=%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B2%E0%B2%AF%E0%B2%B5%E0%B3%82+%E0%B2%AE%E0%B3%82%E0%B2%A2%E0%B2%A8%E0%B2%82%E0%B2%AC%E0%B2%BF%E0%B2%95%E0%B3%86%E0%B2%AF%E0%B3%82+http%3A%2F%2Fgoo.gl%2FzS4pGS> <whatsapp://send?text=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%A6+%E0%B2%AF%E0%B2%BE%E0%B2%B5%E0%B3%81%E0%B2%A6%E0%B3%87+%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%BE%E0%B2%82%E0%B2%A4%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81+%E0%B2%86%E0%B2%A7%E0%B2%B0%E0%B2%BF%E0%B2%B8%E0%B2%A6%E0%B3%86+%E2%80%98%E0%B2%AA%E0%B3%8D%E0%B2%B0%E0%B2%BE%E0%B2%9A%E0%B3%80%E0%B2%A8%E2%80%99+%E0%B2%8E%E0%B2%82%E0%B2%AC+%E0%B2%AC%E0%B2%BF%E0%B2%B0%E0%B3%81%E0%B2%A6%E0%B2%BF%E0%B2%A8+%E0%B2%AE%E0%B3%8C%E0%B2%A2%E0%B3%8D%E0%B2%AF%E0%B2%B5%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%97%E0%B2%B2%E0%B3%81+%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF+%E0%B2%AC%E0%B2%BF%E0%B2%A4%E0%B3%8D%E0%B2%A4%E0%B3%81%E0%B2%B5+%E0%B2%9C%E0%B2%A8+%E0%B2%88%E0%B2%97+%E0%B2%92%E0%B2%82%E0%B2%A6%E0%B3%81+%E0%B2%B9%E0%B3%8A%E0%B2%B8+%E0%B2%B8%E0%B3%8B%E0%B2%97%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%BE%E0%B2%95%E0%B2%A4%E0%B3%8A%E0%B2%A1%E0%B2%97%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86.+%E0%B2%85%E0%B2%B5%E0%B2%B0%E0%B3%81+%E0%B2%A4%E0%B2%AE%E0%B3%8D%E0%B2%AE+%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B3%80%E0%B2%AF%E0%B2%B5%E0%B2%BE%E0%B2%A6+%E0%B2%AE%E0%B2%BE%E0%B2%A4%E0%B3%81%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF%2C+%E2%80%98%E0%B2%AA%E0%B2%BE%E0%B2%B8%E0%B2%BF%E0%B2%9F%E0%B2%BF%E0%B2%B5%E0%B3%8D+%E0%B2%8E%E0%B2%A8%E0%B2%B0%E0%B3%8D%E0%B2%9C%E0%B2%BF%E2%80%99%2C+%E2%80%98%E0%B2%95%E0%B2%BE%E0%B2%B8%E0%B3%8D%E0%B2%AE%E0%B2%BF%E0%B2%95%E0%B3%8D+%E0%B2%87%E0%B2%AB%E0%B3%86%E0%B2%95%E0%B3%8D%E0%B2%9F%E0%B3%8D%E2%80%99+%E2%80%98%E0%B2%85%E0%B2%9F%E0%B3%8D%E0%B2%B0%E0%B3%8D%E0%B2%AF%E0%B2%BE%E0%B2%95%E0%B3%8D%E0%B2%B7%E0%B2%A8%E0%B3%8D%E2%80%99+%E0%B2%87%E0%B2%A4%E0%B3%8D%E0%B2%AF%E0%B2%BE%E0%B2%A6%E0%B2%BF+%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%A6+%E0%B2%AA%E0%B2%B0%E0%B2%BF%E0%B2%AD%E0%B2%BE%E0%B2%B7%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81+%E0%B2%AC%E0%B2%B3%E0%B2%B8%E0%B2%A4%E0%B3%8A%E0%B2%A1%E0%B2%97%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86.%0D%0Ahttp%3A%2F%2Fgoo.gl%2FzS4pGS> <https://plus.google.com/share?url=http%3A%2F%2Fgoo.gl%2FzS4pGS> <http://www.pinterest.com/pin/find/?url=http%3A%2F%2Fgoo.gl%2FzS4pGS> <http://www.linkedin.com/shareArticle?mini=true&title=%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B2%E0%B2%AF%E0%B2%B5%E0%B3%82+%E0%B2%AE%E0%B3%82%E0%B2%A2%E0%B2%A8%E0%B2%82%E0%B2%AC%E0%B2%BF%E0%B2%95%E0%B3%86%E0%B2%AF%E0%B3%82+&url=http%3A%2F%2Fgoo.gl%2FzS4pGS> ವಿಜ್ಞಾನದ ಯಾವುದೇ ಸಿದ್ಧಾಂತಗಳನ್ನು ಆಧರಿಸದೆ ‘ಪ್ರಾಚೀನ’ ಎಂಬ ಬಿರುದಿನ ಮೌಢ್ಯವನ್ನು ಹಗಲು ರಾತ್ರಿ ಬಿತ್ತುವ ಜನ ಈಗ ಒಂದು ಹೊಸ ಸೋಗನ್ನು ಹಾಕತೊಡಗಿದ್ದಾರೆ. ಅವರು ತಮ್ಮ ಶಾಸ್ತ್ರೀಯವಾದ ಮಾತುಗಳಲ್ಲಿ, ‘ಪಾಸಿಟಿವ್ ಎನರ್ಜಿ’, ‘ಕಾಸ್ಮಿಕ್ ಇಫೆಕ್ಟ್’ ‘ಅಟ್ರ್ಯಾಕ್ಷನ್’ ಇತ್ಯಾದಿ ವಿಜ್ಞಾನದ ಪರಿಭಾಷೆಯನ್ನು ಬಳಸತೊಡಗಿದ್ದಾರೆ. ‘ಇದನ್ನು ವಿಜ್ಞಾನಿಗಳೇ ಒಪ್ಪಿದ್ದಾರೆ’, ‘ಇದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ’ ಎಂದೆಲ್ಲ ಹೇಳಿ, ಮೊದಲೇ ಅಮಾಯಕರಾದ ಜನರನ್ನು ಇನ್ನಷ್ಟು ರುಚಿಕಟ್ಟಾಗಿ ಮೋಸಗೊಳಿಸುತ್ತಾರೆ. ಜನರಿಗೆ ತಮ್ಮ ‘ಮೌಢ್ಯ’ವೂ ‘ವೈಜ್ಞಾನಿಕ’ವಾಗಿದೆ ಎಂಬ ಸಮಾಧಾನ. ಇತ್ತೀಚೆಗೆ ಇನ್ನೊಂದು ಆಧುನಿಕ ಕಾಯಿಲೆ ಶುರು ಆಗಿದೆ. ಇದು ಹೆಚ್ಚಿನಂಶ ಚಿಕ್ಕ ಪಟ್ಟಣಗಳ ವಿಜ್ಞಾನ ಶಿಕ್ಷಕರು, ಉಪನ್ಯಾಸಕರಲ್ಲಿ, ಸಾಮಾಜಿಕ ಜಾಲಿಗರಾದ ಅತ್ಯಾಧುನಿಕ ಯುವಜನರಲ್ಲಿ ಕಂಡುಬಂದಿದೆ. ಇವರು ತಮ್ಮ ಅರೆಬೆಂದ ವಿಜ್ಞಾನ ಮಾಹಿತಿಯನ್ನು ಮೂಢಾಚರಣೆಗಳಿಗೆ ‘ವೈಜ್ಞಾನಿಕ ಕಾರಣ’ ಹುಡುಕುವಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಆಚರಣೆಗಳನ್ನು ನಂಬಿ ಅನುಸರಿಸಿದರೆ ಯಾರೂ ಬೇಡವೆನ್ನುವುದಿಲ್ಲ. ಆದರೆ ಈ ಕುರಿತು ತಮಗೇ ದ್ವಂದ್ವ ಇರುವ ಈ ಮಂದಿ ಕಷ್ಟಪಟ್ಟು ತಮ್ಮ ದುಂಡನೆಯ ಮೌಢ್ಯಕ್ಕೆ ತರ್ಕದ ಚೌಕ ತೊಡಿಸಲು ನೋಡಿ ದಯನೀಯವಾಗಿ ಸೋಲುತ್ತಾರೆ. ಉದಾಹರಣೆಗೆ, ಊಟದ ಎಲೆಯ ಸುತ್ತ ನೀರನ್ನು ಚೆಲ್ಲಿ, ಒಂದೆರಡು ತುತ್ತು ಆಹಾರವನ್ನು ಎಲೆಯ ಹೊರಗೆ ಇಡುವ ಪದ್ಧತಿಯನ್ನು ತೆಗೆದುಕೊಳ್ಳಿ. ಇದು ವೈಜ್ಞಾನಿಕವೋ ಮೂಢಾಚರಣೆಯೋ? ಎರಡೂ ಹೌದು. ಯಾವ ಕಾಲದಲ್ಲಿ ಜನ ನೆಲದ ಮೇಲೆ ಕುಳಿತು, ತೆಳ್ಳನೆಯ ಎಲೆಗಳ ಮೇಲೆ ಅನ್ನವನ್ನು ಬಡಿಸಿಕೊಂಡು ಊಟ ಮಾಡುತ್ತಿದ್ದರೋ ಆ ಕಾಲದಲ್ಲಿ ಇದು ಅತ್ಯಂತ ವೈಜ್ಞಾನಿಕವಾದ ವಿಧಾನ. ಇದಕ್ಕೆ ನೆಲದ ಮೇಲೆ ಓಡಾಡುವ ಕ್ರಿಮಿಕೀಟಗಳು ಎಲೆಯ ಮೇಲೆ ಬರದಂತೆ ತಡೆಯುವ ಉದ್ದೇಶವಿತ್ತು. ಆದರೆ, ಇಂದು, ಯಾವುದೇ ಕ್ರಿಮಿಕೀಟಗಳಿಲ್ಲದ ಮನೆಗಳಲ್ಲಿ ಫಿನೈಲ್ ಹಾಕಿ ಒರೆಸಿದ ಎತ್ತರದ ಟೇಬಲ್ ಮೇಲೆ ಅಂಚಿರುವ ತಟ್ಟೆಯಲ್ಲಿ ಊಟ ಮಾಡುವ ಸನ್ನಿವೇಶದಲ್ಲಿಯೂ ಈ ಪದ್ಧತಿಯನ್ನು ಅನುಸರಿಸಿದರೆ, ಅದು ಮೂಢಾಚರಣೆ. ಏಕೆಂದರೆ ಅದಕ್ಕೆ ಯಾವುದೇ ತಾರ್ಕಿಕ ಉದ್ದೇಶ ಇಲ್ಲ. ಹೀಗೆ ಅನೇಕ ಆಚರಣೆಗಳು ಆಯಾ ಕಾಲದ ಮಾಹಿತಿ, ಅರಿವು, ಅಗತ್ಯ ಆಧರಿಸಿ ಜಾರಿಗೆ ಬಂದಿರುತ್ತವೆ. ಆಗಿನ ಕಾಲಕ್ಕೆ ಅವು ಜ್ಞಾನ, ವಿಜ್ಞಾನ. ಆದರೆ ಆ ಸನ್ನಿವೇಶಗಳು ಬದಲಾದ ನಂತರ, ಮಾಹಿತಿ, ಅರಿವು, ಅಗತ್ಯಗಳು ಬದಲಾದಾಗ ಅವುಗಳ ಸಂಗತತೆಯೂ ಹೊರಟು ಹೋಗುತ್ತದೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ವಾಂಸರು ಮಾಡಿರುವುದು ಇದನ್ನೇ. ‘ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿ ಬೆಳೆಸಿಕೊಳ್ಳುವುದನ್ನು’ ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವನ್ನಾಗಿ ಮಾಡಿದೆ. ಪ್ರತಿಯೊಂದನ್ನೂ ಪ್ರಶ್ನಿಸಿಯೇ ತಿಳಿದುಕೊಳ್ಳುವ, ಪ್ರಯೋಗಗಳಿಂದ ಸಿದ್ಧವಾದ, ಲೌಕಿಕದಲ್ಲಿಯೇ ಕಾರ್ಯಕಾರಣ ಸಂಬಂಧವಿರುವ ಸಂಗತಿಗಳನ್ನು ಮಾತ್ರ ಒಪ್ಪಿಕೊಳ್ಳುವ ವೈಜ್ಞಾನಿಕ ಮನೋವೃತ್ತಿಗೂ ಮೂಢಾಚರಣೆಗಳಿಗೂ ಸಂಬಂಧವೇ ಇಲ್ಲ. ಮೂಢನಂಬಿಕೆಗಳು, ಅವುಗಳನ್ನು ಆಧರಿಸಿದ ಆಚರಣೆಗಳು ಸಮಾಜದಲ್ಲಿ ಇರುವುದು ಸತ್ಯ. ಆದರೆ ಅವುಗಳನ್ನು ಯಾವುದೇ ನೆಲೆಯಲ್ಲಿ ವೈಜ್ಞಾನಿಕ ಎಂದು ನಿರೂಪಿಸುವುದು ದುಸ್ಸಾಹಸವೇ ಸರಿ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಇಟ್ಟಿರುವ ಸಾಹಿತ್ಯ ಪಠ್ಯದಲ್ಲಿನ ರಾ.ಯ. ಧಾರವಾಡಕರರು ಬರೆದ, ‘ಮೂಢನಂಬಿಕೆಗಳು’ ಎಂಬ ಪ್ರಬಂಧ ಇಂಥ ವೈಪರೀತ್ಯಕ್ಕೆ ಕಾರಣವಾಗಿದೆ (ಇಲ್ಲಿ ಭಾಷಾ ವಿಜ್ಞಾನಿಯಾದ ಧಾರವಾಡಕರರ ಹೆಸರನ್ನು ಚರ್ಚೆಗೆ ಎಳೆಯುತ್ತಿಲ್ಲ). ಪ್ರಬಂಧದಲ್ಲಿ ಬರುವ ಕೆಲವು ಸಾಲುಗಳನ್ನು ನೋಡಿ. ‘ಮೂಢನಂಬಿಕೆ ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟ ದೊಡ್ಡ ಆಸ್ತಿ. ಅದು ನಮ್ಮ ಜೀವನದ ಹಾಸು-ಹೊಕ್ಕು. ಪ್ರಾಚೀನ ಜ್ಞಾನಸುಧೆ, ಜೀವನದಾಯಿಯಾದ ಕಾಂತಾಸಮ್ಮಿತಿ, ಭಾವ ಜೀವಿಯ ಅಭಯಹಸ್ತ, ಸುಸಂಸ್ಕೃತ ಹೃದಯದ ಪರಿಪಕ್ವತೆ, ಮಾನವ್ಯದ ಪಕ್ವತೆಯ ಹೆಗ್ಗುರುತು, ಕಾವ್ಯದ ನೆಲೆಗಟ್ಟು, ಇದಕ್ಕೂ ಹೆಚ್ಚಿಗೆ ಏನು ಬೇಕು?’ ಅವರು ಹೇಳಿರುವುದೆಲ್ಲಾ ಕೇವಲ ಕಾವ್ಯಾತ್ಮಕವಾದಂಥ ಅಭಿಪ್ರಾಯ. ವೈಜ್ಞಾನಿಕ ಅವಲೋಕನ ಅಲ್ಲ. ಅವರೇ ಇವುಗಳನ್ನು ‘ಮೂಢನಂಬಿಕೆ’ ಎಂದು ಕರೆದಿರುವುದನ್ನು ಗಮನಿಸಿ. ದೊಡ್ಡ ವಿದ್ವಾಂಸರು ಹೇಳಿದ್ದಾರೆ ಎನ್ನುವ ಕಾರಣಕ್ಕಾಗಿ ಅವುಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಕಲಿಸಿದರೆ ಅದು ಕೇವಲ ಅಸಂಗತವಾಗುತ್ತದೆ; ಆಯಾ ವಿದ್ವಾಂಸರಿಗೂ ಅವಮಾನವೇ ಸರಿ. ಚಂದ್ರಶೇಖರ ಪಾಟೀಲರ ಈ ಸಾಲುಗಳನ್ನು ಗಮನಿಸಿ: ‘ಹೋಗಿ ಬರುತೇನಜ್ಜ, ನಿನ್ನ ಪಾದದಾ ಧೂಳಿ ನನ್ನ ತಲೆಯ ಮೇಲಿರಲಿ, ಆದರದು ಕಣ್ಣಿಗೆ ಬೀಳದಿರಲಿ’. ಅಂದರೆ ಪ್ರಾಚೀನ ಜ್ಞಾನವನ್ನು ಗೌರವಿಸಬೇಕು, ಹಿರಿಯರನ್ನು ಆದರದಿಂದ ಕಾಣಬೇಕು, ಅವರ ಆಶೀರ್ವಾದ ನಮ್ಮ ಮೇಲಿರಬೇಕು; ಅದರೆ ಅವರು ಹೇಳಿದ್ದೆಲ್ಲ ವೈಜ್ಞಾನಿಕ ಸತ್ಯವೆಂದು ಪ್ರತಿಪಾದಿಸುವುದು ಮಾತ್ರ ಮೌಢ್ಯ. ಚೆನ್ನಮ್ಮ ವಿ.ವಿ. ಆಯ್ಕೆ ಮಾಡಿರುವ ಪ್ರಬಂಧವನ್ನು ವಿಜ್ಞಾನದ ವಿದ್ಯಾರ್ಥಿಗಳಿಗಲ್ಲ; ಯಾವ ವಿದ್ಯಾರ್ಥಿಗಳಿಗೆ ಇಟ್ಟರೂ ಅದು ಘೋರ ಅನ್ಯಾಯವೆ. ಈ ಪ್ರಬಂಧದ ಕವಿ ಪರಿಚಯದಲ್ಲಿ ಹೇಳಿರುವ ಈ ಮಾತನ್ನು ಗಮನಿಸಿ: ‘ಇವತ್ತು ವಿಜ್ಞಾನ ನಾಗಾಲೋಟದಿಂದ ದಾಪುಗಾಲಿಟ್ಟರೂ ಮನುಷ್ಯ ಮಾತ್ರ ಮೌಢ್ಯಗಳಿಗೆ ಜೋತುಬಿದ್ದಿದ್ದಾನೆ... ಎಷ್ಟೇ ಓದಿದ್ದರೂ ವಿದ್ವಾಂಸರೆನಿಸಿಕೊಂಡಿದ್ದರೂ ಮೂಢನಂಬಿಕೆಗಳಲ್ಲಿ ವಿಶ್ವಾಸವಿಟ್ಟಿದ್ದಾರೆ...’ ಎಲ್ಲೋ ಒಂದು ರೀತಿಯಲ್ಲಿ ಇದು ರಾ.ಯ.ಧಾರವಾಡಕರರ ಬಗ್ಗೆಯೇ ಟಿಪ್ಪಣಿ ಇದ್ದಂತಿದೆ. ಆದರೆ ಸಂಪಾದಕರು ಮುಂದುವರಿದು, ‘...ಆದರೆ, ಪ್ರತೀ ಮೌಢ್ಯದ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಈ ನಿಟ್ಟಿನಲ್ಲಿ ನಾವು ಯಾರೂ ಆಲೋಚನೆ ಮಾಡುವುದೇ ಇಲ್ಲ’ ಎಂದಿರುವಲ್ಲಿ ತಮ್ಮ ಗೊಂದಲವನ್ನು ಸಾಬೀತುಪಡಿಸುತ್ತಾರೆ. ‘ಪ್ರಜಾವಾಣಿ’ ವರದಿಯ (ಆ.10) ಪ್ರಕಾರ, ವಿಶ್ವವಿದ್ಯಾಲಯದ ಅಭ್ಯಾಸ ಮಂಡಳಿ ಅಧ್ಯಕ್ಷ ಡಾ. ಗಂಗಾಧರಯ್ಯನವರು ‘ನಾವು ಈ ಪ್ರಬಂಧವನ್ನು ಹೇಗೆ ಅರ್ಥೈಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ಮೂಢನಂಬಿಕೆ ಪರವೋ ವಿರೋಧವೋ ಎಂಬುದು ನಿರ್ಧಾರವಾಗುತ್ತದೆ. ಉಪನ್ಯಾಸಕರು ಪಾಠ ಮಾಡಬೇಕೇ ಹೊರತು ವ್ಯಾಖ್ಯಾನಿಸುವ ಅಗತ್ಯವಿಲ್ಲ’ ಎಂದಿದ್ದಾರೆ. ಪ್ರಬಂಧ ಲೇಖಕರ ಮೂಲ ಅಭಿಪ್ರಾಯ ಮತ್ತು ಸಂಪಾದಕರ ಅಭಿಪ್ರಾಯವೇ ಹಾಗಿದ್ದ ಮೇಲೆ ಅದನ್ನು ಇನ್ಯಾವ ರೀತಿ ಅರ್ಥೈಸಿಕೊಳ್ಳುವುದು, ಉಪನ್ಯಾಸಕರು ಪಾಠ ಮಾಡುವುದು? ಪ್ರಾಥಮಿಕ ಶಾಲೆಯಿಂದ ಉನ್ನತ ವ್ಯಾಸಂಗದವರೆಗೆ ಭಾಷಾ ಪಠ್ಯದಲ್ಲಿ ನಾವು ತಪ್ಪದೆ ಸೇರಿಸಬೇಕಾಗಿರುವುದು ವೈಜ್ಞಾನಿಕ ಮನೋವೃತ್ತಿ ಕುರಿತು ಸ್ಪಷ್ಟ ತಿಳಿವಳಿಕೆ. ಇಂಥ ಅರಿವು ಮತ್ತು ಅನುಸರಣೆಯಿಂದ ವ್ಯಕ್ತಿಯಲ್ಲಿ ಜಿಜ್ಞಾಸೆ, ಸಂಶೋಧನೆ, ಪ್ರಯೋಗಶೀಲತೆ, ವೈಜ್ಞಾನಿಕ ಮನೋವೃತ್ತಿ ಬೆಳೆಯುತ್ತವೆ. ಇಂಥ ಮೂಲಗುಣಗಳು, ಶೈಕ್ಷಣಿಕ ಕೌಶಲಗಳು ವಿಜ್ಞಾನ, ತಂತ್ರಜ್ಞಾನವಷ್ಟೇ ಅಲ್ಲ ಸಮಾಜವಿಜ್ಞಾನ, ಭಾಷೆ, ಸಾಹಿತ್ಯ ಇತ್ಯಾದಿ ಎಲ್ಲಾ ಶಿಸ್ತುಗಳ ಆಳವಾದ ಕಲಿಕೆಗೆ ಆಧಾರವಾಗುತ್ತವೆ. ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳು ಈ ಕುರಿತು ಆಲೋಚಿಸಲಿ. Hareeshkumar K GHS HUSKURU MALAVALLI TQ MANDYA DT MOB 9880328224 -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
