ಮಾನ್ಯ ಗಿರೀಶ್ ಸರ್,
ಮಗುವಿಗೆ ಮಾತೃಭಾಷೆ ಯಲ್ಲೇ ಶಿಕ್ಷಣ ನೀಡಿದರೆ ಅದು ಹೆಚ್ಚಿನ ಪರಿಣಾಮಕಾರಿ ಎಂಬ ವಾದವನ್ನು
ನಾನು ಒಪ್ಪುವುದಿಲ್ಲ.. ಚಿಕ್ಕ ಮಕ್ಕಳ ಧಾರಣ ಶಕ್ತಿ ತಜ್ಞರ ತಿಳುವಳಿಕೆಗಿಂತ ಹೆಚ್ಚಿದೆ.
ಅವರು ಯಾವುದೇ ಭಾಷೆಯಲ್ಲಿ ಕಲಿಯಬಲ್ಲರು. ದಕ್ಷಿಣ ಕನ್ನಡದಲ್ಲಿ ತುಳು ಮಾಧ್ಯಮ ಶಾಲೆಗಳಿಲ್ಲ,
ಆದರೂ ತುಳು ಭಾಷಿಗರ ಮಕ್ಕಳು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಚೆನ್ನಾಗಿ
ನಿಭಾಯಿಸುತ್ತಾರೆ. ಇದಕ್ಕೆ ವಿವರಣೆಯನ್ನು ತಜ್ಞರು ನೀಡಬೇಕು. ಕನ್ನಡ ಮಾಧ್ಯಮ ಕ್ಕಿಂತ
ಹೆಚ್ಚು ಆಂಗ್ಲಮಾಧ್ಯಮದಲ್ಲೆ ಮಕ್ಕಳು ಹೆಚ್ಚು ಚುರುಕಾಗಿರುತ್ತಾರೆ ಎಂದನಿಸುತ್ತಿದೆ.
ಇಂಗ್ಲಿಷ್ ಭಾಷಾ ಪಾಠವು ಒಂದನೇ ತರಗತಿಯಿಂದ ಪ್ರಾರಂಭವಾದರೂ, ಐದನೇ ತರಗತಿಯವರೆಗಿನ ಕನ್ನಡ
ಮಾಧ್ಯಮ ಶಾಲೆಯ ಮಕ್ಕಳಿಗೆ ಇಂಗ್ಲಿಷಿನಲ್ಲಿ ಒಂದು ವಾಕ್ಯ ಮಾಡಲೂ ಸಾಮರ್ಥ್ಯ
ಬಂದಿರುವುದಿಲ್ಲ. ಇದಕ್ಕೆ ಅಲ್ಲಿನ ಶಿಕ್ಷಕರು ವಿವರಣೆ ನೀಡಬೇಕು. ಬಿಡಿ, ಕೆಲವು ಕನ್ನಡ
ಮಾಧ್ಯಮ ಶಾಲೆಗಳಲ್ಲಿ ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಪ್ರಾರಂಭಗೊಂಡರೂ, ಶಿಕ್ಷಕರು ಮಾತ್ರ
ಕನ್ನಡ ದಲ್ಲೇ ಪಾಠ ಮಾಡುತ್ತಾರೆ! ಪ್ರಾಥಮಿಕ ಶಾಲೆ ಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪಾಠ
ಬೋಧನೆಯ ಬಗ್ಗೆ ಅಲ್ಲಿನ ಮುಖ್ಯ ಶಿಕ್ಷಕರು ನಿಗಾ ವಹಿಸುತ್ತಿಲ್ಲ ಅನಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣವನ್ನು ಹೆತ್ತವರು ಯಾಕೆ ಓಲೈಸುತ್ತಿರುವುದು
ಎಂಬುದಕ್ಕೆ ಆಧುನಿಕ ಸಮಾಜವೇ ಉತ್ತರಿಸಬೇಕು. ಕೆಲವೇ ಸರ್ಕಾರಿ ಶಾಲೆಗಳಲ್ಲಿ
ಆಂಗ್ಲಮಾಧ್ಯಮವನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಿದರೆ, ಮುಂದಿನ ದಿನಗಳಲ್ಲಿ ಎಲ್ಲಾ
ವರ್ಗದ ಜನರು ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ಕಳುಹಿಸುವುದರಲ್ಲಿ ಸಂಶಯವಿಲ್ಲ. ಇದರಲ್ಲಿ
ಶಿಕ್ಷಕರ ಪಾತ್ರ ಮಹತ್ವಪೂರ್ಣ ವಾದುದು, ಅವರಿಗೆ ಇಂಗ್ಲಿಷ್ ಬಾರದಿದ್ದರೆ ಯಾವುದೇ
ಪ್ರಯೋಜನವಿಲ್ಲ.
ಆದರೂ, ಕರ್ತವ್ಯದ ನೆಪದಲ್ಲಿ ಶಿಕ್ಷಕರು ಕಚೇರಿ ಕೆಲಸಗಳಲ್ಲಿ ಮಗ್ನರಾದರೆ,
ವಿದ್ಯಾರ್ಥಿಗಳನ್ನು ಯಾರು ನೋಡಿಕೊಳ್ಳಬೇಕು?
On Sep 2, 2016 11:32 AM, "Girish T P" <[email protected]> wrote:
> ನಮಸ್ತೆ***
>
> 1. ಸರ್ಕಾರಿ ನೌಕರರು
> ( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ
> ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು
> ಕಾರಣಗಳೇನು ??
>
> 2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗಳಿಗೆ
> ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ?
>
> 3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು, ಬಹುತೇಕ
> ಪೋಷಕರು ಒಲವು ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು ?
> ~~~~~~~~~~~~~~~~~~
> * ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ
> ಹೇಳುವುದು ತೀರಾ ಸಮಾನ್ಯವಾದ ಹೇಳಿಕೆ.
> (ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು)
> * ಖಾಸಗಿ ಶಾಲೆಗಳ ಆಂಗ್ಲ ಮಾಧ್ಯಮದ ಶಿಕ್ಷಣವೇ ?
>
> ಚರ್ಚೆಯಲ್ಲಿ ಪಾಲ್ಗೊಳ್ಳಿರಿ.
> ~~~~~~~~~~~~~~~~~~~~
> ** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆಯಾಗಿ ಸರ್ಕಾರಿ ಶಾಲೆಗಳಿಗೆ
> ಮತ್ತು ಕಾಲೇಜುಗಳಿಗೆ ಅರ್ಜಿ ಹಾಕುತ್ತಾರೆ.
> (ಸರ್ಕಾರಿ ಶಾಲೆಗಳಲ್ಲಿ ಸಮಾಜದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು
> ಕಲಿಯುತ್ತಿದ್ದಾರೆ)
>
> *** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಉದ್ಯೋಗ ದೊರೆಯದೇ ಇರುವವರು ಖಾಸಗೀ ಅನುದಾನಿತ
> ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ.
> (ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು
> ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ)
>
> **** ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ
> ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ
> ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು)
> {ಈ ರೀತಿಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ ಶಿಕ್ಷಣ
> ಸಂಸ್ಥೆಗಳೆಂದು ಗುರುತಿಸಿಕೊಂಡಿರುವ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ ಅತ್ಯಂತ
> ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು
> ಕಲಿಯುತ್ತಿದ್ದಾರೆ.}
>
> ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ
> ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು.
>
> ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ.
> ~~~~~~~~~~~~~~~~~~~~
> ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ.
> ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ
> ಅನ್ಸುತ್ತೆ.
> 75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ
> ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000.
> (ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ)
>
> ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ
> ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ.
>
> ತಪ್ಪಿದ್ದಲ್ಲಿ ಕ್ಷಮಿಸಿ.
>
> -ಗಿರೀಶ ಟಿ.ಪಿ, ಶಿಕ್ಷಕರು
> ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು.
> ಚಿಕ್ಕಮಗಳೂರು ಜಿಲ್ಲೆ-577228
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.