Very nice sir thank you
On 2 Sep 2016 20:45, "HAREESHKUMAR K Agasanapura" <[email protected]>
wrote:

> http://m.vijaykarnataka.com/edit-oped/columns/netnota-by-
> sudhindhra-haldodderi/articleshow/53929125.cms
>
> *ನೆಟ್ ನೋಟ: ಇಸ್ರೊ ಎಂಜಿನ್ನಿನ 'ಹೈಪರ್' ಹಿರಿಮೆ*
>
> Aug 31, 2016, 04.00 AM IST
>
> WhatsappFacebookGoogle PlusTwitterEmailSMS
>
> bng-3008-2-2-scramjet2
>
> AAA
>
> * ಸುಧೀಂದ್ರ ಹಾಲ್ದೊಡ್ಡೇರಿ ಸತತವಾಗಿ ತನ್ನ ದಾಖಲೆಗಳನ್ನು ತಾನೇ ಉತ್ತಮ
> ಪಡಿಸಿಕೊಳ್ಳುತ್ತಲೇ ಬಂದಿರುವ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ 'ಇಸ್ರೊ' ಮತ್ತೊಂದು
> ಇತಿಹಾಸ ಬರೆದಿದೆ. ಮೊನ್ನೆ ಭಾನುವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್‌
> ಸೆಂಟರ್‌ನಿಂದ ಉಡ್ಡಯಣೆಯಾದ 'ಅಡ್ವಾನ್‌ಸ್ಡ್‌ ಟೆಕ್ನಾಲಜಿ ವೆಹಿಕಲ್‌' (ಎಟಿವಿ) ಮುನ್ನೂರು
> ಸೆಕೆಂಡುಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿದೆ. ಇದರ ವಿಶೇಷವೇನೆಂದರೆ ಎಟಿವಿ
> ರಾಕೆಟ್ಟಿನೊಳಗೆ ಅಡಕವಾಗಿದ್ದದ್ದು ಸಾಮಾನ್ಯ ರಾಕೆಟ್‌ ಎಂಜಿನ್‌ ಆಗಿರಲಿಲ್ಲ. ಅದರೊಳಗೆ
> ಶಬ್ದದ ವೇಗಕ್ಕಿಂತಲೂ ಹಲವು ಪಟ್ಟು ಹೆಚ್ಚಿನ ವೇಗದಲ್ಲಿ ರಾಕೆಟ್ಟನ್ನು ಮುನ್ನುಗ್ಗಿಸಬಲ್ಲ
> ಪುಟ್ಟ ಎಂಜಿನ್‌ ಒಂದು ಅಡಕವಾಗಿತ್ತು. ಮಕ್ಕಳು ಪಟಾಕಿಯ ರಾಕೆಟ್‌ಗಳನ್ನು ಹಚ್ಚಿ
> ಬಿಡುವಷ್ಟೇ ಸುಲಭದಲ್ಲಿ ಇಂದು ಆಗಸಕ್ಕೆ ರಾಕೆಟ್‌ಗಳನ್ನು ತೂರಿಬಿಡಲಾಗುತ್ತಿದೆ. ಇಷ್ಟೊಂದು
> ಮುಂದುವರಿದಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಶಬ್ದದ ವೇಗಕ್ಕಿಂತಲೂ ಆರು ಪಟ್ಟು ವೇಗದ
> ಉಡ್ಡಯಣೆ ಭಾರಿಯದೇನಲ್ಲ. ಹಾಗಿದ್ದರೆ 'ಇಸ್ರೊ'ದ ಯಶಸ್ಸಿಗೆ ನಾವೆಲ್ಲಾ ಇಷ್ಟೊಂದು ಸಂಭ್ರಮ
> ಪಡಲು ಕಾರಣವೇನು? ಎಂಬ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಮೂಡಿರಬಹುದು. ರಾಕೆಟ್‌ ಆಗಲಿ
> ವಿಮಾನವಾಗಲಿ ಮುನ್ನುಗ್ಗಿ ಧಾವಿಸುವುದು 'ಜೆಟ್‌ ಪ್ರತಿಕ್ರಿಯೆ'ಯಿಂದ. ಗಾಳಿ ತುಂಬಿದ
> ಬೆಲೂನನ್ನು ಬಿಟ್ಟರೆ ಹಿನ್ನುಗ್ಗುವ ಒತ್ತಡದ ಗಾಳಿ ಬೆಲೂನನ್ನು ಮುಂದೆ ಸಾಗುವಂತೆ ಮಾಡುವ
> ತಂತ್ರಜ್ಞಾನ ನಿಮಗೆ ಗೊತ್ತು. ಹಾರುವ ಯಂತ್ರಗಳಿಗೆ 'ನೂಕುಬಲ'ವನ್ನು ನೀಡುವ ಹೊಣೆಗಾರಿಕೆ
> ಎಂಜಿನ್‌ಗಳದು. ಈ ಎಂಜಿನ್‌ಗಳಲ್ಲಿ ಗಾಳಿಯನ್ನು ಒತ್ತಡಕ್ಕೊಳಪಡಿಸಿ, ದಹನ ಯಂತ್ರದಲ್ಲಿ
> ಉರಿಯುವ ಇಂಧನಕ್ಕೆ ಅದನ್ನು ಉಣಬಡಿಸಿ, ಅಪಾರಶಕ್ತಿಯ ಅನಿಲವನ್ನು ಹೊರಚಿಮ್ಮುವಂತೆ
> ಮಾಡಲಾಗುತ್ತದೆ. 'ನ್ಯೂಟನ್‌ನ ಮೂರನೆಯ ನಿಯಮ'ದಂತೆ ಇಂಥ ಅನಿಲದ ಹೊರಚಿಮ್ಮುವ ಕ್ರಿಯೆಗೆ
> ಪ್ರತಿಕ್ರಿಯೆಯಾಗಿ ವಿಮಾನ ಅಥವಾ ರಾಕೆಟ್‌ ಮುಂದೆ ಧಾವಿಸುತ್ತದೆ. ಭೂಮಂಡಲದಲ್ಲಿ
> ಮೇಲೇರಿದಂತೆ ವಾತಾವರಣ ತಿಳಿಯಾಗುತ್ತಾ ಬರುವುದು ಪ್ರಕೃತಿ ನಿಯಮ. ವಿಮಾನವಾಗಲಿ, ರಾಕೆಟ್‌
> ಆಗಲಿ ಬಹು ಎತ್ತರಕ್ಕೇರಿದಾಗ ಕಮ್ಮಿಯಾಗುವ ಗಾಳಿಯ ಸಾಂದ್ರತೆಯಿಂದ ಇಂಧನ ದಹನ ಕ್ರಿಯೆ
> ಪೂರ್ಣವಾಗುವುದಿಲ್ಲ. ಇಂಥದೊಂದು 'ಉಸಿರಾಟ'ದ ತೊಂದರೆಯಿಂದಾಗಿ ಎಂಜಿನ್‌ನ ನೂಕುಬಲ
> ಕಮ್ಮಿಯಾಗತೊಡಗುತ್ತದೆ. ಈ ಕಾರಣದಿಂದ ವಿಮಾನ ಹಾರುವ ಎತ್ತರಕ್ಕೆ ಒಂದು ಮಿತಿಯನ್ನು ನಿಗದಿ
> ಪಡಿಸಲಾಗಿದೆ. ವಾತಾವರಣದ ಗಾಳಿಯನ್ನು ಬಳಸಿಕೊಳ್ಳುವ ಜೆಟ್‌ ಎಂಜಿನ್‌ ಆಧರಿತ ವಿಮಾನಗಳ
> ಹಾರಾಟವು ಸಾಮಾನ್ಯವಾಗಿ ನೆಲದಿಂದ 18 ಕಿಲೋಮೀಟರ್‌ ಎತ್ತರಕ್ಕೆ ಸೀಮಿತ. ಈ ಮಿತಿಯನ್ನು ದಾಟಿ
> ಹಾರಬೇಕಾದ ನೌಕೆಗಳು ದಹನಕ್ರಿಯೆಗೆ ಬೇಕಾದ ಆಮ್ಲಜನಕವನ್ನು ತಾವೇ ಹೊತ್ತೊಯ್ಯುತ್ತವೆ.
> ಆಮ್ಲಜನಕವೂ ಸೇರಿರುವ ಇಂಥ ಇಂಧನವನ್ನು 'ಪ್ರೊಪೆಲೆಂಟ್‌'ಗಳೆಂದು ಕರೆಯಲಾಗುತ್ತದೆ. ಆಮ್ಲಜನಕ
> ಮಿಳಿತವಾದ ಪ್ರೊಪೆಲೆಂಟ್‌ಗಳ ನಿರ್ವಹಣೆ ಎಣಿಸಿದಷ್ಟು ಸುಲಭವಲ್ಲ. ಜತೆಗೆ ಸಾಮಾನ್ಯ ವಿಮಾನ
> ಇಂಧನಕ್ಕಿಂತಲೂ ಬೆಲೆಯಲ್ಲಿ ತುಟ್ಟಿ. ಇದರ ಬಗ್ಗೆ ಸಾಕಷ್ಟು ಚಿಂತಿಸುತ್ತಿದ್ದ ಬಾಹ್ಯಾಕಾಶ
> ತಂತ್ರಜ್ಞರಿಗೆ ವಿಮಾನವೊಂದು ವೇಗವಾಗಿ ಧಾವಿಸುವಾಗ ಎದುರಾಗುವ ಗಾಳಿಯ ಬಗ್ಗೆ
> ಕುತೂಹಲವಿತ್ತು. ವೇಗದಿಂದ ಧಾವಿಸುವ ಈ ಗಾಳಿಯನ್ನು ಮತ್ತಷ್ಟು ವೇಗೋತ್ಕರ್ಷಕ್ಕೊಳಪಡಿಸಿ
> ನೂಕುಬಲ ಸೃಷ್ಟಿಸಲು ಪ್ರಯೋಗಗಳನ್ನು ಅವರು ನಡೆಸತೊಡಗಿದರು. ತಿರುಗಣಿ ಮಡುವಿನಲ್ಲಿ ಸಿಲುಕಿದ
> ಗಾಳಿಯು ಗುದ್ದಾಟದ 'ರಭಸದಿಂದ ಹೊರಚಿಮ್ಮುವ ಗಾಳಿ'ಯಾಗುವ (ರಾಮ್‌ ಏರ್‌) ಸೋಜಿಗವನ್ನು
> ಕಂಡರು. ಇದೇ ತತ್ವದಿಂದ ಕೆಲಸ ಮಾಡುವ 'ರಾಮ್‌ ಜೆಟ್‌' ಎಂಜಿನ್‌ಗಳು ಬೆಳಕಿಗೆ ಬಂದವು.
> ಉತ್ತಮ ಕಾರ್ಯಕ್ಷ ಮತೆಯಿರದಿದ್ದ ಕಾರಣ ಈ ಎಂಜಿನ್‌ಗಳು ಅಷ್ಟು ಜನಪ್ರಿಯವಾಗಲಿಲ್ಲ. ಶಬ್ದದ
> ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ನೌಕೆಯನ್ನು ಮುನ್ನಡೆಸಲು ಮತ್ತಷ್ಟು ಪ್ರಬಲವಾದ ಎಂಜಿನ್‌ಗಳ
> ಅಗತ್ಯವಿತ್ತು. 'ರಾಮ್‌ ಜೆಟ್‌' ಎಂಜಿನ್‌ಗಳಿಗೆ ಇಂಧನ ದಹನದ ಶಕ್ತಿಯನ್ನು ಪೂರಕವಾಗಿಸಿದರೆ
> ನೌಕೆಗಳು ಶಬ್ದದ ವೇಗವನ್ನು ಸುಲಭವಾಗಿ ದಾಟಬಹುದೆಂಬ ಕಲ್ಪನೆ ಚಿಗುರೊಡೆಯಿತು. ಇಂಥ
> ಸಮಯದಲ್ಲಿ ಸೃಷ್ಟಿಯಾದದ್ದೇ ಸೂಪರ್‌ಸಾನಿಕ್‌-ಕಂಬಶನ್‌ ರಾಮ್‌ ಜೆಟ್‌' ಅರ್ಥಾತ್‌
> 'ಸ್ಕ್ರ್ಯಾಮ್‌ ಜೆಟ್‌' ಎಂಜಿನ್‌. ತಂತ್ರಜ್ಞರು ಕಂಡುಕೊಂಡಂತೆ ಮ್ಯಾಕ್‌ ಸಂಖ್ಯೆ ಐದನ್ನು
> ದಾಟುವಂಥ ನೌಕೆಗಳಲ್ಲಿ ಮಾತ್ರ ಇಂಧನ ದಹನಕ್ಕೆ ಅಗತ್ಯವಿರುವಷ್ಟು 'ರಾಮ್‌' ಗಾಳಿ ಇಲ್ಲಿ
> ಸಿಗಲಿದೆ. ಸದ್ಯಕ್ಕೆ 'ಇಸ್ರೊ' ಉಡ್ಡಯಿಸಿರುವ ಎಟಿವಿಯಲ್ಲಿ ಸ್ವದೇಶಿ 'ಸ್ಕ್ರ್ಯಾಮ್‌ ಜೆಟ್‌
> ಎಂಜಿನ್‌' ಅನ್ನು ಅಳವಡಿಸಲಾಗಿದೆ. ಈ ಎಂಜಿನ್‌ನಲ್ಲಿ ಜಲಜನಕವನ್ನು ದಹನಕಾರಿ ಇಂಧನವನ್ನಾಗಿ
> ಬಳಸಿಕೊಳ್ಳಲಾಗಿದ್ದು, ವಾತಾವರಣದಲ್ಲಿನ ಆಮ್ಲಜನಕವು ಇದಕ್ಕೆ ದಹನಾನುಕೂಲಿ ಅನಿಲದಂತೆ
> ನೆರವಾಗಿದೆ. ಶಬ್ದಕ್ಕಿಂತಲೂ ಆರು ಪಟ್ಟು ಅಂದರೆ 'ಹೈಪರ್‌ ಸಾನಿಕ್‌' ವೇಗದಲ್ಲಿ ಧಾವಿಸಿದ
> ಎಟಿವಿ 320 ಕಿಲೋ ಮೀಟರ್‌ ಕ್ರಮಿಸಿ ಬಂಗಾಳ ಕೊಲ್ಲಿಯಲ್ಲಿ ಬಿದ್ದಿದೆ. ಶಬ್ದಕ್ಕಿಂತಲೂ
> ಹೆಚ್ಚಿನ ವೇಗ 'ಸೂಪರ್‌ ಸಾನಿಕ್‌' ವೇಗ ಎಂಬುದು ನಿಮಗೆ ಗೊತ್ತು. ವಿಮಾನವೊಂದು ಮುನ್ನುಗ್ಗಿ
> ಧಾವಿಸುವ ವೇಗವನ್ನು ಸಾಮಾನ್ಯವಾಗಿ 'ಮ್ಯಾಕ್‌' ಅಳತೆಯಲ್ಲಿ ಗುರುತಿಸಲಾಗುತ್ತದೆ. ಶಬ್ದ
> ಕ್ರಮಿಸುವ ವೇಗವಾದ ಸೆಕೆಂಡಿಗೆ 330 ಮೀಟರ್‌ ಅಥವಾ ಗಂಟೆಗೆ 1200 ಕಿಲೋಮೀಟರ್‌ ವೇಗವು ಈ
> ಮಾಪನದಲ್ಲಿ ಒಂದು 'ಮ್ಯಾಕ್‌' ಆಗುತ್ತದೆ. ವೇಗವು ಐದು 'ಮ್ಯಾಕ್‌'ಗಿಂತಲೂ ಹೆಚ್ಚಿದ್ದರೆ
> ಅದು 'ಹೈಪರ್‌ ಸಾನಿಕ್‌' ವೇಗವೆನಿಸಿಕೊಳ್ಳುತ್ತದೆ. ಶಬ್ದದ ವೇಗಕ್ಕಿಂತಲೂ ಹೆಚ್ಚಿನ
> ವೇಗವನ್ನು ವಿಮಾನ ಅಥವಾ ಯಾವುದೇ ವಾಹನ ಗಳಿಸಿಕೊಂಡಂತೆ ಅದರ ಎಂಜಿನ್‌ನೊಳಗೆ ಹರಿದಾಡುವ
> ಗಾಳಿಯ ಗುಣಲಕ್ಷ ಣಗಳು ಬದಲಾಗುತ್ತವೆ. ಉದಾಹರಣೆಗೆ, ಬಾಯಿ ಕಿರಿದಾಗುತ್ತಾ ಹೋಗುವ
> 'ಕನ್ವರ್ಜೆಂಟ್‌' ನಾಝಲ್‌ ಅಥವಾ ನಳಿಕೆಯಲ್ಲಿ ಗಾಳಿ ನುಗ್ಗಿದಂತೆ ಅದರ ಒತ್ತಡ
> ಕಡಿಮೆಯಾಗುತ್ತಾ ಬಂದು, ವೇಗ ಹೆಚ್ಚಾಗುತ್ತಾ ಹೋಗುತ್ತದೆ. ಇದೇ ರೀತಿ, ಬಾಯಿ
> ದೊಡ್ಡದಾಗುತ್ತಾ ಹೋಗುವ ನಳಿಕೆ 'ಡೈವರ್ಜೆಂಟ್‌ ನಾಝಲ್‌'ನಲ್ಲಿ ಗಾಳಿಯ ಒತ್ತಡ ಹೆಚ್ಚುತ್ತಾ
> ಬಂದು, ವೇಗ ಕುಗ್ಗ ತೊಡಗುತ್ತದೆ. ಈ ತತ್ವವು ಸಾಮಾನ್ಯ ವೇಗದಲ್ಲಿ ಗಾಳಿ ಪಸರಿಸಿದಾಗ ಮಾತ್ರ
> ಅನ್ವಯವಾಗುತ್ತದೆ. ಡೈವರ್ಜೆಂಟ್‌ ನಾಝಲ್‌ಒಂದಕ್ಕೆ ಶಬ್ದಾತೀತ ವೇಗದಲ್ಲಿ ಗಾಳಿಯನ್ನು
> ಊಡಿದರೆ ಸಾಮಾನ್ಯ ನಿಯಮದಂತೆ ವೇಗ ಕುಗ್ಗುವ ಬದಲು ವೇಗ ಹೆಚ್ಚುತ್ತಾ ಹೋಗುತ್ತದೆ. ಈ ಬಗೆಯ
> ಗಾಳಿಯೊಂದಿಗಿನ ಸರಸವನ್ನು ವಿಮಾನ ಎಂಜಿನ್‌ಗಳ ನಿರ್ಮಾತೃಗಳು ತಮ್ಮ ವಿನ್ಯಾಸಗಳಲ್ಲಿ
> ಪರೀಕ್ಷಿಸಿ ನೋಡಿದ್ದಾರೆ. ಶಬ್ದಾತೀತ ವೇಗದ ವಿಮಾನ ಎಂಜಿನ್‌ಗಳಲ್ಲಿ ಬಾಯಿ ಕುಗ್ಗುತ್ತಾ
> ಹೋಗುವ ನಳಿಕೆಗೆ ಬಾಯಿ ಹೋಗುತ್ತಾ ಹೋಗುವ ನಳಿಕೆಯನ್ನು ಜೋಡಿಸಲಾಗಿರುತ್ತದೆ. ಇವೆರಡೂ
> ನಳಿಕೆಗಳು ಜೋಡಣೆಯಾಗುವ ಸ್ಥಳದಲ್ಲಿ ಗಾಳಿಯ ವೇಗ ಶಬ್ದದ ವೇಗವನ್ನು ಮುಟ್ಟುವಂತೆ
> ನೋಡಿಕೊಳ್ಳಲಾಗಿರುತ್ತದೆ. ಇದರಿಂದಾಗಿ ಹೊರ ಬರುವ ಗಾಳಿಯ ವೇಗ ಶಬ್ದದ ವೇಗಕ್ಕಿಂತಲೂ ಹಲವು
> ಪಟ್ಟು ಹೆಚ್ಚು ವೇಗವನ್ನು ತಲುಪಲು ಸಾಧ್ಯ. ಇವೆಲ್ಲ ಸಂದರ್ಭಗಳಲ್ಲಿಯೂ ಇಂಧನ ಪೂರೈಕೆ
> ವ್ಯವಸ್ಥೆಯಲ್ಲಿ ಇಂಧನ ಹರಿದಾಟದ ಸ್ಥಿರತೆ, ದಹನಕೋಶದಲ್ಲಿ ಜ್ವಾಲೆಯ ಹತೋಟಿ, ಶಬ್ದಾತೀತ
> ವೇಗದಲ್ಲಿ ಉತ್ಪತ್ತಿಯಾಗುವ ಕಂಪನಗಳ ನಿಯಂತ್ರಣ ಮತ್ತಿತರ ಗಹನ ತಾಂತ್ರಿಕ ವಿಷಯಗಳನ್ನು
> ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಈ ಹಿಂದೆ 'ಇಸ್ರೊ' ಸಂಸ್ಥೆಯು ತಾನು ಉಡ್ಡಯಿಸಿದ್ದ
> 'ರೋಹಿಣಿ' ಸರಣಿಯ ರಾಕೆಟ್‌ಗಳಿಗೇ ಕೊಂಚ ಮಾರ್ಪಾಡು ಮಾಡಿ ಮೊನ್ನೆಯ ಪ್ರಯೋಗಕ್ಕೆ
> ಬಳಸಿಕೊಂಡಿದೆ. ಎರಡು ಹಂತದ ಘನ ರಾಕೆಟ್‌ಗಳ ರೋಹಿಣಿಯ ಕೊನೆಗೆ ಎರಡು ಸ್ಕ್ರ್ಯಾಮ್‌ ಜೆಟ್‌
> ಎಂಜಿನ್‌ಗಳನ್ನು ಜೋಡಿಸಲಾಗಿತ್ತು. ರಾಕೆಟ್‌ ನಿರ್ದಿಷ್ಟ ಹಂತವನ್ನು ತಲುಪಿದ ಕ್ಷ ಣ, ಈ
> ಎರಡೂ ಸ್ಕ್ರ್ಯಾಮ್‌ ಜೆಟ್‌ ಎಂಜಿನ್‌ಗಳು ಚಾಲೂ ಆಗಿ, ಐದು ನಿಮಿಷಗಳ ಕಾಲ ನಿರ್ವಹಿಸಿದವು.
> ಐದು ನಿಮಿಷಗಳ ಕಾಲಾವಧಿಯಲ್ಲಿ ಎಟಿವಿ ರಾಕೆಟ್‌ನ ವೇಗವು ಶಬ್ದಕ್ಕಿಂತಲೂ ಆರು ಪಟ್ಟು
> ಹೆಚ್ಚಾಗಿತ್ತು. ಈ ಯಶಸ್ವಿ ಉಡ್ಡಯಣೆಯ ಹಿಂದೆ 'ಇಸ್ರೊ' ವಿಜ್ಞಾನಿ-ತಂತ್ರಜ್ಞರ ಅಪಾರ
> ಪರಿಶ್ರಮ ಅಡಗಿದೆ. ಹೈಪರ್‌ ಸಾನಿಕ್‌ ಎಂಜಿನ್‌ನ ಸೂಸುಬಾಯಿಯ ವಿನ್ಯಾಸ, ದಹನ ಕೋಶದ
> ವಿನ್ಯಾಸ ಮತ್ತು ಇವೆರಡೂ ವಿನ್ಯಾಸಗಳ ಪೂರ್ವಭಾವಿ ಪರಿಶೀಲನೆ 'ಇಸ್ರೊ' ಎದುರಿಸಿದ ಬಹುದೊಡ್ಡ
> ಸವಾಲುಗಳಾಗಿದ್ದವು. ಹಾಗೆಯೇ ಹೈಪರ್‌ ಸಾನಿಕ್‌ ಎಂಜಿನ್‌ಗಳ ನಿರ್ಮಾಣಕ್ಕೆ ಬೇಕಾಗುವ ಅತಿ
> ಹೆಚ್ಚು ತಾಪಮಾನವನ್ನು ತಡೆದುಕೊಳ್ಳುವ ಸಾಮಗ್ರಿಗಳನ್ನು ಸ್ವದೇಶಿಯಾಗಿ
> ಅಭಿವೃದ್ಧಿಪಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಇಡೀ ಎಂಜಿನ್‌ನಲ್ಲಿ ತಾಪಮಾನದ
> ನಿಯಂತ್ರಣಕ್ಕೆ ಬೇಕಾಗುವ ಶೀತಲೀಕರಣ ವ್ಯವಸ್ಥೆಯ ನಿರ್ಮಾಣ ಮತ್ತು ನಿರ್ವಹಣೆಯೂ ಸವಾಲಿನದೇ
> ಆಗಿತ್ತು. ಇವೆಲ್ಲವನ್ನೂ ಪೂರ್ವಭಾವಿಯಾಗಿ ಭೂಪರೀಕ್ಷ ಣೆಗೊಡ್ಡುವ ಮೊದಲು,
> ಕಂಪ್ಯೂಟರಿನಲ್ಲಿಯೇ ಪರಿಶೀಲನೆ ನಡೆಸಲು ಅಗತ್ಯವಿದ್ದ ತಂತ್ರಾಂಶವನ್ನೂ 'ಇಸ್ರೊ'
> ವಿಜ್ಞಾನಿಗಳೇ ನಿರ್ಮಿಸಿಕೊಳ್ಳಬೇಕಿತ್ತು. ಜಗತ್ತಿನ ಯಾವುದೇ ರಾಷ್ಟ್ರ ಇಂಥ ಸಂಕೀರ್ಣ
> ತಂತ್ರಜ್ಞಾನಗಳನ್ನು ಮತ್ತೊಂದು ದೇಶದೊಂದಿಗೆ ಹಂಚಿಕೊಳ್ಳುವುದಿಲ್ಲ. ಈ ಬಗೆಯ ಎಂಜಿನ್‌ಗಳು
> ಹೆಚ್ಚು ಬಳಕೆಗೆ ಬಂದಲ್ಲಿ ಆಗುವ ಅನುಕೂಲಗಳು ಅಪಾರ. ಮೊಟ್ಟ ಮೊದಲನೆಯದಾಗಿ ನಮ್ಮ ಉಡ್ಡಯಣಾ
> ವೆಚ್ಚ ಗಣನೀಯ ಪ್ರಮಾಣದಲ್ಲಿ ತಗ್ಗುತ್ತದೆ. ಕಾರಣ, ಆಮ್ಲಜನಕ ಪೂರೈಸುವ ಆಕ್ಸಿಡೈಸರ್‌
> ಅನ್ನು ಇಂಧನದೊಂದಿಗೆ ಹೊತ್ತೊಯ್ಯುವ ಅವಶ್ಯವಿರುವುದಿಲ್ಲ. ಗಾಳಿಯೇ ಚಾಲಕ
> ಶಕ್ತಿಯಾಗಿರುವುದರಿಂದ ಸಾಮಾನ್ಯ ಎಂಜಿನ್‌ಗಳಲ್ಲಿರುವಂತೆ 'ಸ್ಕ್ರ್ಯಾಮ್‌ ಜೆಟ್‌'
> ಎಂಜಿನ್‌ಗಳಲ್ಲಿ ಸರಿದಾಡುವ ಇಲ್ಲವೆ ತಿರುಗಾಡುವ ಬಿಡಿಭಾಗಗಳಿರುವುದಿಲ್ಲ. ಅವುಗಳ
> ನಿರ್ವಹಣೆಯ ರೇಜಿಗೆಯೂ ಇರುವುದಿಲ್ಲ. ಸೆಕೆಂಡೊಂದರ ದಶಲಕ್ಷ ದ ಒಂದು ಭಾಗದ ಅವಧಿಯಲ್ಲಿ
> ಇಂಧನಕ್ಕೆ ಕಿಡಿ ತಲುಪಿ, ಕೆಲವೇ ಸೆಕೆಂಡುಗಳಲ್ಲಿ ದಹನ ಕ್ರಿಯೆ ಪೂರ್ಣವಾಗಿ ಅಪಾರ ಶಕ್ತಿ
> ಬಿಡುಗಡೆಯಾಗುವುದು ನಿಜಕ್ಕೂ ಒಂದು ಎಂಜಿನಿಯರಿಂಗ್‌ ಸೋಜಿಗವೇ ಸೈ. ಇಂಧನದ ದ್ರವ್ಯ ರಾಶಿಗೆ
> ಲಭ್ಯವಾಗುವ ರಾಕೆಟ್‌ ಶಕ್ತಿಯಲ್ಲೂ ಈ ಎಂಜಿನ್‌ಗಳದು ಹೆಚ್ಚಿನ ಶ್ರೇಯಾಂಕ. ಸಾಮಾನ್ಯ
> ರಾಕೆಟ್‌ ಎಂಜಿನ್‌ಗಳಿಗಿಂತ ಎರಡರಿಂದ ಹತ್ತು ಪಟ್ಟು ಹೆಚ್ಚಿನ ರಾಕೆಟ್‌ ಶಕ್ತಿಯನ್ನು ಈ
> ಎಂಜಿನ್‌ಗಳು ಉತ್ಪಾದಿಸಬಲ್ಲವು. ಕೊನೆಯದಾಗಿ ಅಗ್ಗದ ಹಾಗೂ ಹೆಚ್ಚಿನ ವೇಗದ ರಾಕೆಟ್‌
> ಉಡ್ಡಯಣೆಯೆಂದರೆ ಬಾಹ್ಯಾಕಾಶ ಪಯಣಕ್ಕೆ ಹೆಚ್ಚು ಜನರನ್ನು ಸೆಳೆಯಬಹುದು.
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to