Nice On 08-Sep-2016 9:03 AM, "veena dodmane" <[email protected]> wrote:
> Super information. > On 08-Sep-2016 7:11 am, "csm cbpur" <[email protected]> wrote: > >> >> >> *** This message has been sent using GIONEE M2 *** >> >> -------- Original Message -------- >> Subject: ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ... | A >> tribute to Sir M. Vishweshwaraiah - ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ >> ಶ್ರಮಪಡದಿದ್ದರೆ... - Kannada Oneindia >> From: csm cbpur <[email protected]> >> To: csm cbpur <[email protected]> >> CC: >> >> ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ... >> Published: Thu, Sep 14, 2000, 5:30 [IST] >> ಇಂಡಸ್ಟ್ರಿಯಲೈಸ್ ಆರ್ ಪೆರಿಷ್ ಎಂದು ಹೇಳಿದವರಾರು ನಿಮಗೆ ಗೊತ್ತೆ ? ಕೈಗಾರೀಕರಣ >> ಆಗದಿದ್ದರೆ ಮತ್ತೆ ನಾವು ಶಿಲಾಯುಗಕ್ಕೇ ಹೋಗುತ್ತೇವೆ ಎನ್ನುತ್ತಿದ್ದ ಶತಾಯುಷಿ ಸರ್.ಎಂ. >> ವಿಶ್ವೇಶ್ವರಯ್ಯನವರನ್ನು ಪ್ರತಿಯಾಬ್ಬ ಕನ್ನಡಿಗನೂ ನೆನೆಯಲೇ ಬೇಕು. ಮೈಸೂರು - ಮಂಡ್ಯ - >> ಬೆಂಗಳೂರಿಗರು ತಾವು ಒಂದೊಂದು ಹನಿ ಕಾವೇರಿ ನೀರು ಕುಡಿಯುವಾಗಲೂ ವಿಶ್ವೇಶ್ವರಯ್ಯನವರನ್ನು >> ಕಡ್ಡಾಯವಾಗಿ ನೆನೆಯಲೇ ಬೇಕು. ಮಂಡ್ಯ ಇಂದು ಕಬ್ಬಿನ ಕಣಜವಾಗಿದ್ದರೆ, ಅದಕ್ಕೆ >> ವಿಶ್ವೇಶ್ವರಯ್ಯನವರೇ ಕಾರಣ. >> ಕರ್ನಾಟಕದಲ್ಲಿ ಇಂದು ನೂರಾರು ಕೈಗಾರಿಕೆ - ಕಾರ್ಖಾನೆಗೆ ಯಂತ್ರಗಳು ವಿದ್ಯುತ್ >> ನೆರವಿನಿಂದ ವೇಗವಾಗಿ ಚಲಿಸುತ್ತಿದ್ದರೆ, ಕರ್ನಾಟಕದ ಕೋಟ್ಯಂತರ ಮನೆಗಳಲ್ಲಿ ವಿದ್ಯುತ್ ದೀಪ >> ಉರಿಯುತ್ತಿದ್ದರೆ ಅದಕ್ಕೆ ವಿಶ್ವೇಶ್ವರಯ್ಯನವರೇ ಕಾರಣ. ಕೋಲಾರ ಚಿನ್ನದ ನಾಡಾಗಲು >> ವಿಶ್ವೇಶ್ವರಯ್ಯನವರ ಕಾಣಿಕೆ ಅಪಾರ. >> ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ.... ಕನ್ನಂಬಾಡಿಯ >> ಕಟ್ಟದಿದ್ದರೆ... ಈ ಗೀತೆ ಕೇಳಿದ್ದೀರಲ್ಲ. ಆಗದು ಎಂದು ಕೈಲಾಗದು ಎಂದು ಕೈಕಟ್ಟಿ >> ಕುಳಿತರೆ... ಸಾಗದು ಕೆಲಸವು ಮುಂದೆ ಎಂಬ ತತ್ವವನ್ನೇ ತಮ್ಮ ಬಾಳಲ್ಲಿ ಅಳವಡಿಸಿಕೊಂಡ >> ವಿಶ್ವೇಶ್ವರಯ್ಯನವರನ್ನು ನೆನೆಯದವರೇ ಇಲ್ಲ. >> ವಿಜ್ಞಾನ, ತಂತ್ರಜ್ಞಾನ ಅಥವಾ ಮನೆಯಲ್ಲಿ ನೀವು ಪುಟ್ಟದೊಂದು ತಾಂತ್ರಿಕ ಸಲಹೆ ನೀಡಿ ಅದು >> ಯಶಸ್ವಿಯಾದರೆ. ಅಬ್ಬಾ ವಿಶ್ವೆಶ್ವರಯ್ಯನವರ ತಲೆ ಎಂದು ಪ್ರಶಂಸೆಯಿಂದ ಹೇಳುವುದುಂಟು. ಬಹುಶಃ >> ನಿಮ್ಮ ತಾಯಿಯೋ ಅಜ್ಜಿಯೋ ನಿಮಗೂ ಈ ಮಾತು ಹೇಳಿರಬಹುದು. ಒಬ್ಬ ವ್ಯಕ್ತಿಯ ತಲೆಗೆ ಕೋಟ್ಯಂತರ >> ಕನ್ನಡಿಗರು ಬೆಲೆ ನೀಡುವಂತಹ ಹೆಮ್ಮೆಯ ಕೆಲಸವನ್ನು ಮಾಡಿದವರಲ್ಲಿ ಸರ್.ಎಂ.ವಿ. ಅಗ್ರೇಸರರು. >> ಸೆಪ್ಟೆಂಬರ್ 15 ಸರ್.ಎಂ. ವಿ ಹುಟ್ಟಿದ ದಿನ. ಇಂದು ಕರ್ನಾಟಕ ವಿಶ್ವ ಭೂಪಟದಲ್ಲಿ >> ತನ್ನದೇ ಆದ ಒಂದು ಸ್ಥಾನ ಪಡೆದಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಂತೂ ರಾಜ್ಯದ >> ಕೊಡುಗೆ ಅಪಾರ. ಈ ಎಲ್ಲದಕ್ಕೂ ಮೂಲವಾದ ವೇದಿಕೆ ಸಜ್ಜುಗೊಳಿಸಿದವರು ಸರ್.ಎಂ.ವಿ. ಅವರ >> ಹುಟ್ಟು ಹಬ್ಬದ ದಿನದಂದು ಅವರನ್ನು ನೆನೆವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. >> ಸರ್‌ಎಂವಿ ವಿಶ್ವಖ್ಯಾತ ಎಂಜಿನಿಯರ್. ಹೀಗಾಗಿ ಸೆಪ್ಟೆಂಬರ್ 15ನ್ನು ಎಂಜಿನಿಯರುಗಳ >> ದಿನವಾಗಿ ಆಚರಿಸುತ್ತಾರೆ. ವಿಶ್ವೇಶ್ವರಯ್ಯನವರು ಕೇವಲ ಒಬ್ಬ ಎಂಜಿನಿಯರ್ ಅಷ್ಟೇ ಅಲ್ಲ. >> ಅತ್ಯುತ್ತಮ ಆಡಳಿತಗಾರ, ವಿಶ್ವದ ಮೊಟ್ಟ ಮೊದಲ ಅರ್ಥ ಯೋಜಕ ತಜ್ಞ, ಕೈಗಾರಿಕೋದ್ಯಮಿ, >> ವಿಜ್ಞಾನಿ, ಶಿಕ್ಷಣ ತಜ್ಞ..... ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸರ್.ಎಂ.ವಿ. ಸೇವೆ >> ಸಲ್ಲಿಸದ ಕ್ಷೇತ್ರವೇ ಇಲ್ಲ ಎನ್ನುವ ಮಾತು ಅತಿಶಯೋಕ್ತಿಯದಲ್ಲ. >> ಆನೆ ಬೈಲು : ಒಂದು ಕಾಲದಲ್ಲಿ ಆನೆಗಳ ತವರಾಗಿದ್ದ ದುರ್ಗಮ ಅರಣ್ಯ ಇಂದು ಲಕ್ಷಾಂತರ >> ಪ್ರವಾಸಿಗರನ್ನು ತನ್ನತ್ತ ಸೆಳೆಯುವ ವಿಶ್ವಖ್ಯಾತ ಜೋಗವಾಗಲು ವಿಶ್ವೇಶ್ವರಯ್ಯನವರೇ ಕಾರಣ. >> ದುರ್ಗಮವಾಗಿದ್ದ ಜೋಗದ ಸೊಬಗನ್ನು ಕಾಣಲು ನೂರು ವರ್ಷಗಳ ಹಿಂದೆ ಹರ ಸಾಹಸ ಮಾಡಿದವರೂ >> ಇದ್ದಾರೆ. ಕೆಲವರಷ್ಟೇ ತಮ್ಮ ಈ ಸಾಹಸದಲ್ಲಿ ಯಶಸ್ವಿಯಾಗಿ ತಮ್ಮ ಬಾಳು ಸಾರ್ಥಕವಾಯಿತು ಎಂದೂ >> ತಿಳಿಯುತ್ತಿದ್ದರು. >> ಈ ಪ್ರದೇಶಕ್ಕೆ ಭೇಟಿಕೊಟ್ಟ ವಿಶ್ವೇಶ್ವರಯ್ಯನವರು ಜೋಗದ ಸೊಬಗು ನೋಡಿ ಸಂತೋಷ ಪಟ್ಟರಾದರೂ, >> ಅಯ್ಯೋ ಎಷ್ಟೊಂದು ವ್ಯರ್ಥ, ತುಂಬಲಾರದ ನಷ್ಟ ಎಂದು ಉದ್ಗರಿಸಿದರು. ಇಂತಹ ಪ್ರಕೃತಿ ದತ್ತ >> ಅಗಾಧ ಸಂಪತ್ತು ವ್ಯರ್ಥವಾಗಿ ಹಾಳಾಗುತ್ತಿರುವುದಕ್ಕೆ ಮರುಗಿದರು. ಅಂದು >> ವಿಶ್ವೇಶ್ವರಯ್ಯನವರು ಈ ಆನೆಬೈಲಿಗೆ ಹೋಗದಿದ್ದರೆ, ಕರ್ನಾಟಕದ ವಿದ್ಯುತ್ ಸಮಸ್ಯೆಯನ್ನು >> ಮತ್ತಷ್ಟು ಮಗದಷ್ಟು ಬಿಗಡಾಯಿಸುತ್ತಿತ್ತು. >> ವಿಶ್ವೇಶ್ವರಯ್ಯ : ವಿಶ್ವೇಶ್ವರಯ್ಯನವರ ಪೂರ್ಣ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಾಯ. >> 1861ರ ಸೆಪ್ಟೆಂಬರ್ 15ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ >> ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿಗಳು. ಶ್ರೀನಿವಾಸ ಶಾಸ್ತ್ರಿಗಳು ಘನ >> ವಿದ್ವಾಂಸರು, ಸಂಸ್ಕೃತ ಪಂಡಿತರು. ತಾಯಿ ವೆಂಕಚ್ಚಮ್ಮನವರು ಸದ್ಗೃಹಿಣಿ. >> ಗುಣ ಶ್ರೀಮಂತಿಕೆಯ ಕುಟುಂಬದಲ್ಲಿ ಜನಿಸಿದ ವಿಶ್ವೇಶ್ವರಯ್ಯನವರು ಬೆಳೆದದ್ದೆಲ್ಲಾ ಕಡು >> ಬಡತನದಲ್ಲಿ. ಬೀದಿ ದೀಪದ ಕೆಳಗೆ ಕುಳಿತು ತಮ್ಮ ಓದು ಮುಂದುವರಿಸಿದ ವಿಶ್ವೇಶ್ವರಯ್ಯನವರು, >> ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರೂ ವೆಸ್ಲಿಯನ್ ಹಾಗೂ ಸೆಂಟ್ರಲ್ >> ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಂದುವರಿಸಿದರು. ವಿದ್ಯಾಭ್ಯಾಸಕ್ಕಾಗಿ ಹಲವು ಮಕ್ಕಳಿಗೆ >> ಮನೆಪಾಠ ಹೇಳಿಕೊಟ್ಟು, ಶಿಕ್ಷಣದ ಜತೆಜತೆಗೇ ಸಂಪಾದನೆಯನ್ನೂ ಮಾಡಿದ ವಿಶ್ವೇಶ್ವರಯ್ಯನವರು >> ತಮ್ಮ ವಿದ್ಯಾಭ್ಯಾಸಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೂ ಛಲ ಬಿಡದ ತ್ರಿವಿಕ್ರಮರಂತೆ >> ಎಲ್ಲ ಕಷ್ಟಗಳನ್ನೂ ನುಂಗಿದ ಅವರು, 80ರಲ್ಲಿ ಪದವಿ ಗಳಿಸಿ, ಪುಣೆಯಲ್ಲಿ ಎಂಜಿನಿಯರಿಂಗ್ >> ಶಿಕ್ಷಣ ಪಡೆದು, ಮುಂಬಯಿ ಸರಕಾ-ರದಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆದರು. ಎಂಜಿನಿಯರ್ ಆದ >> ನಂತರ ಇವರ ಸಾಧನೆಗಳನ್ನು ಕಂಡು ನಿಬ್ಬೆರಗಾದ ಲಂಡನ್ ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ >> ಎಂಜಿನಿಯರ್ಸ್ ಸಂಸ್ಥೆ ಇವರಿಗೆ ಗೌರವ ಸದಸ್ಯತ್ವ ನೀಡಿ ತಮ್ಮ ಹಿರಿಮೆಯನ್ನು >> ಹೆಚ್ಚಿಸಿಕೊಂಡಿತು. ಇವರು ಆವಿಷ್ಕರಿಸಿದ ಸ್ವಯಂಚಾಲಿತ ಜಲ ನಿಯಂತ್ರಕ ಬಾಗಿಲು ವಿಶ್ವದ ಗಮನ >> ಸೆಳೆಯಿತು. >> ಏಡನ್ ನಗರಕ್ಕೆ ನೀರು ಪೂರೈಸುವ ಯೋಜನೆ ಸಿದ್ಧಪಡಿಸಿ ಯಶಸ್ವಿಯಾದ ವಿಶ್ವೇಶ್ವರಯ್ಯನವರು, >> ಹೈದರಾಬಾದ್ ನಗರ ಎದುರಿಸುತ್ತಿದ್ದ ಪ್ರವಾಹದ ಸಮಸ್ಯೆಗೆ ಪರಿಹಾರ ಒದಗಿಸಿದರು. ಹೈದರಾಬಾದ್ >> ಇಂದು ಸುಂದರ ನಗರ ಎನಿಸಿಕೊಳ್ಳಲು ಸರ್.ಎಂ.ವಿ. ನೀಡಿದ ಕಾಣಿಕೆ ಅನುಪಮವಾದದ್ದು. ಇಂತಹ >> ಪ್ರತಿಭಾವಂತ ಕನ್ನಡಿಗನಾಗಿದ್ದೂ ಅನ್ಯರ ನಾಡಿನಲ್ಲಿ ಇರುವುದು ಸೂಕ್ತವಲ್ಲ. ನಮ್ಮ ನಾಡಿನ >> ಪ್ರತಿಭೆಯ ಸದ್ಬಳಕೆ ನಮ್ಮಲ್ಲೇ ಆಗಬೇಕೆಂದು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ >> ಒಡೆಯರು ಸರ್.ಎಂ.ವಿಗೆ ತಾಯ್ನಾಡಿಗೆ ಮರಳುವಂತೆ ಆಹ್ವಾನಿಸಿದರು. >> ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್ ಆಗಿ ಸೇರಿದ ವಿಶ್ವೇಶ್ವರಯ್ಯನವರು, 1912ರಲ್ಲಿ >> ಮೈಸೂರಿನ ದಿವಾನರೇ ಆದರು. ತಮ್ಮ ಈ ಆಡಳಿತಾವಧಿಯಲ್ಲಿ ಭದ್ರಾವತಿ ಉಕ್ಕಿನ ಕಾರ್ಖಾನೆ, >> ಮೈಸೂರು ವಿ.ವಿ.ಯ ಸ್ಥಾಪನೆಗೆ ನೆರವಾದ ಸರ್‌ಎಂವಿ ಅವರು ಆರ್ಥಿಕ ಅಭಿವೃದ್ಧಿಗೂ ಕಾರಣವಾದರು. >> ಮೈಸೂರು ಬ್ಯಾಂಕ್, ಹಿಂದೂಸ್ತಾನ್ ಎರೋನಾಟಿಕ್ಸ್, ನ್ಯಾಯವಿಧಾಯಕ ಸಭೆ, ಪ್ರಜಾಪ್ರತಿನಿಧಿ >> ಸಭೆಗಳು ಸರ್‌ಎಂವಿ ಅವರ ಕಲ್ಪನೆಯ ಕೈಗೂಸುಗಳು. >> ಮೈಸೂರು ಮಾದರಿ ರಾಜ್ಯ ಎಂದು ಹೆಸರು ಗಳಿಸುವಲ್ಲಿ ವಿಶ್ವೇಶ್ವರಯ್ಯನವರ ಸಿಂಹಪಾಲಿದೆ. >> ಮೈಸೂರು ಸಂಸ್ಥಾನಕ್ಕೆ ವಿತ್ತ ಯೋಜನೆಯಾಂದನ್ನು ರೂಪಿಸಿ, ಕಾರ್ಯರೂಪಕ್ಕೆ ತಂದು ರಾಷ್ಟ್ರದ >> ಪ್ರಥಮ ಅರ್ಥಯೋಜಕರೆಂಬ ಖ್ಯಾತಿಯನ್ನೂ ವಿಶ್ವೇಶ್ವರಯ್ಯ ಅವರು ಪಡೆದರು. >> ಸುವರ್ಣಯುಗ : ರಾಜ್ಯದಲ್ಲಿ ಸಿಮೆಂಟ್ ಕಾರ್ಖಾನೆ, ಕಾಗದದ ಕಾರ್ಖಾನೆ, ಗಂಧದೆಣ್ಣೆಯ >> ಕಾರ್ಖಾನೆ, ಛೇಂಬರ್ ಆಫ್ ಕಾಮರ್ಸ್, ಸೋಪು ಮತ್ತು ಮಾರ್ಜಕಗಳ ಕಾರ್ಖಾನೆ, ಠಂಕಸಾಲೆ, >> ಶ್ರೀ ಜಯ-ಚಾಮ-ರಾ-ಜೇಂ-ದ್ರ ಪಾಲಿ ಟೆಕ್ನಿ-ಕ್, ಎಣ್ಣೆ ಗಿರಣಿಗಳೇ ಮುಂತಾದ ನೂರಾರು >> ಕಾರ್ಖಾನೆಗಳು ಮೈಸೂರು ಸಂಸ್ಥಾನದಲ್ಲಿ ತಲೆ ಎತ್ತಲು ವಿಶ್ವೇಶ್ವರಯ್ಯನವರೇ ಕಾರಣ. >> ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲವನ್ನು ಸುವರ್ಣಯುಗ ಎಂದೇ >> ಬಣ್ಣಿಸುತ್ತಾರೆ. ಕನ್ನ-ಡ ಸಾಹಿ-ತ್ಯ ಪರಿ-ಷ-ತ್ ಸ್ಥಾ-ಪ-ನೆ-ಯಾ-ದ-ದ್ದು ಇವ-ರ >> ಕಾಲ-ದ-ಲ್ಲೇ. >> ಕಟ್ಟಾ ಕನ್ನಡಾಭಿಮಾನಿಯಾಗಿದ್ದ ವಿಶ್ವೇಶ್ವರಯ್ಯನವರು 1913ರಲ್ಲೇ ಕನ್ನಡವನ್ನು ಆಡಳಿತ >> ಭಾಷೆ ಎಂದು ಘೋಷಿಸಿದ ಖ್ಯಾತಿಗೂ ಪಾತ್ರರಾದರು. ವಿಶ್ವೇಶ್ವರಯ್ಯನವರ ತಾಂತ್ರಿಕ ಕುಶಲತೆ, >> ಅವರ ಆಡಳಿತಾತ್ಮಕ ವಿಚಾರಧಾರೆ, ಆರ್ಥಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಎಲ್ಲವರನ್ನೂ >> ಪರಿಗಣಿಸಿದ ಸರಕಾರ ಅವರಿಗೆ ಸರ್. ಪುರಸ್ಕಾರ ನೀಡಿ ಗೌರವಿಸಿತು. 1962ರ ತನಕ ನೂರು ವರ್ಷಗಳ >> ತುಂಬು ಜೀವನ ನಡೆಸಿದ ಸರ್.ಎಂ.ವಿ. ವಿಶ್ವಕ್ಕೇ ಮಾರ್ಗದರ್ಶಕವಾದ ನೂರಾರು ಯೋಜನೆಗಳನ್ನು >> ನಾಡಿಗೆ ಕೊಟ್ಟಿದ್ದಾರೆ. >> ಸರ್.ಎಂ.ವಿ. ಹುಟ್ಟೂರಾದ ಮುದ್ದೇನಹಳ್ಳಿ ಆಗಲಿದೆ ಸ್ವಚ್ಛಗ್ರಾಮ >> ನಿರ್ಲಕ್ಷ್ಯಕ್ಕೊಳಗಾಗಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಸಮಾಧಿ >> >> -- >> 1. If a teacher wants to join STF, visit http://karnatakaeducation.org. >> in/KOER/en/index.php/Become_a_STF_groups_member >> 2. For STF training, visit KOER - http://karnatakaeducation.org. >> in/KOER/en/index.php >> 4. For Ubuntu 14.04 installation, visit http://karnatakaeducation.org. >> in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequentl >> y_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
