Good infrn On Sep 8, 2016 11:11 AM, "poornima niranjan" <[email protected]> wrote:
> Good information > On 08-Sep-2016 4:40 am, "HAREESHKUMAR K Agasanapura" < > [email protected]> wrote: > >> http://m.prajavani.net/article/2016_09_08/436415 >> >> ಪಂಚಗವ್ಯದಿಂದಲೂ ಬಂದೀತು ಬ್ರುಸೆಲ್ಲಾ ಪಂಚಕಂಟಕ >> >> 8 Sep, 2016 >> >> ನಾಗೇಶ್ ಹೆಗಡೆ >> >> ವಿಧಿ ಎಂದರೆ ಇದೇ ಇರಬೇಕು: ಗೋವುಗಳನ್ನು ಕೊಲ್ಲಕೂಡದೆಂದು ಏನೆಲ್ಲ ಒತ್ತಡದ ಪ್ರಚಾರ ನಡೆದ >> ಕರ್ನಾಟಕದಲ್ಲಿ ಬ್ರುಸೆಲ್ಲಾ ಎಂಬ ಸೂಕ್ಷ್ಮಜೀವಿಯೊಂದು ಗೋವುಗಳನ್ನು ಬಾಧಿಸತೊಡಗಿದೆ. ಅಂಥ >> ರೋಗಪೀಡಿತ ಗೋವುಗಳನ್ನು ಪತ್ತೆ ಮಾಡಿ ಹತ್ಯೆ ಮಾಡಿ ಹೂಳಲೇಬೇಕಾದ ಅಪ್ರಿಯ ಸನ್ನಿವೇಶ >> ಸರ್ಕಾರಕ್ಕೆ ಎದುರಾಗಿದೆ. >> >> ಶಾಸಕ ವರ್ತೂರು ಪ್ರಕಾಶ್ ಅವರ ಡೇರಿಯಲ್ಲಿನ 58 ಹಸುಗಳಿಗೆ ಬ್ರುಸೆಲ್ಲೊಸಿಸ್ ರೋಗ >> ಬಂದಿರುವುದರಿಂದ ಆ ಎಲ್ಲವನ್ನೂ ಕೊಲ್ಲಬೇಕೆಂದು ಪಶುಸಂಗೋಪನ ಇಲಾಖೆ ತೀರ್ಮಾನಿಸಿದೆ. >> ವಿಜ್ಞಾನ, ಧಾರ್ಮಿಕ ನಂಬಿಕೆ, ಪ್ರಾಣಿದಯೆ, ಲಾಭನಷ್ಟ, ವೈದ್ಯಕೀಯ, ರಾಜಕೀಯ ಎಲ್ಲವೂ >> ಒಂದರೊಳಗೊಂದು ತಳಕು ಹಾಕಿಕೊಂಡು ಗೋಜಲು ಸೃಷ್ಟಿಯಾಗಿದೆ. >> >> ಬ್ರುಸೆಲ್ಲಾ ಎಂಬುದು ಅತಿಸೂಕ್ಷ್ಮ ಕಡ್ಡಿಯಂಥ ಏಕಾಣುಜೀವಿ. ಹಸುವಿಗೆ ಅದರ ಸೋಂಕು >> ತಗುಲಿತೆಂದರೆ ಅದಕ್ಕೆ ಔಷಧವಿಲ್ಲ. ಹಸು ಸಾಯುವುದಿಲ್ಲ ನಿಜ. ಅದಕ್ಕೆ ಗರ್ಭ >> ನಿಲ್ಲುವುದಿಲ್ಲ, ಆರೇಳನೆ ತಿಂಗಳಿಗೆ ಅಬಾರ್ಶನ್ ಆಗುತ್ತದೆ. ಎರಡನೆಯ ಬಾರಿ ಗರ್ಭ ಕಟ್ಟಿದರೆ >> ಅದೂ ಬಿದ್ದುಹೋಗಬಹುದು. >> >> ಮೂರನೆಯ ಬಾರಿ ಗರ್ಭ ನಿಲ್ಲುತ್ತದೆ. ಆದರೆ ತಾಯಿ ಹಸುವಿನ ಹಾಲಿನಲ್ಲಿ ರೋಗಾಣು ಇರುತ್ತದೆ. >> ಅಂಥ ಹಾಲನ್ನು ಕಾಯಿಸದೇ ಸೇವಿಸಿದರೆ ಕೆಲವರಿಗೆ ಬ್ರುಸೆಲ್ಲೊ ಸಿಸ್ ರೋಗ ಬರಬಹುದು. >> ಗೋಮಾಂಸವನ್ನು ಅರೆಬರೆ ಬೇಯಿಸಿ ತಿಂದರೂ ರೋಗ ಬಂದೀತು. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ >> ರೋಗ ಬರಲಿಕ್ಕಿಲ್ಲ. ಬಂದರೆ ಮಾತ್ರ ಮಹಾ ಕಿರಿಕಿರಿ. >> >> ಮನುಷ್ಯರಿಗೆ ಬ್ರುಸೆಲ್ಲೊಸಿಸ್ ರೋಗ ಬಂದರೆ ಸಾವು ಬರುವುದಿಲ್ಲ. ಆದರೆ ಬಿಟ್ಟು ಬಿಟ್ಟು >> ಜ್ವರ ಬರುತ್ತದೆ. ಮೈಕೈ ಸ್ನಾಯುಗಳಲ್ಲಿ ವಿಪರೀತ ನೋವು ಇರುತ್ತದೆ. ಜ್ವರ 102-103 >> ಡಿಗ್ರಿಗೂ ಏರಿ, ಸನ್ನಿ ಅಥವಾ ಭಾವೋನ್ಮಾದವೂ ಆಗಿ ಜ್ವರ ಇಳಿಯುತ್ತದೆ. ತೀರಾ ತೀರಾ >> ಅಪರೂಪಕ್ಕೆ ಸಾವು ಬಂದೀತು. ಪದೇ ಪದೇ ಹಾಗೆ ಜ್ವರ ಬಾರದಂತೆ ಔಷಧ ಇದೆ; ಆದರೆ ಐದಾರು >> ತಿಂಗಳುಗಳ ಕಾಲ ಮಾತ್ರೆ ಸೇವಿಸಬೇಕು. ಅದಕ್ಕಿಂತ ದೊಡ್ಡ ಫಜೀತಿ ಏನೆಂದರೆ ಜ್ವರಪೀಡಿತ ಗಂಡಸರ >> ವೃಷಣದಲ್ಲಿ ಭಾರೀ ಹಿಂಸೆಯಾಗುತ್ತದೆ. ಹೇಳುವಂತಿಲ್ಲ, ಬಿಡುವಂತಿಲ್ಲ. ಕ್ರಮೇಣ ಕೆಲವರಿಗೆ >> ಷಂಡತನ ಬರುತ್ತದೆ. ರೋಗಾಣುಭರಿತ ಹಸಿ ಹಾಲನ್ನು ಸೇವಿಸಿದ ಹೆಂಗಸರಲ್ಲೂ ಕೆಲವರು >> ಬಂಜೆಯಾಗುತ್ತಾರೆ. >> >> ಬ್ರುಸೆಲ್ಲಾ ರೋಗಾಣು ಭಾರೀ ಸಾಂಸರ್ಗಿಕವಂತೂ ಹೌದು. ಅಂದರೆ ಅದರ ಸೆಗಣಿ, ಗಂಜಳ, ಅದು >> ತಿಂದು ಬಿಟ್ಟ ಮೇವು, ಅದರ ಮೈತೊಳೆದ ನೀರು ಎಲ್ಲವನ್ನೂ ಪ್ರತ್ಯೇಕ ಇಡದಿದ್ದರೆ ಅಕ್ಕಪಕ್ಕದ >> ಇತರ ಹಸು, ಎಮ್ಮೆ, ಹೋರಿ ಎಲ್ಲವಕ್ಕೂ ರೋಗ ಬರುತ್ತದೆ. ಡೇರಿಯಲ್ಲಿ ಒಂದಕ್ಕೆ >> ಬ್ರುಸೆಲ್ಲೊಸಿಸ್ ಬಂದರೆ ಅದರ ಲಕ್ಷಣಗಳು ಗೊತ್ತಾಗುವ ಮೊದಲೇ ಇತರ ಹಸುಗಳೆಲ್ಲ ರೋಗಗ್ರಸ್ತ >> ಆಗಬಹುದು. ಗೊತ್ತಾದರೂ ಏನೂ ಮಾಡುವಂತಿಲ್ಲ. >> >> ಈ ಕಾಯಿಲೆಗೆ ಔಷಧಿ ಇಲ್ಲ. ಕರುಗಳಿಗೆ ರೋಗ ತಗುಲದ ಹಾಗೆ ಲಸಿಕೆ ಹಾಕಿಸಬಹುದು. ಆದರೆ >> ಲಸಿಕೆ ಹಾಕಿಸುವ ಮೊದಲೇ ರೋಗಾಣುಗಳು ಅದರ ದೇಹದಲ್ಲಿದ್ದರೆ ಏನೂ ಮಾಡುವಂತಿಲ್ಲ. ಆ ರೋಗ >> ಬೇರೆಡೆ ಹರಡದ ಹಾಗೆ ದಯಾಮರಣ ಕೊಡಿಸಬಹುದು. >> >> ಚುಚ್ಚುಮದ್ದು ಕೊಟ್ಟು ಸಾಯಿಸಿದರೂ ದನದ ಕಳೇವರವನ್ನು ಸುಟ್ಟು ಹುಷಾರಾಗಿ ದಫನ ಮಾಡಬೇಕು. >> ಅದರ ಮಾಂಸ, ಕೊಂಬು, ಗೊರಸು, ಚರ್ಮ ಯಾವುದೂ ಯಾವುದೇ ದನದ ಸಂಪರ್ಕಕ್ಕೆ ಬರದಂತೆ ಆಳವಾಗಿ >> ಹೂಳಬೇಕು. ಸತ್ತ ದನವನ್ನು ಗುಂಡಿಗೆ ಹಾಕಿದ ಜೆಸಿಬಿಯನ್ನೂ ಚೊಕ್ಕಟ ತೊಳೆಯಬೇಕು. ನಂತರ >> ಕೊಟ್ಟಿಗೆಯನ್ನು ಸಂಪೂರ್ಣ ಶುದ್ಧಗೊಳಿಸಬೇಕು. ಅಲ್ಲಿನ ಇತರ ಹಸು ಅಥವಾ ಹೋರಿಗಳನ್ನು >> ಪ್ರತ್ಯೇಕವಾಗಿ ಇಟ್ಟು ಅವುಗಳ ರಕ್ತ ಪರೀಕ್ಷೆ ಮಾಡಿ... ರಗಳೆ ಒಂದೆರಡಲ್ಲ. ಹಳ್ಳಿಯವರು >> ‘ಕಂದ್‌ರೋಗ’ ಬಂದ ಅಂಥ ಹಸುಗಳನ್ನು ಉಪಾಯವಾಗಿ ಬೇರೆಯವರಿಗೆ ಮಾರಿ ಕೈತೊಳೆದುಕೊಳ್ಳುತ್ತಾರೆ. >> >> ವರ್ತೂರು ಪ್ರಕಾಶರ ಹಸುಗಳನ್ನು ಸಾಯಿಸಬೇಕೆ ಬೇಡವೆ? ಇಲ್ಲಿ ಹಣಾಹಣಿ ಶುರುವಾಗುತ್ತದೆ. >> ನೀವು ಗೋವಿನ ಪಕ್ಷದವರಾಗಿದ್ದರೆ ‘ಖಂಡಿತ ಸಾಯಿಸಕೂಡದು’ ಎಂದು ವಾದಿಸುತ್ತೀರಿ. ‘ಇದು ಹೊಸ >> ಕಾಯಿಲೆ ಏನಲ್ಲ. ಹಿಂದಿನಿಂದಲೂ ನಮ್ಮಲ್ಲಿದೆ; ನಮ್ಮ ರಾಜ್ಯದ ಶೇಕಡ 30ರಷ್ಟು ಹಸುಗಳಲ್ಲಿ ಈ >> ರೋಗಾಣು ಇದೆ. ನಾವೆಲ್ಲ ಅದಕ್ಕೆ ಒಗ್ಗಿಕೊಂಡಿದ್ದೇವೆ’ ಎನ್ನುತ್ತಾರೆ, ಸಾಗರದಲ್ಲಿ >> ಪಶುಸಂಗೋಪನೆ ಮಾಡುತ್ತಿರುವ ಕೃಷಿ ವಿಜ್ಞಾನಿ ಎ.ಎಸ್.ಆನಂದ. >> >> ಇವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾವಯವ ಕೃಷಿ ಮಿಶನ್‌ನ ಮುಖ್ಯಸ್ಥರೂ >> ಆಗಿದ್ದವರು. ‘ನಾವು ಪಂಚಾಮೃತ, ಪಂಚಗವ್ಯಕ್ಕೆ ಹಸೀ ಹಾಲನ್ನೇ ಹಾಕಿ ದೇವರಿಗೆ ನೈವೇದ್ಯ ಮಾಡಿ >> ಅದನ್ನು ಸ್ವೀಕರಿಸುತ್ತೇವೆ- ನಮಗೆ ಏನೂ ಆಗಿಲ್ಲ’ ಎನ್ನುತ್ತಾರೆ. >> >> ಅಷ್ಟೇಅಲ್ಲ ‘ನಾನು ಮಹಾರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶದ ಅದೆಷ್ಟೊ ಅಲೆಮಾರಿ >> ಗೋವಳರನ್ನು ಸಮೀಪದಿಂದ ನೋಡಿದ್ದೇನೆ. ಹಾಲು ಮಾರಿ ಜೀವಿಸುವ ಅವರು ಕ್ಯಾಂಪ್ ಹಾಕಿದಲ್ಲೆಲ್ಲ >> ದಿನವೂ ಸೆಜ್ಜೆರೊಟ್ಟಿ, ಹಸಿ ಹಾಲನ್ನೇ ಸೇವಿಸುತ್ತಾರೆ. ನಾಲ್ಕಾರು ಮಕ್ಕಳಿಗೂ ಜನ್ಮ >> ನೀಡುತ್ತಾರೆ. ಭಾರತೀಯರ ರೋಗ ನಿರೋಧಕ ಶಕ್ತಿ ಚೆನ್ನಾಗಿಯೇ ಇದೆ’ ಎನ್ನುತ್ತಾರೆ ಆನಂದ. >> >> ರೋಗಿಷ್ಠ ಹಸುಗಳನ್ನು ಸಾಕಿಟ್ಟುಕೊಳ್ಳಬೇಕೆ, ಕೊಲ್ಲಬೇಕೆ? ಪಶುವೈದ್ಯರು ಖಚಿತ ಏನನ್ನೂ >> ಹೇಳಲು ಹಿಂದೇಟು ಹಾಕುತ್ತಾರೆ. ‘ಹಿಂದೆಯೂ ಹೆಸರುಘಟ್ಟದ ಡೇರಿ ಫಾರ್ಮ್‌ನಲ್ಲಿ ಅಂಥ >> ಹಸುಗಳಿಗೆ ದಯಾಮರಣ ಕೊಟ್ಟಿದ್ದುಂಟು’ ಎನ್ನುತ್ತಾರೆ ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆಯ >> ಮುಖ್ಯಸ್ಥ ಡಾ. ಕೆ.ಪಿ.ರಮೇಶ್. ‘ನಮ್ಮ ದೇಶದ ಕೆಲವರಲ್ಲಿ ಬ್ರುಸೆಲ್ಲೊಸಿಸ್ ರೋಗ ನಿರೋಧಕ >> ಶಕ್ತಿ ಇರಲೂಬಹುದು. >> >> ಆಗಾಗ ಒಂದರ್ಧ ಚಮಚ ಪಂಚಗವ್ಯ ಸೇವನೆ ಮಾಡಿದ್ದರಿಂದಲೇ ರೋಗ ನಿರೋಧಕ ಶಕ್ತಿ >> ಬಂದಿರಲೂಬಹುದು. ಭಾರತದ ಅಪ್ಪಟ ನಾಟಿ ದನಗಳಿಗೆ ಬ್ರುಸೆಲ್ಲೊಸಿಸ್ ರೋಗ ಬರುವುದಿಲ್ಲ. ಆದರೆ >> ಈಗೀಗ ಎಲ್ಲೆಲ್ಲೂ ಸಂಕರ ತಳಿಗಳೇ ಕಾಣುತ್ತವೆ. ಗಿರ್ ಹಸುಗಳಲ್ಲೂ ಈ ಕಾಯಿಲೆ ಪತ್ತೆಯಾಗಿದೆ. >> >> ಕಟ್ಟುನಿಟ್ಟಾಗಿ ಡೇರಿಗಳನ್ನು ಚೊಕ್ಕಟ ಇಟ್ಟುಕೊಳ್ಳಲೇಬೇಕು. ರೋಗಗ್ರಸ್ತ ಹಸುಗಳನ್ನು >> ಪ್ರತ್ಯೇಕಿಸಲೇಬೇಕು. ಕೃತಕ ಗರ್ಭಾಧಾನ ಮಾಡಿಸಿದ ಮೇಲೂ ಹೋರಿಗಳನ್ನು ಹಾಯಿಸುವ ಪದ್ಧತಿ >> ಕೆಲವೆಡೆ ಇದೆ. ರೋಗಿಷ್ಠ ಹೋರಿಗಳನ್ನು ಗುರುತಿಸಿ ಬೀಜ ತೆಗೆಸುವ ಕ್ರಮ ವ್ಯಾಪಕವಾಗಿ >> ಆಗಬೇಕು’ ಎಂದು ಅವರು ಹೇಳುತ್ತಾರೆ. >> >> ಬ್ರುಸೆಲ್ಲೊಸಿಸ್ ರೋಗದ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ, ಅದರಲ್ಲೇ ಡಾಕ್ಟರೇಟ್ ಪಡೆದು >> ಹೆಬ್ಬಾಳದ ವೆಟರಿನರಿ ಕಾಲೇಜಿನ ಸಹಪ್ರಾಧ್ಯಾಪಕರಾಗಿರುವ ಡಾ. ಶ್ರೀಕೃಷ್ಣ ಇಸಳೂರ್ ಕೂಡ >> ಕಟ್ಟುನಿಟ್ಟಿನ ಶುಚಿತ್ವದ ಬಗ್ಗೆ ಒತ್ತಿ ಹೇಳುತ್ತಾರೆ. ಕೆಲವರ ಹೊಣೆಗೇಡಿತನದಿಂದ ಡೇರಿ >> ಉದ್ಯಮಿಗಳಿಗೂ ಸಾಕಷ್ಟು ನಷ್ಟವಾಗುತ್ತಿದೆ, ಡೇರಿ ಹಾಲಿನ ವಿಶ್ವಾಸಾರ್ಹತೆ ಕೂಡ >> ಬಳಕೆದಾರರಲ್ಲಿ ಕಡಿಮೆಯಾಗುತ್ತದೆ; ಪಶುವೈದ್ಯರಿಗೂ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ. >> >> ಶಿರಸಿಯ ಸರ್ಕಾರಿ ಪಶುವೈದ್ಯ ಡಾ. ಗಣೇಶ ನೀಲೇಸರ ಸ್ವತಃ ಬ್ರುಸೆಲ್ಲೊಸಿಸ್ ಕಾಯಿಲೆಗೆ >> ಸಿಕ್ಕು ಅನೇಕ ಬಾರಿ ನರಳಿದವರು. ಜ್ವರ ತಾರಕಕ್ಕೇರಿ ವಿಭ್ರಮೆಯುಂಟಾದಾಗಿನ ತಮ್ಮ >> ಅನುಭವವನ್ನು ತುಂಬ ಸ್ವಾರಸ್ಯಕರವಾಗಿ ಅವರು ‘ಡೇರಿ ಡಾಕ್ಟರ್, ಹೋರಿ ಮಾಸ್ಟರ್’ >> ಪುಸ್ತಕದಲ್ಲಿ ಬರೆದಿದ್ದಾರೆ. >> >> ಹಸುಗಳು ಸಾಲುಸಾಲಾಗಿ ಈ ಕಾಯಿಲೆಗೆ ಸಿಕ್ಕು ಒಂದರ ಮೇಲೊಂದು ಗರ್ಭಸ್ರಾವವಾಗಿ ಇಡೀ ಡೇರಿ >> ಫಾರ್ಮ್ ದಿವಾಳಿ ಆಗಿರುವ ಉದಾಹರಣೆಯೂ ಅವರ ಕಥನದಲ್ಲಿದೆ. ಅದಕ್ಕೆ ‘ಗರ್ಭಸ್ರಾವದ ಬಿರುಗಾಳಿ’ >> (ಸ್ಟಾರ್ಮ್ ಆಫ್ ಅಬಾರ್ಶನ್) ಎಂಬ ಗುಣವಾಚಕವೇ ಇದೆಯಂತೆ. ಅದು ಹಾಗಿರಲಿ, ‘ಪಂಚಗವ್ಯ ಸೇವನೆ >> ಮಾಡಿ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ನರಳಿದ ವೈದಿಕರೂ ನನಗೆ ಗೊತ್ತು’ ಎಂದು ಅವರು >> ಹೇಳುತ್ತಾರೆ. >> >> ಅದಿರಲಿ, ಈ ರೋಗಾಣುವಿನ ಸೋಂಕು ಒಂದು ಡೇರಿಯಿಂದ ಇನ್ನೊಂದು ಡೇರಿಗೆ ಹೇಗೆ ಹರಡುತ್ತದೆ? >> ‘ಪಶು ಸಂಗೋಪನ ಇಲಾಖೆಯೇ ರೋಗಕ್ಕೆ ಮೂಲ!’ ಎನ್ನುತ್ತಾರೆ, ಡೇರಿ ಉದ್ಯಮಿ ತಾರಕೇಶ್. ಅನೇಕ >> ದೇಶಗಳಲ್ಲಿ ಉದ್ಯೋಗದಲ್ಲಿದ್ದ ಇವರು ಎಲ್ಲವನ್ನೂ ಬಿಟ್ಟು ಬಿಡದಿಗೆ ಬಂದು ಡೇರಿಗೆ ಹಣ ಹೂಡಿ >> ಇಲ್ಲಿನ ಅವ್ಯವಸ್ಥೆಗಳಿಂದ ಸಾಕಷ್ಟು ನೊಂದವರು. >> >> ಅವರ ಪ್ರಕಾರ, ಕೃತಕ ಗರ್ಭಧಾರಣೆಗೆ ಬರುವವರ ಬೇಜವಾಬ್ದಾರಿಯೇ ರೋಗ ಪ್ರಸರಣಕ್ಕೆ ಮುಖ್ಯ >> ಕಾರಣವಾಗಿದೆ. ಹೋರಿಗಳ ವೀರ್ಯಾಣುಗಳನ್ನು ಶೂನ್ಯ ತಾಪಮಾನದ ದ್ರವಸಾರಜನಕದ ಡಬ್ಬಿಯಲ್ಲಿ >> ತರಬೇಕು. ಆದರೆ ಈ ಇನ್‌ಸೆಮಿನೇಟರ್‌ಗಳು ವೀರ್ಯಾಣು ಕೊಳವೆಯನ್ನು ಕಿಸೆಯಲ್ಲಿಟ್ಟುಕೊಂಡು >> ಬರುತ್ತಾರೆ. >> >> ಕೈಗವಚ ಕೂಡ ಹಾಕದೇ ನೇರವಾಗಿ ಹಸುಗಳ ಗರ್ಭದ ಚೀಲಕ್ಕೆ ಕೈ ಹಾಕುತ್ತಾರೆ. ನಂತರ ಹೇಗೆ ಹೇಗೋ >> ಕೈತೊಳೆದು ಅವಸರದಲ್ಲಿ ಇನ್ನೊಂದು ಡೇರಿಗೆ ಓಡುತ್ತಾರೆ. ನಿಜವಾದ ಅರ್ಹತೆ ಇರುವ ಪಶು >> ವೈದ್ಯರು ಹಳ್ಳಿ ಕಡೆ ಬರೋದಿಲ್ಲ. ಅವರು ನಗರದ ನಾಯಿಗಳಿಗೊ, ಕುದುರೆಗಳಿಗೊ, ಕೋಳಿಸಾಕಣೆ >> ಉದ್ಯಮಿಗಳಿಗೊ ಸಲಹಾಕಾರರಾಗಿರುತ್ತಾರೆ. >> >> ‘ಈಗಂತೂ ಶುಚಿತ್ವದ ಎಬಿಸಿಡಿ ಗೊತ್ತಿಲ್ಲದವರೂ ಡೇರಿ ನಡೆಸುತ್ತಾರೆ. ಅದಕ್ಕೇ ನೂರಾರು >> ಡೇರಿಗಳಲ್ಲಿ ಬ್ರುಸೆಲ್ಲಾ ರೋಗಾಣುವಿನ ಹಾವಳಿ ಇದೆ ಕಣ್ರೀ! ಕೆಎಮ್‌ಎಫ್‌ಗೇ ರೋಗ >> ತಗುಲಿರುವಾಗ ಹಳ್ಳಿ ಡೇರಿಗಳು ಹೆಂಗೆ ಚೊಕ್ಕಟ ಇರ್‌ತಾವ್ರೀ?’ ಎಂದು ಅವರು >> ಪ್ರಶ್ನಿಸುತ್ತಾರೆ. >> >> ಈ ಕಾಯಿಲೆ ಪಸರಿಸದ ಹಾಗೆ ಸರ್ಕಾರಿ ಸಿಬ್ಬಂದಿ ಡೇರಿಗಳಿಗೆ ಹೋಗಿ ಹಾಲಿನ ಮತ್ತು ಹಸುವಿನ >> ರಕ್ತದ ಸ್ಯಾಂಪಲ್‌ಗಳನ್ನು ಕಲೆಹಾಕಿ ಪರೀಕ್ಷಿಸಿ ಪ್ರತಿ ತಿಂಗಳೂ ವರದಿ ನೀಡಬೇಕೆಂಬ >> ನಿಯಮವೇನೊ ಇದೆ. ರಾಜ್ಯದ ಸುಮಾರು ಹದಿನೆಂಟು ಕಡೆ ಬ್ರುಸೆಲ್ಲಾ ರೋಗಾಣುವಿನ ಪರೀಕ್ಷೆ ಕೂಡ >> ನಿಯಮಿತವಾಗಿ ನಡೆಯುತ್ತಿದೆ. >> >> ಪರೀಕ್ಷೆಯ ಫಲಿತಾಂಶಗಳೇನೊ ಸರ್ಕಾರದ ಕಡತಗಳಲ್ಲಿ ನಿಯಮಬದ್ಧವಾಗಿ ಸೇರ್ಪಡೆ >> ಆಗುತ್ತಿರುತ್ತದೆ. ಅದರಿಂದ ಏನು ಪ್ರಯೋಜನ? ಹೆಚ್ಚೆಂದರೆ ಕಡತಯಜ್ಞ ಆದೀತೇ ವಿನಾ ಕೆನಡಾ, >> ಅಮೆರಿಕ, ಯುರೋಪ್‌ನಲ್ಲಿ ಆಗಾಗ ಆಗುವಂತೆ ರೋಗಿಷ್ಠ ಹಸುಗಳ ಗೋಯಜ್ಞವಂತೂ ಇಲ್ಲಿ >> ಆಗುತ್ತಿಲ್ಲ. ಅವೆಲ್ಲ ಹೋಗಲಿ, ವರ್ತೂರು ಪ್ರಕಾಶ್‌ಗೆ ರೋಗಗ್ರಸ್ತ ಹಸುಗಳು ಶರದ್ ಪವಾರ್ >> ಅವರ ಬಾರಾಮತಿ ಡೇರಿಯಿಂದ ಬಂದಿದ್ದೇ ನಿಜವಾದರೆ, ಆ ಮಾಜಿ ಕೃಷಿ ಸಚಿವರ ಗೋಶಾಲೆಯೇ ರೋಗಶಾಲೆ >> ಎಂದಾಯಿತಲ್ಲ? >> >> ಗೋವುಗಳನ್ನು ಮಾತೆ ಎಂದು ಕರೆದು ಮನೆಯಲ್ಲಿ ಒಂದೆರಡು ನಾಟಿ ಹಸುಗಳನ್ನು ಪ್ರೀತಿಯಿಂದ >> ಸಾಕಿಕೊಳ್ಳುವ ಪುಣ್ಯಾತ್ಮರ ದೃಷ್ಟಿಯಲ್ಲಿ ಗೋವಧೆ ಕೂಡದು, ಒಪ್ಪೋಣ. ಜೀವನೋಪಾಯಕ್ಕಾಗಿ >> ಒಂದೆರಡು ಹಸು ಇಟ್ಟುಕೊಂಡು ವಿಮೆ ಕಂತನ್ನೂ ಕಟ್ಟಲಾಗದ ಬಡಪಾಯಿ ಗ್ರಾಮೀಣ ಗೌರಮ್ಮನಿಗೆ >> ಪರಿಹಾರ ನೀಡದೆ ರೋಗಿಷ್ಠ ಹಸುವನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ಸಾಗಿಸಬಾರದು. >> >> ಅವಳ ಮೇಲೆ ಕರುಣೆ ಇರಬೇಕು ಅದೂ ನಿಜ. ಆದರೆ ವಿದೇಶೀ ಅಥವಾ ಮಿಶ್ರತಳಿಗಳನ್ನು ತಂದು >> ಮೂಗುದಾಣ ಹಾಕಿ, ಕರುಗಳ ಮೈನೆಕ್ಕಲೂ ಅವಕಾಶ ಕೊಡದೆ ಸಾಲುಯಂತ್ರದಂತೆ ಅವನ್ನು ನೋಡಿಕೊಳ್ಳುವ >> ಡೇರಿ ಉದ್ಯಮಿಗಳು ದಯೆ, ಕರುಣೆಯ ಮಾತಾಡುವುದಿಲ್ಲ. >> >> ಸರ್ಕಾರದ ಅಥವಾ ಕೆಎಮ್‌ಎಫ್‌ನ ಅವ್ಯವಸ್ಥೆಯಿಂದಾಗಿಯೇ ರೋಗ ಹಬ್ಬುತ್ತಿದ್ದರೆ, ಹಸುಗಳಿಗೆ >> ವಿಮೆ ಚುಕ್ತಾ ಮಾಡಿ ಸರ್ಕಾರದವರೇ ಅವುಗಳನ್ನು ಎಲ್ಲಾದರೂ ದೂರ ಸಾಗಿಸಿ ಏನಾದರೂ >> ಮಾಡಿಕೊಳ್ಳಲಿ ಎಂದು ಡೇರಿ ಮಾಲೀಕರು ಹೇಳುತ್ತಾರೆ. >> >> ಗೋಯಜ್ಞ ಮಾಡಲು ಸರ್ಕಾರಕ್ಕೆ ಧೈರ್ಯ ಇಲ್ಲದಿದ್ದರೆ ಅವನ್ನೆಲ್ಲ ಲಿಂಗನಮಕ್ಕಿ ಇಲ್ಲವೆ >> ಕಾಳಿ ಜಲಾಶಯದ ನಡುವಣ ಯಾವುದೋ ದ್ವೀಪದಲ್ಲಿ ಸಾಕಬಹುದು. ಹಾಲಿನ ಬಳಕೆದಾರರ ವಿಶ್ವಾಸವನ್ನೂ >> ಕಾಪಾಡಬಹುದು. >> >> ಹಸುವಿನ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆಂದು ಹಿಂದೂಗಳು ನಂಬುತ್ತಾರೆ. >> ಅದಕ್ಕೇನೂ ಸಾಕ್ಷ್ಯ ಸಿಕ್ಕಿಲ್ಲ. ಆದರೆ ರೋಗಗ್ರಸ್ತ ಹಸುವಿನ ಗರ್ಭದ ಚೀಲದಲ್ಲಿ ಕೈ ತೂರಿಸುವ >> ಪಶುವೈದ್ಯರ ಕೈಗವಸಿಗೆ ಮುಕ್ಕೋಟಿ ರೋಗಾಣುಗಳು ಅಂಟಿಕೊಳ್ಳುವುದಂತೂ ನಿಜ. >> ಸೂಕ್ಷ್ಮದರ್ಶಕಗಳಲ್ಲಿ ಅವು ಪ್ರತ್ಯಕ್ಷ ಕಾಣುತ್ತವೆ. >> >> Hareeshkumar K >> GHS HUSKURU >> MALAVALLI TQ >> MANDYA DT >> MOB 9880328224 >> >> -- >> 1. If a teacher wants to join STF, visit http://karnatakaeducation.org. >> in/KOER/en/index.php/Become_a_STF_groups_member >> 2. For STF training, visit KOER - http://karnatakaeducation.org. >> in/KOER/en/index.php >> 4. For Ubuntu 14.04 installation, visit http://karnatakaeducation.org. >> in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequentl >> y_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
