super article

2016-10-06 7:33 GMT+05:30 Chakra Pani <[email protected]>:

>                                         ಅದೇ ವಿದಿಲಿಕಿತ ವಾಗಿದ್ದರೆ ಅದನ್ನು
> ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ , ಇದು ಬಸ್ಮಾಸುರನ ನೃತ್ಯ ವನ್ನು ನೆನಪಿಸುವಂತಿದೆ,
> ಹಸಿದ ಕೈಗಳಿಕೆ ಅನ್ನವನ್ನು ನೀಡುವ ಬದಲು ಬಂದೂಕು ನೀಡುವ ಪಾಕಿಸ್ತಾನದಂತ ಪಾಪಿ ರಾಷ್ಟ್ರಗಳು
> ಇರುವ ವರೆಗೂ ವಿಶ್ವಕ್ಕೆ ನೆಮ್ಮದಿಯಿಲ್ಲ .  ಇರಾಕ್ ಅಮೆರಿಕಾವನ್ನು ದ್ವೇಷಿಸಿದರೆ
> ಅದಕ್ಕೊಂದು ಅರ್ಥವಿದೆ . ಆದರೆ ಪಾಕಿಸ್ತಾನ ಭಾರತವನ್ನು ದ್ವೇಷಿಸುವುದು ಅರ್ಥ ಹೀನ,
> ಅಷ್ಟಕ್ಕೂ ಭಾರತ ಪಾಕಿಸ್ತಾನಕ್ಕೆ ಮಾಡಿದ ದ್ರೋಹವಾದರೂ ಏನು?. ತಮ್ಮ ದೇಶದಲ್ಲಿ  ಅಭಿವೃದ್ದಿ
> ಆಡಳಿತ ಸಾಧ್ಯವಿಲವೆಂದು ತಿಳಿದೇ ಅಲ್ಲಿನ ರಾಜಕಾರಣಿಗಳು ಜನರನ್ನು ಮತ್ತು ಮೂಲಭೂತ
> ವಾಧಿಗಳನ್ನು ಭಾರತದ ವಿರುದ್ದ ಎತ್ತಿ ಕಟ್ಟುತ್ತಾರೆ .     ಓ ದೇವರೇ ಇವರಿಗೆ ಸನ್ಮಾರ್ಗ
> ತೋರಿಸು!
>
> 2016-10-06 7:05 GMT+05:30 HAREESHKUMAR K Agasanapura <
> [email protected]>:
>
>> http://m.prajavani.net/article/2016_10_06/443141
>>
>> *ಉಡಿಯ ಕಿಡಿ ಸಿಡಿದರೆ ಅರ್ಧ ಜಗವೇ ನಾಶ*
>>
>> 6 Oct, 2016
>>
>> ನಾಗೇಶ್ ಹೆಗಡೆ
>>
>>
>> <https://www.facebook.com/sharer/sharer.php?u=https%3A%2F%2Fgoo.gl%2FXlyyeD>
>> <https://twitter.com/intent/tweet?text=%E0%B2%89%E0%B2%A1%E0%B2%BF%E0%B2%AF+%E0%B2%95%E0%B2%BF%E0%B2%A1%E0%B2%BF+%E0%B2%B8%E0%B2%BF%E0%B2%A1%E0%B2%BF%E0%B2%A6%E0%B2%B0%E0%B3%86+%E0%B2%85%E0%B2%B0%E0%B3%8D%E0%B2%A7+%E0%B2%9C%E0%B2%97%E0%B2%B5%E0%B3%87+%E0%B2%A8%E0%B2%BE%E0%B2%B6++https%3A%2F%2Fgoo.gl%2FXlyyeD>
>> <https://plus.google.com/share?url=https%3A%2F%2Fgoo.gl%2FXlyyeD>
>> <http://www.pinterest.com/pin/find/?url=https%3A%2F%2Fgoo.gl%2FXlyyeD>
>> <http://www.linkedin.com/shareArticle?mini=true&title=%E0%B2%89%E0%B2%A1%E0%B2%BF%E0%B2%AF+%E0%B2%95%E0%B2%BF%E0%B2%A1%E0%B2%BF+%E0%B2%B8%E0%B2%BF%E0%B2%A1%E0%B2%BF%E0%B2%A6%E0%B2%B0%E0%B3%86+%E0%B2%85%E0%B2%B0%E0%B3%8D%E0%B2%A7+%E0%B2%9C%E0%B2%97%E0%B2%B5%E0%B3%87+%E0%B2%A8%E0%B2%BE%E0%B2%B6++&url=https%3A%2F%2Fgoo.gl%2FXlyyeD>
>>
>> ಚರಿತ್ರೆಯಲ್ಲಿ ತೀರ ಅಪರೂಪಕ್ಕೆ ಹೀಗಾಗುತ್ತದೆ: ನೀರಿನ ವಿಷಯದಲ್ಲಿ ಕರ್ನಾಟಕ ಮತ್ತು
>> ಭಾರತ ಒಂದೇ ಬಗೆಯ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ನಮಗೆ ಇಲ್ಲಿ ಕಾವೇರಿ ಇದ್ದ ಹಾಗೆ,
>> ಭಾರತಕ್ಕೆ ಅಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಸಿಂಧೂ ನದಿ ಇದೆ. ನಮ್ಮದೇ ನದಿಯಾದರೂ ನಮ್ಮ
>> ಇಚ್ಛೆಗೆ ತಕ್ಕಂತೆ ಅದನ್ನು ಬಳಸುವ ಹಾಗಿಲ್ಲ.
>>
>> ಇಲ್ಲಿ ಕಾವೇರಿ ನೀರಿನ ಬಗ್ಗೆ ತಮಿಳುನಾಡು ನಮಗೆ ನಿರ್ಬಂಧ ಹಾಕುವ ಹಾಗೆ ಪಾಕಿಸ್ತಾನ
>> ಅಲ್ಲಿ ಭಾರತಕ್ಕೆ ನಿರ್ಬಂಧ ಹಾಕಿದೆ. ಹಾಗೆಂದು ನಾವು ಗೊಣಗುವಂತಿಲ್ಲ, ಏಕೆಂದರೆ ಜಗತ್ತಿನ
>> ಎಲ್ಲ ಕಡೆ ಇದೇ ನಿಯಮ ಇದೆ. ನದಿಯ ಉಗಮಸ್ಥಾನದ ಬಳಕೆದಾರರು ಕೆಳ ಹರಿವಿನ ಬಳಕೆದಾರರಿಗೆ
>> ತೊಂದರೆ ಮಾಡಬಾರದು. ಕೆಳಹರಿವಿನ ಜನರು ನೀರನ್ನು ಹೇಗೆ ಬೇಕಾದರೂ ಬಳಸಬಹುದು; ಆದರೆ
>> ಉಗಮಸ್ಥಾನದವರ ಸ್ವಾತಂತ್ರ್ಯಕ್ಕೆ ನಿರ್ಬಂಧಗಳಿವೆ.
>>
>> ಕಾಶ್ಮೀರದ ಸಿಂಧೂ (ಇಂಡಸ್) ಕಣಿವೆಗೆ ಬನ್ನಿ. ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಹೋಗುವ
>> ಆರು ಉಪನದಿಗಳಲ್ಲಿ ರಾವಿ, ಬಿಯಾಸ್ ಮತ್ತು ಸತ್ಲೆಜ್ ಈ ಮೂರು ಉಪನದಿಗಳಷ್ಟೆ ನಮ್ಮ
>> ಬಳಕೆಗಿವೆ. ಇನ್ನಿತರ ಮೂರು-ಸಿಂಧೂ, ಝೆಲಮ್ ಮತ್ತು ಚಿನಾಬ್ ನದಿಗಳಿಂದ ಹೆಚ್ಚೆಂದರೆ ಶೇ
>> 20ರಷ್ಟು ನೀರನ್ನು ಮಾತ್ರ ಬಳಸಿಕೊಳ್ಳಬಹುದು. ಈ ಆರೂ ಉಪನದಿಗಳು ಮುಂದೆ ಪಾಕಿಸ್ತಾನದಲ್ಲಿ
>> ಒಂದಾಗಿ ಸಿಂಧೂ ನದಿಯೇ ಆಗುತ್ತವೆ.
>>
>> ಪಾಕಿಸ್ತಾನಕ್ಕೆ ಇರುವುದು ಅದೊಂದೇ ನದಿ. 1960ರ ಈ ಒಪ್ಪಂದಕ್ಕೆ ಆಸ್ಟ್ರೇಲಿಯಾ,
>> ನ್ಯೂಝಿಲ್ಯಾಂಡ್, ಬ್ರಿಟನ್, ಅಮೆರಿಕ ಮತ್ತು ಕೆನಡಾ ದೇಶಗಳ ಸಾಕ್ಷಿ ಸಹಿ ಇದೆ. ಭಾರತ ಈಗ
>> ಅದನ್ನು ಧಿಕ್ಕರಿಸಿದರೆ, ಅಂದರೆ ಸಿಂಧೂ ಉಪನದಿಗಳ ನೀರಿಗೆ ತಡೆಯೊಡ್ಡಿದರೆ ಪಾಕಿಸ್ತಾನದ
>> ಕನಿಷ್ಠ ಎರಡು ಕೋಟಿ ಜನರು ಸಿಡಿದೆದ್ದು ಪಾಕಿಸ್ತಾನ ಯುದ್ಧ ಸಾರುತ್ತದೆ. ಮೇಲಾಗಿ ಆ ಆರೂ
>> ಸಾಕ್ಷಿರಾಷ್ಟ್ರಗಳು ಭಾರತಕ್ಕೆ ದಿಗ್ಬಂಧನ ಹಾಕಬಹುದು.
>>
>> ಭಾರತ ಸಿಂಧೂ ಕಣಿವೆಯ ಗೊಡವೆಗೆ ಹೋಗಲೇ ಇಲ್ಲ. ಚಿಕ್ಕಪುಟ್ಟ ಯೋಜನೆಗಳಿಂದಾಗಿ
>> ವಿವಾದಗಳೆದ್ದರೂ ಅಲ್ಲಲ್ಲೇ ಬಗೆಹರಿದಿವೆ. ಪಾಕಿಸ್ತಾನದೊಂದಿಗಿನ ಕಳೆದ ಮೂರು ಯುದ್ಧಗಳ
>> ಸಮಯದಲ್ಲೂ ಸಿಂಧೂ- ಝೆಲಮ್- ಚಿನಾಬ್‌ನ ನೀರನ್ನು ಅಡ್ಡ ತಿರುಗಿಸುವ ಬಗ್ಗೆ ಮಾತಾಡಲಿಲ್ಲ.
>> ಅಡ್ಡ ತಿರುಗಿಸುವುದು ಸುಲಭವೂ ಅಲ್ಲ; ಲಕ್ಷ ಕೋಟಿ ಅಲ್ಲ, ಕೋಟಿ ಕೋಟಿ ಹಣ ಸುರಿದರೂ ಒಂದೆರಡು
>> ದಶಕಗಳಲ್ಲಿ ಆಗುವ ಕೆಲಸವೂ ಅದಲ್ಲ. ಆದರೆ ಈಗ ಅದರ ಪ್ರಸ್ತಾಪ ಮತ್ತೆ ಮತ್ತೆ ಆಗುತ್ತಿದೆ.
>>
>> ಸಿಂಧೂ ಎಂದಾಕ್ಷಣ ಪಾಕಿಸ್ತಾನ ಮುಟ್ಟಿದರೆ ಮುನಿದೇಳುತ್ತದೆ. ಕಳೆದ ವಾರ ‘ಇಂಡಿಯಾ ಟುಡೇ’
>> ಚಾನೆಲ್‌ನ ರಾಹುಲ್ ನೀಲಕಮಲ್ ಹೇಗೊ ಷಿಕ್ಯಾಗೊದಲ್ಲಿರುವ ಮಾಜಿ ಪಾಕ್ ಅಧ್ಯಕ್ಷ ಜನರಲ್
>> ಮುಷರ್ರಫ್‌ರನ್ನು ಮಾತಿಗೆಳೆದರು.
>>
>> ಪಾಕಿಸ್ತಾನವನ್ನು ಭಾರತ ಶಿಕ್ಷಿಸಬಹುದಾದ ವಿವಿಧ ವಿಧಾನಗಳ ಬಗೆಗಿನ ಪ್ರಶ್ನೆಗಳಿಗೆ
>> ಸಮಾಧಾನದಿಂದಲೇ ಉತ್ತರ ಕೊಟ್ಟ ಮುಷರ್ರಫ್, ಸಿಂಧೂ ಕಣಿವೆಯ ನೀರನ್ನು ನಿಲ್ಲಿಸುವ ಮಾತು
>> ಬಂದಾಗ ಮಾತ್ರ ಭುಗಿಲೆದ್ದರು. ‘ಏನು ಏನಂತೀರಿ ರಾಹುಲ್! ಪಾಕಿಸ್ತಾನದಂಥ ಅಣ್ವಸ್ತ್ರ
>> ಸನ್ನದ್ಧ ದೇಶಕ್ಕೆ ನೀರು ಸಿಗದಂತೆ ಮಾಡುತ್ತೀರಾ? ಅದು ತೀರಾ ತೀರಾ ಗಂಭೀರ ವಿಷಯ. ಅದರ
>> ಸೊಲ್ಲೆತ್ತಬೇಡಿ’ ಎಂದು ಗದರಿದರು.
>>
>> ಆದರೆ ನಮ್ಮಲ್ಲಿಯೇ ಸಡಿಲ ನಾಲಗೆಯ ಕೆಲವು ತೀವ್ರವಾದಿಗಳು ಮಾಧ್ಯಮಗಳ ಎದುರು ಅಣ್ವಸ್ತ್ರ
>> ಪ್ರಯೋಗದ ಬಗ್ಗೆ ಮನ ಬಂದಂತೆ ಮಾತಾಡುತ್ತಾರೆ. ಚಾನೆಲ್‌ಗಳೂ ಅಹೋರಾತ್ರಿ ಯುದ್ಧದ ಭಜನೆ
>> ಮಾಡುತ್ತಿವೆ. ಅಣ್ವಸ್ತ್ರವೆಂದರೆ ಅದೇನೊ ಆಟವೆಂಬಂತೆ, ಹಬ್ಬದ ಪಟಾಕಿಯೆಂಬಂತೆ ಅದನ್ನೆತ್ತಿ
>> ಪಾಕಿಸ್ತಾನದ, ಉಗ್ರರ ಶಾಶ್ವತ ದಮನದ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ.
>>
>> ‘ನಮ್ಮ ಹತ್ತು ಕೋಟಿ ಜನರು ಪಾಕಿಸ್ತಾನದ ಅಣುಬಾಂಬ್‌ಗೆ ತಲೆಯೊಡ್ಡಿದರೆ ನಾವು ಇಡೀ
>> ಪಾಕಿಸ್ತಾನವನ್ನು ದೂಳೀಪಟ ಮಾಡಬಹುದು’ ಎಂಬರ್ಥದ ಸುಬ್ರಹ್ಮಣ್ಯ ಸ್ವಾಮಿಯ ಹೇಳಿಕೆ
>> ಲಂಗುಲಗಾಮಿಲ್ಲದೆ ಹರಿದಾಡುತ್ತದೆ.
>>
>> ಭಾರತ- ಪಾಕಿಸ್ತಾನದ ನಡುವೆ ಪರಮಾಣು ಯುದ್ಧ ಸಂಭವಿಸೀತೆ? ಭಾರತದ ಮಿಲಿಟರಿಯಂತೂ ತಾನು
>> ಮೊದಲು ಬಟನ್ ಒತ್ತುವುದಿಲ್ಲವೆಂದು ಎಂದೋ ಘೋಷಿಸಿದೆ.ಆದರೆ ನಾವು ಮಾಮೂಲು ದಾಳಿಯನ್ನು ನಡೆಸಿ
>> ಪಾಕಿಸ್ತಾನದ ಗಡಿಯೊಳ್ಳಕ್ಕೆ ನುಗ್ಗುತ್ತ ಹೋದರೆ ಪಾಕಿಸ್ತಾನ ತನ್ನ ಮೊದಲ ಅಣ್ವಸ್ತ್ರ
>> ಪ್ರಯೋಗ ಮಾಡುತ್ತದೆಂದು ಅಲ್ಲಿನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. ಅಂಥ ಮೊದಲ
>> ಅಸ್ತ್ರವಾಗಿ ‘ನಾಸ್ರ್’ ಕ್ಷಿಪಣಿ ಅಲ್ಲಿಂದ ಬಂದೀತು. ಅದು ಹೆಚ್ಚೆಂದರೆ 60 ಕಿಲೊಮೀಟರ್ ದೂರ
>> ಬರುತ್ತದೆ.
>>
>> ತನ್ನದೇ ಭೂಪ್ರದೇಶ ನಾಶವಾದರೂ ಚಿಂತೆಯಿಲ್ಲ, ಅಲ್ಲಿಗೆ ಬಂದ ಭಾರತೀಯ ಸೈನ್ಯವನ್ನು ಹೊಸಕಿ
>> ಹಾಕಲು ಅದು ಯತ್ನಿಸಬಹುದು. ಅಥವಾ ಒಂದೊಮ್ಮೆ ಪಾಕಿಸ್ತಾನ ಆಗಲೂ ಸಂಯಮವನ್ನು
>> ಪ್ರದರ್ಶಿಸಿದರೆ, ಅಂದರೆ ಅಣ್ವಸ್ತ್ರ ಪ್ರಯೋಗ ಮಾಡದೇ ಇದ್ದರೂ, ಅಲ್ಲಿನ ಉಗ್ರರು ಕೈಕಟ್ಟಿ
>> ಕೂರಲಿಕ್ಕಿಲ್ಲ. ವರದಿಗಳ ಪ್ರಕಾರ, ಈ ಹಿಂದೆ ನಾಲ್ಕು ಬಾರಿ ಉಗ್ರರು ಪಾಕಿಸ್ತಾನದ್ದೇ
>> ಅಣ್ವಸ್ತ್ರ ತಯಾರಿಕೆಯ ನೆಲೆಗಳ ಮೇಲೆ ದಾಳಿ ಮಾಡಿದ್ದಾರೆ.
>>
>> ಬಾಂಬ್ ತಯಾರಿಕೆಗೆ ಬೇಕಿದ್ದ ದ್ರವ್ಯಗಳನ್ನು ಅವರು ಕದ್ದಿರಬಹುದು, ಬಾಂಬನ್ನೇ
>> ಕದ್ದಿರಬಹುದು ಅಥವಾ ಬಾಂಬನ್ನು ಹೂಡಿಟ್ಟ ಕ್ಷಿಪಣಿಯನ್ನೇ ಕದ್ದು ಸಾಗಿಸಿರಬಹುದು.
>> ನಮ್ಮಲ್ಲಿರುವಷ್ಟು ಅಚ್ಚುಕಟ್ಟಾದ ಯುದ್ಧವ್ಯವಸ್ಥೆ ಪಾಕಿಸ್ತಾನದಲ್ಲಿಲ್ಲ. ಅಲ್ಲಿ ಸರ್ಕಾರ
>> ಮತ್ತು ಮಿಲಿಟರಿ ನಡುವೆ ಹೊಂದಾಣಿಕೆ ಕಮ್ಮಿ. ಉಗ್ರರು ಎಲ್ಲೆಲ್ಲೋ ತೂರಿಕೊಂಡಿದ್ದಾರೆ.
>>
>> ಹೀಗಾಗಿ ಎರಡು ದೇಶಗಳ ನಡುವೆ ಚಿಕ್ಕದೊಂದು ಸಂಘರ್ಷವೂ (ಅಥವಾ ಮುಷರ್ರಫ್ ಹೇಳಿದ ಹಾಗೆ,
>> ಸಿಂಧೂ ನದಿಗೆ ದಿಗ್ಬಂಧನ ಹಾಕುವ ಸಿದ್ಧತೆಯೂ) ಅಣ್ವಸ್ತ್ರ ಪ್ರಯೋಗಕ್ಕೆ
>> ಕಾರಣವಾಗಬಹುದು. ಆಗೇನಾದರೂ ಭಾರತ ಪ್ರತೀಕಾರ ಭಾವದಿಂದ ತನ್ನ ಅಣ್ವಸ್ತ್ರವನ್ನು
>> ಚಿಮ್ಮಿಸಿದ್ದೇ ಆದರೆ ಪಾಕಿಸ್ತಾನದಿಂದ ಮಧ್ಯದೂರದ ಕ್ಷಿಪಣಿಗಳು ನಮ್ಮತ್ತ ತೂರಿ ಬರಬಹುದು.
>> ಅದಕ್ಕೆ ಪ್ರತಿಯಾಗಿ ನಾವೂ ಠೇಂಕರಿಸಲೇಬೇಕು.
>>
>> ಅಮೆರಿಕದ ‘ಬುಲ್ಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್ಸ್’ ಪತ್ರಿಕೆಯ 2015 ವರದಿಯ ಪ್ರಕಾರ
>> ಪಾಕಿಸ್ತಾನದ ಬಳಿ ಎಫ್-ಸಿಕ್ಸ್‌ಟೀನ್ ಮತ್ತು ಮಿರಾಜ್ ವಿಮಾನಗಳಲ್ಲಿ 36 ಅಣುಬಾಂಬ್‌ಗಳಿವೆ;
>> ಘಝ್ನವಿ, ಶಹೀನ್, ಘಾವ್ರಿ ಮತ್ತು ನಾಸ್ರ್ ಹೆಸರಿನ ಕ್ಷಿಪಣಿಗಳಲ್ಲಿ 86 ಬಾಂಬ್‌ಗಳಿವೆ.
>> ದೂರಗಾಮಿ ಬಾಬರ್ ಕ್ಷಿಪಣಿಯ ಮೇಲೆ 8 ಬಾಂಬ್‌ಗಳು ಕೂತಿವೆ.
>>
>> ಬಾಬರ್ ಕ್ಷಿಪಣಿ 1300 ಕಿ.ಮೀ ದೂರಕ್ಕೂ ಸಾಗಿ ಬರಬಹುದಾಗಿದ್ದು ಲುಧಿಯಾನಾ, ದಿಲ್ಲಿ,
>> ಜಯಪುರ, ಭೋಪಾಲ, ಲಖ್ನೋ ಮತ್ತು ಅಹ್ಮದಾಬಾದ್‌ವರೆಗೆ ಬರಬಹುದು. ಕ್ಷಿಪಣಿಗಳಿಗಿಂತ ಬಾಂಬರ್
>> ವಿಮಾನಗಳು ಹೆಚ್ಚು ಅಪಾಯಕಾರಿ. ಸಮುದ್ರ ಪಾತಳಿಯಿಂದ ಕೇವಲ ಮೂರಡಿ ಎತ್ತರದಲ್ಲಿ ಹಾರುತ್ತ
>> ರಡಾರ್‌ಗಳ ಕಣ್ತಪ್ಪಿಸಿ ಪಾಕಿಸ್ತಾನದ ಎಫ್-16 ಮುಂಬೈ, ಕಾರವಾರ, ಕೈಗಾ, ಸೀಬರ್ಡ್‌ವರೆಗೂ
>> ಬರಬಹುದು.
>>
>> ಭಾರತದ ಅಣ್ವಸ್ತ್ರ ಶೇಖರಣೆ ಪಾಕಿಸ್ತಾನದಕ್ಕಿಂತ ಹೆಚ್ಚೇನಿಲ್ಲ. ಆದರೆ ಅವನ್ನು
>> ಚಿಮ್ಮಿಸುವ ಸಾಧನಗಳು ಹೆಚ್ಚು ಪ್ರಬಲವಾಗಿವೆ. ಲಭ್ಯ ಮಾಹಿತಿಗಳ ಪ್ರಕಾರ ನಮ್ಮ ವಜ್ರ
>> (ಮಿರಾಜ್) ಮತ್ತು ಶಮ್‌ಶೇರ್ (ಸುಧಾರಿತ ಜಾಗ್ವಾರ್) ವಿಮಾನಗಳಲ್ಲಿ 48 ಅಣುಬಾಂಬ್‌ಗಳಿವೆ;
>> ಪೃಥ್ವಿ ಕ್ಷಿಪಣಿ ಮತ್ತು ಬಹುದೂರಗಾಮಿ ಅಗ್ನಿ ಕ್ಷಿಪಣಿಗಳಲ್ಲಿ 56 ಬಾಂಬ್‌ಗಳಿವೆ; ಹಡಗಿನ
>> ಮೇಲಿನ ಧನುಷ್ ಮತ್ತು ಜಲಾಂತರ್ಗಾಮಿಯ ಸಾಗರಿಕಾ ಕ್ಷಿಪಣಿಗಳಲ್ಲಿ 14 ಅಣುಬಾಂಬ್‌ಗಳಿವೆ.
>>
>> ಭಾರತದ ಒಟ್ಟಾರೆ ಮಿಲಿಟರಿ ತಾಕತ್ತಿಗೆ ಹೋಲಿಸಿದರೆ ಪಾಕಿಸ್ತಾನದ್ದು ತೀರ
>> ದುರ್ಬಲವಾಗಿದ್ದು, ನಾವು ಸಾದಾ ದಾಳಿಯ ಮೂಲಕ ಶೆಲ್‌ಗಳ ಮಳೆಗರೆದರೆ ಅವರು ಸಲೀಸಾಗಿ
>> ಅಣ್ವಸ್ತ್ರವನ್ನೇ ಚಿಮ್ಮಿಸುವ ಸಾಧ್ಯತೆ ಇರುತ್ತದೆ. ಅವರ ನೆಲದಲ್ಲೇ ಅದು ಸ್ಫೋಟಗೊಂಡರೆ
>> ಭಾರತ ಆಗಲೂ ಅಣ್ವಸ್ತ್ರವನ್ನು ಬಳಸದೇ ಇರಬಹುದು. ಆದರೆ ನಮ್ಮ ಆಯಕಟ್ಟಿನ ಸ್ಥಳಗಳ ಮೇಲೆ ದಾಳಿ
>> ನಡೆದರೆ? ಪ್ರತಿದಾಳಿ ಅನಿವಾರ್ಯವಾಗುತ್ತದೆ.
>>
>> ಅಕಸ್ಮಾತ್ ಈ ಚಕಮಕಿಯಲ್ಲಿ ಹಿರೊಶಿಮಾ ಬಾಂಬ್ ಗಾತ್ರದ ಪುಟಾಣಿ ನೂರು ಅಣುಬಾಂಬ್‌ಗಳು
>> ಸ್ಫೋಟಿಸಿದರೂ ಸಾಕು, ಇಡೀ ಪ್ರಪಂಚ ತತ್ತರಿಸುತ್ತದೆ. ಈ ಉಪಖಂಡದ ಸುಮಾರು 210 ಲಕ್ಷ ಜನರು
>> ನೇರವಾಗಿ ಸಾಯುತ್ತಾರೆ. ಕರೀ ಹೊಗೆ ಆಕಾಶಕ್ಕೇರಿ ಪೂರ್ವ-ಪಶ್ಚಿಮಕ್ಕೆ ಪಸರಿಸುತ್ತ ಮೂರು
>> ತಿಂಗಳುಗಳಲ್ಲಿ ಭೂಮಿಗೆ ಕಪ್ಪು ಚಾದರ ಆವರಿಸುತ್ತದೆ. ಮಳೆಮಾರುತಗಳೆಲ್ಲ ನಾಪತ್ತೆಯಾಗಿ,
>> ಕೃಷಿ ಚಟುವಟಿಕೆ ಬಹುಪಾಲು ಸ್ಥಗಿತವಾಗುತ್ತದೆ.
>>
>> ಜಗತ್ತಿನ ಇನ್ನೂರು ಕೋಟಿ ಜನರು ಆಹಾರಕ್ಕಾಗಿ ಪರದಾಡುತ್ತ ಅಲ್ಲಲ್ಲಿ ಕಿರುಯುದ್ಧಗಳಿಗೆ
>> ಕಾರಣರಾಗುತ್ತಾರೆ.  ಭೂಮಿಗೆ ರಕ್ಷಾಕವಚ ಎನಿಸಿರುವ ಓಝೋನ್ ವಲಯ ಚಿಂದಿಯಾಗುತ್ತದೆ.
>> ಕೊಲಂಬಿಯಾದ nucleardarkness.org ಎಂಬ ಜಾಲತಾಣದ ಚಲಿಸುವ ನಕ್ಷೆಯಲ್ಲಿ ಈ ದುರಂತದ
>> ಚಿತ್ರಣವಿದೆ.
>>
>> ಅಣುದಾಳಿಗೆ ಸಿಕ್ಕ ಭಾರತ- ಪಾಕಿಸ್ತಾನದ ಎರಡು ಕೋಟಿ ಜನರು ದಿಢೀರಾಗಿ ಸಾಯುವುದಿಲ್ಲ.
>> ಅಣುಬಾಂಬ್ ಸ್ಫೋಟಿಸಿದಾಗ ಹಠಾತ್ ಮಿಂಚುವ ಪ್ರಭೆಯಿಂದ ಶರೀರದ ಕೆಲಭಾಗ ಆ ಕ್ಷಣವೇ ಪೂರ್ತಿ
>> ಬೆಂದು ಹೋಗುತ್ತದೆ. ಏನಾಯಿತೆಂದು ಮುಖವನ್ನು ಒರೆಸಲು ಹೋದರೆ ಇಡೀ ಚರ್ಮ ಕೈಗೆ ಬರುತ್ತದೆ.
>> ದಿಗ್ಭ್ರಮೆಗೊಂಡು ಅತ್ತಿತ್ತ ನೋಡುವಷ್ಟರಲ್ಲಿ ಎರಡನೇ ಆಘಾತದ ಅಲೆ ಅಪ್ಪಳಿಸುತ್ತದೆ. ಅದು
>> ಸರ್ವನಾಶದ ಅಲೆ! ನಿಂತಿದ್ದವರು ದೂರ ಚಿಮ್ಮಿ ಹೋಗುತ್ತಾರೆ.
>>
>> ಬಸ್‌ನಲ್ಲಿದ್ದರೆ ಇಡೀ ಬಸ್ ಎಗರಿ ಬೀಳುತ್ತದೆ. ನಗರದ ಎಲ್ಲ ಕಟ್ಟಡಗಳೂ ಕುಸಿಯುತ್ತವೆ.
>> ಎಲ್ಲ ಪೆಟ್ರೋಲ್ ಬಂಕ್‌ಗಳೂ ಸಿಡಿಯುತ್ತವೆ. ಎಲ್ಲ ವಿದ್ಯುತ್ ಕಂಬಗಳೂ ಧರಾಶಾಹಿ ಆಗುತ್ತವೆ.
>> ಕುಸಿತ, ಬೆಂಕಿ, ವಿದ್ಯುತ್ ಆಘಾತ ಈ ಮೂರರಿಂದಲೂ ತಪ್ಪಿಸಿಕೊಂಡ ಅದೃಷ್ಟಶಾಲಿ ಯಾವುದೋ
>> ಉದ್ಯಾನದಲ್ಲಿ ಪಕ್ಷಿವೀಕ್ಷಣೆ ಮಾಡುತ್ತಿದ್ದರೆ ಈಗ ಮೂರನೆಯ ಅಲೆ ಅಪ್ಪಳಿಸುತ್ತದೆ. ಅದು
>> ವಿಕಿರಣದ ಅಲೆ. ಗ್ಯಾಮಾ ಕಿರಣಗಳು ದೇಹದ ಒಳಕ್ಕೆ ಹೊಕ್ಕು ಜೀವಕೋಶಗಳನ್ನು ಧ್ವಂಸ
>> ಮಾಡುತ್ತವೆ. ರಕ್ತ ಉಮ್ಮಳಿಸಿಬರುತ್ತದೆ.
>>
>> ಗಾಯಾಳುಗಳಿಗೆ ತುರ್ತುಸೇವೆ ಒದಗಿಸಬೇಕಾದ ವೈದ್ಯತಂಡ ಬದುಕಿ ಉಳಿದಿದ್ದರೂ ಯಾವ ಸೇವೆಯನ್ನೂ
>> ಒದಗಿಸಲಾರದು. ಪ್ರಥಮ ಶುಶ್ರೂಷೆ, ರಕ್ತಪೂರೈಕೆ ಹಾಗಿರಲಿ ಅಂಬುಲೆನ್ಸ್
>> ಸುಸ್ಥಿತಿಯಲ್ಲಿದ್ದರೂ ಚಲಿಸಲು ರಸ್ತೆಗಳೇ ಇರುವುದಿಲ್ಲ. ನೆಲಮಾಳಿಗೆಯಲ್ಲಿ ಬದುಕುಳಿದ
>> ಕೆಲವರು ನೀರು, ಆಹಾರಕ್ಕಾಗಿ ಮೇಲಕ್ಕೆ ಬಂದರೆ ವಿಕಿರಣಕ್ಕೆ, ವಿಷಗಾಳಿಗೆ ಸಿಲುಕುತ್ತಾರೆ.
>> ಬಾಂಬ್ ದಾಳಿಗೆ ಸಿಕ್ಕು ನೇರವಾಗಿ ಸತ್ತವರೇ ಅದೃಷ್ಟಶಾಲಿಗಳು ಎನ್ನುವಂತಾಗುತ್ತದೆ.
>>
>> ನಗರಗಳ ಮೇಲೆ, ಅಥವಾ ತುಂಬಿದ ಅಣೆಕಟ್ಟುಗಳ ಮೇಲೆ ಬೀಳುವ ಬದಲು ಅಣುಬಾಂಬ್‌ಗಳು ಗುರಿ
>> ತಪ್ಪಿ ಎಲ್ಲೋ ಬಟಾಬಯಲಿನಲ್ಲೊ ಕಾಡುಮೇಡಿನಲ್ಲೊ ಬಿದ್ದರೆ? ಸಾವುನೋವಿನ ಸಂಖ್ಯೆ ಕಡಿಮೆ
>> ಇರುತ್ತದೆ ನಿಜ. ಆದರೆ ಯಾರೂ ಅತ್ತ ತುರ್ತು ನೆರವಿಗೆ ಹೆಲಿಕಾಪ್ಟರ್‌ಗಳಲ್ಲೂ ಹೋಗದ ಹಾಗೆ
>> ವಿಕಿರಣ ಮತ್ತು ದಟ್ಟ ಹೊಗೆ ಕವಿದಿರುತ್ತದೆ.
>>
>> ರಸ್ತೆ, ಸೇತುವೆ, ವಿದ್ಯುತ್ ಕಂಬಗಳ ರಿಪೇರಿಯೂ ಸಾಧ್ಯವಾಗುವುದಿಲ್ಲ. ವರ್ಷಗಟ್ಟಲೆ ಅತ್ತ
>> ಯಾರೂ (ಲೂಟಿಕೋರರೂ) ಕಾಲಿಡದಂತೆ ದಿಗ್ಬಂಧನ ಹಾಕಬೇಕಾಗುತ್ತದೆ.ಭೂಮಿಯ ತಳದಲ್ಲಿದ್ದ
>> ತೈಲದ್ರವ್ಯಗಳನ್ನು ಮೇಲೆತ್ತುತ್ತ ನಾವು ಕಳೆದ 150 ವರ್ಷಗಳಲ್ಲಿ ಎಲ್ಲೆಡೆ ಪೆಟ್ರೊಲ್ ಮತ್ತು
>> ಪ್ಲಾಸ್ಟಿಕ್‌ಗಳ ದಹನಶೀಲ ನಾಗರಿಕತೆಯನ್ನು ಕಟ್ಟಿ ಬೆಳೆಸಿದ್ದೇವೆ.
>>
>> ಬಾಂಬ್‌ಗಳು ಎಲ್ಲೇ ಬಿದ್ದರೂ ಅಗ್ನಿಜ್ವಾಲೆ ಮತ್ತು ದಟ್ಟ ಹೊಗೆಮಸಿಯಿಂದಾಗಿ ಸೂರ್ಯನೇ
>> ಮರೆಯಾಗುತ್ತಾನೆ. ಬೆಂಕಿ ಇದ್ದಲ್ಲಿ ಸೂರ್ಯನಿಗೇನು ಕೆಲಸ? ‘ಅಣು ಚಳಿಗಾಲ’ ಜಗತ್ತಿಗೆಲ್ಲ
>> ಆವರಿಸುತ್ತದೆ. ಅನಿರೀಕ್ಷಿತ ಕರೀಮಳೆ, ಕರಾಳಚಳಿ, ಹಿಮಪಾತದಿಂದಾಗಿ ಋತುಗಳೇ ಅಳಿಸಿ
>> ಹೋಗುತ್ತವೆ. ನಾಗರಿಕ ವ್ಯವಸ್ಥೆಗಳೆಲ್ಲ ಅಸ್ತವ್ಯಸ್ತ ಆಗುತ್ತವೆ.
>>
>> ಬದುಕುಳಿದವರಿಗೆ ಬದುಕೇ ಅಸಹನೀಯವಾಗುತ್ತದೆ. ಬಾರಾಮುಲ್ಲಾದ ಬಳಿಯ ‘ಉರಿ’ ಎಂದು ನಾವು
>> ಕರೆಯುವ ಚಳಿಪ್ರದೇಶವನ್ನು ಅಲ್ಲಿನವರು ‘ಉಡಿ’ ಎನ್ನುತ್ತಾರೆ. ಉಡಿಯಲ್ಲಿದ್ದ ಕಿಡಿಯನ್ನು
>> ಅಲ್ಲೇ ಆರಿಸಬೇಕೆ ಅಥವಾ ತಿದಿಯೂದಿ ಇಡೀ ಜಗತ್ತನ್ನು ಹಿಮಯುಗಕ್ಕೆ ತಳ್ಳಬೇಕೆ?
>>
>> Hareeshkumar K
>> GHS HUSKURU
>> MALAVALLI TQ
>> MANDYA DT
>> MOB 9880328224
>>
>> --
>> 1. If a teacher wants to join STF, visit http://karnatakaeducation.org.
>> in/KOER/en/index.php/Become_a_STF_groups_member
>> 2. For STF training, visit KOER - http://karnatakaeducation.org.
>> in/KOER/en/index.php
>> 4. For Ubuntu 14.04 installation, visit http://karnatakaeducation.org.
>> in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to