Very useful information sir
On Oct 12, 2016 12:05 PM, "HAREESHKUMAR K Agasanapura" <
harihusk...@gmail.com> wrote:

> http://m.prajavani.net/article/2016_10_12/444294
>
> *ಇಂಟರ್ನೆಟ್ ನಿರ್ವಹಣೆಯಲ್ಲೊಂದು ಐತಿಹಾಸಿಕ ಪಲ್ಲಟ*
>
> 12 Oct, 2016
>
> ಎನ್.ಎ.ಎಂ. ಇಸ್ಮಾಯಿಲ್
>
>
> <https://www.facebook.com/sharer/sharer.php?u=https%3A%2F%2Fgoo.gl%2FNw4WyO>
> <https://twitter.com/intent/tweet?text=%E0%B2%87%E0%B2%82%E0%B2%9F%E0%B2%B0%E0%B3%8D%E0%B2%A8%E0%B3%86%E0%B2%9F%E0%B3%8D+%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86%E0%B2%AF%E0%B2%B2%E0%B3%8D%E0%B2%B2%E0%B3%8A%E0%B2%82%E0%B2%A6%E0%B3%81+%E0%B2%90%E0%B2%A4%E0%B2%BF%E0%B2%B9%E0%B2%BE%E0%B2%B8%E0%B2%BF%E0%B2%95+%E0%B2%AA%E0%B2%B2%E0%B3%8D%E0%B2%B2%E0%B2%9F+https%3A%2F%2Fgoo.gl%2FNw4WyO>
> <https://plus.google.com/share?url=https%3A%2F%2Fgoo.gl%2FNw4WyO>
> <http://www.pinterest.com/pin/find/?url=https%3A%2F%2Fgoo.gl%2FNw4WyO>
> <http://www.linkedin.com/shareArticle?mini=true&title=%E0%B2%87%E0%B2%82%E0%B2%9F%E0%B2%B0%E0%B3%8D%E0%B2%A8%E0%B3%86%E0%B2%9F%E0%B3%8D+%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86%E0%B2%AF%E0%B2%B2%E0%B3%8D%E0%B2%B2%E0%B3%8A%E0%B2%82%E0%B2%A6%E0%B3%81+%E0%B2%90%E0%B2%A4%E0%B2%BF%E0%B2%B9%E0%B2%BE%E0%B2%B8%E0%B2%BF%E0%B2%95+%E0%B2%AA%E0%B2%B2%E0%B3%8D%E0%B2%B2%E0%B2%9F+&url=https%3A%2F%2Fgoo.gl%2FNw4WyO>
>
> ಸೆಪ್ಟೆಂಬರ್ ತಿಂಗಳ ಕೊನೆಯ ದಿನ ಇಂಟರ್ನೆಟ್‌ನ ಇತಿಹಾಸದಲ್ಲಿ ಒಂದು ಮಹತ್ತರ ಪಲ್ಲಟ
> ಸಂಭವಿಸಿತು. ಏನೀ ಪಲ್ಲಟ? ತಾಂತ್ರಿಕ ಪಾರಿಭಾಷಿಕ ಪದಗಳನ್ನು ಬಳಸದೇ ಹೇಳಬೇಕೆಂದರೆ 2016ರ
> ಸೆಪ್ಟೆಂಬರ್ 30ಕ್ಕೆ ಇಂಟರ್ನೆಟ್‌ನ ಬೆನ್ನೆಲುಬಾದ ವಿಳಾಸ ಪುಸ್ತಕದ ಮೇಲಿದ್ದ ಅಮೆರಿಕ
> ಸರ್ಕಾರ ನಿಯಂತ್ರಣ ಕೊನೆಗೊಂಡಿತು. ಇನ್ನು ಮುಂದೆ ಇದನ್ನು ಯಾವುದೇ ಸರ್ಕಾರದ ನಿಯಂತ್ರಣದಿಂದ
> ಹೊರತಾದ, ಜಾಗತಿಕ ಇಂಟರ್ನೆಟ್ ಬಳಕೆದಾರರ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಸ್ವತಂತ್ರ
> ಸಮುದಾಯವೊಂದು ನಿಯಂತ್ರಿಸಲಿದೆ.
>
> ಎಷ್ಟೇ ಸರಳವಾಗಿ ಹೇಳಿದರೂ ಇದೊಂದು ಒಗಟಿನಂತೆ ಕಾಣುವ ವಿಚಾರ. ಇಂಟರ್ನೆಟ್ ಎಂಬುದು ಯಾವುದೋ
> ಒಂದು ಸರ್ಕಾರ ಅಥವಾ ಒಂದು ಕಂಪೆನಿ ಅಥವಾ ಕಂಪೆನಿಗಳ ಕೂಟವೊಂದು ನಡೆಸುತ್ತಿರುವ
> ವ್ಯವಸ್ಥೆಯಲ್ಲ. ಇದು ಜಗತ್ತಿನಾದ್ಯಂತ ಹರಡಿರುವ ಕಂಪ್ಯೂಟರ್‌ಗಳ ಜಾಲ. ಇದು ಯಶಸ್ವಿಯಾಗಿ
> ಕಾರ್ಯ ನಿರ್ವಹಿಸುವುದಕ್ಕೆ ಒಂದು ಸರಿಯಾದ ವಿಳಾಸ ವ್ಯವಸ್ಥೆ ಇರಬೇಕು. ಉದಾಹರಣೆಗೆ ವಿಶ್ವದ
> ಯಾವ ಮೂಲೆಯಲ್ಲಿ ಕುಳಿತು ಇಂಟರ್ನೆಟ್ ಸಂಪರ್ಕವಿರುವ ಯಾವುದೇ ಉಪಕರಣದಲ್ಲಿ ‘
> prajavani.net’ ಎಂದು ಟೈಪಿಸಿದರೆ ಅದು ‘ಪ್ರಜಾವಾಣಿ’ ಪತ್ರಿಕೆಯ ಅಂತರ್ಜಾಲ ತಾಣವನ್ನು
> ನಿಮ್ಮ ಎದುರು ತೆರೆದಿಡುತ್ತದೆ.
>
> ಇದು ಸಾಧ್ಯವಾಗುವುದು ಡೊಮೈನ್ ನೇಮ್ ಸಿಸ್ಟಂ ಅಥವಾ ಡಿಎನ್‌ಎಸ್ ಎಂದು ಕರೆಯುವ ವಿಳಾಸ
> ವ್ಯವಸ್ಥೆಯಿಂದ. ಪ್ರತಿಯೊಂದು ಜಾಲ ತಾಣಕ್ಕೂ ಒಂದು ವಿಶಿಷ್ಟವಾದ ಸಂಖ್ಯಾ
> ಸಂಜ್ಞೆಯಿರುತ್ತದೆ. ಬಳಕೆದಾರರು ನಿರ್ದಿಷ್ಟವಾದ ವಿಳಾಸವನ್ನು ಬ್ರೌಸರ್‌ನಲ್ಲಿ ಟೈಪಿಸಿದಾಗ
> ಈ ವ್ಯವಸ್ಥೆ ಆ ನಿರ್ದಿಷ್ಟ ವಿಳಾಸ ಯಾವ ಸರ್ವರ್‌ನಲ್ಲಿದೆ ಎಂದು ಪತ್ತೆ ಹಚ್ಚಿ ಅಲ್ಲಿಗೆ
> ಕೊಂಡೊಯ್ಯುತ್ತದೆ.
>
> ಈ ವ್ಯವಸ್ಥೆ ಏಕೆ ಬೇಕು? ಒಂದು ಸರಳ ಉದಾಹರಣೆಯೊಂದಿಗೆ ಈ ಪ್ರಶ್ನೆಗೆ ಉತ್ತರ ನೀಡಬಹುದು.
> ಒಂದು ಊರಿನ ಬೀದಿಗಳ ಹೆಸರು ಮತ್ತು ಮನೆಯ ಸಂಖ್ಯೆಯನ್ನು ಪ್ರತಿಯೊಬ್ಬರೂ ತಮಗೆ ತೋಚಿದಂತೆ
> ಇಟ್ಟುಕೊಂಡರೆ ಏನಾಗಬಹುದು. ಒಂದೇ ಬೀದಿಯಲ್ಲಿ ಒಂದೇ ವಿಳಾಸವಿರುವ ಹತ್ತಾರು ಜನರು. ಒಂದು
> ಊರಿನಲ್ಲಿ ಒಂದೇ ಹೆಸರಿನ ಹತ್ತಾರು ಬೀದಿಗಳು ಕಾಣಿಸಿಕೊಂಡು ವಿಳಾಸ ಎಂಬ ಪರಿಕಲ್ಪನೆಯೇ
> ಅರ್ಥಹೀನವಾಗುತ್ತದೆ. ನಗರಗಳಲ್ಲಿ ಇದನ್ನು ನಗರಾಡಳಿತ ಸಂಸ್ಥೆಗಳು ನಿರ್ವಹಿಸುತ್ತವೆ.
>
> ಇಂಟರ್ನೆಟ್ ಎಂಬ ಮಹಾಜಗತ್ತಿನಲ್ಲಿ ಇದನ್ನು ನಿಯಂತ್ರಿಸುವುದಕ್ಕೆ ಇರುವ ವ್ಯವಸ್ಥೆಯೇ
> ಐಕ್ಯಾನ್ (ಐಸಿಎಎನ್ಎನ್=ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಅಂಡ್
> ನಂಬರ್‍ಸ್). ಇದರ ಅಂಗ ಸಂಸ್ಥೆಯಾದ ಐಎಎನ್ಎ ಅಥವಾ ಇಂಟರ್ನೆಟ್ ಅಸೈನ್ಡ್ ನಂಬರ್ಸ್ ಅಥಾರಿಟಿ
> ಎಂಬ ಸಂಸ್ಥೆಯೊಂದು ವಿಳಾಸ ಪುಸ್ತಕದ ನಿರ್ವಹಣೆ ನಡೆಸುತ್ತದೆ.
>
> ಇದಕ್ಕೂ ಮೊದಲು ಈ ಜವಾಬ್ದಾರಿಯನ್ನು ಇಂಟರ್ನೆಟ್‌ನ ಆದಿಮ ರೂಪವಾದ ‘ಅರ್ಪಾನೆಟ್‌’
> ಸೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಾನ್ ಪೋಸ್ಟೆಲ್ ಎಂಬ ವಿಜ್ಞಾನಿ
> ನೋಡಿಕೊಳ್ಳುತ್ತಿದ್ದರು. ಜಾನ್ ಪೋಸ್ಟೆಲ್ ಮೊದಲಿಗೆ ಲಾಸ್ ಏಂಜಲಿಸ್‌ನ  ಕ್ಯಾಲಿಫೋರ್ನಿಯ
> ವಿಶ್ವವಿದ್ಯಾಲಯದ ಪರವಾಗಿ ಈ ಕೆಲಸ ಮಾಡುತ್ತಿದ್ದರು. ಆಮೇಲೆ ಅಮೆರಿಕದ ರಕ್ಷಣಾ ಇಲಾಖೆಯು
> ಯೂನಿವರ್ಸಿಟಿ ಆಫ್ ಸದರನ್ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಿದ್ದ ಮಾಹಿತಿ ವಿಜ್ಞಾನ
> ಸಂಸ್ಥೆಯ ಪರವಾಗಿ ಈ ಕೆಲಸ ಮಾಡುತ್ತಿದ್ದರು.
>
> ಹಾಗೆ ನೋಡಿದರೆ ಇಂಟರ್ನೆಟ್‌ನ ಪರಿಕಲ್ಪನೆಯೇ ಅಮೆರಿಕದ ರಕ್ಷಣಾ ಇಲಾಖೆಯ ಪ್ರಯೋಗಾಲಯಗಳಲ್ಲಿ
> ಹುಟ್ಟಿಕೊಂಡದ್ದು. ಇದು ಅರ್ಪಾನೆಟ್ ಆಗಿ ಹೊರಜಗತ್ತಿಗೆ ಬಂದು ಅಲ್ಲಿಂದ ವಿಶ್ವವ್ಯಾಪಿಯಾದ
> ನಂತರ ಇದನ್ನು ನಿರ್ವಹಿಸುವವರು ಯಾರು ಎಂಬ ಸಮಸ್ಯೆ ಹುಟ್ಟಿಕೊಂಡಿತು. ಮಾಹಿತಿ ವಿನಿಮಯದ ಜಾಲ
> ವ್ಯಾಪರಕ್ಕಾಗಿಯೂ ಬಳಕೆಯಾಗ ತೊಡಗಿದ ನಂತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂಟರ್ನೆಟ್‌ನ ವಿಳಾಸ
> ಪುಸ್ತಕವನ್ನು ನಿರ್ವಹಿಸುವ ಹೊಣೆಯನ್ನು ನಿರ್ವಹಿಸುವುದು ಕಷ್ಟವಾಗುತ್ತಿತ್ತು.
>
> ಈ ಎಲ್ಲಾ ಕಾರಣಗಳಿಂದ ಅಮೆರಿಕದ ವಾಣಿಜ್ಯ ಇಲಾಖೆಯ ಅಡಿಯಲ್ಲಿರುವ ನ್ಯಾಷನಲ್
> ಟೆಲಿಕಮ್ಯುನಿಕೇಷನ್ ಅಂಡ್ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್ ಎಂಬ ಸಂಸ್ಥೆ ಇಂಟರ್ನೆಟ್‌ನ
> ವಿಳಾಸ ಪುಸ್ತಕವನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಸ್ತಾವನೆಯೊಂದನ್ನು ಮುಂದಿಟ್ಟಿತು.
> ಇದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಅನುಲಕ್ಷಿಸಿ 1998ರಲ್ಲಿ ಐಕ್ಯಾನ್‌ನ ಸ್ಥಾಪನೆಯಾಯಿತು.
> ಅಮೆರಿಕದ ವಾಣಿಜ್ಯ ಇಲಾಖೆ ಐದು ವರ್ಷಗಳ ಅವಧಿಗೆ ಇಂಟರ್ನೆಟ್ ವಿಳಾಸ ಪುಸ್ತಕದ
> ನಿರ್ವಹಣೆಯನ್ನು ಈ ಸಂಸ್ಥೆ ಮಾಡಬಹುದು ಎಂಬ ಕರಾರು ಮಾಡಿಕೊಂಡು ಅನುಮತಿ ನೀಡಿತು.
>
> ಐಕ್ಯಾನ್ ಆಗಲೂ ಮತ್ತು ಈಗಲೂ ಒಂದು ಕ್ಯಾಲಿಫೋರ್ನಿಯಾ ರಾಜ್ಯದ ಕಾನೂನಿನ ಅಡಿಯಲ್ಲಿ
> ರೂಪುಗೊಂಡಿದ್ದ ಸರ್ಕಾರೇತರ ಸಂಸ್ಥೆ. ಐದು ವರ್ಷಗಳಲ್ಲಿ ಇದು ಜಾಗತಿಕ ಬಹುಪಾಲುದಾರರ
> ನಿಯಂತ್ರಣವಿರುವ ಸಂಸ್ಥೆಯಾಗಿ ಬದಲಾಗಬೇಕು ಎಂಬುದನ್ನು ಅಂದೇ ನಿರ್ಧರಿಸಲಾಗಿತ್ತಾದರೂ
> ಅಮೆರಿಕದ ರಾಜಕಾರಣದೊಳಗಿನ ಎಳೆದಾಟಗಳು ಇದನ್ನು ಸಾಧ್ಯ ಮಾಡಲೇ ಇಲ್ಲ.
>
> ಇಂಟರ್ನೆಟ್‌ನ ವಿಳಾಸ ಪುಸ್ತಕವನ್ನು ನಿಯಂತ್ರಿಸುವಲ್ಲಿ ಅಮೆರಿಕದ್ದೇ ಕೊನೆಯ
> ಮಾತಾಗಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಆಗಿನಿಂದಲೂ ಇತ್ತು. ಇದಕ್ಕೆ ನಿಜವಾದ ವೇಗ
> ದೊರೆತದ್ದು ಅಮೆರಿಕದ ಗುಪ್ತಚರ ಸಂಸ್ಥೆಗಳು ಹೇಗೆ ಇಂಟರ್ನೆಟ್‌ನಲ್ಲಿ ನಡೆಯುತ್ತಿರುವ
> ಸಂವಹನದ ಮೇಲೆ ನಿಗಾ ಇಡುತ್ತಿವೆ ಎಂಬ ವಿವರಗಳು ಬಯಲಾದ ನಂತರ. ಎಡ್ವರ್ಡ್ ಸ್ನೋಡೆನ್ ಈ
> ವಿವರಗಳನ್ನು ಬಹಿರಂಗ ಪಡಿಸಿದ ನಂತರ ಐಕ್ಯಾನ್ ಅಮೆರಿಕ ಸರ್ಕಾರದ ನಿಯಂತ್ರಣದಲ್ಲಿ ಇರಬಾರದು
> ಎಂಬ ವಾದ ಹೆಚ್ಚು ಪ್ರಬಲವಾಯಿತು.
>
> ಭಾರತ, ಬ್ರೆಝಿಲ್ ಮತ್ತು ಚೀನಾಗಳು ಈ ವಿಷಯದಲ್ಲಿ ಬಹಳ ಕಠಿಣವಾದ ನಿಲುವನ್ನೇ ತಳೆದವು.
> ಎಲ್ಲಿಯ ತನಕ ಎಂದರೆ ಇಂಟರ್ನೆಟ್‌ನ ಜಾಗತಿಕ ವಿಳಾಸ ಪುಸ್ತಕದ ಪರಿಕಲ್ಪನೆಯನ್ನೇ ಅಡಿಮೇಲು
> ಮಾಡಿಬಿಡುವ ತನಕ ಈ ವಿರೋಧ ಬೆಳೆಯಿತು. ಈ ಎಲ್ಲಾ ಒತ್ತಡಗಳಿಂದ ಅಮೆರಿಕ ಕೂಡಾ
> ಬಗ್ಗಬೇಕಾಯಿತು. ಇದೊಂದು ರಾಜತಾಂತ್ರಿಕ ಸಮಸ್ಯೆಯನ್ನೇ ತಂದೊಡ್ಡಬಹುದು ಎಂಬುದರಿಂದ ಐಕ್ಯಾನ್
> ಅನ್ನು ಅಮೆರಿಕ ಸರ್ಕಾರದ ನಿಯಂತ್ರಣದಿಂದ ಹೊರ ತರುವ ಪ್ರಕ್ರಿಯೆಗೆ ಸರಿಯಾದ ಚಾಲನೆ
> ದೊರೆಯಿತು. ಸೆಪ್ಟೆಂಬರ್ 30ರಿಂದ ಐಕ್ಯಾನ್ ಒಂದು ಸ್ವತಂತ್ರ ಸರ್ಕಾರೇತರ ಸಂಸ್ಥೆಯಾಯಿತು.
>
> ಅಂದರೆ ಈಗ ಇಂಟರ್ನೆಟ್ ಸಂಪೂರ್ಣ ಸ್ವತಂತ್ರವೇ? ಈ ಪ್ರಶ್ನೆಗೆ ಸರಳ ಉತ್ತರವಿಲ್ಲ.
> ತಾಂತ್ರಿಕವಾಗಿ ನೋಡಿದರೆ ಈ ಹಿಂದೆಯೂ ಇಂಟರ್ನೆಟ್ ಬಹುತೇಕ ಸ್ವತಂತ್ರವಾಗಿಯೇ ಇತ್ತು.
> ಇಂಟರ್ನೆಟ್ ವಿಳಾಸಗಳಿಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರಕ್ಕೆ ಬಹುದೊಡ್ಡ ನಿಯಂತ್ರಣವೇನೂ
> ಇರಲಿಲ್ಲ. ಐಕ್ಯಾನ್ ಜೊತೆಗೆ ಸರ್ಕಾರದ ಕರಾರೊಂದು ನವೀಕರಣಗೊಳ್ಳುತ್ತಿತ್ತು ಎನ್ನುವುದನ್ನು
> ಹೊರತು ಪಡಿಸಿದರೆ ಬೇರೇನೂ ಇರಲಿಲ್ಲ. ಅಮೆರಿಕದ ಕೆಲವು ಸೆನೆಟರ್‌ಗಳು ಐಕ್ಯಾನ್ ಮೇಲಿನ
> ನಿಯಂತ್ರಣವನ್ನು ಬಿಟ್ಟುಕೊಡುತ್ತಿರುವುದರ ವಿರುದ್ಧ ಇದ್ದರು.
>
> ಅವರು ವಿರೋಧ ಇನ್ನೂ ಮುಂದುವರಿದಿದೆ. ಈ ಕುರಿತಂತೆ ಹಲವು ಮೊಕದ್ದಮೆಗಳನ್ನು ಹೂಡಿ ಇಡೀ
> ಪ್ರಕ್ರಿಯೆಯನ್ನು ನಿಧಾನಗೊಳಿಸುವ ಕೆಲಸವೂ ನಡೆಯಿತು. ಅವರು ಮುಂದಿಡುತ್ತಿರುವ ವಾದದಂತೆ
> ಐಕ್ಯಾನ್ ಸ್ವತಂತ್ರವಾದರೆ ರಷ್ಯಾ, ಚೀನಾ ಮತ್ತು ಸೌದಿ ಅರೇಬಿಯಾದಂಥ ರಾಷ್ಟ್ರಗಳು ತಮ್ಮ
> ಬಲವನ್ನು ಉಪಯೋಗಿಸಿ ಇಂಟರ್ನೆಟ್ ಅನ್ನು ನಿಯಂತ್ರಿಸಲು ಹೊರಡುತ್ತವೆ. ಅಭಿವ್ಯಕ್ತಿ
> ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ
>
> ಇದು ಅನಗತ್ಯ ಭಯ. ಐಕ್ಯಾನ್‌ ನಿರ್ವಹಣೆಗೂ ಇಂಟರ್ನೆಟ್‌ನಲ್ಲಿರುವ ಅಭಿವ್ಯಕ್ತಿ
> ಸ್ವಾತಂತ್ರ್ಯಕ್ಕೂ ಹೆಚ್ಚಿನ ಸಂಬಂಧವೇನೂ ಇಲ್ಲ. ಚೀನಾ ಈಗಾಗಲೇ ತನ್ನ ಮಹಾಗೋಡೆಯನ್ನು
> ಇಂಟರ್ನೆಟ್ ಜಗತ್ತಿಗೂ ವಿಸ್ತರಿಸಿಕೊಂಡಿದೆ. ಅದು ಮುಂದುವರಿಯಲಿದೆ. ರಷ್ಯಾ, ಸೌದಿ
> ಅರೇಬಿಯಾ, ಉತ್ತರ ಕೊರಿಯಾದಂಥ ದೇಶಗಳು ಇದೇ ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ
> ಮಾಡುತ್ತಿವೆ. ಐಕ್ಯಾನ್‌ ಆಡಳಿತದ ಬದಲಾವಣೆಯಾದ ಮೇಲೂ ಇದು ಮುಂದುವರಿಯುತ್ತದೆ.
>
> ಹಾಗಾದರೆ ಐಕ್ಯಾನ್ ಸ್ವತಂತ್ರವಾದ್ದರಿಂದ ಏನು ಸಂಭವಿಸಿತು? ಈ ಪ್ರಶ್ನೆಗೆ ಇರುವ ಉತ್ತರ:
> ಸಾಂಕೇತಿಕ ಎನ್ನುವ ಮಟ್ಟದಲ್ಲಿ ಇಂಟರ್ನೆಟ್ ಅಮೆರಿಕ ಸರ್ಕಾರದ ನಿಯಂತ್ರಣದಿಂದ ದೂರವಾಯಿತು
> ಎಂಬುದಷ್ಟೇ. ಇದು ಇಂಟರ್ನೆಟ್‌ನ ನಿರ್ವಹಣೆಯನ್ನು ಸ್ವತಂತ್ರವಾದ ಜಾಗತಿಕ ಸಮುದಾಯಕ್ಕೆ
> ಬಿಟ್ಟು ಕೊಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಐಕ್ಯಾನ್‌ನ ಉತ್ತರದಾಯಿತ್ವ ಮತ್ತು
> ವ್ಯಾಜ್ಯಗಳನ್ನು ಬಗೆಹರಿಸುವುದಕ್ಕೆ ಸಂಬಂಧಿಸಿದ ನೀತಿಗಳು ಈ ಹಿಂದೆಯೂ ಸ್ಪಷ್ಟವಾಗಿರಲಿಲ್ಲ.
> ಈಗಲೂ ಸ್ಪಷ್ಟವಾಗಿಲ್ಲ. ಸದ್ಯದ ಮಟ್ಟಿಗೆ ವ್ಯಾಜ್ಯಗಳೂ ಕ್ಯಾಲಿಫೋರ್ನಿಯಾ ರಾಜ್ಯದೊಳಗೆ
> ಬಗೆಹರಿಸಬೇಕಾಗುತ್ತದೆ. ಹಾಗೆಯೇ ಇಂಥ ವ್ಯಾಜ್ಯಗಳು ಹಾಗೂ ದೂರುಗಳು ಬಂದಾಗ ಅದನ್ನು ಈ
> ಹಿಂದೆಯೂ ಐಕ್ಯಾನ್ ಸರಿಯಾಗಿ ನಿರ್ವಹಿಸಿರಲಿಲ್ಲ. ಅದೇ ಸ್ಥಿತಿ ಇನ್ನೂ ಮುಂದುವರಿಯಬಹುದು
> ಎಂಬಂತೆಯೇ ಕಾಣಿಸುತ್ತದೆ.
>
> ತಾಂತ್ರಿಕವಾಗಿ ನೋಡಿದರೆ ಐಕ್ಯಾನ್ ಈಗಲೂ ಅಮರಿಕದ ಕಾನೂನಿನ ಅಡಿಯಲ್ಲೇ
> ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ವಿಳಾಸಗಳಿಗೆ ಸಂಬಂಧಿಸಿದ ವ್ಯಾಜ್ಯಗಳೆಲ್ಲವೂ
> ಅಂತಾರಾಷ್ಟ್ರೀಯ ಸ್ವರೂಪವು. ನಿರ್ದಿಷ್ಟ ವಿಳಾಸಗಳ ಜೊತೆಗೆ ವಿವಿಧ ದೇಶಗಳಲ್ಲಿ
> ನೋಂದಣಿಯಾಗಿರುವ ಬ್ರಾಂಡ್‌ಗಳು, ವಿವಿಧ ಪೇಟೆಂಟ್‌ಗಳು ಹೀಗೆ ಬಹಳ ಸಂಕೀರ್ಣವಾದ
> ವಿಚಾರಗಳಿವೆ. ಈಗಾಗಲೇ ಬೃಹತ್ ಬ್ರಾಂಡ್‌ಗಳ ಹೆಸರಲ್ಲಿ ಇಂಟರ್ನೆಟ್ ವಿಳಾಸವನ್ನು
> ನೋಂದಾಯಿಸಿಕೊಂಡು ಅದನ್ನೇ ಒಂದು ವ್ಯಾಪಾರವನ್ನಾಗಿ ಮಾಡಿಕೊಂಡಿರುವ ವ್ಯವಸ್ಥೆ ಇದೆ. ಇದನ್ನು
> ಮಟ್ಟ ಹಾಕುವುದಕ್ಕೆ ಸದ್ಯದ ಬದಲಾವಣೆಯಿಂದ ಸಾಧ್ಯವಿಲ್ಲ.
>
> ಇಂಟರ್ನೆಟ್ ವ್ಯವಸ್ಥೆಯೆಂಬುದು ಕಳೆದ ಮೂರು ದಶಕಗಳ ಅವಧಿಯಲ್ಲಿ ನಿರೀಕ್ಷೆಗೆ ಮೀರಿ
> ಬೆಳೆದಿದೆ. ಅದನ್ನು ನಿರ್ವಹಿಸುವ ವ್ಯವಸ್ಥೆ ಅಷ್ಟೊಂದು ವೇಗದಲ್ಲಿ ಬೆಳೆಯದೇ ಇರುವುದರಿಂದ ಈ
> ಎಲ್ಲಾ ಸಮಸ್ಯೆಗಳಿವೆ. ಸದ್ಯದ ಬದಲಾವಣೆಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿ ಮುಂದಿನ
> ಬದಲಾವಣೆಗಳಿಗೆ ಒತ್ತಡ ಹೇರುವ ಕೆಲಸ ಇಂಟರ್ನೆಟ್‌ನ ಪಾಲುದಾರರಾಗಿರುವ ಉದ್ಯಮಗಳು,
> ಬಳಕೆದಾರರು ಮತ್ತು ಸರ್ಕಾರದಿಂದ ನಡೆಯಬೇಕಾಗಿದೆ. ಹಾಗಾದಾಗ ನಿರ್ವಹಣಾ ತಂತ್ರ ಕೂಡಾ
> ತಂತ್ರಜ್ಞಾನದ ಜೊತೆಗೇ ವಿಕಾಸವಾಗುವಂಥ ಸುಸ್ಥಿರ ಮಾದರಿಯೊಂದನ್ನು ಕಂಡುಕೊಳ್ಳಲು ಸಾಧ್ಯವಿದೆ.
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to