Nice
On Oct 12, 2016 5:37 PM, "Girish T P" <girisht...@gmail.com> wrote:

> ಮಕ್ಕಳಲ್ಲಿ 'ಸರ್ವಾಂಗೀಣ/ಸರ್ವತೋಮುಖ ಅಭಿವೃದ್ಧಿ/ವಿಕಾಸವೆಂದರೆ..
>
> ಮಕ್ಕಳಲ್ಲಿ ಪಂಚಮುಖಿ ಬೆಳವಣಿಯಾಗಬೇಕು.
>
> ೧. ಶಾರೀರಿಕವಾಗಿ
> ೨. ಬೌದ್ಧಿಕವಾಗಿ
> ೩. ಭಾವನಾತ್ಮಕವಾಗಿ
> ೪. ಸಾಮಾಜಿಕವಾಗಿ
> ೫. ನೈತಿಕವಾಗಿ
>
> ೧. ಶಾರೀರಿಕ
>
> ಒಳ್ಳೆಯ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ಪರಿಸರ ಶಾರೀರಿಕ ಬೆಳವಣಿಗೆಗೆ ಬುನಾದಿ.
> ಮಧ್ಯಾಹ್ನದ ಬಿಸಿಯೂಟ ಯೋಜನೆ,
> ಯೋಗ ಮತ್ತು ಕ್ರೀಡೆ,
> ಸ್ವಚ್ಚತಾ ಕೆಲಸಗಳು & ಉತ್ತಮ ಭೌತಿಕ ಸಂಪನ್ಮೂಲಗಳು ಶಾರೀರಿಕ ಬೆಳವಣಿಗೆಗೆ ನಮ್ಮ
> ಶಾಲೆಯಲ್ಲಿರುವ ಅವಕಾಶಗಳು.
>
> ೨. ಬೌದ್ಧಿಕತೆ
>
> ಗರಿಷ್ಠ ಪ್ರಚೋದನೆ ಮತ್ತು ಶಿಕ್ಷಣ ಬೌದ್ಧಿಕ ಬೆಳವಣಿಗೆಗೆ ಸಹಕಾರಿ.
> ಮಕ್ಮಳು ಕಲಿಯುತ್ತಿಲ್ಲವೆಂದಾದಲ್ಲಿ ನಾವು ಮಕ್ಕಳನ್ನು ಕಲಿಕೆಯೆಡೆಗೆ ಪ್ರೇರೆಪಿಸುವಲ್ಲಿ
> ಯಶಸ್ವಿಯಾಗಿಲ್ಲವೆಂದೇ ಅರ್ಥ.
>
> ಕೆಳಗಿನ ಶಾಲೆಗಳಿಂದ ಮಕ್ಕಳು ಏನೂ ಕಲಿಯದೇ ಬರುತ್ತಾರೆ ಎಂಬ ಕಾರಣ ತೀರಾ ಹಳತಾದುದು. ಈಗ
> ಅದು ನೆಪವಷ್ಟೇ.
> ಪರಿಹಾರ ಬೋಧನೆ ಎಂಬ ಚಿಕಿತ್ಸಕ ಶೈಕ್ಷಣಿಕ ಉಪಕಾರ್ಯಕ್ರಮದ ಬಗ್ಗೆ ಹೆಚ್ಚಿನವರಲ್ಲಿ
> ನಕಾರಾತ್ಮಕ ಭಾವನೆಯೇ  ಮೈದಳೆದಿರುವಾಗ ಮಕ್ಕಳನ್ನು ಬೌದ್ಧಿಕವಾಗಿ ಸಶಕ್ತಗೊಳಿಸುವುದು ಹೇಗೆ ?
>
> ೩. ಭಾವನಾತ್ಮಕತೆ.
>
> ಪ್ರೀತಿ, ಆಸರೆ, ಸುರಕ್ಷಿತ ಭಾವನೆ, ಹಿತಕಾರಿಯಾದ ಜನ, ಆತ್ಮೀಯತೆ ಮತ್ತು ಆಪ್ತತೆಯ
> ವಾತಾವರಣ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿ.
>
> ಸಾಧ್ಯವಾದಷ್ಟು ಮಟ್ಟಿಗೆ ಶಾಲೆಯಲ್ಲಿರುವ ಎಲ್ಲಾ ಮಕ್ಕಳ ಹೆಸರಾದರೂ ತಿಳಿದಿರಬೇಕು, ಮಕ್ಕಳ
> ಕುಶಲಕ್ಷೇಮ ವಿಚಾರಿಸಿಕೊಳ್ಳಬೇಕು, ಆಗಾಗ್ಗೆ ವೈಯಕ್ತಿಕವಾಗಿ ಮಾತನಾಡಿಸಬೇಕು
> ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದ, ಭಾಗವಹಿಸಲು ಹಿಂಜರಿಯುವ
> ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು.
> ಮಕ್ಕಳ ಇಷ್ಟ-ಕಷ್ಟಗಳ ಬಗೆಗಿನ ಅರಿವು ಬೆಳೆಸಿಕೊಳ್ಳಬೇಕು.
>
> ೪. ಸಾಮಾಜಿಕತೆ
>
> ಸೌಹಾರ್ದ ಸಂಬಂಧ, ಮಾದರಿ ಪಾತ್ರಗಳು, ಒಳ್ಳೆಯ ತರಬೇತಿ, ಶ್ರೇಷ್ಠ ನಡವಳಿಕೆಗಳ ಪ್ರದರ್ಶನ
> ಮಕ್ಕಳ ಸಮಾಜಿಕ ಬೆಳವಣಿಗೆಗೆ ಕಾರಣವಾಗಬಲ್ಲದು.
>
> ವಿವಿಧ ಸಮಾಜಿಕ ಹಿನ್ನಲೆಯುಳ್ಳ ಮಕ್ಕಳ ಮನೆಗಳ ಪರಸ್ಪರ ಭೇಟಿ ಇದಕ್ಕೆ ಪೂರಕವಾಗಬಲ್ಲದು.
> ವಿವಿಧ ಸಮುದಾಯಗಳ ವಿಭಿನ್ನ ಆಚರಣೆಗಳ ಪರಿಚಯ ಮತ್ತು ಅವುಗಳಲ್ಲಿ ಭಾಗವಹಿಸುವುದು ಸಹ
> ಸಮಾಜಿಕ ಬೆಳವಣಿಗೆಗೆ ಪ್ರೇರಕವಾಗಬಲ್ಲದು.
>
> ೫. ನೈತಿಕತೆ
>
> ಸರಿ-ತಪ್ಪುಗಳ ಸರಿಯಾದ ವ್ಯಾಖ್ಯಾನ,
> ನ್ಯಾಯ, ಧರ್ಮಗಳ ಬಗ್ಗೆ ಅರಿವು,
> ಸ್ವಹಿತಕ್ಕಿಷ್ಟು-ಪರಹಿತಕ್ಕಿಷ್ಟು ಪ್ರಾಮುಖ್ಯತೆ ಬಗೆಗಿನ ತಿಳಿವು ನೈತಿಕ ವಿಕಾಸಕ್ಕೆ
> ನೆರವಾಗಬಲ್ಲದು.
>
> ಉತ್ತಮ ಚಿತ್ರಗಳನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡುವುದು,
> ಕಥೆಗಳನ್ನು ಹೇಳುವುದು ಮತ್ತು ಹೇಳಿಸುವುದು,
> ತಪ್ಪಿತಸ್ಥ ಮಕ್ಕಳನ್ನು ತಿದ್ದುವ ರೀತಿ ನೈತಿಕತೆ ಬೆಳೆಸುವಲ್ಲಿ ಪ್ರಮುಖವಾಗುತ್ತವೆ.
> .........................................................
> ಈ ಮೇಲಿನ ಐದು ಅಂಶಗಳ ಬೆಳವಣಿಗೆ ಮತ್ತು ವಿಕಾಸಕ್ಕೆ ಶಾಲೆಯಲ್ಲಿ ಇರುವ ವಿನೂತನ
> ಆಯಾಮಗಳನ್ನು, ಅವಕಾಶಗಳನ್ನು ಸ್ನೇಹಿತರು, ಹಿರಿಯರು ಪರಿಚಯ ಮಾಡಿಕೊಡಿ.
>
> 'ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನಿರ್ಮಾಣವಾಗುತ್ತದೆ.'
>
> ಸದೃಢವಾದ
> ಶಾರೀರಿಕತೆ, ಬೌದ್ಧಿಕತೆ, ಭಾವನಾತ್ಮಕತೆ, ಸಮಾಜಿಕತೆ ಮತ್ತು ನೈತಿಕತೆ
>
> ನಿರ್ಮಿಸುವಲ್ಲಿ ನೀವುಗಳು ನಿಮ್ಮ ಶಾಲೆಯಲ್ಲಿ ಜಾರಿಗೊಳಿಸಿರುವ, ಜಾರಿಗೊಳಿಸಬೇಕೆಂದಿರುವ
> ವಿನೂತನ ಕ್ರಮಗಳ ಬಗ್ಗೆ ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳಿರಿ.
> -----------------------------------------------------
>
> ಇತ್ತೀಚಿನ ದಿನಗಳಲ್ಲಿ ನಾವುಗಳು, ಪಾಲಕ-ಪೋಷಕರು ಬೌದ್ಧಿಕ ಬೆಳವಣಿಗೆಗೆ ಮಾತ್ರ ಹೆಚ್ಚಿನ
> ಒತ್ತಾಸೆ ನೀಡುತ್ತಿದ್ದೆವೆ.
> ಮಕ್ಕಳು ಪರೀಕ್ಷೆಯಲ್ಲಿ ಗಳಿಸುವ ಫಲಿತಾಂಶ, ಅಂಕಗಳ ಮೇಲೆಯೇ ನಮಗೆ ಹೆಚ್ಚಿನ ಗಮನ.
> ಉದಾಹರಣೆಗೆ: ಇತ್ತೀಚೆಗೆ ಕ್ರೀಡೆ, ಪ್ರತಿಭಾಕಾರಂಜಿ ಕಾರ್ಯಕ್ರಮಗಳು ಮುಗಿದವು.
> ಹೆಚ್ಚು-ಕಡಿಮೆ ಆ ಕ್ಷಣದಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದ್ದೆವೆ.
> ಆ ಎಲ್ಲಾ ಸ್ಪರ್ಧೆಗಳು, ಕಾರ್ಯಕ್ರಮಗಳು ಮುಗಿದ ಮೇಲೆ
> 'ಈ ಹಾಳಾದ್ದೂ sports, ಪ್ರತಿಭಾ ಕಾರಂಜಿಯಿಂದ syllabus cover ಆಗಲೇ ಇಲ್ಲ, ಮುಗೀಲೆ
> ಇಲ್ಲ'
> ಎಂದೂ ಗೊಣಗಿದ್ದೇವೆ.
>
> ನಮ್ಮ ಹೆಚ್ಚಿನ ಶಿಕ್ಷಕರ ಬಾಯಿಂದ ಬರುವುದು
> 'ಡಿಸೆಂಬರ್ ಹೊತ್ತಿಗೆ Syllabus Cover ಮಾಡಬೇಕು, ಮುಗಿಸಬೇಕು' ಅಂತಾ.
> Actually Syllabus has to be open in front of students and not be covered.
>
> ನಾವು ಬೌದ್ಧಿಕತೆ ಕುರಿತಂತೆ ಈ ರೀತಿಯಲ್ಲಿ ಅವೈಜ್ಞಾನಿಕವಾಗಿ ಹೆಚ್ಚಿನ ಆಕ್ರಮಣಶೀಲ
> ಒತ್ತಾಸೆ ನೀಡುತ್ತಿರುವುದರಿಂದ ಸಾಕಷ್ಟು ಮಕ್ಕಳು ನಕಾರಾತ್ಮಕ ಭಾವನೆಗಳಿಂದ ಬಳಲುವರು.
> ಇತರರೊಡನೇ ಹೊಂದಿಕೊಳ್ಳುವದೇ, ಹಂಚಿಕೊಳ್ಳದೇ ಸ್ವಾರ್ಥಿಗಳಾಗುತ್ತಿದ್ದಾರೆ.
>
> ಗುರಿ ಮುಖ್ಯವೇ ಹೊರತು ಮಾರ್ಗ ಮುಖ್ಯವಲ್ಲ ಎಂಬ ಧೋರಣೆ ಬೆಳೆಸಿಕೊಳ್ಳುತ್ತಿದ್ದಾರೆ.
> SSLC ಪರೀಕ್ಷಾ ರೀತಿ-ನೀತಿಗಿಂತ ಬೇರೆ ಉದಾಹರಣೆ ಬೇಕಿಲ್ಲ.
> ಎಳವೆಯಲ್ಲಿ ಕಂಡ ರುಚಿ‌‌ಗಾಗಿ ಜೀವನದ ಉದ್ದಕ್ಕೂ ಹಂಬಲಿಸುತ್ತಾರೆ.
>
> ಹೀಗೆ ಮುಂದುವರೆದಲ್ಲಿ
> ಮಕ್ಕಳಲ್ಲಿ/ಹದಿಹರೆಯದವರಲ್ಲಿ ಆನೇಕಾನೇಕ ನಡವಳಿಕೆ ದೋಷಗಳು ಕಂಡು ಬರುತ್ತವೆ, ಅವರಲ್ಲಿ
> ಕೀಳರಿಮೆ, ಆಕ್ರಮಣಶೀಲತೆ, ಆತ್ಮಹತ್ಯೆಯಂತಹ  ದುರಾಲೋಚನೆಗಳು, ಸಮಾಜ ವಿರೋಧಿ ಭಾವನೆಗಳು
> ಕಂಡುಬರುತ್ತಿವೆ.
>
> ಈ ಹಿನ್ನಲೆಯಲ್ಲಿ ಪೋಷಕರಾಗಿ, ಶಿಕ್ಷಕರಾಗಿ, ಅದರಲ್ಲೂ ಒಂದು ಶಾಲೆಯ ಮುಖ್ಯಸ್ಥರಾಗಿ
> ಪ್ರಸ್ತುತ ಸನ್ನಿವೇಶದಲ್ಲಿ‌ ನಮ್ಮ ಜವಬ್ದಾರಿ ಮತ್ತು ಹೊಣೆಗಾರಿಕೆಗಳು ಹೆಚ್ಚಿನದಾಗಿವೆ.
> ನಾವು ಮಕ್ಕಳ ಮನೋವಿಜ್ಞಾನದ ಕುರಿತು ಹೆಚ್ಚಿನ ಜ್ಞಾರ್ನಾಜನೆ ಮಾಡಬೇಕಾಗಿದೆ.
>
> - ಗಿರೀಶ ಟಿ. ಪಿ.
> ಸ.ಪ್ರೌ.ಶಾಲೆ, ಹಾದೀಕೆರೆ, ತರೀಕೆರೆ ತಾ.
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to