It.'s a good article

sura
On Nov 4, 2016 6:54 AM, "HAREESHKUMAR K Agasanapura" <[email protected]>
wrote:

> http://m.prajavani.net/article/2016_11_04/449610
>
> *ಉಳಿಸಬೇಕಿದೆ ‘ವಿಜ್ಞಾನ ರಾಜಧಾನಿ’ ಪಟ್ಟ!*
>
> ಭಾರತೀಯ ವಿಜ್ಞಾನ ಸಂಸ್ಥೆಯ ಕಟ್ಟಡ
>
> Previous <http://m.prajavani.net/article/2016_11_04/449610#>Next
> <http://m.prajavani.net/article/2016_11_04/449610#>
>
> 4 Nov, 2016
>
> ಪ್ರಜಾವಾಣಿ ವಾರ್ತೆ
>
>
> <https://www.facebook.com/sharer/sharer.php?u=https%3A%2F%2Fgoo.gl%2FjnHTkS>
> <https://twitter.com/intent/tweet?text=%E0%B2%89%E0%B2%B3%E0%B2%BF%E0%B2%B8%E0%B2%AC%E0%B3%87%E0%B2%95%E0%B2%BF%E0%B2%A6%E0%B3%86+%E2%80%98%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%B0%E0%B2%BE%E0%B2%9C%E0%B2%A7%E0%B2%BE%E0%B2%A8%E0%B2%BF%E2%80%99+%E0%B2%AA%E0%B2%9F%E0%B3%8D%E0%B2%9F%21+https%3A%2F%2Fgoo.gl%2FjnHTkS>
> <https://plus.google.com/share?url=https%3A%2F%2Fgoo.gl%2FjnHTkS>
> <http://www.pinterest.com/pin/find/?url=https%3A%2F%2Fgoo.gl%2FjnHTkS>
> <http://www.linkedin.com/shareArticle?mini=true&title=%E0%B2%89%E0%B2%B3%E0%B2%BF%E0%B2%B8%E0%B2%AC%E0%B3%87%E0%B2%95%E0%B2%BF%E0%B2%A6%E0%B3%86+%E2%80%98%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%B0%E0%B2%BE%E0%B2%9C%E0%B2%A7%E0%B2%BE%E0%B2%A8%E0%B2%BF%E2%80%99+%E0%B2%AA%E0%B2%9F%E0%B3%8D%E0%B2%9F%21+&url=https%3A%2F%2Fgoo.gl%2FjnHTkS>
>
> *ಕನ್ನಡದಲ್ಲೇ ಬೇಕು ಮಾಧ್ಯಮಿಕ ಶಿಕ್ಷಣ*
> *ಮಾತೃಭಾಷೆಯಲ್ಲಿ ಓದಿದರೆ ವಿಜ್ಞಾನ ರಂಗಕ್ಕೆ ಧುಮುಕುವುದು ಕಷ್ಟ ಎಂಬ ಅಭಿಪ್ರಾಯ ಬಹುತೇಕ
> ಪಾಲಕರಲ್ಲಿದೆ. ಆದರೆ, ಇಂತಹ ಆತಂಕಕ್ಕೆ ಯಾವುದೇ ಕಾರಣವಿಲ್ಲ. ಮಾಧ್ಯಮಿಕ ಶಿಕ್ಷಣದವರೆಗೆ
> ಮಾತೃಭಾಷೆಯೇ ಕಲಿಕಾ ಮಾಧ್ಯಮವಾದರೆ ಮಕ್ಕಳಿಗೆ ಗ್ರಹಿಕೆ ಸುಲಭ. ನಾನು ವಿಜ್ಞಾನದಲ್ಲಿ
> ಇವತ್ತು ಏನಾದರೂ ಸಾಧನೆ ಮಾಡಿದ್ದರೆ ಮಾಧ್ಯಮಿಕ ಶಿಕ್ಷಣದವರೆಗೆ ನನಗೆ ಮಾತೃಭಾಷೆಯಾದ
> ಕನ್ನಡದಲ್ಲಿ ಶಿಕ್ಷಣ ದೊರೆತದ್ದೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ಹೈಸ್ಕೂಲ್‌ ಹೆಡ್‌
> ಮಾಸ್ಟರ್‌ ಆಗಿದ್ದ ನಮ್ಮಪ್ಪ, ‘ಇಂಗ್ಲಿಷ್‌ ಭಾಷೆಯನ್ನು ಕಲಿತುಕೊ. ಆದರೆ, ಕನ್ನಡ
> ಮಾಧ್ಯಮದಲ್ಲೇ ಓದು’ ಎಂದು ಹೇಳಿದ್ದರು. ರಾಜ್ಯದ ಜನರಿಗೆ ನನ್ನ ಹಿತವಚನವೂ ಅದೇ: ಮಕ್ಕಳಿಗೆ
> ಇಂಗ್ಲಿಷ್‌ ಭಾಷೆಯನ್ನು ಖಂಡಿತವಾಗಿ ಕಲಿಸಿ, ಹೈಸ್ಕೂಲ್‌ವರೆಗೆ ಕನ್ನಡದಲ್ಲೇ ಶಿಕ್ಷಣ
> ಕೊಡಿಸಿ. ವಿಜ್ಞಾನದ ಆಳವನ್ನು ಅರಗಿಸಿಕೊಳ್ಳಲು ತಕ್ಕ ಬುನಾದಿಯನ್ನು ಅದು ಹಾಕುತ್ತದೆ.*
>
>
>
> ನಮ್ಮ ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಎರಡು ‘ದಕ್ಷಿಣ ಕೊರಿಯಾ’ಗಳನ್ನೇ
> ಸೃಷ್ಟಿಸಬಹುದು, ಗೊತ್ತೆ? ಆದರೆ, ಆ ಪುಟ್ಟ ದೇಶ ಸಂಶೋಧನಾ ಕ್ಷೇತ್ರದ ಹೂಡಿಕೆಯಲ್ಲಿ
> ‘ನೂರಾರು ಕರ್ನಾಟಕ’ಗಳ ಸಾಧನೆಯನ್ನು ಮೀರಿ ನಿಂತಿದೆ. ವಿಜ್ಞಾನ ಕ್ಷೇತ್ರದಲ್ಲಿ ನಾವು ಹಿಂದೆ
> ಬಿದ್ದಿದ್ದೇವೆ ಎನ್ನುವ ಮಾತು ಕೇಳಿಬಂದಾಗಲೆಲ್ಲ ಈ ಎರಡೂ ಅಂತರಗಳ ಚಿತ್ರಣ ಮನದಂಗಳದಲ್ಲಿ
> ಥಟ್ಟಂತ ಮೂಡುತ್ತದೆ.
>
>
>
> ‘ರಾಜ್ಯದಲ್ಲಿ ವಿಜ್ಞಾನದ ಅಭಿವೃದ್ಧಿಗೆ ನಾವೀಗ ಏನು ಮಾಡಬೇಕು’ ಎನ್ನುವ ಪ್ರಶ್ನೆಗೆ ಬಳಿಕ
> ಬರೋಣ. ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ; ರಾಜ್ಯದಲ್ಲಿ ಆಧುನಿಕ ವಿಜ್ಞಾನಕ್ಕೆ ನೂರು
> ವರ್ಷಗಳ ಇತಿಹಾಸ ಉಂಟು. ಭಾರತದಲ್ಲಿ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಜಮ್‌ಶೆಡ್‌ಜಿ
> ಟಾಟಾ ಅವರು ಬ್ರಿಟಿಷ್‌ ಆಡಳಿತದ ಮುಂದೆ ಪ್ರಸ್ತಾವ ಇಟ್ಟಾಗ, ಸಾರಾಸಗಟಾಗಿ
> ತಿರಸ್ಕರಿಸಲಾಯಿತು. ಆದರೆ, ಟಾಟಾ ಅಷ್ಟಕ್ಕೆ ಬಿಡಲಿಲ್ಲ. ಮತ್ತೆ ಮನವಿ ಸಲ್ಲಿಸಿದರು. ಆ
> ಮನವಿ ಕುರಿತಂತೆ ಪರಿಶೀಲಿಸಲು ರಾಯಲ್‌ ಸೊಸೈಟಿಯ ಸದಸ್ಯರಾಗಿದ್ದ ಸರ್‌ ವಿಲಿಯಂ ರಾಮ್ಸೆ ಅವರ
> ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು.
>
>
>
> ಭಾರತಕ್ಕೆ ವಿಜ್ಞಾನ ಸಂಸ್ಥೆಯೊಂದರ ಅಗತ್ಯವಿದೆ ಎಂಬ ವರದಿಯನ್ನು ಆ ಸಮಿತಿ ನೀಡಿತು.
> ಹಾಗಾದರೆ ಆ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸುವುದು ಎಂಬ ಪ್ರಶ್ನೆ ಎದುರಾದಾಗ, ಬೆಂಗಳೂರಿನ
> ಜತೆಗೆ ಸ್ಪರ್ಧೆ ಒಡ್ಡಿದ್ದು ಈಗಿನ ಉತ್ತರಾಖಂಡದ ರೂರ್ಕಿ. ರಾಜರ್ಷಿ ನಾಲ್ವಡಿ ಕೃಷ್ಣರಾಜ
> ಒಡೆಯರ್‌ ಅವರು ಬೆಂಗಳೂರಿನಲ್ಲಿ 371 ಎಕರೆ ಭೂಮಿ ಕೊಟ್ಟಿದ್ದಲ್ಲದೆ ನೀರು–ವಿದ್ಯುತ್‌
> ಸೌಲಭ್ಯವನ್ನೂ ಕಲ್ಪಿಸಲು ಮುಂದೆ ಬಂದಿದ್ದರಿಂದ ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರವಾದ
> ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕನ್ನಡ ನಾಡಿನಲ್ಲಿ ತಲೆ ಎತ್ತುವಂತಾಯಿತು. ಈ
> ಹೆಮ್ಮೆಯ ಕೇಂದ್ರದ ಮಕ್ಕಳಂತೆ ದೇಶದ ಹಲವೆಡೆ ವಿವಿಧ ಸಂಶೋಧನಾ ಸಂಸ್ಥೆಗಳು
> ಸ್ಥಾಪನೆಯಾಗಿದ್ದು ಈಗ ಇತಿಹಾಸ.
>
>
>
> ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿಬಂದಿದ್ದ ಬಿ.ಎ. ರಾವ್‌ ಎಂಬುವರು
> ಮೈಸೂರು ಸಂಸ್ಥಾನದ ಆರೋಗ್ಯ ಇಲಾಖೆಯಲ್ಲಿದ್ದರು. ಮೈಸೂರು ರಾಜ್ಯದಲ್ಲಿ ಮಲೇರಿಯಾ
> ಉಲ್ಬಣಿಸಿದಾಗ ಲಾರ್ವಾಗಳನ್ನು ನಾಶಮಾಡಲು ವಿಶೇಷ ತಳಿಯ ಮೀನು ತರಿಸಿ ಪ್ರತಿ ಹಳ್ಳಿಯ ಕೆರೆಗೂ
> ಬಿಟ್ಟರು. ಮಲೇರಿಯಾ ನಿರ್ಮೂಲನಾ ಅಧಿಕಾರಿಯಾಗಿ ದೇಶದ ತುಂಬಾ ಹೆಸರು ಮಾಡಿದರು.
>
> ಸರಿಸುಮಾರು ಅದೇ ಸಂದರ್ಭದಲ್ಲಿ ಮೈಸೂರು ಸಂಸ್ಥಾನ ಕುಟುಂಬ ಯೋಜನೆಯನ್ನೂ ಜಾರಿಗೊಳಿಸಿತು.
> ಸಿ.ವಿ. ನಟರಾಜನ್‌ ಎಂಬುವರನ್ನು ಈ ಯೋಜನೆಗೆ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಲಾಯಿತು.
> ಸರ್‌ ಎಂ. ವಿಶ್ವೇಶ್ವರಯ್ಯನವರು ಕಾಗದ ಕಾರ್ಖಾನೆ, ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ,
> ಕನ್ನಂಬಾಡಿ ಅಣೆಕಟ್ಟು ಕಟ್ಟಿದರು. ಮೊದಲ ಬಾರಿಗೆ ಜಲ ವಿದ್ಯುತ್‌ ಉತ್ಪಾದನೆ ಆರಂಭಿಸಿದ್ದು
> ಸಹ ಇದೇ ಸಂಸ್ಥಾನದಲ್ಲಿ. ಈ ಸಂಗತಿಗಳಲ್ಲಿ ದೊಡ್ಡ ವಿಜ್ಞಾನವೇನೂ ಇಲ್ಲ. ಆದರೆ, ಆಗಿನ
> ಆಡಳಿತಗಾರರು ತೋರಿದ ವೈಜ್ಞಾನಿಕ ಮನೋಭಾವ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿತ್ತು.
>
>
>
> ಬೆಂಗಳೂರು ಹಿಂದೆಯೂ ದೇಶದ ‘ವಿಜ್ಞಾನ ರಾಜಧಾನಿ’ಯಾಗಿತ್ತು. ಈಗಲೂ ಅದೇ ಕಿರೀಟ ತೊಟ್ಟಿದೆ.
> ಮತ್ತೆ, ಸದ್ಯದ ಭವಿಷ್ಯದಲ್ಲಿ ಆ ಪಟ್ಟ ಅಬಾಧಿತ. ನಾನು ವಿದ್ಯಾರ್ಥಿಯಾಗಿದ್ದಾಗ ಇಡೀ ಮೈಸೂರು
> ಸಂಸ್ಥಾನದಲ್ಲಿ ವಿಜ್ಞಾನ ಪದವಿ ಅಧ್ಯಯನಕ್ಕಾಗಿ ಇದ್ದ ಏಕೈಕ ವಿದ್ಯಾಕೇಂದ್ರವಾಗಿತ್ತು
> ಸೆಂಟ್ರಲ್‌ ಕಾಲೇಜು. ತಮ್ಮ ದೈನಂದಿನ ಕೆಲಸ–ಕಾರ್ಯಗಳಿಗೆ ಬೇಕಾದ ವಿದ್ಯಾವಂತರನ್ನು ತಯಾರು
> ಮಾಡುವುದಷ್ಟೇ ಬ್ರಿಟಿಷ್‌ ಆಡಳಿತಗಾರರ ಉದ್ದೇಶವಾಗಿತ್ತು. ವಿಜ್ಞಾನಿಗಳನ್ನು ಬೆಳೆಸುವಂತಹ
> ವ್ಯವಸ್ಥೆ ಕಲ್ಪಿಸಿ ನಮ್ಮನ್ನೆಲ್ಲ ಉದ್ಧಾರ ಮಾಡುವಷ್ಟು ಔದಾರ್ಯ ಆಗ ಎಲ್ಲಿತ್ತು?
>
>
>
> ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ನಾನು ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿ. ನನಗಿನ್ನೂ
> ಚೆನ್ನಾಗಿ ನೆನಪಿದೆ. ‘ಕರ್ನಾಟಕ ಏಕೀಕರಣ ಬೇಕೇ, ಬೇಡವೇ’ ಎಂಬ ವಿಷಯವಾಗಿ ಆಗ ಚರ್ಚಾಕೂಟ
> ನಡೆದಿತ್ತು. ಅದರಲ್ಲಿ ನಾನೂ ಪಾಲ್ಗೊಂಡು ರಾಜ್ಯ ಪರಿಕಲ್ಪನೆಯ ಕುರಿತು ನನ್ನ
> ಪಾಂಡಿತ್ಯವನ್ನು ಪ್ರದರ್ಶಿಸಿದ್ದೆ. ಅದೇ 1956ರಲ್ಲಿ ರಾಜ್ಯ ಉದಯವಾಗುವ ವೇಳೆಗೆ ನಾನು
> ಅಮೆರಿಕದಲ್ಲಿ ಓದುತ್ತಿದ್ದೆ!
>
>
>
> ‘ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕು’ ಎಂಬ ಪ್ರಶ್ನೆಯನ್ನು ನಾವೀಗ
> ಎತ್ತಿಕೊಳ್ಳೋಣ. ಯಾವುದೇ ಕ್ಷೇತ್ರದಲ್ಲಿ ಹಣ ತೊಡಗಿಸುವಾಗ ಮುಂದಿನ ನೂರು ವರ್ಷಗಳ ಗುರಿ
> ಇರಬೇಕು. ಅನುಮಾನವೇ ಇಲ್ಲ, ಶಿಕ್ಷಣ ಹಾಗೂ ಸಂಶೋಧನೆಯಿಂದ ಮಾತ್ರ ಅಪೇಕ್ಷಿತ ಬದಲಾವಣೆ ತರಲು
> ಸಾಧ್ಯ. ಈ ಕ್ಷೇತ್ರಗಳೇ ನಮ್ಮ ಆದ್ಯತಾ ವಲಯಗಳಾಗಬೇಕು. ನಮ್ಮ ಆದ್ಯತೆ ಗುರುತಿಸುವಲ್ಲಿ
> ವಿಫಲವಾಗಿದ್ದರಿಂದ ಕಳೆದ 60 ವರ್ಷಗಳಲ್ಲಿ ರಾಜ್ಯದಲ್ಲಿ, ಅಷ್ಟೇ ಏಕೆ, ದೇಶದಲ್ಲಿ ವಿಜ್ಞಾನ
> ಸಹಜ ಬೆಳವಣಿಗೆಯನ್ನು ಕಾಣಲಿಲ್ಲ.
>
>
>
> ಶಿಕ್ಷಣ ಸಂಸ್ಥೆಗಳನ್ನು ಬಾಜಾ–ಭಜಂತ್ರಿಯೊಂದಿಗೆ ಶುರು ಮಾಡುತ್ತೇವೆ. ಆಮೇಲೆ ಗುಣಮಟ್ಟ
> ಕಾಯ್ದುಕೊಳ್ಳದೆ ಅವು ಠುಸ್‌ ಎನ್ನುತ್ತವೆ. ಇಂಗ್ಲೆಂಡಿನ ಕೆಂಬ್ರಿಜ್‌ ವಿಶ್ವವಿದ್ಯಾಲಯ
> ಸ್ಥಾಪನೆಯಾಗಿ 800 ವರ್ಷಗಳೇ ಆಗಿವೆ. ಈಗಲೂ ಅದೇ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯನ್ನು
> ಉಳಿಸಿಕೊಂಡಿದೆ. ನಮ್ಮಲ್ಲೂ ಅಂತಹ ಘನವಾದ ಸಂಸ್ಥೆಗಳು ಬೇಡವೇ?
>
>
>
> ನಮ್ಮ ವಿಶ್ವವಿದ್ಯಾಲಯಗಳು ತುಂಬಾ ದಯನೀಯ ಸ್ಥಿತಿಯಲ್ಲಿವೆ. ಅವುಗಳಲ್ಲಿ ಎಷ್ಟೇ ಹುಡುಕಿದರೂ
> ಒಬ್ಬ ಅತ್ಯುತ್ತಮ ವಿಜ್ಞಾನಿ ಸಿಗಬಹುದು ಎಂದು ನನಗೆ ಅನಿಸುವುದಿಲ್ಲ. ಗ್ರಾಮಾಂತರ ಭಾಗದ ಯುವ
> ಪ್ರತಿಭೆಗಳ ವಿಜ್ಞಾನದ ಆಸಕ್ತಿಗೆ ನೀರೆರೆಯುವಂತಹ ವಾತಾವರಣ ಇಲ್ಲ. ವಿಜ್ಞಾನ ಕಾಲೇಜುಗಳು
> ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲದೆ ಇರುವುದರಿಂದ ಎಷ್ಟೋ ಮಕ್ಕಳು ಅನಿವಾರ್ಯವಾಗಿ ಬೇರೆ ಬೇರೆ
> ವಿದ್ಯಾ ಶಾಖೆಗಳಿಗೆ ಸೇರಬೇಕಾಗಿದೆ. ಇರುವ ವಿಜ್ಞಾನ ಕಾಲೇಜುಗಳಲ್ಲೂ ಪ್ರಯೋಗಾಲಯದ ಕೊರತೆ.
> ನಾನು ಇತ್ತೀಚೆಗೆ ಲಕ್ಷ್ಮೇಶ್ವರಕ್ಕೆ ಹೋಗಿದ್ದೆ. ಅಲ್ಲಿನ ಮಕ್ಕಳ ವಿಜ್ಞಾನದ ಆಸಕ್ತಿ ಕಂಡು
> ಮನಸ್ಸು ತುಂಬಿಬಂದಿದೆ. ಅಲ್ಲೊಂದು ವಿಜ್ಞಾನ ಅಧ್ಯಯನ ಕೇಂದ್ರವನ್ನು ತೆರೆಯಲು
> ನಿರ್ಧರಿಸಿದ್ದೇನೆ.
>
>
>
> ಪ್ರಾಧ್ಯಾಪಕರು ಕೇವಲ ಬೋಧನಾ ವೃತ್ತಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಕಾಲೇಜು
> ಕ್ಯಾಂಪಸ್ಸುಗಳಲ್ಲಿ ಸಂಶೋಧನಾ ಚಟುವಟಿಕೆಗಳು ವಿರಳವಾಗಿವೆ. ವಿಜ್ಞಾನದ ಬೆಳವಣಿಗೆಗಳ ಕುರಿತು
> ಶಿಕ್ಷಕರಲ್ಲೇ ಮಾಹಿತಿ ಇಲ್ಲದಿರುವುದು ನನ್ನ ಸುತ್ತಾಟದಲ್ಲಿ ಎದ್ದುಕಂಡಿದೆ. ಬೋಧನಾ
> ಗುಣಮಟ್ಟ ಸುಧಾರಿಸಲು ಅವರಿಗೆ ಸರಿಯಾದ ತರಬೇತಿಯ ವ್ಯವಸ್ಥೆಯನ್ನು ಮಾಡಲೇಬೇಕಿದೆ.
>
>
>
> ಮೈಸೂರು ಸಂಸ್ಥಾನದಲ್ಲಿ ಕಾಲೇಜು ಪ್ರಾಧ್ಯಾಪಕರು ಶಾಲೆಗಳಿಗೂ ಹೋಗಿ ಪಾಠ ಮಾಡಬೇಕಿತ್ತು.
> ಆಗಿನ ಶೈಕ್ಷಣಿಕ ವಾತಾವರಣದ ಕುರಿತು ಡಿ.ವಿ. ಗುಂಡಪ್ಪನವರು, ಮಾಸ್ತಿಯವರು ತಮ್ಮ
> ಕೃತಿಗಳಲ್ಲಿ ಬೇಕಾದಷ್ಟು ಉಲ್ಲೇಖಿಸಿದ್ದಾರೆ. ಬಿ.ಎಸ್‌. ಮಾಧವರಾವ್‌, ಶ್ರೀನಿವಾಸ್‌
> ಅಯ್ಯಂಗಾರ್‌,  ಬಿ.ವೆಂಕಟೇಶಾಚಾರ್‌, ಬಿ.ಆರ್‌. ಶೇಷಾಚಾರ್‌, ಮಂಜುನಾಥ್‌ ಅವರಂತಹ
> ವಿಜ್ಞಾನಿಗಳು ಬೋಧಕರಾಗಿ ಸಿಕ್ಕಿದ್ದು ನನ್ನ ಸೌಭಾಗ್ಯ. ಅಂತಹ ಶೈಕ್ಷಣಿಕ ವಾತಾವರಣ
> ಮರುಸೃಷ್ಟಿ ಆಗಬೇಕು.
>
>
>
> ಎಲ್ಲರಿಗೂ ತಮ್ಮ ಮಕ್ಕಳನ್ನು ಐಐಟಿಯಲ್ಲೇ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಓದಿಸುವ ಆಸೆ.
> ಆದರೆ, ಬೆರಳೆಣಿಕೆಯಷ್ಟು ಅಂತಹ ಅತ್ಯುನ್ನತ ಸಂಸ್ಥೆಗಳನ್ನು ಇಟ್ಟುಕೊಂಡು ಶಿಕ್ಷಣದ ಗುಣಮಟ್ಟ
> ಸುಧಾರಿಸಲು ಸಾಧ್ಯವಿಲ್ಲ. ಈಗೇನೋ ಧಾರವಾಡದಲ್ಲೂ ಒಂದು ಐಐಟಿ ಆರಂಭಿಸಲಾಗಿದೆ. ರಾಜ್ಯದಲ್ಲಿ
> ಇನ್ನೂ ಅಂತಹ 2–3 ಸಂಸ್ಥೆಗಳಾದರೂ ಬೇಕು. ಆಗ ಪ್ರತಿಭೆಗಳಿಗೆ ಅಲ್ಲಿ ಕೆಲಸಮಾಡಲು ಅವಕಾಶ
> ಸಿಕ್ಕು, ಸಂಶೋಧನಾ ಗುಣಮಟ್ಟ ಎತ್ತರಕ್ಕೇರುತ್ತದೆ. ಹಾಗಂತ ಸೂಕ್ತ ತಯಾರಿ ಇಲ್ಲದೆ,
> ಬೇಕಾಬಿಟ್ಟಿಯಾಗಿ ಐಐಟಿ ಆರಂಭಿಸಿದರೆ ಗುಣಮಟ್ಟಕ್ಕೆ ಹೊಡೆತ ಬೀಳುತ್ತದೆ. ‘ಐಐಟಿ
> ಬ್ರ್ಯಾಂಡ್‌’ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ.
>
>
>
> ಮೈಸೂರು ಭಾಗದಲ್ಲಿ ಒಡೆಯರ್‌ ಅವರ ಔದಾರ್ಯದಿಂದ ಒಳ್ಳೆಯ ಸಂಸ್ಥೆಗಳು ಸ್ಥಾಪನೆಯಾಗಿವೆ.
> ಆದರೆ, ಏಕೀಕರಣದ ಮುಂಚೆ ಮದ್ರಾಸ್‌ ಪ್ರಾಂತ್ಯದಲ್ಲಿದ್ದ ದಕ್ಷಿಣ ಕನ್ನಡ, ಬಾಂಬೆ ಪ್ರಾಂತ್ಯ
> ಹಾಗೂ ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶದಲ್ಲಿ ಅಂತಹ ಸೌಲಭ್ಯಗಳು
> ಇಲ್ಲ. ಅಲ್ಲಿಯೂ ಪ್ರತಿಭಾವಂತರು ಇದ್ದಾರೆ. ಆ ಪ್ರದೇಶಗಳಲ್ಲಿ ಉನ್ನತ ಅಧ್ಯಯನ
> ಸಂಸ್ಥೆಗಳನ್ನು ಸ್ಥಾಪಿಸಬೇಕು. ಬೇಕಾದಷ್ಟು ಉದ್ಯಮಗಳು ನಮ್ಮ ರಾಜ್ಯದಲ್ಲಿವೆ. ಸಂಶೋಧನಾ
> ಚಟುವಟಿಕೆ ಹೆಚ್ಚಲು ಅವುಗಳ ಸಹಭಾಗಿತ್ವ ಅಗತ್ಯವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ
> ಗಮನಹರಿಸಬೇಕು.
>
>
>
> ಯಾವ ಕ್ಷೇತ್ರದಲ್ಲಿ ಸಂಶೋಧನೆ ನಡೆಸಬೇಕು ಎನ್ನುವ ಖಚಿತತೆ ನಮ್ಮಲ್ಲಿರಬೇಕು. ಹಾಗೆ ಆಯ್ಕೆ
> ಮಾಡಲಾದ ಸಂಶೋಧನಾ ಚಟುವಟಿಕೆಗಳಲ್ಲಿ ಹಣ ಹೂಡಿದರೆ ಒಳ್ಳೆಯ ಫಲಿತಾಂಶ ಕಟ್ಟಿಟ್ಟ ಬುತ್ತಿ.
> ಬಾಹ್ಯಾಕಾಶ ಹಾಗೂ ಅಣುಶಕ್ತಿ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಸಾಧನೆಗಳೇ ಇದಕ್ಕೆ ಸಾಕ್ಷಿ.
>
>
>
> ಮಾಹಿತಿ ತಂತ್ರಜ್ಞಾನ (ಐ.ಟಿ) ಹಾಗೂ ಜೈವಿಕ ತಂತ್ರಜ್ಞಾನಗಳ (ಬಿ.ಟಿ) ಅಬ್ಬರ
> ಹೆಚ್ಚಾಗಿರುವುದು ನಿಜ. ಐ.ಟಿಯಲ್ಲಿ ವಿಜ್ಞಾನವೇ ಇಲ್ಲ. ಬಿ.ಟಿಯಲ್ಲಿ ಚೂರುಪಾರು ವಿಜ್ಞಾನ
> ಇದೆ. ಮೂಲ ವಿಜ್ಞಾನ ಘನವಾದುದು. ಯುವ ಪೀಳಿಗೆಗೆ  ದೊಡ್ಡ ವಿಜ್ಞಾನಿ ಆಗಬೇಕು ಎಂಬುದಕ್ಕಿಂತ
> ದೊಡ್ಡ ಬಂಗಲೆ ಕಟ್ಟಬೇಕು, ಐಷಾರಾಮಿ ಕಾರು ಕೊಳ್ಳಬೇಕು ಎನ್ನುವ ಧಾವಂತ. ಹಣದ ಹೊಳೆಯನ್ನೇ
> ಹರಿಸುವ ಐ.ಟಿ–ಬಿ.ಟಿ ಕ್ಷೇತ್ರದತ್ತ ಅವರು ಆಕರ್ಷಿತರಾಗಲು ಇದೇ ಮುಖ್ಯಕಾರಣ. ನಾನು ವೃತ್ತಿ
> ಜೀವನ ಆರಂಭಿಸಿದಾಗ ನನ್ನ ಮೊದಲ ವೇತನ 720 ರೂಪಾಯಿ ಆಗಿತ್ತು.
>
>
>
> ಈಗ ಅಂತಹ ಸನ್ನಿವೇಶ ಏನಿಲ್ಲ. ವಿಜ್ಞಾನಿಗಳಿಗೆ ಕೈತುಂಬ ಸಂಬಳ ಸಿಗುತ್ತಿದೆ. ಆದರೆ, ಮೂಲ
> ವಿಜ್ಞಾನದಲ್ಲಿ ವಿದ್ಯಾರ್ಥಿಗಳು ಆಸಕ್ತಿ ತಾಳಲು ಸ್ಕಾಲರ್‌ಷಿಪ್‌ ವಿತರಣೆ, ಉದ್ಯೋಗ
> ಸೃಷ್ಟಿಯಂತಹ ಸೌಲಭ್ಯಗಳ ಕಡೆಗೂ ಗಮನಹರಿಸುವ ಅಗತ್ಯವಿದೆ. ಮುಖ್ಯವಾಗಿ ಅಧ್ಯಯನ ಮಾಡಲು
> ಅತ್ಯುನ್ನತ ಸಂಸ್ಥೆಗಳನ್ನು ಸೃಷ್ಟಿಸಬೇಕಿದೆ. ಮೂಲ ವಿಜ್ಞಾನದಲ್ಲಿ ಪೂರಕ ಅವಕಾಶವಿಲ್ಲದ
> ಕಾರಣ ಉದ್ಯಮ ಹಾಗೂ ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿ ಯುವಪೀಳಿಗೆ ಭವಿಷ್ಯ ಕಂಡುಕೊಳ್ಳುತ್ತಿದೆ.
>
>
>
> ಕಳವಳಕಾರಿ ಸಂಗತಿ ಏನೆಂದರೆ ನಮ್ಮ ಜವಾಹರಲಾಲ್‌ ನೆಹರೂ ಉನ್ನತ ಸಂಶೋಧನಾ ಸಂಸ್ಥೆಗೆ ಕಳೆದ
> 25 ವರ್ಷಗಳಲ್ಲಿ ಒಬ್ಬ ಬೆಂಗಳೂರು ವಿದ್ಯಾರ್ಥಿಯೂ ಅಧ್ಯಯನಕ್ಕಾಗಿ ಬಂದಿಲ್ಲ. ಇದೇ ಕಾಲಕ್ಕೆ
> ತುಮಕೂರು, ಮಂಡ್ಯದಂತಹ ಗ್ರಾಮಾಂತರ ಭಾಗಗಳಿಂದ ಒಂದಿಬ್ಬರು ವಿದ್ಯಾರ್ಥಿಗಳು ಬಂದಿರುವುದು
> ಆಶಾದಾಯಕ ಬೆಳವಣಿಗೆ. ಪಶ್ಚಿಮ ಬಂಗಾಲ, ಆಂಧ್ರ ಪ್ರದೇಶ ಹಾಗೂ ಬಿಹಾರ ಭಾಗಗಳಲ್ಲಿ ಈಗ
> ಸಂಶೋಧನಾ ಆಸಕ್ತಿ ಚೆನ್ನಾಗಿ ಬೆಳೆದಿದೆ.
>
>
>
> ಮುಂದಿನ 15 ವರ್ಷಗಳ ಗುರಿ ಇಟ್ಟುಕೊಂಡು ವಿಜ್ಞಾನದ ಆಸಕ್ತಿ ಹೆಚ್ಚಿಸಲು ವಿವಿಧ ಕಾರ್ಯಕ್ರಮ
> ಹಾಕಿಕೊಳ್ಳಬೇಕು. ಪ್ರಾದೇಶಿಕ ಮಟ್ಟದಲ್ಲಿ ಹತ್ತಾರು ವಿಜ್ಞಾನ ಸಂಸ್ಥೆಗಳನ್ನು ಕಟ್ಟಬೇಕು.
>
>
>
> ವಿಜ್ಞಾನದ ಬೆಳವಣಿಗೆ ಆಗಬೇಕಾದರೆ ಸಮಾಜದ ದೃಷ್ಟಿಕೋನ ಸಹ ಬದಲಾಗಬೇಕಿದೆ. ಮೂಲ ವಿಜ್ಞಾನದ
> ಕಡೆಗೆ ಒಲವು ತೋರಿ ವಿದ್ಯಾರ್ಥಿಯೊಬ್ಬ ಬಿಎಸ್ಸಿ ಓದಿದರೆ ಆತನನ್ನು ದಡ್ಡನಂತೆ
> ಕಾಣಲಾಗುತ್ತದೆ. ಅದೇ ಎರಡನೇ ದರ್ಜೆಯ ಸಂಸ್ಥೆಯಲ್ಲಿ ಎಂಜಿನಿಯರಿಂಗ್‌ ಓದಿದ
> ವಿದ್ಯಾರ್ಥಿಯನ್ನೂ ದೊಡ್ಡ ಸಾಧನೆ ಮಾಡಿದವನಂತೆ ಬಿಂಬಿಸಲಾಗುತ್ತದೆ. ಇದು ಸಮಾಜ ಗೌರವಿಸುವ
> ಮೌಲ್ಯಗಳು ಹಾಗೂ ನಂಬಿಕೆಗಳಿಗೆ ಸಂಬಂಧಿಸಿದ ವಿಚಾರ. ಜನರ ಈ ಮನಸ್ಥಿತಿ ಬದಲಾಗದಿದ್ದರೆ
> ವಿಜ್ಞಾನ ಬೆಳೆಯುವುದು ಹೇಗೆ?
>
>
>
> ವಿಜ್ಞಾನದ ಬೆಳವಣಿಗೆಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಏನೇನೂ ಸಾಲದು. ಬಹುತೇಕ
> ಅನುದಾನ ಕೇಂದ್ರ ಸರ್ಕಾರದಿಂದಲೇ ಬರುತ್ತಿದೆ. ಅದು ಕೂಡ ನಗಣ್ಯವಾಗಿದೆ. ಆದರೆ, ಕಳೆದ 8–10
> ವರ್ಷಗಳಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಬಜೆಟ್‌ನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ
> ಕ್ಷೇತ್ರಗಳು ಸಹ ಕಾಣಿಸಿಕೊಳ್ಳಲು ಆರಂಭಿಸಿವೆ. ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ
> ವಿಷನ್‌ ಗ್ರೂಪ್‌ ಮಾಡಿದ್ದ ಶಿಫಾರಸುಗಳಲ್ಲಿ ಕೆಲವನ್ನು ಅನುಷ್ಠಾನಕ್ಕೆ ತರಲಾಗಿದೆ. ಆದರೆ,
> ಸಾಧಿಸಬೇಕಾದುದು ಬಹಳಷ್ಟಿದೆ. ಮುಖ್ಯವಾಗಿ ಸರ್ಕಾರ ತನ್ನ ಬಜೆಟ್‌ನಲ್ಲಿ ನಿವ್ವಳ ಆಂತರಿಕ
> ಉತ್ಪನ್ನದ (ಜಿಡಿಪಿ) ಶೇ 2ರಷ್ಟನ್ನು ಸಂಶೋಧನೆಗೆ ಹಾಗೂ ಶೇ 6ರಷ್ಟನ್ನು ಶಿಕ್ಷಣಕ್ಕೆ
> ಮೀಸಲಿಡಬೇಕು. ವಿಜ್ಞಾನ ಕಲಿಕೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು
> ತುರ್ತಾಗಿ ಒದಗಿಸಬೇಕು. ಉದ್ಯಮಗಳ ಸಹಭಾಗಿತ್ವ ಹೆಚ್ಚಾಗಿ ಬೇಕು. ಹಾಗಾದರೆ ಶತಮಾನದ ಸಮೃದ್ಧ
> ಕರ್ನಾಟಕದ ಕನಸು ನನಸಾಗುವುದಲ್ಲದೆ ದೇಶದ ಅಭಿವೃದ್ಧಿಗೂ ಕೊಡುಗೆ ನೀಡಲು ಸಾಧ್ಯವಾದೀತು.
>
> *ಏನು ಆಗಬೇಕು?*
> *ಅನುದಾನ ಹಂಚಿಕೆಯಲ್ಲಿ...*
> * ನಿವ್ವಳ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 8ರಷ್ಟು ಹಣವನ್ನು ಶಿಕ್ಷಣ ಹಾಗೂ ಸಂಶೋಧನೆ
> ಕ್ಷೇತ್ರಗಳಿಗೆ ಮೀಸಲಿಡಬೇಕು. ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಉನ್ನತ ಅಧ್ಯಯನ
> ಸಂಸ್ಥೆಗಳನ್ನು ತೆರೆಯಬೇಕು
>
> * ಮುಂದಿನ 15 ವರ್ಷಗಳಲ್ಲಿ ನಮ್ಮ ವಿಜ್ಞಾನ ಕ್ಷೇತ್ರ ಪ್ರಗತಿಯತ್ತ ದಾಪುಗಾಲು ಹಾಕದಿದ್ದರೆ
> ಶಾಶ್ವತವಾಗಿ ಹಿಂದೆ ಬೀಳುವ ಅಪಾಯವಿದೆ. ಈ ಎಚ್ಚರಿಕೆ ಇಟ್ಟುಕೊಂಡು ಹಣ ವಿನಿಯೋಗ ಮಾಡಬೇಕು
>
> *ಸಂಶೋಧನಾ ಕ್ಷೇತ್ರದಲ್ಲಿ...*
> * ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಅಂಡ್‌ ಡಿ) ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ
> ಖಾಸಗಿ ಸಹಭಾಗಿತ್ವ ಬೇಕು. ರಾಜ್ಯದಲ್ಲಿ ಸಾವಿರಾರು ಬೃಹತ್‌ ಉದ್ಯಮಗಳು ಬೀಡು ಬಿಟ್ಟಿದ್ದು,
> ಅವುಗಳ ಸಹಯೋಗ ಪಡೆಯುವ ಕೆಲಸ ಆಗಬೇಕು. ದಕ್ಷಿಣ ಕೊರಿಯಾದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಶೇ
> 75ರಷ್ಟು ಹೂಡಿಕೆ ಉದ್ಯಮ ಕ್ಷೇತ್ರದಿಂದಲೇ ಆಗುತ್ತಿದೆ
>
> * ನೀರು, ಇಂಧನ, ಕೃಷಿ, ಆರೋಗ್ಯ ಸಂಶೋಧನೆಯ ಆದ್ಯತೆಗಳಾಗಬೇಕು
>
> * ವಿಜ್ಞಾನ ಶಿಕ್ಷಣಕ್ಕೆ ಬೇಕಾದ ಉತ್ಕೃಷ್ಟ ಮೂಲಸೌಕರ್ಯವನ್ನು ರಾಜ್ಯದ ಉದ್ದಗಲಕ್ಕೂ
> ಒದಗಿಸಬೇಕು. ಎಲ್ಲ ವಿಜ್ಞಾನ ಪಿಯು ಕಾಲೇಜುಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯದ ವ್ಯವಸ್ಥೆ
> ಮಾಡಬೇಕು
>
> *ಶಿಕ್ಷಣ ಕ್ಷೇತ್ರದಲ್ಲಿ...*
> * ಪ್ರೌಢಶಾಲೆಯಿಂದ ವಿಶ್ವವಿದ್ಯಾಲಯ ವರೆಗೆ ಎಲ್ಲ ಹಂತದ ಶಿಕ್ಷಣದಲ್ಲೂ ವಿಜ್ಞಾನ ಬೋಧಕರಿಗೆ
> ಸೂಕ್ತ ತರಬೇತಿ ನೀಡಬೇಕು
>
> * ಪ್ರತಿ ಜಿಲ್ಲೆಯಲ್ಲೂ ವಿಜ್ಞಾನದ ವಸ್ತು ಸಂಗ್ರಹಾಲಯದ ವ್ಯವಸ್ಥೆ ಮಾಡಬೇಕು. ಸಂಶೋಧನಾ
> ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಸಂಸ್ಥೆಯೊಂದನ್ನು ಹುಟ್ಟುಹಾಕಬೇಕು
>
> * ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್‌ ನೀಡುವ ಮೂಲಕ ಮೂಲವಿಜ್ಞಾನದತ್ತ ಅವರನ್ನು
> ಆಕರ್ಷಿಸಬೇಕು
>
> * ಐ.ಟಿ–ಬಿ.ಟಿಗಿಂತ ಮೂಲವಿಜ್ಞಾನ ತುಂಬಾ ದೊಡ್ಡದು ಎಂಬ ಜಾಗೃತಿಯನ್ನು ಸಮಾಜದಲ್ಲಿ ಉಂಟು
> ಮಾಡಬೇಕು
> *- ಸಿಎನ್‌ಆರ್‌ ರಾವ್‌*
>
> *(ಲೇಖಕ: ‘ಭಾರತ ರತ್ನ’ ಪುರಸ್ಕೃತ ರಸಾಯನ ವಿಜ್ಞಾನಿ,  ಜವಾಹರಲಾಲ್‌ ನೆಹರೂ ಉನ್ನತ
> ಸಂಶೋಧನಾ ಸಂಸ್ಥೆಯ ಗೌರವಾಧ್ಯಕ್ಷ)*
>
> *ನಿರೂಪಣೆ : ಪ್ರವೀಣ ಕುಲಕರ್ಣಿ*
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to