Olleya mahiti nididke vndeneglu
On Dec 2, 2016 8:58 AM, "HAREESHKUMAR K Agasanapura" <harihusk...@gmail.com>
wrote:

> http://m.prajavani.net/article/2016_12_01/455789
> *ಸ್ಪಿರುಲಿನಾ ಮಾಂತ್ರಿಕ ಮಾತ್ರೆ ದೇವೋಭವ*
>
> 1 Dec, 2016
>
> ನಾಗೇಶ್ ಹೆಗಡೆ
>
>
> <https://www.facebook.com/sharer/sharer.php?u=http%3A%2F%2Fwww.prajavani.net%2Farticle%2F2016_12_01%2F455789>
> <https://twitter.com/intent/tweet?text=%E0%B2%B8%E0%B3%8D%E0%B2%AA%E0%B2%BF%E0%B2%B0%E0%B3%81%E0%B2%B2%E0%B2%BF%E0%B2%A8%E0%B2%BE+%E0%B2%AE%E0%B2%BE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%95+%E0%B2%AE%E0%B2%BE%E0%B2%A4%E0%B3%8D%E0%B2%B0%E0%B3%86+%E0%B2%A6%E0%B3%87%E0%B2%B5%E0%B3%8B%E0%B2%AD%E0%B2%B5+http%3A%2F%2Fwww.prajavani.net%2Farticle%2F2016_12_01%2F455789>
> <https://plus.google.com/share?url=http%3A%2F%2Fwww.prajavani.net%2Farticle%2F2016_12_01%2F455789>
> <http://www.pinterest.com/pin/find/?url=http%3A%2F%2Fwww.prajavani.net%2Farticle%2F2016_12_01%2F455789>
> <http://www.linkedin.com/shareArticle?mini=true&title=%E0%B2%B8%E0%B3%8D%E0%B2%AA%E0%B2%BF%E0%B2%B0%E0%B3%81%E0%B2%B2%E0%B2%BF%E0%B2%A8%E0%B2%BE+%E0%B2%AE%E0%B2%BE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%95+%E0%B2%AE%E0%B2%BE%E0%B2%A4%E0%B3%8D%E0%B2%B0%E0%B3%86+%E0%B2%A6%E0%B3%87%E0%B2%B5%E0%B3%8B%E0%B2%AD%E0%B2%B5+&url=http%3A%2F%2Fwww.prajavani.net%2Farticle%2F2016_12_01%2F455789>
>
> ನವೆಂಬರ್ ಮುಗಿಯಿತೆಂದರೆ ಕನ್ನಡ ಭಾಷೆಯಲ್ಲಿ ವಿಶಿಷ್ಟ ಸಾಧನೆಗಾಗಿ ಗೌರವ ಸನ್ಮಾನ ಪಡೆದವರ
> ಮನೆಗಳಲ್ಲಿ ಶಾಲು, ಸ್ಮರಣ ಫಲಕ, ಹಣ್ಣಿನ ಬುಟ್ಟಿ, ಪೇಟಾ ಮತ್ತು ಬಣ್ಣದ ಮಾಲೆಗಳ ಹೊಸ ಮಾಲು
> ಬಂದಿರುತ್ತದೆ. ಹಳತು ಅಟ್ಟಕ್ಕೊ ಗುಜರಿಗೊ ಸೇರುತ್ತವೆ. ಈಚೆಗೆ ಸೇಡಂ ಪಟ್ಟಣದ ‘ಅಮ್ಮ
> ಪ್ರಶಸ್ತಿ’ಯ ಗೌರವವನ್ನು ಪಡೆದವರ ಅನುಭವ ಭಿನ್ನವಾಗಿತ್ತು. ಎಂದಿನಂತೆ ಶಾಲು, ಮಾಲೆ, ಸ್ಮರಣ
> ಫಲಕಗಳ ಜೊತೆಗೆ ಹಣ್ಣಿನ ಬುಟ್ಟಿಯ ಬದಲಿಗೆ ತಲಾ ಎರಡೆರಡು ಕಿಲೊ ತೊಗರಿ ಬೇಳೆಯನ್ನು
> ನೀಡಲಾಯಿತು.
>
> ಕಲಬುರ್ಗಿ ಜಿಲ್ಲೆ ಎಂದರೆ ತೊಗರಿಯ ತವರು ತಾನೆ? ಸೇಡಮ್ಮಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ
> ಈ ದಿನಗಳಲ್ಲಿ ತೊಗರಿಯ ಕಡ್ಡಿಯೇ ಕಾಣುತ್ತದೆ. ಬಡವರ ಗುಡಿಸಲ ಬಳಿಯ ಸೌದೆರಾಶಿ, ಸೂರು, ಕಸ
> ಗುಡಿಸುವ ಪೊರಕೆ, ತುಂಟ ಮಕ್ಕಳಿಗೆ ಛಡಿಯೇಟು ಎಲ್ಲಕ್ಕೂ ತೊಗರಿಯ ಕಡ್ಡಿ. ರಸ್ತೆಯ ಪಕ್ಕದ
> ಜಾಹೀರಾತು ಫಲಕಗಳಲ್ಲೂ ತೊಗರಿ ಬೆಳೆಗೆ ಎರಚುವ ವಿಷವಸ್ತುಗಳ ಆಕರ್ಷಕ ಜಾಹೀರಾತು;
> ತಳ್ಳುಗಾಡಿಯಲ್ಲಿ ಕಳ್ಳೇಪುರಿ ಅಳೆಯಲಿಕ್ಕೂ ಅದೇ ವಿಷದ ಖಾಲಿ ಡಬ್ಬಿಗಳು. ಶಾಲಾ ಮಕ್ಕಳ
> ಪಠ್ಯಗಳಲ್ಲಿ ಮಾತ್ರ ತೊಗರಿಯ ಬಗ್ಗೆ ಒಂದೇ ಒಂದು ಪಾಠವೂ ಇಲ್ಲ ಅನ್ನೋದನ್ನು ಬಿಟ್ಟರೆ,
> ಮಿಕ್ಕೆಲ್ಲ ಕಡೆ ತೊಗರಿಯದೇ ಸಾಹಿತ್ಯ.
>
> ಹಣ್ಣಿನ ಬುಟ್ಟಿಯಲ್ಲಿ ಸೇಬು, ಸಪೋಟ, ಪಪಾಯಾ, ಪೈನಾಪಲ್ ಮುಂತಾದ ಪರಂಗಿ/ ಫಿರಂಗಿ
> ಫಲಗಳನ್ನು ತುಂಬುವ ಬದಲು ತಂತಮ್ಮ ಊರಿನ ವಿಶಿಷ್ಟ ಫಸಲನ್ನು ಅತಿಥಿಗಳಿಗೆ ಉಡುಗೊರೆಯ
> ರೂಪದಲ್ಲಿ ನೀಡುವ ಸಂಪ್ರದಾಯ ಮಲೆನಾಡಿನ ಜಿಲ್ಲೆಗಳಲ್ಲಿ ಹಿಂದಿನಿಂದಲೂ ಜಾರಿಯಲ್ಲಿದೆ. ದೂರದ
> ಗಣ್ಯರಿಗೆ ಏಲಕ್ಕಿ, ಕಾಳುಮೆಣಸು, ಲವಂಗ, ದಾಲಚಿನ್ನಿಯನ್ನು ಉಡುಗೊರೆಯಾಗಿ ನೀಡುತ್ತಾರೆ.
> ಈಚೆಗೆ ವಸಂತ ಪ್ರಕಾಶನದವರು ಬೆಂಗಳೂರಿನಲ್ಲಿ ಒಟ್ಟಿಗೆ ಎಂಟು ವೈದ್ಯ ಸಾಹಿತ್ಯ ಕೃತಿಗಳ
> ಬಿಡುಗಡೆಯ ಸಮಾರಂಭದಲ್ಲಿ ಗಣ್ಯರಿಗೆಲ್ಲ ಸುಂದರ ಪೊಟ್ಟಣಗಳಲ್ಲಿ ನವಣೆ, ಆರಕ, ಕೊರಲು, ಬರಗು
> ಮುಂತಾದ ಸಿರಿಧಾನ್ಯಗಳನ್ನು ನೀಡಿದ್ದರು. ಪ್ರತಿ ಪೊಟ್ಟಣದ ಮೇಲೂ ಆಯಾ ಧಾನ್ಯದ
> ಗುಣವಿಶೇಷಗಳನ್ನು ಮುದ್ರಿಸಲಾಗಿತ್ತು.
>
> ಸನ್ಮಾನಿತರಿಗೆ ಒಂದರ್ಧ ಕಿಲೊಗ್ರಾಂ ಸ್ಪಿರುಲಿನಾ ಮಾತ್ರೆಗಳನ್ನು ಎಲ್ಲಾದರೂ ನೀಡಿದ
> ಪ್ರಸಂಗ ಇದೆಯೆ? ಇರಲಿಕ್ಕಿಲ್ಲ. ಸಿನೆಮಾ ತಾರೆಯರು, ಧನಿಕರು ಸೇವಿಸುವ ದುಬಾರಿ ವಸ್ತು ಅದು.
> ಈಚೆಗೆ ಕರ್ನಾಟಕದಲ್ಲಿ ತೀರಾ ಕಡುಬಡ ಮಕ್ಕಳು, ಗರ್ಭಿಣಿಯರಿಗೆ ಉಚಿತವಾಗಿ ಸಿಕ್ಕ
> ಗೋಲಿಭಾಗ್ಯವೂ ಹೌದು. ಇದು ಈ ದಿನಗಳಲ್ಲಿ ಸಂಡೂರಿನಿಂದ ಹಿಡಿದು ದಿಲ್ಲಿಯವರೆಗೂ
> ಸುದ್ದಿಯಲ್ಲಿದೆ.
>
> ಸ್ಪಿರುಲಿನಾ ಎಂದರೆ ಜೌಗು ನೀರಿನಲ್ಲಿ ಬೆಳೆಯುವ ಹಸುರು ನೀಲಿ ಪಾಚಿ ಅಥವಾ ಹಾವಸೆ.
> ಬ್ಯಾಕ್ಟೀರಿಯದ ವರ್ಗಕ್ಕೆ ಸೇರಿದ ಏಕಕೋಶ ಜೀವಿ. ಅದು ದಟ್ಟವಾಗಿ ಬೆಳೆದ ನೀರಲ್ಲಿ
> ಕೈಹಾಕಿದರೆ ಹಸುರು ಬಟ್ಟೆಯಂತೆ ಪಾಚಿ ಕೈಗೆಲ್ಲ ಮೆತ್ತಿಕೊಳ್ಳುತ್ತದೆ. ನಾರಿನ ಎಳೆಗಳಂತೆ
> ಸಿಂಬೆ ಸುತ್ತಿಕೊಂಡು ಬೆಳೆಯುವ ಇದನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಸುರುಳಿ
> ಸ್ಪ್ರಿಂಗ್‌ನಂತೆ ಕಾಣುತ್ತದೆ. ಸಿಂಬೆಯನ್ನು ನೀರಿನಿಂದ ಮೇಲೆತ್ತಿ ಹಿಂಡಿ ಒಣಗಿಸಿ
> ಕೇಕ್‌ನಂತೆ, ಇಲ್ಲವೆ ಕುಟ್ಟಿ ಪುಡಿ ಮಾಡಿ ಗಾಳಿಸಿ, ಉಂಡೆ ಮಾಡಬಹುದು.
>
> ಪಾಚಿಗಳಲ್ಲಿ ಸಾವಿರಾರು ಬಗೆಗಳಿವೆ. ನೀರಲ್ಲಿ, ಉಪ್ಪುನೀರಲ್ಲಿ, ಬಂಡೆಗಳ ಮೇಲೆ, ಮರಗಳ
> ಕಾಂಡಗಳ ಮೇಲೆಲ್ಲ ಅವು ಬೆಳೆಯುತ್ತವೆ. ನೀರಲ್ಲಿ ಬೆಳೆಯುವ ನೀಲಿ ಹಸುರಿನ ಸ್ಪಿರುಲಿನಾ ಕೂಡ
> ಅದೇ ವರ್ಗಕ್ಕೆ ಸೇರಿದ ಅನಾದಿ ಕಾಲದ, ಹುಟ್ಟು-ಸಾವು ಇಲ್ಲದ ಚಿರಂಜೀವಿ. ತನ್ನನ್ನೇ
> ಇಬ್ಭಾಗಿಸಿಕೊಳ್ಳುತ್ತ ಬೆಳೆಯುತ್ತದೆ. ವಿಶೇಷ ಗುಣ ಏನೆಂದರೆ ಇದರಲ್ಲಿ ಪ್ರೊಟೀನು ತುಂಬ
> ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಆಫ್ರಿಕದ ಕೆನೆಂಬು ಮೂಲ ನಿವಾಸಿಗಳು, ಮೆಕ್ಸಿಕೊದ
> ಆಜ್ಟೆಕ್ ಜನರು ಅನಾದಿ ಕಾಲದಿಂದಲೂ ಸ್ಪಿರುಲಿನಾ ಪಾಚಿಯನ್ನು ಆಹಾರವಾಗಿ ಬಳಸುತ್ತಿದ್ದರು.
>
> ಸಾಕುಪ್ರಾಣಿಗಳಿಗೆ ಮೇವಾಗಿ ತಿನ್ನಿಸುತ್ತಿದ್ದರು. ಬೆಲ್ಜಿಯನ್ ವಿಜ್ಞಾನಿ ಝರ್ರೊಕ್ ಎಂಬಾತ
> ಐವತ್ತು ವರ್ಷಗಳ ಹಿಂದೆ 1966ರಲ್ಲಿ ಅದನ್ನೇ ತನ್ನ ಪಿಎಚ್‌.ಡಿ ಅಧ್ಯಯನಕ್ಕೆ ಆಯ್ದುಕೊಂಡ. ಈ
> ಪಾಚಿಯಲ್ಲಿ ಶೇ 60- 65ರಷ್ಟು ಪ್ರೊಟೀನು ಇದೆ, ಖನಿಜಾಂಶಗಳೂ ಸೂಕ್ಷ್ಮ ಪೋಷಕಾಂಶಗಳೂ ಆದರ್ಶ
> ಪ್ರಮಾಣದಲ್ಲಿವೆ ಎಂದು ಪ್ರಕಟಿಸಿದ ಮೇಲೆ ಸ್ಪಿರುಲಿನಾಕ್ಕೆ ಶುಕ್ರದೆಸೆ ಬಂತು. ಮರುವರ್ಷವೇ
> ಅದನ್ನೊಂದು ‘ಚಮತ್ಕಾರಿಕ ಆಹಾರ’ ಎಂದು ಸೂಕ್ಷ್ಮಜೀವ ವಿಜ್ಞಾನಿಗಳು ಘೋಷಿಸಿದರು. ಅದನ್ನು
> ಕೆರೆ ಹೊಂಡಗಳಲ್ಲಿ ಕೃತಕವಾಗಿ ಬೆಳೆಸುವ ಉದ್ಯಮಗಳು ನಾಯಿಕೊಡೆಗಳ ಹಾಗೆ ತಲೆ ಎತ್ತಿದವು.
>
> ಈಗಂತೂ ಅದೊಂದು ಬಹುಕೋಟಿ ದಂಧೆಯಾಗಿ ಬೆಳೆದಿದೆ. ಗೂಗಲಿಸಿದರೆ ಹತ್ತಾರು ಸಾವಿರ ಪುಟಗಳ
> ಪ್ರಚಾರ ಸಾಮಗ್ರಿಗಳು, ಜಾಹೀರಾತುಗಳು, ಸಂಶೋಧನಾ ಅಂಕಿಸಂಖ್ಯೆಗಳು, ವೈದ್ಯಭಾಷೆಯ ಲೇಖನಗಳು
> ಸಾಲುಗಟ್ಟಿ ಬರುತ್ತವೆ. ಸಣಕಲು ದೇಹದವರನ್ನು ದಪ್ಪ ಮಾಡುವುದಕ್ಕೂ ಸ್ಪಿರುಲಿನಾ; ದಪ್ಪ
> ವ್ಯಕ್ತಿಗಳನ್ನು ಸಣಕಲು ಮಾಡಲಿಕ್ಕೂ ಸ್ಪಿರುಲಿನಾ! ಮೊಡವೆ, ತಲೆಹೊಟ್ಟಿನಿಂದ ಹಿಡಿದು
> ಹೊಟ್ಟೆಹುಳದವರೆಗಿನ ಎಲ್ಲ ಬಗೆಯ ಕಿರಿಕಿರಿಗಳ ನಿವಾರಣೆಗೆ ಸ್ಪಿರುಲಿನಾ ಕ್ರೀಮು, ಲೇಹ್ಯ,
> ಪೇಸ್ಟು, ತೈಲ ಅದಂತೆ ಇದಂತೆ. ಯಾವುದು ವೈಜ್ಞಾನಿಕ ಸತ್ಯ, ಯಾವುದು ಉತ್ಪ್ರೇಕ್ಷೆ ಎಂಬುದೇ
> ಗೊತ್ತಾಗದಷ್ಟು ಗೋಜಲು ಅದರಲ್ಲಿದೆ. ಬೆಲೆಗೂ ಲಂಗುಲಗಾಮಿಲ್ಲ. ಉತ್ಪಾದನಾ ವೆಚ್ಚ ಟನ್ನಿಗೆ
> ಗರಿಷ್ಠ ಹತ್ತು ಸಾವಿರ ರೂಪಾಯಿ ಇದ್ದರೂ ಒಂದು ಗ್ರಾಂ ತೂಕದ ಮಾತ್ರೆಗೆ ಒಂದು ರೂಪಾಯಿ
> ಲೆಕ್ಕದಲ್ಲಿ ಟನ್ನಿಗೆ 10 ಲಕ್ಷ ರೂಪಾಯಿ ಗಳಿಸಬಹುದು.
>
> ಇಂಥ ಮಾಂತ್ರಿಕ ಮಾತ್ರೆಯನ್ನು ಅನುಕೂಲಸ್ಥರು ನಾನಾ ವಿಧದಲ್ಲಿ ಸೇವಿಸುತ್ತಾರೆ. ಅದನ್ನೇ
> ಸರ್ಕಾರಿ ವೆಚ್ಚದಲ್ಲಿ ಬಡ ಮಹಿಳೆಯರಿಗೆ, ಮಕ್ಕಳಿಗೆ ಕೊಟ್ಟರೆ ಅಪೌಷ್ಟಿಕತೆಯ ನಿವಾರಣೆ
> ಸಾಧ್ಯವಾದೀತಲ್ಲವೆ? ನಮ್ಮ ರಾಷ್ಟ್ರದಲ್ಲಿ ಹಸಿವೆ, ಅರೆಹೊಟ್ಟೆಯಿಂದ ಬಳಲುವ ಕುಪೋಷಿತರ
> ಸಂಖ್ಯೆ ಜಗತ್ತಿನ ಇತರೆಲ್ಲ ರಾಷ್ಟ್ರಗಳಲ್ಲಿನ ಅಂಥವರ ಒಟ್ಟೂ ಸಂಖ್ಯೆಗಿಂತ ಜಾಸ್ತಿ ಇದೆ.
> ಅಂಥವರ ನೆರವಿಗೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ಹಣ
> ಸುರಿಯುತ್ತಿವೆ. ವಿದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಧನಸಹಾಯ ಹರಿದು ಬರುತ್ತಿದೆ.
>
> ಅವನ್ನೆಲ್ಲ ಬಳಸಿ, ಹಸಿವೆಯನ್ನು ನೀಗಿಸಲೆಂದು ಅನೇಕ ಸಂಘ ಸಂಸ್ಥೆಗಳು ವಿವಿಧ ಯೋಜನೆಗಳನ್ನು
> ಹೆಣೆಯುತ್ತವೆ. ತುಮಕೂರಿನಲ್ಲಿ ಸ್ಪಿರುಲಿನಾ ಮಾತ್ರೆಗಳನ್ನು ಉತ್ಪಾದಿಸುತ್ತಿದ್ದ
> ಸಂಸ್ಥೆಯೊಂದು ಅಂಗನವಾಡಿಗಳ ಮೂಲಕ ಬಸುರಿ, ಬಾಣಂತಿಯರಿಗೆ ಹಾಗೂ ಎಳೆ ಮಕ್ಕಳಿಗೆ ಇದನ್ನು
> ‘ಉಚಿತವಾಗಿ’ ವಿತರಿಸುವ ಯೋಜನೆಯನ್ನು ನಾಲ್ಕು ವರ್ಷಗಳ ಹಿಂದೆ ರೂಪಿಸಿತು. ‘ಒಂದು
> ಸ್ಪಿರುಲಿನಾ ಮಾತ್ರೆಯನ್ನು ನುಂಗಿದರೆ ಒಂದು ಕಿಲೊ ಅನ್ನಸಾರು ಪಲ್ಲೆ ತಿಂದಂತೆ’ ಎಂದೆಲ್ಲ
> ಹೊಗಳುವ ಸಾಹಿತ್ಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮುಂದೊಡ್ಡಿತು.
>
> ಈ ಪುಣ್ಯಕಾರ್ಯಕ್ಕೆ ತಮ್ಮ ಸಿಎಸ್‌ಆರ್ ನಿಧಿಯಿಂದ ನೆರವು ನೀಡುವುದಾಗಿ ಜಿಂದಾಲ್ ಉಕ್ಕು
> ಕಾರ್ಖಾನೆ ಮತ್ತು ಬಯೊಕಾನ್ ಔಷಧ ಕಂಪನಿಗಳು ಮುಂದೆ ಬಂದವು. ಪೋಷಕಾಂಶ ತಜ್ಞರ
> ಆಕ್ಷೇಪಣೆಯನ್ನೂ ಲೆಕ್ಕಿಸದೆ ಸರ್ಕಾರ ಸ್ಪಿರುಲಿನಾ ಮಾತ್ರೆಗಳ ಉಚಿತ ವಿತರಣೆಗೆ ಮ.ಮ.ಕಲ್ಯಾಣ
> ಇಲಾಖೆ ಒಪ್ಪಿಗೆ ನೀಡಿತು. ಪ್ರಾಯೋಗಿಕವಾಗಿ ಸಂಡೂರಿನ ಸುತ್ತ 16  ಸಹಸ್ರ ಮಕ್ಕಳಿಗೆ, 5000
> ಮಹಿಳೆಯರಿಗೆ ಮಾತ್ರೆ ವಿತರಣೆ ನಡೆಯಿತು.
>
> ಸ್ಪಿರುಲಿನಾವನ್ನು ಕೆಸರು ಹೊಂಡಗಳಲ್ಲಿ ಬೆಳೆಸಬಹುದು. ನೀರಲ್ಲಿ ಕರಗಿದ ವಿಷವಸ್ತುಗಳನ್ನೂ
> ಅದು ಸುಲಭವಾಗಿ ಹೀರಿಕೊಂಡು ಬೆಳೆಯುತ್ತದೆ. ಔದ್ಯಮಿಕ ತ್ಯಾಜ್ಯಗಳಲ್ಲಿನ ಕ್ಯಾಡ್ಮಿಯಂ,
> ಪಾದರಸ, ಆರ್ಸೆನಿಕ್ ಮುಂತಾದ ಲವಣಗಳನ್ನು ಹೀರಿ ತೆಗೆಯಲೆಂದು ನಿರ್ಮಿಸಿದ ಪಾಚಿ ಹೊಂಡಗಳಲ್ಲಿ
> ಕೂಡ ಅದು ದಂಡಿಯಾಗಿ ಬೆಳೆಯುತ್ತದೆ. ಆಹಾರಕ್ಕೆಂದೇ ಶುದ್ಧ ಪರಿಸರದಲ್ಲಿ ಅದನ್ನು ಬೆಳೆಸಲು
> ಸಾಧ್ಯವಿದೆಯಾದರೂ ಅದರಲ್ಲಿ ವಿಶೇಷ ಪ್ರೊಟೀನು ಇದೆಯೆಂದು ಜಾಹೀರಾತುಗಳಲ್ಲಿ ಹೇಳಿದರೆ
> ನಂಬಬೇಡಿ. ಬಿ12 ಜೀವಸತ್ವ ಇರುವುದು ನಿಜವಾದರೂ ಅದು ಮನುಷ್ಯ ದೇಹದಲ್ಲಿ ಜೀರ್ಣವಾಗದ
> ರೂಪದಲ್ಲಿರುತ್ತದೆ ಎಂದು ವೈದ್ಯವಿಜ್ಞಾನಿಗಳು ಎಚ್ಚರಿಸುತ್ತಾರೆ. ಇನ್ನು ಮೈಕ್ರೊಸಿಸ್ಟಿನ್
> ಎಂಬ ನಂಜಿನಂಶವಿರುವ ಪಾಚಿಯೂ ಅದರೊಂದಿಗೆ ಬೆಳೆಯುವ ಸಂಭವ ಇರುತ್ತದೆ.
>
> ಬೆಳೆದವರಿಗೂ ಗೊತ್ತಾಗದೆ ಅಂತಹ ವಿಷಕಾರಿ ಜೀವಿ ಸೇರ್ಪಡೆಯಾದರೆ ಯಕೃತ್ತಿನ ಊತ ಉಂಟಾಗುವ
> ಸಂಭವ ಇರುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
> ನರದೌರ್ಬಲ್ಯ, ಮೂಳೆ ಶಿಥಿಲತೆ, ದೀರ್ಘಾವಧಿ ಜೀರ್ಣಾಂಗ ಕಾಯಿಲೆ ಬರಬಹುದಾಗಿದೆ.
> ಸ್ಪಿರುಲಿನಾದಲ್ಲಿ ಸೇರಿಕೊಳ್ಳುವ ವಿಷಕಾರಿ ವಸ್ತುಗಳನ್ನು ಬೇರ್ಪಡಿಸಲಾಗದೆ ಚೀನಾ ಸರ್ಕಾರ
> ಮಕ್ಕಳಿಗಾಗಿ ತಾನು ವಿತರಿಸಿದ್ದ ಸ್ಪಿರುಲಿನಾ ಮಾತ್ರೆಗಳನ್ನು ಹಿಂಪಡೆದು ನಾಶಮಾಡಿತ್ತು.
>
> ನಮ್ಮ ದುರ್ಬಲ ವರ್ಗದ ಬಸುರಿಯರಿಗೆ, ಅಪೌಷ್ಟಿಕ ಮಕ್ಕಳಿಗೆ ಕೈತುಂಬ, ಹೊಟ್ಟೆ ತುಂಬ ಊಟ
> ಬೇಕು. ‘ಧಾನ್ಯ, ಸೊಪ್ಪು ತರಕಾರಿ, ಹಾಲು ಮೊಟ್ಟೆಗಳ ಸಮೃದ್ಧ ಊಟದ ಬದಲು ಸಕ್ಕರೆ ಲೇಪಿತ
> ಪಾಚಿ ವಾಸನೆಯ ಮಾತ್ರೆಗಳನ್ನು ನೀಡುವುದು ಅಕ್ಷಮ್ಯ’ ಎನ್ನುತ್ತಾರೆ, ಬೆಂಗಳೂರಿನ ಆರೋಗ್ಯ
> ಕಾರ್ಯಕರ್ತೆ ಡಾ. ಸಿಲ್ವಿಯಾ ಕರ್ಪಾಗಂ. ಮೈಸೂರಿನ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ
> ವಕ್ತಾರರ ಪ್ರಕಾರ ಸ್ಪಿರುಲಿನಾ ಮಾತ್ರೆಗಳನ್ನು ಮಾಮೂಲು ಊಟ ಸರಿಯಾಗಿ ಲಭ್ಯವಿರದ
> ಸಂದರ್ಭದಲ್ಲಿ ಪೂರಕ ವಸ್ತುವಾಗಿ ನೀಡಬಹುದೇ ವಿನಾ ತಿಂಗಳುಗಟ್ಟಲೆ ಅದೊಂದನ್ನೇ ನೀಡುವುದು
> ತಪ್ಪಾಗುತ್ತದೆ. ಇಷ್ಟಕ್ಕೂ ‘ಒಂದು ಕಿಲೊ ಊಟದಲ್ಲಿರಬೇಕಾದಷ್ಟು ಪೋಷಕಾಂಶ ಎರಡು ಗ್ರಾಮ್
> ಮಾತ್ರೆಯಲ್ಲಿದೆ ಎಂಬುದೇ ಹಾಸ್ಯಾಸ್ಪದ ಸಂಗತಿ’ ಎನ್ನುತ್ತಾರೆ, ಹೈದರಾಬಾದಿನ ರಾಷ್ಟ್ರೀಯ
> ಪೋಷಕಾಂಶ ಸಂಸ್ಥೆಯಲ್ಲಿ ಉಪನಿರ್ದೇಶಕಿಯಾಗಿದ್ದ ವೀಣಾ ಶತ್ರುಘ್ನ.
>
> ಅಂಗನವಾಡಿಗಳಿಗೆ ಗುತ್ತಿಗೆದಾರರ ಮೂಲಕ ಆಹಾರ ದ್ರವ್ಯಗಳನ್ನು ನೀಡಕೂಡದು ಎಂದು ಸರ್ವೋಚ್ಚ
> ನ್ಯಾಯಾಲಯದ ಆಜ್ಞೆಯೇ ಇದ್ದರೂ ಅದನ್ನು ಕಡೆಗಣಿಸಿ ಮೂರೂವರೆ ಕೋಟಿ ರೂಪಾಯಿ ವೆಚ್ಚದ ಸರ್ಕಾರಿ
> ಯೋಜನೆ ಜಾರಿಯಲ್ಲಿದೆ. ಮಾತ್ರೆ ನುಂಗಿದ ಮಕ್ಕಳ ಆರೋಗ್ಯ ಎಷ್ಟೊಂದು ವೃದ್ಧಿಯಾಗಿದೆ ಎಂದು
> ಮಾತ್ರೆ ಪೂರೈಸುವ ಸಂಸ್ಥೆಗಳೇ ವರದಿಯನ್ನೂ ನೀಡುತ್ತಿವೆ. ಅದನ್ನೇ ಆಧರಿಸಿ ‘ಸಂಡೂರು
> ತಾಲ್ಲೂಕಿನಲ್ಲಿ ಎರಡೇ ವರ್ಷಗಳಲ್ಲಿ ಅಪೌಷ್ಟಿಕ ಮಕ್ಕಳ ಶೇಕಡ ಪ್ರಮಾಣ 45ರಿಂದ 26ಕ್ಕೆ
> ಇಳಿದಿದೆ’ ಎಂದು ಸರ್ಕಾರ ವರದಿ ಒಪ್ಪಿಸುತ್ತದೆ. ಈ ಮಾಯಾಗೋಲಿಗಳು ಎಲ್ಲಿ ತಯಾರಾಗುತ್ತಿವೆ,
> ಅವುಗಳ ಗುಣಮಟ್ಟ ಹೇಗಿದೆ, ಅದನ್ನು ನುಂಗಿದ ಮಕ್ಕಳ ಗತಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ
> ಸ್ವತಂತ್ರ ತಜ್ಞರಿಂದ ಮೌಲ್ಯಮಾಪನ ಇಲ್ಲ.
>
> ಒಡಿಶಾ ಸರ್ಕಾರ ತನ್ನ ಏಳು ಜಿಲ್ಲೆಗಳಲ್ಲಿ ಆದಿವಾಸಿ ಬಡಕುಟುಂಬಗಳಿಗೆ, ಮಹಿಳೆಯರಿಗೆ,
> ಮಕ್ಕಳಿಗೆಂದು ಸಿರಿಧಾನ್ಯಗಳನ್ನು ಅಂದರೆ ನವಣೆ, ಸೆಜ್ಜೆ, ಬರಗು, ಆರಕ, ರಾಗಿ, ಕೊರ್ಲೆ
> ಮುಂತಾದವನ್ನು ವಿತರಿಸತೊಡಗಿದೆ. ಪೋಷಕಾಂಶಗಳ ಆಗರವಾಗಿರುವ ಈ ಧಾನ್ಯಗಳೆಲ್ಲ ಹಸುರು
> ಕ್ರಾಂತಿಯ ಭರಾಟೆಯಲ್ಲಿ ಮೂಲೆಗುಂಪಾಗಿದ್ದವು. ಅವುಗಳನ್ನು ಬೆಳೆಯಲು ಕೃತಕ ನೀರಾವರಿ
> ಬೇಕಿಲ್ಲ, ರಸಗೊಬ್ಬರ ಅಥವಾ ಕೃಷಿವಿಷಗಳು ಬೇಕಿಲ್ಲ. ಬೆಳೆದ ನೆಲಕ್ಕೂ ಬಳಸುವವರ ಆರೋಗ್ಯಕ್ಕೂ
> ಒಳ್ಳೆಯದನ್ನೇ ಮಾಡುವ ಈ ಕಿರುಧಾನ್ಯಗಳನ್ನು ನಮ್ಮಲ್ಲೂ ನ್ಯಾಯಬೆಲೆ ಅಂಗಡಿಗಳಲ್ಲಿ
> ವಿತರಿಸಬಹುದಿತ್ತು.
>
> ಕಡೇಪಕ್ಷ ಸಮಗ್ರ ಶಿಶು ಕಲ್ಯಾಣ ಯೋಜನೆಯ ಮೂಲಕ ಅಂಗನವಾಡಿಯ ಮಕ್ಕಳಿಗಾದರೂ ಸಿಗುವಂತೆ
> ಮಾಡಬಹುದಿತ್ತು. ಆದರೇನು, ಆಡಳಿತದ ಸಮಗ್ರ ವ್ಯವಸ್ಥೆಗೇ ಪಾಚಿ ಕಟ್ಟಿದಂತಿರುವಾಗ ಖಾಸಗಿ
> ಕಂಪನಿಗಳು ಪಾಚಿಯಲ್ಲೇ ಚಿನ್ನ ಎತ್ತುತ್ತವೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಸಿಗಲೆಂಬ
> ತಾಯಂದಿರ ‘ಕರುಳಿನ ಕರೆ’ಯ ಬದಲು ಸರ್ಕಾರದ ‘ಸ್ಪಿರುಲಿನ ಕರೆ’ಯೇ ಹೆಚ್ಚು  ಸದ್ದು
> ಮಾಡುತ್ತದೆ.
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to