Very nice sir

On Dec 16, 2016 9:47 PM, "HAREESHKUMAR K Agasanapura" <[email protected]>
wrote:

> http://m.prajavani.net/article/2016_11_21/453594
>
> *ಮಗು ಮೊದಲ ವಿಜ್ಞಾನಿ*
>
> 21 Nov, 2016
>
> ಎಂ. ಆರ್‌. ನಾಗರಾಜು
>
>
> <https://www.facebook.com/sharer/sharer.php?u=https%3A%2F%2Fgoo.gl%2Fvf53oU>
> <https://twitter.com/intent/tweet?text=%E0%B2%AE%E0%B2%97%E0%B3%81+%E0%B2%AE%E0%B3%8A%E0%B2%A6%E0%B2%B2+%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF+https%3A%2F%2Fgoo.gl%2Fvf53oU>
> <https://plus.google.com/share?url=https%3A%2F%2Fgoo.gl%2Fvf53oU>
> <http://www.pinterest.com/pin/find/?url=https%3A%2F%2Fgoo.gl%2Fvf53oU>
> <http://www.linkedin.com/shareArticle?mini=true&title=%E0%B2%AE%E0%B2%97%E0%B3%81+%E0%B2%AE%E0%B3%8A%E0%B2%A6%E0%B2%B2+%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF+&url=https%3A%2F%2Fgoo.gl%2Fvf53oU>
>
> ವಿಜ್ಞಾನಿಗಿರಬೇಕಾದ ಅನೇಕ ಲಕ್ಷಣಗಳನ್ನು ನಾವು ಕಲಿಸಬೇಕಾಗಿಯೇ ಇಲ್ಲ. ಅವೆಲ್ಲವೂ ಅವರು
> ಹುಟ್ಟುವಾಗಲೇ ಹೊತ್ತು ತಂದಿರುತ್ತಾರೆ. ಅವರು ಅದನ್ನು ಕಳೆದುಕೊಳ್ಳದ ಹಾಗೆ ನಾವು
> ನೋಡಿಕೊಳ್ಳಬೇಕು; ಅಷ್ಟೇ. ಕುತೂಹಲ, ಅದಮ್ಯ ಉತ್ಸಾಹ ಸ್ವಸಾಮರ್ಥ್ಯಗಳಿಸಿಕೊಳ್ಳುವ,
> ಗಳಿಸಿಕೊಂಡಿದ್ದನ್ನು ಸಾಧಿಸಿ ತೋರಿಸುವ ಕುತೂಹಲ ಕಲಿಕೆಯಿಂದ ಬಂದದ್ದಲ್ಲ. ಅದು ನಿಸರ್ಗ
> ನಮಗೆ, ನಿಮೆಗೆಲ್ಲರಿಗೂ ನೀಡಿದ ಬಳುವಳಿ. ದೇಹದ ಒಂದಂಗ ಊನವಾದರೂ ಉಳಿದ ಅಂಗಗಳಿಂದ ಅದನ್ನು
> ಸರಿದೂಗಿಸಿಕೊಳ್ಳುವ ಕೌಶಲವೂ ಹುಟ್ಟಿನಿಂದ ನಮಗೆ ಬಂದಿದೆ. ಸದುದ್ದೇಶದಿಂದಲೋ,
> ದುರುದ್ದೇಶದಿಂದಲೋ ಯಾರೋ ಮಾಡುವ ಅವಹೇಳನವನ್ನೇ ನಂಬಿ ನಾವು ನಿಸರ್ಗದ ಕಾಣಿಕೆಯನ್ನು ಕಣ್ಮರೆ
> ಮಾಡಿದ್ದೇವೆ.
>
> ಮಕ್ಕಳು ಐನ್‌ಸ್ಟೈನರಂತಹ ಖ್ಯಾತ ವಿಜ್ಞಾನಿಗಳೊಡನೆ ಯಾವುದೇ ಕೀಳರಿಮೆ / ಮೇಲರಿಮೆಗಳ
> ಪರಿವೆಯೇ ಇಲ್ಲದೆ ಬೆರೆಯುತ್ತಿದ್ದುದು ನಿಜ. ಇದರಲ್ಲಿ ವಿಜ್ಞಾನಿಯ ಸೌಜನ್ಯದ ಪಾತ್ರದ
> ಹಾಗೆಯೇ ಕಿರಿಯರ ಕುತೂಹಲದ ಪಾತ್ರವೂ ಇದೆ. ಐನ್‌ಸ್ಟೈನ್‌ರನ್ನು ನೋಡಿ ಮಗುವೊಂದು ಕಿಟಾರನೆ
> ಕಿರುಚಿದಾಗ ಪೋಷಕರು ಕಂಗಾಲಾದರು. ಐನ್‌ಸ್ಟೈನ್ ತಪ್ಪು ತಿಳಿವರೆಂಬ ಅಂಜಿಕೆ ಅವರನ್ನು
> ಬಾಧಿಸಿತು. ನಿಜವಾಗಿ, ಪ್ರಾಮಾಣಿಕ ಪ್ರತಿಕ್ರಿಯೆಯನ್ನು ತೋರಿದವನು ನೀನೇ ಎಂದು ಮಗುವಿನತ್ತ
> ನೋಡಿ ಮುಗುಳು ನಕ್ಕರು ವಿಜ್ಞಾನಿ.
>
> ಹೌದು, ಮಕ್ಕಳು ವಿಜ್ಞಾನಿಗಳೊಡನೆ ಇರಬಯಸುವಷ್ಟೇ ತೀವ್ರತೆಯಿಂದ ವಿಜ್ಞಾನಿಗಳೂ
> ಬೆರೆಯುತ್ತಾರೆ. ಸಾರ್ವಜನಿಕರು ಹೋಗಲು ಸಂಕೋಚಪಡುತಿದ್ದ ರಾಯಲ್ ಸೊಸೈಟಿಯ ಬಾಗಿಲನ್ನು ಮಕ್ಕಳ
> ಭೇಟಿಗಾಗಿ ತೆರೆದ ಕೀರ್ತಿ ಮೈಕೇಲ್ ಫ್ಯಾರೆಡೆಗೆ ಸಲ್ಲುತ್ತದೆ. ಅವರನ್ನು ಕರೆಸಿ, ಉಪನ್ಯಾಸ
> ನೀಡಿ, ಪ್ರಯೋಗಗಳನ್ನು ಮಾಡಿ ತೋರಿಸಿದ ಈ ವಿಜ್ಞಾನಿ ಮಕ್ಕಳ ತಂದೆಯಲ್ಲ ಎಂಬುದು ವಿಪರ್ಯಾಸ.
> ‘ನೀವು ಈ ಪ್ರಯೋಗಶಾಲೆಗೆ ಭೇಟಿ ನೀಡುವ ಮೂಲಕ ವಿಜ್ಞಾನ, ಸಂಶೋಧನೆ, ಮತ್ತು ವಿಜ್ಞಾನಿಗಳಿಗೆ
> ಮಾನ್ಯ ಮಾಡಿ ನನಗೆ ಸಂತಸ ಮೂಡಿಸಿದ್ದೀರಿ’ ಎಂಬುದು ಅವರು ಮಕ್ಕಳಿಗೆ ಉಪನ್ಯಾಸ ನೀಡುವಾಗಿನ
> ಮೊದಲ ಸಾಲು.
>
> ಲೂಯಿ ಪಾಸ್ತರ್ ಅವರು ತಮ್ಮ ವಿಜ್ಞಾನದ ಸಂಶೋಧನೆಯ ಸಾಧನೆಯನ್ನು ಗುರುತಿಸಿದಾಗ ಅದು ಮುಗ್ಧ
> ಶಿಶುವಿನ ಹಾಗೆ ನಿಸರ್ಗವನ್ನು ಬೆರೆಗುಗಣ್ಣಿನಿಂದ ನೋಡುವುದು – ಎಂದು ವಿವರಿಸಿದ್ದಾರೆ.
> ನಿಸರ್ಗ ನೀಡಿದ ಕಾಣಿಕೆಯನ್ನು ಕೆಡದ ಹಾಗೆ ಸಂರಕ್ಷಿಸಿಕೊಳ್ಳುವುದೇ ವಿಜ್ಞಾನಿಗಳ ಆಶಯ.
>
> ನನಗೆ ಮಕ್ಕಳು ಬರೆವ ಪತ್ರದಲ್ಲಿ ಅನೇಕ ಬಾರಿ ಕಾಣಿಸಿಕೊಂಡಿರುವ ಪ್ರಶ್ನೆ ಮೊದಲ ವಿಜ್ಞಾನಿ
> ಯಾರು?
> ಮೊದಲು ಈ ಪ್ರಶ್ನೆಗೆ ಉತ್ತರ ತಿಳಿಯದೆಂದು ಬರೆದೆ. ಅದು ಮಕ್ಕಳಿಗೂ, ನನಗೂ ನಿರಾಶೆ
> ಮೂಡಿಸಿತು. ಅನಂತರ ಈ ಪ್ರಶ್ನೆಗೆ ಉತ್ತರಿಸಲು ಏಕೆ ಕಷ್ಟವೆಂದು ವಿವರಿಸಿದೆ. ಅದೂ
> ಮಕ್ಕಳಿಗೆ/ನನಗೆ ಸಮಾಧಾನ ನೀಡಿದ ಉತ್ತರವಾಗಲಿಲ್ಲ. ಮತ್ತೆ ಅದೇ ಪ್ರಶ್ನೆಗೆ ಉತ್ತರ
> ಬರೆಯಬೇಕಾದಾಗ ಧೈರ್ಯ ಮಾಡಿ ಉತ್ತರ ನೀಡಿದೆ: ಮೊದಲ ವಿಜ್ಞಾನಿ ಮಗು!
>
> ಹೀಗೆ ಹೇಳಿದ್ದಾದರೂ ಹೇಗೆ? ವಿಜ್ಞಾನಿಗಳ ಜೀವನಚರಿತ್ರೆ ಅಧ್ಯಯನ ಮಾಡಿದಾಗ (ಈಗಂತೂ ಅದು
> ವಿಜ್ಞಾನಿಗಳ ವಿಶ್ವಕೋಶವಾಗಿ ಲಭ್ಯವಾಗಿದೆ) ಅವರು ಸಂಶೋಧನೆ ಕೈಗೊಂಡು ವಿಜ್ಞಾನಿ
> ಎನಿಸಿಕೊಳ್ಳುವ ಎಷ್ಟೋ ಮೊದಲೇ ವಿಜ್ಞಾನಿಗಿರಬೇಕಾದ ಲಕ್ಷಣಗಳನ್ನು ತಮ್ಮ ಶಾಲಾ ಪೂರ್ವ
> ದಿನಗಳಲ್ಲಿ / ಶಾಲೆಯಲ್ಲಿ ಅನೇಕ ರೀತಿಯಿಂದ ಮೆರೆದಿರುವುದು ಕಂಡುಬಂದಿತು. ಇವನ್ನು ಅಧ್ಯಯನ
> ಮಾಡಿ, ಈ ಕುರಿತು ಶಾಲೆಗಳಲ್ಲಿ ಉಪನ್ಯಾಸ ನೀಡಿದಾಗ, ಮಕ್ಕಳು, ತಾವೂ ಈ ವರ್ತನೆ ತೋರಿದ
> ಬಗ್ಗೆ ಅವರ ಅನುಭವವನ್ನು ಹೇಳಿಕೊಳ್ಳುತ್ತಿದ್ದರು.
>
> ಹೀಗಾಗಿ ಈ ಸಾರ್ವತ್ರಿಕ ಲಕ್ಷಣ ಶಾಲಾ ಕಲಿಕೆಯ ಫಲವಲ್ಲ. ಶಾಲಾ ಕಲಿಕೆಗೆ ಸೇರ್ಪಡೆಯಾಗುವ ಈ
> ವಿಜ್ಞಾನದ ಹುಡುಕಾಟಗಳು - ಶಾಲೆ, ಪ್ರಯೋಗಾಲಯ, ಗ್ರಂಥಾಲಯಗಳಿಗೆ ಬಂದು ಸೇರುವ ಮೊದಲೇ
> ಶಾಲೆಗೆ ಹೋಗದವರೇ ಅದನ್ನು ರೂಪಿಸಿರಬೇಕು. ಚಿನ್ನವನ್ನು ಕೀಳುಲೋಹಗಳಿಂದ ತಯಾರಿಸುವ ಪ್ರಯತ್ನ
> ಶಾಲಾ ಕಲಿಕೆಯ ಫಲವೇನೂ ಅಲ್ಲ. ಅಂದ ಮೇಲೆ, ಕಲಿಕೆಯಿಂದ ಕೌಶಲ, ಮತ್ತು ಶಿಸ್ತು ಕೊಡುಕೊಳ್ಳುವ
> ಬಗ್ಗೆ ಎರಡು ಮಾತಿಲ್ಲ. ಆದರೆ ಆ ಶಿಸ್ತನ್ನು ರೂಪಿಸಿದ್ದು ಯಾರು?
>
> ಮಕ್ಕಳಿಗೆ, ಸಾರ್ವಜನಿಕರಿಗೆ (ಸಾರ್ವಜನಿಕರೂ ವಿಜ್ಞಾನಕ್ಷೇತ್ರದ ಬಗ್ಗೆ ಭಯ ಮಿಶ್ರಿತ
> ಕುತೂಹಲ ಇರುವ ಮಕ್ಕಳೇ) ವಿಜ್ಞಾನದ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು
> ಕೆಲವು ಅಪವಾದಗಳನ್ನು ಹೊರತುಪಡಿಸಿ - ಎಲ್ಲ ವಿಜ್ಞಾನಿಗಳೂ ಮಾಡಿದ್ದಾರೆ. ಈ ವಿಜ್ಞಾನಿಗಳ
> ಸಂಖ್ಯಾ ಕೊರತೆಯನ್ನು ನೀಗಿಸಲೇನೋ ಎನ್ನುವ ಹಾಗೆ ತಜ್ಞರೂ ಅಜ್ಞರೂ ವಿನಿಮಯ ಮಾಡಿಕೊಳ್ಳುವ
> ಒಂದು ತಂಡವೇ ಭಾರತದ ಎಲ್ಲಾ ಭಾಷಾವಾರು ಪ್ರಾಂತ್ಯದಲ್ಲೂ ರೂಪುಗೊಂಡಿದೆ.
>
> ಭಾರತದ ಮಾಜಿ ರಾಷ್ಟ್ರಪತಿಯವರೂ ತಮ್ಮ ಸೂಕ್ಷ್ಮ ಗ್ರಹಿಕೆಯಿಂದ ಮಕ್ಕಳಲ್ಲಿ ಭವಿಷ್ಯದ ಬಗೆಗೆ
> ಕಾರ್ಮೋಡ ಆವರಿಸಿ ಕಂಗಾಲಾಗಿರುವುದನ್ನು ಗಮನಿಸಿ, ಅವರಿಗೆ ಸ್ಫೂರ್ತಿ ತುಂಬಲು ಮುಂದಾದರು.
> ಮಕ್ಕಳ ದಿನಾಚರಣೆಗೆ ಪೂರಕವಾದ ಮತ್ತೊಂದು ಕಾರ್ಯಾಚರಣೆ. ಮಾಧ್ಯಮಗಳಲ್ಲಿ ವರದಿ ಆಗುವ
> ನಕಾರಾತ್ಮಕ ಅಂಶಗಳನ್ನೇ ಹಿಮ್ಮೆಟ್ಟಿಸುವ ಸಕಾರಾತ್ಮಕ ಅಲೆಯನ್ನು ರೂಪಿಸಿ ಪಸರಿಸಿದ್ದು ಅವರ
> ಸಾಧನೆ. ಅವರನ್ನೂ ಮಕ್ಕಳು ಕೇಳಿದ ಪ್ರಶ್ನೆ: ‘ಮೊದಲ ವಿಜ್ಞಾನಿ ಯಾರು?’
>
> ಈ ಲೇಖಕನ ಧನ್ಯಭಾವವೆಂದರೆ, ಡಾ. ಕಲಾಮ್ ಅವರೂ ‘ಮಾನವಶಿಶು’ ಎಂದೇ ಉತ್ತರಿಸಿದ್ದು. ಈ
> ಉತ್ತರ ಸೋಜಿಗ ಉಂಟು ಮಾಡಲು ಕಾರಣವನ್ನು ಅವರೇ ಹೇಳಿದರು: ಇಂದಿನ ವಿಜ್ಞಾನಿಯ ಮಾದರಿ (ರೋಲ್
> ಮಾಡೆಲ್) ಪ್ರಯೋಗಾಲಯದಲ್ಲಿ ಉಪಕರಣಗಳೊಡನೆ ಬಡಿದಾಡುತ್ತಿರುವ ವ್ಯಕ್ತಿ. ಅಂತಹ
> ವಿಜ್ಞಾನಿಯನ್ನು ಅವರು ಕಲ್ಪಿಸಿಕೊಂಡಿದ್ದಾರೆ. ಆದ್ದರಿಂದ ಮೂಲಸೆಲೆಯಾದ ಮಾನವ ಕೌತುಕವನ್ನು
> ಉಪೇಕ್ಷಿಸಿದ್ದಾರೆ. ಮಲಿನಗೊಳ್ಳದ ಕೌತುಕವು ಗರಿಷ್ಠಮಟ್ಟದಲ್ಲಿರುವುದು ಕಿರಿಯರಲ್ಲೇ ಎಂದು
> ಮನೋವಿಜ್ಞಾನಿಗಳೂ ಒಪ್ಪುತ್ತಾರೆ.
>
> ಅದೇನೆ ಇರಲಿ, ಭಾರತದ ಭವಿತವ್ಯದ ಭವ್ಯಭವನ ನಿಂತಿರುವುದು ಭಾರತದ ನೆಲದ ಮೇಲೆ ಅಲ್ಲ. ಭಾವಿ
> ಭಾರತದ ಪ್ರಜೆಗಳು ಈ ದೇಶ/ಸಮಾಜದ ಮೇಲೆ ಇರಿಸಿರುವ ಭರವಸೆಯ ಬುನಾದಿಯ ಮೇಲೆ. ಈ ಭರವಸೆ
> ಭಗ್ನವಾಗದಂತೆ ನಾವೆಲ್ಲರೂ ವಿಶೇಷ ಗಮನ ಹರಿಸಬೇಕಾದ ತುರ್ತು ಈಗಲೂ ಇದೆ.
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to