super sir 2017-01-03 15:49 GMT+05:30 iju km <[email protected]>:
> > > 2017-01-03 9:52 GMT+05:30 Seema Kadamb <[email protected]>: > >> Sir/mam plz let me know how to get Clt passing certificate. >> >> On Jan 3, 2017 9:38 AM, "HAREESHKUMAR K Agasanapura" < >> [email protected]> wrote: >> >>> http://m.prajavani.net/article/2016_12_29/462300 >>> >>> *ಗಡಿಯೊಳಗಿನ ವೈರಿಯತ್ತ ಅಕ್ಷೋಹಿಣಿ ಕ್ಷಿಪಣಿ* >>> >>> 29 Dec, 2016 >>> >>> ನಾಗೇಶ್ ಹೆಗಡೆ >>> >>> >>> <https://www.facebook.com/sharer/sharer.php?u=https%3A%2F%2Fgoo.gl%2FYgWvzK> >>> <https://twitter.com/intent/tweet?text=%E0%B2%97%E0%B2%A1%E0%B2%BF%E0%B2%AF%E0%B3%8A%E0%B2%B3%E0%B2%97%E0%B2%BF%E0%B2%A8+%E0%B2%B5%E0%B3%88%E0%B2%B0%E0%B2%BF%E0%B2%AF%E0%B2%A4%E0%B3%8D%E0%B2%A4+%E0%B2%85%E0%B2%95%E0%B3%8D%E0%B2%B7%E0%B3%8B%E0%B2%B9%E0%B2%BF%E0%B2%A3%E0%B2%BF+%E0%B2%95%E0%B3%8D%E0%B2%B7%E0%B2%BF%E0%B2%AA%E0%B2%A3%E0%B2%BF++https%3A%2F%2Fgoo.gl%2FYgWvzK> >>> <https://plus.google.com/share?url=https%3A%2F%2Fgoo.gl%2FYgWvzK> >>> <http://www.pinterest.com/pin/find/?url=https%3A%2F%2Fgoo.gl%2FYgWvzK> >>> <http://www.linkedin.com/shareArticle?mini=true&title=%E0%B2%97%E0%B2%A1%E0%B2%BF%E0%B2%AF%E0%B3%8A%E0%B2%B3%E0%B2%97%E0%B2%BF%E0%B2%A8+%E0%B2%B5%E0%B3%88%E0%B2%B0%E0%B2%BF%E0%B2%AF%E0%B2%A4%E0%B3%8D%E0%B2%A4+%E0%B2%85%E0%B2%95%E0%B3%8D%E0%B2%B7%E0%B3%8B%E0%B2%B9%E0%B2%BF%E0%B2%A3%E0%B2%BF+%E0%B2%95%E0%B3%8D%E0%B2%B7%E0%B2%BF%E0%B2%AA%E0%B2%A3%E0%B2%BF++&url=https%3A%2F%2Fgoo.gl%2FYgWvzK> >>> >>> ಹೊಸ ವರ್ಷದ ಸ್ವಾಗತಕ್ಕೆ ಆರು ದಿನ ಬಾಕಿ ಇದ್ದಾಗಲೇ ಭಾರತ ಭರ್ಜರಿ ಪಟಾಕಿಯನ್ನು >>> ಆಕಾಶಕ್ಕೆ ಹಾರಿಸಿ ಹರ್ಷದ ಹೊನಲನ್ನೇ ಚಿಮ್ಮಿಸಿದೆ. ತಲೆಯಲ್ಲಿ ಪರಮಾಣು ಬಾಂಬನ್ನು ಹೊತ್ತು >>> ವಾಯುಮಂಡಲದ ಆಚೆಗೆ ಏರಿ ಹೋಗಿ ಅಲ್ಲಿಂದ ಬೇಕೆಂದ ದಿಕ್ಕಿಗೆ ಗುಂಡುಕಲ್ಲಿನಂತೆ ಬೀಳಬಲ್ಲ >>> ‘ಅಗ್ನಿ-5’ (ಅಂದರೆ ‘ಅಗ್ನಿ’ಯ ಐದನೇ ಅವತಾರ, ‘ಅಗ್ನಿಪಂಚಮ’) ಕ್ಷಿಪಣಿ ಸಾಧನೆ ಮತ್ತೊಮ್ಮೆ >>> ಸಾಬೀತಾಗಿದೆ. >>> >>> ಈ ಹಿಂದೆ ಮೂರು ಬಾರಿಯೂ ಇದು ಪ್ರಯೋಗಾರ್ಥ ಯಶಸ್ವಿಯಾಗಿ ನೆಗೆದು ಸಾವಿರಾರು ಕಿ.ಮೀ. >>> ಆಚಿನ ಸಮುದ್ರಕ್ಕೆ ಬಿದ್ದಿತ್ತು. ಈ ಬಾರಿಯ ವಿಶೇಷ ಏನೆಂದರೆ, ಅದನ್ನು ದೊಡ್ಡ ಪಿಪಾಯಿಯಂತೆ >>> ಟ್ರಕ್ ಮೇಲೆ ಕೂರಿಸಿ ಹಾರಿಸಿದ್ದರು. ದಿಲ್ಲಿಯ ಗಣತಂತ್ರ ಪರೇಡಿನ ಟ್ಯಾಬ್ಲೊ ಮೇಲೆ ಕೂತಂತೇ >>> ಹಾರಿದ ಹಾಗೆ. >>> >>> ಹೀಗೆ ಸಂಚಾರಿ ವಾಹನದಲ್ಲಿ ಇಟ್ಟು ಹಾರಿಸಲು ಕಾರಣ ಇಷ್ಟೆ: ಭಾರತ ಎಂದೂ ತಾನಾಗಿ ಮೊದಲ >>> ಪರಮಾಣು ಶಸ್ತ್ರವನ್ನು ಬಳಸುವುದಿಲ್ಲ ಎಂದು ಪಣ ತೊಟ್ಟಿದೆ. ಹಾಗೆಂದು, ಬೇರೆ ಯಾರಾದರೂ ನಮ್ಮ >>> ಮೇಲೆ ಅಣ್ವಸ್ತ್ರ ಪ್ರಯೋಗಿಸಿದರೆ ‘ನಾವು ಸರ್ವನಾಶವಾದರೂ ನಿಮ್ಮನ್ನು ಸುಡುತ್ತೇವೆ’ ಎಂಬ >>> ಎಚ್ಚರಿಕೆಯನ್ನು ಅಕ್ಕಪಕ್ಕದವರಿಗೆ ಬಿಂಬಿಸಬೇಕಿದೆ. >>> >>> ಇದಕ್ಕೆ ‘ಮರುದಾಳಿ ಸಾಮರ್ಥ್ಯ’ ಎನ್ನುತ್ತಾರೆ. ನಮ್ಮ ಪರಮಾಣು ಕ್ಷಿಪಣಿಗಳು ಮೊದಲ ದಾಳಿಯ >>> ನಂತರವೂ ಸುರಕ್ಷಿತ ಉಳಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಅಂದರೆ, ನಮ್ಮ ಅಣ್ವಸ್ತ್ರ >>> ಎಲ್ಲಿದೆ ಎಂಬುದು ಗೊತ್ತಾಗಬಾರದು. ಇಂದು ಇಲ್ಲಿದೆ, ನಾಳೆ ಇನ್ನೆಲ್ಲೋ ಇದೆ >>> ಅನ್ನುವಂತಿರಬೇಕು. ನಮ್ಮ ‘ಅಗ್ನಿ ಪಂಚಮ’ ಈಗ ಎಲ್ಲೆಂದರಲ್ಲಿ ಠಿಕಾಣಿ ಹೂಡಬಲ್ಲ ಜಂಗಮ ಬಾಂಬ್ >>> ಎಂಬುದನ್ನೂ ತೋರಿಸಿದಂತಾಗಿದೆ. >>> >>> ಅಗ್ನಿ ಮಾದರಿಯನ್ನು ‘ಗುಂಡು ಕ್ಷಿಪಣಿ’ (ಬ್ಯಾಲಿಸ್ಟಿಕ್ ಮಿಸೈಲ್) ಎನ್ನುತ್ತಾರೆ. >>> ದೊಡ್ಡ ಗುಂಡನ್ನು ಮೇಲಕ್ಕೆ, ಗಗನದಾಚೆಗೆ ಎಸೆದು ಅದು ತನ್ನ ತೂಕದಿಂದಾಗಿಯೇ ಕೆಳಕ್ಕೆ >>> ಬೀಳುವಂತೆ ಮಾಡುವ ತಂತ್ರವದು. ನಿಂತಲ್ಲಿಂದ ಎತ್ತರಕ್ಕೆ ನೆಗೆಯುವ ಸಾಮರ್ಥ್ಯ ಅದಕ್ಕೆ >>> ಮುಖ್ಯವೇ ಶಿವಾಯ್, ಗುರಿ ಅಷ್ಟೊಂದು ನಿಖರವಾಗಿರುವುದಿಲ್ಲ. ಕ್ಷಿಪಣಿ ನಿಂತಿರುವ ಕೋನವನ್ನು >>> ಕೊಂಚ ಬದಲಿಸಿದರೆ ಅದು ಹಾರಿಸಿದ ಗುಂಡು ಬೀಜಿಂಗ್ ಬದಲು ಟೋಕಿಯೊ ಇಲ್ಲವೆ ಮಾಸ್ಕೊ ಇಲ್ಲವೆ >>> ಮೊಂಗೋಲಿಯಾದ ರಾಜಧಾನಿ ಉಲಾನ್‌ಬಾತರ್ ಅಥವಾ ಈಜಿಪ್ತಿನ ಪಿರಮಿಡ್ಡೊ ಎಲ್ಲೋ ಬೀಳಬಹುದು. >>> >>> ಗುಂಡುಕ್ಷಿಪಣಿಯ ಬದಲು ವಿಮಾನದಂತೆ ನೆಲಕ್ಕೆ ಸಮಾನಾಂತರವಾಗಿ ದಿಕ್ಕನ್ನು ಬದಲಿಸುತ್ತ >>> ಸಾಗುವ ಕ್ಷಿಪಣಿಗೆ ‘ಕ್ರೂಸ್ ಮಿಸೈಲ್’ ಎನ್ನುತ್ತಾರೆ. ಇದಕ್ಕೆ ವಿಮಾನದಂತೆ ಪುಟ್ಟ ರೆಕ್ಕೆ, >>> ಚಿಕ್ಕ ಚುಕ್ಕಾಣಿ ಕೂಡ ಇರುತ್ತದೆ. ನೆಲ, ಜಲ, ವಾಯು ಮೂರರಿಂದಲೂ ಇದನ್ನು ಚಿಮ್ಮಿಸಬಹುದು. >>> ಏಳೆಂಟು ನೂರು ಕಿ.ಮೀ. ದೂರದವರೆಗೆ ಚಲಿಸಿಯೂ ನಿರ್ದಿಷ್ಟ ಗುರಿ ತಲುಪುವಂತಿರಬೇಕು. >>> >>> ಪರಮಾಣು ಬಾಂಬನ್ನು ಹೊತ್ತು ಸಾಗಬಲ್ಲ ‘ನಿರ್ಭಯ’ ಹೆಸರಿನ ಅಂಥ ಕ್ರೂಸ್ ಕ್ಷಿಪಣಿಯನ್ನು >>> ತಯಾರಿಸಲು ನಮ್ಮ ವಿಜ್ಞಾನಿಗಳು ಶ್ರಮಿಸುತ್ತಲೇ ಇದ್ದಾರೆ. ಹಿಂದಿನ ಮೂರು ಯತ್ನಗಳು >>> ವಿಫಲವಾಗಿದ್ದವು. ಮೊನ್ನೆ ಅಗ್ನಿಯನ್ನು ಉಡಾಯಿಸುವ ಎರಡು ದಿನ ಮೊದಲು ಅದೇ ಒಡಿಶಾ >>> ಕರಾವಳಿಯಲ್ಲಿ ‘ನಿರ್ಭಯ’ವನ್ನು ಹಾರಿಸುವ ನಾಲ್ಕನೆಯ ಯತ್ನ ನಡೆದಿತ್ತು. ಅದೂ ದಿಕ್ಕು ತಪ್ಪಿ >>> ಚಿಮ್ಮಿದ್ದರಿಂದ ಎರಡೇ ನಿಮಿಷಗಳಲ್ಲಿ ಅದನ್ನು ಸ್ಫೋಟಿಸಲಾಯಿತು. >>> >>> ಅಣ್ವಸ್ತ್ರ ಹೊತ್ತಿರುವ ಕ್ರೂಸ್ ಕ್ಷಿಪಣಿ ಅತ್ಯಂತ ಕರಾರುವಾಕ್ಕಾಗಿ ಕೆಲಸ ಮಾಡಬೇಕು. >>> ವೈರಿಯ ರಡಾರ್‌ಗೆ ಗೊತ್ತಾಗದ ಹಾಗೆ ನೆಲಕ್ಕೆ ಸಮೀಪದಲ್ಲೇ ಅತಿ ವೇಗದಲ್ಲಿ ಸಾಗಬೇಕಾದ ಇದು >>> ದಿಕ್ಕು ತಪ್ಪಿ ನಮ್ಮ ರಾಷ್ಟ್ರದಲ್ಲೇ ಸಿಡಿದರೆ? ಪಾಕಿಸ್ತಾನದ ಬಳಿ ‘ಬಾಬರ್’ ಕ್ರೂಸ್ >>> ಕ್ಷಿಪಣಿಗಳಿವೆ. ರಷ್ಯ ಮತ್ತು ಚೀನಾದ ತಂತ್ರಜ್ಞಾನದಿಂದ ತಯಾರಾಗಿದ್ದು. ಅವು ದಾರಿಯಲ್ಲಿ >>> ಸಾಗುತ್ತಲೆ ಕಿರು ರೆಕ್ಕೆಗಳನ್ನು ಬಿಚ್ಚಿಕೊಂಡು 700 ಕಿ.ಮೀ. ದೂರ ಬಂದು ಸ್ಫೋಟವಾಗುತ್ತವೆ. >>> >>> ನಮ್ಮಲ್ಲೂ ರಷ್ಯದ ನೆರವಿನಿಂದ ನಿರ್ಮಸಲಾದ ‘ಬ್ರಹ್ಮೋಸ್’ ಕ್ರೂಸ್ ಕ್ಷಿಪಣಿ ಇದೆ >>> (ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜಿನ ಮೈದಾನದಲ್ಲಿ ನಾಳೆಯಿಂದ ನಾಲ್ಕು ದಿನ ಅವುಗಳ >>> ಮಾಡೆಲ್‌ಗಳನ್ನು ನೋಡಬಹುದು; ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಲ್ಲಿ ವಿವಿಧ ಏರೋಸ್ಪೇಸ್ >>> ಸಾಧನ ಸಾಧನೆಗಳ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ). >>> >>> ನಾವು ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮದೇ ‘ಅರಿಹಂತ್’ ಪರಮಾಣು ಇಂಧನ >>> ಚಾಲಿತ ಜಲಾಂತರ್ಗಾಮಿಯನ್ನು ನಿರ್ಮಿಸಿ ಈ ವರ್ಷ ಆಗಸ್ಟ್‌ನಲ್ಲಿ ಚಾಲನೆ ಕೊಟ್ಟಿದ್ದೇವೆ. >>> ರಷ್ಯದಿಂದ ಖರೀದಿಸಿದ ‘ಚಕ್ರ’ ಜಲಾಂತರ್ಗಾಮಿಯ ಮಾದರಿಯಲ್ಲಿ ನಾವೇ ಸ್ವಂತ ನಿರ್ಮಿಸಿದ್ದು. >>> ಆಳ ಸಮುದ್ರದಿಂದ ಆಕಾಶಕ್ಕೆ ನೆಗೆಯಬಲ್ಲ ಪರಮಾಣು ಗುಂಡು ಕ್ಷಿಪಣಿಯನ್ನು ಅದರಲ್ಲಿ >>> ಹೂಡಿಡಬಹುದು. ಕ್ರೂಸ್ ಕ್ಷಿಪಣಿಯ ಹಾಗೆ ನೀರೊಳಕ್ಕೇ ಸಾಗಬಲ್ಲ ಟಾರ್ಪಿಡೊ ಇವೆಯಾದರೂ ವೈರಿ >>> ಹಡಗುಗಳ ನಿರ್ನಾಮವಷ್ಟೇ ಅವುಗಳ ಗುರಿ ಆಗಿರುವುದರಿಂದ ಅದರಲ್ಲಿ ಅಣ್ವಸ್ತ್ರ >>> ಹೂಡಿರುವುದಿಲ್ಲ. >>> >>> ಒಂದು ದೇಶದ ನೆಲಸೇನೆ, ಜಲಸೇನೆ, ವಾಯುಸೇನೆ ಹೀಗೆ ಮೂರರ ಬಳಿಯೂ ಪರಮಾಣು ಶಸ್ತ್ರಾಸ್ತ್ರ >>> ಇದ್ದರೆ ಅದಕ್ಕೆ ‘ತ್ರಿಬಲ’ ಮಿಲಿಟರಿ ಎನ್ನುತ್ತಾರೆ. ನಮ್ಮಲ್ಲಿ ವೈರಿಯ ಮೇಲೆ ಬಾಂಬ್ >>> ಹಾಕಬಲ್ಲ ವಿಮಾನಗಳಿವೆ, ಜಲಾಂತರ್ಗಾಮಿ ಇದೆ. ನೆಲದಿಂದಲೇ ಚಿಮ್ಮಿಸಬಲ್ಲ ಅಣ್ವಸ್ತ್ರ ತನಗೂ >>> ಬೇಕೆಂದು ನಮ್ಮ ಆರ್ಮಿ ಒತ್ತಡ ಹಾಕುತ್ತಿದೆ. ಅದಕ್ಕೆ ‘ನಿರ್ಭಯ’ ಸದ್ಯಕ್ಕಿಲ್ಲ. >>> >>> ಮಿಲಿಟರಿ ತಂತ್ರಜ್ಞಾನವನ್ನು ಬದಿಗಿಡಿ; ತೋಳ್‌ಬಲ ಎಷ್ಟೇ ಇದ್ದರೂ ಅದರ ಅಂತಿಮ ಗುರಿ >>> ವಿನಾಶವೇ ತಾನೆ? ಮನುಷ್ಯನ ಬುದ್ಧಿಶಕ್ತಿಯ ಪರಾಕಾಷ್ಠೆಯನ್ನು ತೋರಿಸಬಲ್ಲ ಅದ್ಭುತ ಸಾಧನೆಗಳು >>> 2016ರಲ್ಲಿ ಸಾಕಷ್ಟು ಆಗಿವೆ. ಅವುಗಳಲ್ಲಿ ಅತ್ಯಂತ ಮಹತ್ವದ ವೈಜ್ಞಾನಿಕ ಸಾಧನೆ ಎಂದರೆ ಜೀನ್ >>> ಎಡಿಟಿಂಗ್. >>> >>> ಯಾವುದೇ ಜೀವಿಯ ಹುಟ್ಟುಗುಣವನ್ನು ಅದು ಹುಟ್ಟುವ ಮೊದಲೇ ತಿದ್ದುಪಡಿ (ಎಡಿಟ್) ಮಾಡಬಲ್ಲ >>> ಸಾಮರ್ಥ್ಯ ಮನುಷ್ಯನಿಗೆ ಎಟಕಿದೆ. ಉದಾಹರಣೆಗೆ, ಮನುಷ್ಯರಿಗೆ ಅನುಕೂಲವಾಗುವಂತೆ ಸೊಳ್ಳೆಯ >>> ಗುಣಾಣುವನ್ನು ತಿದ್ದುಪಡಿ ಮಾಡಬಹುದು. ಅಂಥ ಹೊಸ ಸೊಳ್ಳೆಯ ಶರೀರದೊಳಕ್ಕೆ ಮಲೇರಿಯಾ ವೈರಾಣು >>> ತೂರಿಕೊಂಡರೆ ಅಲ್ಲೇ ವೈರಾಣು ಜೀರ್ಣವಾಗಿಬಿಡುತ್ತದೆ. ಆ ಸೊಳ್ಳೆ ಯಾರನ್ನೇ ಕಚ್ಚಿದರೂ >>> ಮಲೇರಿಯಾ ಭಯವಿಲ್ಲ. >>> >>> ಇದು ಕುಲಾಂತರಿ ಅಲ್ಲ. ಏಕೆಂದರೆ, ಇದರೊಳಕ್ಕೆ ಬೇರೊಂದು ಕುಲದ ಜೀವಿಯ ಗುಣಾಣುವನ್ನು >>> ತೇಪೆ ಹಚ್ಚುವುದಿಲ್ಲ. ಇದ್ದುದನ್ನೇ ತಿದ್ದಿ ಬದಲಿಸಬಹುದು. ಸ್ವಾರಸ್ಯದ ಸಂಗತಿಯೆಂದರೆ ಇದು >>> ಮನುಷ್ಯನಿಗೆ ಹೊಳೆದ ಐಡಿಯಾ ಅಲ್ಲವೇ ಅಲ್ಲ. ಏಕಾಣುಜೀವಿಗಳು ಕ್ರಿಸ್ಪ್‌ಆರ್ (crispr) ಎಂಬ >>> ಅಸ್ತ್ರವನ್ನು ವೈರಾಣುಗಳ ಮೇಲೆ ಪ್ರಯೋಗಿಸಲೆಂದು ಅನಾದಿ ಕಾಲದಿಂದಲೂ ಬಳಸುತ್ತಿವೆ. ಇದು >>> ಒಂಥರಾ ಗುರಿ ನಿರ್ದೇಶಿತ ಕ್ಷಿಪಣಿಯ ಹಾಗೆಯೇ ಕೆಲಸ ಮಾಡುತ್ತದೆ. ವೈರಿಯ ಬ್ರಹ್ಮಸೂತ್ರದ >>> ಒಳಕ್ಕೆ ಒಂದು ಕಿಣ್ವಕಣವನ್ನು ಸರಿಯಾಗಿ ತೂರಿಸಿದರೆ ಸಾಕು, ವೈರಿಯ ಚಹರೆ ಬದಲಾಗುತ್ತದೆ. >>> >>> ಈ ಬಗೆಯ ಗುಣಾಣು ತಿದ್ದುಪಡಿ ತಂತ್ರವನ್ನು ಉಪಯೋಗಿಸಿ ಚೀನೀಯರು ಮನುಷ್ಯನ ಭ್ರೂಣದ >>> ವಂಶವಾಹಿಯನ್ನೇ ತಿದ್ದಿದ್ದಾರೆ. ಈಗಿರುವ ಕಾಯಿದೆಗಳ ಪ್ರಕಾರ, ಅಂಥ ಭ್ರೂಣವನ್ನು ತಾಯಿಯ >>> ಗರ್ಭದಲ್ಲಿ ಇಡುವಂತಿಲ್ಲ, ಸುಮ್ಮನೆ ಪ್ರಯೋಗಕ್ಕೆಂದು ಗಾಜಿನ ಬಟ್ಟಲಲ್ಲಿ ಬೆಳೆಸಿ >>> ನೋಡಬಹುದು. ಆದರೆ ನಮಗೆ ಬೇಕಿದ್ದಂಥ ಮಗು, ಅಂದರೆ ‘ಡಿಸೈನರ್ ಬೇಬಿ’ಯನ್ನು ಸೃಷ್ಟಿಸುವ >>> ತಂತ್ರಜ್ಞಾನ ಕೈಗೆಟುಕಿತು ಎಂಬಂತೆ ಈ ವಿಷಯಕ್ಕೆ ಪ್ರಚಾರ ಸಿಕ್ಕಿದೆ. >>> >>> ಸದ್ಯಕ್ಕೆ ಚೀನೀಯರು ತಮ್ಮ ಸಂಶೋಧನೆಯನ್ನು ಲೋಕಕಲ್ಯಾಣಕ್ಕಷ್ಟೇ ಸೀಮಿತಗೊಳಿಸಿದ್ದಾರೆ. >>> ಅಂದರೆ, ಮುಂದೆ ಹುಟ್ಟುವ ಮಗುವಿಗೆ ಏಡ್ಸ್ ರೋಗ ಬಾರದ ಹಾಗೆ ಅದರ ರಕ್ತಗುಣವನ್ನೇ ತಿದ್ದುಪಡಿ >>> ಮಾಡಿದ್ದಾರೆ. ಹಾಗಿದ್ದರೆ ಆ ಮಗು ಬೆಳೆದು ಯಾವುದೇ ಲಂಗುಲಗಾಮಿಲ್ಲದೆ ಲೈಂಗಿಕ ಅನಾಚಾರ >>> ಮಾಡುತ್ತ ಹೋಗಬಹುದೆ? ಅದು ವಿವಾದದ ಮೊದಲ ಮೊಳಕೆ ಆಗಬಹುದು. >>> >>> ಇನ್ನು, ಮುಪ್ಪೇ ಬಾರದ ಮನುಷ್ಯಜೀವಿಯನ್ನು ಸೃಷ್ಟಿ ಮಾಡಿದರೆ (ಜೀನ್ ತಿದ್ದುಪಡಿಯಿಂದ >>> ಅದೂ ಸಾಧ್ಯ ಎಂದು ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಗೊತ್ತಾಗಿದೆ) ಭೂಮಿಯ ಜನಸಂಖ್ಯೆ >>> ಎಲ್ಲಿಗೆ ಹೋಗಿ ಮುಟ್ಟೀತು? ಅಂಥ ಚಿರಾಯುಗಳ ಸೃಷ್ಟಿಯ ನೈತಿಕತೆ ವಿಷಯ ನಮ್ಮ ತಾಳಮದ್ದಲೆಯ >>> ಅರ್ಥಧಾರಿಗಳಿಗೆ ಸಿಕ್ಕರೆ ಅಹೋರಾತ್ರಿ ಇದರ ಒಳಿತು ಕೆಡುಕುಗಳನ್ನು ಚರ್ಚಿಸಬಹುದು. >>> >>> ಮನುಷ್ಯ ಜೀವಿಯ ಗುಣಗಳನ್ನು ತಿದ್ದುವ ಮಾತು ಹಾಗಿರಲಿ, ಸೊಳ್ಳೆಯ ಬ್ರಹ್ಮಸೂತ್ರದಲ್ಲಿ >>> ಹಸ್ತಕ್ಷೇಪ ಮಾಡುವುದರ ನೈತಿಕತೆಯೂ ಚರ್ಚಾಸ್ಪದವೇ ತಾನೆ? ಮಲೇರಿಯಾ ಕಾಯಿಲೆ ಇದ್ದುದರಿಂದಲೇ >>> ಮನುಷ್ಯರ ಸಂಖ್ಯೆ ಒಂದು ಮಿತಿಯಲ್ಲಿ ಇದೆ. ಈಗಲೂ ಪ್ರತಿವರ್ಷ ನಾಲ್ಕಾರು ಲಕ್ಷ ಜನರು >>> ಮಲೇರಿಯಾ ಜ್ವರಕ್ಕೆ ನಲುಗಿ ಸಾಯುತ್ತಿದ್ದಾರೆ. >>> >>> ಹಿಂದಿನ ಶತಮಾನಗಳಲ್ಲಿ ಸೊಳ್ಳೆಗಳನ್ನು ದೂರವಿಡುವ ತಂತ್ರಗಳೂ ಗೊತ್ತಿರಲಿಲ್ಲ; ಮಲೇರಿಯಾದ >>> ಭೀಕರತೆಯನ್ನು ತಗ್ಗಿಸಬಲ್ಲ ಔಷಧಗಳೂ ಇರಲಿಲ್ಲ. ಅಂದಾಜಿನ ಪ್ರಕಾರ ಸುಮಾರು 60 ಶತಕೋಟಿ ಜನರೇ >>> ಹುಟ್ಟದಂತೆ ಅದು ತಡೆದಿದೆ. >>> >>> ಹೀಗೆ, ನಿಸರ್ಗದ ಸಮತೋಲವನ್ನು ಕಾಯ್ದುಕೊಂಡ ಸೊಳ್ಳೆಯ ಗುಣಾಣುಗಳನ್ನು ನಾವು ತಿದ್ದುಪಡಿ >>> ಮಾಡುವುದು ಸರಿಯೆ? ಸರಿ ಎಂತಲೇ ಈ ಕ್ಷಣಕ್ಕೆ ವಾದಿಸೋಣ.ಹಾಗಿದ್ದರೆ ಮಲೇರಿಯಾ >>> ನಿಯಂತ್ರಣವಷ್ಟೇ ಏಕೆ? ಡೆಂಗೇ, ಚಿಕೂನ್‌ಗುನ್ಯ, ಹಳದಿಜ್ವರ, ಝೀಕಾ, ಮಿದುಳುಜ್ವರ ಹೀಗೆ >>> ಸುಮಾರು ಹದಿನೈದಕ್ಕೂ ಹೆಚ್ಚು ಬಗೆಯ ಕಾಯಿಲೆಗಳನ್ನು ತರಬಲ್ಲ ರೋಗಾಣುಗಳನ್ನು ಸೊಳ್ಳೆಗಳು >>> ತಮ್ಮ ಶರೀರದಲ್ಲಿ ಹೊತ್ತು ಹಾರುತ್ತಿರುತ್ತವೆ. ಅಂದಮೇಲೆ ಮನುಷ್ಯರ ವಾಸನೆಯೇ ಅವಕ್ಕೆ >>> ವಾಕರಿಕೆ ತರುವಂತೆ ಮಾಡಬಹುದಲ್ಲ? ಯಾಕೆ ಕೇವಲ ಮಲೇರಿಯಾ ವಿರುದ್ಧ ಮಾತ್ರ ಶಸ್ತ್ರ >>> ಎತ್ತಿದ್ದು? >>> >>> ಈ ಪ್ರಶ್ನೆಗೆ ಉತ್ತರಗಳು ವಿಜ್ಞಾನ ರಂಗವನ್ನು ಮೀರಿ ಆಚೀಚೆಗೆ ಹರಡಿಕೊಂಡಿವೆ. >>> ಸೊಳ್ಳೆಗಳು ಇದ್ದುದರಿಂದಲೇ ಔಷಧ ಉದ್ಯಮ ಬಹುದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.ಕೋಟ್ಯಂತರ >>> ಜನರು ಸೊಳ್ಳೆಗಳಿಂದಾಗಿಯೇ ಉತ್ತಮ ಬದುಕನ್ನು ಕಂಡುಕೊಂಡಿದ್ದಾರೆ. ನಮ್ಮ ದೇಶದಲ್ಲೇ >>> ಕಾಣುವುದಿಲ್ಲವೆ? ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಿಷೇಧಿಸಲಾದ 51 ಬಗೆಯ ಪೀಡೆನಾಶಕ >>> ವಿಷಗಳ ಬಳಕೆಯನ್ನು ನಮ್ಮ ದೇಶದಲ್ಲಿ ‘ಈಗಲೂ ಮುಂದುವರೆಸುವ ಅನಿವಾರ್ಯತೆ ಇದೆ’ ಎಂದು ಈ >>> ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ದಿಲ್ಲಿಯ ಉಚ್ಚ ನ್ಯಾಯಾಲಯಕ್ಕೆ ಹೇಳಿಕೆ ನೀಡಿತು. >>> >>> ತಜ್ಞರ ಸಮಿತಿಯ ಶಿಫಾರಸಿನ ಪ್ರಕಾರವೇ ತಾನು ಹಾಗೆ ಮಾಡುತ್ತಿದ್ದೇನೆ ಎಂದು ಕೂಡ >>> ತಿಳಿಸಿತು. ಆ ತಜ್ಞರ ಸಮಿತಿಯಲ್ಲಿ ವಿಷ ಉತ್ಪಾದಿಸುವ ಕಂಪನಿಗಳ ಪ್ರತಿನಿಧಿಗಳೇ >>> ತುಂಬಿಕೊಂಡಿದ್ದಾರೆ ಎಂಬುದು ಬೇರೆ ಮಾತು. ವಿಷಗಳನ್ನು ಮಾರುವುದು, ಆ ವಿಷಗಳ >>> ದುಷ್ಪರಿಣಾಮಗಳಿಂದಾಗಿ ಜನರು ಕಾಯಿಲೆ ಬೀಳುವುದು, ಅದರಿಂದಾಗಿ ಔಷಧಗಳಿಗೆ, ವೈದ್ಯರಿಗೆ ಹಾಗೂ >>> ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಿರುವುದು, ಅದರಿಂದಾಗಿ ದೇಶದ ಜಿಡಿಪಿಯಲ್ಲಿ ಹೆಚ್ಚಳ >>> ಕಾಣುತ್ತಿರುವುದು ಎಲ್ಲವೂ ಕಣ್ಣೆದುರಿಗೇ ಇರುವಾಗ ಸೊಳ್ಳೆಗಳನ್ನು ನಿರ್ನಾಮ ಮಾಡುವುದೆಂದರೆ >>> ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ದ ಹಾಗೆ ತಾನೆ? >>> >>> ನಮ್ಮ ಪೂರ್ವ ಪಶ್ಚಿಮಗಳ ದೊಡ್ಡ ದೇಶಗಳನ್ನು ಗುರಿ ಇಟ್ಟುಕೊಂಡು ಗುಂಡುಕ್ಷಿಪಣಿಯನ್ನು >>> ನಾವು ಸಿದ್ಧಪಡಿಸಿದೆವು. ಹಾಗೆಯೇ ದಕ್ಷಿಣಕ್ಕಿರುವ ಪುಟ್ಟ ಶ್ರೀಲಂಕಾ ಸಾಧಿಸಿದ ಗುರಿಯೂ >>> ನಮಗೆ ಮಾದರಿಯಾಗಬೇಕು. ಶ್ರೀಲಂಕಾ ಇದೀಗ ಮಲೇರಿಯಾವನ್ನು ಸಂಪೂರ್ಣ ನಿರ್ನಾಮ ಮಾಡಿದ ಏಷ್ಯಾದ >>> ಮೊದಲ ದೇಶವೆಂದು ಮೂರು ತಿಂಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಶಾಭಾಸ್‌ಗಿರಿ ಪಡೆದಿದೆ. >>> ಗಡಿಯಾಚಿನ ವೈರಿಗಿಂತ ಗಡಿಯೊಳಗಿನ ವೈರಿಯನ್ನು ಮೊದಲು ಮಟ್ಟ ಹಾಕಬೇಕಲ್ಲವೆ? >>> >>> Hareeshkumar K >>> GHS Huskuru >>> Malavalli TQ >>> Mandya Dt >>> 9880328224 >>> >>> -- >>> 1. If a teacher wants to join STF, visit http://karnatakaeducation.org. >>> in/KOER/en/index.php/Become_a_STF_groups_member >>> 2. For STF training, visit KOER - http://karnatakaeducation.org. >>> in/KOER/en/index.php >>> 4. For Ubuntu 14.04 installation, visit http://karnatakaeducation.org. >>> in/KOER/en/index.php/Kalpavriksha >>> 4. For doubts on Ubuntu, public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> 5. Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Why_public_software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/mathssciencestf. >>> For more options, visit https://groups.google.com/d/optout. >>> >> -- >> 1. If a teacher wants to join STF, visit http://karnatakaeducation.org. >> in/KOER/en/index.php/Become_a_STF_groups_member >> 2. For STF training, visit KOER - http://karnatakaeducation.org. >> in/KOER/en/index.php >> 4. For Ubuntu 14.04 installation, visit http://karnatakaeducation.org. >> in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequentl >> y_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
