ಹೃದಯವು ಬೆನ್ನೆಲುಬುಳ್ಳ ಪ್ರಾಣಿಗಳಲ್ಲಿ ರಕ್ತದ ಸಂಚಲನೆಯನ್ನು ಕ್ರಮವಾಗಿ ಉಂಟುಮಾಡುವ ಒಂದು
ಸ್ನಾಯು ವಿಧದ ಅಂಗ. [೧]

ಇದು ಎದೆಯ ಮಧ್ಯದಲ್ಲಿ ಒಂದು ಸ್ವಲ್ಪ ಹಿಂದಕ್ಕೆ ಇದೆ. ಹೃದಯ ಸ್ನಾಯುಗಳ ಗೋಡೆಗಳು
ನಿರ್ಜೀವವಾಗಿವೆ. ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ
ಹೊಂದಿರುವ ಮುಷ್ಟಿ ಗಾತ್ರದ ಅಂಗ.

ಇದು ಹೃದಯಾವರಣ ಎಂಬ ಎರಡು ಪದರದ ಚೀಲದಿಂದ ಆವರಿಸಲ್ಪಟ್ಟಿದೆ.

ಮಾನವ ಹೃದಯದ ಹೊರಗಿನ ಗೋಡೆಯು ಮೂರು ಪದರಗಳಿಂದ ರಚಿಸಲ್ಪಟ್ಟಿದೆ: ಒಳಪದರ, ಸ್ನಾಯುಪದರ,
ಮತ್ತು ಮೇಲ್ಪದರ. ಸ್ನಾಯುಪದರ ಅಂದರೆ ಹೃದಯದ ಸ್ನಾಯು. ಒಳಪದರವು ಹೃದಯದ ಕೋಷ್ಠಗಳು ಮತ್ತು
ಕವಾಟಗಳನ್ನು ಆವರಿಸುತ್ತದೆ.

ಮಾನವ ಹೃದಯವು ನಾಲ್ಕು ಕೋಷ್ಠಗಳಾಗಿ ವಿಭಜಿಸಲ್ಪಡುತ್ತದೆ: ಎರಡು ಹೃತ್ಕರ್ಣಗಳು ಮತ್ತು ಎರಡು
ಹೃತ್ಕುಹರಗಳು. ಹೃತ್ಕರ್ಣಗಳು ರಕ್ತವನ್ನು ಸ್ವೀಕರಿಸುವ ಕೋಷ್ಠಗಳು ಮತ್ತು ಕುಹರಗಳು
ಒತ್ತಿನೂಕುವ ಕೋಷ್ಠಗಳು.

ಹೃದಯ ಆವರ್ತನವು ಸಂಕುಚನ ಮತ್ತು ವ್ಯಾಕೋಚನ ಮತ್ತು ಮಧ್ಯದ ವಿರಾಮವನ್ನು ಒಳಗೊಳ್ಳುವ ಒಂದು
ಪೂರ್ಣ ಹೃದಯಬಡಿತವನ್ನು ಸೂಚಿಸುತ್ತದೆ.

ರಕ್ತದ ಪರಿಚಲನೆ ದೇಹಕ್ಕೆ ಹಾಗೂ ದೇಹದಿಂದ ವ್ಯವಸ್ಥಿತ ಪರಿಚಲನೆ ಮತ್ತು ಶ್ವಾಸಕೋಶಗಳಿಗೆ
ಹಾಗೂ ಶ್ವಾಸಕೋಶಗಳಿಂದ ಪಲ್ಮನರಿ ಪರಿಚಲನೆಯನ್ನು ಒಳಗೊಂಡಿರುತ್ತದೆ. ರಕ್ತವು ಬಲ ಮತ್ತು ಎಡ
ಹೃತ್ಕರ್ಣದಲ್ಲಿ ನಿರಂತರವಾಗಿ ಸಂಗ್ರಹಗೊಳ್ಳುತ್ತದೆ. ಬಲ ಹೃತ್ಕರ್ಣ ಕುಗ್ಗಿದಾಗ, ರಕ್ತವು
ತ್ರಿಕೋನಾಕಾರದ ಕವಾಟದ ಮೂಲಕ ಬಲ ಕುಹರದೊಳಗೆ ನೂಕಲ್ಪಡುತ್ತದೆ. ಬಲ ಕುಹರ ಕುಗ್ಗಿದಾಗ,
ತ್ರಿಕೋನಾಕಾರದ ಕವಾಟ ಮುಚ್ಚಿಕೊಳ್ಳುತ್ತದೆ ರಕ್ತವು ಪಲ್ಮನರಿ ಕವಾಟದ ಮೂಲಕ ಪಲ್ಮನರಿ
ಸೊಂಡಿಲಿನೊಳಗೆ ನೂಕಲ್ಪಡುತ್ತದೆ. ರಕ್ತ ಕಿರುಗುಳಿಗಳ ಹತ್ತಿರ ಹರಿದಾಗ ಚದರುವಿಕೆ
ಪ್ರಕ್ರಿಯೆ ಮೂಲಕ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕದ ವಿನಿಮಯವಾಗುತ್ತದೆ.

ಎಡ ಹೃದಯದಲ್ಲಿ, ಆಮ್ಲಜನಕಯುಕ್ತ ರಕ್ತವನ್ನು ಪಲ್ಮನರಿ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣಕ್ಕೆ
ಹಿಂತಿರುಗಿಸಲಾಗುತ್ತದೆ. ವ್ಯವಸ್ಥಿತ ಪರಿಚಲನೆಗಾಗಿ ಅದನ್ನು ನಂತರ ಎಡ ಕುಹರ ಮತ್ತು
ಮಹಾಪಧಮನಿಯೊಳಗೆ ನೂಕಲಾಗುತ್ತದೆ. ಲೋಮನಾಳಗಳಲ್ಲಿ, ರಕ್ತದಲ್ಲಿನ ಆಮ್ಲಜನಕ ಮತ್ತು
ಪೋಷಕಾಂಶಗಳನ್ನು ಜೀವಕೋಶಗಳಿಗೆ ಪೂರೈಕೆ ಮಾಡಲಾಗುತ್ತದೆ, ಮತ್ತು ಅದರ ಬದಲಿಗೆ ಇಂಗಾಲದ
ಡೈಆಕ್ಸೈಡ್ ಮತ್ತು ತ್ಯಾಜ್ಯಗಳನ್ನು ಪಡೆಯಲಾಗುತ್ತದೆ. ಲೋಮನಾಳದಲ್ಲಿನ ಆಮ್ಲಜನಕರಹಿತ ರಕ್ತ
ಅಭಿಧಮನಿಗಳಲ್ಲಿ ಮತ್ತು ಅಂತಿಮವಾಗಿ ಬಲ ಹೃದಯದೊಳಗೆ ಚಲಿಸುತ್ತದೆ.


On Mar 1, 2017 5:49 PM, "abdul8050012053" <abdul8050012...@gmail.com> wrote:

Please upload today maths paper

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
- https://docs.google.com/formsd1Iv5fotalJsERorsuN5v5yHG
uKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್
ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an
email to mathssciencestf+unsubscr...@googlegroups.com.
To post to this group, send email to mathssciencestf@googlegroups.com.
For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to