On Mar 31, 2017 9:32 PM, "HAREESHKUMAR K Agasanapura" <[email protected]> wrote:
> http://m.prajavani.net/article/2017_03_23/479353 > > *‘ಸಂತೋಷ ಶ್ರೇಯಾಂಕ’ದಲ್ಲೂ ನಾವೇಕೆ ಕಳಪೆ?* > > 23 Mar, 2017 > > ನಾಗೇಶ್ ಹೆಗಡೆ > > > <https://www.facebook.com/sharer/sharer.php?u=https%3A%2F%2Fgoo.gl%2FBJwHtN> > <https://twitter.com/intent/tweet?text=%E2%80%98%E0%B2%B8%E0%B2%82%E0%B2%A4%E0%B3%8B%E0%B2%B7+%E0%B2%B6%E0%B3%8D%E0%B2%B0%E0%B3%87%E0%B2%AF%E0%B2%BE%E0%B2%82%E0%B2%95%E2%80%99%E0%B2%A6%E0%B2%B2%E0%B3%8D%E0%B2%B2%E0%B3%82+%E0%B2%A8%E0%B2%BE%E0%B2%B5%E0%B3%87%E0%B2%95%E0%B3%86+%E0%B2%95%E0%B2%B3%E0%B2%AA%E0%B3%86%3F+https%3A%2F%2Fgoo.gl%2FBJwHtN> > <https://plus.google.com/share?url=https%3A%2F%2Fgoo.gl%2FBJwHtN> > <http://www.pinterest.com/pin/find/?url=https%3A%2F%2Fgoo.gl%2FBJwHtN> > <http://www.linkedin.com/shareArticle?mini=true&title=%E2%80%98%E0%B2%B8%E0%B2%82%E0%B2%A4%E0%B3%8B%E0%B2%B7+%E0%B2%B6%E0%B3%8D%E0%B2%B0%E0%B3%87%E0%B2%AF%E0%B2%BE%E0%B2%82%E0%B2%95%E2%80%99%E0%B2%A6%E0%B2%B2%E0%B3%8D%E0%B2%B2%E0%B3%82+%E0%B2%A8%E0%B2%BE%E0%B2%B5%E0%B3%87%E0%B2%95%E0%B3%86+%E0%B2%95%E0%B2%B3%E0%B2%AA%E0%B3%86%3F+&url=https%3A%2F%2Fgoo.gl%2FBJwHtN> > > ಕಳೆದ ಮೂರು ದಿನಗಳಿಂದ ಸಾಲುಗಟ್ಟಿ ‘ಅಂತರರಾಷ್ಟ್ರೀಯ ದಿನಾಚರಣೆ’ಗಳು ಬಂದವು: ಮಾರ್ಚ್ 20- > ಸಂತಸ ದಿನ, 21- ಅರಣ್ಯ ದಿನ, 22- ಜಲದಿನ. ಆ ಸಾಲಿನಲ್ಲಿ ನಾಲ್ಕನೆಯದಾಗಿ ಇಂದು, 23- > ಹವಾಮಾನ ದಿನ ಬಂದಿದೆ. > > > > ಇವುಗಳಲ್ಲಿ ಒಂದಾದರೂ ಸಂಭ್ರಮ ಆಚರಿಸುವ ದಿನವೆ? ಹವಾಮಾನ ದಿನದಿನಕ್ಕೆ ಹದಗೆಡುತ್ತಿದೆ; > ನೀರಿನ ಹಾಹಾಕಾರ ಎಲ್ಲ ಕಡೆಗಳಿಂದಲೂ ಕೇಳಬರುತ್ತಿದೆ. ಇನ್ನು ಅರಣ್ಯಗಳ ಸ್ಥಿತಿಗತಿಯಂತೂ > ಕೇಳುವುದೇ ಬೇಡ. ಮತ್ತೆ, ಮಾರ್ಚ್ 20ರ ‘ಅಂತರಾಷ್ಟ್ರೀಯ ಸಂತಸ ದಿನ’- ಅದೊಂದಾದರೂ ಸಂತಸದ > ದಿನ ಆಗಿರಬೇಕಲ್ಲ? > > > > *ಅದನ್ನೇ ತುಸು ವಿವರವಾಗಿ ನೋಡೋಣ:*ದುಡ್ಡು ಕಾಸು, ಬಂಗ್ಲೊ, ಕಾರುಗಳೇ ಶ್ರೀಮಂತಿಕೆಯ > ಸೂಚಿಯಲ್ಲ ಎಂಬುದು ನಮಗೆಲ್ಲ ಗೊತ್ತಿದೆ. ಈ ಮನುಷ್ಯನೆಂಬ ಪ್ರಾಣಿ ಇಂಥ ಬರೀ ಭೋಗಲಾಲಸೆಯ > ಬೆನ್ನಟ್ಟಿದ್ದರಿಂದಲೇ ಪ್ರಪಂಚದ ಎಲ್ಲ ಜೀವಿಗಳ ಬದುಕೂ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂಬುದು > ವಿಶ್ವಮಟ್ಟದ ಚಿಂತಕರಿಗೂ ಈಗ ಗೊತ್ತಾಗಿದೆ. > > > > ಅಭಿವೃದ್ಧಿಯ, ಜಿಡಿಪಿಯ ಮಂತ್ರವನ್ನು ಜಪಿಸುತ್ತ ಸಾಮೂಹಿಕ ವಿನಾಶದತ್ತ ಚಲಿಸುವ ಬದಲು > ‘ಸಂತಸ’ವನ್ನೇ ಸಾಮಾಜಿಕ ಪ್ರಗತಿಯ ಅಳತೆಗೋಲಾಗಿ ಬಳಸುವ ಸಾಧ್ಯತೆಗಳ ಬಗ್ಗೆ ಚರ್ಚೆ > ನಡೆಯುತ್ತಿದೆ. ನಮ್ಮ ಪಕ್ಕದ ಭೂತಾನ್ ದೇಶ ಕಳೆದ ಮೂರು ದಶಕಗಳಿಂದ ‘ಜಿಡಿಪಿ’ ಎಂಬ > ಅಭಿವೃದ್ಧಿ ಸೂಚ್ಯಂಕದ ಬದಲು ‘ಸಂತಸ ಸೂಚ್ಯಂಕ’ವನ್ನೇ ಬಳಸುತ್ತಿದೆ. > > > > ಅದೇ ಮಾದರಿಯನ್ನು ಮುಂದಿಟ್ಟುಕೊಂಡು 2012ರಲ್ಲಿ ವಿಶ್ವಸಂಸ್ಥೆಯ ಉನ್ನತ ಮಟ್ಟದ ತಜ್ಞರು > ಸಭೆ ನಡೆಸಿದ್ದರು. ಹಣಕಾಸಿನ ಶ್ರೀಮಂತಿಕೆಯ ಹೊರತಾಗಿ ಬದುಕಿನಲ್ಲಿ ನೆಮ್ಮದಿ ಕೊಡಬಲ್ಲ ಬೇರೆ > ಏನೇನು ಅಂಶಗಳಿವೆ ಎಂಬುದನ್ನು ವೈಜ್ಞಾನಿಕವಾಗಿ ಅಳೆದು ನೋಡಲು ಸಾಧ್ಯವೇ ಎಂಬುದನ್ನು > ಚರ್ಚಿಸಿದ್ದರು. > > > > ಅಂದಿನಿಂದ ಪ್ರತಿ ವರ್ಷ ‘ವಿಶ್ವ ಸಂತಸ ವರದಿ’ಯನ್ನು (ವರ್ಲ್ಡ್ ಹ್ಯಾಪಿನೆಸ್ > ರಿಪೋರ್ಟನ್ನು) ಮಾರ್ಚ್ 20ರಂದು ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತ ಬಂದಿದೆ. ವಿವಿಧ ಬಗೆಯ > ಮಾನದಂಡಗಳನ್ನು ಆಧರಿಸಿ ಯಾವ ದೇಶದ ಪ್ರಜೆಗಳು ಎಷ್ಟರಮಟ್ಟಿಗೆ ಸಂತೋಷದಿಂದ ಇದ್ದಾರೆ > ಎಂಬುದನ್ನು ಸೂಚಿಸುವ ‘ಸಂತಸ ಶ್ರೇಯಾಂಕ’ ಪಟ್ಟಿಯನ್ನು ಕೂಡ ಅದೇ ವರದಿಯ ಜೊತೆಯಲ್ಲಿ ಅದೇ > ದಿನ ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತಿದೆ. ಆ ದಿನವನ್ನು ‘ಹ್ಯಾಪಿನೆಸ್ ಡೇ ಎಂದು ಆಚರಿಸೋಣ’ > ಎಂತಲೂ ಅದು ಕರೆ ನೀಡಿದೆ. ಮೊನ್ನೆ ಬಿಡುಗಡೆ ಮಾಡಿದ್ದು ಈ ಸರಣಿಯ 5ನೇ ‘ಸಂತಸ ಶ್ರೇಯಾಂಕ’ > ಪಟ್ಟಿ. > > > > ಒಟ್ಟು 155 ದೇಶಗಳ ಸಮೀಕ್ಷೆ ಮಾಡಿ ತಯಾರಿಸಲಾದ ಈಗಿನ ಶ್ರೇಯಾಂಕ ಪಟ್ಟಿಯ ಪ್ರಕಾರ ನಾರ್ವೆ > ದೇಶ ಜಗತ್ತಿನಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಇಂಡಿಯಾ 122ನೇ ಸ್ಥಾನದಲ್ಲಿದೆ. ಹಿಂದಿನ > ಬಾರಿ ಅಳೆದು ನೋಡಿದಾಗ ನಾಲ್ಕನೆಯ ಸ್ಥಾನದಲ್ಲಿದ್ದ ನಾರ್ವೆ ಈಗ ಮೊದಲ ಸ್ಥಾನಕ್ಕೆ ಏರಿದೆ. > ನಾವು ನಾಲ್ಕು ಸ್ಥಾನ ಕಳೆದುಕೊಂಡಿದ್ದೇವೆ. > > > > ನಮ್ಮ ಅಕ್ಕಪಕ್ಕದ ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ನೇಪಾಳ, ಮಯಾನ್ಮರ್, ಕೊನೆಗೆ > ಪಾಕಿಸ್ತಾನವೂ ನಮಗಿಂತ ತುಸು ಸಂತಸ ತುಂಬಿದ ದೇಶವೆಂದು ಈ ಪಟ್ಟಿಯಲ್ಲಿ ಹೇಳಲಾಗಿದೆ. ಅವರಿವರ > ಸುದ್ದಿ ಹಾಗಿರಲಿ, ಇರಾಕ್ ಕೂಡ ನಮಗಿಂತ ಮೇಲಿದೆ. ಹೀಗೆ, ನಮ್ಮ ಆಚೀಚಿನ ಎಲ್ಲರಿಗಿಂತ ನಾವು > ಅಸಂತುಷ್ಟಿಗಳೆಂಬ ಮಾಹಿತಿಯೇ ನಮ್ಮನ್ನು ಈ ಪಟ್ಟಿಯಲ್ಲಿ ಇನ್ನೂ ಕೆಳಕ್ಕೆ ತಳ್ಳಬಹುದೇನೊ. > > > > ಸಂತಸ ಸಮೀಕ್ಷೆಯಲ್ಲಿ ಆಯಾ ದೇಶದ ಪ್ರಜೆಯ ಆದಾಯ, ಆರೋಗ್ಯವಂತ ಬದುಕಿನ ನಿರೀಕ್ಷೆ, > ಸಂಕಷ್ಟದಲ್ಲಿ ನೆರವಿಗೆ ಬರುವವರ ನಿರೀಕ್ಷೆ, ಧಾರಾಳತನ, ಸ್ವಾತಂತ್ರ್ಯ ಮತ್ತು ವಿಶ್ವಾಸ ಈ > ಆರು ಸೂಚಕಗಳನ್ನು ಬಳಸಲಾಗಿತ್ತು. ಭಾರತದ ಮಟ್ಟಿಗೆ ಆದಾಯ ನಿರಂತರವಾಗಿ ಏರುತ್ತಿದೆಯಾದರೂ > ಇತರ ರಂಗಗಳಲ್ಲೆಲ್ಲ ಕುಸಿತ ಹೆಚ್ಚಾಗಿ ಕಂಡಿದ್ದರಿಂದ ನಮ್ಮ ದೇಶದ ಒಟ್ಟಾರೆ ಶ್ರೇಯಾಂಕದಲ್ಲೂ > ಕುಸಿತವಾಗಿದೆ; ಹಣವೊಂದೇ ನೆಮ್ಮದಿ ತರಲಾರದು ಎಂಬುದು ಅಲ್ಲೂ ಸಾಬೀತಾಗಿದೆ. > > > > ನಾರ್ವೆ ದೇಶ ಏಕೆ ಇತರ 154 ದೇಶಗಳಿಗಿಂತ ಹೆಚ್ಚು ಸಂತಸದಲ್ಲಿದೆ? ‘ನಮ್ಮ ಶಾಲೆಗಳು, > ಆಸ್ಪತ್ರೆ, ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ ಎಲ್ಲವೂ ಪ್ರಜೆಗಳನ್ನು ಗೌರವದಿಂದ > ನೋಡುತ್ತವೆ. ನಮ್ಮ ಬೆಂಬಲಕ್ಕೆ ಎಷ್ಟೊಂದು ಮಂದಿ ಇದ್ದಾರಲ್ಲ ಎಂಬ ಭರವಸೆ ನಮಗಿರುತ್ತದೆ- > ಅದೇ ನಮ್ಮ ಸಂತಸದ ಗುಟ್ಟು’ ಎಂದು ನಾರ್ವೆಯ ಪ್ರಜೆಗಳು ಹೇಳುತ್ತಾರೆ. > > > > ವಿಶ್ವಸಂಸ್ಥೆಯ ವರದಿ ಬೇರೊಂದು ಗುಟ್ಟನ್ನು ಹೇಳುತ್ತದೆ: ನಾರ್ವೆಯಲ್ಲಿ ಭಾರಿ ದೊಡ್ಡ > ತೈಲನಿಕ್ಷೇಪ ಇದೆ. ಅದನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಎತ್ತಿ ಹಣ ಗಳಿಸುವ ಬದಲು > ನಾರ್ವೆ ಬೇಕಂತಲೇ ಕಡಿಮೆ ತೈಲವನ್ನು ಮೇಲೆತ್ತುತ್ತಿದೆ. ಹಾಗೆ ಎತ್ತಿದ್ದನ್ನೂ ಅದು ಇಂದಿನ > ತುರ್ತಿಗಾಗಿ ಬಳಸುವ ಬದಲು ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡುತ್ತಿದೆ. ತೈಲಬೆಲೆ ಇಳಿದರೂ > ಅದರ ಬಿಸಿ ತಟ್ಟದಂತೆ ರಕ್ಷಾಕೋಟೆಯನ್ನು ನಿರ್ಮಿಸಿಕೊಂಡಿದೆ. ‘ಪರಸ್ಪರ ನಂಬಿಕೆ, ವಿಶ್ವಾಸ > ತುಂಬಿರುವ ಪ್ರಜಾಸ್ತೋಮದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ’ ಎಂದು ವರದಿಯಲ್ಲಿ > ಹೇಳಲಾಗಿದೆ. > > > > ಉತ್ತರ ಯುರೋಪ್‌ನ ಸುಮಾರು ಎಲ್ಲ ದೇಶಗಳೂ, ಅಂದರೆ ಫಿನ್ಲೆಂಡ್, ಐಸ್ಲೆಂಡ್, > ಸ್ವಿತ್ಸರ್ಲೆಂಡ್, ಡೆನ್ಮಾರ್ಕ್ ಎಲ್ಲವೂ ಮೊದಲ ಹತ್ತು ಶ್ರೇಯಾಂಕದಲ್ಲೇ ಬರುತ್ತವೆ. ಅಷ್ಟೇ > ಅಲ್ಲ, ಇತರೆಲ್ಲ ಅಭಿವೃದ್ಧಿ ಸೂಚ್ಯಂಕಗಳಲ್ಲೂ ಅವು ಅತ್ಯುನ್ನತ ಶ್ರೇಣಿಯಲ್ಲಿವೆ. ಸಮಾನತೆ > ಜಾಸ್ತಿ ಇದೆ, ಭ್ರಷ್ಟಾಚಾರ ಇಲ್ಲ, ಪರಿಸರ ನಾಶ ಇಲ್ಲ, ಪೊಲೀಸರಿಗೆ ಜಾಸ್ತಿ ಕೆಲಸ ಇಲ್ಲ, > ಗಡಿ ಜಗಳ ಇಲ್ಲ, ಆಡಳಿತ ಸುಗಮವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮುದಾಯಗಳಲ್ಲಿ ಒಗ್ಗಟ್ಟಿದೆ. > > > > ನೆರೆಹೊರೆಯ ಜನರು ಆಗಾಗ ಸೇರಿ ಊರೊಟ್ಟಿನ ಕೆಲಸಗಳಲ್ಲಿ ನಿರತರಾಗುತ್ತಾರೆ. ಅಲ್ಲಿನ > ದೇಶಗಳಿಗೆ ಹೋಲಿಸಿದರೆ ಅಮೆರಿಕ ಕಳೆದ ವರ್ಷ 13ನೇ ಸ್ಥಾನದಲ್ಲಿದ್ದುದು ಈಗ 14ಕ್ಕೆ > ಇಳಿದಿದೆ. ‘ನಾವು ಅಮೆರಿಕನ್ನರು ದಿನಗಳೆದಂತೆ ಸ್ವಾರ್ಥಿಗಳಾಗುತ್ತಿದ್ದೇವೆ. ಸರ್ಕಾರದಲ್ಲಿ > ಭ್ರಷ್ಟಾಚಾರ ಹೆಚ್ಚುತ್ತಿದೆ; ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದೆ’ ಎನ್ನುತ್ತಾರೆ ಈ > ‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್’ನ ಸಹಲೇಖಕರಾದ ಕೊಲಂಬಿಯಾ ವಿಶ್ವವಿದ್ಯಾಲಯದ ಆರ್ಥಿಕ > ತಜ್ಞ ಜೆಫ್ರಿ ಸ್ಯಾಕ್ಸ್. > > > > ಹೆಚ್ಚಿನ ಮಾಹಿತಿ ಬಯಸುವವರು world happiness. report ಎಂಬ ಜಾಲತಾಣದಲ್ಲಿ ನೋಡಬಹುದು. > ಇಡೀ ವರದಿ ಬೇಡವೆಂದರೆ ‘ಸಂತಸದ ಸಾಮಾಜಿಕ ನೆಲೆಗಳು’, ‘ಕೆಲಸದ ಪರಿಸರದಲ್ಲಿ ಸಂತಸ ಗಳಿಕೆ’, > ‘ಸಂತಸ ಮತ್ತು ದುಃಖಗಳ ಪ್ರಧಾನ ಮೂಲಗಳು’ - ಹೀಗೆ ವಿವಿಧ ಅಧ್ಯಾಯಗಳಲ್ಲಿ ಮೌಲಿಕ > ಚರ್ಚೆಗಳಿವೆ. ಅವಷ್ಟನ್ನೇ ಇಳಿಸಿಕೊಳ್ಳಬಹುದು. > > > > ಸಂತಸ ಎಂದರೆ ಏನು? ಅದನ್ನು ಗಳಿಸುವುದು, ಉಳಿಸಿಕೊಳ್ಳುವುದು ಹೇಗೆ? ಆಧ್ಯಾತ್ಮಿಕ > ನೆಲೆಯಲ್ಲಿ ಅನೇಕ ಸಂತರು, ಯೋಗಿಗಳು, ಅನುಭಾವಿಗಳು, ಬ್ರಹ್ಮಕುಮಾರಿಗಳು ಅದೆಷ್ಟೊ > ಹೇಳಿದ್ದಾರೆ; ಹೇಳುತ್ತಲೇ ಇದ್ದಾರೆ. ವಿಜ್ಞಾನಿಗಳೂ ಕಳೆದ ಹತ್ತೆಂಟು ವರ್ಷಗಳಲ್ಲಿ ಸಂತಸದ > ಮೂಲವನ್ನು ಶೋಧಿಸಲು ಯತ್ನಿಸಿದ್ದಾರೆ. > > > > ಮಾದಕ ವಸ್ತುಗಳಿಂದ ಲಭಿಸುವ ಕೃತಕ ಸಂತಸ ಮತ್ತು ನಮ್ಮದೇ ವರ್ತನೆಯಿಂದ, ಧೋರಣೆಯಿಂದ ಲಭಿಸುವ > ಸಹಜ ಸಂತಸಗಳ ನಡುವಣ ವ್ಯತ್ಯಾಸವನ್ನು ತೋರಿಸಿದ್ದಾರೆ. ನಮ್ಮ ದೋಷಗಳನ್ನು ಗುಣಪಡಿಸಲು > ಯತ್ನಿಸುವ ಬದಲು ನಮ್ಮಲ್ಲೇ ಅವಿತಿರುವ ಸಾಮರ್ಥ್ಯಗಳನ್ನು ಅನಾವರಣ ಮಾಡುವುದೇ ಮನೋವಿಜ್ಞಾನದ > ಮೂಲ ಧ್ಯೇಯ ಆಗಬೇಕು ಎಂದು 1998ರಲ್ಲಿ ಅಮೆರಿಕದ ಸೈಕಾಲಜಿಕಲ್ ಸಂಘದ ಅಧ್ಯಕ್ಷತೆ ವಹಿಸಿಕೊಂಡ > ಮಾರ್ಟಿನ್ ಸೆಲಿಗ್ಮನ್ ಒತ್ತು ನೀಡಿದ ಮೇಲೆ ‘ಪಾಸಿಟಿವ್ ಸೈಕಾಲಜಿ’ (ಧನಾತ್ಮಕ > ಮನೋವಿಜ್ಞಾನ) ಎಂಬ ಹೊಸ ಶಾಖೆ ರೂಪುಗೊಂಡಿದೆ. > > > > ನಮ್ಮ ಬಗ್ಗೆ, ಬೇರೆಯವರ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಒಳ್ಳೆಯದನ್ನೇ ಆಶಿಸುವ ಮೂಲಕ ಹೇಗೆ > ಒಳ್ಳೆಯತನವನ್ನು ಸುತ್ತೆಲ್ಲ ಹಿಗ್ಗಿಸುತ್ತ ಹೋಗಬಹುದು ಎಂಬುದೇ ಧನಾತ್ಮಕ ಮನೋವಿಜ್ಞಾನ. ಅಂಥ > ಒಳ್ಳೆಯತನವನ್ನು ಮೇಲಕ್ಕೆತ್ತಲೆಂದು ಸಲಹಾ ಕೇಂದ್ರಗಳು, ‘ಮೈಂಡ್‌ಫುಲ್‌ನೆಸ್’ ಶಿಬಿರಗಳು, > ವ್ಯಕ್ತಿತ್ವ ವಿಕಸನದ ಸಮುದಾಯ ಚಟುವಟಿಕೆಗಳು ರೂಪುಗೊಂಡಿವೆ. ಜಾಲತಾಣಗಳಲ್ಲಿ ಅದಕ್ಕೆಂದೇ > ಆಟಗಳು, ರಸಪ್ರಶ್ನೆಗಳು, ಸಲಹೆಗಳು ಸಿಗುತ್ತಿವೆ. > > > > ಜಾಗತಿಕ ಮಟ್ಟದಲ್ಲಿ ‘ಆಕ್ಷನ್ ಫಾರ್ ಹ್ಯಾಪಿನೆಸ್’ ಹೆಸರಿನ ಒಂದು ‘ಸಂತಸ ಅಭಿಯಾನ’ > ಚಾಲನೆಗೆ ಬಂದಿದೆ. ಸ್ವಂತದ ಧಾರ್ಮಿಕ, ರಾಜಕೀಯ ನಿಲುವುಗಳನ್ನು ದೂರವಿಟ್ಟು ಯಾರು ಬೇಕಾದರೂ > ಅದಕ್ಕೆ ಸೇರಿ ಸ್ವಾರ್ಥ, ತ್ವೇಷದಿಂದ ತುಂಬಿದ ಜಗತ್ತನ್ನು ಬದಲಿಸಲು ಕೈಜೋಡಿಸಬಹುದು. ದಲಾಯಿ > ಲಾಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅದರಲ್ಲಿದ್ದಾರೆ. ಮೊದಲಿಗೆ ನಿಮ್ಮನ್ನು ನೀವೇ > ಬದಲಿಸಿಕೊಳ್ಳುವ ಅನೇಕ ಸೂತ್ರಗಳು ಅದರಲ್ಲಿ ಉಚಿತವಾಗಿ ಸಿಗುತ್ತವೆ. > > > > ಉದಾಹರಣೆಗೆ ಯಂತ್ರಗಳನ್ನು ತುಸು ಕಮ್ಮಿ ಬಳಸಿ. ಬಸ್‌ನಿಂದ ಒಂದು ಸ್ಟಾಪ್ ಹಿಂದೆಯೇ ಇಳಿದು > ನಡೆಯಿರಿ; ಲಿಫ್ಟ್ ಮೂಲಕ ಎಂಟನೇ ಅಂತಸ್ತಿಗೆ ಏರುವುದಾದರೆ 6ರ ಬಟನ್ ಒತ್ತಿ. ಟಿವಿ > ಸ್ವಿಚಾಫ್ ಮಾಡಿ ಹೊರಗಡೆ ಸುತ್ತಾಡಿ. ಪ್ರತಿದಿನವೂ ಏನೊ ಹೊಸದನ್ನು ಮಾಡಿ. ಬೇರೆ > ರಸ್ತೆಯಲ್ಲಿ ಹೋಗಿ. ಬೇರೆ ಪತ್ರಿಕೆ ಓದಿ. ಅಪರಿಚಿತರೊಂದಿಗೆ ಮಾತಾಡಿ. ಒಂದೆರಡು ಗಂಟೆಗಳ > ಕಾಲ ನಗುನಗುತ್ತಲೇ ಇತರರೊಂದಿಗೆ ವ್ಯವಹರಿಸಿ. ವ್ಯತ್ಯಾಸ ಗಮನಿಸಿ. ನಮ್ಮ ಸುತ್ತಲಿನ > ಸಂತಸಗಳನ್ನು ಗಮನಿಸಿ. ಪಕ್ಷಿಗಳ ಇಂಚರ, ಕಾಫಿ ಪರಿಮಳ, ಚಿಗುರೆಲೆ, ನಗುವಿನ ಅಲೆ... > > > > ಅಂಥ ಖಾಸಗಿ ಸಂತಸದ ಏರಿಳಿತ ಇದ್ದೇ ಇರುತ್ತದೆ ಬಿಡಿ. ‘ವಿದಾಯದ ವೇದನೆ ಇಲ್ಲದೆ ಮರುಮಿಲನದ > ಸಂತಸ ಸಿಕ್ಕೀತೆ? ಬಂಧನದ ಬವಣೆ ಅನುಭವಿಸದೆ ಬಿಡುಗಡೆಯ ಸಂತಸ ದಕ್ಕೀತೆ?’ ಎಂಬೆಲ್ಲ ತರ್ಕ > ಮಂಡಿಸಬಹುದು. ಆದರೆ ಇಡೀ ಸಮಾಜದಲ್ಲಿ ಸಂತಸದ ಮಟ್ಟ ಏರಬೇಕೆಂದರೆ ಸಮಾನತೆಯೇ ಅತಿ ಮುಖ್ಯ > ಸೂಚಕವಾಗಿರಬೇಕು. > > ಈಗಿನ ಪಟ್ಟಿಯಲ್ಲಿ ಅತಿ ಹೆಚ್ಚು ಶ್ರೇಯಾಂಕ ಗಳಿಸಿದ ದೇಶಗಳಲ್ಲಿ ಧನಿಕರ ಮತ್ತು ಬಡವರ > ನಡುವಣ ಅಂತರ ತೀರ ಕಡಿಮೆ ಇದೆ. ಭಾರತ ಇದಕ್ಕೆ ತದ್ವಿರುದ್ಧವಾದ ಪ್ರಗತಿಯ ಮಾರ್ಗದಲ್ಲಿ > ಸಾಗುತ್ತಿದೆ. ಇಲ್ಲಿ ಕೆಲವರ ಓಡಾಟಕ್ಕೆ ಖಾಸಗೀ ವಿಮಾನಗಳಿವೆ. ಅನೇಕರಿಗೆ ಸೈಕಲ್ ಸವಾರಿಗೂ > ಸುಗಮ ದಾರಿಯಿಲ್ಲ. > > > > ಇಷ್ಟಕ್ಕೂ ಇಡೀ ಭಾರತವನ್ನೇ ಒಂದೆಂದು ಪರಿಗಣಿಸಿ ಬೇರೆ ದೇಶಗಳೊಂದಿಗೆ ಹೋಲಿಕೆ ಮಾಡುವುದೇ > ಸರಿಯಲ್ಲ. ಇಲ್ಲಿರುವಷ್ಟು ವೈವಿಧ್ಯಮಯ ಸಮುದಾಯ ಜಗತ್ತಿನಲ್ಲಿ ಬೇರೆ ಎಲ್ಲೂ ಇಲ್ಲ. > ಭ್ರಷ್ಟಾಚಾರ ಶ್ರೇಯಾಂಕ ಇರಲಿ, ಬಡತನದ ಶ್ರೇಯಾಂಕ ಇರಲಿ, ಸಮಾನತಾ ಶ್ರೇಯಾಂಕ ಅಥವಾ ಸಂತಸ > ಶ್ರೇಯಾಂಕವೇ ಇರಲಿ ಜಗತ್ತಿನ ಅತ್ಯುತ್ತಮವಾದುದೂ ಇಲ್ಲಿದೆ, ಅತ್ಯಂತ ಕನಿಷ್ಠದ್ದೂ > ಇಲ್ಲಿರಬಹುದು. > > > > ಯಾರಿಗೆ ಗೊತ್ತು, ಇಲ್ಲೂ ಯಾವುದೋ ಒಂದು ರಾಜ್ಯದ ಒಂದು ಗ್ರಾಮದ ಸಂತಸದ ಮಟ್ಟ ಇಡೀ ಕೆನಡಾದ > ಶ್ರೇಯಾಂಕಕ್ಕಿಂತ ಮೇಲೆಯೇ ಇದ್ದೀತು. ಬಿಹಾರದ ಒಂದು ಇಡೀ ತಾಲ್ಲೂಕಿನ ಶ್ರೇಯಾಂಕ ಆಫ್ರಿಕಾದ > ರುವಾಂಡಾಕ್ಕಿಂತ ಕೆಳಕ್ಕಿರಬಹುದು. ಉರಿಬೇಸಿಗೆಗಿಂತ ತಂಪಿನ ಸೆಪ್ಟೆಂಬರ್‌ನಲ್ಲಿ ಸಮೀಕ್ಷೆ > ನಡೆಸಿದರೆ ಸಂತಸದ ಮಟ್ಟದಲ್ಲಿ ಭಾರೀ ಏರಿಕೆ ಕಾಣಬಹುದು. > > > ಅಲ್ಲಿಗೆ ಇಂದಿನ ‘ವಿಶ್ವ ಹವಾಗುಣ ದಿನಾಚರಣೆ’ಗೆ ಕೊನೆಗೂ ತಲುಪಿದಂತಾಯಿತು. ಹವಾಮಾನ > ಬದಲಾಗುತ್ತಿದೆ ಎಂಬುದೆಲ್ಲ ಸುಳ್ಳೆಂದು ಟ್ರಂಪಟಾಲಮ್ ಅದೆಷ್ಟೇ ಜೋರಾಗಿ ಹೇಳಿದರೂ ಕಳೆದ 40 > ಲಕ್ಷ ವರ್ಷಗಳ ದಾಖಲೆಗಳನ್ನು ಮೀರಿಸಿ ವಾಯುಮಂಡಲದ ಇಂಗಾಲದ ಡೈಆಕ್ಸೈಡ್ ಮಟ್ಟ ಮೇಲಕ್ಕೇರಿದೆ > ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇನ್ನುಮೇಲೆ ಶುದ್ಧನೀರು, ವಿದ್ಯುತ್ತು ಎರಡೂ ಇರುವಲ್ಲಿ > ಮಾತ್ರ ಸಂತೋಷದ ಮಟ್ಟವನ್ನು ಅಳೆಯಬಹುದೇನೊ. > > Hareeshkumar K > GHS Huskuru > Malavalli TQ > Mandya Dt > 9880328224 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
