ಉತ್ತಮ ಮಾಹಿತಿ ಹರೀಶ್ ರವರೆ.

On 5 May 2017 8:31 pm, "SIDDARAJU S B" <[email protected]> wrote:

> ಹರೀಶ್ ಕುಮಾರ್ ಸರ್, ಸರಳವಾದ, ಸಾಮಾನ್ಯ ಪರಿಜ್ಞಾನ ನಮ್ಮನ್ನು ಆಳುವವರಲ್ಲಿ ಮೂಡಿದರೆ
> ಮುಂದಿನ ಪೀಳಿಗೆ ಉಳಿದೀತು.ಇಲ್ಲ ವಾದಲ್ಲಿ?
>
>
> On 05-May-2017 06:40, "Tirupathi. R" <[email protected]> wrote:
>
>> ITS WONDERFULL STOREY WHICH IS REALY REQUIRED THIS TIME
>>
>>
>> 2017-05-04 22:34 GMT+05:30 savitri navada <[email protected]>:
>>
>>> ಉತ್ತಮ ಮಾಹಿತಿ. ಧನ್ಯವಾದಗಳು.
>>>
>>> On 4 May 2017 06:12, "HAREESHKUMAR K Agasanapura" <[email protected]>
>>> wrote:
>>>
>>> http://m.prajavani.net/article/2017_05_04/488866
>>>
>>> *ಪಾತಾಳಗಂಗೆಯ ಕೂಲಂಕಲ್ಮಷ ಕಥನಗಳು*
>>>
>>> 4 May, 2017
>>>
>>> ನಾಗೇಶ್ ಹೆಗಡೆ
>>>
>>>
>>> <https://www.facebook.com/sharer/sharer.php?u=https%3A%2F%2Fgoo.gl%2FbKBtTc>
>>> <https://twitter.com/intent/tweet?text=%E0%B2%AA%E0%B2%BE%E0%B2%A4%E0%B2%BE%E0%B2%B3%E0%B2%97%E0%B2%82%E0%B2%97%E0%B3%86%E0%B2%AF+%E0%B2%95%E0%B3%82%E0%B2%B2%E0%B2%82%E0%B2%95%E0%B2%B2%E0%B3%8D%E0%B2%AE%E0%B2%B7+%E0%B2%95%E0%B2%A5%E0%B2%A8%E0%B2%97%E0%B2%B3%E0%B3%81++https%3A%2F%2Fgoo.gl%2FbKBtTc>
>>> <https://plus.google.com/share?url=https%3A%2F%2Fgoo.gl%2FbKBtTc>
>>> <http://www.pinterest.com/pin/find/?url=https%3A%2F%2Fgoo.gl%2FbKBtTc>
>>> <http://www.linkedin.com/shareArticle?mini=true&title=%E0%B2%AA%E0%B2%BE%E0%B2%A4%E0%B2%BE%E0%B2%B3%E0%B2%97%E0%B2%82%E0%B2%97%E0%B3%86%E0%B2%AF+%E0%B2%95%E0%B3%82%E0%B2%B2%E0%B2%82%E0%B2%95%E0%B2%B2%E0%B3%8D%E0%B2%AE%E0%B2%B7+%E0%B2%95%E0%B2%A5%E0%B2%A8%E0%B2%97%E0%B2%B3%E0%B3%81++&url=https%3A%2F%2Fgoo.gl%2FbKBtTc>
>>>
>>> ಗೂಗಲ್ ಉಪಗ್ರಹ ನಕಾಶೆಯಲ್ಲಿ ಸೌದಿ ಅರೇಬಿಯಾದ ತೂಬರ್ಜಲ್ (Tubarjal)  ಎಂಬ ಪಟ್ಟಣದ
>>> ಮೇಲೆ ಒಮ್ಮೆ ಸುತ್ತಾಡಿ. ಅದು ಜೋರ್ಡನ್ ದೇಶದ ಗಡಿಯ ಸಮೀಪ ಇದೆ. ಪಟ್ಟಣದ ಸುತ್ತೆಲ್ಲ
>>> ಹಪ್ಪಳಗಳನ್ನು ಒಣಗಿಸಿದಂತೆ ಅಥವಾ ಸಿಡಿ ತಟ್ಟೆಗಳನ್ನು ಹರಡಿದಂತೆ ನೂರಾರು ವೃತ್ತಾಕಾರದ
>>> ಬಿಂಬಗಳು ಕಾಣುತ್ತವೆ. ಹೆಚ್ಚಿನವೆಲ್ಲ ಕಂದು ಬಣ್ಣದ ಒಣ ಹಪ್ಪಳಗಳಂತೆ ಇದ್ದು, ಅಪರೂಪಕ್ಕೆ
>>> ಒಂದೋ ಎರಡೊ ಅರೆಹಸುರು ಬಣ್ಣದ ತಟ್ಟೆಗಳಿವೆ. ಅವುಗಳ ಹಿಂದೆ ಒಂದು ದುರಂತ ಕತೆಯಿದೆ.
>>>
>>>
>>> ಈ ತಟ್ಟೆಗಳೆಲ್ಲ ಒಂದೊಂದೂ ಅರ್ಧ ಕಿಲೊಮೀಟರ್ ವ್ಯಾಸದ ಸಪಾಟು ವೃತ್ತಗಳಾಗಿದ್ದು
>>> ಪ್ರತಿಯೊಂದರ ನಟ್ಟ ನಡುವೆ ಕೊಳವೆ ಬಾವಿ ಇದೆ. ಅಲ್ಲಿಂದ ಒಂದೂವರೆ, ಎರಡು ಕಿಲೊಮೀಟರ್
>>> (ಐದಾರು ಸಾವಿರ ಅಡಿ) ಆಳಕ್ಕೆ ಬೋರ್ ಕೊರೆದು ಅಲ್ಲಿದ್ದ ‘ಪಾತಾಳ ಗಂಗೆ’ಯನ್ನು ಮೇಲೆತ್ತಿ
>>> ಹಸುರು ಕ್ರಾಂತಿ ಮಾಡಲೆಂದು 1980ರ ದಶಕದಲ್ಲಿ ಸೌದಿ ಅರೇಬಿಯಾ ಸರ್ಕಾರ ದೊಡ್ಡ ಯೋಜನೆ
>>> ಆರಂಭಿಸಿತು.
>>>
>>>
>>>
>>> ಬಿಸಿಬಿಸಿ ನೀರೇನೊ ಭರ್ಜರಿ ಬಂತು. ಅದನ್ನು ಅರ್ಧ ಕಿಲೊಮೀಟರ್ ಮೇಲಕ್ಕೆತ್ತಿ
>>> ನೆಲದಾಳದಲ್ಲೇ ತಂಪು ಮಾಡಿ, ಮತ್ತೆ ಒಂದು-ಒಂದೂವರೆ ಕಿಮೀ ಮೇಲಕ್ಕೆತ್ತಬೇಕು. ಆ ನೀರಲ್ಲಿ
>>> ಅತಿಯಾದ ಲವಣಾಂಶ ಇರುತ್ತದೆ. ಸೋಸುಯಂತ್ರದಲ್ಲಿ ಲವಣಗಳನ್ನು ಪ್ರತ್ಯೇಕಿಸಿ ಶುದ್ಧ ನೀರನ್ನು
>>> ಬೋರ್‌ವೆಲ್ ಸುತ್ತ ಗಾಣದಂತೆ ತಿರುಗುವ ಪೈಪ್‌ಗಳ ಮೂಲಕ ಚಿಮುಕಿಸುತ್ತಾರೆ.
>>>
>>>
>>>
>>> ಗೋಧಿ ಬಿತ್ತನೆ ಮಾಡಿ, ಹೂಡಿಕೆದಾರರು ನೀರಿನ ಪೈಪಿಗೇ ರಸಗೊಬ್ಬರ ಸೇರಿಸಿ ಭರ್ಜರಿ ಬೆಳೆ
>>> ತೆಗೆದರು. ಸುಮಾರು 15–20 ವರ್ಷ ಸೌದಿ ಅರೇಬಿಯಾ ಗೋಧಿಯನ್ನು ರಫ್ತು ಮಾಡಿತು. ಆಮೇಲೆ
>>> ಒಂದೊಂದಾಗಿ ಕೊಳವೆ ಬಾವಿಗಳು ಖಾಲಿಯಾದವು. ಹೂಡಿಕೆದಾರರೆಲ್ಲ ಒಬ್ಬೊಬ್ಬರಾಗಿ ಕಾಲ್ತೆಗೆದರು.
>>>
>>>
>>>
>>> ಇಂದು ತೂಬರ್ಜಲ್ ಸುತ್ತಮುತ್ತ ಸಾವಿರಾರು ಒಣವೃತ್ತಗಳನ್ನು, ಜಲವಿಲ್ಲದ ಖಾಲಿ
>>> ತೂಬುಗಳನ್ನು ನೋಡುತ್ತೀರಿ. ತುಕ್ಕು ಹಿಡಿದ ಯಂತ್ರೋಪಕರಣಗಳು ಅಲ್ಲಲ್ಲೇ ಬಿದ್ದಿವೆ.
>>> ವಿಷಕಾರಿ ಲವಣದ ರಾಶಿ ಸುತ್ತೆಲ್ಲ ಚದುರಿದೆ. ಊರಿಗೆ ಊರೇ ಬಿಕೋ ಎನ್ನುತ್ತಿದೆ.
>>>
>>>
>>>
>>> ಗೋಧಿಯ ರಫ್ತಿನಲ್ಲಿ ಒಂದು ಕಾಲಕ್ಕೆ ಜಗತ್ತಿನ ಆರನೇ ಶ್ರೇಯಾಂಕದಲ್ಲಿದ್ದ ಸೌದಿ ಅರೇಬಿಯಾ
>>> ಈಗ ಪಾತಾಳಕ್ಕೇ ಕುಸಿದಂತಾಗಿದೆ. ಗೋಧಿಯನ್ನು ಆಮದು ಮಾಡಿಕೊಳ್ಳುವ ಹಂತಕ್ಕೆ ಬಂದಿದೆ.
>>>
>>>
>>>
>>> ಗೋಧಿಯಿಂದ ಧನಿಕರಾದ ಹೂಡಿಕೆದಾರರೆಲ್ಲ ಬೇರೆ ಬೇರೆ ಖಂಡಗಳಲ್ಲಿ, (ಉತ್ತರ ಅಮೆರಿಕಾ,
>>> ಆಫ್ರಿಕಾ, ಲ್ಯಾಟಿನ್ ಅಮೆರಿಕಾ) ಬೇರೆ ಬೇರೆ ದೇಶಗಳಲ್ಲಿ (ಥಾಯ್ಲೆಂಡ್, ಇಂಡೊನೇಶ್ಯ)
>>> ಕೃಷಿಗಾಗಿ ಭೂಮಿಯನ್ನು ಖರೀದಿಸುತ್ತ, ಅಂತರ್ಜಲವನ್ನೂ ತಾತ್ಕಾಲಿಕ ಲಾಭವನ್ನೂ ಎತ್ತುತ್ತ
>>> ಸುತ್ತುತ್ತಿದ್ದಾರೆ.
>>>
>>>
>>>
>>> ನಮ್ಮ ಕರ್ನಾಟಕ ಸರಕಾರವೂ ಅಂಥದ್ದೇ ಘನಂದಾರಿ ಕೆಲಸಕ್ಕೆ ಕೈಹಾಕಲು ಹೊರಟಿದೆ. ದಕ್ಷಿಣ
>>> ಭಾರತದ ಶಿಲಾರಚನೆಯೇ ಗೊತ್ತಿಲ್ಲದ ಕಂಪನಿಯೊಂದಕ್ಕೆ ಅದು ‘ಪಾತಾಳ ಗಂಗೆ’ಯನ್ನು ಮೇಲೆತ್ತುವ
>>> ಗುತ್ತಿಗೆ ಕೊಡುತ್ತಿದೆ. ಬೇರೆ ಕೆಲವು ಭೂಖಂಡಗಳಲ್ಲಿ ಹೀಗೆ ಅಲ್ಲಲ್ಲಿ ‘ಪಳೆಯುಳಿಕೆ ನೀರು’
>>> ಸಿಗುತ್ತದೆ ನಿಜ. ಅದಕ್ಕೆ ‘ಫಾಸಿಲ್ ವಾಟರ್’ ಅಥವಾ ‘ಪೇಲಿಯೊ ವಾಟರ್’ (ಪುರಾತನ ಜಲ)
>>> ಎನ್ನುತ್ತಾರೆ.
>>>
>>>
>>>
>>> ಲಕ್ಷಾಂತರ ವರ್ಷಗಳ ಹಿಂದೆ, ಭೂಮಿಯ ಬಹುಭಾಗ ಹಿಮಯುಗದಲ್ಲಿದ್ದಾಗ ಕೆಲವೆಡೆ ನೆಲದಾಳದಲ್ಲಿ
>>> ನೀರು ಜಿನುಗಿ ಅಲ್ಲಲ್ಲಿ ಸ್ಪಂಜಿನಂತೆ ನೀರಿನ ಭಾರೀ ಖಜಾನೆ ಶೇಖರವಾಗಿದ್ದು ಹೌದು.
>>> ಅವೆಲ್ಲವೂ ಭೂಮಿಯ ಆಳದಲ್ಲಿರುವ ಮರಳುಶಿಲೆ ಅಥವಾ ಕಣಶಿಲೆಗಳಲ್ಲಿ ಸಂಚಯವಾಗಿರುತ್ತವೆ. ಉತ್ತರ
>>> ಭಾರತದಲ್ಲಿ ಗಂಗಾ-ಸಿಂಧೂ ಬಯಲಿನಲ್ಲಿ ಕಿಲೊಮೀಟರ್ ಆಳದಲ್ಲೂ ಅಂಥ ಶಿಲೆಗಳಿವೆ.
>>>
>>>
>>>
>>> ಆದರೆ ದಕ್ಷಿಣ ಭಾರತದಲ್ಲಿ ಅಂಥ ಹಳೇಕಾಲದ ಕಣಶಿಲೆಗಳು ಇಲ್ಲ. ಇಲ್ಲಿ ಹೆಚ್ಚೆಂದರೆ
>>> ಗ್ರಾನೈಟ್‌ನ ಬಿರುಕುಗಳಲ್ಲಿ, ಭಗ್ನಶಿಲೆಗಳ ಸೀಳುಗಳಲ್ಲಿ ಪುರಾತನ ನೀರು ಸಂಚಯವಾಗಿರುತ್ತದೆ.
>>> ಅದು ನದಿಯಂತೆ ಹರಿಯುವುದೂ ಇಲ್ಲ.
>>>
>>>
>>>
>>> ಸರ್ಕಾರಕ್ಕೆ ‘ಪಾತಾಳ ಗಂಗೆ’ಯ ಹುಚ್ಚು ಹಿಡಿಸಿದ ‘ವಾಟರ್‌ಕ್ವೆಸ್ಟ್’ ಕಂಪನಿಗೆ
>>> ಭೂವಿಜ್ಞಾನದ ಪರಿಜ್ಞಾನವೇ ಇಲ್ಲವೆಂಬುದಕ್ಕೆ ಅದರ ಜಾಲತಾಣದಲ್ಲೇ ಸಾಕಷ್ಟು ಸಾಕ್ಷ್ಯಗಳು
>>> ಸಿಗುತ್ತವೆ. ಯಾರೋ ಹೈಸ್ಕೂಲ್ ಹುಡುಗರು ಬರೆದಂತೆ ಕಾಣುವ ಪಾತಾಳದ ಭೂಚಿತ್ರಣ ಇದೆ.
>>> ಸಮುದ್ರದಿಂದ ಉಪ್ಪುನೀರು ನೆಲದ ಕಡೆಗಿನ ಪಾತಾಳದಲ್ಲಿ ಇಳಿದು ಅಲ್ಲಿನ ಶಾಖಕ್ಕೆ
>>> ಕುದಿಯುತ್ತದಂತೆ. ಅದು ಆವಿಯಾಗಿ ಉಪ್ಪಿನಂಶವನ್ನೆಲ್ಲ ಅಲ್ಲೇ ಬಿಟ್ಟು, ಬಿರುಕುಗಳ
>>> ಮೇಲೇಳುತ್ತ ಶುದ್ಧ ನೀರಾಗುತ್ತದಂತೆ. ತುಸು ಮೇಲೆ ಬಂದು (ನೆಲದಿಂದ ಸಾವಿರ ಮೀಟರ್ ಆಳದಲ್ಲಿ)
>>> ಮಡುಗಟ್ಟಿ ಹರಿಯುತ್ತದಂತೆ. ಎಲ್ಲವೂ ಶುದ್ಧ ಬೊಗಳೆ.
>>>
>>>
>>>
>>> ವಿಜ್ಞಾನದ ನಿಯಮಗಳ ಪ್ರಕಾರ, ಪಾತಾಳದಲ್ಲಿ ಅದೆಷ್ಟೇ ಶಾಖವಿದ್ದರೂ ನೀರು ಕುದಿಯಲಾರದು;
>>> ಅದು ವಾತಾವರಣಕ್ಕೆ ತೆರೆದುಕೊಂಡರೆ ಮಾತ್ರ ಆವಿಯಾಗುತ್ತದೆ. ಇಲ್ಲಾಂದರೆ ಅತಿಶಾಖದ ದ್ರವವಾಗಿ
>>> ಅಲ್ಲೇ ಇರುತ್ತದೆ. ಅದು ಪ್ರವಾಹವಾಗಿ ಹರಿಯುವುದಿಲ್ಲ. ಸಮುದ್ರದ ನೀರೇ ಆಗಿದ್ದರೆ ಅದರ ಮಟ್ಟ
>>> ಸಮುದ್ರ ಪಾತಳಿಗಿಂತ ಕೆಳಕ್ಕೆ ಇಳಿಯುವುದೂ ಇಲ್ಲ, ಅದಕ್ಕಿಂತ ತೀರ ಮೇಲಕ್ಕೆ ಏರುವುದೂ ಇಲ್ಲ.
>>>
>>>
>>>
>>> ಇನ್ನು ಈ ಕಂಪನಿಯ ಸಂಶೋಧನೆಗೆ ಕೊರಿಯಾದಲ್ಲಿ ನಡೆದ ‘ಇಂಟರ್‌ನ್ಯಾಶನಲ್ ಇನ್‌ವೆನ್‌ಶನ್
>>> ಮೇಳ’ದಲ್ಲಿ ಗೋಲ್ಡ್ ಪ್ರೈಝ್ ಸಿಕ್ಕಿದೆಯೆಂಬ ಸರ್ಟಿಫಿಕೇಟ್ ಇದೆ. ಮೇಳ ನಡೆದಲ್ಲೇ
>>> ಪಾತಾಳಕ್ಕೆ ಬೋರ್ ಕೊರೆದು ನೀರನ್ನಂತೂ ಉಕ್ಕಿಸಿರಲಿಕ್ಕಿಲ್ಲ. ಹೆಚ್ಚೆಂದರೆ ಒಂದಿಷ್ಟು
>>> ಭಿತ್ತಿಚಿತ್ರಗಳು, ವಿಡಿಯೊ ಪ್ರದರ್ಶನ, ನಕಾಶೆಗಳ ಪ್ರದರ್ಶನ ಮಾಡಿರಬಹುದು. ಅದನ್ನು ಯಾರೂ
>>> ಕೂತಲ್ಲೇ ಜೋಡಿಸಬಹುದು. ಭಾರತದ ನಕಾಶೆಯ ಮೇಲೆ ಅವರು ತೋರಿಸಿದ ಭೂಜಲದ ರೇಖೆಗಳಂತೂ
>>> ನಗೆಪಾಟಲಿನದು. ಕಂಡಕಂಡಲ್ಲಿ ಉದ್ದ ಅಡ್ಡ ನೀಲಿ ರೇಖೆ ಎಳೆದಿದ್ದಾರೆ ಅಷ್ಟೆ.
>>>
>>>
>>>
>>> ಈ ಕಂಪನಿಯದೆಂದು ಹೇಳಲಾದ ‘ವಾಟರ್‌ಕ್ವೆಸ್ಟ್ ರಿಸೋರ್ಸಸ್’ ಮತ್ತು ‘ಸ್ಕೈಕ್ವೆಸ್ಟ್’
>>> ಜಾಲತಾಣಗಳಲ್ಲಿ ಮಾಹಿತಿಗಳೂ ಅಸ್ಪಷ್ಟವಾಗಿವೆ. ಯುರೋಪ್ ಮತ್ತು ಅರಬ್ ಎಮಿರೇಟ್ಸ್‌ನಲ್ಲಿ ಈ
>>> ಕಂಪನಿಯದೆಂಬಂತೆ ಕೆಲವು ಕೊಳವೆ ಬಾವಿಗಳ ಚಿತ್ರಗಳನ್ನು ಕೂರಿಸಲಾಗಿದೆ.
>>>
>>>
>>>
>>> ಆಳವಾದ ಬೋರ್ ಕೊರೆಯಬಲ್ಲ ವಿಶೇಷ ಡ್ರಿಲ್ಲಿಂಗ್ ಸಲಕರಣೆಗಳ ಚಿತ್ರ ಕೂಡ ಇದೆ. ವಿವರಗಳೇನೂ
>>> ಇಲ್ಲ. ಅಲ್ಲಿ ಕೆಲವೆಡೆ ಪೆಟ್ರೋಲಿಗೆಂದು ಬಾವಿ ಕೊರೆಯುವಾಗ ನೀರು ಉಕ್ಕುವುದು ಸಹಜ.
>>> ನೀರಿಗೆಂದೇ ಕಿಲೊಮೀಟರ್‌ಗಟ್ಟಲೆ ಕೊರೆದಿದ್ದೂ ಇರಬಹುದು. ಅರ್ಜೆಂಟಿನಾದಲ್ಲಿ ತೋರಿಸಿದ
>>> ಹನ್ನೊಂದು ಬಾವಿಗಳ ಪೈಕಿ ಒಂಭತ್ತರಲ್ಲಿ ‘ಥರ್ಮಲ್ ವಾಟರ್’ (ಬಿಸಿ ನೀರು) ಎಂದು
>>> ಗುರುತಿಸಲಾಗಿದೆ.
>>>
>>>
>>>
>>> ‘ನೀರು ಸಿಗದಿದ್ದರೆ ಹಣವೂ ಇಲ್ಲ’ ಎಂಬ ಕರಾರಿನೊಂದಿಗೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ
>>> ಇಲಾಖೆ ಈ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದೆ. ನೀರು ಸಿಕ್ಕರೆ ಸಾಕೆ?
>>> ದಕ್ಷಿಣ ಭಾರತದಲ್ಲಿ ಎಲ್ಲೇ ಒಂದು ಕಿಲೊಮೀಟರ್ ಆಳಕ್ಕೆ ಕೊರೆದರೂ ನೀರು ಸಿಕ್ಕೇ ಸಿಕ್ಕೀತು.
>>> ಎಷ್ಟು ವರ್ಷ ಅಥವಾ ಎಷ್ಟು ದಿನದವರೆಗೆ ನೀರು ಸಿಗಲಿದೆ ಎಂಬುದನ್ನು ಯಾರೂ ಹೇಳಲಾರರು.
>>>
>>>
>>>
>>> ಇನ್ನು ನೀರಿನ ಗುಣಮಟ್ಟ? ಈಜಿಪ್ತ್, ಇಸ್ರೇಲ್, ಜೋರ್ಡನ್, ಸೌದಿ ಅರೇಬಿಯಾ, ಲಿಬಿಯಾ ಈ
>>> ಎಲ್ಲ ದೇಶಗಳಲ್ಲಿ ಪಾತಾಳದಿಂದ ವಿಕಿರಣಯುಕ್ತ ನೀರು ಬಂದಿದೆ. ಅದರಲ್ಲಿನ ವಿಕಿರಣ
>>> ದ್ರವ್ಯಗಳನ್ನು ಸೋಸುವುದು ತೀರಾ ದುಬಾರಿ ಅಷ್ಟೇ ಅಲ್ಲ, ಸೋಸಿದಾಗ ಉಳಿಯುವ ಗಸಿಯನ್ನು
>>> ಬಿಸಾಕುವುದೇ ದೊಡ್ಡ ಸಮಸ್ಯೆಯಾಗಿದೆ. ಅಲ್ಲಲ್ಲೇ ಬಿಟ್ಟರೆ ಗಾಳಿಯಲ್ಲೂ ಚದುರಿ ಗಂಭೀರ
>>> ಕಾಯಿಲೆಗಳಿಗೆ ಕಾರಣವಾಗುವ ಸಂಭವ ಇದೆ. ನಮ್ಮ ಚಳ್ಳಕೆರೆಯಲ್ಲಿ ಈ ಕಂಪನಿಗೆ ತೋರಿಸಲಾದ ತಾಣದ
>>> ಆಸು ಪಾಸಿನಲ್ಲಂತೂ ವಿಕಿರಣಶೀಲ ಯುರೇನಿಯಂ ಅದುರಿನ ಶಿಲಾಸ್ತರಗಳೇ ಇವೆ.
>>>
>>>
>>>
>>> ಕರ್ನಾಟಕದ ಇತರ ತಾಣಗಳಲ್ಲೂ ಅತಿ ಆಳಕ್ಕೆ ರಂಧ್ರ ಕೊರೆದರೆ ಬೇರೆ ಲವಣಗಳು ಏನೇನು,
>>> ಎಷ್ಟೆಷ್ಟು ಬರಲಿಕ್ಕಿವೆ ಗೊತ್ತಿಲ್ಲ. ಲಕ್ಷಾಂತರ ವರ್ಷಗಳಿಂದ ಶಿಲಾಬಿರುಕುಗಳಲ್ಲಿ
>>> ಸಂಚಯಗೊಂಡಿರುವ ನೀರು ನಿರಭ್ರವಾಗಿರಲಂತೂ ಸಾಧ್ಯವಿಲ್ಲ. ನಿರಂತರವೂ ಆಗಿರಲು ಸಾಧ್ಯವಿಲ್ಲ.
>>> ಇನ್ನು ಅದಕ್ಕಾಗಿ ಸುಡುವ ಡೀಸೆಲ್ಲು, ಕರೆಂಟು...
>>>
>>>
>>>
>>> ಬರದ ಪರಿಸ್ಥಿತಿ ತೀರಾ ತೀರಾ ಗಂಭೀರವಾಗಿದೆ ನಿಜ. ಅಮೆರಿಕದ ವಾಸ್ತುವಿನ್ಯಾಸ
>>> ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕ ಕಿರಣ್ ರಾಮಾರೆಡ್ಡಿ ಆರು ತಿಂಗಳ ರಜೆ ಹಾಕಿ
>>> ತನ್ನೂರಿನ ನೀರಿನ ಬರ ನೀಗಿಸಲೆಂದೇ ಗೌರಿಬಿದನೂರಿಗೆ ಬಂದಿದ್ದಾರೆ. ಶ್ರೀಶ್ರೀ ರವಿಶಂಕರ್
>>> ಗುರೂಜಿಯ ಅನುಯಾಯಿಗಳ ಜೊತೆ ಸೇರಿ ಉತ್ತರ ಪಿನಾಕಿನಿ ನದಿಯನ್ನು ಮತ್ತೆ ಬದುಕಿಸಲು
>>> ಯತ್ನಿಸುತ್ತಿದ್ದಾರೆ. ಅವರು ಮೊಬೈಲ್ ಆಪ್ ಮೂಲಕ ಕೊಳವೆ ಬಾವಿಗಳ ಸಮೀಕ್ಷೆ
>>> ನಡೆಸುತ್ತಿದ್ದಾರೆ.
>>>
>>>
>>>
>>> ಅರ್ಕುಂದ ಎಂಬ ಒಂದೇ ಹಳ್ಳಿಯಲ್ಲಿ 260 ಬೋರ್‌ವೆಲ್ ಕೊರೆಸಿದ್ದು ಅವುಗಳಲ್ಲಿ 56 ಮಾತ್ರ
>>> ಅತಿ ಆಳದಿಂದ ನೀರು ಕೊಡುತ್ತಿವೆ.
>>>
>>> ಉಳಿದವೆಲ್ಲ ಡೆಡ್. ಕಿರಣ್ ಪ್ರಕಾರ ಆರು ಕೋಟಿ ರೂಪಾಯಿಗಳನ್ನು ಊರಿನ ಜನರು ಬೋರ್‌ವೆಲ್
>>> ಕಂಪನಿಗಳಿಗೆ ಸುರಿದಿದ್ದಾರೆ. ಸಮೀಕ್ಷೆಗೆ ಹೋದವರನ್ನು ಕಂಡು, ಕೆಲವರಂತೂ ಸಾಲ ವಸೂಲಿಗೆ
>>> ಬಂದರೆಂದೇ ಭಾವಿಸಿ ಓಡಿ ಅವಿತುಕೊಂಡಿದ್ದೂ ಇದೆ ಎಂದು ಅವರು ಹೇಳುತ್ತಾರೆ. ‘ಬಾಗೇಪಲ್ಲಿಯ
>>> ಹಳ್ಳಿಗಳ ಜನರು ಕೊಳವೆ ಬಾವಿಯ ಫ್ಲೋರೈಡ್‌ಯುಕ್ತ ನೀರು ಕುಡಿದು ಕುಡಿದು, ನಿಂತಲ್ಲಿ ಹತ್ತು
>>> ನಿಮಿಷ ನಿಲ್ಲಲೂ ತ್ರಾಣವಿಲ್ಲದವರಾಗಿದ್ದಾರೆ. ನಮ್ಮ ದೇಶದ ರೈತರಿಗೆ ಎಂಥಾ ಸ್ಥಿತಿ ಬಂತು!’
>>> ಎಂದು ಕಿರಣ್ ಮರುಗುತ್ತಾರೆ.
>>>
>>>
>>>
>>> ಚಿತ್ರದುರ್ಗದ ದೊಡ್ಡ ಸಿದ್ದವನಳ್ಳಿಯಂಥ ಹಳ್ಳಿಯಲ್ಲೂ ಜನರು ಕುಡಿಯುವ ನೀರಿನ ಲವಣಾಂಶ
>>> ನಿವಾರಣೆಗೆ ದುಬಾರಿ ಆರ್‌ಓ ಸಾಧನಗಳನ್ನು ಹಾಕಿಸಿಕೊಂಡಿದ್ದಾರೆ. ‘ಅದರಿಂದ ಹೊರಬರುವ
>>> ನೀರಿನಲ್ಲಿ ಶೇಕಡಾ 70ರಷ್ಟು ನೀರು ವೇಸ್ಟ್ ಆಗುತ್ತಿದೆ’ ಎನ್ನುತ್ತಾರೆ ಜಲತಜ್ಞ  ಡಾ.
>>> ದೇವರಾಜ್ ರೆಡ್ಡಿ. ವೇಸ್ಟ್ ಆಗುವುದಷ್ಟೇ ಅಲ್ಲ, ಅದು ಮೊದಲಿಗಿಂತ ಹೆಚ್ಚು ಲವಣಗಳನ್ನು
>>> ಸೇರಿಸಿಕೊಂಡು ಭೂಮಿಯೊಳಕ್ಕೆ ಇಂಗುತ್ತದೆ; ಮುಂದಿನ ಪೀಳಿಗೆಗೆ ಹೆಚ್ಚಿನ ಸಂಕಷ್ಟ
>>> ಒಡ್ಡುತ್ತದೆ.
>>>
>>>
>>>
>>> ಪಾತಾಳವಲ್ಲ, ಆಕಾಶವೇ ನಮಗಿರುವ ಏಕೈಕ ಆಸರೆ ಎಂಬುದು ಅಧಿಕಾರಸ್ಥರಿಗೆ ಏಕೆ
>>> ಗೊತ್ತಾಗುತ್ತಿಲ್ಲ? ಮಳೆನೀರನ್ನು ಸಂಗ್ರಹಿಸಲು, ಕೆರೆಗಳ ಹೂಳೆತ್ತಲು ಸರ್ಕಾರ ತೋರುತ್ತಿರುವ
>>> ಎಲ್ಲ ನಿರಾಸಕ್ತಿಯ ನಡುವೆ ಜನರೇ ಪಿಕಾಸಿ, ಸನಿಕೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
>>>
>>>
>>>
>>> ಹಿಂದೆ, 1962ರಲ್ಲಿ ಚೀನಾದೊಂದಿಗೆ ಯುದ್ಧ ನಡೆದಾಗ, ಪ್ರಧಾನಿ ಶಾಸ್ತ್ರಿಯವರ ಕರೆಯ
>>> ಮೇರೆಗೆ ಊರೂರಿನ ಜನರು ಚಿನ್ನಾಭರಣಗಳನ್ನು ದಾನ ಕೊಟ್ಟ ಹಾಗೆ ಈಗ ಕೆರೆ ಹೂಳೆತ್ತಲು ಕೊಡುಗೈ
>>> ದಾನ ನೀಡುತ್ತಿದ್ದಾರೆ. ಇದು ಶತ್ರುವಿಲ್ಲದ ಸಮರ. ಶಿರಸಿ, ಕುಷ್ಟಗಿ, ಸಾಗರ, ಹಾಸನಗಳಲ್ಲಿ
>>> ಜನರು ಕೆರೆ ಹೂಳೆತ್ತಲು ನೆರವಾಗುತ್ತಿದ್ದಾರೆ. ನೀರಿನ ಪಸೆ ಕಂಡರೆ ಹಬ್ಬದೋಪಾದಿ
>>> ಸಂಭ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರೊಂದಿಗೆ ಸರ್ಕಾರ ನಿಲ್ಲಬೇಕಿತ್ತು. ಆದರೆ ಅದು
>>> ವಿರುದ್ಧ ದಿಕ್ಕಿನಲ್ಲಿ ಹೊರಟಂತಿದೆ.
>>>
>>>
>>>
>>> ಪಾತಾಳದತ್ತ ಏನೋ ಆಸೆ ತೋರಿಸಿ, ‘ನೀವು ನಿಶ್ಚಿಂತರಾಗಿರಿ, ನಾವೆಲ್ಲ ವ್ಯವಸ್ಥೆ
>>> ಮಾಡುತ್ತೇವೆ’ ಎಂಬಂತೆ, ವಿಷದ ಬಟ್ಟಲಿಗೇ ಕೊಳವೆಕಡ್ಡಿ ಹಾಕಿ ಸೀಪಲು ಕೊಡುವಂತಿದೆ. ಮಳೆ
>>> ನೀರಿಂಗಿಸುವ ಮಹತ್ವದ ಕುರಿತಾಗಲೀ ಅದರ ಸರಳ ತಂತ್ರಗಳ ಕುರಿತಾಗಲೀ ಒಂದೇ ಒಂದು ಸರ್ಕಾರಿ
>>> ಕಿರುಪುಸ್ತಕ, ಕರಪತ್ರ, ಭಿತ್ತಿಚಿತ್ರ, ವಿಡಿಯೊ? ಹೋಗಲಿ, ಹತ್ತನೇ ಕ್ಲಾಸಿನವರೆಗೆ ಒಂದಾದರೂ
>>> ಪಾಠ ಇದೆಯೆ? ಯಶಸ್ಸಿನ ಒಂದಾದರೂ ಉದಾಹರಣೆ ಇದೆಯೆ ಸರ್ಕಾರದ ಬಳಿ? ಪ್ರತಿಪಕ್ಷಗಳು ಒಂದಾದರೂ
>>> ಸೊಲ್ಲೆತ್ತಿವೆಯೆ?
>>>
>>>
>>>
>>> ಮೊನ್ನೆ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ಅದ್ದೂರಿಯ ‘ಭಗೀರಥ ಜಯಂತಿ’ಯನ್ನು ಸರ್ಕಾರ
>>> ಆಚರಿಸಿತು. ಅಲ್ಲಿನ ಬಾಜಾಬಜಂತ್ರಿಗೆ ವ್ಯಯಿಸಿದ ಹಣದಲ್ಲಿ ಒಂದು ಚಿಕ್ಕ ಪಾಲನ್ನಾದರೂ
>>> ಮಳೆನೀರಿನ ಕೈಪಿಡಿಯ ಮುದ್ರಿಸಿ ಹಂಚಲು ಬಳಸಿದ್ದಿದ್ದರೆ ಮೂವತ್ತೂ ಜಿಲ್ಲೆಗಳಲ್ಲಿ ವರುಣದೇವ
>>> ಕೈಹಿಡಿಯುತ್ತಿದ್ದ. ಸಿಂಗಪುರ ಮಾದರಿಯಲ್ಲಿ ಚರಂಡಿ ನೀರನ್ನು ಶುದ್ಧೀಕರಿಸಿ ಒಬ್ಬ
>>> ಸಚಿವನಾದರೂ ಕುಡಿದು ತೋರಿಸಿದ್ದಿದ್ದರೆ ಕನ್ನಡಮ್ಮನ ಒಣಗಿದ ಗಂಟಲಿಂದಲೂ ಜೈಕಾರ
>>> ಹೊಮ್ಮಬಹುದಿತ್ತು.
>>>
>>> Hareeshkumar K
>>> GHS Huskuru
>>> Malavalli TQ
>>> Mandya Dt
>>> 9880328224
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to