Vry nice article..good information...thank u sir... On Jun 1, 2017 5:39 PM, "HAREESHKUMAR K Agasanapura" <[email protected]> wrote:
> http://m.prajavani.net/article/2017_06_01/495707 > > *ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-–ಮಯ* > > 1 Jun, 2017 > > ನಾಗೇಶ್ ಹೆಗಡೆ > > > <https://www.facebook.com/sharer/sharer.php?u=https%3A%2F%2Fgoo.gl%2FDNT76U> > <https://twitter.com/intent/tweet?text=%E0%B2%86%E0%B2%A7%E0%B3%81%E0%B2%A8%E0%B2%BF%E0%B2%95+%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8+%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%95%E0%B3%8D%E0%B2%B7%E0%B2%A3%E0%B2%B5%E0%B3%82+%E0%B2%97%E0%B3%8B-%E2%80%93%E0%B2%AE%E0%B2%AF+https%3A%2F%2Fgoo.gl%2FDNT76U> > <https://plus.google.com/share?url=https%3A%2F%2Fgoo.gl%2FDNT76U> > <http://www.pinterest.com/pin/find/?url=https%3A%2F%2Fgoo.gl%2FDNT76U> > <http://www.linkedin.com/shareArticle?mini=true&title=%E0%B2%86%E0%B2%A7%E0%B3%81%E0%B2%A8%E0%B2%BF%E0%B2%95+%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8+%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%95%E0%B3%8D%E0%B2%B7%E0%B2%A3%E0%B2%B5%E0%B3%82+%E0%B2%97%E0%B3%8B-%E2%80%93%E0%B2%AE%E0%B2%AF+&url=https%3A%2F%2Fgoo.gl%2FDNT76U> > > ವಧೆಗಾಗಿ ದನಕರುಗಳನ್ನು ಮಾರದಂತೆ ಪ್ರತಿಬಂಧಿಸುವ ‘ವಿಶೇಷ ಅಧಿಸೂಚನೆ’ಗೆ ಸಹಿ ಹಾಕಿದ ಯಾರೂ > ದನಕರುಗಳನ್ನು ಸಾಕಿರಲಿಕ್ಕಿಲ್ಲ. ಮೇವಿನ ಹಿಂಡಿ, ಹುಲ್ಲು ಅಥವಾ ದನಗಳ ಮಾರಾಟದ ದಲ್ಲಾಳಿ > ಆಗಿರಲಿಕ್ಕಿಲ್ಲ. ಗೋಮಾಂಸ ತಿನ್ನುವವರೂ ಅಲ್ಲ, ಮಾಂಸದ ರಫ್ತಿನ ವಹಿವಾಟಿನಲ್ಲಿ ಭಾಗಿಗಳೂ > ಆಗಿರಲಿಕ್ಕಿಲ್ಲ. ಸತ್ತ ದನದ ಚರ್ಮ ಸುಲಿಯುವ ಅಥವಾ ಚರ್ಮೋದ್ಯಮದ ಕಾರ್ಮಿಕರಂತೂ ಅಲ್ಲ; > ಪಶುವೈದ್ಯರೂ ಆಗಿರಲಿಕ್ಕಿಲ್ಲ, ಮನುಷ್ಯರ ವೈದ್ಯರೂ ಇರಲಿಕ್ಕಿಲ್ಲ. ಮೃಗಾಲಯದ > ವ್ಯವಸ್ಥಾಪಕರಂತೂ ಅಲ್ಲವೇ ಅಲ್ಲ. ಹೀಗೆ, ಪಶುಸಂಬಂಧಿ ವಹಿವಾಟುಗಳ ಯಾವ ತುಮುಲಗಳೂ ಅವರಿಗೆ > ನೇರ ತಟ್ಟುವ ಸಂಭವ ತೀರ ಕಡಿಮೆ. ಆದರೆ ಅವರು ದಿನವೂ ಬಳಸುವ ಅದೆಷ್ಟೊ ಜೈವಿಕ ಸರಕು ಮತ್ತು > ಸೇವೆಗಳಿಗಾಗಿ ದನಗಳನ್ನು ಅವಲಂಬಿಸಿದ್ದಾರೆ. ಹೇಗೆಂದು ನೋಡೋಣವೆ? ಆ ಅಧಿಸೂಚನೆಗೆ ಸಹಿ > ಹಾಕುವ ಮುನ್ನ ನಡೆದ ಸುದೀರ್ಘ ಚರ್ಚೆಯಲ್ಲಿ ಆಗಾಗ ಟೀ, ಕಾಫಿ, ಪೇಯದಲ್ಲಿ ಬಳಕೆಯಾದ > ಸಕ್ಕರೆಯಿಂದಲೇ ಆರಂಭಿಸೋಣ. > > ಸಕ್ಕರೆ ಅಷ್ಟೊಂದು ಬೆಳ್ಳಗೆ ಕಾಣಲು ಕಾರಣವೇನು ಗೊತ್ತೆ? ಪ್ರಾಣಿಗಳ ಮೂಳೆಪುಡಿಯಿಂದ > ತಯಾರಿಸಿದ ಬೋನ್ ಚಾರ್ ಎಂಬ ಫಿಲ್ಟರ್ ಮೂಲಕ ಬೆಲ್ಲದ ಪಾಕವನ್ನು ಸೋಸುತ್ತಾರೆ. ಸಕ್ಕರೆ > ಖರೀದಿಸಲೆಂದು ನೀವು ಬಸ್ ಅಥವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಮೃತ ದನಗಳ ಮೇಲೆಯೇ > ಸವಾರಿ ಮಾಡುತ್ತಿದ್ದೀರೆಂದು ಹೇಳಬಹುದು. ಟಯರ್‌ಗಳಿಗೆ ಸ್ಟೀರಿಕ್ ಆಸಿಡ್ ಎಂಬ ಪ್ರಾಣಿಜನ್ಯ > ದ್ರವವನ್ನು ಸೇರಿಸದೆ ಇದ್ದರೆ ಅದು ಯಾವ ಕ್ಷಣದಲ್ಲಾದರೂ ಢಮ್ಮೆನ್ನಬಹುದು. ಬೆದರಿ ಬ್ರೇಕ್ > ಹಾಕಲು ಹೊರಟಿರಾ? ಹೈಡ್ರಾಲಿಕ್ ಬ್ರೇಕಿಗೆ ಬಳಸಿದ ಎಣ್ಣೆಯೂ ದನದ ದೇಹದಿಂದ ತೆಗೆದಿದ್ದೇ > ಆಗಿರುತ್ತದೆ. ಬ್ರೇಕ್ ಮತ್ತು ಸ್ಟೀರಿಂಗ್ ಎಂದೂ ಮುರಿಯದ ಹಾಗೆ ವಿಶೇಷವಾಗಿ ತಯಾರಿಸಲಾದ > ಉಕ್ಕಿನ ಕಂಬಿಗೂ ಮೂಳೆ ಪುಡಿಯನ್ನು ಸೇರಿಸಿರುತ್ತಾರೆ. > > ನಿಮ್ಮದು ಭಾರೀ ದುಬಾರಿ ಕಾರ್ ಆಗಿದ್ದರೆ ಸೀಟಿನ ಲೆದರ್ ಹೊದಿಕೆಯಂತೂ ದನದ್ದೇ ಬಿಡಿ. ತೀರ > ಅನುಕೂಲಸ್ಥ ಧನಿಕರೂ ಆಢ್ಯ ಸ್ವಾಮೀಜಿಗಳೂ ಬಳಸುವ ಕಾರಿನಲ್ಲಿ ಅಂಥ ಐಷಾರಾಮಿ ಸೀಟುಗಳು > ಇರುತ್ತವೆ. ಲೆದರ್ ಆಗಿರಲಿ, ರೆಕ್ಸಿನ್ನಿನದ್ದೇ ಹೊದಿಕೆ ಆಗಿರಲಿ, ಅದರ ಪ್ರತಿಯೊಂದು > ಭಾಗವನ್ನೂ ಜೋಡಿಸಲು ಬಳಸಿದ ಅಂಟು ಕೂಡ ದನದ ಪ್ರೊಟೀನಿನಿಂದ ತಯಾರಿಸಿದ್ದೇ ಆಗಿರುತ್ತದೆ. > ಸ್ಟೀರಿಂಗ್ ಚಕ್ರ ನಿಮ್ಮ ಮುಷ್ಟಿಯಿಂದ ಜಾರದಂತೆ ಗಪ್ಪಾಗಿ ಕೂರಲೂ ಅದೇ ಅಂಟನ್ನು > ಬಳಸಿರುತ್ತಾರೆ. ದುಬಾರಿ ಕಾರುಗಳಲ್ಲಿ ಅಗ್ನಿಶಾಮಕ ಪುಟ್ಟ ಸಿಲಿಂಡರನ್ನು ಜೋಡಿಸಿರುತ್ತಾರೆ. > ಅದನ್ನು ಅಮುಕಿದರೆ ಹೊರಬರುವ ನೊರೆಯಲ್ಲಿ ದನದ ರಕ್ತದಿಂದಲೇ ತೆಗೆದ ಬೆಂಕಿನಿರೋಧಕ ರಸಾಯನ > ಇರುತ್ತದೆ. ತೀರ ಚಳಿ ಬಿದ್ದಾಗ ಕಾರಿನ ಎಂಜಿನ್ ಸಲೀಸಾಗಿ ಚಾಲೂ ಆಗುವಂತೆ ಇಂಧನಕ್ಕೆ > ಹೆಪ್ಪುನಿರೋಧಕವಾಗಿ ಬಳಸುವ ಗ್ಲಿಸರೀನ್ ಎಂಬ ವಸ್ತು ದನಗಳ ಶರೀರದಿಂದಲೇ ಬಂದಿರುತ್ತದೆ. > ಪೇಂಟ್‌ನ ಹೊಳಪನ್ನು ಹೆಚ್ಚಿಸಲೆಂದು ಕೂಡ ಗ್ಲಿಸರೀನ್ ಹಚ್ಚಿರುತ್ತಾರೆ. ಕಾರುಗಳು ಸಲೀಸಾಗಿ > ಚಲಿಸಲೆಂದು ರಸ್ತೆಗೆ ಡಾಂಬರು ಹಾಕಿರುತ್ತಾರಲ್ಲ, ಅದು ಅತ್ತಿತ್ತ ಕಿತ್ತು ಹೋಗದಂತೆ ಅದಕ್ಕೂ > ದನಗಳ ಕೊಬ್ಬನ್ನೇ ಸೇರಿಸಿರುತ್ತಾರೆ. ರಸ್ತೆ ನಿರ್ಮಾಣಕ್ಕೆ ಮೊದಲು ಬಂಡೆಗಳನ್ನು ಸ್ಫೋಟಿಸಲು > ಜಿಲೆಟಿನ್ ಕಡ್ಡಿಗಳನ್ನು ಬಳಸುತ್ತಾರೆ. ಅದರಲ್ಲಿ ಗ್ಲಿಸರೀನ್ ಇಲ್ಲದಿದ್ದರೆ ಸ್ಫೋಟವೇ > ಆಗುವುದಿಲ್ಲ. ಹೀಗೆ ರಸ್ತೆ, ರಸ್ತೆಯ ಮೇಲಿನ ಚಕ್ರ, ಚಕ್ರವನ್ನು ನಿಯಂತ್ರಿಸುವ ಬ್ರೇಕ್, > ಬ್ರೇಕನ್ನು ಆಗಾಗ ಒತ್ತುವ ನಿಮ್ಮ ಕಾಲಿನ ಪಾದರಕ್ಷೆ, ಡ್ರೈವರ್ ಸೀಟಿನ ಮೆತ್ತೆ ಎಲ್ಲವೂ > ಗೋ-ಮಯ. > > ಚರ್ಮದ ಸೋಫಾ ಮೇಲೆ ಕೂರುವ ಬದಲು ಸಾದಾ ಕುರ್ಚಿಯ ಮೇಲೆ ಕೂರಲು ಹೊರಟರೆ ಅಲ್ಲೂ ನೀವು > ದನಕ್ಕೆ ಅಂಟಿಕೊಳ್ಳುತ್ತೀರಿ. ಏಕೆಂದರೆ ಕುರ್ಚಿಗೆ ಬಳಸಿದ ಕಟ್ಟಿಗೆಪುಡಿಯ ಹಲಗೆಯ ಮೇಲೆ > ಹೊಳಪಿನ ಪ್ಲೈವುಡ್ ಹಾಳೆಯನ್ನು ಅಂಟಿಸಿರುತ್ತಾರಲ್ಲ, ಅಲ್ಲಿ ದನಗಳ ರಕ್ತದ ಒಣಪುಡಿಯ > ಗೋಂದನ್ನೇ ಬಳಸಿರುತ್ತಾರೆ. ಕುರ್ಚಿ ಬೇಡ, ನೆಲಕ್ಕೆ ಕೂತೇ ಊಟ ಮಾಡುತ್ತೇನೆಂದರೆ ಆಹಾರ > ಉತ್ಪಾದನೆಗೆ ಬಳಸಿದ ಬಹುಪಾಲು ರಸಗೊಬ್ಬರದಲ್ಲಿ ದನದ ರಕ್ತದ ಪುಡಿಯನ್ನು ಸಾರಜನಕ > ಸಂವರ್ಧನೆಗೆಂದು ಸೇರಿಸಿರುತ್ತಾರೆ. ಇನ್ನು ಕ್ಯಾಲ್ಸಿಯಂ ಮತ್ತು ರಂಜಕದಂಥ ಸಸ್ಯ ಪೋಷಕ > ದ್ರವ್ಯಗಳನ್ನು ದನದ ಮೂಳೆಪುಡಿಯಿಂದ ಸಂಗ್ರಹಿಸಲಾಗುತ್ತದೆ. ಕೃಷಿ ಕೆಲಸದಲ್ಲಿ ದುಡಿಮೆ > ಮಾಡುವ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದರೆ ಸರ್ಕಾರ ಉಚಿತವಾಗಿ ಆಕೆಗೆ ವಿತರಿಸುವ ಐರನ್ > ಮಾತ್ರೆಗಳಲ್ಲೂ ದನದ ರಕ್ತದಿಂದ ತೆಗೆದ ಕಬ್ಬಿಣದ ಅಂಶವೇ ಇರುತ್ತದೆ. > > ದನಗಳೆಂದರೆ ಕೇಳಿದ್ದನ್ನು ಕೊಡುವ ಕಾಮಧೇನು. ವೈದ್ಯಕೀಯ ರಂಗಕ್ಕೆ ಬಂದರೆ ದನದ ದೇಹದ ಮೂಗಿನ > ತುದಿಯಿಂದ ಹಿಡಿದು ಬಾಲದವರೆಗಿನ ಭಾಗಗಳಿಂದ ಪಡೆದ ಅಸಂಖ್ಯ ಔಷಧ ದ್ರವ್ಯಗಳನ್ನು ಪಟ್ಟಿ > ಮಾಡಬಹುದು. ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದ ತೆಗೆದ ‘ಕೊಂಡ್ರಾಯ್ಟಿನ್’ ಎಂಬ > ವಸ್ತುವನ್ನು (ಗ್ಲೂಕೊಸಮೈನ್) ಎಲ್ಲ ಬಗೆಯ ಕೀಲುನೋವುಗಳಿಗೂ ಔಷಧವಾಗಿ ಬಳಸುತ್ತಾರೆ. ದನದ > ಶ್ವಾಸನಾಳ ಮತ್ತು ಶ್ವಾಸಕೋಶದ ಒಳಪೊರೆಯಿಂದ ತೆಗೆದ ಹೆಪಾರಿನ್ ಎಂಬ ಔಷಧ ದ್ರವ್ಯವನ್ನು > ಶಸ್ತ್ರಚಿಕಿತ್ಸೆಗೆ ಮೊದಲು ರೋಗಿಯ ರಕ್ತಕ್ಕೆ ಸೇರಿಸುತ್ತಾರೆ. ಆಗ ರಕ್ತ > ಹೆಪ್ಪುಗಟ್ಟುವುದಿಲ್ಲ (ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕಂಡುಬರುವ ಇಂಬಳಗಳು ಕಚ್ಚಿದಾಗ ಇದೇ > ಹೆಪಾರಿನ್ ನಮ್ಮ ರಕ್ತನಾಳಕ್ಕೆ ಸೇರುತ್ತದೆ. ಇಂಬಳವನ್ನು ಕಿತ್ತು ತೆಗೆದ ನಂತರವೂ ರಕ್ತ > ಹೆಪ್ಪುಗಟ್ಟದೆ ಹರಿಯುತ್ತಲೇ ಇರುತ್ತದೆ. ಇಂಬಳದ ಕಡಿತ ಮಾರಕವೇನಲ್ಲ; ಆದರೆ ಝೆಕ್ ದೇಶದ > ನರ್ಸ್ ಒಬ್ಬಳು ಬೇಕೆಂತಲೇ ಜಾಸ್ತಿ ಹೆಪಾರಿನ್ ಚುಚ್ಚಿ ಏಳು ರೋಗಿಗಳ ಕೊಲೆ ಮಾಡಿದ್ದಳು; > ಇನ್ನೂ ಹತ್ತು ಮಂದಿಗೆ ಚುಚ್ಚುವ ಮೊದಲೇ ಸಿಕ್ಕಿಬಿದ್ದಳು). > > ಭಾರತದಲ್ಲಿ ಆರು ಕೋಟಿಗೂ ಹೆಚ್ಚಿನ ಸಕ್ಕರೆ ರೋಗಿಗಳಿದ್ದು ಇದನ್ನು ಮಧುಮೇಹಿಗಳ ಸಂತೆಯೆಂದೇ > ವರ್ಣಿಸಲಾಗುತ್ತಿದೆ. ಇವರು ಔಷಧ ರೂಪದಲ್ಲಿ ದನಗಳ ಮೇದೋಜೀರಕ ಗ್ರಂಥಿಗಳಿಂದ ತೆಗೆದ > ಇನ್ಸೂಲಿನನ್ನೇ ಬಳಸುತ್ತಾರೆ. ರಕ್ತದ ಒತ್ತಡ ತೀರ ಕಡಿಮೆ ಆದರೆ ಅದನ್ನು ಹೆಚ್ಚಿಸಲೆಂದು ದನದ > ಆಡ್ರಿನಾಲಿನ್ ಗ್ರಂಥಿಯಿಂದ ತೆಗೆದ ಎಪಿನಾಫ್ರಿನ್ ಎಂಬ ಔಷಧವನ್ನೇ ಡಾಕ್ಟರ್‌ಗಳು ಶಿಫಾರಸು > ಮಾಡುತ್ತಾರೆ. ಹೃದ್ರೋಗದ ಶಸ್ತ್ರಚಿಕಿತ್ಸೆಯ ಸಮಯದಲ್ಲೂ ಇದು ಜೀವರಕ್ಷಕ ಔಷಧವಾಗಿ > ಬಳಕೆಯಾಗುತ್ತದೆ. ದನಗಳ ಯಕೃತ್ತಿನಿಂದ ತೆಗೆದ ‘ಲಿವರ್ ಎಕ್ಸ್‌ಟ್ರ್ಯಾಕ್ಟ್’ ಎಂಬ > ದ್ರವ್ಯವನ್ನು ಬಿ-12 ಜೀವಸತ್ವ ಕೊರತೆ ಇದ್ದವರಿಗೆ ಕೊಡಲಾಗುತ್ತದೆ. ಮಿದುಳಿಗೆ ಏಟು > ಬಿದ್ದಾಗ ತಲೆ ಬರುಡೆಯ ಚಿಕಿತ್ಸೆ ಮಾಡಿ ಕೆಲವು ಭಾಗಗಳನ್ನು ತೆಗೆಯಬೇಕಾಗಿ ಬಂದರೆ, ಆ ಖಾಲಿ > ಸ್ಥಳದಲ್ಲಿ ದನದ ಮಿದುಳಿನ ನಾರಿನಂಥ ಕವಚದಿಂದ ತಯಾರಿಸಿದ ಡ್ಯೂರಾ ಮೇಟರ್ ಎಂಬ ವಸ್ತುವನ್ನು > ತುರುಕಿ ಹೊಲಿಗೆ ಹಾಕುತ್ತಾರೆ. ಗರ್ಭಿಣಿಗೆ ಪ್ರಸವದ ಸಂದರ್ಭದಲ್ಲಿ ತೊಂದರೆ ಎದುರಾಯಿತೆ? > ಹುಟ್ಟಿದ ಶಿಶುವಿಗೆ ತಾಯಿಯ ಹಾಲೇ ಜೀರ್ಣ ಆಗುತ್ತಿಲ್ಲವೆ? ಹಿರಿಯರ ರಕ್ತ ನಾಳದಲ್ಲಿ ಗಂಟು > ಕಂಡುಬಂತೆ? ಹೊಟ್ಟೆ ತಳಮಳ ಎನ್ನುತ್ತಿದೆಯೆ? ಆಸ್ತಮಾ ಸಮಸ್ಯೆ ಎದುರಾಯಿತೆ? ಎಲ್ಲಕ್ಕೂ > ಸ್ಟೀರಾಯ್ಡ್ ಕೊಡಿ; ಎಲ್ಲಕ್ಕೂ ಗೋವಿನ ದೇಹದ ಗಣಿಗಾರಿಕೆ ಮಾಡಿ. > > ದನಗಳ ತಾಜಾ ಚರ್ಮವನ್ನು ಯಂತ್ರಗಳ ಮೂಲಕ ಹಿಂಡಿದರೆ ಅದರಿಂದ ಕೊಲಾಜೆನ್ ಎಂಬ ಅಂಟು ಪದಾರ್ಥ > ಸ್ರವಿಸುತ್ತದೆ. ಸ್ನಾಯು ಮತ್ತು ಮೂಳೆಗಳನ್ನು ಬಂಧಿಸುವ ಅಂಗಾಂಶದಿಂದಲೂ ಕೊಲಾಜೆನ್ > ಪಡೆಯಬಹುದು. ಅದು ಅನೇಕ ವಿಧಗಳಲ್ಲಿ ನಿತ್ಯವೂ ಬಳಕೆಯಾಗುತ್ತಿದೆ. ಹಿರಿಯ ನಾಗರಿಕರಿಗೆ > ಮೂತ್ರ ನಿಯಂತ್ರಣ ಸಮಸ್ಯೆ ಎದುರಾದರೆ ಇದನ್ನೇ ಚುಚ್ಚುಮದ್ದಿನ ರೂಪದಲ್ಲಿ ರಕ್ತಕ್ಕೆ > ಸೇರಿಸುತ್ತಾರೆ. ಆಸ್ಪತ್ರೆಗಳಲ್ಲಿ ದಿನವೂ ಬಳಕೆಯಾಗುವ ಬ್ಯಾಂಡೇಜ್ ಪಟ್ಟಿಗೆ ಕೊಲಾಜೆನ್ > ಲೇಪನ ಇರುತ್ತದೆ. ಗಾಯ ಒಣಗಿದ ನಂತರವೂ ಉಳಿಯುವ ಕಲೆಯನ್ನು ಹೋಗಲಾಡಿಸಲು ಸುರೂಪ ಚಿಕಿತ್ಸಕರು > ಇದನ್ನೇ ಬಳಸುತ್ತಾರೆ. ಇಳಿವಯಸ್ಸಿನ ಸಿನಿಮಾ ಕಲಾವಿದರ ಮುಖದ ಸುಕ್ಕುಗಳನ್ನು > ನಿವಾರಿಸುವಲ್ಲಿ ಕೊಲಾಜೆನ್ ಪಾತ್ರ ತುಂಬ ಮಹತ್ವದ್ದಾಗಿದೆ. ಕಣ್ಣಿನ ಪೊರೆಯ ನಿವಾರಣೆಗೂ ಇದು > ಬೇಕು. ಅನೇಕ ಬಗೆಯ ಸೌಂದರ್ಯ ಪ್ರಸಾಧನಗಳಲ್ಲಿ, ಮುಲಾಮಿನಲ್ಲಿ ಮತ್ತು ನೋವು ನಿವಾರಕ > ತೈಲಗಳಲ್ಲಿ ಕೊಲಾಜೆನ್ ಇದ್ದೇ ಇರುತ್ತದೆ. > > ದನದ ಕೊಬ್ಬನ್ನು ಬಿಸಿನೀರಲ್ಲಿ ಕುದಿಸಿ ಸ್ಟೀರಿಕ್ ಆಸಿಡ್ ಪಡೆಯಬಹುದು. ಇದಂತೂ ಎಲ್ಲ > ಸಾಬೂನು, ಶೇವಿಂಗ್ ಕ್ರೀಮು, ಟೂಥ್‌ಪೇಸ್ಟ್, ಪರಿಮಳ ದ್ರವ್ಯ, ಮಕ್ಕಳ ಕ್ರೆಯಾನ್ (ಬಣ್ಣದ > ಕಡ್ಡಿ), ಮೋಂಬತ್ತಿ, ಕಾಡಿಗೆ ಎಲ್ಲದರಲ್ಲೂ ಇದನ್ನು ಕಾಣಬಹುದು. ಜೆಟ್ ವಿಮಾನಗಳ ಎಲ್ಲ > ಬಿಡಿಭಾಗಗಳೂ ಅಚ್ಚುಕಟ್ಟಾಗಿ ಸದಾ ಕಾಲ ಕೆಲಸ ಮಾಡುವಂತೆ ದನದ ಮೂಳೆ ಮತ್ತು ಕೊಬ್ಬಿನಿಂದ > ತೆಗೆದ ಟ್ಯಾಲೊ ಎಂಬ ತೈಲವನ್ನೇ ಕೀಲೆಣ್ಣೆಯಾಗಿ ಬಳಸಲಾಗುತ್ತದೆ. ಮೂಳೆ, ಕೊಂಬು, ಗೊರಸು > ಇತ್ಯಾದಿ ಬಿಡಿಭಾಗಗಳಿಂದ ತೆಗೆದ ಇದೇ ಟ್ಯಾಲೊವನ್ನು ಶುದ್ಧೀಕರಿಸಿ ಖಾದ್ಯತೈಲಗಳಲ್ಲೂ > ಕದ್ದುಮುಚ್ಚಿ ಕಲಬೆರಕೆ ಮಾಡುವವರಿದ್ದಾರೆ. ಗೊತ್ತೇ ಆಗುವುದಿಲ್ಲ. ಬೇಕರಿ ಖಾದ್ಯಗಳಲ್ಲಿ, > ಕ್ಯಾಂಡಿಗಳಲ್ಲಿ, ಚಾಕೊಲೇಟ್‌ಗಳಲ್ಲಿ ಟ್ಯಾಲೊ ಇರುತ್ತದೆ. > > ಚರ್ಮದ ಕಡೆ ಮತ್ತೊಮ್ಮೆ ಬರೋಣ. ಕ್ರಿಕೆಟ್ ಚೆಂಡು, ಫುಟ್‌ಬಾಲ್, ವಾಲಿಬಾಲ್, ಬಾಸ್ಕೆಟ್ > ಬಾಲ್, ಬೇಸ್‌ಬಾಲ್ ಮುಂತಾದ ಅನೇಕ ಬಗೆಯ ಕ್ರೀಡಾ ಸಾಧನಗಳು, ಕೈಗವಸು, ಕಾಲ್ಗವಚ ಎಲ್ಲಕ್ಕೂ > ದನದ ಚರ್ಮವೇ ಬಳಕೆಯಾಗುತ್ತದೆ. ದನದ ಕರುಳನ್ನು ಸೀಳಿ, ಸಂಸ್ಕರಿಸಿದ ದಾರಗಳೇ ಟೆನಿಸ್ ಮತ್ತು > ಬ್ಯಾಡ್ಮಿಂಟನ್ ರ್‌್ಯಾಕೆಟ್‌ಗಳಲ್ಲಿ ಬಳಕೆಯಾಗುತ್ತವೆ. ಇದೇನು ದನದ ಕತೆ ಹೀಗೆ ಚ್ಯೂಯಿಂಗ್ > ಗಮ್ ಥರಾ ಎಳೆದಷ್ಟೂ ಬರುತ್ತದಲ್ಲ? ಹೌದ್ರೀ, ಚ್ಯೂಯಿಂಗ್ ಗಮ್ ಕೂಡ ದನದ ಗೊರಸು, > ಕೊಂಬುಗಳಿಂದಲೇ ತೆಗೆದ ಜಿಲೆಟಿನ್ ಎಂಬ ಪದಾರ್ಥದಿಂದ ತಯಾರಾಗಿರುತ್ತದೆ. > > ಭಾರತೀಯ ಪುರಾಣಗಳ ಪ್ರಕಾರ ಹಿಂದೊಮ್ಮೆ ರಾಕ್ಷಸರು ಬಂದು ದೇವತೆಗಳನ್ನು ಹಿಗ್ಗಾ ಮುಗ್ಗಾ > ಬಡಿದರಂತೆ. ಸೋತು ಸುಣ್ಣವಾದ ಇಂದ್ರ ಆಗ ದಧೀಚಿ ಮಹರ್ಷಿಯ ಬಳಿ ಓಡಿ ಬಂದು ಸಹಾಯ > ಯಾಚಿಸಿದರಂತೆ. ಆ ಸನ್ಯಾಸಿ ಏನು ಕೊಟ್ಟಾನು? ತನ್ನ ಮೂಳೆಗಳಿಂದಲೇ ವಜ್ರಾಯುಧವನ್ನು > ಮಾಡಿಕೊಳ್ಳಿ ಎಂದು ಹೇಳಿ ಪ್ರಾಣ ಬಿಟ್ಟನಂತೆ. ಹಾಲು ಹೈನು ಸೇವಿಸಿದ್ದ ದಧೀಚಿಯ > ಮೂಳೆಗಳಿಂದಲೇ ರಾಕ್ಷಸರನ್ನು ಬಗ್ಗು ಬಡಿದು ದೇವತೆಗಳು ಗೆದ್ದರಂತೆ. ಇಂದಿನ ಇಡೀ ಮನುಕುಲವೇ > ದನದ ಮೂಳೆ ಮಜ್ಜೆಗಳಿಂದ ತಯಾರಾದ ಸರಕು ಸಾಮಗ್ರಿಗಳ ಮೇಲೆ ನಿಂತಂತಿದೆ. > > ವಧೆ ಮಾಡದೇ, ಮುದಿ ಗೋವು ತಾನಾಗಿ ಪ್ರಾಣ ಬಿಟ್ಟ ನಂತರವೂ ಇವನ್ನೆಲ್ಲ ಪಡೆಯಲು ಸಾಧ್ಯವಿದೆ > ಎಂದು ಕೆಲವರು ವಾದಿಸಬಹುದು. ಆದರೆ ಚದುರಿದಂತೆ ಯಾವು ಯಾವುದೋ ಊರುಗಳಲ್ಲಿ ಪ್ರಾಣ ಬಿಡುವ > ದನಗಳಿಂದ ಇವನ್ನೆಲ್ಲ ಸಂಗ್ರಹಿಸಲು ಸಾಧ್ಯವಿಲ್ಲ. ಒಂದೇ ಸ್ಥಳದಲ್ಲಿ ದಿನವೂ ಸಾವಿರಾರು ದನಗಳ > ಬಿಡಿಭಾಗಗಳು ಸಿಗುವ ಸ್ಥಳಗಳಲ್ಲಿ ಟನ್‌ಗಟ್ಟಲೆ ರಕ್ತವನ್ನು ಸ್ವಯಂಚಾಲಿತ ಬಕೆಟ್‌ಗಳಲ್ಲಿ > ಸಂಗ್ರಹಿಸಿ, (ಹಾಲನ್ನು ಪುಡಿ ಮಾಡುವ ವಿಧಾನದಲ್ಲೇ) ಕೆಂಪಗೆ ಕಾದ ಗಾಣದ ಮೇಲೆ ಸಿಂಪಡಿಸಿ > ಪುಡಿಯನ್ನು ಡಬ್ಬಿಗಳಲ್ಲಿ ಪ್ಯಾಕ್ ಮಾಡುತ್ತಾರೆ. ವಧೆಗೆಂದು ಬಂದ ಪ್ರತಿ ದನದಿಂದಲೂ > ಹೆಚ್ಚೆಂದರೆ ಅರ್ಧ ಭಾಗ ಮಾತ್ರ ಆಹಾರಕ್ಕೆ ಬಳಕೆಯಾಗುತ್ತದೆ. ಇನ್ನರ್ಧ ಭಾಗವನ್ನು ಬೇರೆ > ಬೇರೆ ರೂಪಗಳಲ್ಲಿ ನಾವೆಲ್ಲ ಪ್ರತಿ ದಿನವೂ ಬಳಸುತ್ತೇವೆ. > > ದನವೆಂಬ ಮೂಕ ಪ್ರಾಣಿಯನ್ನು ನಾವು ಇಷ್ಟೆಲ್ಲ ದೋಚುತ್ತಿದ್ದೇವೆಯೆ ಎಂದು ಕಣ್ಣೀರು ಸುರಿಸಲು > ಹೊರಟಿರೊ, ನಿಮಗೆ ಗ್ಲಿಸರೀನ್ ಬೇಕಾಗಬಹುದು. ಅದೂ ದನದ ದೇಹದಿಂದಲೇ ಬರುತ್ತದೆ > > Hareeshkumar K > GHS Huskuru > Malavalli TQ > Mandya Dt > 9880328224 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
