Good information sir about photo voltaic effect and solar cell... Can you please send this in english On Jun 14, 2017 6:48 AM, "HAREESHKUMAR K Agasanapura" <[email protected]> wrote:
> http://m.vijaykarnataka.com/edit-oped/columns/sudhindra- > haldodderi/articleshow/59127424.cms > > *ನೆಟ್ ನೋಟ: ಕಿಟಕಿಗೆ ಎಳೆದ ಬಣ್ಣ, ಸೌರಶಕ್ತಿಯನು ಸೆಳೆಯಿತಣ್ಣ !* > > Updated Jun 13, 2017, 08:01 PM IST > > AAA > > ** ನೆಟ್ ನೋಟ: ಸುಧೀಂದ್ರ ಹಾಲ್ದೊಡ್ಡೇರಿ* > > ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವಂತೆ ಮಾಡಿ ಕಿಟಕಿ ಗಾಜುಗಳಿಂದ ವಿದ್ಯುತ್ > ಉತ್ಪಾದಿಸಬಹುದು. > > ಬೆಂಗಳೂರಿನ ಬಹುಮಹಡಿ ವಾಣಿಜ್ಯ ಕಟ್ಟಡಗಳತ್ತ ನೋಟ ಹರಿಸಿದಾಗ ನಿಮ್ಮ ಕಣ್ಣನ್ನು ಮೊದಲು > ಕುಕ್ಕುವುದು ಬಣ್ಣದ ಗಾಜುಗಳು. ಇವು ಕೇವಲ ಕಟ್ಟಡಗಳ ಸೌಂದರ್ಯವನ್ನಷ್ಟೇ > ಹೆಚ್ಚಿಸುವುದಿಲ್ಲ. ಬಿದ್ದ ಬಿಸಿಲಿನ ಕಿರಣಗಳನ್ನು ಆಚೆಗಟ್ಟುತ್ತವೆ. ಒಳಗಿನ ವಾತಾನುಕೂಲಿ > ಯಂತ್ರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ವಿದ್ಯುತ್ ಬಳಕೆಯಲ್ಲಿ ಮಿತವ್ಯಯ > ಸಾಧಿಸುತ್ತವೆ. ಅಥವಾ ಹಾಗೆಂದು ನಾವು ನಂಬುತ್ತೇವೆ. ಕಿಟಕಿ ಬಾಗಿಲುಗಳನ್ನು ತೆರೆದಿಟ್ಟರೆ > ಈ ಕಟ್ಟಡಗಳಿಗೆ ಅಗತ್ಯವಿರುವ ಗಾಳಿ-ಬೆಳಕಿನ ಬಹುಪಾಲು ಪುಕ್ಕಟೆಯಾಗಿಯೇ ಸಿಗುತ್ತಿದ್ದವು. > ಒಟ್ಟಾರೆ ವಿದ್ಯುತ್ ಬಳಕೆಯಲ್ಲಿ ಹೆಚ್ಚಿನ ಉಳಿತಾಯ ಮಾಡಬಹುದಿತ್ತು. ವಿಶ್ವೇಶ್ವರಯ್ಯನವರು > ಇಂದೇನಾದರೂ ಬದುಕಿದ್ದು ಈ ಕಟ್ಟಡಗಳನ್ನು ಕಂಡಿದ್ದರೆ 'ಎಷ್ಟೊಂದು ಸಂಪನ್ಮೂಲ > ವ್ಯರ್ಥವಾಗುತ್ತಿದೆ' ಎಂದು ಖಂಡಿತವಾಗಿಯೂ ಉದ್ಗರಿಸುತ್ತಿದ್ದರು - ಜೋಗ ಜಲಪಾತದಲ್ಲಿ > ಸುಮ್ಮನೆ ಧುಮ್ಮಿಕ್ಕುತ್ತಿದ್ದ ನೀರನ್ನು ಮೊದಲು ಕಂಡಾಗ 'ಎಷ್ಟೊಂದು ಶಕ್ತಿ > ವ್ಯರ್ಥವಾಗುತ್ತಿದೆ' ಎಂದು ಪೇಚಾಡಿಕೊಂಡಂತೆ. ಜೋಗದಲ್ಲಿ ವಿದ್ಯುತ್ ಉತ್ಪಾದನೆಯಾದ > ದಿನದಿಂದ ಬೆಂಗಳೂರು ಸಾಕಷ್ಟು (ಸಾಕಾಗುವಷ್ಟು?) ಬೆಳವಣಿಗೆ ಕಂಡಿದೆ. ಶರಾವತಿ ಕಣಿವೆ > ಕರ್ನಾಟಕವನ್ನು ವಿದ್ಯುತ್ ಶಕ್ತಿಯಿಂದ ಬೆಳಗಿಸಿದಂತೆ ಬೆಂಗಳೂರು ತಂತ್ರಜ್ಞಾನ ಶಕ್ತಿಯಿಂದ > ಜಗತ್ತಿನ ಸಿಲಿಕಾನ್ ಕಣಿವೆಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಬೆಂಗಳೂರಿನ ಎಲ್ಲ > ಹಿರಿಮೆಗಳ ಹಿಂದೆ ಶರಾವತಿ ಕಣಿವೆಯ ವಿದ್ಯುತ್ ಹಾಗೂ ವಿಶ್ವೇಶ್ವರಯ್ಯನವರ > ದೂರದರ್ಶಿತ್ವವನ್ನು ಕಾಣಬಹುದು. > > ಹಾಗಿದ್ದರೆ ಸೂರ್ಯನಿಂದ ಪುಕ್ಕಟೆಯಾಗಿ ಸಿಗುವ ಶಾಖ ಹಾಗೂ ಬೆಳಕಿನ ಶಕ್ತಿಯನ್ನು ನೇರವಾಗಿ > ಬಳಸಬಹುದಲ್ಲವೆ ಅಥವಾ ಈ ಶಕ್ತಿ ಮೂಲಗಳನ್ನು ವಿದ್ಯುತ್ ಆಗಿ ಪರಿವರ್ತಿಸಬಹುದಲ್ಲವೆ? > ಎಂಬುದು ನಿಮ್ಮ ಪ್ರಶ್ನೆ. ಅಂಗೈಯಲ್ಲಿ ಹಿಡಿದು ಲೆಕ್ಕಾಚಾರ ನಡೆಸುವ ಕ್ಯಾಲ್‌ಕ್ಯುಲೇಟರ್, > ಬಚ್ಚಲ ಮನೆಯಲ್ಲಿ ನೀರು ಕಾಯಿಸುವ ವ್ಯವಸ್ಥೆಗಳಿಂದ ಹಿಡಿದು ನಮಗೆ ದೂರಸಂಪರ್ಕವನ್ನು > ಸುಲಭವಾಗಿಸಿರುವ ಅಂತರಿಕ್ಷ ದಲ್ಲಿನ ಕೃತಕ ಉಪಗ್ರಹಗಳ ಕಾರ್ಯಾಚರಣೆ ವ್ಯವಸ್ಥೆಯ ತನಕ ಇಂದು > ಸೌರಶಕ್ತಿ ಎಲ್ಲೆಡೆ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲ, ಸೌರಶಕ್ತಿಯನ್ನು ವಿದ್ಯುತ್ > ಶಕ್ತಿಯನ್ನಾಗಿ ಪರಿವರ್ತಿಸಿ ಬ್ಯಾಟರಿಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ತಂತ್ರಜ್ಞಾನವೂ > ನಮಗೆ ಕರಗತವಾಗಿದೆ. ಇಲ್ಲಿ ಪ್ರಧಾನವಾಗಿ ಬಳಕೆಯಾಗುವುದು 'ಫೋಟೊ ವೋಲ್ಟಾಯಿಕ್ ಸೆಲ್ - > ಸೌರ ವಿದ್ಯುತ್ ಕೋಶ'ಗಳು. ಇವುಗಳನ್ನು 'ಅರೆವಾಹಕ'ಗಳೆಂದು ನಾವು ಗುರುತಿಸುವ > ಸಿಲಿಕಾನ್‌ನಂಥ ವಿಶೇಷ ಸಾಮಗ್ರಿಗಳಿಂದ ನಿರ್ಮಿಸಲಾಗುತ್ತದೆ. 'ಅರೆವಾಹಕ'ಗಳು ನಿಮಗೆ > ಗೊತ್ತು. ಇತ್ತ ಪೂರ್ಣವಾಗಿ ವಿದ್ಯುತ್ ವಾಹಕವಲ್ಲದ ಹಾಗೆಯೇ ಅತ್ತ ಪೂರ್ಣ ವಿದ್ಯುತ್ > ನಿರೋಧಕವೂ ಅಲ್ಲದ ಈ ಎಂಜಿನಿಯರಿಂಗ್ ಸಾಮಗ್ರಿಗಳು ಕಂಪ್ಯೂಟರ್ ಸೇರಿದಂತೆ ಅನೇಕ > ವಿದ್ಯುನ್ಮಾನ ಸಾಧನ-ಸಲಕರಣೆಗಳ ನಿರ್ಮಾಣಕ್ಕೆ ಅತ್ಯಗತ್ಯವಾದ ಬಿಡಿಭಾಗಗಳು. ಸೌರ ವಿದ್ಯುತ್ > ಕೋಶಗಳಲ್ಲಿ ಬಳಸುವ ಅರೆವಾಹಕಗಳ ವಿಶೇಷತೆ ಏನೆಂದರೆ, ಸೂರ್ಯನಿಂದ ಚಿಮ್ಮುವ ಬೆಳಕಿನ ಕಣಗಳಾದ > 'ಪ್ರೊಟಾನ್' ಅನ್ನು ಸ್ವೀಕರಿಸಿದೊಡನೆ ಅವುಗಳ ಪರಮಾಣುವಿನ ಹೊರ ಪರಿಧಿಯಲ್ಲಿ ಸುತ್ತುವ > ಎಲೆಕ್ಟ್ರಾನ್ ಕಣಗಳು ಬಂಧದಿಂದ ಬಿಡುಗಡೆಯಾಗುತ್ತವೆ. ಹೀಗೆ ಹೊರಬಂದ ಎಲೆಕ್ಟ್ರಾನ್‌ಗಳು > ನಿರ್ದಿಷ್ಟ ಪಥದಲ್ಲಿ ಚಲಿಸುತ್ತವೆ. ಅಂದರೆ ವಿರುದ್ಧ ದಿಕ್ಕಿನಲ್ಲಿ ವಿದ್ಯುತ್ > ಹರಿಯುತ್ತದೆ. ಇದನ್ನು ಅಗತ್ಯ ಬಿದ್ದೆಡೆ ಬಳಸಲು ಲೋಹದ ವಾಹಕದ ಕಿರು ಫಲಕಗಳನ್ನು ಸೌರ > ವಿದ್ಯುತ್ ಕೋಶದ ಬದಿಗಳಲ್ಲಿ ಇರಿಸಬೇಕು. ಇದು ಸೌರ ವಿದ್ಯುತ್ ಕೋಶಗಳ ಕೆಲಸದ ವೈಖರಿ. > ಹಾಗೆಯೇ ಸೌರ ಶಾಖವನ್ನು ಸಂಗ್ರಹಿಸಿಟ್ಟುಕೊಳ್ಳುವ ಫಲಕಗಳೂ ಸಹಾ ಸೌರ ವಿದ್ಯುತ್ ಕೋಶಗಳನ್ನು > ಹೊಂದಿರುತ್ತವೆ. ನಿರ್ದಿಷ್ಟ ಕೋನದಲ್ಲಿಟ್ಟ ಕನ್ನಡಿಗಳಂತೆ ಇಂಥ ಫಲಕಗಳು ಕೊಳವೆಗಳ ಮೇಲೆ ಸೌರ > ಬೆಳಕನ್ನು ಮರು ಕೇಂದ್ರೀಕರಿಸಿದರೆ, ನೀರನ್ನು ಕಾಯುವಂತೆ/ಕುದಿಯುವಂತೆ ಮಾಡಬಹುದು. ಗೃಹ > ಹಾಗೂ ಕಾರ್ಖಾನೆಗಳಲ್ಲಿ ಬಳಸುವ ಸೌರ ಶಾಖೋತ್ಪನ್ನ ವ್ಯವಸ್ಥೆಗಳು ಹೀಗೆ ಕೆಲಸ ಮಾಡುತ್ತವೆ. > > ಸದ್ಯಕ್ಕೆ ಅಭಿವೃದ್ಧಿಯಾಗಿರುವ ತಂತ್ರಜ್ಞಾನದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಸೌರ > ವಿದ್ಯುತ್ ಕೋಶಗಳ ಸಂಸ್ಕರಣೆ ಹಾಗೂ ನಿರ್ಮಾಣ ಅತ್ಯಂತ ತುಟ್ಟಿಯ ಬಾಬ್ತು. ಜತೆಗೆ > ಪರಿವರ್ತನೆಯಾದ ವಿದ್ಯುತ್ ಅನ್ನು ಸಂಗ್ರಹಿಸಿಟ್ಟುಕೊಳ್ಳುವ ಬ್ಯಾಟರಿಗಳ ಬೆಲೆಯೂ ಹೆಚ್ಚು. > ಆರಂಭಿಕ ಹೂಡಿಕೆಯ ಹೆಚ್ಚಳದಿಂದಾಗಿ ಸೌರ ವಿದ್ಯುತ್ ಅಥವಾ ಸೌರ ಶಾಖ ವ್ಯವಸ್ಥೆಗಳು > ಜನಮನ್ನಣೆಯನ್ನು ಹೆಚ್ಚಾಗಿ ಗಳಿಸಿಲ್ಲ. ಇದಕ್ಕೆ ಮತ್ತೂ ಒಂದು ಕಾರಣವಿದೆ. ಇಂಥ ವ್ಯವಸ್ಥೆಯ > ಸ್ಥಾಪನೆಗೆ ಸ್ಥಳಾವಕಾಶ ಹೆಚ್ಚು ಬೇಕಾಗುತ್ತದೆ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಬಳಸಿ > ಬಿಸಾಡಬಲ್ಲ ಸೌರ ವಿದ್ಯುತ್/ಶಾಖ ಫಲಕಗಳನ್ನು ನಿರ್ಮಿಸಬೇಕೆಂಬ ಹಂಬಲದಿಂದ ತಂತ್ರಜ್ಞರು > ಸಂಶೋಧನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ನಾವು ಧರಿಸುವ ಬಟ್ಟೆ-ಬರೆ, ಕಾರಿನ ಮೇಲು > ಹೊದಿಕೆ, ಕಟ್ಟಡಗಳ ಗೋಡೆಗಳಿಗೆ ಅಳವಡಿಸಬಹುದಾದ ತೆಳು ಫಲಕಗಳು, ದೋಣಿಯ ಮೇಲಿನ ಹಾಯಿ ಮುಂತಾದ > ಸಾಮಗ್ರಿಗಳ ಮೇಲೆ ಸೌರ ವಿದ್ಯುತ್ ಕೋಶಗಳನ್ನು ನೇಯುವ ಅಥವಾ ಲೇಪಿಸುವ ಇಲ್ಲವೆ ಹೊಲಿಯುವ > ಬಹಳಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. > > ಈ ನಿಟ್ಟಿನಲ್ಲಿ ವಿಜ್ಞಾನಿಗಳ ಕಲ್ಪನೆಯ ಮೂಸೆಯಲ್ಲಿರುವ ಹೊಸ ತಂತ್ರಜ್ಞಾನವೆಂದರೆ ಕಚೇರಿ > ಹಾಗೂ ಮನೆಯ ಕಿಟಕಿ ಗಾಜುಗಳನ್ನು ಸೌರ ವಿದ್ಯುತ್ ಫಲಕಗಳನ್ನಾಗಿ ಪರಿವರ್ತಿಸುವುದು. ಹಾಗೆಯೇ > ಇಂಥ ಪರಿವರ್ತನೆ ಅಗ್ಗದ ದರದಲ್ಲಾಗಬೇಕು. ಇದು ಹೇಗೆ ಸಾಧ್ಯ? ಎಂಬುದು ನಿಮ್ಮ ಪ್ರಶ್ನೆ. > ಸದ್ಯಕ್ಕೆ ಬಳಕೆಯಲ್ಲಿರುವ ವ್ಯವಸ್ಥೆಯಲ್ಲಿ ಕನ್ನಡಿಗಳು ಹಾಗೂ ಮಸೂರಗಳು ಹೇರಳವಾಗಿವೆ. > ಇವುಗಳು ಸಾಮಾನ್ಯ ಗಾಜಿನ ಫಲಕಗಳಿಗಿಂತಲೂ ಹೆಚ್ಚಿನ ಬೆಲೆಯುಳ್ಳವು. ಜತೆಗೆ > ಬಾಗುವಿಕೆಯಿಂದಾಗಿ ಸಪಾಟಾದ ಫಲಕಗಳಿಗಿಂತಲೂ ವಿಸ್ತೀರ್ಣ ಕಡಿಮೆ ಹೊಂದಿರುತ್ತವೆ, ತೂಕ > ಹೆಚ್ಚಾಗಿರುತ್ತದೆ. ಅಂತೆಯೇ ಅವುಗಳ ಸೌರ ಶಕ್ತಿಯನ್ನು ಗ್ರಹಿಸುವ ಪ್ರಮಾಣ > ಕಡಿಮೆಯಾಗಿರುತ್ತವೆ. ಇಲ್ಲಿ ಎದುರಾಗುವ ಮತ್ತೊಂದು ಸಮಸ್ಯೆಯೆಂದರೆ ಗೋಡೆ, ಕಿಟಕಿಯ ಗಾಜುಗಳು > ಪಾರದರ್ಶಕವಾಗಿರುವುದು. ಪಾರದರ್ಶಕತೆಯ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ > ಸೌರಶಕ್ತಿಯನ್ನು ಇವು ಹಿಡಿದಿಟ್ಟುಕೊಳ್ಳಲಾರವು. ಇಂದು ಹೆಚ್ಚು ಬಳಕೆಯಲ್ಲಿರುವ > ಸೌರಕೋಶಗಳನ್ನು ಕ್ರಿಸ್ಟಲೈನ್ ಸಿಲಿಕಾನ್ (ಅಂದರೆ ಹರಳುರೂಪದ ಸಿಲಿಕಾನ್) ಸಾಮಗ್ರಿಯಿಂದ > ತಯಾರಿಸಲಾಗುತ್ತದೆ. ಇವುಗಳನ್ನು ಪಾರದೀಪಕವಾಗಿ (ಅಂದರೆ ಬೆಳಕನ್ನು ಭಾಗಶಃ ಚದುರಿಸುತ್ತಲೇ > ಅದನ್ನು ತನ್ನ ಮೂಲಕ ಹಾಯಿಬಿಡುವಂಥದ್ದು) ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಯನ್ನು > ಹಿಡಿದಿಟ್ಟುಕೊಳ್ಳಬಹುದು. ಆದರೆ ಇಂಥ ಸಾಮಗ್ರಿಯನ್ನು ಸೌರಕೋಶಗಳಾಗಿ ರೂಪಿಸುವುದು ಕಷ್ಟದ > ಕೆಲಸ. ಇದರ ಬದಲು ವಿಜ್ಞಾನಿಗಳು ಸೌರಕೋಶಗಳನ್ನು ಅರೆಪಾರದರ್ಶಕ ಸಾಮಗ್ರಿಗಳಿಂದ ರೂಪಿಸುವುದು > ಸೂಕ್ತವೆಂದು ಯೋಚಿಸಿದರು. ಈ ಕಾರ್ಯಕ್ಕಾಗಿ ಸೌರಕೋಶಗಳಲ್ಲಿ ವರ್ಣದ್ರವ್ಯವನ್ನು ಸೇರಿಸಿ > ಪ್ರಯೋಗಗಳನ್ನು ನಡೆಸಿದರು. ಇವು ಕ್ರಿಸ್ಟಲೈನ್ ಸಿಲಿಕಾನ್ ಸೌರಕೋಶಗಳಷ್ಟು ಕಾರ್ಯಕ್ಷ > ಮತೆಯನ್ನು ಹೊಂದಿರಲಿಲ್ಲ. ಇವೆರಡೂ ಸಾಮಗ್ರಿಗಳ ಗುಣಲಕ್ಷ ಣಗಳನ್ನು ಭಾಗಶಃ ಹೋಲುವ > 'ಪೆರೋವ್‌ಸ್ಕೈಟ್ಸ್' ಎಂಬ ಹೊಸ ಸಾಮಗ್ರಿಯನ್ನು ಆವರು ಆವಿಷ್ಕರಿಸಿದರು. ಈ ಸಾಮಗ್ರಿಯನ್ನು > ಸುಲಭವಾಗಿ ಸಂಸ್ಕರಿಸಬಹುದು ಮತ್ತು ಇವು ಕ್ರಿಸ್ಟಲೈನ್ ಸಿಲಿಕಾನ್ ಸಾಮಗ್ರಿಗಿಂತಲೂ > ಅಗ್ಗ. ಇಂಥ ಸಾಮಗ್ರಿಗಳ ಕುರಿತು ಬೃಹತ್ ಮಟ್ಟದಲ್ಲಿ ಪ್ರಯೋಗ ನಡೆಸುತ್ತಿರುವವರು 'ಕೊರಿಯಾ > ಅಡ್ವಾನ್ಸ್‌ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ'ಯ ಪ್ರಾಧ್ಯಾಪಕರಾದ > ಸ್ಯೂನ್‌ಗ್ಯೂಪ್ ಯೂ ಹಾಗೂ 'ಸಂಗ್‌ಕ್ಯುನ್‌ವಾನ್ ಯೂನಿವರ್ಸಿಟಿ'ಯ ನಮ್-ಗ್ಯೂ ಪಾರ್ಕ್. > ಅವರ ಅಧ್ಯಯನದ ಪ್ರಕಾರ ಈ ಹೊಸ ಸಾಮಗ್ರಿಯ ಕಾರ್ಯಕ್ಷ ಮತೆ ವರ್ಷದಿಂದ ವರ್ಷಕ್ಕೆ ಏರುತ್ತಲೇ > ಬಂದಿದ್ದು, ಇನ್ನು ಕೆಲ ವರ್ಷಗಳಲ್ಲಿ ಕ್ರಿಸ್ಟಲೈನ್ ಸಿಲಿಕಾನ್ ಸಾಮಗ್ರಿಯ ಕಾರ್ಯಕ್ಷ > ಮತೆಯನ್ನು ಅದು ಮುಟ್ಟುವ ನಿರೀಕ್ಷೆಯಿದೆ. > > ಇಲ್ಲಿ ಗಮನಾರ್ಹವಾದ ಮತ್ತೊಂದು ಶೋಧವೆಂದರೆ, ಈ ವಿಶಿಷ್ಟ ಸಾಮಗ್ರಿಯು ತನ್ನ ಮೇಲೆ ಬೀಳುವ > ಆವಗೆಂಪು (ಇನ್‌ಫ್ರಾ ರೆಡ್) ಕಿರಣಗಳನ್ನು ಪ್ರತಿಫಲಿಸಿ, ಗೋಚರ ಬೆಳಕನ್ನು ಒಳಗೆ ಹಾಯುವಂತೆ > ಮಾಡುತ್ತದೆ. ಸೌರಕೋಶಗಳನ್ನು ಜೋಡಿಸಿರುವ ಫಲಕದ ಮೇಲಿನ ಹೊದಿಕೆಯಾಗಿ ಇಂಥ ಗಾಜನನ್ನು > ಬಳಸುವುದರಿಂದ ಹೆಚ್ಚಿನ ಕಾರ್ಯಕ್ಷ ಮತೆಯನ್ನು ಪಡೆಯಬಹುದು. ಪ್ರಸ್ತುತ ಈ ಕಾರ್ಯಕ್ಷ ಮತೆಯು > ಪ್ರತಿಶತ ಹದಿಮೂರರಷ್ಟಿದ್ದು, ಅದನ್ನು ಪ್ರತಿಶತ ಇಪ್ಪತ್ತೈದಕ್ಕೇರಿಸುವ ಗುರಿ > ವಿಜ್ಞಾನಿಗಳದು. ವಿದ್ಯುತ್ ಶಕ್ತಿ ಬೇಡಿಕೆ ಅತಿ ಹೆಚ್ಚಾಗಿರುವ ಈ ದಿನಗಳಲ್ಲಿ > ಅಸಾಂಪ್ರದಾಯಿಕ ಶಕ್ತಿ ಮೂಲಗಳತ್ತ ಎಲ್ಲ ದೇಶಗಳೂ ಮೊಗಮಾಡಿವೆ. ಕಚ್ಚಾ ತೈಲದ ಬೆಲೆಯಲ್ಲಿ > ಇಳಿಕೆಯಿದ್ದರೂ ಪರಿಸರ ಮಾಲಿನ್ಯದ ಅವುಗಳ ಕೊಡುಗೆ ಹೆಚ್ಚು. ಹೀಗಾಗಿ ಸೌರ ಶಕ್ತಿ > ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿವೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡಿರುವ > ಕೊರಿಯನ್ ತಂತ್ರಜ್ಞರು ತಮ್ಮ ತಂತ್ರಜ್ಞಾನವನ್ನು ಮತ್ತಷ್ಟು ಉತ್ತಮಪಡಿಸಲು > ಶ್ರಮಿಸುತ್ತಿದ್ದಾರೆ. ಸೌರಫಲಕಗಳ ಶಕ್ತಿ ಗ್ರಹಿಕಾ ಸಾಮರ್ಥ್ಯವನ್ನು ಉತ್ತಮ ಪಡಿಸುವತ್ತ > ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. > > ಪರಮಾಣು ವಿದ್ಯುತ್ ಯೋಜನೆಗಳ ಬಗೆಗಿನ ಅಂತಾರಾಷ್ಟ್ರೀಯ ಒಪ್ಪಂದಗಳು ನೆನೆಗುದಿಗೆ > ಬಿದ್ದಿರುವ ಸಂದರ್ಭದಲ್ಲಿ ಭಾರತಕ್ಕಿದು ತೀವ್ರ ಕಷ್ಟ ಕಾಲ. ಈಗಾಗಲೇ ತೀವ್ರ ವಿದ್ಯುತ್ > ಕೊರತೆಯನ್ನು ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪ್ರತಿ > ವರ್ಷ ಭಾರತ ಸ್ವೀಕರಿಸುವ ಸೌರ ಶಕ್ತಿಯ ಪ್ರಮಾಣ ಐದು ಸಹಸ್ರ ಟ್ರಿಲಿಯನ್ ವಿದ್ಯುತ್ > ಯೂನಿಟ್‌ಗಳಿಗೆ ಸಮಾನ. ಅಂದರೆ ನಿತ್ಯವೂ ತಲಾ ಹನ್ನೊಂದು ಸಹಸ್ರ ಯೂನಿಟ್‌ಗಳ ಸೌರ ವಿದ್ಯುತ್ > ಸುಗ್ಗಿ! ಸೌರ ವಿದ್ಯುತ್/ಶಾಖ ವ್ಯವಸ್ಥೆಯನ್ನು ಜನಪ್ರಿಯಗೊಳಿಸುವುದರ ಜತೆಗೆ, ಈ > ನಿಟ್ಟಿನಲ್ಲಿ ಜಾಗತಿಕವಾಗಿ ಲಭ್ಯವಿರುವ ತಂತ್ರಜ್ಞಾನವನ್ನು ಶೀಘ್ರವೇ ಬರ ಮಾಡಿಕೊಳ್ಳಬೇಕು. > ಅನುದಾನದ ಕೊರತೆಯಿಂದ ಕೇವಲ ಶೈಕ್ಷ ಣಿಕ ಸಂಶೋಧನಾ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿರುವ > ತಂತ್ರಜ್ಞಾನಗಳು ಉದ್ದಿಮೆಗಳಿಗೆ ಲಭ್ಯವಾಗಬೇಕು. ಹೆಚ್ಚಿನ ಸಹಾಯಧನದ ಆಮಿಷದೊಂದಿಗೆ ಸೌರ > ವಿದ್ಯುತ್/ಶಾಖ ವ್ಯವಸ್ಥೆಗಳನ್ನು ಜನಪ್ರಿಯಗೊಳಿಸುವ ಯೋಜನೆಗಳಿಗೆ ಸರ್ಕಾರ ಆದ್ಯತೆ > ನೀಡಬೇಕು. ಖಾಸಗಿ ಸಂಸ್ಥೆಗಳೊಂದಿಗೆ ಸರಕಾರಿ ವ್ಯವಸ್ಥೆ ಜತೆಗೂಡಿ ಸೌರ ಶಕ್ತಿ ಬಳಕೆಯ ಬಗ್ಗೆ > ಹೆಚ್ಚಿನ ಜಾಗೃತಿ ಮೂಡಿಸಬೇಕು. > > Hareeshkumar K > GHS Huskuru > Malavalli TQ > Mandya Dt > 9880328224 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
