ಯೋಚನಾತ್ಮಕ ವಿಷಯ. ಮಾಹಿತಿಗಾಗಿ ಧನ್ಯವಾದಗಳು.

On 27 Jul 2017 06:27, "HAREESHKUMAR K Agasanapura" <[email protected]>
wrote:

> http://m.prajavani.net/article/2017_07_27/509119
> *ಧ್ರುವಗಳತ್ತ ಎರಡು ತಾರೆಗಳು*
>
> 27 Jul, 2017
>
> ನಾಗೇಶ್ ಹೆಗಡೆ
>
>
> <https://www.facebook.com/sharer/sharer.php?u=http%3A%2F%2Fwww.prajavani.net%2Farticle%2F2017_07_27%2F509119>
> <https://twitter.com/intent/tweet?text=%E0%B2%8E%E0%B2%B0%E0%B2%A1%E0%B3%81+%E0%B2%A7%E0%B3%8D%E0%B2%B0%E0%B3%81%E0%B2%B5%E0%B2%97%E0%B2%B3%E0%B2%A4%E0%B3%8D%E0%B2%A4+%E0%B2%8E%E0%B2%B0%E0%B2%A1%E0%B3%81+%E0%B2%A4%E0%B2%BE%E0%B2%B0%E0%B3%86%E0%B2%97%E0%B2%B3%E0%B3%81+http%3A%2F%2Fwww.prajavani.net%2Farticle%2F2017_07_27%2F509119>
> <https://plus.google.com/share?url=http%3A%2F%2Fwww.prajavani.net%2Farticle%2F2017_07_27%2F509119>
> <http://www.pinterest.com/pin/find/?url=http%3A%2F%2Fwww.prajavani.net%2Farticle%2F2017_07_27%2F509119>
> <http://www.linkedin.com/shareArticle?mini=true&title=%E0%B2%8E%E0%B2%B0%E0%B2%A1%E0%B3%81+%E0%B2%A7%E0%B3%8D%E0%B2%B0%E0%B3%81%E0%B2%B5%E0%B2%97%E0%B2%B3%E0%B2%A4%E0%B3%8D%E0%B2%A4+%E0%B2%8E%E0%B2%B0%E0%B2%A1%E0%B3%81+%E0%B2%A4%E0%B2%BE%E0%B2%B0%E0%B3%86%E0%B2%97%E0%B2%B3%E0%B3%81+&url=http%3A%2F%2Fwww.prajavani.net%2Farticle%2F2017_07_27%2F509119>
>
> ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಎರಡೂ ನಮ್ಮ ದೇಶದಲ್ಲಿ ಬೆಳೆಯಬೇಕೆಂದು ಜೀವನವಿಡೀ
> ಶ್ರಮಿಸಿದ ಪ್ರೊ. ಯಶ್‌ಪಾಲ್ ಅವರ ನಿಧನದ ವಾರ್ತೆ ಮೊನ್ನೆ ಟಿವಿ ವಾರ್ತೆಗಳಲ್ಲಿ
> ಬರುತ್ತಿತ್ತು. ಅದೇ ಸಂದರ್ಭದಲ್ಲಿ ಎನ್‌ಡಿಟಿವಿ ವಾಹಿನಿಯಲ್ಲಿ ಇನ್ನೊಂದು ದೃಶ್ಯಾವಳಿ
> ಪ್ರಸಾರವಾಗುತ್ತಿತ್ತು: ಹೆರಿಗೆ ಸಮಯದಲ್ಲಿ ತಾಯಿ ಮಕ್ಕಳ ಆರೋಗ್ಯ ಚೆನ್ನಾಗಿರಲೆಂದು
> ಹೈದರಾಬಾದ್‌ನ ಗಾಂಧೀ ಆಸ್ಪತ್ರೆಯ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಹರಿ ಅನುಪಮಾ ಅವರು
> ಮಹಾಮೃತ್ಯುಂಜಯ ಹೋಮವನ್ನು ಆಸ್ಪತ್ರೆಯಲ್ಲೇ ಹಮ್ಮಿಕೊಂಡು ಯಜ್ಞಕುಂಡದ ಎದುರು
> ಸಮಿತ್ತುಗಳನ್ನು ಬೆಂಕಿಗೆ ಎಸೆಯುತ್ತ ಕೂತಿದ್ದರು.
>
> ಅತ್ತ ಮಧ್ಯಪ್ರದೇಶದ ಆಸ್ಪತ್ರೆಗಳಲ್ಲಿ ಕೇವಲ ಐದು ರೂಪಾಯಿ ಶುಲ್ಕ ನೀಡಿದರೆ ರೋಗಿಯ
> ಹಣೆಬರಹವನ್ನು ಹೇಳಬಲ್ಲ ಜ್ಯೋತಿಷಿಗಳಿಗೆ ಸರ್ಕಾರವೇ ಜಾಗ ನೀಡಿ ಕೂರಿಸಿದ ಸುದ್ದಿ
> ಬರುತ್ತಿತ್ತು. ಅಂದಹಾಗೆ, ಖರಗಪುರದ ಐಐಟಿಯಲ್ಲಿ ವಾಸ್ತುಶಾಸ್ತ್ರದ ಪಾಠ ಆರಂಭವಾಗುತ್ತಿದೆ.
> ಅಗಲಿದ ಗಣ್ಯ ವಿಜ್ಞಾನಿಗಳಿಬ್ಬರ ಬಗ್ಗೆ ಶ್ರದ್ಧಾಂಜಲಿ ಟಿಪ್ಪಣಿ ಹೀಗೆ ಆರಂಭವಾಗಬೇಕಿತ್ತೆ?
>
> ವಿಕ್ರಮ್ ಸಾರಾಭಾಯಿಯವರ ಕನಸನ್ನು ನನಸು ಮಾಡಹೊರಟ ಇಬ್ಬರು ವಿಜ್ಞಾನಿಗಳು- ಇಬ್ಬರೂ
> ಭೌತವಿಜ್ಞಾನಿಗಳು, ಇಬ್ಬರೂ ಪದ್ಮವಿಭೂಷಣ ಸಮ್ಮಾನಿತರು- 36 ಗಂಟೆಗಳ ಅಂತರದಲ್ಲಿ ಗತಿಸಿದರು.
> ಪ್ರೊ. ಯು.ಆರ್. ರಾವ್ ಮತ್ತು ಪ್ರೊ. ಯಶ್‌ಪಾಲ್ ಇಬ್ಬರೂ ಅಮೆರಿಕದಲ್ಲಿ ಉನ್ನತ ಅಧ್ಯಯನ
> ಮಾಡಿ ಬಂದವರು. ಇಬ್ಬರೂ ಅಹ್ಮದಾಬಾದ್‌ನ ಭೌತವಿಜ್ಞಾನ ಕೇಂದ್ರದಲ್ಲಿ ಹೊಸ ಸಂಶೋಧನ
> ಕ್ಷೇತ್ರಕ್ಕೆ ಕಾಲಿಟ್ಟವರು. ನಂತರದ ಅವರಿಬ್ಬರ ಕಾರ್ಯಕ್ಷೇತ್ರಗಳು ಬಾಹ್ಯಾಕಾಶಕ್ಕೆ
> ಸಂಬಂಧಿಸಿದ್ದೇ ಆದರೂ ಪರಸ್ಪರ ವಿರುದ್ಧ ದಿಕ್ಕಿಗೆ ವಿಸ್ತರಿಸಿಕೊಂಡವು. ಯು.ಆರ್. ರಾವ್
> ರಾಕೆಟ್‌ಗಳತ್ತ ಮುಖ ಮಾಡಿದರೆ, ಯಶ್‌ಪಾಲ್ ವಿಜ್ಞಾನ ಶಿಕ್ಷಣವನ್ನು ಸುಧಾರಿಸುವತ್ತ ಗಮನ
> ಹರಿಸಿದರು.
>
> ಯಶ್‌ಪಾಲ್ ಬಾಹ್ಯಾಕಾಶ ಕ್ಷೇತ್ರಕ್ಕೆ ಐದು ವರ್ಷ ಮೊದಲು ಕಾಲಿಟ್ಟರು. 1970ರ ಆರಂಭದಲ್ಲಿ
> ಅಮೆರಿಕ ಮತ್ತು ಸೋವಿಯತ್ ಸಂಘ ಎರಡೂ ಬಾಹ್ಯಾಕಾಶ ಪೈಪೋಟಿಯಲ್ಲಿ ತೊಡಗಿದ್ದವು.
> ಉಪಗ್ರಹಗಳನ್ನು ಸಂಪರ್ಕದ ಸಾಧನವಾಗಿ ಬಳಸುವ ಕೆಲಸ ಬೇರೆ ಯಾವ ದೇಶಗಳಲ್ಲೂ ಆರಂಭವಾಗಿರಲಿಲ್ಲ.
> ಭಾರತಕ್ಕೆ ಉಪಗ್ರಹ ಸೇವೆಯನ್ನು ಎರವಲು ನೀಡಲು ಅಮೆರಿಕ ಮುಂದೆ ಬಂತು. ಅದನ್ನು ಹೇಗೆ
> ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲೆಂದು ಅಹ್ಮದಾಬಾದ್‌ನಲ್ಲಿ ‘ಸ್ಪೇಸ್ ಅಪ್ಲಿಕೇಶನ್
> ಸೆಂಟರ್’ ಆರಂಭವಾಯಿತು.
>
> ದೂರದರ್ಶನ ಪ್ರಸಾರಕ್ಕೆ ಬಳಸಲು ಸಾಧ್ಯವಾಗುವುದಾದರೆ ಭಾರತದ ಹಳ್ಳಿಹಳ್ಳಿಗಳಿಗೂ ಜ್ಞಾನ
> ಪ್ರಸಾರಕ್ಕೆ ಅದು ಬಹುಮುಖ್ಯ ಸಾಧನ ಆದೀತೆಂದು ಯಶ್‌ಪಾಲ್ ಸೂಚಿಸಿದರು. ಈ ವಿಚಾರ ಅಂದಿನ
> ಮಟ್ಟಿಗೆ ಜಗತ್ತಿಗೇ ಹೊಸದಾಗಿತ್ತು. ಅಮೆರಿಕ ದೊಡ್ಡ ಮನಸ್ಸು ಮಾಡಿ ತನ್ನ ಉಪಗ್ರಹವನ್ನು
> ಸ್ವಲ್ಪ ಈಚೆ ಸರಿಸಿ ಭಾರತದ ಟಿವಿ ಕಾರ್ಯಕ್ರಮಗಳ ಪ್ರಸಾರಕ್ಕೆಂದೇ ಒಂದು
> ಟ್ರಾನ್ಸ್‌ಪಾಂಡರನ್ನು (ಕನ್ನಡಿ ಎಂದಿಟ್ಟುಕೊಳ್ಳಿ) ಭಾಗಶಃ ಮೀಸಲಾಗಿಡಲು ನಿರ್ಧರಿಸಿತು.
>
> ಅಂದಿನ ದಿನಗಳಲ್ಲಿ ಭಾರತದಲ್ಲಿ ಟಿವಿ ಎಂದರೆ ದಿಲ್ಲಿ, ಕೋಲ್ಕತಾ ಮತ್ತು ಮುಂಬೈಯಲ್ಲಿ ಅದೂ
> ದಿನಕ್ಕೆ ಒಂದೆರಡು ಗಂಟೆಗಳ ಕಾಲ ಕಪ್ಪು ಬಿಳುಪು ಕಾರ್ಯಕ್ರಮಗಳ ಬಿತ್ತರಣೆ ಆಗುತ್ತಿತ್ತು.
> ಇಡೀ ದೇಶದ ಪ್ರತಿ ಹಳ್ಳಿಗೂ, ವಿಶೇಷವಾಗಿ ಶಾಲೆಗಳಿಗೆ ವಿಜ್ಞಾನ ಶಿಕ್ಷಣ ನೀಡುವ ಹಾಗೂ
> ಪಂಚಾಯ್ತಿ ಕಟ್ಟೆಗಳಲ್ಲಿ ಮೂಢ ನಂಬಿಕೆಗಳ ನಿವಾರಣೆಗೆ ಕಾರ್ಯಕ್ರಮಗಳನ್ನು ರೂಪಿಸುವ ಹಾಗೂ
> ಸೂಕ್ತ ಸವಲತ್ತು (ಹಾರ್ಡ್‌ವೇರ್) ಒದಗಿಸುವ ಹೊಣೆಗಾರಿಕೆ ಯಶ್‌ಪಾಲ್ ತಂಡದವರ ಹೆಗಲ ಮೇಲೆಯೇ
> ಬಿತ್ತು.
>
> ಟಿವಿಯಲ್ಲಿ ಬಿತ್ತರಣೆಗೆಂದು ಕಾರ್ಯಕ್ರಮಗಳನ್ನು ರೂಪಿಸಲೆಂದು ಹೈದರಾಬಾದ್‌ನಲ್ಲಿ
> ಪ್ರತ್ಯೇಕ ಕೇಂದ್ರವನ್ನು ತೆರೆಯಲಾಯಿತು. ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಿಂದ ಬಂದವರಿಗೆ
> ಟಿವಿಗಾಗಿ ಶೈಕ್ಷಣಿಕ ಸಾಕ್ಷ್ಯಚಿತ್ರಗಳ ನಿರ್ಮಾಣದ ತರಬೇತಿ ಆರಂಭವಾಯಿತು. ಇತ್ತ
> ಹಳ್ಳಿಗಳಿಗೆ ಹೋಗಿ ನೋಡಿದರೆ ಅಲ್ಲಿ ಶಾಲೆಗಳೇ ಅಪರೂಪ; ವಿಜ್ಞಾನ ಬೋಧನೆಗೆ ಲ್ಯಾಬ್
> ಹಾಗಿರಲಿ, ಕೆಲವೆಡೆ ಕಪಾಟೂ ಇಲ್ಲ, ಕರಿಹಲಗೆಯೂ ಇಲ್ಲ. ವಿದ್ಯುತ್ ಇಲ್ಲ.
>
> ಮಕ್ಕಳಿಗಾಗಿ ವಿಜ್ಞಾನ ಪಾಠಗಳನ್ನು ನಿರೂಪಿಸುವ ಸವಾಲು ಇವರಿಗೆ ಎದುರಾಯಿತು. ಯಾವುದೇ
> ಪರಿಕರಗಳಿಲ್ಲದೆಯೂ ಮಕ್ಕಳು ಬೆಳೆಯುತ್ತಿರುವ ಪರಿಸರದ ಉದಾಹರಣೆಗಳಲ್ಲೇ ವಿಜ್ಞಾನ ಮತ್ತು
> ವೈಜ್ಞಾನಿಕ ತತ್ವಗಳನ್ನು ತೋರಿಸಿ ವೈಜ್ಞಾನಿಕ ಮನೋಭಾವವನ್ನು ಬಿತ್ತುವ ಹೊಸ
> ಪಠ್ಯಕ್ರಮಗಳನ್ನು ರೂಪಿಸುವ ಹೊಣೆಯನ್ನು ಯಶ್‌ಪಾಲ್ ಹೊತ್ತರು. ಅವನ್ನೆಲ್ಲ ಪ್ರಸಾರ ಮಾಡಲು
> ಅಮೆರಿಕದ ಉಪಗ್ರಹಗಳನ್ನು ಅವಲಂಬಿಸುವ ಬದಲು ಭಾರತದ್ದೇ ಉಪಗ್ರಹವನ್ನು ರೂಪಿಸುವ ಹೊಣೆ
> ಯು.ಆರ್. ರಾವ್ ಪಾಲಿಗೆ ಬಂತು. ಒಂದೇ ಸಂಸ್ಥೆಯ ಒಂದು ಕಡೆ ‘ಆರ್ಯಭಟ’ ಉಪಗ್ರಹದ ನೀಲನಕ್ಷೆ
> ಸಿದ್ಧವಾಗುತ್ತಿದ್ದಾಗ ಇನ್ನೊಂದು ಕಡೆ ಅದರ ಪ್ರಯೋಜನವನ್ನು ಜನಸಾಮಾನ್ಯರಿಗೆ ತಲುಪಿಸುವ
> ವಿಧಿ ವಿಧಾನಗಳ ನಕ್ಷೆ ಸಿದ್ಧವಾಗತೊಡಗಿತ್ತು.
>
> ಮುಂದಿನ ಕತೆಯನ್ನು ಮತ್ತೆ ಹೇಳಬೇಕಾಗಿಲ್ಲ. ಇಬ್ಬರೂ ಮೇಲೇರುತ್ತ, ಭಾರತದ ಪ್ರತಿಭೆಗಳನ್ನು
> ಹುಡುಕಿ ಮೇಲೆತ್ತುತ್ತ ಹೋದರು. ಉಪಗ್ರಹ ತಯಾರಾದರೆ ಸಾಲದು, ಅದನ್ನು ಮೇಲಕ್ಕೆ ಎತ್ತಿ
> ಕೂರಿಸಲು ನಮ್ಮದೇ ರಾಕೆಟ್ಟನ್ನು ರೂಪಿಸುವತ್ತ ಯು.ಆರ್. ರಾವ್ ನೇತೃತ್ವದ ತಂಡ
> ಸಜ್ಜಾಗುತ್ತಿತ್ತು. ಮಕ್ಕಳ ಪಾಠಕ್ರಮ ಬದಲಾದರೆ ಸಾಲದು, ಬೋಧನಾ ಕ್ರಮ ಕೂಡ ಬದಲಾಗಬೇಕು,
> ಅಜ್ಞಾನ ನೀಗಿದರೆ ಸಾಲದು, ಸಮಾಜದಲ್ಲಿ ಹಾಸು ಹೊಕ್ಕಾಗಿ
> ರುವ ಮೌಢ್ಯಗಳ ನಿವಾರಣೆಗೂ ಕ್ರಮ ಕೈಗೊಳ್ಳಬೇಕು ಎಂದು ಯಶ್‌ಪಾಲ್ ತಮ್ಮನ್ನು
> ತೊಡಗಿಸಿಕೊಂಡರು. ವಿಜ್ಞಾನ ಶಿಕ್ಷಣಕ್ಕೆಂದೇ ಸಂಶೋಧನ ಸಂಸ್ಥೆಗಳನ್ನು ಕಟ್ಟಿದರು. ಮಕ್ಕಳಿಗೆ
> ವಿಜ್ಞಾನ ಬೋಧಿಸುವ ಸರ್ಕಾರೇತರ ಸಂಘಟನೆಗಳನ್ನು ಪ್ರೋತ್ಸಾಹಿಸಿದರು.
>
> ಕಾಲೇಜಿಗೆ ಪ್ರವೇಶಿಸುತ್ತಿರುವವರಿಗೆ ಪ್ರತಿಭಾ ಪುರಸ್ಕಾರ ಯೋಜನೆಗಳನ್ನು,
> ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣದ ಕೊಂಡಿಕೇಂದ್ರಗಳನ್ನು ಪ್ರಾರಂಭಿಸಿದರು.
> ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ ವಿಶ್ವಸಂಸ್ಥೆ ಆಯೋಜಿಸಿದ್ದ ಜಾಗತಿಕ ಮೇಳಕ್ಕೆ ಮಹಾ
> ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು.
>
> ಯುಜಿಸಿ, ವಿಜ್ಞಾನ ತಂತ್ರಜ್ಞಾನ ಇಲಾಖೆ, ಯೋಜನಾ ಆಯೋಗಗಳಲ್ಲಿ ಛಾಪು ಮೂಡಿಸಿದರು.
> ಬಾಹ್ಯಾಕಾಶ ಯಾತ್ರಿಗಳ ಹಾಗೆ ಮಕ್ಕಳೂ ತೂಕರಹಿತ ಸ್ಥಿತಿಯಲ್ಲಿ ಶಿಕ್ಷಣ ಪಡೆಯುವುದು ಹೇಗೆಂಬ
> ಬಗ್ಗೆ ‘ಲರ್ನಿಂಗ್ ವಿದೌಟ್ ಬರ್ಡನ್’ ವರದಿ ತಯಾರಿಸಿದರು. ಉನ್ನತ ಶಿಕ್ಷಣದಲ್ಲಿ ಸುಧಾರಣೆಯ
> ಸೂತ್ರಗಳನ್ನು ನಿರೂಪಿಸಿದರು. ದೂರದರ್ಶನಕ್ಕೆಂದು ಗಿರೀಶ ಕಾರ್ನಾಡ್ ರೂಪಿಸಿದ ಜನಪ್ರಿಯ
> ‘ಟರ್ನಿಂಗ್ ಪಾಯಿಂಟ್’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿಜ್ಞಾನದ ಪ್ರಶ್ನೋತ್ತರ
> ಕಾರ್ಯಕ್ರಮಗಳನ್ನು ಸರಳ, ರಂಜನೀಯ ಶೈಲಿಯಲ್ಲಿ ನಡೆಸಿಕೊಟ್ಟರು.
>
> ಯಶ್‌ಪಾಲ್ ನಿವೃತ್ತಿಯ ನಂತರ ಇನ್ನೂ ಹೆಚ್ಚಿನ ಚಟುವಟಿಕೆಗಳಲ್ಲಿ ತಮ್ಮನ್ನು
> ತೊಡಗಿಸಿಕೊಂಡರು. ‘ಜನ ವಿಜ್ಞಾನ ಜಾಥಾ’ ಮೂಲಕ ದೇಶದ ಮೂಲೆ ಮೂಲೆಗೆ ವಿಜ್ಞಾನ ಸಂದೇಶವನ್ನು
> ತಲುಪಿಸಬಲ್ಲ ಐದು ಕೋಟಿ ಸಂವಹನಕಾರರ ಗುಂಪುಗಳನ್ನು ಸಂಘಟಿಸಿದರು. ಎಲ್ಲೇ ಸೂರ್ಯಗ್ರಹಣ
> ನಡೆಯಲಿ, ಅದೊಂದು ವಿಜ್ಞಾನದ ಹಬ್ಬವೆಂಬಂತೆ, ಮೂಢ ನಂಬಿಕೆಗಳ ನಿವಾರಣೆಗೆ ಒದಗಿದ
> ಸುಸಂದರ್ಭವೆಂಬಂತೆ ಮೇಳ ನಡೆಸುತ್ತಿದ್ದರು. ಮಕ್ಕಳು ಹುಟ್ಟುತ್ತಲೇ
> ವಿಜ್ಞಾನಿಗಳಾಗಿರುತ್ತಾರೆ. ಅನ್ವೇಷಣೆಯ ಬುದ್ಧಿಯನ್ನು ಮೊಂಡು ಮಾಡುವಂತೆ ನಾವು
> ನಂಬಿಕೆಗಳನ್ನು ಹೇರುತ್ತ ಹೋಗುತ್ತೇವೆ ಎನ್ನುತ್ತಿದ್ದರು.
>
> ಶಾಲಾ ಮಕ್ಕಳಲ್ಲಿ ಪಾಠಗಳನ್ನು ತುರುಕುವ ಬದಲು ಅವರಲ್ಲಿ ಜ್ಞಾನದ ಹಸಿವನ್ನು ಸೃಷ್ಟಿಸುವುದೇ
> ಶಿಕ್ಷಣದ ಉದ್ದೇಶವಾಗಬೇಕು; ಈ ಟ್ಯೂಶನ್ ಕೇಂದ್ರಗಳು, ನೂರಕ್ಕೆ ನೂರು ಅಂಕ ಪಡೆಯಬೇಕೆಂಬ ಈ
> ಹಪಾಹಪಿ ಇವನ್ನೆಲ್ಲ ಕೊನೆಗಾಣಿಸಬೇಕು ಎಂಬುದನ್ನು ಅವರು ಒತ್ತಿ ಹೇಳುತ್ತಿದ್ದರು.
> ಪ್ರಶ್ನೆಗಳನ್ನು ಕೇಳುವ ವಿದ್ಯಾರ್ಥಿ ಮತ್ತು ಉತ್ತರಕ್ಕಾಗಿ ತಡಕಾಡುವ ಗುರುವಿನ ಮಧ್ಯೆ
> ಜ್ಞಾನ- ವಿಜ್ಞಾನ ವಿಕಸಿತವಾಗಬೇಕು ಎನ್ನುತ್ತಿದ್ದರು. ಜನರಲ್ಲಿ ಅರಿವು ಮೂಡಿಸುವ ಬದಲು
> ಮಾಧ್ಯಮಗಳಲ್ಲಿ ಮೂಢ ನಂಬಿಕೆಗಳಿಗೇ ನೀರೆರೆಯುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ,
> ಅದನ್ನು ಪ್ರತಿರೋಧಿಸದೆ ಲ್ಯಾಬ್‌ಗಳಲ್ಲಿ ತಲೆಮರೆಸಿ ಕೂತ ವಿಜ್ಞಾನಿಗಳ ಬಗ್ಗೆ ಅಸಮಾಧಾನ
> ವ್ಯಕ್ತಪಡಿಸುತ್ತಿದ್ದರು.
>
> ವ್ಯಂಗ್ಯ ಏನೆಂದರೆ, ಹೈದರಾಬಾದಿನ ಆಸ್ಪತ್ರೆಯ ಹೋಮಕುಂಡದ ಎದುರು ಜಮಾಯಿಸಿದಷ್ಟು ಜನರೂ
> ಯಶ್‌ಪಾಲರ ದೇಹವನ್ನಿಟ್ಟ ಚಿತಾಗೃಹದ ಬಳಿ ಇರಲಿಲ್ಲ. ಹಿಂದಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿ
> ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಫಲಜ್ಯೋತಿಷವನ್ನು ಬೋಧಿಸಬೇಕೆಂದು ಯುಜಿಸಿ ಫರ್ಮಾನು
> ಹೊರಡಿಸಿದಾಗ ಅದನ್ನು ವಿರೋಧಿಸಲು ಯಶ್‌ಪಾಲ್ ಹೊರಟರೆ ಆಗಲೂ ಅವರಿಗೆ ವಿಜ್ಞಾನಿಗಳ ಬೆಂಬಲ
> ಬೆರಳೆಣಿಕೆಯಷ್ಟೇ ಇತ್ತು. ಆದರೆ ಸಮಾಧಾನದ ಸಂಗತಿ ಏನೆಂದರೆ ವೈಜ್ಞಾನಿಕ ಮನೋಭಾವವನ್ನು
> ಮತ್ತೆ ಜಾಗೃತಿಗೊಳಿಸಲೆಂದು ಕಳೆದ ಒಂದು ತಿಂಗಳಿಂದ ವಿಚಾರವಾದಿಗಳು ಸಂಘಟಿತರಾಗುತ್ತಿದ್ದಾರೆ.
>
> ಅಮೆರಿಕದಲ್ಲಿ ಟ್ರಂಪ್ ಮಹಾಶಯ ವಿಜ್ಞಾನವನ್ನು ಮೂಲೆಗೆ ತಳ್ಳುತ್ತ, ವಿಜ್ಞಾನಿಗಳನ್ನು
> ಲೇವಡಿ ಮಾಡುತ್ತ ದಾಪುಗಾಲು ಹಾಕುತ್ತಿದ್ದಾಗ ಅಲ್ಲಿನ ವಿಚಾರವಂತರೆಲ್ಲ ಪ್ರತಿಭಟಿಸಿದರು.
> ಕಳೆದ ಏಪ್ರಿಲ್ 22ರಂದು 600ಕ್ಕೂ ಹೆಚ್ಚು ನಗರಗಳಲ್ಲಿ ವಿಜ್ಞಾನ ಜಾಗೃತಿ ಅಭಿಯಾನ ನಡೆಯಿತು.
> ಅದನ್ನು ಬೆಂಬಲಿಸಿ ಯುರೋಪ್, ಪೂರ್ವ ಏಷ್ಯದ ದೇಶಗಳಲ್ಲೂ ವಿಜ್ಞಾನ ಜಾತ್ರೆ ನಡೆಯುತ್ತಿದ್ದಾಗ
> ನಮ್ಮವರೆಲ್ಲ ಮೌನವಾಗಿದ್ದರು. ಈಗ ಅಮೆರಿಕದ ಪ್ರಭುಗಳ ಧೋರಣೆಯೇ ನಮ್ಮಲ್ಲೂ ಕಾಣುತ್ತಿರುವಾಗ
> ವಿಜ್ಞಾನಿಗಳನ್ನು ತಟ್ಟಿ ಎಬ್ಬಿಸಿ ಮೆರವಣಿಗೆ ಹೊರಡಿಸುವ ಸಿದ್ಧತೆ ನಡೆದಿದೆ. ಆಗಸ್ಟ್
> 9ರಂದು ನಮ್ಮ ದೇಶದ ವಿವಿಧ ನಗರಗಳಲ್ಲಿ ‘ವಿಜ್ಞಾನ ಜಾಥಾ’ವನ್ನು ಆಯೋಜಿಲಾಗಿದೆ.
>
> ಕಾರಣ ಏನೆಂದರೆ, ಮತ್ತೆ ಸನಾತನ ರೂಢ ನಂಬಿಕೆಗಳನ್ನು ಪುರಸ್ಕರಿಸುವ ಯೋಜನೆಗಳು ಒಂದೊಂದಾಗಿ
> ಬರತೊಡಗಿವೆ. ಪಂಚಗವ್ಯ ಕುರಿತು ಹೆಚ್ಚಿನ ಸಂಶೋಧನೆಗೆಂದು 19 ಸದಸ್ಯರ ರಾಷ್ಟ್ರೀಯ
> ಸಮಿತಿಯೊಂದನ್ನು ರಚಿಸಲಾಗಿದೆ. ಅದಕ್ಕೆಂದು ಐಐಟಿ ದಿಲ್ಲಿ ಸೇರಿದಂತೆ ವಿವಿಧ ಲ್ಯಾಬ್‌ಗಳಿಗೆ
> ನೂರು ಕೋಟಿ ರೂಪಾಯಿಗಳ ಅನುದಾನ ಘೋಷಿಸಲಾಗಿದೆ. ಎಲ್ಲ ರಾಷ್ಟ್ರೀಯ ಲ್ಯಾಬ್‌ಗಳಲ್ಲಿ ಸಂಸ್ಕೃತ
> ವಿಭಾಗವನ್ನು ತೆರೆಯುವಂತೆ ಸುತ್ತೋಲೆ ಹೊರಡಿಸಲಾಗಿದೆ.
>
> ಖರಗಪುರ ಐಐಟಿಯಲ್ಲಿ ವಿದ್ಯಾರ್ಥಿಗಳಿಗೆ ನವಗ್ರಹ ಮಂಡಲ, ಪೂಜಾಗೃಹ ವಿನ್ಯಾಸವನ್ನು
> ಕಲಿಸುತ್ತಾರಂತೆ (ಅಲ್ಲಿಂದ ಪ್ರಕಟವಾಗುವ ಸಂಶೋಧನ ಪತ್ರಿಕೆಯಲ್ಲಿ ಪ್ರೊ. ಜಯ್ ಸೆನ್ ಎಂಬಾತ
> ಬರೆದ ಪ್ರಕಾರ ಮನೆಯ ಎದುರು ಹನುಮಾನ ಅಥವಾ ಗಣಪನ ವಿಗ್ರಹ ಇಟ್ಟರೆ ಒಳ್ಳೆಯದಾಗುತ್ತದಂತೆ).
> ಲ್ಯಾಬ್‌ಗಳು ತಮ್ಮ ಸಂಶೋಧನೆಗಳನ್ನು ಖಾಸಗಿಯವರಿಗೆ ಮಾರಿ ತಮ್ಮ ಸಂಬಳವನ್ನು ಗಳಿಸುವಂತೆ
> ಸೂಚಿಸಲಾಗಿದೆ. ಪುಣೆಯ ವಿಜ್ಞಾನ ಶಿಕ್ಷಣ ಕೇಂದ್ರಕ್ಕೆ, ಎನ್‌ಐಟಿ ಮತ್ತು ಕೆಲವು ಐಐಟಿಗಳಿಗೆ
> ಅನುದಾನ ಕಡಿತ ಮಾಡಲಾಗಿದೆ.
>
> ಹವಾಮಾನ ಬದಲಾವಣೆಯ ಸಂಕಟಗಳ ನಿವಾರಣೆಗೆಂದು ಮೀಸಲಾಗಿರುವ ಹಣವನ್ನು ರಾಜ್ಯಗಳ ಜಿಎಸ್‌ಟಿ
> ನಷ್ಟ ಪರಿಹಾರಕ್ಕೆ ವ್ಯಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ (ಟ್ರಂಪ್ ಸರ್ಕಾರವೂ ಹೀಗೇ
> ಇದೇ ಬಾಬಿನ ಹಣವನ್ನು ಬೇರೆಡೆ ಹೊರಳಿಸಿದೆ). ವಿಜ್ಞಾನಿಗಳ ಪ್ರತಿರೋಧವನ್ನು ಲೆಕ್ಕಿಸದೆ
> ಕುಲಾಂತರಿ ಸಾಸಿವೆಯನ್ನು ಹೊಲಕ್ಕೆ ನುಗ್ಗಿಸುವ ಸಿದ್ಧತೆ ನಡೆದಿದೆ. ಕರ್ನಾಟಕದಲ್ಲಿ
> ನೋಡಿದರೆ ವಿಜ್ಞಾನಿಗಳ ಅಭಿಪ್ರಾಯವನ್ನೂ ಕೇಳದೇ ಪಾತಾಳಗಂಗೆಯಂತೆ, ಮೋಡಬಿತ್ತನೆಯಂತೆ.
> ಮಳೆಕೊಯ್ಲು, ಬರನಿವಾರಣೆ ಕ್ರಮಗಳತ್ತ ಪ್ರಜೆಗಳನ್ನು ಪ್ರೇರೇಪಿಸುವ ಬದಲು ಇನ್ನೇನೇನೋ
> ಜಟಾಪಟಿ ಎಬ್ಬಿಸಿ ಜನಮನವನ್ನು ಚದುರಿಸುವ ಚಟುವಟಿಕೆ.
>
> ಸಹಜವಾಗಿ ಕೇಂದ್ರ ಸರ್ಕಾರದ ಆದ್ಯತೆಗಳ ಬಗ್ಗೆ ಚಿಂತಕರ, ವಿಜ್ಞಾನಿಗಳ ವಲಯದಲ್ಲಿ
> ಆತಂಕಗಳೆದ್ದಿವೆ. ಆಗಸ್ಟ್ 9ರ ವಿಜ್ಞಾನ ಜಾಥಾಕ್ಕೆ ಆದಷ್ಟು ಹೆಚ್ಚು ಗಣ್ಯ
> ವಿಜ್ಞಾನಿಗಳನ್ನು, ವಿದ್ಯಾರ್ಥಿಗಳನ್ನು ಹೊರಡಿಸಲು ಬ್ರೆಕ್‌ಥ್ರೂ ಸಂಘಟನೆಯ ಸದಸ್ಯರು
> ಮುಂಬೈ, ಕೋಲ್ಕತಾ, ಪುಣೆ, ತಿರುವನಂತಪುರಂ, ಬೆಂಗಳೂರುಗಳಲ್ಲಿ ಲ್ಯಾಬ್‌ಗಳ,
> ವಿಶ್ವವಿದ್ಯಾಲಯಗಳ ಬಾಗಿಲನ್ನು ತಟ್ಟುತ್ತಿದ್ದಾರೆ. ದೇಶದ ಕೆಲವಷ್ಟು ಗಣ್ಯ ವಿಜ್ಞಾನಿಗಳು
> ಅಂದು ಬೀದಿಗೆ ಬರುವುದಾಗಿ ಆಶ್ವಾಸನೆ ನೀಡಿದ್ದಾರೆ. ನೋಡಬೇಕು, ಇನ್ನುಳಿದ ವಿಜ್ಞಾನಿಗಳು
> ಬರುತ್ತಾರೊ, ಅಥವಾ ಜಾಥಾ ಯಶಸ್ಸಿಗಾಗಿ ಕೂತಲ್ಲೇ ಕಾಯಾ ವಾಚಾ ಪ್ರಾರ್ಥಿಸಿ ತಲೆ ಬಗ್ಗಿಸಿ
> ಕೂರುತ್ತಾರೊ?
>
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to