science topic is super
On Oct 5, 2017 4:37 PM, "Hareeshkumar K" <[email protected]> wrote: > ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ! > 5 Oct, 2017 > > ‘ವಿಶ್ವ ಆವಾಸ ದಿನ’ವನ್ನು ಈ ತಿಂಗಳಿಡೀ ‘ಅರ್ಬನ್ ಅಕ್ಟೊಬರ್’ ಎಂದು ಆಚರಿಸಲು ಕರೆ > ನೀಡಲಾಗಿದೆ. ಏನು ಹಾಗಂದರೆ? > ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ! > > ‘ವಿಶ್ವ ಆವಾಸ ದಿನ’ ವನ್ನು ಈ ತಿಂಗಳಿಡೀ ‘ಅರ್ಬನ್ ಅಕ್ಟೊಬರ್’ ಎಂದು ಆಚರಿಸಬೇಕಾಗಿ > ವಿಶ್ವಸಂಸ್ಥೆ ಕರೆ ನೀಡಿದೆ. ಏನು ಹಾಗಂದರೆ? > > ಇರ್ಮಾ ಎಂಬ ಚಂಡಮಾರುತದ ಸಂಕ್ಷಿಪ್ತ ಇತಿಹಾಸ ಹೀಗಿದೆ: ಈಚೆ ಆಗಸ್ಟ್ 30ರಂದು ಆಫ್ರಿಕದ > ಅಂಚಿನ ಸಣ್ಣ ದ್ವೀಪದ ಬಳಿ ಅದು ಚಿಕ್ಕದಾಗಿ ಅವತರಿಸಿತು. ಕ್ರಮೇಣ ಬೆಳೆಯುತ್ತ ಸುತ್ತುತ್ತ > ಸಾಗುತ್ತ ಅಟ್ಲಾಂಟಿಕ್ ಸಾಗರದಲ್ಲಿ ಹಾವಿನಂತೆ ಚಲಿಸುತ್ತ, ವಾರದ ನಂತರ ಭೀಕರ ಸ್ವರೂಪ ತಾಳಿ > ಹಿಂದಿನ ಎಲ್ಲ ದಾಖಲೆಗಳ ಚಿಂದಿ ಉಡಾಯಿಸುತ್ತ, ಕೆರಿಬಿಯನ್ ದ್ವೀಪಗಳನ್ನು ಚೆಂಡಾಡುತ್ತ, > ಸೆಪ್ಟಂಬರ್ 11ರಂದು ಹೆಡೆಯೆತ್ತಿ ಅಮೆರಿಕದ ಫ್ಲಾರಿಡಾಕ್ಕೆ ಅಪ್ಪಳಿಸಿತು. ಅಷ್ಟು > ದೂರದವರೆಗೆ (1700 ಕಿ.ಮೀ) ಚಲಿಸಿದ ಅಷ್ಟೊಂದು ಶಕ್ತಿಶಾಲಿ ಚಂಡಮಾರುತ ಇದುವರೆಗೆ ಬೇರೊಂದು > ಇರಲಿಲ್ಲ. ಮನುಷ್ಯ ನಿರ್ಮಿಸಿಕೊಂಡಿದ್ದ ಸಕಲ ತಾಂತ್ರಿಕ ಸೌಕರ್ಯಗಳನ್ನೂ ಅದು ಕಿತ್ತು > ಕಬಳಿಸಿ ಬಿಸಾಕುತ್ತ ಹೋದಂತೆಲ್ಲ, ಅದರಿಂದ ಬಚಾವಾಗಲು ಮನುಷ್ಯರು ತೋರಿದ ತಾಂತ್ರಿಕ ಸಾಹಸಗಳೂ > ಅಷ್ಟೇ ಅಮೋಘವಾಗಿದ್ದವು (ಅದನ್ನು ಎದುರಿಸುವ ಅಥವಾ ಪಳಗಿಸುವ ಪ್ರಶ್ನೆಯೇ ಇರಲಿಲ್ಲ, > ಓಡುವುದೊಂದೇ). ಅದು ಸಾಗಿ ಬರುವ ಮಾರ್ಗವನ್ನು ಮೊದಲೇ ನಿಖರವಾಗಿ ಲೆಕ್ಕ ಹಾಕಿ, ಏಳು > ರಾಷ್ಟ್ರಗಳಲ್ಲಿ ತುರ್ತುಸ್ಥಿತಿ ಘೋಷಿಸಿ, ಜನರನ್ನು ಗುಳೆ ಹೊರಡಿಸಿದ ಪರಿ ಅನನ್ಯವಾಗಿತ್ತು. > ಯುಎಸ್‌ಎಯಲ್ಲಂತೂ ಎರಡೇ ದಿನಗಳಲ್ಲಿ 20 ಲಕ್ಷ ಜನರನ್ನು, ಸಾಕುಪ್ರಾಣಿಗಳನ್ನು, ಜೈಲಿನ > ಕೈದಿಗಳನ್ನೂ ಆಸ್ಪತ್ರೆಗಳ ತುರ್ತುನಿಗಾ ಕಕ್ಷೆಗಳಲ್ಲಿನ ರೋಗಿಗಳನ್ನೂ ಅವರ ಜೀವರಕ್ಷಕ > ಕೊಳವೆಗಳ ಸಮೇತ ಖಾಲಿ ಮಾಡಿಸಿದ್ದು; ಹೆದ್ದಾರಿಗಳಲ್ಲಿ ಎಂಟು ಲೇನ್‌ಗಳ ಜಾಗ ಸಾಕಾಗದೆ ಪಕ್ಕದ > ಶೋಲ್ಡರ್ (ಅಗಲದ ಫುಟ್‌ಪಾತ್)ಗಳಲ್ಲೂ ವಾಹನಗಳ ದೌಡಾಟಕ್ಕೆ ಅನುವು ಮಾಡಿಕೊಟ್ಟಿದ್ದು; > ಸಂತ್ರಸ್ತರಿಗೆಲ್ಲ ಪರ್ಯಾಯ ಆಸರೆ, ಅನ್ನ, ಔಷಧ ಒದಗಿಸಿದ್ದು; ಈ ಅವಾಂತರದಲ್ಲೂ ಕ್ಯೂಬಾದ > ಧೀರಧೀರೆಯರು ಸಮುದ್ರದಲ್ಲಿ ಮುಳುಗು ಹಾಕಿ ಅಲ್ಲಿನ ಡಾಲ್ಫಿನ್‌ಗಳನ್ನು > ಹೆಲಿಕಾಪ್ಟರ್‌ಗಳಲ್ಲಿ ಸಾಗಿಸಿ ಈಜುಗೊಳಗಳಲ್ಲಿ ಬಚ್ಚಿಟ್ಟು ಬಚಾವು ಮಾಡಿದ್ದು ಎಲ್ಲವೂ > ರೋಚಕ. ಶ್ವೇತರು, ಅಶ್ವೇತರು, ಯಹೂದ್ಯರು, ಮುಸ್ಲಿಮರು ಎಲ್ಲರೂ ಪರಸ್ಪರ ಕೈ ಕೂಡಿಸಿ > ಉತ್ಪಾತದಿಂದ ಬಚಾವಾಗಿದ್ದು; ಬಡವರು, ಲಕ್ಷಾಧೀಶರು, ಕಮ್ಯೂನಿಸ್ಟರು, ನಾತ್ಸೀವಾದಿಗಳು, > ನಿರೀಶ್ವರವಾದಿಗಳು ಎಲ್ಲರೂ ತಾತ್ಕಾಲಿಕ ಶೆಡ್‌ಗಳಲ್ಲಿ ಏಕತ್ರ ಮುದುರಿದ್ದು... > ಶಿಕ್ಷಕರಿಲ್ಲದಾಗ ಕ್ಲಾಸಿನಲ್ಲಿ ಭಾರೀ ಗಲಾಟೆ ಮಾಡುವ ಮಕ್ಕಳು ಹೆಡ್‌ಮಾಸ್ಟರರ ಹೆಜ್ಜೆ > ಸದ್ದು ಕೇಳಿ ಗಪ್‌ಚಿಪ್ ಆದಂತೆ. > > ವಿಮಾನ ನಿಲ್ದಾಣಗಳು, ಬಂದರುಗಳು, ಕ್ರೀಡಾಂಗಣಗಳು, ಡಿಸ್ನಿ ಉದ್ಯಾನ, ಕೆನ್ನೆಡಿ > ಬಾಹ್ಯಾಕಾಶ ನಿಲ್ದಾಣ- ಹೀಗೆ ಅಲ್ಲಿಇಲ್ಲಿ ಇರ್ಮಾ ನಡೆಸಿದ ನಂಗಾನಾಚ್ ಕುರಿತು ಆ ವಾರವಿಡೀ > ಧಿಗ್ಗೆದ್ದು ಬರುತ್ತಿದ್ದ ಸಾವಿರ ಸುದ್ದಿಗಳ ಮಧ್ಯೆ ಶತಕೋಟ್ಯಧೀಶ ಸರ್ ರಿಚರ್ಡ್ ಬ್ರಾನ್ಸನ್ > ಎದ್ದು ಕಾಣುವಂತಾದ. ಆತನ ಖಾಸಗಿ ದ್ವೀಪ ‘ನೆಕರ್ ಐಲ್ಯಾಂಡ್’ ಮೇಲೆಯೇ ಇರ್ಮಾ ಸಾಗಿ ದೂಳೀಪಟ > ಮಾಡಿ ಹೋಯಿತು. ಆದರೆ ‘ನಾವೆಷ್ಟು ಬೆಚ್ಚಗಿದ್ದೇವೆ, ವೈನ್ ಇಡುವ ನೆಲಮಾಳಿಗೆಯಲ್ಲಿ > ನಿಶ್ಚಿಂತರಾಗಿ’ ಎಂಬರ್ಥದಲ್ಲಿ ಆತ ತನ್ನ ಕುಟುಂಬದ ಚಿತ್ರ ಹಾಕಿ ಟ್ವೀಟ್ ಮಾಡಿದ. ಮಹಾ > ಧೈರ್ಯವಂತ, ಪರಮ ಸಾಹಸಿ, 400ಕ್ಕೂ ಹೆಚ್ಚು ಕಂಪನಿಗಳ ಒಡೆಯ, ಅಪ್ರತಿಮ ಚಾಣಾಕ್ಷ, ಧಾರಾಳ > ದಾನಿ ಎಂಬುದಾಗಿ ಹೊಗಳುಭಟ್ಟರ ಕಣ್ಮಣಿಯಾಗಿರುವ ಆತ ಈ ಟ್ವೀಟ್‌ನಿಂದಾಗಿ ಲೇವಡಿಗೆ ಗುರಿಯಾದ. > ಈತನ ಕಾರ್ಪೊರೇಟ್ ದುಸ್ಸಾಹಸಗಳಿಂದಾಗಿಯೇ ಶ್ರಮಿಕರ ಹಣವೆಲ್ಲ ಶ್ರೀಮಂತರತ್ತ ಹರಿದಿದ್ದು, > ಸಾರ್ವಜನಿಕ ಸೊತ್ತುಗಳು ಈತನ ಖಾಸಗಿ ಕಂಪನಿಗಳ ಪಾಲಾಗಿದ್ದು, ಈತನ ‘ವರ್ಜಿನ್ ಗೆಲಾಕ್ಟಿಕ್’ > ವಿಮಾನ ಕಂಪನಿಗಳ ಏರು ಭರಾಟೆಯಿಂದಾಗಿಯೇ (ತನ್ನ ಐದನೆಯ ವಿಮಾನ ಕಂಪನಿಯ ಉದ್ಘಾಟನೆಯ > ಸಂದರ್ಭದಲ್ಲಿ ಈತ ತನ್ನ ಅಂಡರ್‌ವೇರ್ ಮೇಲೆ ‘ಖಡಕ್ ಸ್ಪರ್ಧೆ’ ಎಂದು ಬರೆದು ಮಾಧ್ಯಮಗಳೆದುರು > ಪ್ರದರ್ಶಿಸಿದ್ದ) ವಾಯುಮಂಡಲದ ಮಾಲಿನ್ಯ ಅತಿಯಾಗಿ, ಈಗಿನ ಈ ಚಂಡಮಾರುತಗಳ ಹಾವಳಿಗೆ ಈತನ > ಕೊಡುಗೆ ಗಣನೀಯವಾಗಿದ್ದು ಮತ್ತೆ ಮುನ್ನೆಲೆಗೆ ಬಂತು. ಈ ಎಲ್ಲ ಭಾನಗಡಿಗಳನ್ನು ವರ್ಣಿಸಲು > ‘ವರ್ಜಿನ್ ಗೆಲಾಕ್ಟಿಕ್’ ಎಂಬ ಎರಡೇ ಪದ ಸಾಕು ಎಂದು ಸಮಾಜ ವಿಜ್ಞಾನಿ ಸಾಲ್ವಟೋರ್ ಬಾಬೊನಿಸ್ > ಹಿಂದೆಯೇ ಹೇಳಿದ್ದಾನೆ. ಇನ್ನು, ಖ್ಯಾತ ಕೆನಾಡಿಯನ್ ಲೇಖಕಿ ನವೊಮಿ ಕ್ಲೇನ್ ತನ್ನ ‘ದಿಸ್ > ಚೇಂಜಿಸ್ ಎವ್ರಿಥಿಂಗ್’ ಸಂಶೋಧನಾ ಗ್ರಂಥದಲ್ಲಿ ಈತನ ಹುನ್ನಾರಗಳನ್ನು ಎಳೆಎಳೆಯಾಗಿ > ಬಿಚ್ಚಿಟ್ಟಿದ್ದಾಳೆ: ಜಾಗತಿಕ ತಾಪಮಾನ ತಗ್ಗಿಸಲು ತಾನು ಮುನ್ನೂರು ಕೋಟಿ ಡಾಲರ್ ವಂತಿಗೆ > ನೀಡುತ್ತೇನೆಂದು ಘಂಟಾಘೋಷ ಮಾಡಿ ಈತ ಹಿಂದೆ ಸರಿದ. ತನ್ನ ಕಂಪನಿಗಳಿಂದ ನಿರೀಕ್ಷಿತ ಲಾಭ > ಬಂದಿಲ್ಲವೆಂದು ಹೇಳಿ ನುಣುಚಿಕೊಂಡ. (ಲಾಭದ ಹಣವನ್ನು ಬೇರಡೆ ತಿರುಗಿಸಿಕೊಂಡಿದ್ದಕ್ಕೂ > ಕ್ಲೇನ್ ವಿವರಣೆ ಕೊಡುತ್ತಾಳೆ.) ವಾತಾವರಣದ ಇಂಗಾಲದ ಡೈಆಕ್ಸೈಡನ್ನು ಹೀರಿ ತೆಗೆಯಬಲ್ಲ > ತಂತ್ರಜ್ಞಾನವನ್ನು ರೂಪಿಸಬಲ್ಲವರಿಗೆಂದು ಎರಡೂವರೆ ಕೋಟಿ ಡಾಲರ್ ಬಹುಮಾನ ಘೋಷಿಸಿ, > ಸ್ಪರ್ಧೆಗೆ ಬಂದ ಉತ್ತಮ ಸಲಹೆಗಳನ್ನೆಲ್ಲ ಹೇಗೆ, ಯಾವ ಸ್ವಾರ್ಥಕ್ಕಾಗಿ ಅದುಮಿಟ್ಟ > ಎಂಬುದಕ್ಕೂ ವಿವರಣೆಗಳಿವೆ. ಅಂತೂ ಬಹುಮಾನ ಯಾರಿಗೂ ವಿತರಣೆಯಾಗಿಲ್ಲ. > > ಎರಡು ಅಮೆರಿಕಗಳ ನಡುವಣ ಕೋಟ್ಯಂತರ ಜನರು ನಿರ್ವಸಿತರಾಗಿ ಒದ್ದಾಡುತ್ತಿರುವಾಗ ಈತ ಹಾಯಾಗಿ > ನೆಲಮಾಳಿಗೆಯಲ್ಲಿ ಕೂತು ವೈನ್ ಹೀರುತ್ತ ‘ಇರ್ಮಾಳಿಂದ ಪಾರಾಗಿಬಿಟ್ಟೆ’ ಎಂಬುದಾಗಿ ಸಾಹಸ > ಮೆರೆದಿದ್ದು ಟೀಕಾಕಾರರಿಗೆ ಒಂದು ಬಗೆಯ ರೂಪಕವಾಗಿ ಲಭಿಸಿದೆ. ಈಚೀಚಿನ ಪ್ರಾಕೃತಿಕ > ದುರಂತಗಳು ‘ಪ್ರಾಕೃತಿಕ ಅಲ್ಲವೇ ಅಲ್ಲ’ ಎಂದು ವಾದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅವುಗಳ > ತೀವ್ರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರಲು ದೊಡ್ಡವರ ದೊಡ್ಡ ದೊಡ್ಡ ಕೃತ್ಯಗಳೇ > ಕಾರಣವಾಗಿದ್ದರೂ ಅದಕ್ಕೆ ಬೆಲೆ ತೆರುವವರು ಮಾತ್ರ ಕೆಳಸ್ತರದ ಶ್ರಮಜೀವಿಗಳು ಎಂಬುದು ಎಲ್ಲ > ದೊಡ್ಡ ದುರಂತಗಳಲ್ಲೂ ಎದ್ದು ಕಾಣುವಂತಾಗಿದೆ. ಅಂದಹಾಗೆ, ಆರಂಭದಲ್ಲಿ ವಿವರಿಸಿದ ಎತ್ತಂಗಡಿ > ವಿವರಗಳೆಲ್ಲ ಯುಎಸ್‌ಎಯ ಫ್ಲಾರಿಡಾ ರಾಜ್ಯದ್ದು; ಆ ಸಂತ್ರಸ್ತರ ಸಾಲಿನಲ್ಲಿ ಕೋಟ್ಯಧೀಶರು > ಇರಲುಂಟೆ? ಅವರೆಲ್ಲ ಮುನ್ಸೂಚನೆ ಸಿಕ್ಕ ತಕ್ಷಣ ವಿಮಾನ ಏರಿಯಾಗಿತ್ತು. ಇತ್ತ ಕೆರಿಬಿಯನ್ > ದ್ವೀಪಮಾಲೆಯ ಸ್ಥಿತಿ ಬೇರೆಯದೇ ಇತ್ತು. ಅಲ್ಲಿ ಅದೆಷ್ಟೊ ಬಡ ಸಮುದಾಯಗಳ ನಡುವಣ ಚಂದದ > ನಡುಗಡ್ಡೆಗಳು ಕೋಟ್ಯಧೀಶರ ತೆಕ್ಕೆಗೆ ಸೇರಿವೆ. ಉದಾ: ಬ್ರಾನ್ಸನ್‌ನ ನೆಕರ್ ಐಲ್ಯಾಂಡ್. > ಇನ್ನು ಕೆಲವಂತೂ ತೆರಿಗೆ ವಂಚಕರ ಖಜಾನೆಗಳಾಗಿವೆ. ಸುಂಟರಗಾಳಿ ಬಂದು ಶ್ರೀಮಂತರ > ಇಂದ್ರಪ್ರಸ್ಥವನ್ನೂ ಬಡ ಮೀನುಗಾರರ ಗುಡಿಸಲನ್ನೂ ಕೆಡವಿದಾಗ ಇಬ್ಬರಿಗೂ ಅಷ್ಟಷ್ಟೇ > ನೋವುಂಟಾಗುವುದು ಸಹಜ. ಆದರೆ ಬೊಕ್ಕಸದಿಂದ ಸಿಗುವ ನಷ್ಟ ಪರಿಹಾರ, ವಿಮೆ ಇತ್ಯಾದಿ > ತೆರಿಗೆದಾರರ ನಿಧಿಯಲ್ಲಿ ದೊಡ್ಡವರ ಪಾಲಿಗೆ ದೊಡ್ಡ ಪಾಲು ಸೇರುತ್ತದೆ. > > ’ಚಂಡಮಾರುತಗಳು ಪಕ್ಷಪಾತ ತೋರುವುದಿಲ್ಲ. ಆದರೆ ಪಕ್ಷಪಾತ ತೋರುವ ಸಮುದಾಯದ ನೆಲಕ್ಕೇ ಅವು > ಅಪ್ಪಳಿಸುತ್ತವೆ’ ಎಂದು ಮೊನ್ನೆ ನ್ಯೂ ಇಂಟರ್‌ನ್ಯಾಶನಲಿಸ್ಟ್ ಪತ್ರಿಕೆಯಲ್ಲಿ ಡೇನಿಯಲ್ > ವೊಸ್ಕೊಬೊಯ್ನಿಕ್ ವಿಶ್ಲೇಷಿಸಿದ್ದಾರೆ. ಚಂಡಮಾರುತ ಅಷ್ಟೇ ಅಲ್ಲ, ಮೇಘಸ್ಫೋಟ, ಮಹಾಪೂರ, > ಬರಗಾಲದಂಥ ಇತರ ನೈಸರ್ಗಿಕ ಪ್ರಕೋಪಗಳೂ ಹಾಗೇ ಮಾಡುತ್ತವೇನೊ. ಬೆಂಗಳೂರಿನಲ್ಲಿ ಪ್ರವಾಹದ > ರಗಳೆಗಳು ಅಪಾರ್ಟ್‌ಮೆಂಟ್ ಮತ್ತು ಕೊಳೆಗೇರಿ ನಿವಾಸಿಗಳಿಗೆ ಏಕರೂಪವಾಗಿ ಅಡಚಣೆ > ಉಂಟುಮಾಡಿದರೂ ದೃಶ್ಯಮಾಧ್ಯಮಗಳಲ್ಲಿ ಯಾರ ಸಂಕಷ್ಟಗಳು ಮುಂಬೆಳಕಿಗೆ ಬಂದುವೆಂದು ನಮಗೆ > ಗೊತ್ತೇ ಇದೆ. ರಾಜಾಕಾಲುವೆ ಒತ್ತುವರಿ ಮಾಡಿಕೊಂಡು ನೀರಿನ ಸಹಜ ಹರಿವಿಗೆ ಅಡೆತಡೆ ಮಾಡಿ > ಎತ್ತರದ ಕಟ್ಟಡ ನಿರ್ಮಿಸಿ, ಪ್ರವಾಹ ಸಮಸ್ಯೆಗೆ ಕಾರಣರಾದವರು ಯಾರೆಂಬುದೂ ನಮಗೆ ಗೊತ್ತಿದೆ. > ಅವರ ಆ ತಪ್ಪಿಗಾಗಿ ಯಾರು ಶಿಕ್ಷೆಗೊಳಗಾದರು ಎಂಬುದೂ ಗೊತ್ತಿದೆ. > > ಇವನ್ನೆಲ್ಲ ಈಗ ಇಲ್ಲಿ ಚರ್ಚಿಸಲು ಎರಡು ಕಾರಣಗಳಿವೆ: ವಿಶ್ವಸಂಸ್ಥೆ ಪ್ರತಿವರ್ಷ > ಅಕ್ಟೊಬರ್ ಮೊದಲ ಸೋಮವಾರವನ್ನು ‘ವಿಶ್ವ ಆವಾಸ ದಿನ’ ಎಂತಲೂ ಅಕ್ಟೊಬರ್ 13ನ್ನು ‘ನೈಸರ್ಗಿಕ > ಪ್ರಕೋಪ ತಗ್ಗಿಸುವ ದಿನ’ ಎಂತಲೂ ಆಚರಿಸಬೇಕೆಂದು ಮೂರು ದಶಕಗಳ ಹಿಂದೆಯೇ ಕರೆ ಕೊಟ್ಟಿದೆ. > ಏಕೆಂದರೆ ಇವೆರಡೂ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿರುವ ಸಮಸ್ಯೆಗಳಾಗಿವೆ. ಭಾರತವೂ > ಅದನ್ನು ಆಚರಿಸುವುದಾಗಿ ಆಣೆ ಮಾಡಿದೆ. ನಮ್ಮ ದೇಶದಲ್ಲಂತೂ ಗ್ರಾಮೀಣ ಭಾಗದಿಂದ ವಲಸೆ ಬಂದು > ಪಟ್ಟಣಗಳಲ್ಲಿ ಕೊಳೆಗೇರಿಗಳಲ್ಲಿ ಹೇಗೋ ಮುದುರಿ ನೆಲೆಸುವವರ ಸಂಖ್ಯೆ ಮೇರೆ ಮೀರಿ > ಬೆಳೆಯುತ್ತಿದೆ. ಹಾಗೆ ಬರುವವರಲ್ಲಿ ಬಹುಪಾಲು ಜನರು ನೈಸರ್ಗಿಕ ಪ್ರಕೋಪ ತಾಳಲಾರದೆ > ಬರುತ್ತಿದ್ದಾರೆ. ಇಲ್ಲಿ ಆವಾಸ ಸಿಗದೆ ಪರದಾಡುತ್ತಾರೆ. ವ್ಯಂಗ್ಯ ಏನೆಂದರೆ, ನಗರಗಳ ಚರಂಡಿ > ಚೊಕ್ಕಟ ಮಾಡುವ, ಕಸ ಬಾಚುವ, ಮುಸುರೆ ತೊಳೆಯುವಂಥ ಎಲ್ಲ ಅಗತ್ಯ ಸೇವೆಗಳನ್ನೂ ನೀಡುವ ಅವರ > ಆವಾಸ ಮಾತ್ರ ನರಕ ಸದೃಶ ಇರುತ್ತದೆ. ಅಲ್ಲಿ ಬೆಳಕಿಗೆ, ರಸ್ತೆಗೆ, ಶುದ್ಧ ನೀರಿಗೆ, > ಶೌಚಕ್ಕೆ, ಶಿಕ್ಷಣಕ್ಕೆ ಎಲ್ಲಕ್ಕೂ ಅಭಾವ. ‘ಅದು ಕ್ರಿಮಿಗಳೂ ಕ್ರಿಮಿನಲ್‌ಗಳೂ ಹುಟ್ಟಿ > ಬೆಳೆಯುವ ತಾಣ’ ಎಂದು ವಿಶ್ವಸಂಸ್ಥೆಯ ವೆಬ್‌ಸೈಟ್ ಹೇಳುತ್ತದೆ. ನಮ್ಮ ತಾಲ್ಲೂಕು ಮಟ್ಟದ > ಪಟ್ಟಣಗಳಲ್ಲಿ ಕೆಳವರ್ಗದವರ ‘ಆವಾಸ’ ಎಂಬುದು ಈಗಲೂ ಕೊಳೆಗೇರಿಗಳಂತೇ ಇವೆ. ಅಲ್ಲಿ > ಕ್ರಿಮಿನಲ್‌ಗಳು ಸೃಷ್ಟಿಯಾಗಲಿಕ್ಕಿಲ್ಲ, ಆದರೆ ಅಲ್ಲಿನವರ ವಾಸದ ಪರಿಸರವಂತೂ ಈಗಿನ > ಮಾರುಕಟ್ಟೆ ಎಕಾನಮಿಯಲ್ಲಿ ಸುಧಾರಿಸಲು ಸಾಧ್ಯವೇ ಇಲ್ಲ. ಸರ್ಕಾರಿ ನೆರವಿನಿಂದ ಅಲ್ಲಿ ಪೌರ > ಸೌಲಭ್ಯಗಳನ್ನು ಸುಧಾರಿಸುವ ಮಾತು ಹೇಗೂ ಇರಲಿ, ನಮ್ಮ ನಗರ ಯೋಜನಾ ತಜ್ಞರು ಈಗಲೂ ಹೊಸ > ಬಡಾವಣೆಗಳಲ್ಲಿ ಈ ಕೆಳಹಂತದ ಸೇವಾವೃತ್ತಿಯವರ ವಸತಿಗಾಗಿ ಒಂದು ಚೂರು ಜಾಗ ಇಡುತ್ತಿಲ್ಲ. > ಅಥವಾ ದೊಡ್ಡ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವಾಗ ಕಡ್ಡಾಯವಾಗಿ ಸೇವಕರ ವಾಸ್ತವ್ಯಕ್ಕೆ ಜಾಗ > ಮೀಸಲಿಡಬೇಕೆಂಬ ನಿಯಮವೂ ಇದ್ದಂತಿಲ್ಲ. ತಳವರ್ಗಕ್ಕೆ ವಾಸಯೋಗ್ಯ ಆಸರೆ ನೀಡುವಲ್ಲಿ ಕೇವಲ > ಸರ್ಕಾರದ್ದಷ್ಟೇ ಅಲ್ಲ, ಸಮುದಾಯದ್ದೂ ಪಾಲಿರಬೇಕು ಎಂಬುದನ್ನು ಮನದಟ್ಟು ಮಾಡಲೆಂದೇ ‘ವಿಶ್ವ > ಆವಾಸ ದಿನ’ ಆಚರಿಸಬೇಕಿತ್ತು. ಈ ವರ್ಷವಂತೂ ಅಕ್ಟೊಬರ್ 2ರಂದೇ ‘ವಿಶ್ವ ಆವಾಸ ದಿನ’ > ಬಂದಿತ್ತು. ಗಾಂಧೀಜಿಯವರು ದರಿದ್ರ ನಾರಾಯಣರ ಏಳ್ಗೆಗಾಗಿ, ಅವರ ವಾಸ್ತವ್ಯದ ಶುಚಿತ್ವಕ್ಕಾಗಿ > ಏನೆಲ್ಲ ಮುಂದಾಳತ್ವದ ಮಾದರಿ ತೋರಿಸಿದ್ದರು. ಸಚಿವರಿಗೆ ‘ಆವಾಸ ದಿನ’ ನೆನಪಿರಲಿಕ್ಕಿಲ್ಲ. > ಆದರೆ ‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಲಿ’ ಎಂಬ ಒಂದು ದೊಡ್ಡ ವ್ಯವಸ್ಥೆ ಇಡೀ > ರಾಜ್ಯದಲ್ಲೆಲ್ಲ ಬೇರು ಬಿಳಲು ಬೆಳೆಸಿ ನಿಂತಿದೆ. ಅದರ ಕ್ಯಾಲೆಂಡರಿನಲ್ಲೂ ‘ಆವಾಸ ದಿನ’ಕ್ಕೆ > ಜಾಗ ಇರಲಿಲ್ಲವೆ? ಇಲ್ಲದಿದ್ದರೆ ಈಗಲಾದರೂ ಸೇರಿಸಬಹುದು: ಇಡೀ ತಿಂಗಳನ್ನು ‘ಅರ್ಬನ್ > ಅಕ್ಟೊಬರ್’ ಎಂದು ಆಚರಿಸಲು ಮೊನ್ನೆ ವಿಶ್ವಸಂಸ್ಥೆ ಕರೆ ಕೊಟ್ಟಿದೆ. ನಮ್ಮ ರಾಜ್ಯೋತ್ಸವದ > ಹಾಗೆ ಎಲ್ಲ ನಗರಗಳಲ್ಲಿ ‘ಆವಾಸ ದಿನ’ ಆಚರಿಸಿ ನಿಮ್ಮ ಸಾಧನೆಯ ಡಂಗುರ ಹೊಡೆಯಲು ಯಾಕೆ, > ಹಿಂಜರಿಕೆಯೆ ಅಧಿಕಾರಿಗಳೆ, ಅಧ್ಯಕ್ಷರೆ? > > ಅರೆ, ಅಕ್ಟೊಬರ್ 13ರ ‘ನೈಸರ್ಗಿಕ ವಿಕೋಪ ತಗ್ಗಿಸುವ ದಿನ’ದ ಆಚರಣೆಯ ಬಗ್ಗೆ > ಚರ್ಚಿಸೋಣವೆಂದರೆ ಜಾಗವೇ ಉಳಿದಿಲ್ಲವಲ್ಲ. ಅದನ್ನೂ ರಾಜ್ಯಾದ್ಯಂತ ಆಚರಿಸಲು ಸಿದ್ಧತೆ > ನಡೆಸೋಣವೆ? ಈ ನಡುವೆ ಹೈದರಾಬಾದ್ ನಗರ ಮೇಘಸ್ಫೋಟದಿಂದ ತತ್ತರಿಸಿದೆ; ನಮ್ಮದೇ ರಿಚರ್ಡ್ > ಬ್ರಾನ್ಸನ್ ಎನಿಸಿದ ವಿಜಯ್ ಮಲ್ಯರ ಬಂಧನ- ಬಿಡುಗಡೆಯ ಕೋಲ್ಮಿಂಚು ಹೊಡೆದು ಭಾರತ ಸರ್ಕಾರ > ಮತ್ತೊಂದು ಬಲೆ ಬೀಸಲು ಹೊರಟಿದೆ. ಮೊದಲು ಆ ಸುದ್ದಿ ಸುಂಟರಗಾಳಿಗಳೆಲ್ಲ ತಣ್ಣಗಾಗಲಿ ನೋಡೋಣ. > > -- > Hareeshkumar K > GHS Huskuru > Malavalli Tq > Mandya Dt > 9880328224 > e-mail [email protected] > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
