On Nov 19, 2017 5:28 PM, "Hareeshkumar K" <[email protected]> wrote:

> ಒಂದು ಹುಲ್ಲಿನ ಇನ್ನೊಂದು ಕ್ರಾಂತಿ
> 16 Nov, 2017
>
> ದಟ್ಟ ಮೋಡಗಳ ಮಧ್ಯೆ ಸಾಗುತ್ತಿದ್ದ ವಿಮಾನ ಧಡಕ್ಕೆಂದು ಕೊಂಚ ಕುಪ್ಪಳಿಸಿ, ಮುಗ್ಗರಿಸಿ
> ಮುಂದಕ್ಕೆ ಧಾವಿಸಿತು. ಆಗಲೇ ನಮಗೆ ಗೊತ್ತಾಗಿದ್ದು- ಒಹ್ಹೋ ವಿಮಾನ ದಿಲ್ಲಿಯಲ್ಲಿ
> ನೆಲಕ್ಕಿಳಿದಿದೆ ಅಂತ. ‘ಸೀಟ್ ಬೆಲ್ಟ್ ಬಿಗಿದುಕೊಳ್ಳಿ, ಕೆಳಕ್ಕಿಳಿಯುತ್ತಿದ್ದೇವೆ’ ಎಂಬ
> ಸಂದೇಶ ಕೊಂಚ ಮೊದಲೇ ಬಂದಿತ್ತು ನಿಜ
> ಒಂದು ಹುಲ್ಲಿನ ಇನ್ನೊಂದು ಕ್ರಾಂತಿ
>
> ದಟ್ಟ ಮೋಡಗಳ ಮಧ್ಯೆ ಸಾಗುತ್ತಿದ್ದ ವಿಮಾನ ಧಡಕ್ಕೆಂದು ಕೊಂಚ ಕುಪ್ಪಳಿಸಿ, ಮುಗ್ಗರಿಸಿ
> ಮುಂದಕ್ಕೆ ಧಾವಿಸಿತು. ಆಗಲೇ ನಮಗೆ ಗೊತ್ತಾಗಿದ್ದು- ಒಹ್ಹೋ ವಿಮಾನ ದಿಲ್ಲಿಯಲ್ಲಿ
> ನೆಲಕ್ಕಿಳಿದಿದೆ ಅಂತ. ‘ಸೀಟ್ ಬೆಲ್ಟ್ ಬಿಗಿದುಕೊಳ್ಳಿ, ಕೆಳಕ್ಕಿಳಿಯುತ್ತಿದ್ದೇವೆ’ ಎಂಬ
> ಸಂದೇಶ ಕೊಂಚ ಮೊದಲೇ ಬಂದಿತ್ತು ನಿಜ. ಆದರೆ ಕಿಟಕಿಯಲ್ಲಿ ಬಗ್ಗಿ ನೋಡಿದರೆ ನೆಲವೇ
> ಕಾಣುತ್ತಿರಲಿಲ್ಲ. ಇನ್ನೂ ಮೋಡದಲ್ಲೇ ಇದ್ದೇವೆಂಬ ಭ್ರಮೆ. ನೆಲಕ್ಕಿಳಿದ ಮೇಲೂ ಹೆಚ್ಚೆಂದರೆ
> 25 ಮೀಟರ್ ದೂರದವರೆಗಿನ ಕಂಬ, ಕಟ್ಟೆ, ದೀಪಗಳು ಮಾತ್ರ- ಅವೂ ಮಬ್ಬಾಗಿ ಕಾಣುತ್ತಿದ್ದವು.
> ಸಮಯ: ಮಧ್ಯಾಹ್ನ ಒಂದೂವರೆ.
>
> ‘ದಿಲ್ಲಿಯಲ್ಲಿ ಈಗ ಮೊದಲ ನೋಟಕ್ಕೆ ಪ್ರೇಮ ಅಂಕುರಿಸಲು ಸಾಧ್ಯವೇ ಇಲ್ಲ’ ಎಂದು
> ವಾಟ್ಸ್‌ಆ್ಯಪ್‌ನಲ್ಲಿತಮಾಷೆಯ ಮಾತು ಹರಿದಾಡುತ್ತಿತ್ತು. ದೂರದ ಯಾರ ಮುಖವೂ
> ಕಾಣಿಸುತ್ತಿರಲಿಲ್ಲ. ಹತ್ತಿರ ಬಂದರೂ ಯಾರೆಂಬುದು ಸುಲಭಕ್ಕೆ ಗೊತ್ತಾಗದಂತೆ ಎಲ್ಲೆಲ್ಲೂ
> ಮುಖವಾಡಗಳು. ಬ್ರೆಕಿಂಗ್ ನ್ಯೂಸ್‌ ಗಳಿಗಂತೂ ಬಿಡುವೇ ಇಲ್ಲ. ಚಾನೆಲ್‌ ಗಳಲ್ಲಿ ಜಗಳವೋ ಜಗಳ.
> ‘ಇಂಥ ದುಃಸ್ಥಿತಿಗೆ ಕಾರಣ ನಾವಲ್ಲ, ನೀವು’ ಎಂದು ಎಲ್ಲ ರಾಜಕೀಯ ಪಕ್ಷಗಳ ವಕ್ತಾರರ ಬೆರಳೂ
> ಇನ್ನೊಬ್ಬರ ಕಡೆಗೆ.
>
> ಈ ಹಿಂದೆ ಬೀಜಿಂಗ್‌ನಲ್ಲಿ, ಮೆಕ್ಸಿಕೊದಲ್ಲಿ ಇಂಥದೇ ಸಂದರ್ಭದಲ್ಲಿ ಕೈಗೊಂಡಿದ್ದ
> ತುರ್ತುಕ್ರಮಗಳೆಲ್ಲ ದಿಲ್ಲಿಯಲ್ಲಿ ಕಳೆದ ವಾರ ಜಾರಿಗೆ ಬಂದಿವೆ. ಆರೋಗ್ಯ ತುರ್ತುಸ್ಥಿತಿ
> ಘೋಷಣೆ. ಎಲ್ಲ ಕಲ್ಲಿದ್ದಲ ವಿದ್ಯುತ್ ಘಟಕಗಳು ಸ್ಥಗಿತ; ಕಾರ್ಖಾನೆಗಳೆಲ್ಲ ಬಂದ್.
> ಶಾಲೆಗಳಿಗೆ ರಜೆ; ಲಾರಿಗಳಿಗೆ ಪ್ರವೇಶ ನಿಷೇಧ; ಎಲ್ಲ ಕಟ್ಟಡ ಕಾಮಗಾರಿ ನಿಷೇಧ; ಇಟ್ಟಿಗೆ
> ಬಟ್ಟಿಗಳು ಬಂದ್. ಕ್ರೀಡಾ ಕಾರ್ಯಕ್ರಮಗಳು ಬಂದ್. ಮುಂಜಾವಿನ ವಾಕಿಂಗ್, ವ್ಯಾಯಾಮ ಬಂದ್.
> ವಾಹನ ನಿಲುಗಡೆ ಶುಲ್ಕ ದುಪ್ಪಟ್ಟು; ಕೃತಕ ಮಳೆ ಸುರಿಸಲು ಸಿದ್ಧತೆ. ಸಮ- ಬೆಸ ಕ್ರಮಗಳನ್ನು
> ಮತ್ತೆ ಜಾರಿಗೆ ತರಲು ಚಿಂತನೆ. ದೂಳು ತಗ್ಗಿಸಲು ರಸ್ತೆಗಳಿಗೆ ವ್ಯಾಕ್ಯೂಮ್ ಕ್ಲೀನಿಂಗ್;
> ನೀರು ಎರಚಾಟ. ಮಾರುಕಟ್ಟೆಯಲ್ಲಿ ಏರ್ ಫಿಲ್ಟರ್ ಯಂತ್ರಗಳ ಮಾರಾಟ ಮೇಲಾಟ. ಮಾಧ್ಯಮ ವರದಿಗಾರರ
> ಕೈಯಲ್ಲಿ ವಾಯುಮಾಲಿನ್ಯ ಅಳೆಯುವ ಸಾಧನಗಳ ಓಡಾಟ. ವಾಯು ಗುಣಮಟ್ಟ ಸುರಕ್ಷಾ ಮಿತಿಗಿಂತ ಐದು
> ಪಟ್ಟು, ಏಳು ಪಟ್ಟು ಏರಿತೆಂಬ ಚೀರಾಟ.
>
> ರಾಜಧಾನಿಯಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳನ್ನು ಕೈಗೊಂಡಿದ್ದಾಯಿತು. ಮಾಧ್ಯಮಗಳ ದೌಡು
> ಈಗ ರೈತರ ಕಡೆಗೆ. ದಿಲ್ಲಿಯ ಸುತ್ತಲಿನ (ಹರ್‍ಯಾಣಾ, ಪಂಜಾಬ್ ಮತ್ತು ಉ.ಪ್ರ. ಪಶ್ಚಿಮ)
> ಭಾಗಗಳ ರೈತರೆಲ್ಲ ಪ್ರತಿವರ್ಷ ನವಂಬರ್ ಆರಂಭದಲ್ಲಿ ಕಟಾವಾದ ಭತ್ತದ ಗದ್ದೆಗಳಲ್ಲಿ ಉಳಿದ
> ಮೊಳಕಾಲೆತ್ತರದ ಬೇಹುಲ್ಲಿಗೆ ಬೆಂಕಿ ಕೊಡುತ್ತಾರೆ. ಈ ವರ್ಷವಂತೂ ಬಂಪರ್ ಫಸಲು. ಈ ಎರಡು
> ವಾರಗಳಲ್ಲಿ ಅಂದಾಜು ಮೂರು ಕೋಟಿ ಟನ್ ಹುಲ್ಲು ಸುಟ್ಟು ಅದರ ಹೊಗೆಯೆಲ್ಲ
> ಆಕಾಶಕ್ಕೇರುತ್ತಿದೆ.ಸುತ್ತ ಎಲ್ಲೂ ಸಮುದ್ರ ಇಲ್ಲವಾದ್ದರಿಂದ ಗಾಳಿಯ ಓಡಾಟ ಈ ದಿನಗಳಲ್ಲಿ
> ತೀರ ಕಡಿಮೆ. ಹಾಗಾಗಿ ಪಾಕಿಸ್ತಾನದ ಲಾಹೋರದಿಂದ ಹಿಡಿದು ಕಾನಪುರ, ಲಖ್ನೋ, ವಾರಾಣಸಿವರೆಗೂ
> ಹೊಗೆ, ಮಂಜು ಮತ್ತು ಅವೆರಡರ ಮಿಶ್ರಣವಾದ ಹೊಂಜು ಕವಿತ. ರೈತರು ಹುಲ್ಲನ್ನು ಸುಡುವುದು
> ಯಾಕೆಂದರೆ ತುರ್ತಾಗಿ ಹಿಂಗಾರು ಗೋಧಿಯ ಬಿತ್ತನೆ ಮಾಡಬೇಕು. ತಡ ಮಾಡುವಂತಿಲ್ಲ. ಸುಡುವ ಬದಲು
> ಭತ್ತದ ಹುಲ್ಲನ್ನು ಮೇವಿಗೆ ಯಾಕೆ ಬಳಸುತ್ತಿಲ್ಲ ಅಂದರೆ, ಗೋಧಿಯ ಹುಲ್ಲು ಸಾಕಷ್ಟು
> ಸಿಗುತ್ತದೆ. ಪಶುಗಳಿಗೂ ಅದು ಒಳ್ಳೆಯದು ಯಾಕೆಂದರೆ ಭತ್ತದ ಹುಲ್ಲಿನಲ್ಲಿರುವ ಸಿಲಿಕಾ ಗೋಧಿಯ
> ಹುಲ್ಲಿನಲ್ಲಿ ಇಲ್ಲ. ಭತ್ತದ ನೆಲಸಮ ಕಟಾವು ಸಾಧ್ಯವಿಲ್ಲ ಯಾಕೆಂದರೆ ಕಟಾವು ಯಂತ್ರಗಳ
> ವಿನ್ಯಾಸವೇ ಹಾಗೆ ಇದೆ. ಅವು ತೆನೆಯನ್ನಷ್ಟೇ ಕತ್ತರಿಸಿ ಸಾಗಿಸುತ್ತವೆ.
>
> ಹಸುರು ಕ್ರಾಂತಿಯ ಕೆಸರು ಇದು. ದೇಶಕ್ಕೆ ಆಹಾರ ಒದಗಿಸಬೇಕೆಂಬ ಹುಕ್ಕಿಯಲ್ಲಿ ಕೇವಲ
> ಧಾನ್ಯಕ್ಕೆ ಒತ್ತು ಕೊಟ್ಟಿದ್ದರಿಂದ ಎಷ್ಟೆಲ್ಲ ಎಡವಟ್ಟುಗಳಾಗಿವೆ. ಅದಕ್ಕೂ ಮುನ್ನ ಪಂಜಾಬಿ
> ರೈತರು ಗೋಧಿ, ಭತ್ತ, ಎಣ್ಣೆ ಕಾಳು, ತೊಗರಿ, ಅಲಸಂಡೆ, ಕಿರುಧಾನ್ಯ ಎಲ್ಲ ಬೆಳೆಯುತ್ತಿದ್ದರು.
> ಅಂಥ ಸಮಗ್ರ ಕೃಷಿಯಲ್ಲಿ ರೈತರಿಗೆ ಸಮೃದ್ಧ ಊಟ, ಪಶುಗಳಿಗೆ ಪುಷ್ಕಳ ಮಿಶ್ರ ಮೇವು, ನೆಲಕ್ಕೆ
> ಸಾವಯವ ಗೊಬ್ಬರ ಎಲ್ಲ ಸಿಗುತ್ತಿತ್ತು. ಆಹಾರ ಸ್ವಾವಲಂಬನೆ ಸಾಧಿಸಲೆಂದು ಬೃಹತ್ ಅಣೆಕಟ್ಟು
> ಕಟ್ಟಿ, ಪಂಜಾಬಿನ ಶೇ 95ಕ್ಕೂ ಹೆಚ್ಚು ಭೂಮಿಗೆ ನೀರಾವರಿ ಒದಗಿಸಿ, ಕೃತಕ ಗೊಬ್ಬರ, ಕೆಮಿಕಲ್
> ಕೀಟನಾಶಕ, ಭರ್ಜರಿ ಕೃಷಿ ಉಪಕರಣ ಪೂರೈಸಿ, ಬರೀ ಗೋಧಿ, ಭತ್ತದ ಹೈಬ್ರಿಡ್ ಬೀಜ ವಿತರಿಸಿ
> 1970ರ ಹೊತ್ತಿಗೆ ಪಂಜಾಬ್ ಎಂದರೆ ದೇಶದ ‘ಧಾನ್ಯದ ಕಣಜ’ ಎಂಬ ಕೀರ್ತಿ ಬಂದಿದ್ದೇನೊ ಹೌದು.
> ಇತರೆಲ್ಲ ಬೆಳೆಗಳನ್ನು ಕೈಬಿಟ್ಟು ಎರಡೇ ಧಾನ್ಯಗಳನ್ನು ಬೆಳೆಯುತ್ತಿದ್ದರೆ ಅದು ‘ಕಣಜ’
> ಎನಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಇದರ ದುಷ್ಪರಿಣಾಮಗಳು ಒಂದೆರಡಲ್ಲ: ಮಣ್ಣು ಮತ್ತು
> ಅಂತರ್ಜಲ ವಿಷಮಯ. ಚಿಟ್ಟೆ, ಗುಬ್ಬಿ, ಏಡಿ, ಎರೆಹುಳಗಳೆಲ್ಲ ನಾಪತ್ತೆ.
> ಕ್ಯಾನ್ಸರ್ ಪೀಡಿತ ಮಕ್ಕಳ ಸಂಖ್ಯೆ ಏರುಮುಖ. ಭಾರೀ ಪ್ರಮಾಣದಲ್ಲಿ ನೀರನ್ನು ಆವಿಯಾಗಿಸಿ
> ಮೇಲಕ್ಕೆ ಕಳಿಸುವುದರಿಂದ ವಾತಾವರಣದಲ್ಲಿ ತೇವಾಂಶ ಜಾಸ್ತಿ; ಈಗಂತೂ ದಟ್ಟ ಮಂಜು, ಡೀಸೆಲ್
> ಮತ್ತು ಹುಲ್ಲಿನ ಹೊಗೆ ಸೇರಿ ಉತ್ತರ ಭಾರತ ತತ್ತರ.
>
> ಒಂದು ದೃಷ್ಟಿಯಲ್ಲಿ ಈ ಹುಲ್ಲಿನ ಹೊಗೆ ದಿಲ್ಲಿಗೆ ಮುತ್ತಿಗೆ ಹಾಕಿದ್ದು ಒಳ್ಳೆಯದೇ
> ಎನ್ನಬೇಕು. ಹಳ್ಳಿಯ ಸಮಸ್ಯೆ ಜಗಜ್ಜಾಹೀರಾಯಿತು. ದೇಶದ ನೀತಿ ನಿರೂಪಕರು, ವಿಜ್ಞಾನಿಗಳು,
> ಉದ್ಯಮಪತಿಗಳು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಾಧ್ಯಮಗಳು ಎಚ್ಚೆತ್ತವು. ಇಲ್ಲಾಂದರೆ
> ಇಪ್ಪತ್ತು ನಗರಗಳನ್ನು, ಇನ್ನೂರಕ್ಕೂ ಹೆಚ್ಚು ಪಟ್ಟಣಗಳನ್ನು, ಅಸಂಖ್ಯ ಹಳ್ಳಿಗಳನ್ನು
> ಮುಸುಕಿರುವ ಮಾಲಿನ್ಯಕ್ಕೆ ಕ್ಯಾರೇ ಅನ್ನುವವರೇ ಇರಲಿಲ್ಲ. ಭಟಿಂಡಾದ ನಾಗರಿಕರು ಆಮ್ಲಜ
> ನಕ ಸಿಲಿಂಡರನ್ನೇ ಹೆಗಲ ಮೇಲೆ ಹೊತ್ತು ಬೀದಿ ಮೆರವಣಿಗೆ ಮಾಡಿದ್ದು; ರೈಲು ತಡವಾಗಿದ್ದರಿಂದ
> ಪ್ರಯಾಣಿಕರು ಶಹಾದ್ರಾ ನಿಲ್ದಾಣದ ಬೆಂಚ್‌ಗಳನ್ನೇ ಕಿತ್ತು ಹಳಿಯ ಮೇಲೆ ಹಾಕಿದ್ದು;
> ಮಬ್ಬಿನಲ್ಲಿ ವಾಹನಗಳು ಅಪಘಾತಕ್ಕೀಡಾಗಿದ್ದು; ಆಸ್ಪತ್ರೆಗಳಲ್ಲಿ ಆಸ್ತಮಾ ರೋಗಿಗಳ ಸಾಲು
> ಉದ್ದವಾಗಿದ್ದು ಎಲ್ಲವೂ ಬೆಳಕಿಗೆ ಬಂದವು. ನಗರದವರಿಗೆ ತೃಣಸಮಾನ ಎನಿಸಿದ್ದ ಹುಲ್ಲು ಈಗಿನ
> ಮಬ್ಬಿನಲ್ಲಿ ಧಿಗ್ಗನೆದ್ದು ಕಾಣುವಂತಾಯಿತು.
>
> ಹುಲ್ಲನ್ನು ಸುಡುವ ಬದಲು ಎಷ್ಟೊಂದು ವಿಧದಲ್ಲಿ ಬಳಸಬಹುದು. ಯಾವುದೇ ಸಸ್ಯದಲ್ಲಿ ಲಿಗ್ನಿನ್
> ಮತ್ತು ಸೆಲ್ಯುಲೋಸ್ ಎಂಬ ಎರಡು ಘಟಕಗಳಿರುತ್ತವೆ. ಸೆಲ್ಯುಲೋಸ್ (ಅಂದರೆ ಸಕ್ಕರೆ) ಅಂಶವನ್ನು
> ಬೇರ್ಪಡಿಸಿ ಅದರಿಂದ ಮದ್ಯಸಾರ, ಸುಗಂಧ ವಸ್ತು, ಇಂಧನ ತೈಲವನ್ನು ಪಡೆಯಬಹುದು. ಲಿಗ್ನಿನ್‌
> ನಿಂದ ರಟ್ಟು, ಕಾಗದ, ಪ್ಲಾಸ್ಟಿಕ್ ತಯಾರಿಸಬಹುದು. ಅಥವಾ ಒತ್ತಿಟ್ಟಿಗೆ ಮಾಡಿ
> ಕಲ್ಲಿದ್ದಲಿನಂತೆ ಕುಲುಮೆಯಲ್ಲಿ ಉರಿಸಬಹುದು; ವಿದ್ಯುತ್ ಉತ್ಪಾದನೆ ಮಾಡಬಹುದು. ಹುಲ್ಲು,
> ಜೋಳದ ದಂಟು, ಹತ್ತಿ ಕಡ್ಡಿ, ಕಬ್ಬಿನ ರೌದಿ, ಹಿಪ್ನೇರಳೆ ಕಡ್ಡಿ ಮುಂತಾದ ಎಲ್ಲ ಕೃಷಿ
> ತ್ಯಾಜ್ಯಗಳಿಂದ ಇವುಗಳನ್ನು ಪಡೆಯಲು ಸಾಧ್ಯವಿದೆ. ಇದೆಲ್ಲ ಗೊತ್ತಿದ್ದರೂ ದಿಲ್ಲಿಯ ಸುತ್ತ
> ಮುನ್ನೂರು ಲಕ್ಷ ಟನ್ ಹುಲ್ಲು ಹೊಗೆಯಾಗಿ, ಧಗೆಯಾಗಿ ಜೀವಲೋಕಕ್ಕೆ ಕಂಟಕವಾಗುತ್ತಿದ್ದರೆ
> ತಂತ್ರಜ್ಞರು ನೋಡುತ್ತ ಕೂತಿದ್ದಾರೆಯೆ?
>
> ಹಾಗೇನಿಲ್ಲ; ಹುಲ್ಲನ್ನು ಉರಿಸಿ ವಿದ್ಯುತ್ ಉತ್ಪಾದಿಸುವ ಆರು ಘಟಕಗಳು ಪಂಜಾಬಿನಲ್ಲಿವೆ.
> ಆದರೆ ವಿದ್ಯುತ್ ಉತ್ಪಾದನಾ ವೆಚ್ಚ ಪ್ರತಿ ಯುನಿಟ್ಟಿಗೆ ಆರು ರೂಪಾಯಿ. ಇತ್ತ ಕಲ್ಲಿದ್ದಲ
> ವಿದ್ಯುತ್ತು ಮೂರು ರೂಪಾಯಿಗೆ ಸಿಗುವಾಗ ಹುಲ್ಲಿನ ವಿದ್ಯುತ್ತನ್ನು ಸರ್ಕಾರವೂ
> ಖರೀದಿಸುತ್ತಿಲ್ಲ. ಹಾಗಾಗಿ ಐದು
> ಘಟಕಗಳು ಮುಚ್ಚಿವೆ. ಈಗ ವಿದ್ಯುತ್ ಬದಲು ಬೇರೆ ಉತ್ಪಾದನೆಗಳ ಸಾಧ್ಯತೆಯ ಪರೀಕ್ಷೆ
> ನಡೆದಿದೆ. ಹುಲ್ಲಿನಿಂದ ಮೀಥೇನ್ ಅನಿಲ ಉತ್ಪಾದಿಸಿ ಸಿಲಿಂಡರ್‌ಗೆ ತುಂಬಿ ಪೂರೈಕೆಮಾಡುವ
> ತಂತ್ರಜ್ಞಾನ ಪಾಕಿಸ್ತಾನದ ಗಡಿಯ ಬಳಿ ಫಜಿಲ್ಕಾದಲ್ಲಿ ಬಳಕೆಗೆ ಬಂದಿದೆ. ಅನಿಲದ ಬದಲು
> ಇಥೆನಾಲ್ (ಬಯೊ ಪೆಟ್ರೋಲ್) ಉತ್ಪಾದಿಸಲು ಭಾರತ್ ಪೆಟ್ರೋಲಿಯಂ ಮತ್ತು ಎನ್‌ಟಿಪಿಸಿಗಳು
> ಹೂಡಿಕೆ ಮಾಡುತ್ತಿವೆ. ಭಟಿಂಡಾ ಮತ್ತು ಪಾಟಿಯಾಲಾಗಳಲ್ಲಿ ಕೆಮಿಕಲ್ ಕಿಣ್ವಗಳನ್ನು ಸೇರಿಸಿ
> ಬಟ್ಟಿ ಇಳಿಸುವ ಮೂಲಕ ಬಯೊ ಪೆಟ್ರೋಲ್ ತೆಗೆಯುವ 12 ಘಟಕಗಳು ಶೀಘ್ರಮಾರ್ಗದಲ್ಲಿ
> ಸ್ಥಾಪನೆಗೊಳ್ಳುತ್ತಿವೆ.
>
> ‘ತಂತ್ರಜ್ಞಾನಗಳು ಎಷ್ಟೊಂದಿವೆ; ಆದರೆ ಇತರ ಅಡೆತಡೆ ನಿವಾರಣೆ ಆಗಬೇಕಿದೆ’ ಎನ್ನುತ್ತಾರೆ,
> ಜೈವಿಕ ಇಂಧನದ ರಾಷ್ಟ್ರೀಯ ಕಾರ್ಯಪಡೆಯ ಅಧ್ಯಕ್ಷ ವೈ.ಬಿ. ರಾಮಕೃಷ್ಣ. ಡೇರಿ ಹಾಲಿನ
> ಪೂರೈಕೆಯಷ್ಟು ಸುಲಭವಲ್ಲ ಕೃಷಿತ್ಯಾಜ್ಯ ವಿಲೆವಾರಿ. ಎರಡೇ ವಾರಗಳಲ್ಲಿ ಕಟಾವಾಗುವ ಅಷ್ಟೊಂದು
> ಹುಲ್ಲನ್ನು ಸಂಗ್ರಹಿಸಿ, ಸಾಗಿಸಿ, ಒಂದೆಡೆ ಒಟ್ಟಿಟ್ಟು ವರ್ಷವಿಡೀ ಬಳಸುವಂತೆ ಉದ್ಯಮಿಗಳ
> ಮನವೊಲಿಸಬೇಕು. ಹಳ್ಳಿಗರನ್ನೇ ತೊಡಗಿಸಿ ವ್ಯವಸ್ಥಿತ ಸಾಗಾಟ ಸರಪಳಿ ಸಿದ್ಧವಾಗಬೇಕು.
> ‘ಅವೆಲ್ಲ ಒಂದೊಂದಾಗಿ ಕಾರ್ಯರೂಪಕ್ಕೆ ಬರುತ್ತಿದೆ. ಇಥೆನಾಲ್ ತಯಾರಿಕೆಯ ಅನುಕೂಲ ಏನೆಂದರೆ,
> ದೇಶಕ್ಕೆ ಇಂಧನ ಸಿಗುತ್ತದೆ. ರೈತರಿಗೆ ಉತ್ಕೃಷ್ಟಗುಣಮಟ್ಟದ ಸಾವಯವ ಗೊಬ್ಬರ ಮರಳಿ
> ಬರುತ್ತದೆ’ ಎಂದು ರಾಮಕೃಷ್ಣ ಹೇಳುತ್ತಾರೆ. ಹಾಗಿದ್ದರೆ ಅಂಥ ತಂತ್ರಜ್ಞಾನ ನಮ್ಮಲ್ಲಿಗೂ
> ಬಂದೀತೆ ಎಂದು ಕೇಳಿದರೆ ‘ಬಂದಿದೇರೀ ಆಗ್ಲೇ’ ಎನ್ನುತ್ತ ಅವರು ಉದ್ದ ಪಟ್ಟಿಯನ್ನೇ
> ಕೊಡುತ್ತಾರೆ. ಮುಸುಕಿನ ಜೋಳದ ದಿಂಡು, ದಂಟುಗ
> ಳಿಂದ ಇಂಧನ ತೆಗೆಯುವ ಎಮ್‍.ಆರ್‌.ಪಿ.ಎಲ್. ಘಟಕ ಹರಿಹರದ ಬಳಿ ಬರುತ್ತಿದೆ. ಶೆಲ್
> ಕಂಪನಿಯವರು ಬೆಂಗಳೂರಿನ ಅಂಚಿನಲ್ಲೆ ಹಿಪ್ನೇರಳೆ ಕಡ್ಡಿ ಮತ್ತು ನಗರ ತ್ಯಾಜ್ಯಗಳಿಂದ ತೈಲ
> ತಯಾರಿಸುವ ಘಟಕ ಹಾಕುತ್ತಿದ್ದಾರೆ. ಬಿದಿರನ್ನು ರುಬ್ಬಿ ಮದ್ಯಸಾರ ತೆಗೆಯುವ ಕಾರ್ಖಾನೆ
> ಅಸ್ಸಾಮಿನಲ್ಲಿ ಫಿನ್ಲೆಂಡ್ ನೆರವಿನಿಂದ ಸಜ್ಜಾಗಿದೆ.
>
> ಕೊಚ್ಚಿಯಲ್ಲಿ ಕೃಷಿತ್ಯಾಜ್ಯದಿಂದ ಬಯೊಪೆಟ್ರೋಲ್ಪಡೆಯುವ ಉದ್ಯಮವನ್ನು ಬಿಪಿಸಿಎಲ್ ಇದೀಗ
> ಆರಂಭಿಸುತ್ತಿದೆ. ಜೈವಿಕ ತಂತ್ರಜ್ಞಾನದಲ್ಲಿ ಇಂಥ ಏನೇನು
> ಹೊಸ ಸಾಧ್ಯತೆಗಳಿವೆ ಎಂಬುದನ್ನು ತೋರಿಸಲೆಂದೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ
> ಮೂರು ದಿನಗಳ ‘ತಂತ್ರಜ್ಞಾನ ಶೃಂಗಸಭೆ’ ಆರಂಭವಾಗಿದೆ. ದೇಶದ ಐಟಿ, ಬಿಟಿ ಧುರಂಧರರು,
> ಉದ್ಯಮಪತಿಗಳು, ಸಂಶೋಧಕರು, ಹೂಡಿಕೆದಾರರು ಎಲ್ಲ ಸೇರುತ್ತಿದ್ದಾರೆ. ಇದೇ ವೇಳೆಗೆ ಅತ್ತ
> ಜಿಕೆವಿಕೆಯಲ್ಲಿ ಅದ್ಧೂರಿಯ ಕೃಷಿಮೇಳವೂ ಆರಂಭವಾಗುತ್ತಿದೆ. ದಿಲ್ಲಿಯ ಗಾಳಿ
> ಬೀಸಿದ್ದರಿಂದಾಗಿ ಹಳ್ಳಿಯ ಕಡೆಗೆ ತಂತ್ರವಿಶಾರದರ ಗಮನ ಹರಿದಿದೆ.
> ಜಪಾನೀ ಕೃಷಿಋಷಿ ಫುಕುವೊಕನ ‘ಒಂದು ಹುಲ್ಲಿನ ಕ್ರಾಂತಿ’ ಗ್ರಂಥದ ಪ್ರಕಾರ, ಹುಲ್ಲು ಎಂಬುದು
> ಕೃಷಿಕನ ಸುಸ್ಥಿರ ಬದುಕಿಗೆ ಬುನಾದಿಯಾಗಿತ್ತು. ಭತ್ತದ ಕೊಯ್ಲು ಮಾಡುವ ಎರಡು ವಾರ ಮೊದಲೇ
> ಫುಕುವೊಕ ಮುಂದಿನ ಬೆಳೆಗೆ ಬಿತ್ತನೆ ಮಾಡಿಬಿಡುತ್ತಿದ್ದ. ಕೊಯ್ಲಿನ ನಂತರ ಹುಲ್ಲನ್ನು ಅಲ್ಲೇ
> ಹಾಸುತ್ತಿದ್ದ. ಫಸಲಿನ ದಾಖಲೆ ಇಳುವರಿ ಪಡೆಯುತ್ತಿದ್ದ. ನಾವು ‘ಎಲ್ಲರಿಗೂ ಆಹಾರ’ ಒದಗಿಸುವ
> ಧಾವಂತದಲ್ಲಿ ಯಾಂತ್ರಿಕ ಕೃಷಿಗೆ ಆದ್ಯತೆ ನೀಡಿದೆವು. ಅದರ ಮುಂದುವರಿಕೆಯಾಗಿ ಎಲ್ಲರಿಗೂ
> ಹಾಲು, ಬಟ್ಟೆ, ಮನೆ, ಎಲ್ಲರಿಗೂ ಫ್ರಿಜ್ಜು, ಕಾರು... ಈಗ ಎಲ್ಲರಿಗೂ ಔಷಧ, ಎಲ್ಲರಿಗೂ
> ಮುಖವಾಡ ಎಂಬಲ್ಲಿಗೆ ತಲುಪಿದ್ದೇವೆ. ಉಸಿರ ತುಸು ಬಿಗಿ ಹಿಡಿದು ಕಾಯೋಣ. ತ್ಯಾಜ್ಯ ಮರುಬಳಕೆಯ
> ತಂತ್ರಜ್ಞಾನ ಸನಿಹದಲ್ಲೇ ಮಂಜು ಮಂಜಾಗಿ ಕಾಣತೊಡಗಿದೆ.
>
> --
> Hareeshkumar K
> GHS Huskuru
> Malavalli Tq
> Mandya Dt
> 9880328224
> e-mail [email protected]
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to