Nice sir

On Wed, May 16, 2018, 6:00 PM Hareeshkumar K <harihusk...@gmail.com> wrote:

> Look what I shared: ಇಜ್ಞಾನ ಡಾಟ್ ಕಾಮ್: ಬೆಳಕಿನ ದಿನ ವಿಶೇಷ: ಬೆಳಕೆಂಬ ಬೆರಗು
> @MIUI| http://www.ejnana.com/2018/05/IDL2018.html?m=1
>
> ಬೆಳಕಿನ ದಿನ ವಿಶೇಷ: ಬೆಳಕೆಂಬ ಬೆರಗು
> *ಟಿ. ಜಿ. ಶ್ರೀನಿಧಿ*
>
>
> <https://3.bp.blogspot.com/-AggYEaS1KyE/Wvu5AxPPLGI/AAAAAAAApTw/UdlVQTTWzo8AUFaw7F7AxC3MQWbJNbdAQCLcBGAs/s1600/IDL-Logo.jpg>
> ಬೆಳಕಿನ ಮಹತ್ವ ಏನು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಸುಲಭ: ನಮ್ಮ ಸುತ್ತಮುತ್ತಲ
> ಪ್ರಪಂಚವನ್ನು ನೋಡಲು ಬೆಳಕು ಬೇಕು. ಸಸ್ಯಗಳು ಆಹಾರ ತಯಾರಿಸಿಕೊಳ್ಳಬೇಕಾದರೂ ಬೆಳಕು
> ಇರಬೇಕು. ಸೋಲಾರ್ ಹೀಟರಿನಲ್ಲಿ ನೀರು ಬಿಸಿಯಾಗುವುದೂ ಬೆಳಕಿನ ಸಹಾಯದಿಂದ. ಇದನ್ನೆಲ್ಲ
> ಬರೆದಿರುವ ಈ ಲೇಖನದ ಸಾಲುಗಳು ನಮಗೆ ಕಾಣುತ್ತಿರುವುದೂ ಬೆಳಕಿನ ಕಾರಣದಿಂದಲೇ!
>
> ಇಂತಹ ಅನೇಕ ಉಪಯೋಗಗಳಿಗೆ ಒದಗಿಬರುವುದು ಸೂರ್ಯನ ಬೆಳಕು. ಸೂರ್ಯನ ಬೆಳಕು ಇಲ್ಲದಾಗ ಅಥವಾ
> ನಮ್ಮ ಅಗತ್ಯಕ್ಕೆ ಸಾಲದಾದಾಗ ನಾವು ಟ್ಯೂ‌ಬ್‌ಲೈಟ್, ಬಲ್ಬ್ ಮುಂತಾದ ಕೃತಕ ಬೆಳಕಿನ
> ಮೂಲಗಳನ್ನೂ ಬಳಸುತ್ತೇವೆ.
>
> ಆದರೆ ಬೆಳಕಿನ ಮಹತ್ವ ಇಷ್ಟಕ್ಕೇ ಮುಗಿಯುವುದಿಲ್ಲ. ಸುಲಭವಾಗಿ ನಮ್ಮ ಗಮನಕ್ಕೆ ಬರದ,
> ಕೆಲವೊಮ್ಮೆ ನಮ್ಮ ಕಣ್ಣಿಗೂ ಕಾಣದ ಹಲವು ಬಗೆಗಳಲ್ಲಿ ಬೆಳಕು ನಮಗೆ ನೆರವಾಗುತ್ತದೆ.
>
> ಇಂತಹ ಅನ್ವಯಗಳಿಗೆ ಲೇಸರ್ ಒಂದು ಉತ್ತಮ ಉದಾಹರಣೆ. ಕಡತಗಳನ್ನು ಉತ್ತಮ ಗುಣಮಟ್ಟದಲ್ಲಿ
> ಮುದ್ರಿಸುವುದಿರಲಿ, ಕಣ್ಣಿನ ಶಸ್ತ್ರಚಿಕಿತ್ಸೆಯಂತಹ ಕ್ಲಿಷ್ಟ ಕೆಲಸವೇ ಇರಲಿ - ಇಂದು ಲೇಸರ್
> ಕಿರಣಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಳಕಿಗೆ ಸಂಬಂಧಪಟ್ಟ ಒಂದೇ ಆವಿಷ್ಕಾರ
> ಸಂವಹನ, ಆರೋಗ್ಯ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಮ್ಮ ಬದುಕನ್ನು ಹೇಗೆ
> ಪ್ರಭಾವಿಸುವುದು ಸಾಧ್ಯವೆಂದು ತೋರಿಸಿಕೊಟ್ಟಿದ್ದು ಲೇಸರ್. ಹೀಗಾಗಿಯೇ ೧೯೬೦ನೇ ಇಸವಿಯಲ್ಲಿ
> ಲೇಸರ್ ಆವಿಷ್ಕಾರವಾದ ಮೇ ೧೬ನೇ ದಿನಾಂಕವನ್ನು ಇದೀಗ ಅಂತಾರಾಷ್ಟ್ರೀಯ ಬೆಳಕಿನ ದಿನವೆಂದು
> (ಇಂಟರ್‌ನ್ಯಾಶನಲ್ ಡೇ ಆಫ್ ಲೈಟ್) ಆಚರಿಸಲಾಗುತ್ತಿದೆ.
>
>
>
> ಬೆಳಕಿಗೆ ಸಂಬಂಧಪಟ್ಟ, ಬರಿಗಣ್ಣಿಗೆ ಕಾಣದಿದ್ದರೂ ಪರೋಕ್ಷವಾಗಿ ನಮ್ಮ ಅನುಭವಕ್ಕೆ ಬರುವ
> ವಿದ್ಯಮಾನಗಳು ಇನ್ನೂ ಬಹಳಷ್ಟಿವೆ. ದೂರದ ಉದಾಹರಣೆಗಳೆಲ್ಲ ಏಕೆ, ರಿಮೋಟಿನ ಗುಂಡಿ ಒತ್ತಿದಾಗ
> ಟೀವಿಯನ್ನು ಚಾಲೂ ಮಾಡುವುದೂ ಬೆಳಕಿನ ಕಿರಣಗಳೇ. ಅಂತರಜಾಲದ ಮೂಲಕ ಹರಿದುಬರುವ ಮಾಹಿತಿ
> ನಮ್ಮನ್ನು ಆಪ್ಟಿಕಲ್ ಫೈಬರ್ ಎಳೆಗಳ ಮೂಲಕ ತಲುಪುತ್ತದಲ್ಲ, ಮಾಹಿತಿಯನ್ನು ಹಾಗೆ ಹೊತ್ತು
> ತರುವುದೂ ಬೆಳಕಿನದೇ ಕೆಲಸ. ರೇಡಿಯೋ ಅಲೆಗಳು, ಮೈಕ್ರೋತರಂಗಗಳು (ಮೈಕ್ರೋವೇವ್), ಅತಿನೇರಳೆ
> (ಅಲ್ಟ್ರಾವಯಲೆಟ್), ಅವರಕ್ತ (ಇನ್‌ಫ್ರಾರೆಡ್) ಕಿರಣಗಳ ಬಗೆಗೆಲ್ಲ ಕೇಳುತ್ತೇವಲ್ಲ - ಅವೂ
> ಬೆಳಕಿನ ಅಲೆಗಳೇ!
>
> ಬೆಳಕಿನ ಉಪಯೋಗ ನಮ್ಮ ಭೂಮಿಗಷ್ಟೇ ಸೀಮಿತವೇನಲ್ಲ. ಹವಾಮಾನ ಪರಿವೀಕ್ಷಣೆಯಿಂದ ಪ್ರಾರಂಭಿಸಿ
> ಬಾಹ್ಯಾಕಾಶ ಸಂಶೋಧನೆಯವರೆಗೆ ಎಲ್ಲೆಡೆಯೂ ಒಂದಲ್ಲ ಒಂದು ರೀತಿಯ ಬೆಳಕು ಪ್ರಯೋಜನಕ್ಕೆ
> ಬರುತ್ತದೆ.
>
> ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಬೆಳಕಿನ ಪಾತ್ರ ಬಹಳ ಮಹತ್ವದ್ದು. ನಿಸ್ತಂತು
> (ವೈರ್‌ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ
> ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು
> ಹೇಳುತ್ತಾರೆ. ನಮಗೆಲ್ಲ ಪರಿಚಯವಿರುವ ವೈ-ಫೈ ತಂತ್ರಜ್ಞಾನಕ್ಕೆ ಈ ಲೈ-ಫೈ, ಅಂದರೆ 'ಲೈಟ್
> ಎನೇಬಲ್ಡ್ ವೈ-ಫೈ' ಪರ್ಯಾಯವಾಗಿ ಬೆಳೆಯಬಹುದು ಎನ್ನುವುದು ಅವರ ಅಭಿಪ್ರಾಯ.
>
> ಅಷ್ಟೇ ಅಲ್ಲ, ಬೆಳಕಿನ ಬಳಕೆ ಹಾಗೂ ಅದರ ಉಪಯೋಗಗಳ ಸುತ್ತ ಫೋಟಾನಿಕ್ಸ್ (Photonics) ಎಂಬ
> ವಿಜ್ಞಾನದ ಶಾಖೆಯೇ ಬೆಳೆದಿದೆ. ಬೆಳಕಿನ ಸೂಕ್ಷ್ಮ ಕಣಗಳಾದ ಫೋಟಾನುಗಳ ಉತ್ಪಾದನೆ, ನಿಯಂತ್ರಣ
> ಹಾಗೂ ಗುರುತಿಸುವಿಕೆಗೆ ಬೇಕಾದ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಸಮ್ಮಿಲನವೇ ಇದು.
> ಸ್ಮಾರ್ಟ್‌ಫೋನುಗಳಿಂದ ಲ್ಯಾಪ್‌ಟಾಪ್‌ಗಳವರೆಗೆ, ಕೃತಕ ಬೆಳಕಿನ ಮೂಲಗಳಿಂದ ವೈದ್ಯಕೀಯ
> ಸಾಧನಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಫೋಟಾನಿಕ್ಸ್ ಇಂದು ಪ್ರಮುಖ ಪಾತ್ರ
> ವಹಿಸುತ್ತಿದೆ. ಕಳೆದ ಶತಮಾನದಲ್ಲಿ ವಿದ್ಯುನ್ಮಾನ ವಿಜ್ಞಾನ (ಇಲೆಕ್ಟ್ರಾನಿಕ್ಸ್)
> ವಹಿಸಿದಂತಹುದೇ ಪಾತ್ರವನ್ನು ಈ ಶತಮಾನದಲ್ಲಿ ಬೆಳಕಿನ ವಿಜ್ಞಾನ (ಫೋಟಾನಿಕ್ಸ್) ವಹಿಸಲಿದೆ
> ಎನ್ನುವುದು ವಿಜ್ಞಾನಿಗಳ ನಿರೀಕ್ಷೆ.
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to