nice On Wed 12 Sep, 2018, 2:45 PM Hareeshkumar K, <[email protected]> wrote:
> ನೆಟ್‌ನೋಟ: ಬದಲಾದ ಗ್ರಹಚಾರ, ನವಗ್ರಹ ಸ್ಥಾನಕ್ಕಿಲ್ಲ ಸಂಚಕಾರ! > Vijaya Karnataka| Sep 12, 2018, 05.00 AM IST > * ಸುಧೀಂದ್ರ ಹಾಲ್ದೊಡ್ಡೇರಿ * > > ಸೂರ‍್ಯ ಮತ್ತವನ ಸಂಸಾರದ ಒಂಬತ್ತು ಗ್ರಹಗಳ ಬಗ್ಗೆ ಬಾಲ್ಯದಿಂದಲೂ ಕಲಿತಿದ್ದ ಪಾಠವನ್ನು > ಏಕಾಏಕಿ ಬದಲಿಸಿದ್ದು 'ಅಂತಾರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟ' ಕ್ರಿ.ಶ.2006ರಲ್ಲಿ > ತೆಗೆದುಕೊಂಡ ಒಂದು ನಿರ್ಧಾರದಿಂದ. ಒಂಬತ್ತನೆಯ ಗ್ರಹದ ಪಟ್ಟದಿಂದ ಪ್ಲೂಟೊವನ್ನು ಇಳಿಸಿ, > ಸೂರ‍್ಯನಿಗಿರುವುದು ಎಂಟು ಗ್ರಹಗಳು ಮಾತ್ರ ಎಂಬ ಹೊಸ ಪಾಠ ಸೇರ್ಪಡೆಯಾಯಿತು. ಪ್ಲೂಟೊವನ್ನು > ಕುಬ್ಜ ಗ್ರಹಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಅದೇ ಮೊದಲ ಬಾರಿಗೆ 'ಕುಬ್ಜ ಗ್ರಹ'ಗಳೆಂಬ > ಆಕಾಶಕಾಯಗಳ ಹೊಸ ವರ್ಗೀಕರಣವು ಜನರಿಗೆ ಪರಿಚಯವಾಯಿತು. ಸಮೀಪದ ಮತ್ತೊಂದು ಗ್ರಹ ಅಥವಾ > ಆಕಾಶಕಾಯದ ಕಕ್ಷೆಯು ತನ್ನ ಕಕ್ಷೆಯನ್ನು ಛೇದಿಸಿದಲ್ಲಿ ಅಥವಾ ಅದರ ಗುರುತ್ವ ಬಲ ತನ್ನ > ಗುರುತ್ವ ಬಲದ ಮೇಲೆ ಪರಿಣಾಮ ಬೀರಿದಲ್ಲಿ ಅಂಥ ಆಕಾಶಕಾಯಕ್ಕೆ ಗ್ರಹದ ಪಟ್ಟ ಸಿಗುವುದಿಲ್ಲ. > ಅದನ್ನು ಕುಬ್ಜ ಗ್ರಹವೆನ್ನಬಹುದು ಎಂಬ ಅಭಿಪ್ರಾಯವನ್ನು ಅಂತಾರಾಷ್ಟ್ರೀಯ ಖಗೋಳವಿಜ್ಞಾನ > ಒಕ್ಕೂಟವು ನೀಡಿತು. > > ಸೂರ‍್ಯನಿಂದ 590 ಕೋಟಿ ಕಿಲೋಮೀಟರ್ ದೂರದ 'ಪ್ಲೂಟೊ' ಕಕ್ಷೆಯು ತನ್ನ ಸಮೀಪವರ್ತಿ > 'ನೆಪ್ಚ್ಯೂನ್' ಗ್ರಹದ ಕಕ್ಷೆಯನ್ನು ದಾಟಿ 'ಕ್ಯೂಪರ್ ಬೆಲ್ಟ್' ಅನ್ನೂ ಮೀರಿದೆ. ಈ > 'ಕ್ಯೂಪರ್ ಬೆಲ್ಟ್' ಅಂದರೆ ಸೌರವ್ಯೂಹ ಉಗಮವಾದ ಸಮಯದಲ್ಲಿ ಪೂರ್ಣ ಪ್ರಮಾಣದ > ಗ್ರಹಗಳಾಗದೆಯೇ ಅರೆ-ಬರೆಯಾಗಿ ರೂಪುಗೊಂಡ ಕ್ಷುದ್ರ ಗ್ರಹಗಳೂ ಸೇರಿದಂತೆ ಅನೇಕ ಆಕಾಶಕಾಯಗಳು > ಅಡ್ಡಾಡುವ ಕಕ್ಷೆ. ಅದನ್ನು ಪ್ಲೂಟೊ ಕಕ್ಷೆಯು ಛೇದಿಸುವುದನ್ನು ಗಮನಿಸಲಾಯಿತು, ಹಾಗೆಯೇ ಅದರ > ಸಮೀಪದಲ್ಲಿಯೇ ಕ್ಷುದ್ರ ಗ್ರಹಗಳೂ ಸೇರಿದಂತೆ ಅನೇಕ ಆಕಾಶಕಾಯಗಳಿರುವುದು ಪತ್ತೆಯಾಯಿತು. > ಗ್ರಹಗಳೆಂದ ಮೇಲೆ ಅದರ ಕಕ್ಷೆಯಲ್ಲಿ ಮಾತ್ರ ಹೆಚ್ಚಿನ ಗುರುತ್ವ ಬಲವನ್ನು ಹೊಂದಿರಬೇಕು. > ನೆಪ್ಚ್ಯೂನ್ ಗ್ರಹ ಮತ್ತು 'ಕ್ಯೂಪರ್ ಬೆಲ್ಟ್'ನ ಆಕಾಶಕಾಯಗಳ ಪ್ರಭಾವದಿಂದ ಪ್ಲೂಟೊನ > ಗುರುತ್ವ ಬಲವು ಕಕ್ಷೆಯ ಹೊರತಾದ ಅನೇಕ ಕ್ಷೇತ್ರಗಳಲ್ಲಿ ಹೆಚ್ಚಾಗಿರುವುದು ಕಂಡುಬಂದಿತು. > ಇವೆಲ್ಲದರ ಪರಿಣಾಮ, ಪ್ಲೂಟೊದ 'ಗ್ರಹಚಾರ' ಕೆಟ್ಟಿತು. ಗ್ರಹಗಳಿಗಿರಬೇಕಾದ ಹೊಸ > ಅರ್ಹತೆಗಳಿಗನುಗುಣವಾಗಿ ಪ್ಲೂಟೊ ತನ್ನ 'ನವಮ ಗ್ರಹ' ಪಟ್ಟವನ್ನು ಕಳೆದುಕೊಂಡಿತು. > ಕ್ರಿ.ಶ.2006ರ ಈ ಹೊಸ ವರ್ಗೀಕರಣವು ಪ್ಲೂಟೊವನ್ನು ಗ್ರಹದಿಂದ ಕುಬ್ಜ ಗ್ರಹದ > ಸ್ಥಾನಕ್ಕಿಳಿಸಿದರೆ, ಕ್ರಿ.ಶ.1801ರಿಂದಲೂ ಕ್ಷುದ್ರ ಗ್ರಹದ (ಆಸ್ಟೆರಾಯ್ಡ್) > ಪಟ್ಟಿಯಲ್ಲಿದ್ದ 'ಸೆರೆಸ್'ಗೆ ಅದೃಷ್ಟ ಖುಲಾಯಿಸಿತು- ಅದರ ಸ್ಥಾನವು ಕುಬ್ಜ ಗ್ರಹ > ಪಟ್ಟಕ್ಕೇರಿತು. > > ಕ್ರಿ.ಶ.1930ರಲ್ಲಿ ಅಮೆರಿಕದ ಅರಿಝೋನಾದಲ್ಲಿರುವ ಲೊವೆಲ್ ವೀಕ್ಷಣಾಲಯದ ಮೂಲಕ > ಪ್ಲೂಟೊವನ್ನು ಮೊದಲ ಬಾರಿಗೆ ಗುರುತಿಸಿದವರು ಕ್ಲೆ ೖಡ್ ಟಾಮ್‌ಬಾಗ್. ಪ್ಲೂಟೊ ತನ್ನ > ಗಾತ್ರದಲ್ಲಿ ನಮ್ಮ ಭೂಮಿಯ ಉಪಗ್ರಹವಾದ ಚಂದ್ರನಿಗೂ ಕಿರಿದಾಗಿದ್ದ ಕಾರಣ, ಅದಕ್ಕೆ 'ಗ್ರಹ'ದ > ಪಟ್ಟ ಕೊಡಬಾರದೆಂಬ ವಾದ ಆ ಕಾಲದಲ್ಲಿಯೇ ಇತ್ತು. ನಂತರದ ದಿನಗಳಲ್ಲಿ, ಪ್ಲೂಟೊನ ಮೇಲ್ಮೆ > ೖಯಲ್ಲಿ ಘನೀಕೃತವಾದ ಸಾರಜನಕ, ಮೀಥೇನ್ ಹಾಗೂ ಕಾರ್ಬನ್ ಮಾನಾಕ್ಸೆ ೖಡ್ ಮಂಜುಗಡ್ಡೆಗಳ > ಮಿಶ್ರಣವಿರುವುದು ಪತ್ತೆಯಾಯಿತು. ಹಾಗೆಯೇ ಅದರಲ್ಲಿರುವ ಧ್ರುವ ಟೊಪ್ಪಿಗೆಗಳು ಮತ್ತು > ಸಾರಜನಕ ಹಾಗೂ ಮೀಥೇನ್‌ನ ಘನೀಕೃತ ವಲಯಗಳು ಗ್ರಹಿಕೆಗೆ ಬಂದವು. ಪ್ಲೂಟೊನ ಜತೆಗೆ > ಜೋಡಿಯಾಗಿಯೇ ಕಂಡಿದ್ದು ಅದರ ಚಂದ್ರ (ಉಪಗ್ರಹ) ಶರೋನ್. ಹಬಲ್ ದೂರದರ್ಶಕದ ನೆರವಿನಿಂದ > ಕ್ರಿ.ಶ.2005ರಲ್ಲಿ ಹೈಡ್ರಾ ಮತ್ತು ನಿಕ್ಸ್ ಎಂಬ ಎರಡು ಚಂದ್ರಗಳನ್ನು ಗುರುತಿಸಲಾಯಿತು. > ಕ್ರಿ.ಶ.2011ರಲ್ಲಿ ಕೆರ್ಬೆರಾಸ್ ಎಂಬ ನಾಲ್ಕನೆಯ ಚಂದ್ರ ಹಬಲ್ ದೂರದರ್ಶಕದಿಂದ > ಪತ್ತೆಯಾಯಿತು. ನ್ಯೂ ಹೊರೈಝಾನ್ ನೌಕೆಯ ಪಥದಲ್ಲಿ ಯಾವುದಾದರೂ ಆಕಾಶಕಾಯಗಳು > ಅಡ್ಡಬರುತ್ತಿವೆಯೆ ಎಂದು ಅರಸುತ್ತಿದ್ದ ವಿಜ್ಞಾನಿಗಳಿಗೆ ಕ್ರಿ.ಶ.2015ರಲ್ಲಿ > ಪತ್ತೆಯಾದದ್ದು ಐದನೆಯ ಚಂದ್ರ ಸ್ಟೆ ೖಕ್ಸ್. ಈ ಐದೂ ಚಂದ್ರರಲ್ಲಿ ಅತಿ ದೊಡ್ಡದಾದದ್ದು > ಶರೋನ್. ಪ್ಲೂಟೊ ಮತ್ತು ಶರೋನ್- ಇವೆರಡರ ಗುರುತ್ವ ಬಲಗಳು ತೀಕ್ಷ್ಣವಾಗಿರುವ ಕಾರಣ, > ಇವೆರಡರ ಕಕ್ಷೆಗಳು ಪರಸ್ಪರ ಸ್ಥಿರವಾಗಿವೆ. ಅಂದರೆ ಸದಾ ಕಾಲ ಇವೆರಡೂ ತಮ್ಮ ಒಂದೇ ಮುಖವನ್ನು > ಪರಸ್ಪರ ತೋರಿಸಿಕೊಳ್ಳುತ್ತಿರುತ್ತವೆ. ಪ್ಲೂಟೊ ಸೂರ‍್ಯನನ್ನು ಸುತ್ತುವ ಕಕ್ಷೆಯು ಅತಿ > ದೀರ್ಘ ವೃತ್ತವಾಗಿದ್ದು ಅಲ್ಲಿನ ಒಂದು ವರ್ಷವು ನಮ್ಮ 248 ವರ್ಷಗಳಿಗೆ ಸಮ. > > ಪ್ಲೂಟೊ ಕುರಿತ ಅಧ್ಯಯನಕ್ಕೆಂದು ಕ್ರಿ.ಶ.2006ರ ಜನವರಿಯಲ್ಲಿ ಅಮೆರಿಕದ ಬಾಹ್ಯಾಕಾಶ > ಸಂಸ್ಥೆ 'ನಾಸಾ' ಉಡ್ಡಯಿಸಿದ ವ್ಯೋಮನೌಕೆಯ ಹೆಸರು 'ನ್ಯೂ ಹೊರೈಝಾನ್ಸ್'. ತನ್ನ ಗುರುತ್ವ > ಬಲವನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಕೆಲವೊಂದು ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳಲು > ಆ ನೌಕೆಯು ಗುರು ಗ್ರಹವನ್ನು ಸುತ್ತಿ ಹೋದದ್ದು ಕ್ರಿ.ಶ.2007ರ ಫೆಬ್ರವರಿಯಲ್ಲಿ. > ಕ್ರಿ.ಶ.2015ರ ಬೇಸಿಗೆಯ ಹೊತ್ತಿಗೆ ಅದು ಪ್ಲೂಟೊ ಮತ್ತು ಅದರ ಚಂದ್ರರ ಸುತ್ತಲೂ ಆರು ತಿಂಗಳ > ಕಾಲ ಬಾನಾಡಿಯಂತೆ ಸುತ್ತಿ ಸಾಕಷ್ಟು ವೈಜ್ಞಾನಿಕ ಮಾಹಿತಿಗಳನ್ನು ಗ್ರಹಿಸಿತು. ಇದೇ ಮೊದಲ > ಬಾರಿಗೆ ಪ್ಲೂಟೊ 'ಗ್ರಹ'ಕ್ಕೂ ನೀಲಾಗಾಸವಿರುವುದು ಪತ್ತೆಯಾಯಿತು. ಜತೆಗೆ ಅದರ ನೆಲದಲ್ಲಿ > ನೀರಿನ ಮಂಜುಗಡ್ಡೆಗಳ ಇರುವಿಕೆಯ ಕುರುಹೂ ಸಿಕ್ಕಿತು. ಈ ಸರ್ವೇಕ್ಷಣೆಯ ನಂತರವೂ ನೌಕೆಯ > ಆಯಸ್ಸು ಗಟ್ಟಿಯಿದ್ದ ಕಾರಣ, ಅದರ ಜೈತ್ರಯಾತ್ರೆಯನ್ನು ಮುಂದುವರಿಸಲಾಯಿತು. ಕ್ಯೂಪರ್ > ಬೆಲ್ಟ್‌ನ ಅಗಾಧ ಬ್ರಹ್ಮಾಂಡದಲ್ಲಿ ಹುದುಗಿರುವ ಶೀತಲ ವಾತಾವರಣದ ಅನೇಕ ಆಕಾಶಕಾಯಗಳತ್ತ ಈ > ನೌಕೆಯು ತನ್ನ ಗಮನ ಹರಿಸಲಿದೆ. ನೆಪ್ಚ್ಯೂನ್ ಗ್ರಹಕ್ಕಿಂತಲೂ ಶತಕೋಟಿ ಮೈಲುಗಳಾಚೆಯ > ಕಕ್ಷೆಯಲ್ಲಿ ಸುತ್ತುತ್ತಿರುವ ಇಂಥ ಆಕಾಶಕಾಯಗಳ ಕುರಿತು ಹೊಸ ಹೊಳಹುಗಳನ್ನು ನ್ಯೂ > ಹೊರೈಝಾನ್ಸ್ ಚೆಲ್ಲಲಿದೆಯೆಂಬ ನಿರೀಕ್ಷೆ ವಿಜ್ಞಾನಿಗಳದು. > > ಮತ್ತೆ ನಮ್ಮ ಪ್ಲೂಟೊನ ವರ್ಗೀಕರಣದ ವಿಷಯಕ್ಕೆ ಹೊರಳುವುದಾದರೆ, ಕ್ರಿ.ಶ.2006ರಲ್ಲಿ > ತೆಗೆದುಕೊಂಡ ನಿರ್ಧಾರ ತಪ್ಪು ಎಂದು ವಾದಿಸುವ ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. > ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿ ಕಿರ್ಬಿ ರುನ್ಯಾನ್ ಅವರು, > ''ಅದೆಂಥ ಪ್ರತಿಷ್ಠಿತ ಖಗೋಳವಿಜ್ಞಾನ ಸಂಸ್ಥೆ ನನ್ನ ವಾದವನ್ನು ಅಲ್ಲಗಳೆದರೂ ಸರಿ, ನಾನು > ಪ್ಲೂಟೊವನ್ನು ಇಂದಿಗೂ ಒಂದು ಗ್ರಹವೆಂದು ಪರಿಗಣಿಸುತ್ತೇನೆ. ಗ್ರಹಗಳಿಗಿರಬೇಕಾದ ಅಂತಃಸತ್ವ > ಪ್ಲೂಟೊನಲ್ಲಿದೆ. ಉದಾಹರಣೆಗೆ, ಇದುವರೆಗೂ ಬೈಜಿಕವಾಗಿ ಸಂಯೋಜನೆಯಾಗದೇ ಇರುವ ನಾಕ್ಷತ್ರಿಕ > ದ್ರವ್ಯವಿದೆ; ಗೋಳಾಕಾರವನ್ನು ಕಾಪಾಡಿಕೊಳ್ಳಲು ಬೇಕಾದ ಸ್ವಂತ ಗುರುತ್ವ ಬಲವಿದೆ. ಗುರುತ್ವ > ಬಲದ ಏರುಪೇರಿನಿಂದ ಮಧ್ಯರೇಖೆಯ ಬಳಿ ಕೊಂಚ ಉಬ್ಬಿದೆ. ಪ್ಲೂಟೊಗೆ ಹೊರತಾದ ಮತ್ತೊಂದು ಗ್ರಹ > ಅಥವಾ ಆಕಾಶಕಾಯದಿಂದಾಗಿ ಪ್ಲೂಟೊನ ಗುರುತ್ವ ಬಲದಲ್ಲಿ ಏರುಪೇರಾಗಿದೆಯೇ ವಿನಾ ಪ್ಲೂಟೊನ > ರಚನೆಯಿಂದಾಗಿ ಅಲ್ಲ,'' ಎಂದು ವಾದ ಮಂಡಿಸಿದ್ದಾರೆ. ಟೆಕ್ಸಾಸ್‌ನಲ್ಲಿ ಕಳೆದ ವರ್ಷ ಜರುಗಿದ > ವಿಜ್ಞಾನ ಸಮ್ಮೇಳನದಲ್ಲಿ ಅವರು ಮಂಡಿಸಿದ ಪ್ರಬಂಧದಲ್ಲಿ, ''ಗ್ರಹಗಳಿಗಿರಬೇಕಾದ ಎಲ್ಲ > ಅರ್ಹತೆಗಳನ್ನೂ ಪ್ಲೂಟೊ ಪಡೆದಿದೆ, ಕ್ರಿ.ಶ.2006ರಲ್ಲಿ ಹೊಸತಾಗಿ ಸೃಷ್ಟಿಸಿದ > ನಿಬಂಧನೆಯನ್ನು ಆ ಆಕಾಶಕಾಯಕ್ಕೆ ಅನ್ವಯಿಸುವ ಹಾಗಿಲ್ಲ. ನನ್ನ ಪ್ರಕಾರ ಗುರು ಗ್ರಹದ ಚಂದ್ರ > ಯುರೋಪಾ ಹಾಗೂ ಭೂಮಿಯ ಚಂದ್ರರನ್ನೂ ಸೌರವ್ಯೂಹದ ಗ್ರಹಗಳೆಂದೇ ಪರಿಗಣಿಸಬೇಕು,'' ಎಂದು > ಆಗ್ರಹಿಸಿದ್ದಾರೆ. > > ಇತ್ತ, ನ್ಯೂ ಹೊರೈಝಾನ್ಸ್ ಯೋಜನೆಯ ಪ್ರಧಾನ ಸಂಶೋಧಕರಾದ ಅಲನ್ ಸ್ಟರ್ನ್ ಅವರ ಪ್ರಕಾರ, > ''ಅಂತಾರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟವು ಗ್ರಹಗಳಿಗಿರಬೇಕಾದ ಮಾನದಂಡಗಳನ್ನು ಅನ್ವಯಿಸುವ > ವಿಷಯದಲ್ಲಿ ಪಕ್ಷಪಾತ ವಹಿಸುತ್ತಿದೆ. ಭೂಮಿ, ಮಂಗಳ, ಗುರು ಹಾಗೂ ನೆಪ್ಚ್ಯೂನ್‌ಗಳೂ ತಮ್ಮ > ಕಕ್ಷೆಯೊಳಗೆ ಕ್ಷುದ್ರ ಗ್ರಹಗಳ ಕಕ್ಷೆಯನ್ನು ಬಿಟ್ಟುಕೊಂಡಿವೆ. ಪ್ಲೂಟೊವನ್ನು ಗ್ರಹ > ಕೂಟದಿಂದ ಆಚೆಗಟ್ಟುವುದಾದರೆ ಉಳಿದ ನಾಲ್ಕು ಗ್ರಹಗಳನ್ನೂ ಗ್ರಹವೆನ್ನಲಾಗದು.'' ಇವರ > ಮಾತನ್ನು ಪುಷ್ಟೀಕರಿಸುವಂತೆ 'ಯೂನಿವರ್ಸಿಟಿ ಆಫ್ ಸೆಂಟ್ರಲ್ ಫ್ಲಾರಿಡಾ'ದ ಗ್ರಹ > ವಿಜ್ಞಾನಿ ಫಿಲಿಪ್ ಮೆಟ್ಝ್‌ಜೆರ್ ಅವರು ಕಳೆದ ಬುಧವಾರದ 'ಐಕಾರಸ್' ಎಂಬ ವಿಜ್ಞಾನ > ಪತ್ರಿಕೆಯಲ್ಲಿ ಪ್ರಬಂಧವೊಂದನ್ನು ಪ್ರಕಟಿಸಿದ್ದಾರೆ. ಗ್ರಹಗಳ ಕುರಿತು ಕಳೆದ ಇನ್ನೂರು > ವರ್ಷಗಳಲ್ಲಿ ಪ್ರಕಟವಾಗಿರುವ ಎಲ್ಲ ಪ್ರೌಢ ಪ್ರಬಂಧಗಳನ್ನು ಪರಿಶೀಲಿಸಿರುವ ಅವರು, > ಯಾವುದರಲ್ಲೂ ಇಂಥ (ಕ್ರಿ.ಶ.2006ರಲ್ಲಿ ಜಾರಿಮಾಡಿದ) ಮಾನದಂಡವೊಂದರ > ಪ್ರಸ್ತಾಪವಿಲ್ಲವೆಂದಿದ್ದಾರೆ. ಕಕ್ಷೆಯ ಹಸ್ತಕ್ಷೇಪ ನಿರ್ಬಂಧ ಕುರಿತಂತೆ ಕ್ರಿ.ಶ.1802ರ > ಪ್ರಬಂಧವೊಂದರಲ್ಲಿ ಉಲ್ಲೇಖವಿದ್ದರೂ ಆ ಬಗ್ಗೆ ಖಚಿತವಾದ ಲೆಕ್ಕಾಚಾರಗಳಿಲ್ಲವೆಂದು > ಹೇಳಿದ್ದಾರೆ. ಗೆಲಿಲಿಯೋ ಕಾಲದಿಂದಲೂ ಶನಿ ಗ್ರಹದ ಟೈಟಾನ್ ಹಾಗೂ ಗುರು ಗ್ರಹದ > ಯೂರೋಪಾಗಳನ್ನು ಗ್ರಹಗಳೆಂದು ಪರಿಗಣಿಸಬೇಕೆಂಬ ಒತ್ತಾಯಗಳಿದ್ದವು ಎಂದಿದ್ದಾರೆ. ಈ ವಿಷಯ > ಬರೆಯುವಾಗ ಅವರು ಹೇಳುತ್ತಾರೆ- ''ಹೊಸ ಮಾನದಂಡವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಹೊರಟರೆ > ನಮ್ಮ ಸೌರಮಂಡಲದಲ್ಲಿನ ಯಾವ ಆಕಾಶಕಾಯಕ್ಕೂ ಗ್ರಹವೆಂಬ ಪಟ್ಟ ಸಿಗುವುದಿಲ್ಲ. ಅಥವಾ ಇಂದಿನ > ಬಳಕೆಯ ಮಾನದಂಡವನ್ನು ಸ್ಥೂಲವಾಗಿ ಬಳಸಿಕೊಂಡರೆ ನಮ್ಮ ಸೌರಮಂಡಲದಲ್ಲಿ ನೂರರಿಂದ ನೂರಾಹತ್ತು > ಆಕಾಶಕಾಯಗಳನ್ನು ಗ್ರಹದ ದರ್ಜೆಗೆ ಏರಿಸಬೇಕು''. > > ಸಾಕಷ್ಟು ಸಂಖ್ಯೆಯಲ್ಲಿರುವ ಪ್ಲೂಟೊ ಪರ ವಿಜ್ಞಾನಿಗಳ ಪ್ರಕಾರ, ''ನಮ್ಮ ಸೌರಮಂಡಲದಲ್ಲಿ > ಭೂಮಿಯನ್ನು ಹೊರತುಪಡಿಸಿದರೆ ಸಂಕೀರ್ಣವಾದ ಭೂರಚನೆಯಿರುವುದು ಪ್ಲೂಟೊದಲ್ಲಿ ಮಾತ್ರ, ಉಳಿದ > ಯಾವ ಗ್ರಹಗಳಲ್ಲೂ ಇಂಥ ವೈಶಿಷ್ಟ್ಯವಿಲ್ಲ. ಮಂಗಳ ಗ್ರಹಕ್ಕಿಂತಲೂ ಹೆಚ್ಚು ಸಂಚಲನಶೀಲ ಹಾಗೂ > ಜೀವಂತ ಗ್ರಹÜ ಪ್ಲೂಟೊ. ಹಲವಾರು ಚಂದ್ರರೊಡಗೂಡಿದ ಪ್ಲೂಟೊದಲ್ಲಿ ಬಹುಪದರದ ವಾತಾವರಣವಿದೆ; > ಇಂಗಾಲಾಧಾರಿತ ರಾಸಾಯನಿಕ ಸಂಯುಕ್ತಗಳಿವೆ, ನೆಲದಾಳದಲ್ಲಿ ಸಾಗರಗಳು ಹುದುಗಿವೆ. ಈ ಹಿಂದೆ > ಹರಿದಾಡಿರಬಹುದಾದ ನೀರು ಕಾಲುವೆಗಳ ಕುರುಹುಗಳನ್ನು ಅದು ಇನ್ನೂ ಉಳಿಸಿಕೊಂಡಿದೆ'. > > ಸದ್ಯಕ್ಕೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳುವುದಾದರೆ > ಪ್ಲೂಟೊಗೆ ಗ್ರಹವೆಂಬ ಬಿರುದು ಸಿಗುವ ದಿನಗಳು ಹತ್ತಿರದಲ್ಲಿವೆ. ಪ್ಲೂಟೊಗೆ ಅಂಥ ಸ್ಥಾನ > ಸಿಕ್ಕ ಕೂಡಲೇ ಮತ್ತಷ್ಟು ಆಕಾಶಕಾಯಗಳಿಗೆ ಗ್ರಹವಲ್ಲದಿದ್ದರೂ ಕುಬ್ಜ ಗ್ರಹಗಳ ಪಟ್ಟ > ಸಿಗಬಹುದು. > > > -- > HAREESHKUMAR K > GHS HUSKURU > MALAVALLI TQ > MANDYA DT 571475 > PH 9880328224 > e-mail [email protected] > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
