really you explain very good information sir

On Thu, Sep 13, 2018 at 8:18 AM Hareeshkumar K <[email protected]>
wrote:

> Look what I shared: ಇಜ್ಞಾನ ಡಾಟ್ ಕಾಮ್: ಕ್ಲೌಡ್ ಸ್ಟೋರೇಜ್ ಎಂಬ ಮಾಹಿತಿಯ ಮೋಡ
> @MIUI| http://www.ejnana.com/2018/09/cloud-storage.html?m=1
>
> ಕ್ಲೌಡ್ ಸ್ಟೋರೇಜ್ ಎಂಬ ಮಾಹಿತಿಯ ಮೋಡ
> *ಟಿ. ಜಿ. ಶ್ರೀನಿಧಿ*
>
>
> <https://3.bp.blogspot.com/-ydiof59PJdw/W5gQio7v6AI/AAAAAAAAp5A/KAQ-X7tB4v4ouVL7GJ5anZ7_VBYFfQDewCLcBGAs/s1600/cloud.jpg>
> ಕಂಪ್ಯೂಟರ್ ಪರಿಚಯವಾದ ಹೊಸತರಲ್ಲಿ ನಮಗೆ ಬೇಕಾದ ಮಾಹಿತಿಯನ್ನೆಲ್ಲ ಫ್ಲಾಪಿ, ಸೀಡಿ, ಪೆನ್
> ಡ್ರೈವ್‌ಗಳಲ್ಲಿ ಇಟ್ಟುಕೊಂಡು ಬೇಕೆಂದ ಕಡೆಗೆ ಕೊಂಡೊಯ್ಯುವ ಪರಿಪಾಠ ಇತ್ತು. ಇಮೇಲ್ ಬಳಕೆ
> ಎಲ್ಲೆಡೆಯಲ್ಲೂ ಇರದಿದ್ದಾಗ ಮಾಹಿತಿಯನ್ನು ಫ್ಲಾಪಿ-ಸೀಡಿಗಳಲ್ಲಿ ತುಂಬಿಸಿ ಅಂಚೆಮೂಲಕ
> ಕಳುಹಿಸುತ್ತಿದ್ದದ್ದೂ ಉಂಟು. ನಮ್ಮ ಕಂಪ್ಯೂಟರಿನಲ್ಲಷ್ಟೇ ಇರುವ ಮಾಹಿತಿಗೆ ಏನಾದರೂ
> ತೊಂದರೆಯಾದರೆ ಬೇಕಾಗುತ್ತದೆ ಎಂದು ಅದನ್ನೆಲ್ಲ ನಿರ್ದಿಷ್ಟ ಅವಧಿಗೊಮ್ಮೆ ಬೇರೊಂದು
> ಮಾಧ್ಯಮದಲ್ಲಿ ಪ್ರತಿಮಾಡಿಡುವ (ಬ್ಯಾಕಪ್) ಅಭ್ಯಾಸ ಕೂಡ ಕೆಲವರಿಗಿತ್ತು.
>
> ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಕಚೇರಿಯ ಕಡತ, ಪ್ರವಾಸದ ಫೋಟೋ, ಮಿತ್ರರ ಫೋನ್ ನಂಬರು,
> ಅವರು ಕಳಿಸಿದ ವಾಟ್ಸ್‌ಆಪ್‌ ಮೆಸೇಜುಗಳ ಪ್ರತಿ - ಎಲ್ಲವನ್ನೂ ನಾವು ಅಂತರಜಾಲದಲ್ಲೇ
> ಉಳಿಸಿಟ್ಟಿರುತ್ತೇವೆ; ಬೇಕಾದ ಕಡೆ ಬೇಕೆಂದ ಸಾಧನದಲ್ಲಿ ದೊರಕಿಸಿಕೊಳ್ಳುತ್ತೇವೆ. ನಮ್ಮ
> ಕಡತಗಳ ಹೆಚ್ಚುವರಿ ಪ್ರತಿಯೂ ಅಂತರಜಾಲದಲ್ಲೇ ಇರುತ್ತದೆ.
>
> ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವ ಪರಿಕಲ್ಪನೆಯ ಹೆಸರೇ ಕ್ಲೌಡ್.
>
> ಯಾವುದೇ ಮಾಹಿತಿಯನ್ನು ಒಂದು ಸ್ಥಳದಲ್ಲಿ (ಉದಾ: ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್)
> ಮಾತ್ರವೇ ಉಳಿಸಿಟ್ಟುಕೊಳ್ಳುವುದರಿಂದ ಹಲವು ಸಮಸ್ಯೆಗಳು ಉದ್ಭವಿಸುವುದು ಸಾಧ್ಯ.
> ಕಂಪ್ಯೂಟರಿನ ಭಾಗಗಳು ಕೆಟ್ಟರೆ, ಕುತಂತ್ರಾಂಶದ ಹಾವಳಿ ಕಾಣಿಸಿಕೊಂಡರೆ ನಮ್ಮ ಮಾಹಿತಿಯನ್ನು
> ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಕಷ್ಟ. ಇದರ ಬದಲು ಮಾಹಿತಿಯನ್ನೆಲ್ಲ ಹೆಚ್ಚು ಸಕ್ಷಮವಾದ
> ಬೇರೊಂದು ಸ್ಥಳದಲ್ಲಿ ಉಳಿಸಿಟ್ಟು ಅದನ್ನು ನಮಗೆ ಬೇಕಾದಾಗ ಅಂತರಜಾಲದ ಮೂಲಕ
> ಪಡೆದುಕೊಳ್ಳುವುದನ್ನು ಕ್ಲೌಡ್ ಪರಿಕಲ್ಪನೆ ಸಾಧ್ಯವಾಗಿಸುತ್ತದೆ.
>
> ನಾವು ಏಳೆಂಟು ವರ್ಷಗಳ ಹಿಂದೆ ಫೇಸ್‌ಬುಕ್‌ಗೆ ಸೇರಿಸಿದ್ದ ಚಿತ್ರಗಳು ಇವತ್ತಷ್ಟೇ ಕೊಂಡ
> ಮೊಬೈಲಿನಲ್ಲಿ ಕೂಡ ಥಟ್ಟನೆ ಕಾಣಿಸಿಕೊಳ್ಳುತ್ತವಲ್ಲ, ಅದರ ಹಿಂದಿರುವುದು ಇದೇ ಪರಿಕಲ್ಪನೆ.
> ಗೂಗಲ್ ಡ್ರೈವ್‌‌ನಲ್ಲಿ ಮಾಹಿತಿ ಉಳಿಸಿಟ್ಟಾಗ, ಬೇರೆಬೇರೆ ಸಾಧನಗಳ ಮೂಲಕ ನಮ್ಮ ಜಿಮೇಲ್
> ಖಾತೆ‌ಗೆ ಲಾಗಿನ್ ಆದಾಗಲೆಲ್ಲ ನಾವು ಬಳಸುವುದೂ ಇದೇ ಪರಿಕಲ್ಪನೆಯನ್ನು. ನಮ್ಮದೇ ಯಂತ್ರಾಂಶ
> ಉಪಕರಣಗಳನ್ನು ನಂಬಿಕೊಳ್ಳುವ ಬದಲಿಗೆ ಬೇರೆಲ್ಲೋ ಇರುವ ಶೇಖರಣಾ ವ್ಯವಸ್ಥೆಯನ್ನು ಅಂತರಜಾಲದ
> ಮೂಲಕ ಉಪಯೋಗಿಸಿಕೊಳ್ಳುತ್ತೇವಲ್ಲ, ಆ ಹೊರಗಿನ ವ್ಯವಸ್ಥೆಯನ್ನು ಮೋಡಕ್ಕೆ ಹೋಲಿಸಿ ಇದಕ್ಕೆ
> ಕ್ಲೌಡ್ ಎಂದು ಹೆಸರಿಡಲಾಗಿದೆ.
>
> ಅಂದಹಾಗೆ ಕ್ಲೌಡ್ ಬಳಕೆ ಮಾಹಿತಿ ಸಂಗ್ರಹಣೆಗೆ ಮಾತ್ರವೇ ಸೀಮಿತವೇನಲ್ಲ; ಅದರ ಜೊತೆಗೆ
> ತಂತ್ರಾಂಶಗಳು ಹಾಗೂ ಸಂಸ್ಕರಣಾ ಸಾಮರ್ಥ್ಯದಂತಹ ಇನ್ನಿತರ ಸಂಪನ್ಮೂಲಗಳೂ ಕ್ಲೌಡ್ ಮೂಲಕ
> ದೊರಕುತ್ತವೆ. ಆದರೆ ಮಾಹಿತಿ ಸಂಗ್ರಹಣೆಗಾಗಿ ಕ್ಲೌಡ್ ಬಳಕೆ ಹೆಚ್ಚು ವ್ಯಾಪಕ, ಹಾಗಾಗಿಯೇ
> ಅದಕ್ಕೆ ಹೆಚ್ಚಿನ ಪ್ರಾಮುಖ್ಯ. ಗ್ರಾಹಕರ ಮಾತು ಹಾಗಿರಲಿ, ಸರಕಾರಗಳಿಗೂ ಈ ಮೋಡದ ಮೇಲೆ
> ಕಣ್ಣು!
>
> ಮಾಹಿತಿಯನ್ನು ಕ್ಲೌಡ್‌ನಲ್ಲಿ ಸಂಗ್ರಹಿಸಿಡುವ ಇಂತಹ ವ್ಯವಸ್ಥೆಯನ್ನು ಒಟ್ಟಾರೆಯಾಗಿ
> 'ಕ್ಲೌಡ್ ಸ್ಟೋರೇಜ್' ಎಂದು ಕರೆಯುತ್ತಾರೆ. ಇಲ್ಲಿ ಬಳಕೆಯಾಗುವ ಶೇಖರಣಾ ಮಾಧ್ಯಮಕ್ಕೂ ನಾವು
> ಸಾಮಾನ್ಯವಾಗಿ ಬಳಸುವ ಶೇಖರಣಾ ಮಾಧ್ಯಮಗಳಿಗೂ ಹೆಚ್ಚು ವ್ಯತ್ಯಾಸವೇನೂ ಇರುವುದಿಲ್ಲ; ಆದರೆ
> ಇಲ್ಲಿ ಮಾಹಿತಿ ಶೇಖರವಾಗುವ ವಿಧಾನಕ್ಕೂ ನಮ್ಮ ಕಂಪ್ಯೂಟರಿನಲ್ಲಿ ಮಾಹಿತಿ ಉಳಿಸಿಡುವ
> ವಿಧಾನಕ್ಕೂ ನಡುವೆ ಅಜಗಜಾಂತರ!
>
> ನಮ್ಮ ವೈಯಕ್ತಿಕ ಕಂಪ್ಯೂಟರಿನಲ್ಲಿ ಉಳಿಸಿಟ್ಟ ಮಾಹಿತಿ ನಮ್ಮ ಹಾರ್ಡ್ ಡಿಸ್ಕ್‌ನಲ್ಲಿ
> ಮಾತ್ರವೇ ಇರುತ್ತದೆ. ಆ ಹಾರ್ಡ್ ಡಿಸ್ಕ್ ಅನ್ನು ಯಾವ ಕಂಪ್ಯೂಟರಿಗೆ ಸಂಪರ್ಕಿಸುತ್ತೇವೋ
> ನಮ್ಮ ಮಾಹಿತಿಯನ್ನು ಆ ಕಂಪ್ಯೂಟರಿನಲ್ಲಿ ಮಾತ್ರ ತೆರೆಯುವುದು ಸಾಧ್ಯ. ಆದರೆ ಕ್ಲೌಡ್
> ಸ್ಟೋರೇಜಿನಲ್ಲಿ ಹಾಗಲ್ಲ. ಅಲ್ಲಿ ಸಂಗ್ರಹಿಸಿಟ್ಟ ನಮ್ಮ ಮಾಹಿತಿಯನ್ನು ಅಂತರಜಾಲ ಸಂಪರ್ಕ
> ಬಳಸಿ - ನಾವು ಯಾವ ಕಂಪ್ಯೂಟರನ್ನೇ ಬಳಸುತ್ತಿದ್ದರೂ - ಮತ್ತೆ ಪಡೆದುಕೊಳ್ಳಬಹುದು, ನಮಗೆ
> ಬೇಕಾದಾಗಲೆಲ್ಲ ಆ ಮಾಹಿತಿಯನ್ನು ಥಟ್ಟನೆ ಇತರರೊಡನೆ ಹಂಚಿಕೊಳ್ಳಲೂಬಹುದು. ಹಾರ್ಡ್
> ಡಿಸ್ಕ್‌ನಲ್ಲಿ ಜಾಗ ಮುಗಿಯುವ ಚಿಂತೆಯೇ ಇಲ್ಲದಂತೆ ಎಷ್ಟು ಬೇಕಾದರೂ ಮಾಹಿತಿಯನ್ನು
> (ಕೆಲವೊಮ್ಮೆ ನಿರ್ದಿಷ್ಟ ಶುಲ್ಕ ಪಾವತಿಸಿ) ಕ್ಲೌಡ್ ಸ್ಟೋರೇಜಿನಲ್ಲಿ ಉಳಿಸಿಡುತ್ತಲೇ
> ಇರಬಹುದು.
>
> ಇದು ಕೇಳಲು ಬಹಳ ಸರಳವೆಂದು ತೋರುತ್ತದೆ, ನಿಜ. ಆದರೆ ಅಗಾಧ ಪ್ರಮಾಣದ ಮಾಹಿತಿಯನ್ನು
> ಅಂತರಜಾಲದ ಮೂಲಕ ಯಾವುದೇ ಅಡಚಣೆಗಳಿಲ್ಲದೆ ಒದಗಿಸಲು ಕ್ಲೌಡ್ ಸ್ಟೋರೇಜ್ ವ್ಯವಸ್ಥೆಗಳು ಬಹಳ
> ಸಂಕೀರ್ಣ ವಿನ್ಯಾಸವನ್ನು ಬಳಸುತ್ತವೆ. ನಮ್ಮ ಮಾಹಿತಿಯ ಇತ್ತೀಚಿನ ಪ್ರತಿಗಳನ್ನು ಹಲವಾರು
> ಕಡೆ ಶೇಖರಿಸಿಟ್ಟುಕೊಳ್ಳುವುದು ಈ ವಿನ್ಯಾಸದ ಒಂದು ಭಾಗ. ಈ ಪೈಕಿ ಯಾವುದೋ ಒಂದು
> ಪ್ರತಿಯಲ್ಲಿ ತೊಂದರೆ ಕಾಣಿಸಿಕೊಂಡರೂ ಅಲ್ಲಿನ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾದರೂ ಇತರ
> ಪ್ರತಿಗಳಲ್ಲಿ ಯಾವುದೋ ಒಂದು ನಮಗೆ ದೊರಕುವಂತಿರುತ್ತದೆ ಎನ್ನುವುದು ಇದರ ಉದ್ದೇಶ.
> ಮಾಹಿತಿಯನ್ನು ಹೀಗೆ ಶೇಖರಿಸಿಡುವ ಕೇಂದ್ರಗಳನ್ನು ಕಂಪ್ಯೂಟರ್ ಪರಿಭಾಷೆಯಲ್ಲಿ ಡೇಟಾ
> ಸೆಂಟರುಗಳೆಂದು ಕರೆಯುವ ಅಭ್ಯಾಸವಿದೆ.
>
> ಇಂತಹ ಡೇಟಾ ಸೆಂಟರುಗಳು ವಿಶ್ವದ ಯಾವುದೇ ಮೂಲೆಯಲ್ಲಿ ಬೇಕಾದರೂ ಇರಬಹುದು, ಹಾಗೂ
> ಕ್ಲೌಡ್‌ನಲ್ಲಿ ಉಳಿಸಿಟ್ಟ ನಮ್ಮ ಮಾಹಿತಿ ಇಂತಹ ಯಾವುದೇ ಡೇಟಾಸೆಂಟರಿನಲ್ಲಿ
> ಶೇಖರವಾಗಿರಬಹುದು. ಇಂತಹ ಕಡೆಗಳಲ್ಲಿ ಉಳಿಸಿಟ್ಟ ಮಾಹಿತಿಯ ಸುರಕ್ಷತೆಗಾಗಿ ಕ್ಲೌಡ್
> ಸ್ಟೋರೇಜ್ ಸಂಸ್ಥೆಗಳು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ ಈ ಮಾಹಿತಿ ಬೇರೆ
> ಯಾವುದೋ ದೇಶದಲ್ಲಿದ್ದರೆ ನಮ್ಮ ಸರಕಾರಕ್ಕೆ, ಪೋಲೀಸ್ ಮತ್ತಿತರ ಇಲಾಖೆಗಳಿಗೆ ಅದರ ಮೇಲೆ
> ಯಾವುದೇ ನಿಯಂತ್ರಣ ಇರುವುದಿಲ್ಲ. ನಮ್ಮ ದೇಶದ ಮಾಹಿತಿಯನ್ನು ನಮ್ಮ ದೇಶದಲ್ಲೇ ಉಳಿಸಿಡಿ
> ಎಂದು ತಂತ್ರಜ್ಞಾನ ಸಂಸ್ಥೆಗಳ ಮೇಲೆ ಸರಕಾರ ಒತ್ತಡ ಹೇರುತ್ತಿರುತ್ತದಲ್ಲ, ಇಂತಹ
> ಪರಿಸ್ಥಿತಿಯನ್ನು ತಪ್ಪಿಸುವುದೇ ಅದರ ಉದ್ದೇಶ.
>
> ತಂತ್ರಜ್ಞಾನ ಕ್ಷೇತ್ರದ ಹಲವು ದಿಗ್ಗಜ ಸಂಸ್ಥೆಗಳು ಕ್ಲೌಡ್ ಸ್ಟೋರೇಜ್ ಸೇವೆ
> ಒದಗಿಸುತ್ತಿರುವುದರಿಂದ ಈ ವ್ಯವಸ್ಥೆಯ ವಿಶ್ವಾಸಾರ್ಹತೆ ಸಾಕಷ್ಟು ಉನ್ನತ ಮಟ್ಟದಲ್ಲಿಯೇ ಇದೆ
> ಎನ್ನಬಹುದು. ಆದರೆ ಇಂತಹ ಬಹುತೇಕ ವ್ಯವಸ್ಥೆಗಳಲ್ಲಿ ನಮ್ಮ ಪಾಸ್‌ವರ್ಡ್ ಬಲ್ಲ ಯಾರು
> ಬೇಕಾದರೂ ನಮ್ಮ ಮಾಹಿತಿಯನ್ನು ಪಡೆದುಕೊಳ್ಳುವುದು ಸಾಧ್ಯ. ಹೀಗಾಗಿ, ಬೇರೆಲ್ಲ ಕಡೆಗಳಲ್ಲಿ
> ಮಾಡುವಂತೆ, ನಮ್ಮ ಪಾಸ್‌ವರ್ಡ್ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕಾದ್ದು ಇಲ್ಲಿಯೂ
> ಅತ್ಯಗತ್ಯ. ಮುಖ್ಯವಾದ ಮಾಹಿತಿಯನ್ನು ಕ್ಲೌಡ್ ಸ್ಟೋರೇಜಿನಲ್ಲಿ ಮಾತ್ರವೇ ಇಡದೆ ಬೇರೆಯೂ
> ಒಂದು ಕಡೆ ಉಳಿಸಿಟ್ಟುಕೊಳ್ಳುವುದು ಕೂಡ ಒಳ್ಳೆಯದು.
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>


-- 

*Mallesha*

*Assistant teacher*

*GHS Haradanahalli*
*Chamarajanagara district*

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to