ಒಳ್ಳೆಯ ಮಾಹಿತಿ ಸಂಗ್ರಹ...

On Nov 9, 2017 11:03 PM, "Hydarali K Tahasildar Gangavathi" <
hydaraligangava...@gmail.com> wrote:

> *268ನೇ ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯಗಳು*
> 🌹🌹🌹🌹🌹🌹🌹
> ಮಾಹಿತಿ ಸಂಗ್ರಹ:- *ಹೈದರಅಲಿ.ಕೆ.ತಹಶೀಲ್ದಾರ*
>          *ಗಂಗಾವತಿ*
>
> *ಟಿಪ್ಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟೀಪು ಸುಲ್ತಾನ್*
>   *(1735 ಮೇ4, 1799),  1782 ರಿಂದ ಮೈಸೂರು ಸಂಸ್ಥಾನದ ರಾಜ ಹಾಗೂ ಭಾರತದಲ್ಲಿಬ್ರಿಟೀಷ್
> ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ
> ಪರಿಣಾಮವಾಗಿ ಟೀಪುವಿಗೆ ಶೇರ್-ಎ-ಮೈಸೂರ್(ಮೈಸೂರ ಹುಲಿ) ಎಂಬ ಬಿರುದು ಉಂಟು. ಮೈಸೂರಿನ
> ಇತಿಹಾಸದಲ್ಲಿ ಮರೆಯಲಾಗದ ಹೆಸರು ಈತನದು.*
>
> *ಬಾಲ್ಯ*
>
> *ಟಿಪ್ಪು ಸುಲ್ತಾನ್ ಹುಟ್ಟಿದ್ದು (2೦ ನವಂಬರ್ 1750), ಇಂದಿನ ಬೆಂಗಳೂರು ಗ್ರಾಮಾಂತರ
> ಜಿಲ್ಲೆಯ ದೇವನಹಳ್ಳಿಯಲ್ಲಿ (ಬೆಂಗಳೂರು ನಗರದಿಂದ ಸುಮಾರು 33 ಕಿ.ಮೀ. ದೂರ)*
>
> *ವ್ಯಕ್ತಿತ್ವ*
>
> ಟಿಪ್ಪು ತನ್ನನ್ನು ನಾಗರಿಕ ಟೀಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ
> ಯಾವುದೇ ಸಾಮ್ರಾಜ್ಯಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ
> ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು. ಅನೇಕ ಹಿಂದೂ ದೇವಾಲಯಗಳಿಗೆ ದಾನ
> ದತ್ತಿಗಳನ್ನು ಕೊಟ್ಟಿದ್ದನು.
>
> *ಸಾಧನೆ*
>
> ಮೈಸೂರನ್ನು ರಕ್ಷಿಸಲು ಬ್ರಿಟಿಷರೊಂದಿಗೆ ಹೋರಾಡಿದನು.ಬ್ರಿಟಿಷರೊಂದಿಗೆ ಹೋರಾಡಲು
> ನೆಪೋಲಿಯನ್ನನ ನೆರವನ್ನು ಪಡೆಯಲು ಪ್ರಯತ್ನಿಸಿದನು.ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ
> ಪರಿಚಯಿಸಿದ ಮೊದಲ ವ್ಯಕ್ತಿ.ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು
> ಪರಿಚಯಿಸಿದನು.ಕುಣಿಗಲ್‍‍ನಲ್ಲಿ ಕುದುರೆ ಫಾರಂ ಸ್ಥಾಪಿಸಿದನು.
>
> *ಬ್ರಿಟಿಷರೊಂದಿಗೆ ಯುದ್ಧಗಳು*
>
> *ಒಂದನೆಯ ಮೈಸೂರು ಯುದ್ಧ*
> (1766-1769)
>
> *ಮೈಸೂರು ರಾಜ್ಯಕ್ಕೂ ಬ್ರಿಟೀಷರಿಗೂ ನಡೆದ ಯುದ್ಧ. ಈ ಯುದ್ಧ ಸರಣಿಯಲ್ಲಿ ಮೊದಲನೆಯದು.
> ಮೈಸೂರಿನ ಆಡಳಿತಾಧಿಕಾರಿ ಹೈದರಾಲಿಯ ಚಟುವಟಿಕೆಗಳನ್ನು ಮದರಾಸು ಪ್ರಾಂತದ ಬ್ರಿಟೀಷರು
> ಗಂಭೀರವಾಗಿ ಪರಿಗಣಿಸಿದರು. 1766ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮನೊಂದಿನ ಒಪ್ಪಂದ
> ಮಾಡಿಕೊಂಡು, ಅದರ ಪ್ರಕಾರ, ತಮ್ಮಿಬ್ಬರ ಸಮಾನ ಶತ್ರುವಾಗಿದ್ದ ಹೈದರಾಲಿಯ ವಿರುದ್ಧ
> ಬಳಸಲಿಕ್ಕಾಗಿ ಸೈನ್ಯವನ್ನು ಪೂರೈಸಿದರು.ಆದರೆ, ಈ ಒಪ್ಪಂದವಾದ ಸ್ವಲ್ಪ ಸಮಯದಲ್ಲಿಯೇ,
> ಹೈದರಾಲಿ ಮತ್ತು ನಿಜಾಮ ರಹಸ್ಯ ಒಪ್ಪಂದಕ್ಕೆ ಬಂದು, ಬ್ರಿಟೀಷರ ಕರ್ನಲ್ ಸ್ಮಿತ್‍ನ ಸಣ್ಣ
> ಸೇನೆಯ ಮೇಲೆ ತಮ್ಮ ಒಕ್ಕೂಟದ 5೦,೦೦೦ ಸಿಪಾಯಿಗಳು ಮತ್ತು 1೦೦ ತುಪಾಕಿಗಳ ಸೇನೆಯನ್ನು
> ನುಗ್ಗಿಸಿದರು. ಸಂಖ್ಯೆಯಲ್ಲಿ ಸಣ್ಣದಿದ್ದರೂ, ಬ್ರಿಟೀಷ್ ಪಡೆಗಳು,ಶಿಸ್ತು ಮತ್ತು ಉತ್ತಮ
> ತರಬೇತಿಯಿಂದಾಗಿ, ಒಕ್ಕೂಟದ ಸೇನೆಯನ್ನು ಮೊದಲು ಚೆಂಗಮ್ ಎಂಬಲ್ಲಿಯೂ ( ಸೆಪ್ಟೆಂರ್‍ 3,
> 1767)ಮತ್ತೆ , ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ತಿರುವಣ್ಣಾಮಲೈಯಲ್ಲಿಯೂ
> ಹಿಮ್ಮೆಟ್ಟಿಸಿದರು.ಪಶ್ಚಿಮ ತೀರದ ತನ್ನ ನವೀನ ನೌಕಾಪಡೆ ಮತ್ತು ಕೋಟೆಗಳನ್ನು ಕಳೆದುಕೊಂಡ
> ನಂತರ ಹೈದರಾಲಿಯು ಸಂಧಾನಕ್ಕೆ ಬಂದನು. ಈ ಸಂಧಾನದ ಕೋರಿಕೆ ತಿರಸ್ಕೃತವಾಗಲು, ಹೈದರಾಲಿಯು
> ತನ್ನೆಲ್ಲ ಅಳಿದುಳಿದ ಸೈನ್ಯವನ್ನು ಒಗ್ಗೂಡಿಸಿ ಬ್ರಿಟೀಷರ ಮೇಲೇರಿ ಹೋದನು. ಕರ್ನಲ್ ಸ್ಮಿತ್
> ಬೆಂಗಳೂರಿಗೆ ಹಾಕಿದ್ದ ಮುತ್ತಿಗೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದಲ್ಲದೆ, ತನ್ನ
> ಸೇನೆಯೊಡನೆಮದರಾಸು ನಗರದ ಐದು ಮೈಲಿಯಷ್ಟು ಸಮೀಪದವರೆಗೂ ಬಂದು ತಲುಪಿದನು.ಈ ಯುದ್ಧದ
> ಪರಿಣಾಮವಾಗಿ ಏಪ್ರಿಲ್ 1769ರಲ್ಲಿ, ಎರದೂ ಪಕ್ಷಗಳೂ ತಾವು ಆಕ್ರಮಿಸಿದ ಪ್ರದೇಶಗಳನ್ನು
> ವಾಪಸು ಮಾಡಬೇಕೆಂದು ಮತ್ತು ಯುದ್ಧಗಳಲ್ಲಿ ಪರಸ್ಪರರ ಸಹಾಯಕ್ಕೆ ಬರುವಂತೆಯೂ ಒಪ್ಪಂದವಾಯಿತು.
> ಈ ಒಪ್ಪಂದವನ್ನು "ಮದ್ರಾಸ್ ಒಪ್ಪಂದ" ಎಂದು ಕರೆಯುತ್ತಾರೆ.*
>
> *ಎರಡನೆಯ ಮೈಸೂರು ಯುದ್ಧ*
> (1780-1784)
>
> *ಮೈಸೂರು ಸಂಸ್ಥಾನಕ್ಕೂ ಬ್ರಿಟಷರಿಗೂ ನಡೆದ ಯುದ್ಧದ ಸರಣಿಯಲ್ಲಿ ಎರಡನೆಯದು. ಅಮೆರಿಕದಲ್ಲಿ
> ನಡೆಯುತ್ತಿದ್ದ ಕ್ರಾಂತಿಕಾರಿ ಹೋರಾಟದ ಫಲವಾಗಿ ಬ್ರಿಟಷರು ಮತ್ತು ಫ್ರೆಂಚರ ನಡುವೆ ನಡೆದ
> ಕದನದ ಸುಳಿಯಲ್ಲಿ ಫ್ರೆಂಚರ ಸ್ನೇಹದಲ್ಲಿದ್ದ ಮೈಸೂರು ಕೂಡಾ ಸಿಕ್ಕಿತು. ಆ ಕಾಲದಲ್ಲಿ
> ಮೈಸೂರನ್ನು ಆಳುತ್ತಿದ್ದವನು ( ರಾಜಾ ಎಂಬ ಗೌರವನಾಮ ಇಲ್ಲದಿದ್ದರೂ) ಹೈದರ್‍
> ಆಲಿ.ಹಿಂದೊಮ್ಮೆ ಮರಾಠರ ವಿರುದ್ಧದ ಯುದ್ಧದಲ್ಲಿ ಬ್ರಿಟಿಷರ ವಿಶ್ವಾಸಘಾತುಕತನವನ್ನು ಕಂಡು
> ಕಿಡಿಕಿಡಿಯಾಗಿದ್ದ ಹೈದರ್‍ ಆಲಿ ಬ್ರಿಟಿಷರೊಂದಿಗೆ ಸೇಡು ತೀರಿಸಿಕೊಳ್ಳಲು, ಫ್ರೆಂಚರ
> ಸಹಾಯಕ್ಕೆ ಒಮ್ಮನಸ್ಸಿನಿಂದ ಧುಮುಕಿದ. 1778ರಲ್ಲಿ ಬ್ರಿಟನ್ ಮೇಲೆ ಯುದ್ಧ ಸಾರಿದಾಗ,
> ಈಗಾಗಲೇ ಮದರಾಸಿನಲ್ಲಿ ಬಲವಾಗಿ ಬೇರು ಬಿಟ್ಟಿದ್ದ ಬ್ರಿಟೀಷರು, ಫ್ರೆಂಚರನ್ನು ಭಾರತದಿಂದ
> ಓಡಿಸುವ ಪಣ ತೊಟ್ಟರು.ಮಲಬಾರ್‍ ತೀರದ ಮಾಹೆಯನ್ನು ಗೆದ್ದುಕೊಂಡ ಬ್ರಿಟೀಷರು, ಹೈದರನ
> ಆಶ್ರಿತನೊಬ್ಬನ ಕೆಲ ಭೂಭಾಗಗಳನ್ನೂ ಸ್ವಾಧೀನಕ್ಕೆ ತೆಗೆದುಕೊಂಡರು. ಸೇಡು ತೀರಿಸಿಕೊಳ್ಳಲು
> ಅವಕಾಶಕ್ಕಾಗಿ ಕಾಯುತ್ತಿದ್ದ ಹೈದರಾಲಿಯು, ಮರಾಠರು ತನ್ನಿಂದ ಕಿತ್ತುಕೊಂಡ ಪ್ರದೇಶಗಳನ್ನು
> ಮರುಪಡೆಯುವುದರಲ್ಲಿ ಯಶಸ್ವಿಯಾದನು.ಕೃಷ್ಣಾ ನದಿಯವರೆಗೆ ಹರಡಿದ್ದ ತನ್ನ ರಾಜ್ಯದಿಂದ, ಬೆಂಕಿ
> ಹೊತ್ತಿ ಉರಿಯುತ್ತಿದ್ದ ಗ್ರಾಮಗಳ ಮಧ್ಯೆ, ಕಣಿವೆ, ಘಟ್ಟಗಳನ್ನು ಬಳಸಿಕೊಂಡು, ಮದರಾಸಿನಿಂದ
> ಕೇವಲ 45 ಮೈಲಿ ( 72 ಕಿ.ಮೀ.) ದೂರದ ಕಾಂಜೀವರವನ್ನು ಒಂದಷ್ಟೂ ಪ್ರತಿರೋಧ ವಿಲ್ಲದೆ
> ತಲುಪಿದನು. ಮದರಾಸಿನ ಸೈಂಟ್ ಥಾಮಸ್ ಮೌಂಟಿನಲ್ಲಿ 5200 ಸೈನಿಕರೊಂದಿಗೆ ಬೀಡುಬಿಟ್ಟಿದ್ದ,
> ಸರ್‍ ಹೆಕ್ಟರ್‍ ಮನ್ರೋಗೆ ಬೆಂಕಿಯ ಜ್ವಾಲೆಗಳು ಕಾಣಿಸಿದ ನಂತರವೇ ಬ್ರಿಟೀಷರ
> ಪ್ರತಿಕ್ರಿಯೆಗೆ ಚಾಲನೆ ಸಿಕ್ಕಿತು.ಗುಂಟೂರಿಂದ ವಾಪಸು ಕರೆಸಿದ್ದ ಕರ್ನಲ್ ಬೈಲೀಯ ಕೈಕೆಳಗಿನ
> ಸಣ್ಣ ಸೈನ್ಯವನ್ನು ಹೈದರಾಲಿಯನ್ನು ಎದುರಿಸಲು ಕಳುಹಿಸಲಾಯಿತು. ಅಪ್ರತಿಮ ಧೈರ್ಯದಿಂದ
> ಕಾದಾಡಿದರೂ, ಬೈಲಿಯ 2800ಜನರ ಸೇನೆ ಸಂಪೂರ್ಣ ಸೋಲಪ್ಪಿತು. ಆದಿನ 1780ರ ಸೆಪ್ಟೆಂಬರ್‍ ೧೦,
> 1982ರಲ್ಲಿ ಹೈದರಾಲಿ ಬೆನ್ನುಮೊಳೆ ರೋಗದಿಂದ ಮರಣ ಹೊಂದಿದನು. 1984ರಲ್ಲಿ ಮಂಗಳೂರು
> ಒಪ್ಪಂದದೊಂದಿಗೆ ಯುದ್ದ ಮುಕ್ತಾಯವಾಯಿತು.*
>
> 🌹🌹 *ಹೈದರಅಲಿ.ಕೆ.ತಹಶೀಲ್ದಾರ*
>          *ಗಂಗಾವತಿ*🌹🌹
>
> *ಮೂರನೆಯ ಮೈಸೂರು ಯುದ್ಧ*
> (1789-1792)
>
> *ಮೈಸೂರು ರಾಜ್ಯಕ್ಕೂ ಬ್ರಿಟಿಷರಿಗೂ ನಡೆದ ಯುದ್ಧ. ನಾಲ್ಕು ಬಾರಿ ನಡೆದ ಯುದ್ಧ ಸರಣಿಯಲ್ಲಿ
> ಇದು ಮೂರನೆಯದು. ಫ್ರೆಂಚರೊಂದಿಗೆ ಮೈತ್ರಿಯಿದ್ದ ಮೈಸೂರಿನ ರಾಜ ಟಿಪ್ಪು ಸುಲ್ತಾನನು
> ಬ್ರಿಟಿಷ್ ಅಧೀನದಲ್ಲಿದ್ದ ಟ್ರಾವಂಕೂರಿನ ಮೇಲೆ 1786ರಲ್ಲಿ ದಂಡೆತ್ತಿ ಹೋದನು. ಆಗ
> ಪ್ರಾರಂಭವಾದ ಯುದ್ಧ ಮುಂದಿನ ಮೂರು ವರ್ಷಗಳವರೆಗೆ ಮುಂದುವರೆದು ಟಿಪ್ಪೂ ಸುಲ್ತಾನನ
> ಪರಾಭವದೊಂದಿಗೆ ಪರ್ಯವಸಾನಗೊಂಡಿತು.ತಮ್ಮದೇ ದೇಶದ ಫ್ರೆಂಚ್ ಕ್ರಾಂತಿಯನ್ನು
> ಎದುರಿಸುವುದರಲ್ಲಿ ಮಗ್ನರಾದ ಫ್ರೆಂಚರು, ಬ್ರಿಟಿಷರ ನೌಕಾದಳದಿಂದಲೂ
> ಹಿಮ್ಮೆಟ್ಟಿಸಲ್ಪಟ್ಟುದರಿಂದ, ಟಿಪ್ಪು ಸುಲ್ತಾನನ ನಿರೀಕ್ಷೆಯಂತೆ ಬೆಂಬಲ ನೀಡಲಿಲ್ಲ.
> ಟಿಪ್ಪು ಸುಲ್ತಾನ ರಾಕೆಟ್ಟುಗಳ ಪಡೆಯಿಂದ ಧಾಳಿ ಮಾಡಿದ್ದು ಈ ಯುದ್ಧದ ಹೆಗ್ಗಳಿಕೆ. ಈ ಧಾಳಿಯ
> ಪರಿಣಾಮ ನೋಡಿ ಮಾರುಹೋದ ಬ್ರಿಟಿಷ್ ವಿಜ್ಞಾನಿ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್
> ರಾಕೆಟುಗಳನ್ನು ಸಂಶೋಧಿಸಿದನು.ಈ ಯುದ್ಧದ ಪರಿಣಾಮವಾಗಿ ಟಿಪ್ಪುವು ತನ್ನ ರಾಜ್ಯದ ಕೆಲ
> ಭಾಗಗಳನ್ನು ಬ್ರಿಟಿಷರ ಬೆಂಬಲಿಗರೋ, ಏಜಂಟರೋ ಆಗಿದ್ದ ಮರಾಠರು, ಹೈದರಾಬಾದಿನ ನಿಜಾಮ ಮತ್ತು
> ಮದ್ರಾಸ್ ಪ್ರೆಸಿಡೆನ್ಸಿಗಳವರಿಗೆ ಹಂಚಿಕೊಡಬೇಕಾಗಿ ಬಂದು, ಇದರಿಂದ ಮೈಸೂರು ರಾಜ್ಯದ
> ವಿಸ್ತೀರ್ಣ ತೀವ್ರವಾಗಿ ಕುಸಿಯಿತು.ಮಲಬಾರ್‍, ಸೇಲಂ, ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳು
> ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಹೋದವು. ಈ ಯುದ್ಧದ ಕೊನೆಯಲ್ಲಿ ಶ್ರೀರಂಗಪಟ್ಟಣದ
> ಒಪ್ಪಂದವಾಗಿ, ಅದರ ಪ್ರಕಾರ ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬ್ರಿಟಿಷರಿಗೆ
> ಒಪ್ಪಿಸಿದ್ದಷ್ಟೇ ಅಲ್ಲದೇ, ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಗಿ
> ಬಂದಿತು.*
>
> *ನಾಲ್ಕನೆಯ ಮೈಸೂರು ಯುದ್ಧ*
> (1779 – 1799)
>
> *ಬ್ರಿಟೀಷರಿಗೂ ಮೈಸೂರು ರಾಜ್ಯಕ್ಕೂ ನಡೆದ ಯುದ್ಧ ಸರಣಿಯಲ್ಲಿ ನಾಲ್ಕನೆಯ ಹಾಗೂ ಕಡೆಯ
> ಯುದ್ಧ. ಆಗಿನ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಪದವಿಯು ಲಾರ್ಡ್
> ಕಾರ್ನವಾಲೀಸನಿಂದ ಜನರಲ್ ಹ್ಯಾರಿಸನಿಗೆ ಹಸ್ತಾಂತರ ಗೊಂಡಿತ್ತು. 1797ರಲ್ಲಿ ನೆಪೋಲಿಯನ್,
> ಭಾರತವನ್ನು ಹೆದರಿಸುವ ಉದ್ದೇಶದಿಂದ, ಈಜಿಪ್ಟಿನಲ್ಲಿ ಬಂದಿಳಿದ. ಈ ಉದ್ದೇಶ ಸಾಧನೆಗೆ,
> ಫ್ರಾನ್ಸಿನ ಮಿತ್ರನಾಗಿದ್ದ, ಮೈಸೂರಿನ ದೊರೆ ಟಿಪ್ಪು ಸುಲ್ತಾನ ಮುಖ್ಯವಾಗಿದ್ದ.ಹೊರಾಷಿಯೋ
> ನೆಲ್ಸನ್ನನು ನೆಪೋಲಿಯನ್ನನನ್ನು ನೈಲ್ ಯುದ್ಧದಲ್ಲಿ ಸೋಲಿಸಿ, ಈ ಆಸೆಯನ್ನು ಭಂಗಗೊಳಿಸಿದರೂ,
> ಮೂರು ಸೇನೆಗಳು ( ಒಂದು ಬಾಂಬೆ, ಎರಡು ಬ್ರಿಟೀಶ್ ) ಅಷ್ಟಕ್ಕೆ ನಿಲ್ಲದೆ ಮುನ್ನುಗ್ಗಿ
> ೧೭೯೯ರಲ್ಲಿ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದವು. ಮೇ ನಾಲ್ಕರಂದು ಈ
> ಸೇನೆಗಳು ಕೋಟೆಯ ಭಾಗವೊಂದನ್ನು ಭಗ್ನಮಾಡಿ, ಒಳನುಗ್ಗತೊಡಗಿದರು. ಅಲ್ಲಿಗೆ ಧಾವಿಸಿದ ಟಿಪ್ಪು
> ಸುಲ್ತಾನ ಗುಂಡೇಟಿನಿಂದ ಅಸುನೀಗಿದ.ಈ ಕಾರ್ಯದಲ್ಲಿ ಟಿಪ್ಪುವಿನ ಸೇನಾಧಿಕಾರಿ ಮೀರ್ ಸಾದಕ್
> ಎಂಬಾತ, ಬ್ರಿಟೀಷರೊಂದಿಗೆ ಶಾಮೀಲಾಗಿ, ಟಿಪ್ಪುವಿಗೆ ಎರಡು ಬಗೆದನು. ಯುದ್ಧದ ತೀವ್ರವಾಗಿದ್ದ
> ಸಮಯದಲ್ಲಿ ಮೀರ್ ಸಾದಕನು, ತನ್ನ ಸೇನಾ ತುಕಡಿಯನ್ನು ಸಂಬಳ ಪಡೆದುಕೊಳ್ಳಲು ಕಳುಹಿಸಿ, ಆ
> ಮೂಲಕ, ಬ್ರಿಟೀಷರು ಗೋಡೆ ಒಡೆದು ಒಳಬರಲು ಅನುವುಮಾಡಿಕೊಟ್ಟನು. ಅಷ್ಟೇ ಅಲ್ಲ,
> ನೆಲಮಾಳಿಗೆಯಲ್ಲಿ ಶೇಖರಿಸಿದ್ದ ಮದ್ದುಗುಂಡುಗಳ ಮೇಲೆ ನೀರು ಹೊಯ್ದು, ಅವು
> ನಿರುಪಯುಕ್ತವಾಗುವಂತೆ ಮಾಡಿದನು.ಈ ಯುದ್ಧದಲ್ಲಿ ಟಿಪ್ಪು ಸುಲ್ತಾನನು ರಾಕೆಟ್ಟುಗಳ ಉಪಯೋಗ
> ಮಾಡಿದ್ದು ಗಮನಾರ್ಹವಾಗಿತ್ತು. ಮೂರನೆಯ ಮತ್ತು ನಾಲ್ಕನೆಯ ಮೈಸೂರು ಯುದ್ಧಗಳಲ್ಲಿ ಈ
> ರಾಕೆಟ್ಟುಗಳ ಪರಿಣಾಮದಿಂದ ಪ್ರಭಾವಿತನಾದ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್
> ರಾಕೆಟ್ಟುಗಳನ್ನು ಸಂಶೋಧಿಸಿದನು. ಈ ಯುದ್ಧದ ಪರಿಣಾಮವಾಗಿ ಮೈಸೂರು ಬ್ರಿಟೀಷರ ವಶಕ್ಕೆ
> ಬಂದಿತು.ಒಡೆಯರ್ ವಂಶಕ್ಕೆ ಮರಳಿ ಅಧಿಕಾರ ದೊರೆತು, ಅವರಿಗೆ ಸಲಹಾಕಾರರಾಗಿ ಬ್ರಿಟೀಷ್
> ಕಮೀಷನರು ನೇಮಿಸಲ್ಪಟ್ಟರು. ಟಿಪ್ಪುವಿನ ಎಳೆಯ ಮಗ ಮತ್ತು ಉತ್ತರಾಧಿಕಾರಿ ಫತೇ ಆಲಿಯನ್ನು
> ಗಡೀಪಾರು ಮಾಡಲಾಯಿತು. ಮೈಸೂರು ರಾಜ್ಯವು ಬ್ರಿಟೀಷ್ ಅಧೀನ ಸಂಸ್ಥಾನವಾಯಿತು. ಕೊಯಮತ್ತೂರು,
> ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಬ್ರಿಟೀಷ್ ಭಾರತದ ಭಾಗವಾದವು.*
>
> 🌹🌹🌹 *ಹೈದರಅಲಿ.ಕೆ.ತಹಶೀಲ್ದಾರ*
>    *ಗಂಗಾವತಿ*🌹🌹🌹
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to