ಅದ್ಯಾರದೋ ಮನೆಗೋಗಿದ್ದ ಆ ಗುರುಗಳು ಈಗಷ್ಟೆ ನಮ್ಮ್ ಮನೆಗ್ ಕೂಡ ಬಂದಿದ್ರು
.
ಮನೆಯಲ್ಲಿ ಸಿರಿಧಾನ್ಯವಾದ ನವಣಕ್ಕಿಯ ಅನ್ನ ಮಾಡಿದ್ದೆ. ಎರಡನೇ ತುತ್ತು
ಬಾಯಿಗಿಡುತ್ತಿದ್ದಂತೆ ಗುರುಗಳು ‘ಇದ್ಯಾವ ಧಾನ್ಯ’ ಅಂತ್ ಕೇಳಿದ್ರು.

ಮಿಲ್ಲೆಟ್ಸ್, ಅಂದ್ರೆ #ಸಿರಿಧಾನ್ಯ ನವಣೆ ಬುದ್ಧಿ ಇದು ಅಂದೆ.

ಇದನ್ಯಾಕ್ ತಿಂತಿದಿಯಾ ಅಂತ್ ಕೇಳಿದ್ರು.

"ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ ಕಡಿಮೆ ಆಗುತ್ತದಂತೆ,
ನರದೌರ್ಬಲ್ಯ, ಸಂತಾನ ಸಮಸ್ಯೆ, ಅಜೀರ್ಣ ಸಮಸ್ಯೆ ಇತ್ಯಾದಿ ಏನಾದ್ರೂ ಇದ್ರೆ ಈ ಧಾನ್ಯಗಳನ್ನ
ತಿನ್ನೊದ್ರಿಂದಾ ಎಲ್ಲವೂ ಸರಿಯಾಗುತ್ತೆ ಅಂತಾ ಯೋಗ ಗುರುಗಳೊಬ್ಬರೂ, ಹಾಗೂ ಖ್ಯಾತ ಆಹಾರ
ವಿಜ್ಞಾನಿ ಡಾ. ಖಾದರ್ ಅವ್ರ್ ಹೇಳಿದ ಕಾರಣ, ನಮ್ಮ ಮನೆಯಲ್ಲಿ ಇದೇ ಧಾನ್ಯಗಳನ್ನ ಬಳುಸ್ತಾ
ಇದೀವಿ ವರ್ಷದಿಂದ ಅಂದೆ. ಈ ಧಾನ್ಯಗಳಲ್ಲಿ ಹೆಚ್ಚು ಔಷಧೀಯ ಗುಣಗಳಿವಿಯಂತೆ ಕಣ್ಬುದ್ಧಿ" ಅಂದೆ
.

ಗುರುಗಳು ನಕ್ಕರು.

" ನಿಮ್ಮ ಅಟ್ಟಿಲಿ ಹಿರೀಕ್ರ್ ಫೋಟೋ ಐತೆನಪ್ಪಾ" ಅಂತ್ ಕೇಳಿದ್ರು.

ಐತೆ ಬುದ್ಧಿ ಅಂತಾ, ನಮ್ಮ ಕುಟುಂಬದ ಮಂದಿಯ ಫೋಟೋ ಕೊಟ್ಟೆ.

ಇದಕ್ಕೂ ಹಳೆಯ ತಲೆಮಾರಿನ ಫೋಟೋ ಇದ್ದರೆ ಕೊಡು ಅಂದರು.

ನಮ್ಮಪ್ಪ, ದೊಡ್ಡಪ್ಪ, ಚಿಕ್ಕಪ್ಪಂದಿರ ಫೋಟೋ ಕೊಟ್ಟೆ. ಅದನ್ನೇ ದಿಟ್ಟಿಸುತ್ತಾ ಗುರುಗಳು
ಹೇಳಿದರು.

"ಇವರೆಲ್ಲ ತೆಳ್ಳಗೇ ಇದ್ದಾರಲ್ಲ! ಇವರು ಸಾಮೆ, ನವಣೆ, ಕೊರಲೆ, ರಾಗಿ, ಜೋಳ, ಊದಲು, ಆರ್ಕ
ತಿನ್ನುತ್ತಿದ್ದರೇ? ಇವರಿಗಿಂತ ಹಿರಿಯರೂ ತೆಳ್ಳಗೇ ಇದ್ದಿರಬೇಕು. ಅವರೂ ಸಿರಿಧಾನ್ಯ
ತಿನ್ನುತ್ತಿರಲಿಲ್ಲ ಅಲ್ಲವೇ? ಈ ಜಗತ್ತಿನಲ್ಲಿ ಕೇವಲ ಐದು ವರ್ಷಗಳ ಹಿಂದೆ ಯಾರೂ ಸಿರಿಧಾನ್ಯ
ತಿನ್ನುತ್ತಿರಲಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ಎಲ್ಲರೂ ತೆಳ್ಳಗೇ ಇದ್ದರು.
ಆರೋಗ್ಯವಂತರಾಗಿಯೂ ಇದ್ದರು. ಅಲ್ಲವೇ"
.

ನಾ ಮಾತ್ರ ಗುರುಗಳ ಮಾತಿಗೆ ತಲೆಯಾಡಿಸಲೇ ಇಲ್ಲಾ.

" ತಾವು ನಿಜಕ್ಕೂ ಗುರುಗಳಾ, ಗುರುಗಳೇ " ಅಂದೆ. ಅದಕ್ಕವರು ತಲೆಯಾಡಿಸಿದರು

" ಅಲ್ಲಾ, ಈ ದೇಶಕ್ಕೆ ಭತ್ತದ ಅಕ್ಕಿ ಬರುವ ಮೊದಲು, ನವಣೆ, ಸಾಮೆ, ಆರ್ಕ, ಊದಲು, ಸಜ್ಜೆ,
ಕೊರಲೆ, ರಾಗಿ, ಜೋಳವನ್ನೆ ಬಳಸುತ್ತಿದ್ದರು ಅನ್ನೋದರ ಅರಿವಿಲ್ಲದ ತಾವು ಗುರುವೆಂಗಾದಿರಿ
ಗುರುಗಳೇ?

ದುಷ್ಯಂತನ ಮನೆಗೋಗುವ ಶಕುಂತಲೆಗೆ, ಆರ್ಕ ಅಕ್ಕಿಯನ್ನ ಕೊಟ್ಟು ಕಳಿಸಿದ ಕಣ್ವರಿಗಿಂತ
ತಿಳಿದವರೇ ನೀವು?

ರಾಗಿ ಉಂಡವನು ನಿರೋಗಿ ಎನಿಸುವನು. ರಾಗಿಯದು ಭೋಗಿಗಳಿಗಲ್ಲ. ಬಡವರಿಗಾಗಿ ಬೆಳೆದ
ರಾಜಧಾನ್ಯವದು - ಅಂತಾ ಅಂತಹ ಸರ್ವಜ್ಞನೇ ಹೇಳಿರುವಾಗ, ಯಾರೋ ಔಷಧದ ಅಂಗ್ಡಿಯೋರ್ ನಿಮ್ಮ್
ಜೋಳ್ಗೆಗ್ ಹಾಕಿದ್ ನಾಕ್ ಹೊಸ ಪಿಂಕಿ ನೋಟಿನ ಆಸೆಗಾಗಿ, ನಿಮ್ಮಪ್ಪ, ನಿಮ್ಮಜ್ಜ, ಅವ್ರಜ್ಜ,
ಅವ್ರ್ ಅವ್ರ್ ಅಜ್ಜಂದಿರು ತಮ್ಮ್ ತಮ್ಮ್ ಹೊಲಗಳಲ್ಲಿ ಬೆಳೆದು, ಉಂಡ್ಕಂಡ್ ಬಂದಂತಹ
ಸಿರಿಧಾನ್ಯಗಳನ್ನೇ ನಿಕೃಷ್ಟ ಅನ್ನೋದಾದ್ರೇ, ಯಾರೋ ಕೊಡೋ ನಾಕ್ ಕಾಸ್ಗ್ ನೀವ್ಗಳ್
ಇನ್ನೇನೆಲ್ಲಾ ಮಾಡಕ್ಕಿಲ್ಲ ಗುರ್‌ಗಳೇ ? ’ ಅಂದೆ ನಾನು ಮತ್ತ್ ವಾಪಸ್ಸು.
.

ಇಷ್ಟ್ ಹೇಳಿದ್ರೂ ಸುಮ್ಮನಾಗದ ಆ ಗುರ್‌ಗಳು, ಮತ್ತ್ ಮತ್ತ್ ಹೊಸೂರ್ ರೋಡಿಂದ್ ತಪ್ಪುಸ್ಕಂಡ್
ಬಂದವನಂಗೆ ನಗುತ್ತಾ ಹೇಳಿದರು.

"ಅಂದರೆ ನಿನ್ನ ಅತಿತೂಕದ ಸಮಸ್ಯೆಗೆ ಕಾರಣ ಅನ್ನ ಅಲ್ಲ. ನಿನ್ನ ಜೀವನ ವಿಧಾನ. ನಿಮ್ಮಪ್ಪ
ದುಡಿತಿದ್ದರು, ನಿನ್ನ ತಾತ ನಡಿತಿದ್ದರು, ಓಡಾಡುತ್ತಿದ್ದರು, ಬೆವರುತ್ತಿದ್ದರು, ದೇಹವನ್ನು
ದಂಡಿಸುತ್ತಿದ್ದರು, ಶ್ರಮ ಪಡುತ್ತಿದ್ದರು.

ನಿಮ್ಮ ಮನೆಯಿಂದ ಮತ್ತೊಂದು ಮನೆಗೆ ಹೋಗುವುದಕ್ಕೆ ಬೈಕು ಹತ್ತುತ್ತಿರಲಿಲ್ಲ. ಯಾವತ್ತೂ ಇಡೀ
ದಿನ ಕೂತುಕೊಂಡೇ ಕಾಲ ಕಳೆಯುತ್ತಿರಲಿಲ್ಲ. ತಲೆ ಬಗ್ಗಿಸಿ ಮೊಬೈಲ್ ನೋಡುತ್ತಾ ಬದುಕು
ಸವೆಸುತ್ತಿರಲಿಲ್ಲ. ಚಿಪ್ಸು ತಿನ್ನುತ್ತಾ ಕ್ರಿಕೆಟ್ ನೋಡುತ್ತಿರಲಿಲ್ಲ. ಆಟ
ಆಡುತ್ತಿದ್ದರು. ಮೂಟೆ ಹೊರುತ್ತಿದ್ದರು. ನೀರು ಸೇದುತ್ತಿದ್ದರು. ಹೌದಾ!"
.

"ಅಲ್ಸಾಮೇ, ನಂಗ್ ತೂಕ ಅತಿಯಾಗದೇ ಅಂದೋರ್ ಯಾರೂ? ನಿಮ್ಮ್ ಕಣ್ಗೇನ್ ಮೊಳೆರೋಗ್ ಬಂದಿದ್ದಾ?
ಜನ್ರೆಲ್ಲಾ ಅಲ್ಲಾ ಕಣ್ಲಾ ಗಿರೀಶ, ಹತ್ನೇ ಕಳಾಸ್ನಾಗ್ ಇದ್ದಂಗೇ ಇವತ್ತ್ ಕೂಡ ಇದಿಯಲ್ಲಾ
ಅನ್ನೋ ಹೊತ್ತಲ್ಲಿ, ನಂಗ್ ಅತಿಯಾಗ್ ತೂಕ ಆಗದೇ ಅಂದೋರ್ ಯಾರ್ ಸಾಮೇ?

ಹೋಗ್ಲಿ, ನಾ ನಡಿತಿಲ್ಲ, ನಾ ಓಡ್ತಿಲ್ಲಾ, ನಾ ಬೆವರ್‍ತಿಲ್ಲಾ, ನಾ ದೇಹನ್ ದಂಡುಸ್ತಿಲ್ಲಾ,
ನಾ ಶ್ರಮ ಪಡ್ತಿಲ್ಲ, ನಾ ಎಲ್ದ್ ಮೂರ್ ಕಿಮೀ ನಡ್ಕಂದೋಗ್ತಿಲ್ಲಾ ಅಂತ್ ನಿಮ್ಗೇಳ್ದ್
ಬಡ್ಡೆದ್ಯಾರ್ ಸಾಮೆ?

ಒಪ್ಕಳಣ, ಇಂದಿನ ಜನರ ಜೀವನ ಶೈಲಿ ಬದಲಾಗಬೇಕು ನಿಜ. ಆದ್ರೆ ಅಂಗಂತಾ ಸಿರಿಧಾನ್ಯಗಳು ವೇಸ್ಟು
ಅನ್ನೋ ನಿಮ್ಮನ್ನ ನಿಜಕ್ಕೂ ಹೊಸೂರ್ ರೋಡ್ ಕಡೆ ಪರ್ಮನೆಂಟಾಗ್ ಬಿಟ್ಟ್ ಬರಬೇಕು ಅನ್ನೋದೇ
ನನ್ನ್ ಆಶಯ. ನಾಳೆ ನಾನೇನಾರ ಮುಖ್ಯಮಂತ್ರಿ ಆದ್ರೆ, ಜನ್ರ್ ಹಳೇ ಆಹಾರ ಪದ್ಧತಿನ್ ಅವಹೇಳನ
ಮಾಡಿದ ವ್ಯಕ್ತಿ ಇವಂ ಅಂತಾ ಪರ್ಮನೆಂಟಾಗಿ ಪರಪ್ಪನ್ ಅಗ್ರಾರದಲ್ಲಿ ರಾಗಿ ಮುದ್ದೆ ಉಣ್ಕಂಡ್
ಸಾಯಿ ಅಂತ್ ಅಲ್ಲಿಗ್ ಕಳುಸ್ಬುಡ್ತಿನಿ, ತಿಳ್ಕಳಿ.

ಯಾವ್ ಆಂಧ್ರದ್ ರೈಸ್ ಮಿಲ್ಲಿನ್ ಓನರ್ ನಿಮ್ಗ್ ಕಾಸ್ ಕೊಟ್ಟ್ ಕಳ್ಸವ್ನೇ ಹೇಳಿ, ಜನಕ್ಕ್
ಇಂಗೇಳ್ ನಮ್ಮಕ್ಕಿ ಯಾಪಾರ ಆಗಂಗ್ ಮಾಡಿ ಅಂತಾ!

ಜೀವನ ಶೈಲಿ ಎಷ್ಟು ಮೂಖ್ಯವೋ, ತಿನ್ನುವ ಆಹಾರ ಪದ್ದತಿಯೂ ಅಷ್ಟೆ ಮುಖ್ಯ ಅನ್ನೋದ್
ಗೊತ್ತಿಲ್ದೇ ಇರೋ ನಿಡುಮಾಮಿಡಿಗಳೆಲ್ಲಾ ಖಾವಿ ತೊಟ್ರೆ ಇಂಗೇ ಆಗದು, ಕೇಡ್ಗಾಲಕ್ಕ್ ನಾಯಿ
ಸಣ್ಣ್ ಸಣ್ಣ್ ಮೊಟ್ಟೆ ಇಟ್ಟಂಗೆ ?"

.

ಇಷ್ಟ್ ಉಗುದ್ರ್ ಕೂಡ, ಆ ಗುರ್‌ಗಳ್ ಅನ್ನೋ ಹುಚ್ಚ ಮಾತ್ರ;

"ನೀನು ಬದಲಾಯಿಸಬೇಕಾದದ್ದು ನಿನ್ನ ಆಹಾರವನ್ನಲ್ಲ. ಜೀವನ ಶೈಲಿಯನ್ನು.

ನಾನು ಪಂಜಾಬಿನುದ್ದಗಲ ಓಡಾಡಿದ್ದೇನೆ. ಅಲ್ಲಿ ನೂರು ನೂರೈವತ್ತು ಕೇಜಿ ತೂಗುವ ಮಂದಿ
ಸಾಕಷ್ಟು ಮಂದಿ ಇದ್ದಾರೆ. ಅವರು ಗೋಧಿ ತಿನ್ನುವವರು. ಆದರೂ ಬೊಜ್ಜು ಬೆಳೆಸಿಕೊಂಡಿದ್ದಾರೆ.
ಅಂದರೆ ಬೊಜ್ಜು ಇಳಿಸುವುದಕ್ಕೆ ಗೋಧಿ ತಿಂದು ಪ್ರಯೋಜನ ಇಲ್ಲ. ಸಣ್ಣಗಾಗುವುದಕ್ಕೆ
ಸಿರಿಧಾನ್ಯ ತಿಂದು ಪ್ರಯೋಜನ ಇಲ್ಲ.

ಸಿರಿಧಾನ್ಯವನ್ನು ಒಂದು ಗಂಟೆ ನೀರಲ್ಲಿ ನೆನೆಸಿಟ್ಟು ನೋಡು. ಅದು ನೆನೆಯುವುದಿಲ್ಲ.
ನೀರನ್ನು ಹೀರುವುದಿಲ್ಲ. ಒಂದು ಪಾವು ಅಕ್ಕಿ ಅನ್ನ ಆಗಬೇಕಿದ್ದರೆ ಎರಡೂವರೆ ಪಾವು ನೀರು
ಬೇಕು. ಸಿರಿಧಾನ್ಯ ಅದರ ಅರ್ಧದಷ್ಟು ನೀರಲ್ಲಿ ಬೇಯುತ್ತದೆ. ನೀರು ಹೀರಿಕೊಳ್ಳದ ಧಾನ್ಯ
ಒಳ್ಳೆಯದಲ್ಲ.

ಒಂದು ವರ್ಷ ಸಿರಿಧಾನ್ಯವನ್ನೇ ತಿಂದು ನೋಡು. ಥೈರಾಯ್ಡ್ ಗ್ರಂಥಿ ಇನ್ನಿಲ್ಲದಂತೆ ಏನೇನನ್ನೋ
ಸ್ರವಿಸಲು ಶುರುಮಾಡುತ್ತದೆ. ಹೋಗಲಿ, ಸಿರಿಧಾನ್ಯ ನೀರಿಲ್ಲದ ಪ್ರದೇಶದಲ್ಲೂ ಬೆಳೆಯಬಲ್ಲ,
ಅತಿ ಕಡಿಮೆ ಖರ್ಚಲ್ಲಿ ಬೆಳೆಯುವಂಥ ಧಾನ್ಯ. ಅದಕ್ಕೆ ಅಕ್ಕಿಯ ಮೂರು ಪಟ್ಟು ಬೆಲೆ ಯಾಕಿದೆ
ಹಾಗಿದ್ದರೆ? ಅಕ್ಕಿಯೊಳಗನ್ನವನು ಮೊದಲು ಕಂಡ ಜ್ಞಾನಿ, ಸಿರಿಧಾನ್ಯವನ್ನೇಕೆ ನಮ್ಮ ಮೇಜರ್
ಸ್ಟೇಪಲ್ ಫುಡ್ ಅಂತ ನಿರ್ಧರಿಸಲಿಲ್ಲ. ಯಾಕೆಂದರೆ ಅದು ಆರೋಗ್ಯವಂತ ಆಹಾರ ಅಲ್ಲವೇ ಅಲ್ಲ.

ಅದನ್ನು ಈಗ ಮಾರ್ಕೆಟಿಂಗ್ ಸಂಸ್ಥೆಗಳೂ ವೈದ್ಯರೂ ಸೇರಿ ಪ್ರಮೋಟ್ ಮಾಡುತ್ತಿದ್ದಾರೆ. ನಾವು
ನಮ್ಮ ಸುತ್ತಮುತ್ತ ಏನು ಬೆಳೆಯುತ್ತೇವೋ ಅದೇ ನಮಗೆ ಶ್ರೇಷ್ಠವಾದ ಆಹಾರ. ಆಹಾರ ಪದ್ದತಿ
ಬದಲಾಯಿಸಬೇಡ, ಜೀವನ ಶೈಲಿ ಬದಲಾಯಿಸು. ಎಲ್ಲವೂ ಬದಲಾಗುತ್ತದೆ. ಕುಂತಲ್ಲೇ ಕೂತು, ಕೈ
ಕಾಲುಗಳನ್ನು ಮೈಯನ್ನು ಹೇಗೆ ಬಳಸಬೇಕೋ ಹಾಗೆ ಬಳಸದೇ, ಆ ಕೊರತೆ ನೀಗಿಕೊಳ್ಳಲು ಸಿರಿಧಾನ್ಯ
ತಿನ್ನುತ್ತೇನೆ ಅನ್ನೋದು ಪರಮ ದಡ್ಡತನ’ ಅಂದರು.
.

" ಅಯ್ಯೋ ನಿಮ್ಮ್ ಮೊಕ್ಕ್ ನಮ್ಮೆಮ್ಮೆ ಸಗ್ಣಿ ಬಾಚಾ. ಗೋಧಿ ತಿಂದ್ರ್ ಬೊಜ್ಜ್ ಕರುಗ್ತದೇ
ಅಂತ್ ನಿಮ್ಗ್ ಹೇಳ್ದ್ ಬಡ್ಡೇದ ಯಾರ ಸಾಮೇ?

ಭತ್ತದ ಅಕ್ಕಿಯಲ್ಲಿ, ಗೋಧಿಯಲ್ಲಿ ಹೆಚ್ಚು ಸಕ್ಕರೆಯ ಅಂಶವಿದೆ. ಮಾನವನ ದೇಹಕ್ಕೆ
ಅಗತ್ಯಕ್ಕಿಂದ ಬೇಕಾದ ಹೆಚ್ಚಿನ ಪ್ರಮಾಣದ ಸಕ್ಕರೆಯ ಅಂಶ ಈ ಅಕ್ಕಿ ಹಾಗೂ ಗೋಧಿಯಲ್ಲಿರುವ
ಕಾರಣದಿಂದಲೇ ಹಾಗೂ ಭಾರತದ ಜನ ಅದನ್ನೇ ಬಳುಸ್ತಾ ಇರೋ ಕಾರಣ, ಈ ದೇಶದಲ್ಲೆ ಸಕ್ಕರೆ ಕಾಯಿಲೆಯ
ಜನ ಹೆಚ್ಚಿರೋದು. ಅಂತೋರ್ ಹೆಚ್ಚಿದಷ್ಟು, ಅದಕ್ಕ್ ಬಳಸೋ ಔಷಧದ ಪ್ರಮಾಣ ಹೆಚ್ಚುತ್ತೆ,
ಅದ್ನ್ ಮಾಡೋ ಕಂಪ್ನಿಗಳು, ಡಾಕ್ಟರ್‌ಗಳು ಉದ್ಧಾರವಾಗ್ತಾರ್ ಹೊರತೂ, ಸಾಮಾನ್ಯರು ಇಂಗೇ
ಸಾಯ್ತಾ ಇರ‍್ತಾರೆ.

ಅಕ್ಕಿಯ ಅನ್ನ, ಗೋಧಿಯ ಅಡಿಗೆ, ನಾವ್ ತಿಂದ ಕೆಲ ಹೊತ್ತಿನಲ್ಲೇ ದೇಹದಲ್ಲೆ ಕರಗಿ ಹೋಗಿ,
ಅದರಿಂದ ಹೆಚ್ಚು ಸಕ್ಕರೆಯ ಅಂಶ ಬಿಡುಗಡೆಯಾಗಿ, ದೇಹದ ಆರೋಗ್ಯ ಹದಗೆಡಲು ಕಾರಣವಾಗುತ್ತೆ.
ಆದ್ರೆ ಯಾವುದೇ ಸಿರಿಧಾನ್ಯ ತಿಂದರೂ, ಅದು ಅರಗಲು ತೆಗೆದುಕೊಳ್ಳುವ ಸಮಯ ಹೆಚ್ಚು, ಅದಲ್ಲದೇ
ಆ ಧಾನ್ಯಗಳಲ್ಲಿರುವ ಸಕ್ಕರೆಯ ಪ್ರಮಾಣ ಅಲ್ಪ ಹಾಗೂ ಅವುಗಳಲ್ಲಿ ಮಾನವ ದೇಹಕ್ಕೆ ಬೇಕಾಗುವ
ಇತರೇ ಪೌಷ್ಟಿಕಾಂಶಗಳು, ಕಬ್ಬಿಣದಂಶ ಹೆಚ್ಚಿರುವುದರಿಂದ ಅವು ಆರೋಗ್ಯಕ್ಕೆ ಒಳ್ಳೆಯದು.
ಹಾಗಾಗಿಯೇ ಆ ಯಾವುದೇ ಧಾನ್ಯಗಳು, ನೀರಿನಲ್ಲಿ ನೆನೆಸಿಟ್ಟಾಗ ಅಕ್ಕಿಯಂತೆ ಬೇಗ ನೀರು
ಹೀರಿಕೊಳ್ಳುವುದಿಲ್ಲ, ಹಾಗೂ ಅಕ್ಕಿಗಿಂತ ಕಡಿಮೆ ಪ್ರಮಾಣದ ನೀರಿನಲ್ಲೆ, ಕಡಿಮೆ ಪ್ರಮಾಣದ
ಬೆಂಕಿಯಲ್ಲೇ ಬೇಗ ತಯಾರಾಗುತ್ತವೇ ಅನ್ನೋದು, ನಮ್ಮೂರ ಪೆದ್ದನಿಗೂ ಸಹ ಗೊತ್ತಿರುವ ಸಾಮಾನ್ಯ
ಸತ್ಯ ಕಣ್ಸಾಮೆ.

ಬೇಕಿದ್ರೆ ನೀವ್ ಕೂಡ ಒಂದ್ ವರ್ಷ ಸಿರಿಧಾನ್ಯವನ್ನೇ ತಿಂದ್ನೋಡಿ, ನಿಮ್ಗೇನಾದ್ರೂ ದೊಡ್ಡ್
ದೊಡ್ಡ್ ರೋಗಗಳಿದ್ರೂ ಅವು ಉಪಶಮನ ಆಗ್ಲಿಲ್ಲಾ ಅಂದ್ರೆ ಆಮ್ಯಾಕ್ ಬಂದ್ ನನ್ನ್ ಮಾತಾಡ್ಸಿ,
ನಿಮ್ಗ್ ಆಗ್ಲೂ ನಿಮ್ಗಿದ್ದ್ ಆ ದೊಡ್ಡ್ ರೋಗ ಹೋಗ್ನಿಲ್ಲಾ ಅಂದ್ರೆ, ನೀವೇಳ್ದಂಗ್
ಕೇಳ್ತಿನಿ. ಹಾಂ, ಮತ್ತೊಂದ್ ವಿಷ್ಯ ಸ್ವಾಮ್ಗಳೇ, ನಿಮ್ಗೇನಾರ ಏಡ್ಸ್ ಇದ್ರೆ ಮಾತ್ರ
ಸಿರಿಧಾನ್ಯ ತಿಂದ್ರೆ ಏನೂ ಪರಿಣಾಮ ಬೀರಲ್ಲ, ಅದ್ಕ್ ಮಾತ್ರ ನಾ ಹೊಣೆಯಲ್ಲ.

ಇನ್ನು ಭತ್ತದ ಅಕ್ಕಿಗಿಂತ, ಸಿರಿಧಾನ್ಯಕ್ಕ್ ಯಾಕ್ ಹೆಚ್ಚು ರೇಟು ಅಂದ್ರೆ, ಇತ್ತೀಚಿಗೆ
ಸಿರಿಧಾನ್ಯಗಳನ್ನ ಬೆಳಿಯೋರ್ ಕಮ್ಮಿ, ಮತ್ತ್ ಸಿರಿಧಾನ್ಯ ಬೆಳೆದರೆ ಈಗ್ ಸಿಗ್ತಿರೋ
ಇಳುವರಿನೂ ಕಮ್ಮಿ ಅದೆ. ಅದಲ್ದೇ, ಕೆಲ ಅಡ್ನಾನಿಗಳು ಜನರ್ ಕಣ್ಗ್ ಮಣ್ಣ್ ಎರ‍್ಚಿ, ಹೆಚ್ಚ್
ಬೆಲೆಗ್ ಮಾರ‍್ತಾ ಇರೋದ್ ಕೂಡ ಸತ್ಯ.

ತಿಳ್ಕಳಿ, ಭತ್ತದ ಅಕ್ಕಿ ಕೆಜಿಗೆ 45-55 ರೂಪಾಯ್ ಐತೆ. ಆದ್ರೆ ನಿಮ್ಗ್ ಚಿತ್ರದುಗದಲ್ಲಿ
ಬರೀ ರೂಪಾಯ್ 36 ಕ್ಕೆ ನವಣಕ್ಕಿ ಸಿಗ್ತದೆ, ಉಳ್ಕೆ ಸಿರಿಧಾನ್ಯಗಳು ಕೆಜಿಗೆ ಬರೀ ರೂ. 70-80
ಮಾತ್ರ.

ಒಂದೂವರೆ ಕೆಜಿ ಅಕ್ಕಿ ಬಳ್ಸೋ ಜಾಗ್ದಲ್ಲಿ, ಬರೀ ಒಂದ್ ಕೆಜಿ ಸಿರಿಧಾನ್ಯ ಬಳ್ಸಿದ್ರೂ ಸಹ,
ಒಂದ್ ಕೆಜಿ ಅಕ್ಕಿ ಎಷ್ಟ್ ಜನಕ್ಕಾಗ್ತಿತ್ತೋ ಅಷ್ಟೆ ಜನಕ್ಕೆ ಸಿರಿಧಾನ್ಯ ಆಗುತ್ತೆ.

ಲೆಕ್ಕ ಮಾಡಿ, ಒಂದೂವರ್ ಕೆಜಿ ಅಕ್ಕಿ 75, ಒಂದ್ ಕೆಜಿ ಸಾಮೆ 80. ಸಾಮೆ ಉಂಡ್ರೆ
ಒಳ್ಳೆದಾಗುವಾಗ, ಅಕ್ಕಿ ಉಂಡ್ ಕಾಯ್ಲಿ ತಂದ್ಕಳದ್ ಯಾವ್ ನ್ಯಾಮ ಸಾಮೇ?

ಕಳಾಸ್ ಇಷ್ಟ್ ಸಾಕೇ, ಇನ್ನೂ ಬೇಕೇ?
.

"ನಿನ್ನ್ ಪಾದದ್ ಜೆರಾಕ್ಸ್ ಕೊಟ್ಬುಡಪ್ಪಾ ಗಿರೀಶ. ನನ್ನ್ ಕಣ್ಣ್ ತೆರೆಸಿದ ದೇವ್ರು ನೀನು,
ಇಷ್ಟ್ ವಿಷ್ಯ ಗೊತ್ತೇ ಇರಲಿಲ್ಲಾ ನಂಗೆ. ನಾನೇನು ಬೇಕೂ ಅಂತಾ ಸಿರಿಧಾನ್ಯಗಳ ಬಗ್ಗೆ ಇಂಗ್
ಹೇಳ್ಳಿಲ್ಲಾ ಕಂದಾ. ನನ್ನ ಒಂದ್ ಸುಳ್ಳೆ ಸುಳ್ಳೇ ಪಾತ್ರವನ್ನ ಅದ್ಯಾರೋ ಜ್ಯೋಗಿ ಅನ್ನೋ
ಅಸಾಮಿ ಯಾರತ್ರನೋ ಕಾಸ್ ಈಸ್ಕಂಡ್ ಸೃಷ್ಟಿ ಮಾಡಿ, ಎಲ್ಲಾ ಕಡೆ ಹರಿಯ ಬಿಟ್ಟು, ನನ್ನ್ ಮಾನ
ಕಳಿತಾ ಅವ್ನಪ್ಪಾ.

ನಿನ್ನತ್ರ ಸಿಕ್ಕಾಕ್ಕಂಡ್ ಈಗ್ ಹಣ್ಗಾಯ್ ಆಗಿರದ್ ಸಾಕು ಕಂದಾ. ನಿಮ್ಮಟ್ಟಿಲ್ ಸ್ಟಾಕ್
ಇದ್ರೆ, ನಂಗ್ ಈ ನವಣೆ, ಸಾಮೆ, ಕೊಲರೆ, ಆರ್ಕ, ಊದಲು, ರಾಗಿ, ಜೋಳ, ಸಜ್ಜೆ ಇತ್ಯಾದಿ ಎಲ್ಲ
ಸಿರಿಧಾನ್ಯಗಳನ್ನ ನಂಗ್ ಒಂದೊಂದ್ ಕೆಜಿ ಭಿಕ್ಷೆ ಅಂತಾ ಕೊಟ್ಬಿಡಪ್ಪಾ. ಊರಾಗ್ ನಮ್ತಾತ್
ಕೊಟ್ಟಿರ ಹತ್ತ್ ಎಕ್ರೆ ಜಮೀನಲ್ಲ್ ಈ ಎಲ್ಲಾ ಧಾನ್ಯಗಳನ್ನ್ ಬಿತ್ತಿ ಬೆಳ್ದು, ದೇಶಕ್ಕ್
ಸಿರಿಧಾನ್ಯ ಹಂಚ್ತಿನಿ " ಅಂದಂತ ತಾತನಿಗೆ, ನಾ ಅಷ್ಟೂ ಸಿರಿಧಾನ್ಯಗಳನ್ನ ಕೊಟ್ಟ್
ಕಳಿಸುದ್ನಪ್ಪಾ ಈಗ.

On 13-Apr-2018 11:55 AM, "Sameera samee" <mehak.sa...@gmail.com> wrote:

> *ಓದಲೇಬೇಕು*
> (ನಂಗಂತೂ ಇಷ್ಟ ಆಯಿತು)
>
> ಗುರುಗಳು ಮನೆಗೆ ಬಂದಿದ್ದರು.
> ಮನೆಯಲ್ಲಿ ಸಿರಿಧಾನ್ಯದ ಉಪ್ಪಿಟ್ಟು ಮಾಡಿದ್ದೆವು.
> ಎರಡನೇ ತುತ್ತು  ಬಾಯಿಗಿಡುತ್ತಿದ್ದಂತೆ ಗುರುಗಳು *ಇದಾವ ಧಾನ್ಯ* ಎಂದು  ಕೇಳಿದರು.
> *ಮಿಲ್ಲೆಟ್ಸ್. ಇದು 'ಸಾಮೆ'* ಅಂದೆ.
> *ಇದನ್ನೇಕೆ ತಿನ್ನುತ್ತಿದ್ದೀಯ* ಎಂದು ಕೇಳಿದರು.
> *ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ ಕಡಿಮೆ ಆಗುತ್ತದಂತೆ*
> ಅಂದೆ.
> ಗುರುಗಳು ನಕ್ಕರು.
> *ನಿಮ್ಮ ಮನೆಯ ಹಿರಿಯರ ಫೋಟೋ ಇದೆಯಾ* ಅಂತ ಕೇಳಿದರು.
> ನಮ್ಮ ಕುಟುಂಬದ ಹಿರಿಯರ ಫೋಟೋ ಕೊಟ್ಟೆ.
> *ಇದಕ್ಕೂ ಹಳೆಯ ತಲೆಮಾರಿನ ಫೋಟೋ ಇದ್ದರೆ ಕೊಡು* ಅಂದರು.
> ನಮ್ಮಪ್ಪ, ದೊಡ್ಡಪ್ಪ, ಚಿಕ್ಕಪ್ಪಂದಿರ ಫೋಟೋ ಕೊಟ್ಟೆ.
>
> ಅದನ್ನೇ ದಿಟ್ಟಿಸುತ್ತಾ ಗುರುಗಳು ಹೇಳಿದರು,
> *ಇವರೆಲ್ಲ ತೆಳ್ಳಗೇ ಇದ್ದಾರಲ್ಲ! ಇವರು ಸಾಮೆ ತಿನ್ನುತ್ತಿದ್ದರೇ?*
>
> *ಇವರಿಗಿಂತ ಹಿರಿಯರೂ ತೆಳ್ಳಗೇ ಇದ್ದಿರಬೇಕು. ಅವರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ
> ಅಲ್ಲವೇ?*
> *ಈ ಜಗತ್ತಿನಲ್ಲಿ ಕೇವಲ ಐದು ವರ್ಷಗಳ ಹಿಂದೆ ಯಾರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ.*
>
> *ಇಪ್ಪತ್ತು ವರ್ಷಗಳ ಹಿಂದೆ ಎಲ್ಲರೂ ತೆಳ್ಳಗೇ ಇದ್ದರು. ಆರೋಗ್ಯವಂತರಾಗಿಯೂ ಇದ್ದರು.
> ಅಲ್ಲವೇ?* ಎಂದರು.
> ತಲೆಯಾಡಿಸಿದೆ.
>
> ಗುರುಗಳು ನಗುತ್ತಾ ಹೇಳಿದರು *ಅಂದರೆ ನಿನ್ನ ಅತಿ ತೂಕದ ಸಮಸ್ಯೆಗೆ ಕಾರಣ ಅನ್ನ ಅಲ್ಲ.
> ನಿನ್ನ ಜೀವನ ವಿಧಾನ. ನಿಮ್ಮಪ್ಪ ದುಡೀತಿದ್ದರು. ನಿನ್ನ ತಾತ ನಡೀತಿದ್ದರು.
> ಓಡಾಡುತ್ತಿದ್ದರು. ಬೆವರುತ್ತಿದ್ದರು. ದೇಹವನ್ನು ದಂಡಿಸುತ್ತಿದ್ದರು. ಶ್ರಮ
> ಪಡುತ್ತಿದ್ದರು. ನಿಮ್ಮ ಮನೆಯಿಂದ ಮತ್ತೊಂದು ಮನೆಗೆ ಹೋಗುವುದಕ್ಕೆ ಬೈಕು
> ಹತ್ತುತ್ತಿರಲಿಲ್ಲ. ಯಾವತ್ತೂ ಇಡೀ ದಿನ ಕೂತುಕೊಂಡೇ ಕಾಲ ಕಳೆಯುತ್ತಿರಲಿಲ್ಲ. ತಲೆ ಬಗ್ಗಿಸಿ
> ಮೊಬೈಲ್ ನೋಡುತ್ತಾ ಬದುಕು ದಿನ ಸವೆಸುತ್ತಿರಲಿಲ್ಲ. Chips ತಿನ್ನುತ್ತಾ ಕ್ರಿಕೆಟ್
> ನೋಡುತ್ತಿರಲಿಲ್ಲ. ಆಟ ಆಡುತ್ತಿದ್ದರು. ಮೂಟೆ ಹೊರುತ್ತಿದ್ದರು. ನೀರು ಸೇದುತ್ತಿದ್ದರು.
> ಹೌದಾ?*
> ತಲೆಯಾಡಿಸಿದೆ.
>
> *ಅಂದರೆ ನೀನು ಬದಲಾಯಿಸಬೇಕಾದದ್ದು ನಿನ್ನ ಆಹಾರವನ್ನಲ್ಲ. ಜೀವನ ಶೈಲಿಯನ್ನು. ನಾನು
> ಪಂಜಾಬಿನುದ್ದಗಲ ಓಡಾಡಿದ್ದೇನೆ. ಅಲ್ಲಿ ನೂರು ನೂರೈವತ್ತು ಕೇಜಿ ತೂಗುವ ಮಂದಿ ಸಾಕಷ್ಟು
> ಮಂದಿ ಇದ್ದಾರೆ. ಅವರು ಗೋಧಿ ತಿನ್ನುವವರು. ಆದರೂ ಬೊಜ್ಜು ಬೆಳೆಸಿಕೊಂಡಿದ್ದಾರೆ. ಅಂದರೆ
> ಬೊಜ್ಜು ಇಳಿಸುವುದಕ್ಕೆ ಗೋಧಿ ತಿಂದು ಪ್ರಯೋಜನ ಇಲ್ಲ. ಸಣ್ಣಗಾಗುವುದಕ್ಕೆ ಸಿರಿಧಾನ್ಯ
> ತಿಂದು ಪ್ರಯೋಜನ ಇಲ್ಲ. ಸಿರಿಧಾನ್ಯವನ್ನು ಒಂದು ಗಂಟೆ ನೀರಲ್ಲಿ ನೆನೆಸಿಟ್ಟು ನೋಡು. ಅದು
> ನೆನೆಯುವುದಿಲ್ಲ. ನೀರನ್ನು ಹೀರುವುದಿಲ್ಲ. ಒಂದು ಪಾವು ಅಕ್ಕಿ ಅನ್ನ ಆಗಬೇಕಿದ್ದರೆ
> ಎರಡೂವರೆ ಪಾವು ನೀರು ಬೇಕು. ಸಿರಿಧಾನ್ಯ ಅದರ ಅರ್ಧದಷ್ಟು ನೀರಲ್ಲಿ ಬೇಯುತ್ತದೆ. ನೀರು
> ಹೀರಿಕೊಳ್ಳದ ಧಾನ್ಯ ಒಳ್ಳೆಯದಲ್ಲ. ಒಂದು ವರ್ಷ ಸಿರಿಧಾನ್ಯವನ್ನೇ ತಿಂದು ನೋಡು. ಥೈರಾಯ್ಡ್
> ಗ್ರಂಥಿ ಇನ್ನಿಲ್ಲದಂತೆ ಏನೇನನ್ನೋ ಸ್ರವಿಸಲು ಶುರುಮಾಡುತ್ತದೆ.*
> *ಹೋಗಲಿ, ಸಿರಿಧಾನ್ಯ ನೀರಿಲ್ಲದ ಪ್ರದೇಶದಲ್ಲೂ ಬೆಳೆಯಬಲ್ಲ, ಅತಿ ಕಡಿಮೆ ಖರ್ಚಲ್ಲಿ
> ಬೆಳೆಯುವಂಥ ಧಾನ್ಯ. ಅದಕ್ಕೆ ಅಕ್ಕಿಯ ಮೂರು ಪಟ್ಟು ಬೆಲೆ ಯಾಕಿದೆ ಹಾಗಿದ್ದರೆ?*
> *ಅಕ್ಕಿಯೊಳಗನ್ನವನು ಮೊದಲು ಕಂಡ ಜ್ಞಾನಿ, ಸಿರಿಧಾನ್ಯವನ್ನೇಕೆ ನಮ್ಮ major staple food
> ಅಂತ ನಿರ್ಧರಿಸಲಿಲ್ಲ? ಯಾಕೆಂದರೆ ಅದು ಆರೋಗ್ಯವಂತ ಆಹಾರ ಅಲ್ಲವೇ ಅಲ್ಲ. ಅದನ್ನು ಈಗ
> ಮಾರ್ಕೆಟಿಂಗ್ ಸಂಸ್ಥೆಗಳೂ ವೈದ್ಯರೂ ಸೇರಿ promote ಮಾಡುತ್ತಿದ್ದಾರೆ. ನಾವು ನಮ್ಮ
> ಸುತ್ತಮುತ್ತ ಏನು ಬೆಳೆಯುತ್ತೇವೋ ಅದೇ ನಮಗೆ ಶ್ರೇಷ್ಠವಾದ ಆಹಾರ*
> *ಆಹಾರ ಪದ್ದತಿ ಬದಲಾಯಿಸಬೇಡ, ಜೀವನ ಶೈಲಿ ಬದಲಾಯಿಸು. ಎಲ್ಲವೂ ಬದಲಾಗುತ್ತದೆ.*
> *ಕುಂತಲ್ಲೇ ಕೂತು, ಕೈ ಕಾಲುಗಳನ್ನು ಮೈಯನ್ನು ಹೇಗೆ ಬಳಸಬೇಕೋ ಹಾಗೆ ಬಳಸದೇ, ಆ ಕೊರತೆ
> ನೀಗಿಕೊಳ್ಳಲು ಸಿರಿಧಾನ್ಯ ತಿನ್ನುತ್ತೇನೆ ಅನ್ನೋದು ಪರಮ ದಡ್ಡತನ* ಅಂದರು.
>
> ಆವತ್ತೇ ರಾತ್ರಿ ಬಿಸಿಬಿಸಿ ಅನ್ನಕ್ಕೆ ಘಮಘಮಿಸುವ ಸಾರು, ಒಂದು ಮಿಳ್ಳೆ ತುಪ್ಪ ಹಾಕಿಕೊಂಡು
> ಹೊಟ್ಟೆ ತುಂಬ ತಿಂದೆ.
> ಸಿರಿಧಾನ್ಯಕ್ಕೆ ಹುಚ್ಚಿಗೆ ಬಲಿಯಾಗುತ್ತಿದ್ದವನನ್ನು ಗುರುಗಳು ಬಂದು ಕಾಪಾಡಿದರು.
>
> *ಹೌದು, ಬದಲಾಸಬೇಕಾದದು ಜೀವನಶೈಲಿನ್ನು, ಆಹಾರ ಪದ್ದತಿಯನ್ನಲ್ಲ*
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to