ಉತ್ತಮ ವಾಗಿದೆ


On Apr 26, 2017 10:53 AM, "Sameera samee" <mehak.sa...@gmail.com> wrote:

> ದಯವಿಟ್ಟು ಓದಿ 📝
>
> ಅದೊಂದು ಕೈಗಾರಿಕಾ ಪ್ರದೇಶ. ನೂರಾರು ಕಾರಖಾನೆಗಳ ನಡುವೆ ಅದೊಂದು ಫ್ರೀಜರ್ ಘಟಕ. ಆಹಾರ
> ಪದಾರ್ಥಗಳನ್ನು ಸಂಗ್ರಹಿಸಿಡುವ ಶೀತಲೀಕರಣ ಯಂತ್ರಗಳು ಅದರ ಮುಖ್ಯ ಭಾಗ. ಅದೊಂದು ದಿನ ಸಂಜೆ
> ಎಲ್ಲರೂ ಮನೆಗೆ ಹೊರಡುವ ಸಮಯ ಆಗಿತ್ತು. ಒಬ್ಬೊಬ್ಬರಾಗಿ, ಗಡಿಯಾರ ನೋಡಿಕೊಂಡು, ಘಟಕದಿಂದ
> ಮರಳಿ ಮನೆಯ ಕಡೆ ಪ್ರಯಾಣ ಬೆಳೆಸಲು ಆರಂಭಿಸಿದ್ದರು. ಆದರೆ ಆ ಘಟಕದ ಎಲೆಕ್ಟ್ರಾನಿಕ್ಸ್
> ವಿಭಾಗದ ಇಂಜಿನಿಯರ್ ಒಬ್ಬರು ಎಲ್ಲಾ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು
> ನೋಡಿಕೊಂಡು ಬರುತ್ತಿರುವಾಗ, ಯಾವುದೋ ಫ್ರೀಜರಿನಲ್ಲಿ ಸಮಸ್ಯೆ ಇರುವುದು ಗೊತ್ತಾಯಿತು. ಒಂದು
> ಗೋಡೌನ್‌ನಷ್ಟು ಗಾತ್ರವಿದ್ದ, ಆ ಫ್ರೀಜರಿನಲ್ಲಿರುವ ಸಮಸ್ಯೆಯನ್ನು ಗುರುತಿಸಲು ಆತನಿಗೆ ಸಮಯ
> ಸಾಲದಾಯಿತು. ಅದರ ಒಳಗೆ ಸಮಸ್ಯೆಯನ್ನು ಬಗೆ ಹರಿಸಿ, ಹೊರಗೆ ಬರಲು ನೋಡಿದರೆ ಮನೆಗೆ ಹೋಗುವ
> ಆತುರದಲ್ಲಿ ಯಾರೋ ಒಬ್ಬ, ಎಲ್ಲರೂ ಹೊರಗೆ ಬಂದಿದ್ದಾರೆ ಎಂದು ನೋಡದೆ ಹೊರಗಿನಿಂದ ಬಾಗಿಲು
> ಹಾಕಿ ಬಿಟ್ಟಿದ್ದನು. ಒಳಗಿದ್ದ ಇಂಜಿನಿಯರ್ ಕಿರುಚುತ್ತಾ ಯಾರಾದರೂ ಸಹಾಯ ಮಾಡುತ್ತಾರಾ ಎಂದು
> ಕರೆದನು. ಆದರೆ ಅವನಿಗೆ ಪ್ರತಿಕ್ರಿಯಿಸುವವರು ಯಾರೂ ಇರಲಿಲ್ಲ. ಸಾಲದ್ದಕ್ಕೆ ಘಟಕದ ಒಳಭಾಗದ
> ದೀಪಗಳೆಲ್ಲ ಆರಿಸಲ್ಪಟ್ಟಿದ್ದವು. ಮೈನಸ್ ಉಷ್ಣಾಂಶವಿದ್ದ ಆ ಫ್ರೀಜರ್ ಘಟಕ ಆತನಿಗೆ
> ಮಂಜುಗಡ್ಡೆಯ ಸಮಾಧಿಯಂತೆ ಕಾಣಿಸಲಾರಂಭಿಸಿತು. ಅವನು ಧರಿಸಿದ್ದ ಬೆಚ್ಚನೆಯ ಉಡುಪು ಸಹ
> ಚಳಿಯನ್ನು ತಡೆಯಲು ಅಸಾಧ್ಯ ಎನ್ನುವಂಥ ಸ್ಥಿತಿ ತಲುಪಿತು. ಹೀಗೆ ಸಮಯ  ಕಳೆಯುತ್ತ ಹೋಯಿತು.
> ಇವನ ಕೈ ಕಾಲು ಮರಗಟ್ಟಲು ಆರಂಭಿಸಿತು. ಅಷ್ಟರಲ್ಲಿ ಯಾರೋ ಬಾಗಿಲು ತೆರೆಯುತ್ತಿರುವುದು
> ಕಾಣಿಸಿತು. ಆ ಘಟಕದ ಸೆಕ್ಯೂರಿಟಿ ಗಾರ್ಡ್ ಟಾರ್ಚ್ ಹಿಡಿದುಕೊಂಡು ಯಾರನ್ನೋ ಹುಡುಕುತ್ತಾ
> ಬಂದಂತೆ ಕಂಡನು. ಅವನನ್ನು ಕರೆದಾಗ ಓಡಿ ಬಂದು, ಬಾಗಿಲು ತೆರೆದನು. ಓಡಿ ಹೋಗಿ ತಾನು
> ರಾತ್ರಿಗೆಂದು ಫಾಸ್ಕ್‌ನಲ್ಲಿ ತುಂಬಿ ತಂದಿದ್ದ ಬಿಸಿ ಬಿಸಿ ಚಹವನ್ನು ಸುರಿದು ಕೊಟ್ಟನು.
> ಬದುಕಿದೆಯಾ ಬಡಜೀವವೇ, ಎಂಬಂತಾಗಿದ್ದ ಇವನು ಆ ಚಹವನ್ನು ಕುಡಿದು ಚೇತರಿಸಿಕೊಂಡನು ಹಾಗೂ
> ಕುತೂಹಲದಿಂದ ಆ ಗಾರ್ಡನನ್ನು ಕೇಳಿದನು. "ನಾನು ಒಳಗೆ ಸಿಕ್ಕಿ ಹಾಕಿಕೊಂಡಿದ್ದೆ ಎಂದು ನಿನಗೆ
> ಹೇಗೆ ಗೊತ್ತಾಯಿತು? ಯಾರು ನಿನಗೆ ತಿಳಿಸಿದರು? " ಎಂದು ಕೇಳಿದನು. ಅದಕ್ಕೆ ಆ ಗಾರ್ಡ್
> ಹೇಳಿದನು " ಯಾರೂ ಹೇಳಲಿಲ್ಲ ಸರ್, ಈ ಪ್ಲಾಂಟ್‌ನಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಜನ ಕೆಲಸ
> ಮಾಡುತ್ತಾರೆ, ಆದರೆ ಬೆಳಗ್ಗೆಯಾದರೆ ಒಂದು ಹಾಯ್, ಸಂಜೆಯಾದರೆ ಬಾಯ್, ಎಂದು ಹೇಳಿ ಹೋಗುವುದು
> ಮಾತ್ರ ನೀವೊಬ್ಬರೇ! ನಾನು ನಿಮಗೆ ನಮಸ್ಕಾರ ಹೇಳುವ ಮೊದಲೇ ನೀವು ಮೇಲಧಿಕಾರಿ ಎಂಬ
> ಭಾವನೆಯನ್ನೂ ತೋರದೆ ನೀವಾಗಿಯೇ ನನ್ನ ಕಡೆ ನೋಡಿ ನಗುತ್ತಾ ಕೈಬೀಸಿ ಹಾಯ್ ಹೇಳುತ್ತೀರಿ ಹಾಗೂ
> ಸಂಜೆ ಮನೆಗೆ ಹೋಗುವಾಗಲೂ ಅದೇ ನಗುಮುಖದಿಂದ ಬಾಯ್ ಹೇಳಿ ಹೋಗುತ್ತಿರುವ. ನಾನು ಬೆಳಗ್ಗೆಯಿಂದ
> ಗೇಟಿನಲ್ಲೇ ಇದ್ದೆ, ಬೆಳಗ್ಗೆ ನೀವು ಒಳಗೆ ಬಂದವರು ಹೊರಗೆ ಬರಲಿಲ್ಲ, ಅದಕ್ಕೆ ಸಂಶಯ ಬಂದು
> ನಿಮ್ಮನ್ನೇ ಹುಡುಕಿಕೊಂಡು ಬಂದೆ ಎಂದನು.
> ಇದನ್ನು ಕೇಳಿದ ಆ ನೌಕರ ಆ ಗಾರ್ಡನನ್ನು ಬಾಚಿ ತಬ್ಬಿಕೊಂಡ. ಹೇಳಲು ಅವನ ಬಳಿ ಪದಗಳೇ
> ಇರಲಿಲ್ಲ. ಕೇಳಲು ಆ ಗಾರ್ಡ್‌ಗೆ ಯಾವ ಪ್ರಶ್ನೆಗಳೇ ಇರಲಿಲ್ಲ.
>
> ಒಮ್ಮೆ ಆಲೋಚಿಸಿ. ಒಬ್ಬ ಮನುಷ್ಯನಿಗೆ ಆ ನೌಕರ ತೋರಿದ ಒಂದು ಸಣ್ಣ ಗೌರವ ಪೂರ್ವಕ ನಡವಳಿಕೆ
> ಆತನ ಜೀವವನ್ನು ಉಳಿಸಿತು.
> ಹಾಗಾಗಿ ಯಾರನ್ನಾದರು ಭೇಟಿಯಾದಾಗ ಅವರಿಗೆ ಒಂದು ನಮಸ್ಕಾರ ಹೇಳಿ. ಕನಿಷ್ಠ ಪಕ್ಷ ಅವರಿಗೆ
> ಗೌರವ ಪೂರ್ವಕವಾಗಿ ನಗುತ್ತ ಮಾತನಾಡಿಸಿ. ಈ ಸಮಯದಲ್ಲಿ ಒಂದು ಮುಗುಳ್ನಗೆ ನಿಮ್ಮ
> ಮುಖದಲ್ಲಿರಬೇಕೆಂಬುದನ್ನು ಮರೆಯಬೇಡಿ. ಇಂತಹ ಉತ್ತಮ ಶಿಷ್ಠಾಚಾರಗಳನ್ನು ನಿಮ್ಮ ಮಕ್ಕಳಿಗೆ
> ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಡುವುದನ್ನು ಮತ್ತು ನೀವೂ ಪಾಲಿಸಲು ಮರೆಯಬೇಡಿ. ಇದರಿಂದ
> ನಮಗೆ ಒಳ್ಳೆಯದೇ ಆಗುತ್ತದೆಯೇ ಹೊರತು ನಷ್ಟ ಎಂದಿಗೂ ಆಗದು! ಯಾರು ಬಲ್ಲರು?, ನಮ್ಮ ಈ ಒಂದು
> ಸಣ್ಣ ನಡವಳಿಕೆಯು ನಮ್ಮ ಜೀವನದಲ್ಲಿ ಪವಾಡವನ್ನೇ ಮಾಡಬಹುದು! ಅಲ್ಲವೇ? *You earn Respect
> if u learn to Respect Others*
>
> ಬದುಕಿಗೊಂದು ಪಾಠ... ಓದಿದ್ದನ್ನ ಹಂಚಿಕೊಂಡಿದ್ದಿನಿ.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to