ತುಂಬಾ  ಚೆನ್ನಾಗಿದೆ ಸರ್

On Aug 3, 2017 6:50 AM, "chandregowda m d" <mdchandrego...@gmail.com> wrote:

> ಜಯಗೀತ
>
>     ಯಾರು ಕೊಟ್ಟರು? ಯಾರು ತಂದರು ?
>      ಸ್ವತಂತ್ರವನು ದೇಶಕೆ !
>       ಯಾರು ಹಚ್ಚಿದ ನಂದಾ ದೀಪವು ?
>       ಬೆಳಗುತಿಹುದೀ ನಾಡನು? !//೧//
>
>      ಭರತ ಮಾತೆಯ ಕಣ್ಣ ನೀರನು
>      ಒರೆಸಿದವರು ಯಾರು?
>      ಕಬಂಧ-ದಾಸ್ಯದ ಹಿಡಿತ ಸಡಿಲಿಸಿ
>      ಬಿಡುಗಡೆ ಯಾರು ತಂದರು ?//೨//
>
>       ಯಾರ ತ್ಯಾಗದ ಫಲಸ್ವರೂಪವೋ
>       ಹೆಗಲಿನ ನೊಗ ಕಳಚಿತು
>       ಯಾರು ಪಡೆದ ಕರಿ-ನೀರ ಶಿಕ್ಷೆಯೋ
>        ನಮ್ಮೆಲ್ಲರ ಸೆರೆ ತಪ್ಪಿತು //೩//
>
>         ಯಾರ ಬಂಧನಕೆ ಸಂದ ಬೆಲೆಯಿದೊ
>          ನಮ್ಮ ಬಾಳುವೆ ಸುಂದರ
>         ಯಾವ ಮಹಿಮರ ಬಲಿದಾನವೋ ಇದು
>         ಆ  ಮಹಾತ್ಮರ ನೆನೆಯುವಾ//೪//
>
>          ಮಸಾಲೆವಸ್ತುಗೆ ಮನವ ಸೋತು
>          ಕಡಲು ದಾಟಿ ಬಂದರು
>          ಅರಿವೆ ಮಾರುತ,ಸುಳಿವು ಅರಿಯುತಾ
>          ದಾಳ ಉರುಳಿಸಿ ಗೆದ್ದರು // ೫//
>
>
>           'ನೆರವು ಸೈನ್ಯ'ದ ನೆಪವ ಒಡ್ಡುತಾ
>            ನುಂಗಿಬಿಟ್ಟರು  ದೇಶವ
>          ' ದತ್ತುಮಕ್ಕಳಹಕ್ಕು' ಕೀಳುತಾ
>            ಕಬಳಿಸಿದರು ಖಂಡವ //೬//
>
>           ತಾತ್ಯಾ,ನಾನಾ,ಪಾಂಡೆ,ಲಕ್ಷ್ಮಿಬಾಯಿ
>           ಹಚ್ಚಿದಂತ ಕಿಡಿಯಿದು !
>           ಭರತ ಖಂಡವೇ ಹೊತ್ತಿ ಉರಿಯಿತು
>            ಜಲಿಯನ್,ದಂಡಿ,ಅಸಹಕಾರದಿ.....//೭//
>
>          ಗಾಂಧಿ,ನೆಹರು,ಪಟೇಲ್,ಸುಭಾಸರು
>          ಧುಮುಕಿದರು ಮುಂಚೂಣಿಗೆ
>          ಬಿಪಿನ ,ಲಜಪತ, ಸಾವರ್ಕರ್,ತಿಲಕರು
>           ಮಾಡಿಮಡಿದ ಮಹಾತ್ಮರು  //೮//
>
>           ಮದನ,ಆಜಾದ,ಸುಖದೇವ,ಭಗತರು
>           ಹರಣ ತೊರೆದ ಧೀರರು
>           ಪರಂಗಿ ಜನರ ಫಿರಂಗಿ ಗುಂಡಿಗೆ
>           ಎದೆಯನೊಡ್ಡಿದ ವೀರರು//೯//
>
>           ಅಹಿಂಸೆಯೆ ಹೋರಾಟ ಮಂತ್ರವು,
>           ಸತ್ಯಾಗ್ರಹವೇ  ತಂತ್ರವು
>           ತ್ಯಜಿಸಿ  ಶಸ್ತ್ರವ ,ಮಣಿಸೆ ಶತ್ರುವ
>           ರಾಷ್ಟ್ರ ಜಿಗಿಯಿತು ಸಂಗ್ರಾಮಕೆ //೧೦//
>
>           ನಾಡೇ ಕೂಗಿತು ;ಮುಗಿಲು ಮುಟ್ಟಿತು
>           ಸ್ವಾಯತ್ತತೆಯ ಬೇಡಿಕೆ .!
>          ದಿಗಿಲು ಹುಟ್ಟಿತು, ಓಟ ಕಿತ್ತಿತು
>          ಕಂಪನಿ ಜನ ಸ್ವದೇಶಕೆ ! //೧೧//
>
>            ನಾಲ್ವತ್ತೇಳರ ಆಗಸ್ಟ್ ಮಾಸದಿ
>            ಗಗನಗಾಮಿ ತಿರಂಗವು
>            ಹದಿನಾಲ್ಕರ ನಡು ರಾತ್ರಿಯಲ್ಲಿ
>            ಧರೆಗಿಳಿದ ಒಕ್ಕೂಟಪತಾಕೆಯು //೧೨//
>
>               ಉರಿಯಲಿ ನಿತ್ಯ ಸ್ವತಂತ್ರ ಹಣತೆಯು
>               ಹುತಾತ್ಮರನೆನಪೇ ಬತ್ತಿಯು
>               ಮೆರೆಸಲು ಎಲ್ಲೆಡೆ ನಾಡ ಘನತೆಯಾ
>                ನಮ್ಮ ದುಡಿಮೆಯೇ ತೈಲವು //೧೩//
>
>          # ಚಂದ್ರೇಗೌಡನಾರಮ್ನಳ್ಳಿ ,  8722199344
>     ಸ/ಶಿ,ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ/ ತಾ/
> Chandregowda m.d. pin 573119. mo 8722199344
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to