ಮರಳಿ ಮನೆಗೆ ಪದ್ಯದ ಭಾವಾರ್ಥ

ಆದಿ - ಮೂಲ,  ಬಯಲು - ಶೂನ್ಯ, ಮುಕ್ತಿ
ಮೈದಾನ,  ಬಂಧನ - ಐಹಿಕ ಬಂಧನ, ರೀತಿ -
ಗತಿ, ಉಸಿರು - ನುಡಿ, ಸೀಮೆ - ಗಡಿ, ಎಮ್ಮ-
ನಮ್ಮ

ಅಜ್ಞಾನದಿಂದಾಗಿ ಭಯೋತ್ಪಾದನೆ ಹಾಗೂ ಮತಾಂದತೆಯಂತಹ ಸಮಸ್ಯೆಗಳು ಉಗ್ರರೂಪ
ತಾಳಿವೆ.. ಪ್ರಪಂಚದಾದ್ಯಂತ ಮಾರಣಹೋಮ
ನಡೆಯುತ್ತಿದೆ. ಅಜ್ಞಾನದ ಕತ್ತಲೆಯನ್ನು ನೀಗಿಸಲು
ಇಂದಿನ ದಿನಗಳಲ್ಲಿ ಬುದ್ಧನ ಸಂದೇಶಗಳು ಹೆಚ್ಚುಐ
ಪ್ರಸ್ತುತವಾಗಿವೆ. ಮರೆಯಾಗಿರುವ ಬುದ್ಧನ ತತ್ವಗಳು ಮತ್ತೆ ಬೆಳಕಿಗೆ ಬರಬೇಕು ಎಂಬುದು
ಕವಿಯ ಆಶಯವಾಗಿದೆ.
2) ಬುದ್ಧನ ಸಂದೇಶಗಳು ಸದಾ ಪ್ರಸ್ತುತವಾಗಿವೆ
ಹಿಂಸಾ ವಿರೋಧಿಯಾದ ಬುದ್ಧನು ಶಾಂತಿಗೆ
ಮತ್ತೂಂದು ಹೆಸರು.ಜಡ್ಡುಗಟ್ಟಿದ್ದ ವ್ಯವಸ್ಥೆಯೊ
- ಳಗೆ ಹೊಸತನ ಹಾಗೂ ಸರಳತೆಯನ್ನು ತಂದ
ಬುದ್ದನ ಸಂದೇಶಗಳು ಸಾಮಾಜಿಕ ಕ್ರಾಂತಿಗೆ
ಕಾರಣವಾದವು. ಕರುಣೆಯೇ ಮೈದೆಳೆದಂತಿರುವ
ಬುದ್ಧ ಜ್ಞಾನದ ಬೆಳಕಿನ ಮೂಲವಾಗಿದ್ದಾನೆ.
ನೇಪಾಳ ದೇಶದಲ್ಲಿರುವ ಲುಂಬಿನಿ ವನದಲ್ಲಿ
ಬುದ್ಧನ ಜನನವಾಯಿತು. ವಸಂತ ಋತುವಿನ
ಆಗಮನದಿಂದ ವನಗಳು ಕಂಗೊಳಿಸಃವಂತೆ
ಬುದ್ಧನ ಜನನದಿಂದ ಲುಂಬಿನಿ ವನವು ಸಾರ್ಥಕ್ಯ
ವನ್ನು ಪಡೆಯಿತು
3) ಬೌದ್ಧಧರ್ಮ ಹುಟ್ಟಿ ಬೆಳೆದಿದ್ದು ಭಾರತದಲ್ಲೇ
ಆದರೂ ಬುದ್ದ ಮಾರ್ಗವನ್ನು ಮರೆತುಬಿಟ್ಟಿದ್ಧೇವೆ
ಅದರಿಂದ ಉಂಟಾದ ಪ್ರಕ್ಷುಬ್ದ ಸ್ಥಿತಿಯನ್ನರಿತ
ನಮಗೆ ಮತ್ತೆ ಬುದ್ಧಮಾರ್ಗದ ಮಹತ್ವವನ್ನು
ಮನವರಿಕೆ ಮಾಡಿಕೊಂಡ ಜನತೆ ಅದನ್ನು
ಅನುಸರಿಸಲು ದೀಕ್ಷೆಯನ್ನು ಬಯಸಿದ್ದಾರೆ
ಪಂಚಶೀಲ ತತ್ವಗಳನ್ನು ಅರಿತು ಅನುಸರಿಸಿದರೆ
ಇಡೀ ಪಪಂಚದಲ್ಲಿಯೇ ನೆಮ್ಮದಿ ನೆಲೆಗೊಳ್ಳುತ್ತದೆ
4) ನಮ್ಮ ತಂದೆ ತಾಯಿ, ಬಂಧು ಬಳಗ ಹೇಗೆ
ನಮ್ಮ ಹಿತವನ್ನೆ ಬಯಸುತ್ತಾರೊ ಹಾಗೆಯೇ
ಬುದ್ಧ ಧರ್ಮವು ಸಮಾಜದ ತಂದೆ ತಾಯಿಯಂತೆ
ಸಮಾಜದ ಒಳಿತನ್ನೆ ಬಯಸುತ್ತದೆ. ನಮ್ಮ ನಡೆ
ಬುದ್ಧಮಾರ್ಗವನ್ನು ಮೀರಿದಾಗ ತಂದೆಯಾದ
ಬುದ್ಧನು ಮೆಚ್ಚುವುದಿಲ್ಲ. ಮುಕ್ತಿಯ ಬಯಲಿನಲ್ಲಿ
ನಿಂತಾಗ ಐಹಿಕ ಬಂಧನವನ್ನು ಬಯಸಿದರೆ
ತಾಯಿಯಂತಿರುವ ಬುದ್ಧನು ಒಪ್ಪವುದಿಲ್ಲ
5) ಬುದ್ಧನ ಸಂದೇಶಗಳನ್ನು ಅನುಸರಿಸಿದರೆ
ಸರ್ವರಿಗೂ ಸುಖ ಸಿಗುತ್ತದೆ. ನಮ್ಮ ನುಡಿಯಂತೆ
ಶಡೆಯಿರಬೇಕು. ಮೇಲು ಕೀಳುಗಳಿಲ್ಲದ ಸಮಾನ
ಸಮಾಜ ನಿರ್ಮಾಣವೇ ಬಸವಣ್ಣನವರ ಮಹಾ
ಮನೆಯ ಮಹಾಮಂತ್ರವಾಗಿತ್ತು. ನಾವು ಶ್ರೇಪ್ಟ
ಸಮಾಜದ ಭವ್ಯ ಮನುಜರಾಗಿ ಬಾಳಬೇಕಾದರೆ
ಬುದ್ಧ ಮಾರ್ಗದಲ್ಲಿ ನಡೆಯಬೇಕು
6) ಬುದ್ಧ ಮಾರ್ಗವು ಜಾತಿ- ಧರ್ಮ, ಲಿಂಗಭೇದ,
ಮೇಲು- ಕೀಳುಗಳ ಗಡಿಯನ್ನು ಮೀರಿ ನಿಂತಿದೆ
ಬುದ್ಧನ ತತ್ವಗಳೇ ನಮ್ಮ ನುಡಿಯಾಗಿ ಬುದ್ಧ
ಮಾರ್ಗವೆ ನಮ್ಮ ಮಾರ್ಗವಾಗುವ ಮೂಲಕ
ಸಮಾನತೆಯ ಸಮಾಜ ಸ್ಥಾಪಿತವಾಗಬೇಕು
ಎಂಬುದು ಕವಿಯ ಇಂಗಿತ. ಅದಕ್ಕಾಗಿ ಬುದ್ಧನು
ನಮ್ಮ ಮನೆಗಳಿಗೆ ಹಾಗೂ ನಮ್ಮ ಮನಗಳಿಗೆ
 ಮರಳಿ ಬರಬೇಕು ಎಂಬುದು ಈ ಕವನದ ಆಶಯವಾಗಿದೆ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to