Thanks sir
On Jan 23, 2017 1:45 PM, "Sharadabai Angadi" <sharadapatil1...@gmail.com>
wrote:

> ಒಳ್ಳೆಯ ಆಲೋಚನೆಗಳನ್ನು ಹಂಚಿದ್ದಕ್ಕೆ ಕನ್ನಡ ಭಾಷಾ ಶಿಕ್ಷಕರ ಪರವಾಗಿ ತುಂಬು ಹೃದಯದ
> ಧನ್ಯವಾದಗಳು ಸರ್. ಎಲ್ಲಿಯವರೆಗೆ ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನೇಮಕಾತಿ
> ನಡೆಯುವುದಿಲ್ಲವೋ ಅಲ್ಲಿಯವರೆಗೂ ಪ್ರೌಢಶಾಲೆ ಯಲ್ಲಿನ ಸಮಸ್ಯೆಗಳು ಪರಿಹಾರವಾಗುವುದು
> ಕಷ್ಟಸಾಧ್ಯ.
>
> On Jan 23, 2017 9:06 AM, "ಮಹೇಶ್.ಎಸ್ - ಕನ್ನಡ ದೀವಿಗೆ" <mahesh.s...@gmail.com>
> wrote:
>
>> ಆತ್ಮೀಯ ಶಿಕ್ಷಕ ಮಿತ್ರರೇ,
>> 10ನೆಯ ತರಗತಿಯ ವಾರ್ಷಿಕ ಪರೀಕ್ಷೆ ಇಂದು ಹತ್ತು-ಹಲವು ಕಾರಣಗಳಿಂದಾಗಿ ಮಹತ್ವದ ವಿಷಯವಾಗಿ
>> ಪರಿಣಮಿಸಿರುವುದು ನಮಗೆಲ್ಲ ಈಗಾಗಲೇ ವೇದ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ,
>> ಶಾಲೆಯ ಫಲಿತಾಂಶದ ದೃಷ್ಟಿಯಿಂದ  ಅಷ್ಟೇ ಅಲ್ಲದೇ ಕೆಲವರ ಪ್ರತಿಷ್ಠೆಯ ದೃಷ್ಟಿಯಿಂದ 10ನೆಯ
>> ತರಗತಿ ಫಲಿತಾಂಶ ಎಂಬ 'ಬೆದರುಬೊಂಬೆ' ಇಂದು ದೈತ್ಯಾಕಾರವಾಗಿ ಬೆಳೆದು ನಿಂತಿದ್ದು; ಯಾವ
>> ಪರೀಕ್ಷೆಗಳಿಗೂ ಇಲ್ಲದ ಭವ್ಯತೆಯನ್ನು ತಾನು ಪಡೆದುಕೊಂಡಿದೆ; ವಿದ್ಯಾರ್ಥಿಗಳು, ಶಿಕ್ಷಕರು,
>> ಮುಖ್ಯ ಶಿಕ್ಷಕರು, ಪಾಲಕರು ಅಲ್ಲದೆ ಈ ಶೈಕ್ಷಣಿಕ ವ್ಯಾಪ್ತಿಗೆ ಒಳಪಡುವ ಹಲವು ಅಧಿಕಾರಿಗಳ
>> ನಿದ್ದೆಗೆಡಿಸಿದೆ.
>>           ತರಬೇತಿಗಳಲ್ಲಿ, ಕಾರ್ಯಾಗಾರಗಳಲ್ಲಿ 'ಗುಣಾತ್ಮಕ ಶಿಕ್ಷಣ'ದ ಮಂತ್ರ ಪಠಿಸುವ;
>> ಉದ್ದುದ್ದ ಭಾಷಣ ಮಾಡುವ ಅನೇಕರು ದುರದೃಷ್ಟವಶಾತ್ ಇಂದು ಮೂರು ಗಂಟೆಗಳಲ್ಲಿ ವಿದ್ಯಾರ್ಥಿಯ
>> ಭವಿಷ್ಯವನ್ನು ನಿರ್ಧರಿಸುವ 'ಪರಿಮಾಣಾತ್ಮಕ' ಪರೀಕ್ಷಾ ಪದ್ಧತಿಗೆ ಜೋತು ಬಿದ್ದಿದ್ದು
>> "ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ.
>> ಅಂಕಗಳಿಕೆ....." ಎಂದು ಹುಯಿಲೆಬ್ಬಿಸಿದ್ದಾರೆ. ಆ ಮೂಲಕ "ಅಂಕಗಳಿಕೆಯೇ ನಮ್ಮ ಶಿಕ್ಷಣದ
>> ಗುರಿ" ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.
>>          ಪ್ರಪಂಚದ ಯಾವುದಾದರೂ ಮೂಲೆಯಲ್ಲಿ 'ತಳಪಾಯ' ಇಲ್ಲದ ಅಥವಾ 'ತಳಪಾಯ' ಇದ್ದರೂ
>> 'ಭದ್ರವಾದ ತಳಪಾಯ' ಇಲ್ಲದ ನೆಲದ ಮೇಲೆ 'ದೊಡ್ಡ ಕಟ್ಟಡ' ನಿರ್ಮಾಣ ಮಾಡುವ 'ಇಂಜಿನಿಯರ್'
>> ನೋಡಿದ್ದೀರಾ...! ಅಂತಹ  'ಇಂಜಿನಿಯರ್' ಏನಾದರೂ ಇದ್ದಲ್ಲಿ ಅದು 'ಕರ್ನಾಟಕದ ಸರ್ಕಾರಿ
>> ಪ್ರೌಢಶಾಲೆ'ಗಳಲ್ಲಿ...!!
>>             "ಪ್ರೌಢಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇಕಡ 50 ಕ್ಕಿಂತ
>> ಹೆಚ್ಚು ವಿದ್ಯಾರ್ಥಿಗಳಿಗೆ ಸರಿಯಾಗಿ ಓದುವ, ಬರೆಯುವ, ಲೆಕ್ಕಮಾಡುವ ಸಾಮಾನ್ಯ ಸಾಮರ್ಥ್ಯವೂ
>> ಇಲ್ಲ" ಎಂದು ಗೋಳಾಡುತ್ತಿರುವ ಶಿಕ್ಷಕರ ಅಳಲು ಕೇವಲ 'ಅರಣ್ಯ ರೋಧನ'ವಾಗಿದೆ.
>>            ಏಳೆಂಟು ವರ್ಷ ಏನೂ ಕಲಿಯದೇ ಬಂದ ಶೇಕಡ 50 ಕ್ಕಿಂತ ಹೆಚ್ಚು
>> ವಿದ್ಯಾರ್ಥಿಗಳಿಗೆ; ಒಂದು ತಿಂಗಳ ಸೇತುಬಂಧ, ನಂತರದ ಕೆಲವು ತಿಂಗಳುಗಳಲ್ಲಿ ನಿಗದಿಪಡಿಸಲಾದ
>> ಪಠ್ಯಬೋಧನೆಯ ನಡುವೆ ಸಮಯ ಹೊಂದಿಸಿಕೊಂಡರೆ ದೊರೆಯುವ ಕೆಲವೇ ಕೆಲವು ಅವಧಿಗಳಲ್ಲಿ ಮಾಡಬಹುದಾದ
>> ಪರಿಹಾರ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಮೇಲೆ ತರಬೇಕೆಂದು ಶಿಕ್ಷಕರು ದಿನನಿತ್ಯ
>> ಹೆಣಗಾಡುತ್ತಿದ್ದಾರೆ. ಕಟ್ಟಪ್ಪಣೆ ಮಾಡುವವರು ವಸ್ತುಸ್ಥಿತಿಯನ್ನು ಅರಿತಿರುವರೇ?
>> ಅರಿತಿದ್ದೂ ಹೀಗೆ ಆಜ್ಞೆ ಮಾಡುತ್ತಿರುವರೇ? ಎಂಬ ಪ್ರಶ್ನೆಗಳು ಶಿಕ್ಷಕರನ್ನು ಕಾಡುತ್ತಿವೆ.
>>         ಎಲ್ಲಿಯವರೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿ ಮೇಲ್ಮಟ್ಟದ
>> ತರಗತಿಗೆ ಬಂದ ನಂತರ "ಅಂಕಗಳಿಕೆ" ಯ ಹುಯಿಲೆಬ್ಬಿಸುವ ಬದಲು ತಳಮಟ್ಟದಿಂದ ಸರಿಪಡಿಸುವ ಬಗ್ಗೆ
>> ಚಿಂತನೆ ಮಾಡುವುದಿಲ್ಲವೋ..... ಮೇಲ್ಮಟ್ಟದ ವಿದ್ಯಾರ್ಥಿ ಕನಿಷ್ಠ ಅಂಕಗಳಿಸದಿರಲು ಅವನಿಗೆ
>> ತಳಮಟ್ಟದಲ್ಲಿ ಸರಿಯಾದ ಬುನಾದಿ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಬುಡಮಟ್ಟದಿಂದ
>> ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ 'ಧೈರ್ಯ' ತೋರುವುದಿಲ್ಲವೋ.... ಅಲ್ಲಿಯವರೆಗೆ ಈ
>> ಸಮಸ್ಯೆಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ, ಶಿಕ್ಷಕರ ಮೇಲೆ
>> ಹೇರಲಾಗುತ್ತಿರುವ ಒತ್ತಡಕ್ಕೆ ಕೊನೆ ಎಂಬುದಿಲ್ಲ.
>>        ದಿನನಿತ್ಯ 'ದೊಡ್ಡವರ ಆಜ್ಞೆ', 'ನಿಯಮಗಳ ಸಂಕೋಲೆ', 'ಕಡತಗಳ ಸಾಗರ'ದಲ್ಲಿ
>> ಶಿಕ್ಷಕರು ಹೈರಾಣಾಗಿದ್ದಾರೆ; ಕೆಲವರಂತು ಇಂತಹ ಒತ್ತಡಗಳಿಂದಾಗಿ ಮಾನಸಿಕ ನೆಮ್ಮದಿ/ಆರೋಗ್ಯ
>> ಕಳೆದುಕೊಂಡಿದ್ದಾರೆ.
>> ಅಲ್ಲವೇ ಮತ್ತೆ....!! ತಳಪಾಯವಿಲ್ಲದ ನೆಲದ ಮೇಲೆ ಸೌಧ ನಿರ್ಮಿಸುವುದೆಂದರೆ....!!
>> ಸಾಮಾನ್ಯದ ಮಾತಾಯಿತೇ...!!
>>            ಅದೇನೇ ಇರಲಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ
>> 'ಅಂಕಗಳಿಕೆ' ಯ ಕಡೆ ನಮ್ಮೆಲ್ಲರ ಚಿತ್ತವಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು
>> 'ಉತ್ತೀರ್ಣರಾಗುವಂತೆ ಮಾಡುವ' ಆದ್ಯಕರ್ತವ್ಯ ನಮ್ಮದಾಗಿದೆ. ಎಲ್ಲ ಒತ್ತಡಗಳನ್ನು
>> ಹಗುರಾಗಿಸಿಕೊಂಡು; ಯಾವ ಯಾವ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಅವರು ಉತ್ತೀರ್ಣರಾಗಲು
>> ಬೇಕಾಗುವ ಅಂಕಗಳಿಕೆಗೆ ಮಾರ್ಗದರ್ಶನ ಮಾಡಬೇಕು ಎಂಬುದರ ಕಡೆ ನಮ್ಮ ಪ್ರಯತ್ನವಿರಬೇಕು.
>>            ಈ ನಿಟ್ಟಿನಲ್ಲಿ ನೀಲನಕ್ಷೆಯನ್ನಾಧರಿಸಿ ಕಲಿಕಾ ಕಾರ್ಡುಗಳನ್ನು
>> ನಿರ್ಮಿಸಲಾಗಿದ್ದು, ಅದನ್ನು 'ಕನ್ನಡ ದೀವಿಗೆ'ಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ. A4
>> ಅಳತೆಯ ಡ್ರಾಯಿಂಗ್ ಹಾಳೆಗಳಿಗೆ ನೇರವಾಗಿ ಮುದ್ರಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ
>> ಬಳಸಿಕೊಳ್ಳಬಹುದಾಗಿದೆ.
>>                       ಶುಭ ಹಾರೈಕೆಗಳೊಂದಿಗೆ,
>>                                             - ಎಸ್.ಮಹೇಶ್. 'ಕನ್ನಡ ದೀವಿಗೆ'
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send an email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/5264cac6-ffb3-4c9c-8363-a08e0768c208%40googlegroups.com.
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CABGueMLcdmEY5T0ooEbMJ%3DiG24RkvUhStv_H2pLcig4N6R%
> 2BnCg%40mail.gmail.com
> <https://groups.google.com/d/msgid/kannadastf/CABGueMLcdmEY5T0ooEbMJ%3DiG24RkvUhStv_H2pLcig4N6R%2BnCg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAFxdJf5xhF4jsV34Evf%3DXJHbcqbYd1_jqnhD9y65K6q87Yzfog%40mail.gmail.com.
For more options, visit https://groups.google.com/d/optout.
  • [Kannada ... ಮಹೇಶ್ . ಎಸ್ - ಕನ್ನಡ ದೀವಿಗೆ
    • Re: ... Basavaraj Basu
      • ... Vasanthappa K
    • Re: ... Sharadabai Angadi
      • ... manjaiah sakshi
        • ... Umesh H V
      • ... SAMPATH KUMAR G P
        • ... anupama desai
    • Re: ... MAHANTESH KONNUR

Reply via email to