ಡಿ.ವಿ.ಜಿ.ಬೆಳಗು ಚೆನ್ನಾಗಿದೆ. ವಂದನೆಗಳು,ಅಭಿನಂದನೆಗಳು


On 10-May-2017 3:57 PM, "Sameera samee" <mehak.sa...@gmail.com> wrote:

>
> 🙏 *ಡಿ.ವಿ.ಜಿ ಬೆಳಗು:-* 🙏
>
> *ಸತತ ಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ|*
> *ಗತಿ ಮನುಜ ಲೋಕಕ್ಕೆ; ಜಗದ ಜೀವವದು|*
> *ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ||*
> *ಕಥೆ ಮುಗಿವುದಲ ಜಗಕೆ?-ಮಂಕುತಿಮ್ಮ||857||*
>
> *ನಲ್ವೆಳಗು-ಕವಿತಾ ಅಡೂರು*
>
> ಮನುಷ್ಯ ಲೋಕದಲ್ಲಿ  ನಿರಂತರವಾದ ಹುಡುಕಾಟವಷ್ಟೇ ಇದೆ. ಗುರಿ ತಲುಪುವುದು  ಹಾಗಿರಲಿ,
> ಹುಡುಕುವುದೇ ಸತತವಾಗುಳಿದಿದೆ. ಇದುವೇ ಜಗತ್ತಿನ ಜೀವಾಳವೂ ಹೌದು. ಎಲ್ಲರೂ ಮಾಡ
> ಬೇಕಾದುದನ್ನು ಮಾಡಿ ಮುಗಿಸಿದವರೇ ಆದರೆ, ಇನ್ನು ಮಾಡಲು ಯಾವ ಕೆಲಸವೂ ಇಲ್ಲವೆಂದಾದರೆ
> ಜಗತ್ತು ಮುನ್ನಡೆಯುವುದಕ್ಕುಂಟೆ? ಜಗದ ಕಥೆಯೇ ಮುಗಿದ ಹಾಗೆ ಅಲ್ಲವೇ?
>
> ಜೀವನಕ್ಕೊಂದು ಗುರಿ ಇರಬೇಕು ಎನ್ನುವ ಮಾತನ್ನು ನಾವೆಲ್ಲರೂ ಕೇಳಿಸಿಕೊಂಡವರೇ.. ಗುರಿ
> ತಲುಪಲು ಪ್ರಯತ್ನಿಸಿದವರೇ. ಆದರೆ ಯಾರಾದರೂ ತಾವು ಯೋಜಿಸಿದಂತೆ, ಯೋಚಿಸಿದಂತೆಯೇ ಬದುಕನ್ನು
> ಪಡೆದವರುಂಟೇ? ಗುರಿ ತಲುಪಿದವರುಂಟೇ? ಎಲ್ಲೋ ಸಣ್ಣ ಅತೃಪ್ತಿ ನಮ್ಮಲ್ಲಿ ಉಳಿದೇ
> ಉಳಿಯುತ್ತದೆ. ಇರುವುದರೆಡೆಯಿಂದ ಇರದುದರೆಡೆಗೆ ತುಡಿಯುತ್ತಲೇ ಇರುತ್ತೇವೆ. ಮತ್ತು ಅದುವೇ
> ಜೀವಿಸುವುದಕ್ಕೆ ಕಾರಣವೂ ಆಗುತ್ತದೆ; ಛಲ ಹುಟ್ಟಿಸುತ್ತದೆ.
>
> ಗುರುವೊಬ್ಬರ ಬಳಿ ಹಲವಾರು ಮಂದಿ ಶಿಷ್ಯರು ಜ್ಞಾನಾರ್ಜನೆ ಮಾಡುತ್ತಿದ್ದರು. ಆ ಶಿಷ್ಯರಲ್ಲಿ
> ಒಬ್ಬನಿಗೆ ಸಾರ್ಥಕ ಬದುಕನ್ನು ಹೊಂದುವ ಬಗೆ ಹೇಗೆ ಎಂಬ ಬಗ್ಗೆ ಜಿಜ್ಞಾಸೆ ಉಂಟಾಯಿತು.
> ಗುರುವಿನಲ್ಲೇ ಈ ಬಗ್ಗೆ ವಿಚಾರಿಸಿದ. ಶಿಷ್ಯನನ್ನೇ ದಿಟ್ಟಿಸಿ ನೋಡಿದ ಗುರು , ಮೌನ ಮುರಿದು
> ಮಾತನಾಡಿದರು. ಆಶ್ರಮದಿಂದ ಪೂರ್ವಾಭಿಮುಖವಾಗಿ ಒಂದಷ್ಟು ದೂರ ನಡೆದಾಗ ಒಂದು ಎತ್ತರವಾದ
> ನಿಬಿಡಾರಣ್ಯದಿಂದ ಕೂಡಿದ ಬೆಟ್ಟ ಸಿಗುತ್ತದೆ. ಅದರ ತುತ್ತ ತುದಿಯನ್ನು ತಲುಪಿದರೆ ಅಲ್ಲಿ
> ಕೆಲವು ಗುಹೆಗಳಿವೆ. ಅದರೊಳಗೆ ಒಂದು ಗುಹೆಯಲ್ಲಿ ಮಹಾಗುರುವೊಬ್ಬರು ಧ್ಯಾನಸ್ಥರಾಗಿದ್ದಾರೆ.
> ಅವರು ಬದುಕಿನ ಸಾರ್ಥಕತೆಯ ಬಗ್ಗೆ ತಿಳಿಸ ಬಹುದು. ತಿಳಿಯಲೇ ಬೇಕೆಂದಾದಲ್ಲಿ ಮರುಮುಂಜಾವ
> ಪೂರ್ವಾಭಿಮುಖನಾಗಿ ಹೊರಡು ಎನ್ನುತ್ತಾರೆ. ಗುರುವಿನ ಮಾತಿನಂತೆಯೇ ಶಿಷ್ಯ ಬೆಳಗ್ಗೆ ಎದ್ದವನೇ
> ಗುರುವಿಗೆ ವಂದಿಸಿ ಪೂರ್ವದಿಕ್ಕಿನತ್ತ ಪಯಣಿಸಿದ. ಒಂದಷ್ಟು ದೂರ ಹೋಗುತ್ತಿದ್ದಂತೆಯೇ
> ಎತ್ತರದ ಬೆಟ್ಟ ಕಾಣಿಸಿತು. ಅದನ್ನೇ ಗುರಿಯಾಗಿ ಇರಿಸಿಕೊಂಡು ನಡೆದ. ನಡೆದಷ್ಟು ಮುಗಿಯದ
> ದಾರಿ. ಬೆಟ್ಟ ದೂರವೇ ಉಳಿಯಿತು. ನಡೆವ  ದಾರಿಯಲ್ಲಿ ಅವನಿಗೆ ಹಲವಾರು ಊರುಗಳು ಸಿಕ್ಕಿದವು.
> ಆ ಊರಿನಲ್ಲಿ ಕೆಲವು ದಿನ ಉಳಿದುಕೊಳ್ಳಲೇ ಬೇಕಾಯಿತು. ಜನರೊಡನೆ ಬೆರೆಯಲೇ ಬೇಕಾಯಿತು. ಆ
> ಸಡಗರದಲ್ಲಿ ಕಳೆದೇ ಹೋದನೆಂಬ ಹೊತ್ತಲ್ಲಿ ಮತ್ತೆ ಎಚ್ಚೆತ್ತುಕೊಂಡ. ಬೆಟ್ಟವನ್ನು
> ದೃಷ್ಟಿಸಿದ. ಅದರತ್ತ ನಡೆಯ ತೊಡಗಿದ. ಹೀಗೆ ವಿರಮಿಸುತ್ತಾ, ವಿರಮಿಸುತ್ತಾ ಮುಂದುವರಿದ ಆ
> ಶಿಷ್ಯನಿಗೆ ತುಂಬಿ ಹರಿವ ನದಿ, ಜಲಪಾತ, ಬಯಲ ಬೆಡಗು ಕಾಣ ಸಿಕ್ಕಿದವು. ಆ ಚೆಲುವಿಕೆಯಲ್ಲಿ
> ತನ್ನನ್ನು ತಾನು ಮರೆತು ಆನಂದದಲ್ಲಿ ಮೈಮರೆತ. ಮತ್ತೆ ತನ್ನ ಗುರಿಯನ್ನು ನೆನಪಿಸಿಕೊಂಡು
> ಮುಂದುವರಿದ. ಹೀಗೆ ನಡೆಯುತ್ತಾ ,ನಡೆಯುತ್ತಾ ಬೆಟ್ಟದ ತಪ್ಪಲನ್ನು ಸೇರಿದ. ಆಮೇಲೆ ಏರುವ
> ಕೆಲಸ. ದಟ್ಟ ಅರಣ್ಯ. ದಾರಿ ಮಾಡಿಕೊಂಡು ಹೋಗ ಬೇಕಿತ್ತು ಆತ. ಕಾಡಿನ ಮೃಗಗಳು, ನಿರ್ಜನತೆ
> ಆತನನ್ನು ಕಂಗೆಡಿಸಿದರೂ, ಹಿಂತಿರುಗುವಂತೆ ಹೆದರಿಸಿದರೂ ಛಲ ಬಿಡದೆ ಮುಂದುವರಿದ.
> ಕೊನೆಗೊಮ್ಮೆ ಬೆಟ್ಟದ ಶಿಖರಾಗ್ರವನ್ನು ತಲುಪಿದ. ಅಲ್ಲಿರ ಬಹುದಾದ ಗುಹೆಯನ್ನು ಹುಡುಕಿ,
> ಮಹಾಗುರುವಿನಿಂದ ಬದುಕಿನ ಸಾರ್ಥಕತೆಯ ಬಗ್ಗೆ ತಿಳಿದುಕೊಳ್ಳ ಬೇಕಿತ್ತು ಆತ. ಅಷ್ಟರಲ್ಲಾಗಲೇ
> ಹಲವು ಕಾಲ ಕಳೆದು ಹೋಗಿತ್ತು. ನಡೆದು ಬಂದ ದಾರಿಯಲ್ಲಿ , ಆ ಶಿಷ್ಯ ಹಲವು ಅನುಭವಗಳನ್ನು
> ಪಡೆದಿದ್ದ. ಪ್ರಕೃತಿಯೊಂದಿಗಿನ ಒಡನಾಟದಲ್ಲಿ ಅರಿವನ್ನು ವಿಸ್ತರಿಸಿಕೊಂಡಿದ್ದ. ಎತ್ತರದಲ್ಲಿ
> ನಿಂತು ನೋಡಿದಾಗ ಬದುಕಿನ ಧನ್ಯತೆಯ ಅನುಭವವನ್ನು ಪಡೆದ. ಯಾರೂ ಹೇಳದೆಯೇ ಸ್ವತಃ ಆತನೇ
> ಬದುಕಿನ ಸಾರ್ಥಕತೆಯನ್ನು ಹುಡುಕಿಕೊಂಡಿದ್ದ.
>
> ನಾವೆಲ್ಲರೂ ಅವನಂತೆಯೇ ಜೀವನ ಯಾತ್ರೆ ಹೊರಟವರೇ ಅಲ್ಲವೇ? ನಮ್ಮ ಬದುಕಿಗೂ ಒಂದಷ್ಟು
> ಧ್ಯೇಯಗಳಿವೆ, ಹೀಗೆಯೇ ಬಾಳಬೇಕೆಂಬ ಕಲ್ಪನೆಗಳಿವೆ, ಹೀಗಾಗಬೇಕೆಂಬ ಗುರಿ ಇದೆ. ಆದರೆ ನಾವು
> ಎಷ್ಟರ ಮಟ್ಟಿಗೆ ನಮ್ಮ ಸಂಕಲ್ಪ, ಗುರಿ, ಧ್ಯೇಯಗಳನ್ನು ಸಾಧಿಸುವಲ್ಲಿ ಸ್ಥಿರವಾಗಿದ್ದೇವೆ?
> ಇದಲ್ಲ ಅದು, ಅದಲ್ಲ ಇದು ಎಂಬ ಸುಖದ ಹುಡುಕಾಟವನ್ನೇ ಮಾಡುತ್ತಿದ್ದೇವೆ. ಗುರಿಯೆಡೆಗೆ
> ಯಾವುದೋ ದಾರಿಯನ್ನು ಅರಸಿ ನಡೆಯುತ್ತೇವೆ. ಸ್ವಲ್ಪ ದೂರ ಗಮಿಸಿದಾಗ ಆ ದಾರಿ
> ಪ್ರಯಾಸಕರವಾದದ್ದು ಎಂದು ಮತ್ತೆ ಮೊದಲಿನಿಂದ ನಡೆಯ ತೊಡಗುತ್ತೇವೆ. ಹೀಗೆ ಸದಾ ಕ್ಷೇಮವನ್ನು
> ಹುಡುಕುವುದೇ, ಹೊಂದುವುದೇ ಉದ್ದೇಶವಾಗಿದೆ. ವಿಪರ್ಯಾಸವೆಂದರೆ ಕ್ಷೇಮದ ಸ್ವರೂಪ
> ಹೇಗಿರುತ್ತದೆ ಎಂಬ ಬಗ್ಗೆ ಸ್ಪಷ್ಟತೆಯೇ ಇಲ್ಲ ನಮ್ಮಲ್ಲಿ. ಮನುಷ್ಯನ ಈ ಸಹಜ ತಲ್ಲಣದ,
> ಅಸಂತೃಪ್ತ ಗುಣವೇ ಬದುಕಿನ ಸಾಗುವಿಕೆಗೆ ಉಪಾದಿಯಾಗಿದೆ. ಜೀವನವೆಂದರೆ ಹೋರಾಟ, ಅದಕ್ಕೊಂದು
> ಉದ್ದೇಶ ಬೇಕು. ಅದಿಲ್ಲದೇ ಹೋದರೆ, ಸಾಧಿಸುವ ಛಲ, ಆಸೆ-ಆಕಾಂಕ್ಷೆಗಳು ಬತ್ತಿ ಹೋದರೆ ಬದುಕು
> ಭಾರವೆನಿಸುತ್ತದೆ, ಬೇಡವೆನಿಸುತ್ತದೆ.
>
> ಮನುಷ್ಯ ಜೀವಿತಕ್ಕೆ ಬಂದ ಮೇಲೆ ನಮಗೆ ನಮ್ಮದೇ ಆದ ಕರ್ತವ್ಯಗಳಿವೆ ಅದನ್ನು ನಾವು
> ನಿಭಾಯಿಸಲೇ ಬೇಕು. ಅದನ್ನು ಪರಿತ್ಯಜಿಸಿ , ಕರ್ತವ್ಯಗಳಿಂದ ವಿಮುಖನಾದರೆ ಜೀವನೋತ್ಸಾಹವೇ
> ಕಳೆದು ಹೋಗುತ್ತದೆ. ಭಗವಂತ ಯಾವುದೋ ಗುರಿಯಿರಿಸಿ ಜೀವಾತ್ಮರುಗಳಾದ ನಮ್ಮನ್ನು ಬಾಣದಂತೆ
> ಪ್ರಯೋಗಿಸಿದ್ದಾನೆ. ಆತ ಸಂಕಲ್ಪಿಸಿದ ಗುರಿ ಎಲ್ಲಿದೆಯೋ ತಿಳಿಯದ,  ದೇವರು ಹೊಡೆದ ಬಾಣಗಳಾದ
> ನಾವು ಚಲಿಸುತ್ತಲೇ ಇದ್ದೇವೆ, ಹಾಗೆಯೇ ಇರಬೇಕು. ಆ ಚಲನೆಯಲ್ಲೇ ಬದುಕಿನ ಸಾರ್ಥಕತೆ ಇದೆ.
> ಹಾದಿಯ ನಡುವೆ ಹಿಂತೆಗೆಯುವುದು ಸರಿಯಲ್ಲ. ತಡೆದು ನಿಂತರೆ ಆಳ ಪ್ರಪಾತಕ್ಕೆ ಉರುಳ
> ಬೇಕಾಗುತ್ತದೆ.
> ಆದ್ದರಿಂದ ಜಗತ್ತು ಸಹಜವಾಗಿ ಮುಂದುವರಿಯಲು, ಜೀವನೋತ್ಸಾಹ ಕಳೆದು ಹೋಗದಿರಲು ಅನ್ವೇಷಣೆಯ
> ಬದುಕು ಸ್ಪೂರ್ತಿಯಾಗುತ್ತದೆ. ಸಿಗದೇ ಇರುವುದನ್ನು ಪಡೆಯುವ ಧಾವಂತದಲ್ಲಿ ಲಭ್ಯವಾಗುವ ಅನುಭವ
> ನಮ್ಮನ್ನು ಔನ್ನತ್ಯಕ್ಕೆ ಏರಿಸುತ್ತದೆ. ಆತ್ಮಜ್ಞಾನವನ್ನು ಹೊಂದಲು ರಹದಾರಿಯಾಗುತ್ತದೆ.
> ಎಲ್ಲಾ ಸ್ನೇಹ-ಸಂಬಂಧಗಳಲ್ಲಿರುತ್ತಾ ದೂರವುಳಿಯುವ, ನಮ್ಮನ್ನು ನಾವು ತಿಳಿಯುವ ಅರಿವು
> ನಮ್ಮೆಲ್ಲರಲ್ಲಿ ಮೂಡಲಿ, ಧನ್ಯ ಬಾಳುವೆ ನಮ್ಮದಾಗಲಿ.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to