Good ias officer like bharath lal meena needs to many districts
On Mar 25, 2016 7:56 AM, "HAREESHKUMAR K Agasanapura" <harihusk...@gmail.com>
wrote:

> http://vijayavani.net/?p=1752677
>
> *ಆಡಳಿತ ಪಾಠ ಕಲಿಸಿದ ಪಿಲಿಕುಳ ನಿಸರ್ಗಧಾಮ*
>
> BY ವಿಜಯವಾಣಿ ನ್ಯೂಸ್ <http://vijayavani.net/?author=3> · MAR 25, 2016
>
> *ಪಿಲಿಕುಳ ನಿಸರ್ಗಧಾಮದ ನೀಲಿನಕ್ಷೆ ಅನ್ವಯ ಈ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ, ವಾಟರ್
> ಪಾರ್ಕನ್ನೊಳಗೊಂಡ ಮನರಂಜನಾ ಕೇಂದ್ರ, ವಿಜ್ಞಾನ ಕೇಂದ್ರ ಹಾಗೂ ಹೆರಿಟೇಜ್ ವಿಲೇಜ್
> ತಲೆಯೆತ್ತಬೇಕಾಗಿತ್ತು. ಆ ಜಮೀನಿನಲ್ಲಿದ್ದ ಜನರನ್ನೇನೋ ಸ್ಥಳಾಂತರಿಸಿದೆವು. ಆದರೆ, ಈ
> ಕಲ್ಪನೆಗೆ ಸಾಕಾರ ರೂಪ ನೀಡುವುದು ಬಹುದೊಡ್ಡ ಸವಾಲಾಗಿತ್ತು.*
>
> ಮೂಡಣದಲ್ಲಿ ಹಸಿರು ಹೊದ್ದು ನಿಂತ ಪಶ್ಚಿಮ ಘಟ್ಟ, ಪಡುವಣದಲ್ಲಿ ವಿಶಾಲವಾಗಿ ಹರಡಿರುವ
> ಅರಬ್ಬಿ ಸಮುದ್ರ. ಹೀಗೆ ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ಕಡಲತಡಿಯ ನಗರ ಮಂಗಳೂರು.
> ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ಈ ನಗರ ಸಾಂಸ್ಕೃತಿಕ ಶ್ರೀಮಂತಿಕೆಯ ಜತೆಗೆ
> ಶಿಕ್ಷಿತ, ವಿಚಾರಶೀಲ ನಾಗರಿಕರ ನೆಲೆಬೀಡು ಕೂಡ. ಇಷ್ಟು ಸಂಪದ್ಭರಿತವಾಗಿರುವ ನಗರದಲ್ಲಿ
> ದೊಡ್ಡ ಕೊರತೆಯೊಂದು ಕಾಡುತ್ತಿತ್ತು. ಪಶ್ಚಿಮ ಘಟ್ಟದ ನೈಸರ್ಗಿಕ ಸಂಪತ್ತನ್ನು
> ಅನಾವರಣಗೊಳಿಸುವ, ಅಲ್ಲಿನ ಸಸ್ಯ, ಪ್ರಾಣಿ ಪ್ರಭೇದ ಹಾಗೂ ಶ್ರೀಮಂತ ಸಂಸ್ಕೃತಿಯ ಪರಿಚಯ
> ಮಾಡಿಸುವಂಥ ತಾಣ ಇರಲಿಲ್ಲ. ಈ ಕೊರತೆ ನೀಗಿಸಲು ರೂಪುತಳೆದ ಪರಿಕಲ್ಪನೆಯೇ ‘ಪಿಲಿಕುಳ
> ನಿಸರ್ಗಧಾಮ’. ಈ ಕಲ್ಪನೆಯನ್ನು ವಾಸ್ತವಕ್ಕಿಳಿಸಿದ ಪ್ರಕ್ರಿಯೆಯಿದೆಯಲ್ಲ, ಅದು ಆಡಳಿತದಲ್ಲಿ
> ಸಂಶೋಧನೆ, ಸಂಘಟಿತ ಮತ್ತು ಸಂತುಲಿತ ಕಾರ್ಯಯೋಜನೆ ಹಾಗೂ ಸರ್ಕಾರಿ-ಖಾಸಗಿ ಸಹಭಾಗಿತ್ವಕ್ಕೆ
> ಅತ್ಯುತ್ತಮ ನಿದರ್ಶನವೆಂದು ಧಾರಾಳವಾಗಿ ಹೇಳಬಹುದು.
>
> ಪ್ರಮುಖ ನಗರಗಳಲ್ಲಿ ಬಹೂಪಯೋಗಿ ಉದ್ಯಾನ ಸ್ಥಾಪಿಸುವ ಚಿಂತನೆಯೊಂದು ಬಹುಕಾಲದಿಂದ ನನ್ನ
> ತಲೆಯಲ್ಲಿ ಇತ್ತು. ನಾನು ದ.ಕ. ಜಿಲ್ಲಾಧಿಕಾರಿಯಾಗಿದ್ದಾಗ ಕಾಕತಾಳೀಯವೆಂಬಂತೆ ಸರ್ಕಾರ
> ಪ್ರಮುಖ ನಗರಗಳಲ್ಲಿ ಲಂಗ್ ಸ್ಪೇಸ್ (ನಗರಗಳಲ್ಲಿ ಆರೋಗ್ಯಕರ ಪರಿಸರಕ್ಕೆ ಅನುಕೂಲವಾಗಲು)
> ಸ್ಥಾಪಿಸುವಂತೆ ಸುತ್ತೋಲೆ ಹೊರಡಿಸಿತು. ಇದು ಜಿಲ್ಲಾಡಳಿತವನ್ನು ಸೂಕ್ತ ಸ್ಥಳದ ಪತ್ತೆಗೆ
> ಪ್ರೇರೇಪಿಸಿತು. ಇದೊಂದು ವಿಶಿಷ್ಟ ಯೋಜನೆಯಾಗಿದ್ದು, ಶಿಕ್ಷಣ, ಮನೋರಂಜನೆ, ಪ್ರಕೃತಿ
> ಪರಿಚಯದ ಜತೆಗೆ ಆ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಪರಿಕಲ್ಪನೆ
> ಹೊಂದಿತ್ತು.
>
> ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬಹೂಪಯೋಗಿ ಉದ್ಯಾನ ಸ್ಥಾಪನೆಗೆ ವಿವಿಧ
> ಸ್ಥಳಗಳನ್ನು ಸೂಚಿಸಲಾಗಿತ್ತು. ಇದರಲ್ಲಿ ಅನೇಕ ಸ್ಥಳಗಳ ಪರಿಶೀಲನೆ ಬಳಿಕ ಮಂಗಳೂರಿನಿಂದ 11
> ಕಿ.ಮೀ. ದೂರದಲ್ಲಿ ಅರಣ್ಯ ಇಲಾಖೆಗೆ ಸೇರಿದ 20 ಎಕರೆ ವಿಸ್ತೀರ್ಣದ ನರ್ಸರಿ ಇದಕ್ಕೆ
> ಸೂಕ್ತ ಎಂದು ತೀರ್ವನಿಸಲಾಯಿತು. ಆದರೆ ಈ ನರ್ಸರಿಯ ಸುತ್ತ ಪೊದೆಗಳು ಬೆಳೆದಿದ್ದವು. ಒಡೆದ
> ಕೆರೆ ಹಾಗೂ ನಿರುಪಯುಕ್ತ ಕ್ವಾರಿ ಅಲ್ಲಿತ್ತು. ಅತಿಕ್ರಮಣವೂ ನಡೆದಿತ್ತು. ಹೀಗಾಗಿ ನರ್ಸರಿ
> ಸುತ್ತಮುತ್ತಲಿನ ಸ್ಥಳದ ಸರ್ವೆ ನಡೆಸುವಂತೆ ನಾನು ಆದೇಶಿಸಿದೆ. ಈ ಜಮೀನಿಗೆ ಸಂಬಂಧಿಸಿದ
> ದಾಖಲೆಗಳನ್ನು ಪರಿಶೀಲಿಸುವಾಗ ಆ ಪ್ರದೇಶದಲ್ಲಿ 350 ಎಕರೆ ಸರ್ಕಾರಿ ಜಾಗವಿರುವುದು ಬೆಳಕಿಗೆ
> ಬಂತು. ಸರಿ, ಮಂಗಳೂರಿನಲ್ಲಿ ಇಕೋ ಪಾರ್ಕ್ ನಿರ್ವಣಕ್ಕೆ ಇದಕ್ಕಿಂತ ಸೂಕ್ತವಾದ ಸ್ಥಳ ಬೇರೆ
> ಇಲ್ಲ ಎಂಬ ತೀರ್ವನಕ್ಕೆ ನಾವಾಗಲೇ ಬಂದುಬಿಟ್ಟೆವು.
>
> ಒಕ್ಕಲೆಬ್ಬಿಸುವ ಸವಾಲು: ಈ ವಿಶಾಲ ಜಾಗ ನಮ್ಮ ಕನಸಿನ ಯೋಜನೆಯ ಸಾಕಾರಕ್ಕೆ ಪ್ರಶಸ್ತ
> ತಾಣವಾಗಿತ್ತೇನೋ ನಿಜ. ಆದರೆ, ಆ ಜಮೀನನ್ನು ಸುರ್ಪದಿಗೆ ತೆಗೆದುಕೊಳ್ಳುವುದು ಸುಲಭದ
> ಕೆಲಸವಾಗಿರಲಿಲ್ಲ. ಅಲ್ಲಿ ಅನೇಕ ಅಕ್ರಮ ಗುಡಿಸಲುಗಳು ಹರಡಿಕೊಂಡಿದ್ದವು. ಜತೆಗೆ ಜಮೀನಿನ
> ಮಾಲೀಕತ್ವ ಸರ್ಕಾರದ ಅನೇಕ ಇಲಾಖೆಗಳ ನಡುವೆ ಹಂಚಿಹೋಗಿತ್ತು. ಹೀಗಾಗಿ ನಾನು ಭೂ ಕಂದಾಯ
> ಕಾಯ್ದೆ ಅಡಿಯಲ್ಲಿ ಆಡಳಿತಾತ್ಮಕ ಅಧಿಕಾರ ಬಳಸಿಕೊಂಡು ಆ ಜಮೀನನ್ನು ಥೀಮ್ ಪಾರ್ಕ್
> ನಿರ್ವಣಕ್ಕೆ ಕಾಯ್ದಿರಿಸಿದೆ. ಇದರಿಂದಾಗಿ, ವಿವಿಧ ಇಲಾಖೆಗಳು ವಿವಿಧ ಉದ್ದೇಶಗಳಿಗೆ
> ರೂಪಿಸಿದ್ದ ಅರೆಬೆಂದ ಪ್ರಸ್ತಾವನೆಗಳಿಗೆ ಬ್ರೇಕ್ ಹಾಕಿದಂತಾಯಿತು. ಆ ಜಮೀನಿನಲ್ಲಿ
> ಅತಿಕ್ರಮಣ ತಡೆಯಲು ವಿವಿಧ ಯೋಜನೆಗಳ ಬಡ್ಡಿ ಹಣದಲ್ಲಿ ಬೇಲಿ ನಿರ್ವಿುಸಲಾಯಿತು. ಅಲ್ಲಿ
> ಅಕ್ರಮವಾಗಿ ನೆಲೆ ನಿಂತಿರುವ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಿತ್ತು. ಒಟ್ಟು 250
> ಕುಟುಂಬಗಳಿದ್ದು, ಎಲ್ಲರೂ ಕೃಷಿ ಕೂಲಿ ಕಾರ್ವಿುಕರಾಗಿದ್ದರು. ಹೀಗಾಗಿ ಹೊಟ್ಟೆಪಾಡಿಗೆ
> ತೊಂದರೆಯಾಗದಂತೆ ಹಳ್ಳಿಗೆ ಸಮೀಪದಲ್ಲೇ ಮನೆಗಳನ್ನು ಹೊಂದಲು ಬಯಸಿದ್ದರು. ಅವರಿಗೆ
> ಪುನರ್ವಸತಿ ಕಲ್ಪಿಸಲು ನಗರದ ಸಮೀಪ ಜಮೀನು ಗುರುತಿಸಿ, ನಿವೇಶನಗಳನ್ನು ಹಂಚಲಾಯಿತು.
> ಸರ್ಕಾರದ ವಸತಿ ಯೋಜನೆಗಳ ನೆರವಿನಿಂದ ಮನೆಗಳನ್ನೂ ನಿರ್ವಿುಸಿಕೊಡಲಾಯಿತು. ಈ ಕ್ರಮ
> ಸಾರ್ವಜನಿಕರಲ್ಲಿ ಜಿಲ್ಲಾಡಳಿತದ ಬಗ್ಗೆ ನಂಬಿಕೆ ಹುಟ್ಟಿಸುವ ಜತೆಗೆ ಯೋಜನೆಯ
> ಉದ್ದೇಶವನ್ನೂ ಸರಿಯಾಗಿ ಮನವರಿಕೆ ಮಾಡಿಕೊಟ್ಟಿತು.
>
> ನೀಲಿನಕ್ಷೆ ಅನ್ವಯ ಈ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ, ವಾಟರ್ ಪಾರ್ಕನ್ನೊಳಗೊಂಡ
> ಮನರಂಜನಾ ಕೇಂದ್ರ, ವಿಜ್ಞಾನ ಕೇಂದ್ರ ಹಾಗೂ ಹೆರಿಟೇಜ್ ವಿಲೇಜ್ ತಲೆ ಎತ್ತಬೇಕಾಗಿತ್ತು.
> ಜನರನ್ನೇನೋ ಸ್ಥಳಾಂತರಿಸಿದೆವು. ಆದರೆ, ಈ ಕಲ್ಪನೆಗೆ ಸಾಕಾರ ರೂಪ ನೀಡುವುದು
> ಸವಾಲಾಗಿತ್ತು.
>
> ಅನುಷ್ಠಾನಕ್ಕೆ ಕಾರ್ಯತಂತ್ರ: ಇಂಥ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ನಿರಂತರ ನಿರ್ವಹಣೆ
> ಅಗತ್ಯ. ಹೀಗಾಗಿ ಇದಕ್ಕೆ ಸ್ವಾಯತ್ತ ಸಂಸ್ಥೆಯ ಅಗತ್ಯ ಮನಗಂಡು ಅಧಿಕಾರಿಗಳು ಹಾಗೂ
> ನಾಗರಿಕರನ್ನೊಳಗೊಂಡ ಸೊಸೈಟಿಯನ್ನು ನೋಂದಾಯಿಸಲಾಯಿತು. ಯೋಜನೆಯ ಪ್ರತಿ ಘಟಕದ
> ಮೇಲ್ವಿಚಾರಣೆಗೆ ಒಂದು ಉಪಸಮಿತಿ ರಚಿಸಲಾಯಿತು. ಇದರಲ್ಲಿ ಈ ಘಟಕಕ್ಕೆ ಸಂಬಂಧಿಸಿದ
> ಅಧಿಕಾರಿಗಳು, ತಜ್ಞರು ಹಾಗೂ ನಾಗರಿಕರನ್ನು ತೊಡಗಿಸಿಕೊಳ್ಳಲಾಯಿತು. ಈ ಸಮಿತಿ ನಿಯತವಾಗಿ
> ಸಭೆ ಸೇರಿ ಯೋಜನೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತಿತ್ತು. ಜಿಲ್ಲಾಧಿಕಾರಿಯಾಗಿದ್ದ
> ನಾನು ತಿಂಗಳಿಗೊಮ್ಮೆ ಎಲ್ಲ ಉಪಸಮಿತಿಗಳನ್ನು ಒಟ್ಟುಸೇರಿಸಿ ಸಭೆ ನಡೆಸಿ, ಪ್ರಗತಿ
> ಪರಿಶೀಲಿಸುವ ಮೂಲಕ ಯೋಜನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು
> ಖಚಿತಪಡಿಸಿಕೊಳ್ಳುತ್ತಿದ್ದೆ.
>
> ಈ ಯೋಜನೆಗೆ ಭಾರಿ ಪ್ರಮಾಣದ ಹಣದ ಅಗತ್ಯವಿತ್ತು. ಡಿಸಿಗೆ ಲಭ್ಯವಿರುವ ಅನುದಾನದಲ್ಲಿ ಇದು
> ಕಷ್ಟಸಾಧ್ಯವಾಗಿತ್ತು. ಹೀಗಾಗಿ ಯೋಜನೆಯನ್ನು ವಿವಿಧ ವಿಭಾಗಗಳನ್ನಾಗಿ ವಿಂಗಡಿಸಿ, ಆರ್ಥಿಕ
> ನೆರವು ಪಡೆಯಲು ನಿರ್ಧರಿಸಲಾಯಿತು.
>
> ಸರ್ಕಾರದ ನೆರವು: ವಿಜ್ಞಾನ ಕೇಂದ್ರ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಕೇಂದ್ರ
> ಸರ್ಕಾರ ನೆರವು ನೀಡಿತು. ಮನೋರಂಜನಾ ಚಟುವಟಿಕೆಗಳಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ
> ಅನುದಾನ ನೀಡಿತು. ಪಾರ್ಕ್​ನಲ್ಲಿ ಗಿಡ ನೆಡುವುದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿತು. ನಗರದ
> ಬೇರೆ ಪ್ರದೇಶಗಳಲ್ಲಿದ್ದ ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಯ ನರ್ಸರಿಗಳನ್ನು ಇಲ್ಲಿಗೆ
> ಸ್ಥಳಾಂತರಿಸಲಾಯಿತು.
>
> ಖಾಸಗಿ ಸಹಭಾಗಿತ್ವ: ಈ ಯೋಜನೆಯಲ್ಲಿ ವಾಟರ್ ಪಾರ್ಕ್ ಕೂಡ ಸೇರಿತ್ತು. ಇದು ಉತ್ತಮ ಆದಾಯ
> ತರುವ ಚಟುವಟಿಕೆಯಾಗಿತ್ತು. ಹೀಗಾಗಿ ಇದರ ನಿರ್ಮಾಣ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು
> ಖಾಸಗಿ ಸಂಸ್ಥೆಗೆ ವಹಿಸಲು ನಿರ್ಧರಿಸಲಾಯಿತು. ಗಾಲ್ಪ್ ಕೋರ್ಟ್​ಗೂ ಇದೇ ಮಾದರಿ
> ಅನುಸರಿಸಲಾಯಿತು. ಪ್ರವಾಸಿಗರಿಗೆ ತಾತ್ಕಾಲಿಕವಾಗಿ ತಂಗಲು ಅಲ್ಲಲ್ಲಿ ಗುಡಿಸಲು ನಿರ್ವಿುಸುವ
> ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರ ಸ್ವಾಮ್ಯದ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ ಲಿ.ಗೆ
> ನೀಡಲಾಯಿತು. ಆದಾಯಕ್ಕಾಗಿ, ಉದ್ಯಾನ ಕಾರ್ಯಾರಂಭಿಸುತ್ತಿದ್ದಂತೆ ಗ್ರಾಹಕರಿಗೆ ಶುಲ್ಕ
> ವಿಧಿಸುವ ವ್ಯವಸ್ಥೆ ಜಾರಿಗೊಳಿಸಲಾಯಿತು.
>
> ಕೆರೆಗೆ ಕಾಯಕಲ್ಪ: ಉದ್ಯಾನದ ಮಧ್ಯಭಾಗದಲ್ಲಿರುವ ಕೆರೆ ಎಲ್ಲ ಚಟುವಟಿಕೆಗಳ
> ಕೇಂದ್ರಬಿಂದುವಾಗಿತ್ತು. ಪಾರ್ಕ್​ನ ಸುತ್ತಮುತ್ತಲಿನ ಕೊಳಚೆ ನೀರು ಈ ಕೆರೆ ಸೇರುತ್ತಿತ್ತು.
> ಅದರಲ್ಲಿ ಹೂಳು ತುಂಬಿಕೊಂಡಿದ್ದು, ಬದಿಯ ಗೋಡೆಗಳು ಕುಸಿದು ಬಿದ್ದಿದ್ದವು. ಅದೃಷ್ಟವಶಾತ್
> ಗಣಿ ಕಂಪನಿಯೊಂದಕ್ಕೆ ಸೇರಿದ ನೆಲ ಅಗೆಯುವ ಯಂತ್ರಗಳು ಕೆಲಸವಿಲ್ಲದೆ ಖಾಲಿ ಬಿದ್ದಿದ್ದವು.
> ಇದೇ ಯಂತ್ರಗಳನ್ನು ಕೆರೆ ಹೂಳೆತ್ತಲು ಬಳಸಿಕೊಳ್ಳಲಾಯಿತು. ಯಂತ್ರದ ಇಂಧನ ವೆಚ್ಚ ಭರಿಸಲು
> ಇನ್ನೊಂದು ಕಂಪನಿ ಮುಂದೆ ಬಂತು. ಈ ರೀತಿಯಾಗಿ ಖಾಸಗಿ ಸಹಭಾಗಿತ್ವದೊಂದಿಗೆ ಹೂಳು ತೆಗೆಯುವ
> ಕಾರ್ಯ ಪೂರ್ಣಗೊಳಿಸಲಾಯಿತು. ಮನೋರಂಜನಾ ಉದ್ದೇಶಕ್ಕಾಗಿ ಕೆರೆಯಲ್ಲಿ ಜೆಟ್ ಬೋಟ್,
> ಪೆಡಲ್, ರೋಯಿಂಗ್ ಹಾಗೂ ಮೋಟಾರ್ ಬೋಟ್​ಗಳನ್ನು ಇಡಲಾಯಿತು.
>
> ಜೈವಿಕ ಉದ್ಯಾನ: 100 ಎಕರೆ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ ಸ್ಥಾಪನೆಗೆ
> ನಿರ್ಧರಿಸಲಾಯಿತು. ಭಾರತೀಯ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ ಪ್ರಾಣಿಗಳಿಗೆ
> ಅನುಕೂಲವಾಗುವಂತೆ ದೊಡ್ಡ ಆವರಣದೊಳಗಡೆ ಅವುಗಳನ್ನು ಬಿಡಲು ನಿರ್ಧರಿಸಲಾಯಿತು. ಮಂಗಳೂರು
> ಸುತ್ತಮುತ್ತಲಿನ ಪ್ರಮುಖ ಕಂಪನಿಗಳು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ
> (ಸಿಎಸ್​ಆರ್)ಚಟುವಟಿಕೆಯಂಗವಾಗಿ ಪ್ರಾಣಿಗಳಿಗೆ ಪಂಜರ, ಪ್ರಾಣಿಗಳ ದತ್ತು ಸ್ವೀಕಾರ ಮುಂತಾದ
> ಚಿಕ್ಕಪುಟ್ಟ ಕಾರ್ಯಗಳ ಹೊಣೆ ವಹಿಸಿಕೊಂಡವು. ರಾಜ್ಯ ಸರ್ಕಾರದಿಂದಲೂ ಅನುದಾನ ಸಿಕ್ಕಿತು.
> ಇಂದು ಪಿಲಿಕುಳ ಜೈವಿಕ ಉದ್ಯಾನ ಭಾರತದ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಪ್ರಮುಖ
> ಉದ್ಯಾನಗಳಲ್ಲೊಂದು. ಕಾಳಿಂಗಸರ್ಪದ ಸಂತಾನೋತ್ಪತ್ತಿ ಕೇಂದ್ರ ಹೊಂದಿರುವ ಏಕೈಕ ಮೃಗಾಲಯ ಕೂಡ
> ಹೌದು.
>
> ಹೆರಿಟೇಜ್ ವಿಲೇಜ್: ಈ ಭಾಗದ ಕಲೆ, ಸಂಸ್ಕೃತಿಗಳು ನಶಿಸಿ ಹೋಗುತ್ತಿರುವುದನ್ನು ಗಮನಿಸಿದ
> ಜಿಲ್ಲಾಡಳಿತ ಹೆರಿಟೇಜ್ ವಿಲೇಜ್ ಸ್ಥಾಪನೆಗೆ ಮುಂದಾಯಿತು. ಕುಶಲಕರ್ವಿುಗಳು ಅಲ್ಲೇ ಉಳಿದು
> ಕಲಾಕೃತಿಗಳನ್ನು ರಚಿಸಿ, ಮಾರಾಟ ಮಾಡಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಿತು. ಮಂಗಳೂರಲ್ಲಿ
> ಕೂಡ ಅವರಿಗಾಗಿ ಪ್ರತ್ಯೇಕ ಮಾರಾಟ ಮಳಿಗೆ ಸ್ಥಾಪಿಸಲಾಯಿತು. ಕುಶಲಕರ್ವಿುಗಳ 25 ಕುಟುಂಬಗಳು
> ಈ ಹಳ್ಳಿಗೆ ಸ್ಥಳಾಂತರಗೊಂಡವು. ಪ್ರವಾಸಿಗರಿಗೆ ಹಳ್ಳಿ ಸೊಗಡಿನ ಪರಿಚಯ ಮಾಡಿಸಲು ‘ಗುತ್ತಿನ
> ಮನೆ’ (ಹಳ್ಳಿಯ ಮುಖ್ಯಸ್ಥನ ಮನೆ) ನಿರ್ವಿುಸಲಾಗಿದೆ. ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು
> ಪ್ರವಾಸಿಗರಿಗೆ ಪರಿಚಯಿಸಲು ‘ಕಂಬಳ ಗದ್ದೆ’ ರೂಪುಗೊಂಡಿದ್ದು, ಆಗಾಗ ಕಂಬಳ ಕೂಡ ನಡೆಯುತ್ತದೆ.
>
> ವಿಜ್ಞಾನ ಕೇಂದ್ರ: ವಿಜ್ಞಾನ ಪ್ರಯೋಗಗಳ ಮೂಲಕ ಜನರಿಗೆ ಮನರಂಜನೆ ನೀಡುವ ಜತೆಗೆ ವಿಜ್ಞಾನ
> ಕಲಿಕೆಯತ್ತ ಮಕ್ಕಳ ಆಸಕ್ತಿಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಆರ್ಥಿಕ
> ನೆರವಿನೊಂದಿಗೆ ಈ ಕೇಂದ್ರ ಸ್ಥಾಪಿಸಲಾಯಿತು.
>
> ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ: ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ನೆರವಿನೊಂದಿಗೆ ಸಮಾಜ
> ನಿರ್ಮಾಣ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಯಿತು. ಇಲ್ಲಿ ಮಕ್ಕಳಿಗೆ ಶಿಬಿರ
> ನಡೆಸಲು ಅನುಕೂಲ ಕಲ್ಪಿಸಲಾಗಿದೆ.
>
> ಮನೋರಂಜನೆ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ
> ರಕ್ಷಣೆಯನ್ನೊಳಗೊಂಡ ಈ ಯೋಜನೆ ಅತ್ಯಂತ ವಿಶಿಷ್ಟವಾದದ್ದು. ಇದರ ಯಶಸ್ಸು ಒಬ್ಬ
> ವ್ಯಕ್ತಿಗಲ್ಲ, ಬದಲಿಗೆ ಇಡೀ ಯೋಜನಾ ತಂಡಕ್ಕೆ ಸೇರಿದ್ದು. ಒಟ್ಟಾರೆ ಸಂಪನ್ಮೂಲಗಳ
> ಕೇಂದ್ರೀಕರಣಕ್ಕೆ, ಯೋಜನೆಯ ಆರಂಭದಿಂದ ಅಂತ್ಯದವರೆಗೆ ಜನರ ಸಹಭಾಗಿತ್ವ, ಪಾರದರ್ಶಕತೆ
> ಹಾಗೂ ಉತ್ತರದಾಯಿತ್ವ- ಈ ಮುಂತಾದ ವಿಶೇಷಗಳ ಸಂಗಮವಾದ ಪಿಲಿಕುಳ ನಿಸರ್ಗಧಾಮ ನನ್ನ
> ಕಾರ್ಯಾವಧಿಯಲ್ಲಿನ ಸಿಹಿ ಸಿಹಿ ನೆನಪುಗಳಲ್ಲೊಂದು…
>
> *ಲೇಖಕರ ಕುರಿತು…*
>
> ಭರತ್ ಲಾಲ್ ಮೀನಾ ಮೂಲತಃ ರಾಜಸ್ಥಾನದವರು. ಬಡ ಕೃಷಿ ಕುಟುಂಬದಲ್ಲಿ 1957ರ ಫೆಬ್ರವರಿ
> 5ರಂದು ಜನನ. 1985ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ. ಬೆಳಗಾವಿ ಜಿಪಂ ಸಿಇಒ, ದಕ್ಷಿಣ
> ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿ, ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ
> ಹೆಚ್ಚುವರಿ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು
> ನಿಭಾಯಿಸಿದ್ದಾರೆ. ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ
> ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತದಲ್ಲಿ ಜನಸಹಭಾಗಿತ್ವದ ಅನೇಕ ಉಪಕ್ರಮಗಳನ್ನು
> ಕೈಗೊಂಡಿರುವ ಹೆಗ್ಗಳಿಕೆ ಇವರದು. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿ ಇಂಗ್ಲೆಂಡ್​ನಲ್ಲಿ
> ಅಧ್ಯಯನ ನಡೆಸಿರುವ ಇವರು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ‘ಅಪ್ನಾ ದೇಶ್’ ಎಂಬ
> ಎನ್​ಜಿಒ ಹುಟ್ಟುಹಾಕುವ ಮೂಲಕ ಮನೆ ಮಾತಾಗಿದ್ದರು. ‘ಲೈಫ್ ಆಂಡ್ ಪೀಸ್’ ಎಂಬ ಕೃತಿಯನ್ನು
> ಕೂಡ ರಚಿಸಿದ್ದಾರೆ.
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email harihusk...@gmail.com
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to