Super article. Ge
On Aug 9, 2016 3:39 PM, "Ashok" <ashok.i...@gmail.com> wrote:

> ಮನೆ ಮದ್ದು
> ಅನೇಕ ಕಾಹಿಲೆ -ರೋಗ -ದೈಹಿಕ ತೊಂದರೆಗೆ ಮನೆಯಲ್ಲೇ , ಆಹಾರ, ನೀರು ಮನೆಯಲ್ಲಿರುವ ಅಡಿಗೆಗೆ
> ಉಪಯೋಗಿಸುವ ಸೊಪ್ಪು, ತರಕಾರಿ, ವಸ್ತು, ಸಸ್ಯ, ನಾರು ಬೇರುಗಳಿಂದ ಔಷಧಿ ಮಾಡಿಕೊಂಡು
> ವಾಸಿಮಾಡಿಕೊಳ್ಳಬಹುದು. ಈ ಪದ್ದತಿ ಅನೂಚಾನವಾಗಿ ವಾಡಿಕೆಯಿಂದ ತಲೆಮಾರಿನಿಂಧ ತಲೆಮಾರಿಗೆ
> ,ಮನೆ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಬರವಣಿಗೆಗಳ ದಾಖಲೆ ಸಿಗುವುದು ಕಷ್ಟ. ಈಚೆಗೆ
> ಇದನ್ನು ಈ ಮನೆ ಮದ್ದಿನ ಬಗೆಯನ್ನು ದಾಖಲು ಮಾಡಲಾಗುತ್ತಿದೆ.
>
> ಹೆಚ್ಚಿನ ಕಾಹಿಲೆ, ದೈಹಿಕ ತೊಂದರೆ ಇದ್ದಾಗ ಇದನ್ನೇ ನೆಚ್ಚಿಕೊಳ್ಳದೇ ವೈದ್ಯರನ್ನು
> ಕಾಣುವುದು ಒಳಿತು
> ತರಕಾರಿ ಸಂಪಾದಿಸಿ
>
> .ಜನ ಸಾಮಾನ್ಯರಲ್ಲಿ ರೂಢಿಯಲ್ಲಿರುವ ಪದ್ದತಿ-ಚಿಕಿತ್ಸೆ:
>
> ನುಗ್ಗೆಕಾಯಿ೧ ಪ್ರಮುಖ ತರಕಾರಿಯಷ್ಟೆ ಅಲ್ಲ, ಔಷಧೀಯ ಸಸ್ಯ ಕೂಡ. ಇದರ ಬೇರು, ತೊಗಟೆ, ಎಲೆ,
> ಹೂವು, ಹಣ್ಣು, ಕಾಯಿ ಹಾಗು ಬೀಜಗಳು ನಾನಾ ರೋಗಗಳಿಗೆ ರಾಮಬಾಣ.
> ತಲೆನೋವು, ನುಗ್ಗೆ ಅಂಟಿನಿಂದ ಪ್ರತಿದಿನ ಬಾಯಿ ಮುಕ್ಕಳಿಸಿದರೆ, ಹಲ್ಲು ಬೀಳುವುದು ಹಾಗೂ
> ಹಲ್ಲಿಗೆ ಸಂಬಂಧಿಸಿದ ಎಲ್ಲಾ ತೊಂದರೆಗಳು ಗುಣವಾಗುತ್ತದೆ.
> ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವಿಸಿದರೆ ಮೂಲವ್ಯಾಧಿಯಿಂದ
> ಮುಕ್ತರಾಗಬಹುದು.
> ಶರೀರದ ಯಾವುದೇ ಗಂಟುಗಳಲ್ಲಿ ಊತ ಇದ್ದರೆ, ನುಗ್ಗೆ ಮರದ ತೊಗಟೆಯನ್ನು ಬಿಸಿ ನೀರಿನಲ್ಲಿ
> ಅರೆದು ಊತದ ಮೇಲೆ ಲೇಪನ ಮಾಡಿದರೆ ಊತ ಬೇಗ ಕಡಿಮೆಯಾಗುತ್ತದೆ.
> ನುಗ್ಗೆ ಎಲೆಗಳನ್ನು ಬಿಸಿನೀರಿನಲ್ಲಿ ಅರೆದು ನೋವಿರುವ ಜಾಗಕ್ಕೆ ಲೇಪನ ಮಾಡಿದರೆ ನೋವು
> ಕಡಿಮೆಯಾಗುತ್ತದೆ.
> (೨[[೧]])
>
> ಸೊಪ್ಪು
>
> ಔಷಧೀಯ ಸಸ್ಯಗಳು-ಫಲಗಳು ಸಂಪಾದಿಸಿ
>
> (Solanum nigrum (European black nightshade or locally just "black
> nightshade", duscle, garden nightshade, hound's berry, petty morel, wonder
> berry, small-fruited black nightshade or popolo)
>
> 
> Leaves, flowers and fruit of Solanum nigrum ಎಳೆಯ ಕಾಯಿ ವಿಷ ಕಾರಿ ಕಪ್ಪು ಹಣ್ಣು
> ಒಳ್ಳೆಯದು.
> ಕಾಕ ಮಾಚಿ -ಇಂಗ್ಲಿಷ್ -ವಿಕಿ
>
> Natural Ways to Boost Testosterone Vitamins.-Solanum nigrum (European
> black nightshade or locally just "black nightshade", duscle, garden
> nightshade, hound's berry, petty morel, wonder berry, small-fruited black
> nightshade or popolo) is a species in the Solanum genus,;The toxicity of
> Solanum nigrum varies widely depending on the variety, and poisonous plant
> experts advise to avoid eating the berries unless they are a known edible
> strain
> [[೨]]
>
> ಕಾಕಮಾಚಿ - ಮಲೆನಾಡು ಗ್ರಾಮಗಳಲ್ಲಿ ಕಾಕಮಟ್ಟಲು ಎನ್ನುವರು
> ಕಾಕಮಾಚಿಯಲ್ಲಿ ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ
> ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ.
> ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ.
> ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲಿ ಹಾಕಿ ಬೆಚ್ಚನೆಯ
> ಮಿಶ್ರಣವನ್ನು ಹಚ್ಚಿದರೆ ಕಜ್ಜಿ, ತುರಿ ಬಾಧೆ ಬರುವುದಿಲ್ಲ. ಬಂದರೆ ವಾಸಿಯಾಗುವುದು,
> ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು
> ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿಸುವುದು ಮಲೆ ನಾಡಿನಲ್ಲಿ
> ರೂಢಿಯಲ್ಲಿದೆ.
> ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸಬಹುದು. ಇದರ ಔಷಧೀಯ
> ಗುಣಕ್ಕಾಗಿ, ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.
> ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು. ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ
> ಸೇವಿಸುವರು. ಕಾಕ ಮಾಚಿ ಗಿಡದ ಎಲೆಯನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ
> ರೋಗಕ್ಕೆ, ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ ಎಂದು ಹೇಳುತ್ತಾರೆ.
> ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.
> [[೩]]
>
> ಪಪ್ಪಾಯಿ ಸಂಪಾದಿಸಿ
>
> ಯುರೋಪ್ ಪಪ್ಪಾಯಿ ಹಣ್ಣಿನ ತವರೂರು. ಇದರ ವೈಜ್ಞಾನಿಕ ಹೆಸರು ‘ಕ್ಯಾರಿಕಾ’. ಪಪ್ಪಾಯಿಯಲ್ಲಿ
> ವಿವಿಧ ತಳಿಗಳಿವೆ. ಮೆಕ್ಸಿಕೊದಲ್ಲಿ ಶೇಕಡ ನಲವತ್ತರಷ್ಟು ಬಿಳಿ ಪಪ್ಪಾಯಿಯನ್ನು
> ಬೆಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕಾಣಸಿಗುವ, ಎಲ್ಲ ಋತುಗಳಲ್ಲೂ ದೊರೆಯುವ
> ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ.
> ಔಷಧೀಯ ಗುಣಗಳು: ವಿಟಮಿನ್ ಎ, ಸಿ, ಇ, ಐರನ್ ಹಾಗೂ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ.
> ಇದರಲ್ಲಿರುವ ‘ಪಪ್ಪಾಯಿಯನ್’ ಎಂಬ ಜೀವಸತ್ವವು ಜೀರ್ಣಕಾರಕವಾಗಿ ಕೆಲಸ ಮಾಡುತ್ತದೆ.
> ವಯಸ್ಸಾದಂತೆ ಕುಗ್ಗುವ ಜೀರ್ಣಶಕ್ತಿಯನ್ನು ವೃದ್ಧಿಸಲು ಪಪ್ಪಾಯಿ ಸಹಕರಿಸುತ್ತದೆ. ಮೂಳೆ
> ಸವೆತಕ್ಕೆ, ಹೃದಯ ಕಾಯಿಲೆ ಉಳ್ಳವರಿಗೂ ಪಪ್ಪಾಯಿ ಸೇವನೆ ಶ್ರೇಷ್ಠ. ಮಧುಮೇಹಿಗಳೂ ಈ
> ಹಣ್ಣನ್ನು ಧಾರಾಳವಾಗಿ ಸೇವಿಸಬಹುದು.
> ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು. ಇದರ ಎಲೆಗಳಿಂದ
> ಹಲ್ಲುಜ್ಜಿದರೆ ಹಲ್ಲು ಹಾಗೂ ವಸಡು ನೋವು ನಿವಾರಣೆಯಾಗುವವು. ಪಪ್ಪಾಯಿ ಸೇವನೆಯಿಂದ
> ಬಾಣಂತಿಯರಿಗೆ ಎದೆಹಾಲು ಹೆಚ್ಚುತ್ತದೆ. ಮಕ್ಕಳಿಗೆ, ಹಾಲುಣಿಸುವ ತಾಯಂದಿರಿಗೆ ಪಪ್ಪಾಯಿಯು
> ಶಕ್ತಿದಾಯಕ ಆಹಾರ. ಮಲಬದ್ಧತೆಯೂ ನಿವಾರಣೆಯಾಗುವುದು.
> ಹಾಲು, ಜೇನುತುಪ್ಪ ಹಾಗೂ ಪರಂಗಿ ಹಣ್ಣನ್ನು ಮಿಶ್ರ ಮಾಡಿ ಸೇವಿಸುವುದರಿಂದ ನರ ದೌರ್ಬಲ್ಯ
> ದೂರವಾಗುವುದು. ಪಪ್ಪಾಯಿ ಹಣ್ಣಿನ ಹೋಳಿನಿಂದ ಚರ್ಮವನ್ನುಜ್ಜಿದರೆ ಚರ್ಮದ ಮೇಲಿನ ಕಲೆ
> ಮಾಯವಾಗುತ್ತದೆ. ಮೂಲವ್ಯಾಧಿ, ಯಕೃತ್ತಿನ ದೋಷಗಳಿಗೂ ಪಪ್ಪಾಯಿ ಅತ್ಯುತ್ತಮ ಔಷಧ. ಎಲೆಯಿಂದ
> ಒಸರುವ ದ್ರವವನ್ನು ಗಾಯಕ್ಕೆ ಹಚ್ಚುವುದರಿಂದ ಗಾಯವು ಬೇಗನೆ ವಾಸಿಯಾಗುತ್ತವೆ.
> ನಿತ್ಯವೂ ಊಟದ ನಂತರ ಈ ಹಣ್ಣನ್ನು ನಿಯಮಿತವಾಗಿ ಸೇವಿಸಬೇಕು. ಕಣ್ಣಿನ ಆರೋಗ್ಯಕ್ಕೂ
> ಸಹಕಾರಿ. ಮನೆ ಮುಂದೆ ತುಸು ಖಾಲಿ ಜಾಗ ಉಳ್ಳವರು ಒಂದಾದರೂ ಪಪ್ಪಾಯಿ ಗಿಡವನ್ನು ಬೆಳೆದಲ್ಲಿ
> ಇದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಬೀಜದಿಂದಲೇ ವೃದ್ಧಿಯಾಗುವ ಗಿಡವಿದು. ಪೋಷಣೆ
> ಸುಲಭ. ಹೆಚ್ಚಿನ ಆರೈಕೆ ಬೇಡ.(೧. ಆರೋಗ್ಯ ದರ್ಪಣ -ಪಂಡಿತ ಶಿವಕುಮಾರ ಸ್ವಾಮಿಗಳು; ೨.
> ಪ್ರಜಾವಾಣಿ ೧೨-೭-೨೦೧೪- ಗೀತಾ ಬರ್ಲ)
> ಮನೆ ಲೇಹ್ಯ ಸಂಪಾದಿಸಿ
>
> ಬಾಣಂತಿ ಲೇಹ್ಯ
> ಆರೊಗ್ಯವರ್ಧಕ ಸಾಮಾನ್ಯ ಟಾನಿಕ್ (ಮನೆಯಲ್ಲಿ ತಯಾರಿಸುವುದು )
> ಕ್ರ.ಸಂ ವಿವರ ಪ್ರಮಾಣ (ಗ್ರಾಂ) ಷರಾ
> ಒಂದು ದ್ರಾಕ್ಷಿ ೨೦೦ ಗ್ರಾಂ. -
> ೨ ಗೋಡಂಬಿ ೧೦೦ --
> ೩ ಉತ್ತುತ್ತೆ ೨೦೦ --
> ೪ ಬಾದಾಮಿ ೧೦೦ (೧೫೦) --
> ೫ ಅಂಟು (ಔಷಧಿ) ೫೦ --
> ೬ ಅಶ್ವಗಂಧಿ ೨೫ (೫೦ ಮಕ್ಕಳಿಗೆ ೨೫ ಗ್ರಾಂ
> ೭ ಲವಂಗ ೫ --
> ೮ ಗಸಗಸೆ ೧೫೦ --
> ೯ ಒಣಶುಂಠಿ ೨೫ --
> ೧೦ ಕಲ್ಲು ಸಕ್ಕರೆ ೧೫೦ --
> ೧೧ ಸಕ್ಕರೆ ೧೫೦ (೨೫೦) --
> ೧೨ ತುಪ್ಪ ೨೫೦ --
> ೧೩ ಜಾಯಿಕಾಯಿ ೧-(೫ಗ್ರಾಂ) --
> ೧೪ ಪತ್ರೆ ೧೦ --
> ೧೫ ಮೆಣಸಿನ ಕಾಳು ೨೦ (೪೦ಕಾಳು)
> ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು
> ಸಕ್ಕರೆ ಪಾಕದಲ್ಲಿ ಇವೆಲ್ಲವನ್ನೂ ಪುಡಿಮಾಡಿ ಹಾಕಿ ತೊಳಸಿ/ಕದಡಿ ಲೇಹ ತಯಾರಿಸಿ- ಉಂಡೆ
> ಮಾಡಿಕೊಂಡು ದಿನ ೧ ರಂತೆ ಖಾಲಿ ಹೊಟ್ಟೆ ಯಲ್ಲಿ ತಿಂದು ಹಾಲು ಕುಡಿದರೆ ಆನೇಕ ತೊಂದರೆಗಳು
> ನಿವಾರಣೆ ಆಗುವುದು .ಮಕ್ಕಳಿಗೂ ಒಳ್ಳೆಯದು. ರುಚಿಯಾಗಿರತ್ತೆ, ಮಕ್ಕಳಿಗೆ ಸಿಗದಂತೆ ಇಡಬೇಕು.
> ಒಟ್ಟು ನೀರಿನ ಅಂಶ ಒಟ್ಟು : ೧೪೭೫ ಗ್ರಾಂ ೧೨೫ ಗ್ರಾಂ ೧೬೦೦ಗ್ರಾಂ ನೆಲ್ಲಿಕಾಯಿಗಾತ್ರದ ೭೦-
> ೮೦ ಉಂಡೆ ಸುಮಾರು ೨೦ಗ್ರಾಂನವು.
> ಹೆಣ್ಣು ಮಕ್ಕಳಿಗೆ ಅತಿ ಮಟ್ಟು ತೊಂದರೆ ಇರೆತ್ತೆ ; ಮುಟ್ಟಾದಾಗ ಆ ದಿನಗಳಲ್ಲಿ ನೋವು /
> ಅತಿ ಶ್ರಾವ ಇದ್ದರೆ ಈ ಲೇಹದಿಂದ ಗುಣ ಕಂಡಿದೆ.
> ಬಾಣಂತಿಯರಿಗೆ ಇದರ ಪ್ರಮಾಣಗಳನ್ನು ಸ್ವಲ್ಪ ಬದಲಾಯಿಸಿ ಮಾಡುತ್ತಾರೆ
> (ಇದು ಮಲೆನಾಡಿನಲ್ಲಿ ರೂಡಿಯಲ್ಲಿರುವ ಶಕ್ತಿ ವರ್ಧಕ ಔಷಧ)
> ಧೂರ್ವೆ ಹುಲ್ಲು / ಗರಿಕೆ ಸಂಪಾದಿಸಿ
>
> ಧೂರ್ವೆ ಸಣ್ಣಕಡ್ಡಿ ಎಲೆಯ ಹುಲ್ಲು.(ಗರಿಕೆ) ಗಣಪತಿ ದೇವರಿಗೆ ಪ್ರೀತಿಯಾದ ಹುಲ್ಲು' ಇದರ
> ಮೂರು ಎಸಳುಳ್ಳ ಕುಡಿಯನ್ನು ಗಣಪತಿ ದೇವರಿಗೆ ಪೂಜೆಯಲ್ಲಿ ಅರ್ಪಿಸುತ್ತಾರೆ. ಇದರಲ್ಲಿ
> ವಿಶೇಷವಾದ ಔಷಧಿಯ ಗುಣವಿದೆ. ಇದರ ಬೇರಿನ (ತೊಳೆದು ಶುದ್ಧಮಾಡಿ) ಕಷಾಯ ಮಾಡಿ ದಿನನಿತ್ಯ
> ಮೂರರಿಂದ ಆರು ತಂಗಳು ಕುಡಿದರೆ ಮೂತ್ರ ಪಿಂಡದ ಸೋಂಕು ಖಾಹಿಲೆ (ನಫ್ರೈಟಿಸ್`)
> ಗುಣವಾಗುವುದು. ೩-೪ ಜನರ ಮೇಲೆ ಪ್ರಯೋಗ ಮಾಡಿನೋಡಿ ಸಫಲತೆ ಕಂಡಿದೆ. ಡಾ. ಶಿವಕುಮಾರ
> ಸ್ವಾಮಿಯವರೂ ಇದನ್ನು ತಮ್ಮ ಆರೋಗ್ಯ ದರ್ಪಣ ಗ್ರಂಥದಲ್ಲಿ ಹೇಳದ್ದಾರೆ. ಆರಂಭದಲ್ಲೇ
> ಚಿಕಿತ್ಸೆ ಮಾಡಿದರೆ ಮೂತ್ರ ಪಿಂಡವನ್ನು ತೆಗೆದು-ಹಾಕುವ ಶಸ್ತ್ರ ಚಿಕಿತ್ಸೆ ಮಾಡಿಸುವ ಕಷ್ಟ
> ತಪ್ಪುತ್ತದೆ.ಇದರ ಹುಲ್ಲನ್ನು ಬಣಗಿಸಿ ಪುಡಿಮಾಡಿ ಪ್ರತಿನಿತ್ಯ ನೀರಿನಜೋತೆ ಸೇರಿಸಿ
> ಕುಡಿಯಬೇಕೂ
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialscience...@googlegroups.com.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CAKHYmY%3DF%3DkVAehQznWj6bVDe113ATbN1L_
> AgKhUfhWQy0z4Atg%40mail.gmail.com
> <https://groups.google.com/d/msgid/socialsciencestf/CAKHYmY%3DF%3DkVAehQznWj6bVDe113ATbN1L_AgKhUfhWQy0z4Atg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to