10ನೇ ತರಗತಿ ಗಣಿತವಿನ್ನು ಸುಲಭ!
••ಎರಡು ಹಂತದ ಪರೀಕ್ಷೆ ನಡೆಸಲು ಸಿಬಿಎಸ್‌ಇ ನಿರ್ಧಾರ
••ಗಣಿತ ಕಷ್ಟವೆನಿಸಿದವರಿಗೆ ಸುಲಭವಾದ ಪರೀಕ್ಷೆ ಅವಕಾಶ
ಹೊಸದಿಲ್ಲಿ, ಜ. 11: 'ಗಣಿತವನ್ನು ಕಬ್ಬಿಣದ ಕಡಲೆ' ಎಂದು ಪರಿಗಣಿಸಿರುವ, ಗಣಿತ ಪರೀಕ್ಷೆ
ಬಂತೆಂದರೆ ಹೌಹಾರುವ 10ನೇ ತರಗತಿಯ ವಿದ್ಯಾರ್ಥಿಗಳಿಗೊಂದು ಸಿಹಿಸುದ್ದಿ. ಮುಂದಿನ
ಶೈಕ್ಷಣಿಕ ವರ್ಷದಿಂದ ನೀವು 'ಸುಲಭದ ಗಣಿತ ಪರೀಕ್ಷೆ'ಯನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ
ಉತ್ತೀರ್ಣರಾಗಿ ವಿದ್ಯಾಭ್ಯಾಸ ಮುಂದುವರಿಸಬಹುದು.

2020ರಿಂದ 10ನೇ ತರಗತಿಗೆ ಎರಡು ಹಂತದ ಗಣಿತ ಪರೀಕ್ಷೆಯನ್ನು ಪರಿಚಯಿಸಲು ಸಿಬಿಎಸ್‌ಇ
ನಿರ್ಧರಿಸಿದೆ. ಅದರಂತೆ, ಗಣಿತ-ಸ್ಟಾಂಡರ್ಡ್‌ ಮತ್ತು ಗಣಿತ-ಬೇಸಿಕ್‌ ಎಂಬ ಎರಡು ಆಯ್ಕೆ
ವಿದ್ಯಾರ್ಥಿಗಳಿಗಿರುತ್ತವೆ. ಯಾರು ಗಣಿತದಲ್ಲಿ ನಿಸ್ಸೀಮರಾಗಿದ್ದು, ಅದಕ್ಕೆ ಸಂಬಂಧಿಸಿಯೇ
ಮುಂದಿನ ವಿದ್ಯಾಭ್ಯಾಸ ಮಾಡಲು ಇಚ್ಛಿಸುತ್ತಾರೋ, ಅಂಥವರು ಗಣಿತ-ಸ್ಟಾಂಡರ್ಡ್‌
ಪರೀಕ್ಷೆಯನ್ನು ಬರೆಯಬಹುದು.
ಯಾರಿಗೆ ಗಣಿತ ಕಷ್ಟ ಎಂಬ ಭಾವನೆಯಿದೆಯೋ, ಅಂಥವರು ಗಣಿತ-ಬೇಸಿಕ್‌ ಪರೀಕ್ಷೆ ಬರೆದು, ತಮ್ಮ
ಆಯ್ಕೆಯ ಕೋರ್ಸ್‌ ಆಯ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಬಹುದು.10ನೇ ತರಗತಿಯ ಪರೀಕ್ಷೆ
ವೇಳೆ ವಿದ್ಯಾರ್ಥಿಗಳಲ್ಲಿರುವ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ
ಕೈಗೊಳ್ಳಲಾಗಿದೆ ಎಂದು ಸಿಬಿಎಸ್‌ಇ ತಿಳಿಸಿದೆ.

ಇಂಟರ್ನಲ್‌ಗೆ ಅನ್ವಯವಾಗಲ್ಲ

ಆದರೆ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ,
ಪರೀಕ್ಷೆಗಳು ಪ್ರತ್ಯೇಕವಾಗಿದ್ದರೂ ಶಾಲೆಗಳಲ್ಲಿನ ಪಠ್ಯಕ್ರಮ, ಆಂತರಿಕ ಮೌಲ್ಯಮಾಪನ ಒಂದೇ
ಆಗಿರುತ್ತದೆ.

ಫೇಲಾದರೆ?

ಗಣಿತ-ಬೇಸಿಕ್‌ ಪರೀಕ್ಷೆ ಬರೆದಿರುವ ವಿದ್ಯಾರ್ಥಿಯು ಅನುತ್ತೀರ್ಣನಾದರೆ ಆತ ಅನಂತರ ನಡೆಯುವ
ಗಣಿತ-ಬೇಸಿಕ್‌ ಪೂರಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಆದರೆ ಗಣಿತ-ಸ್ಟಾಂಡರ್ಡ್‌
ಪರೀಕ್ಷೆ ಬರೆದು ಅನುತ್ತೀರ್ಣನಾದ ವಿದ್ಯಾರ್ಥಿಯು ಪೂರಕ ಪರೀಕ್ಷೆ ವೇಳೆ ಗಣಿತ-ಬೇಸಿಕ್‌
ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
Harikrishna Holla G,
Brahmavara.

<https://www.avast.com/en-in/recommend?utm_medium=email&utm_source=link&utm_campaign=sig-email&utm_content=webmail&utm_term=default3&tag=1be8f11b-35f0-43c9-86b7-0a7560ad71ff>
I’m
protected online with Avast Free Antivirus. Get it here — it’s free forever.
<https://www.avast.com/en-in/recommend?utm_medium=email&utm_source=link&utm_campaign=sig-email&utm_content=webmail&utm_term=default3&tag=1be8f11b-35f0-43c9-86b7-0a7560ad71ff>
<#DAB4FAD8-2DD7-40BB-A1B8-4E2AA1F9FDF2>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to