nijakku uttama lekhana sir. ella vishyagalannu ele eleyagi vivarisiddiri.

2016-03-18 21:01 GMT+05:30 Raghavendra Kulkarni <
raghavendra.kulkarn...@gmail.com>:

> Sir..One of the best ever exam analysis..  No more words..!
> On Mar 17, 2016 9:31 PM, "Mahabaleshwar Bhagwat" <bhagwa...@gmail.com>
> wrote:
>
>> ಹಿಂದೆಲ್ಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ವಿದ್ಯಾರ್ಥಿಗಳು ಆತ್ಮಹತ್ಯೆ
>> ಮಾಡಿಕೊಳ್ಳುವುದಿತ್ತು. ಹಾಗಾಗದಂತೆ ತಡೆಯಲು ಅವರನ್ನು ಹೇಗಾದರೂ ತೇರ್ಗಡೆಯಾಗುವಂತೆ ಮಾಡುವ
>> ಜವಾಬ್ದಾರಿಯನ್ನು ಇಲಾಖೆ ಶಿಕ್ಷಕರ ಮೇಲೆ ಹೊರಿಸಿದೆ. ಇದೀಗ ಮಕ್ಕಳಿಗಿರದ ಪರೀಕ್ಷೆಯ ಭಯ
>> ಶಿಕ್ಷಕರನ್ನು ಕಾಡತೊಡಗಿದೆ.
>>
>> 2014-15ನೇ ಸಾಲಿನ ಕೇರಳ ಎಸ್‌.ಎಸ್‌.ಎಲ್‌.ಸಿ. ಪರೀಕ್ಷಾ ಫ‌ಲಿತಾಂಶದ ಅವಾಂತರವಾಗಲೀ,
>> ಕರ್ನಾಟಕದ ಪಿ.ಯು.ಸಿ. ಪರೀಕ್ಷಾ ಕೃಪಾಂಕದ ಅಧ್ವಾನವಾಗಲೀ ಇನ್ನೂ ನಮ್ಮ ನೆನಪಿನಿಂದ
>> ಮಾಸಿಲ್ಲ. ಅಷ್ಟರಲ್ಲೇ ರಾಜ್ಯ ಪಿ.ಯು. ಮಂಡಳಿ ಮರುಎಣಿಕೆ ಬಗ್ಗೆ ಹೈಕೋರ್ಟಿನಲ್ಲಿ
>> ಪ್ರಶ್ನಿಸುವಂತಿಲ್ಲ ಎಂದು ಇನ್ನೊಂದು ವಿವಾದ ಸೃಷ್ಟಿಸಿತು. ಆಕ್ಷೇಪ ವ್ಯಕ್ತವಾದ
>> ಹಿನ್ನೆಲೆಯಲ್ಲಿ ಇದನ್ನು ಮರುಪರಿಶೀಲಿಸುವುದಾಗಿ ಹೇಳಿತು. ಇದೀಗ ಪಿ.ಯು.ಸಿ. ಬಳಿಕ
>> ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಸನ್ನಿಹಿತವಾಗಿದೆ. ರಾಜ್ಯಾದ್ಯಂತ ಉತ್ತಮ ಫ‌ಲಿತಾಂಶಕ್ಕಾಗಿ
>> ಸಮರೋಪಾದಿ ಸಿದ್ಧತೆ ನಡೆದಿದೆ.
>>
>> ಜಿಲ್ಲೆಗಳೊಳಗೆ ಮೇಲಾಟ
>> 2015ರ ಎಸ್‌.ಎಸ್‌.ಎಲ್‌.ಸಿ.ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಶೇ.93.37ರಷ್ಟು ಫ‌ಲಿತಾಂಶ
>> ದಾಖಲಿಸಿ ಮೊದಲ ಸ್ಥಾನ ಪಡೆದಿತ್ತು. ಬೆಂಗಳೂರು 5ನೇ ಸ್ಥಾನ ಪಡೆದರೆ ಮಂಗಳೂರು 8ನೇ ಸ್ಥಾನ
>> ಪಡೆದಿತ್ತು. ಶೇ.66.74 ಫ‌ಲಿತಾಂಶದೊಂದಿಗೆ ಗದಗ ಕೊನೆಯ ಸ್ಥಾನ ಅಂದರೆ 34ನೇ ಸ್ಥಾನ
>> ಪಡೆದಿತ್ತು. ಹಾಗೆ ನೋಡಿದರೆ ಅದು ತೀರಾ ಕಳಪೆ ಫ‌ಲಿತಾಂಶವಲ್ಲ. ನಾಲ್ಕೈದು ವರ್ಷಗಳ ಹಿಂದೆ
>> ಅದೇ ಒಂದು ದೊಡ್ಡ ಸಾಧನೆಯಾಗಿತ್ತು. ಆದರೀಗ ಕಾಲ ಬದಲಾಗಿದೆ. ಉತ್ತಮ ಫ‌ಲಿತಾಂಶ
>> ದಾಖಲಿಸುವುದೇ ಶಿಕ್ಷಣದ ಗುಣಮಟ್ಟ ಎಂದು ಭಾವಿಸಿದಂತಿದೆ. ಹಾಗಾಗಿ ಫ‌ಲಿತಾಂಶ ಪಟ್ಟಿಯಲ್ಲಿ
>> ಮೊದಮೊದಲ ಸ್ಥಾನ ಗಿಟ್ಟಿಸಿಕೊಳ್ಳಲು ಎಲ್ಲ ಜಿಲ್ಲೆಗಳು ಪೈಪೋಟಿಗಿಳಿದಿವೆ. ಮಕ್ಕಳಲ್ಲಿ
>> ಕಂಡುಬರದ ಮೇಲಾಟ ಜಿಲ್ಲೆಗಳ ನಡುವೆ ಕಂಡು ಬಂದಿದೆ. ಅವು ಪರೀಕ್ಷಾ ಫ‌ಲಿತಾಂಶವನ್ನೊಂದು
>> ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿವೆ. ಶೇ.95ಕ್ಕಿಂತಲೂ ಅಧಿಕ ಫ‌ಲಿತಾಂಶದ
>> ಗುರಿಯನ್ನು ಹೊಂದಿವೆ. ಮಂಗಳೂರು ಬೆಂಗಳೂರನ್ನು ಹಿಂದಿಕ್ಕಲು ಹವಣಿಸಿದರೆ ಬೆಂಗಳೂರು
>> ಮೈಸೂರನ್ನು ಸರಿಗಟ್ಟಲು ಶ್ರಮಿಸಿದೆ. ಗುರಿಸಾಧನೆಗಾಗಿ ಶತಾಯಗತಾಯ ಪ್ರಯತ್ನ ಸಾಗಿದೆ.
>>
>> ಗುರಿ ಓಕೆ, ಪೈಪೋಟಿ ಯಾಕೆ?
>> ನೂರಕ್ಕೆ ಗುರಿಯಿಟ್ಟರೆ ತೊಂಬತ್ತರ ಮೇಲಾದರೂ ಫ‌ಲಿತಾಂಶ ಬರಬಹುದು ಎಂಬುದೇನೋ ನಿಜ. ಆದರೆ
>> ಫ‌ಲಿತಾಂಶಕ್ಕೆ ಮಕ್ಕಳು ಜವಾಬ್ದಾರರಲ್ಲ. ಅವರಿಗೆ ಪಾಸು-ಫೇಲು ವ್ಯತ್ಯಾಸವೇ ತಿಳಿದಂತಿಲ್ಲ.
>> ಹಾಗಾಗಿ ಇಲಾಖೆ ಅವರ ಫ‌ಲಿತಾಂಶಕ್ಕೆ ಶಿಕ್ಷಕರನ್ನೇ ಹೊಣೆಯಾಗಿಸಿದೆ! ಈಗಾಗಲೇ ಮುಖ್ಯ
>> ಶಿಕ್ಷಕರನ್ನು ಕರೆದು ಎಲ್ಲರೂ ತೇರ್ಗಡೆಯಾಗುವಂತೆ ನೋಡಿಕೊಳ್ಳತಕ್ಕದ್ದೆಂದು ತಾಕೀತು
>> ಮಾಡಲಾಗಿದೆ. ಫ‌ಲಿತಾಂಶ ವಿಚಾರದಲ್ಲಿ ಶೈಕ್ಷಣಿಕ ಜಿಲ್ಲೆಗಳೊಳಗೆ ಪೈಪೋಟಿ ಪ್ರಾರಂಭವಾಗಿದೆ.
>> ಬೆಂಗಳೂರು, ಮೈಸೂರು, ಉಡುಪಿ, ದಕ್ಷಿಣಕನ್ನಡ ಜಿಲ್ಲೆ ಇವೆಲ್ಲ ಫ‌ಲಿತಾಂಶ ಪಟ್ಟಿಯಲ್ಲಿ
>> ಅಗ್ರಸ್ಥಾನದಲ್ಲಿದ್ದು ರೂಢಿಮಾಡಿಕೊಂಡ ಜಿಲ್ಲೆ ಗಳು. ಆದರೆ ಇತ್ತೀಚಿನ ವರ್ಷಗಳಲ್ಲಿ
>> ಹಿಂದೆಲ್ಲ ಹಿಂದಿದ್ದ ಚಿಕ್ಕೋಡಿ ಯಂತಹ ಶೈಕ್ಷಣಿಕ ಜಿಲ್ಲೆಗಳು ಫ‌ಲಿತಾಂಶ ಪಟ್ಟಿಯಲ್ಲಿ ಅಗ್ರ
>> ಸ್ಥಾನ ಅಲಂಕರಿಸುವಂತಾಗಿದೆ. ಇದನ್ನು ಜೀರ್ಣಿಸಿಕೊಳ್ಳಲಾರದ ಜಿಲ್ಲೆಗಳು ಗತವೈ ಭವವನ್ನು
>> ಮತ್ತೆ ಕಾಣುವ ಹಪಾಹಪಿಯಲ್ಲಿವೆ. ಪರಿಣಾಮವಾಗಿ ಪರೀûಾ ಫ‌ಲಿತಾಂಶವು ಒಂದು ಪ್ರತಿಷ್ಠೆಯ
>> ಪ್ರಶ್ನೆ ಎನಿಸಿದೆ. ಹೋದ ವರ್ಷ ದಕ್ಷಿಣಕನ್ನಡದ ಪುತ್ತೂರು ತಾಲೂಕು ವಿಷನ್‌ 95+
>> ಮುಂದಿಟ್ಟುಕೊಂಡು ಯಶಸ್ಸು ಕಂಡಿತು. ಇದರಿಂದ ಪ್ರೇರಿತರಾಗಿ ಇತರ ಜಿಲ್ಲೆಯವರೂ ಇದೇ ಹಾದಿ
>> ಹಿಡಿದಿದ್ದಾರೆ. ಅದಕ್ಕಾಗಿ ಶಿಕ್ಷಕರಿಗೆ ಅಲ್ಲಲ್ಲಿ ತರಬೇತು ಕಾರ್ಯಕ್ರಮವೂ ನಡೆದಿದೆ.
>>
>> ಇಂದಿನ ಮಕ್ಕಳ ಕಲಿಕಾ ಮಟ್ಟ
>> ಝೀರೋ ಫೇಲ್‌ ರಿಸಲ್ಟ್ ಸಾಧನೆಯ ಸಲುವಾಗಿ ಕನ್ನಡ ಮಾಧ್ಯಮದಲ್ಲಿ ಕನ್ನಡದಲ್ಲಂತೂ ಫೇಲಾಗಲೇ
>> ಬಾರದೆಂಬುದಾಗಿ ಎಚ್ಚರಿಕೆ ನೀಡಲಾಗಿದೆ. ಸಮಸ್ಯೆ ಇರುವುದು ಇಲ್ಲೇ. ಕೆಲವು ಜಿಲ್ಲೆಗಳು
>> ಕರ್ನಾಟಕದಲ್ಲಿದ್ದರೂ ಅಲ್ಲಿಯ ಜನರಿಗೆ ಕನ್ನಡವೂ ಪರಭಾಷೆ ಎನಿಸಿದೆ. ದಕ್ಷಿಣಕನ್ನಡದಲ್ಲೂ
>> ಹೆಚ್ಚು ಕಡಿಮೆ ಪರಿಸ್ಥಿತಿ ಹಾಗೆಯೇ ಇದೆ. ತುಳು- ಕೊಂಕಣಿ- ಬ್ಯಾರಿ ಭಾಷೆಗಳ ಮಧ್ಯೆ ಕನ್ನಡ
>> ಭಾಷೆ ಕೇಳುವುದೇ ವಿರಳ. ಹಾಗಾಗಿ ಮಕ್ಕಳಿಗೂ ಕನ್ನಡದ ಜ್ಞಾನ ಅಷ್ಟಕ್ಕಷ್ಟೆ. ಎಲ್ಲ
>> ವಿಷಯಗಳಲ್ಲಿ ಬಿ+ ಶ್ರೇಣಿ ಪಡೆದು ಪ್ರೌಢಶಾಲೆಗೆ ಬಂದಿದ್ದರೂ ಗಣಿತದಲ್ಲೇನು ಕನ್ನಡದಲ್ಲೂ
>> ಶೂನ್ಯ ಸಂಪಾದನೆ. ಸೊನ್ನೆ ಅಂಕ ಗಳಿಸುವ ಮಕ್ಕಳನ್ನು 35 ಅಂಕ ಗಳಿಸುವಂತೆ ಮಾಡಿ ನೂರರ ಗುರಿ
>> ಸೇರುವುದೆಂದರೆ ಶೂನ್ಯದಿಂದ ಕೈಗಡಿಯಾರ ಸೃಷ್ಟಿಸುವಂತಹ ಪವಾಡವೇ ಸೈ. ಒಂದರಿಂದ ಏಳರವರೆಗೆ
>> ಎತ್ತಿಹಾಕಿದ್ದಾರೆ; ಹತ್ತರಲ್ಲೂ ಎತ್ತಿಹಾಕುವುದು ಶಿಕ್ಷಕರ ಕೆಲಸ ಎಂಬುದು ಆ ಮಕ್ಕಳ ಬಲವಾದ
>> ಭರವಸೆ!
>>
>> ಶಿಕ್ಷಕರ ಮೇಲೆ ಒತ್ತಡ
>> ಇತ್ತೀಚೆಗೆ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ತಮ್ಮ ಮೇಜಿನ ಮೇಲೆ ಎಸ್‌ಎಸ್‌ಎಲ್‌ಸಿ ಗಣಿತ
>> ಪೂರ್ವ ಸಿದ್ಧತಾ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನಿಟ್ಟು ತಲೆಮೇಲೆ ಕೈಹೊತ್ತು
>> ಕುಳಿತಿದ್ದರು. ಏನಾಯಿತೆಂದು ಕೇಳಿದರೆ, ಐವತ್ತು ಮಕ್ಕಳಿಗೆ ಇಪ್ಪತ್ತಕ್ಕಿಂತಲೂ ಕಡಿಮೆ ಅಂಕ
>> ಬಂದಿದೆ. ಫ‌ಲಿತಾಂಶ ಕಡಿಮೆಯಾದರೆ ಯಾಕೆ ಹೀಗಾಯಿತೆಂದು ಎಲ್ಲರ ಮುಂದೆ ಛೀಮಾರಿ ಹಾಕುತ್ತಾರೆ.
>> ಏನು ಮಾಡಲಿ? ತಲೆ ಕೆಟ್ಟು ಹೋಗಿದೆ ಅಂದರು. ಕುದುರೆಯನ್ನು ನೀರಿಗಿಳಿಸಬಹುದಷ್ಟೆ, ನೀರು
>> ಕುಡಿಸಲಾಗದು ಎಂದವರಿಗೆ ಸಾಂತ್ವನ ಹೇಳಿದೆ. ಪಾಪ! ಅನುಭವೀ ಶಿಕ್ಷಕರು. ನಿವೃತ್ತಿಗೆ
>> ಹತ್ತಿರವಾದವರು. ಎಲ್ಲ ಜವಾಬ್ದಾರಿಗಳ ನಡುವೆ ಪ್ರಾಮಾಣಿಕವಾಗಿ ದುಡಿದರೂ ಪರಿಶ್ರಮಕ್ಕೆ ತಕ್ಕ
>> ಫ‌ಲ ಪಡೆಯಲಾಗದ ಕೊರಗು ಅವರದು. ಹಿಂದೆಲ್ಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ
>> ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿತ್ತು. ಹಾಗಾಗದಂತೆ ತಡೆಯಲು ಅವರನ್ನು
>> ಹೇಗಾದರೂ ತೇರ್ಗಡೆಯಾಗುವಂತೆ ಮಾಡುವ ಜವಾಬ್ದಾರಿಯನ್ನು ಇಲಾಖೆ ಶಿಕ್ಷಕರ ಮೇಲೆ ಹೊರಿಸಿದೆ.
>> ಇದೀಗ ಮಕ್ಕಳಿಗಿರದ ಪರೀಕ್ಷೆಯ ಭಯ ಶಿಕ್ಷಕರನ್ನು ಕಾಡತೊಡಗಿದೆ. ಪ್ರಾಮಾಣಿಕ ಶಿಕ್ಷಕರಿಗೆ
>> ಇದೊಂದು ಮರ್ಯಾದೆಯ ಪ್ರಶ್ನೆ. ಹೆಚ್ಚಿನ ಶಿಕ್ಷಕರೂ ರಕ್ತದ ಒತ್ತಡ, ಸಕ್ಕರೆ ಕಾಯಿಲೆಗಳನ್ನು
>> ತಮ್ಮ ಸಂಗಾತಿಗಳನ್ನಾಗಿಸಿಕೊಂಡವರು. ಪರಿಸ್ಥಿತಿ ಹೀಗಿರುವಾಗ ಇನ್ನು ಆತ್ಮಹತ್ಯೆ
>> ಮಾಡಿಕೊಳ್ಳುವ ಸರದಿ ಶಿಕ್ಷಕರದ್ದೆನಿಸಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಇಲ್ಲೊಬ್ಬರು
>> ಶಿಕ್ಷಕರು. ದಿನಕ್ಕೊಂದು ಸುತ್ತೋಲೆ ಹೊರಡಿಸುತ್ತಿರುವ ಇಲಾಖೆಗೆ ಈ ಸೂಕ್ಷ್ಮಅರ್ಥವಾಗದೇನೋ!
>>
>> ಒತ್ತಡದ ಪರಿಣಾಮ
>> ಫ‌ಲಿತಾಂಶ ಹೆಚ್ಚಿಸಬೇಕೆಂಬ ಒತ್ತಡ ಶಿಕ್ಷಕರ ಮೇಲಷ್ಟೇ ಪರಿಣಾಮ ಬೀರುವುದಲ್ಲ, ಶಿಕ್ಷಣದ
>> ಗುಣಮಟ್ಟದ ಮೇಲೂ ಪರಿಣಾಮ ಬೀರಬ
>> ಲ್ಲುದು. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯೇ ಇದ್ದಂತಿಲ್ಲ ಎಂಬಂತಹ ಮಾತು ವ್ಯಾಪಕವಾಗಿ
>> ಕೇಳಿಬರುತ್ತಿದ್ದರೂ ಫ‌ಲಿತಾಂಶವಂತೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕೇರಳದಲ್ಲಿ ಹೋದ
>> ವರ್ಷ ಎಸ್‌.ಎಸ್‌.ಎಲ್‌.ಸಿ. ಫ‌ಲಿತಾಂಶ 98.6ರಷ್ಟಿತ್ತು. ಒಳ್ಳೆಯ ಫ‌ಲಿತಾಂಶ ಬರಬೇಕು ಎಂದು
>> ಹೆಚ್ಚಿನ ಶಿಕ್ಷಕರು ಪರೀಕ್ಷಾ ಕೊಠಡಿಯಲ್ಲಿ ಜಾಣ ಕುರುಡು ತೋರಬಹುದು. ಮುಂದೆ
>> ಮೌಲ್ಯಮಾಪನದಲ್ಲೂ ಔದಾರ್ಯ ತೋರಬಹುದು. ಪರೀಕ್ಷಾ ಅವ್ಯವಹಾರವಿರಲಿ, ಮೌಲ್ಯಮಾಪನದ
>> ಲೋಪದೋಷವಿರಲಿ ಇಂತಹ ಒತ್ತಡದ ಪರಿಣಾಮ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಾಥಮಿಕ ಶಾಲಾ
>> ಶಿಕ್ಷಕರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪ್ರೌಢಶಾಲೆಗೆ ದೂಡಿಬಿ
>> ಡುತ್ತಾರೆ. ಇದೀಗ ಪ್ರೌಢಶಾಲಾ ಶಿಕ್ಷಕರೂ ಅದನ್ನೇ ಮಾಡಬೇಕಾಗಿದೆ. ಆತ್ಮಸಾಕ್ಷಿ
>> ಚುಚ್ಚಿದರೂ ಮಕ್ಕಳನ್ನು ಹೇಗಾದರೂ ಪಾಸು ಮಾಡಬೇಕಾಗಿದೆ. ಏನಕೇನ ಪ್ರಕಾರೇಣ
>> ಫ‌ಲಿತಾಂಶವನ್ನೇನೋ ಉನ್ನತೀಕರಿಸಬಹುದು. ಆದರೆ ಶಿಕ್ಷಣದ ಗುಣಮಟ್ಟದ ಗತಿ? ಶೇ.100
>> ಫ‌ಲಿತಾಂಶವು ಶೈಕ್ಷಣಿಕ ಪ್ರಗತಿಯ ಕುರುಹೆನಿಸುವುದೆ?
>>
>> ಪರೀಕ್ಷೆಗಳ ವೈಭವೀಕರಣ
>> ಪರೀಕ್ಷೆ ಹೊಸದಲ್ಲ. ಅದು ಶೈಕ್ಷಣಿಕ ಕಾರ್ಯಕ್ರಮದ ಒಂದು ಅಂಗವಷ್ಟೆ. ಆದರೆ ಯಾಕೋ
>> ಇತ್ತೀಚಿನ ವರ್ಷಗಳಲ್ಲಿ ಅದಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪರೀಕ್ಷಾ
>> ತಯಾರಿ ಬಗ್ಗೆ ಮಾಧ್ಯಮಗಳಲ್ಲಿ ಬಗೆಬಗೆಯ ಕಾರ್ಯಕ್ರಮ ನೀಡಲಾಗುತ್ತದೆ. ಇದೇ ಮೊದಲ ಬಾರಿಗೆ
>> ಪರೀಕ್ಷೆ ನಡೆಯುತ್ತಿರುವಂತೆ ಬಿಂಬಿಸಲಾಗುತ್ತದೆ. ವರ್ಷಾರಂಭದಿಂದಲೂ ಬಿಂದಾಸ್‌ ಆಗಿರುವ
>> ಮಕ್ಕಳು ಯುದ್ಧಕಾಲೇ ಶಸ್ತ್ರಾಭ್ಯಾಸಂ ಎಂಬಂತೆ ಕೊನೆಗಳಿಗೆಯಲ್ಲಿ
>> ಎಚ್ಚೆತ್ತುಕೊಳ್ಳುತ್ತಾರೆ. ಅಷ್ಟೋ ಇಷ್ಟೋ ಅಂಕ ಗಳಿಸಿ ತೃಪ್ತಿಪಟ್ಟುಕೊಳ್ಳುತ್ತಾರೆ.
>> ಪಾಪ! ಶಾಲಾ ಮೌಲ್ಯಾಂಕನ ನಡೆದಲ್ಲಿ ಇಲಾಖೆಯಿಂದ ಉಗಿಸಿಕೊಳ್ಳುವವರು ಶಿಕ್ಷಕರು!
>> ಕೊನೆಯ ಮಾತು ನಮ್ಮ ಶಿಕ್ಷಕರು ಸೋಮಾರಿಗಳಲ್ಲ. ಹಾಗೂ ಹೀಗೂ ಜಿಲ್ಲೆಗೆ ಶೇ.100 ಫ‌ಲಿತಾಂಶ
>> ತಂದು ಕೊಟ್ಟರೂ ಕೊಟ್ಟಾರು. ಆದರೆ ಅದು ಗುಣಮಟ್ಟದ ಶಿಕ್ಷಣ ಕೊಡಿಸಿದಂತಾಯಿತೆ? ಗುಣಮಟ್ಟದ
>> ಶಿಕ್ಷಣ ತಳಮಟ್ಟದಿಂದ ಸಿಗಬೇಕು. ಪ್ರಾಥಮಿಕ ಹಂತದಲ್ಲೇ ಭದ್ರ ಬುನಾದಿ ಬೀಳಬೇಕು.
>> ಅದಿಲ್ಲವೆಂದಾದಲ್ಲಿ ಮತ್ತೆ ಸುಧಾರಣೆ ಸುಲಭಸಾಧ್ಯವಲ್ಲ. ಡಾ| ಕಲಾಂ ಅವರಿಗೆ ಶಿಕ್ಷಕರೊಬ್ಬರು
>> ಹೇಳಿದ್ದರು- "ಐದು ವರ್ಷದ ಮಗುವೊಂದನ್ನು ನನ್ನ ಕೈಗೆ ಕೊಡಿ. ಏಳು ವರ್ಷದ ನಂತರ ಆ
>> ಮಗುವಿನಲ್ಲಿ ಬದಲಾವಣೆ ತರಲು ದೇವರಿಂದಲೂ ಸಾಧ್ಯವಿಲ್ಲ.' ಒಂದರಿಂದ ಏಳರವರೆಗೆ ಬೇಕಾಬಿಟ್ಟಿ
>> ಬಿಟ್ಟುಬಿಟ್ಟು ಹತ್ತರಲ್ಲಿ ಉತ್ತಮ ಫ‌ಲಿತಾಂಶ ತರುವಂತೆ ಶಿಕ್ಷಕರ ಮೇಲೆ ಒತ್ತಡ ಹೇರುವ
>> ಮುನ್ನ ಸ್ವತಃ ಕಲಾಂ ಅವರೇ ಒಪ್ಪಿರುವ ಆ ಮಾತಿನತ್ತ ಒಮ್ಮೆ ಚಿತ್ತ ಹರಿಸುವುದೊಳಿತು
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAKoy2Jw5cYoy81Yn2F-CffuYQGpWrBF6RCkkBwq8mc%3DtANw5%3DQ%40mail.gmail.com
>> <https://groups.google.com/d/msgid/socialsciencestf/CAKoy2Jw5cYoy81Yn2F-CffuYQGpWrBF6RCkkBwq8mc%3DtANw5%3DQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJMrDd3_MbE9w8_-a7mDH8AX_H5yzfRd1W08cKeRToNxzWCLfQ%40mail.gmail.com
> <https://groups.google.com/d/msgid/socialsciencestf/CAJMrDd3_MbE9w8_-a7mDH8AX_H5yzfRd1W08cKeRToNxzWCLfQ%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAEvabyoV%2BTge1jBMUHNnk8WwsO2%3DF0jMKu4AL%2BjR7FVPNoguRQ%40mail.gmail.com.
For more options, visit https://groups.google.com/d/optout.

Reply via email to