Good message about folkhistory thanks

Narayana d
On 21-Feb-2016 4:13 pm, "Siddaramappa s m Sri" <[email protected]>
wrote:

> ಜಾನಪದ ಪರಂಪರೆ : ಚರಿತ್ರೆಯ ನೆಲೆಗಳು
>        ಇತಿಹಾಸವೆನ್ನುವುದು ಮಾನವನ ಒಟ್ಟಾರೆ ಜೀವನದ ಗತಿಸಿದ ಘಟನೆಗಳ ನೆನಪು. ಇದರಲ್ಲಿ
> ಮೌಖಿಕ ಇತಿಹಾಸ ಮತ್ತು ಬರಹದ ಇತಿಹಾಸ ಎಂದು ಎರಡು ಮಾರ್ಗಗಳನ್ನು ಗುರುತಿಸಲಾಗಿದೆ.
> ಇವುಗಳಲ್ಲಿ ಮೌಖಿಕ ಇತಿಹಾಸವೇ ಮೊದಲು ಎನ್ನಬಹುದು. ಮಾನವನು ಅಕ್ಷರ ಪೂರ್‍ವಕಾಲದಲ್ಲಿ ತನ್ನ
> ಜೀವನದ ಘಟನೆಗಳನ್ನು ತನ್ನ ಸ್ಮೃತಿಪಟಲದಲ್ಲಿ ದಾಖಲಿಸುತ್ತಿದ್ದ. ಅಕ್ಷರ ಯುಗ ಬಂದ ಅನಂತರ
> ಅಕ್ಷರ ಬಲ್ಲವರು ಆ ಘಟನೆಗಳನ್ನು ಅಕ್ಷರಗಳ ಮೂಲಕ ಹಿಡಿದಿಡುವುದನ್ನು ಪ್ರಾರಂಭಿಸಿದರು.
> ಅಕ್ಷರಗಳಿಂದ ಇತಿಹಾಸವನ್ನು ದಾಖಲು ಮಾಡುವಂತಹ ಸಂದರ್ಭದೊಳಗೇ ಮೌಖಿಕ ಇತಿಹಾಸವೂ ಕೂಡ
> ಬೆಳೆಯುತ್ತಿತ್ತು. ಬಹಳ ವಸ್ತುನಿಷ್ಠವಾಗಿ ಕಟ್ಟಲ್ಪಡುತ್ತಿದ್ದ ಇತಿಹಾಸ ಅಕ್ಷರ ಯುಗದ
> ಪ್ರಾರಂಭದಿಂದಾಗಿ ಪಕ್ಷಪಾತ ನಿಲುವುಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತು. ಇದಕ್ಕೆ
> ಮತ್ತೊಂದು ಕಾರಣ ಇತಿಹಾಸ ರಚನೆ ಎನ್ನುವುದು ಪ್ರಭುತ್ವದ ವಶವಾಯಿತು. ಪ್ರಭುತ್ವದ ವಶವಾದ
> ಬರಹದ ಇತಿಹಾಸ ಪ್ರಭುತ್ವದ ಪರವಾಗಿ ವಾದಿಸುತ್ತಾ ಹೊರಟಿತು. ಇಲ್ಲಿ ಇತಿಹಾಸ ಮತ್ತು
> ನಿಷ್ಠತೆಯನ್ನು ಕಳೆದುಕೊಂಡು ಘಟನೆಯ ಯಾವುದೋ ಒಂದು ಮುಖವನ್ನು ಮಾತ್ರ ದಾಖಲಿಸುವಂತಾಯಿತು. ಈ
> ಇತಿಹಾಸದಿಂದ ಕಣ್ಮರೆಯಾದ ಅನೇಕ ಸಂಗತಿಗಳು ತುಂಬಾ ಮುಖ್ಯವಾದಂತಹವು. ಆದ್ದರಿಂದಲೇ ಆ
> ಸಂಗತಿಗಳು ಜನಪದರ ಮೌಖಿಕ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡವು. ಅಂಥ
> ಸಾಧ್ಯತೆಗಳನ್ನು ಕೆಲವು ಉದಾಹರಣೆಗಳ ಮೂಲಕ ಈ ಪ್ರಬಂಧದಲ್ಲಿ ಚರ್ಚಿಸಲಾಗಿದೆ.
> ಪ್ರಸ್ತಾವನೆ
>   ಭಾರತದ ಚರಿತ್ರೆಯ ಚರ್ಚೆಯ ಸಂದರ್ಭಗಳಲ್ಲಿ ’ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ’ ಎಂಬ
> ಮಾತು ವಿದೇಶಿ ಹಾಗೂ ದೇಶಿ ವಿದ್ವಾಂಸರಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು. ಇದು ಬಹಳ
> ವರ್ಷಗಳ ಕಾಲ ಒಪ್ಪಿತ ಅಭಿಪ್ರಾಯವೇ ಆಗಿತ್ತು. ಸ್ವಲ್ಪ ಕಾಲಾನಂತರ ಈ ಅಭಿಪ್ರಾಯದ ಬಗ್ಗೆ
> ಜಿಜ್ಞಾಸೆ ಶುರುವಾಯಿತು. ಇದರಿಂದ ತಿಳಿದು ಬಂದ ಸಂಗತಿಯೆಂದರೆ ಬ್ರಿಟೀಷರು ಈ ದೇಶಕ್ಕೆ ಬಂದು
> ಆಳತೊಡಗಿದ ಮೇಲೆ ಅವರು ಈ ನಾಡಿನ ಇತಿಹಾಸ ಬರೆದರು. ಹಾಗೆ ಬರೆಯುವಾಗ ಅವರು ಲಿಖಿತ
> ಸಾಮಗ್ರಿಗಳನ್ನೇ ಆಧರಿಸಿಕೊಂಡರು. ಅದು ಪಶ್ಚಿಮದ ರೀತಿಯೂ ಆಗಿತ್ತು. ಎಷ್ಟೋ ಬಾರಿ ಲಿಖಿತ
> ಸಾಮಾಗ್ರಿಗಳು ಸಿಗದೇ ಇದ್ದಾಗ ಈ ನಾಡಿನ ಜನರಿಗೆ ಇತಿಹಾಸ ಪ್ರಜ್ಞೆ ಇಲ್ಲ್ಲ ಎಂದು ಅವರು
> ಗೊಣಗಿಕೊಂಡಿದ್ದಾರೆ.. ಅಂದರೆ ಬರೆಹದ ಚರಿತ್ರೆಯನ್ನು ಆರಂಭಿಸಿದ ವಿದೇಶಿ ವಿದ್ವಾಂಸರಿಗೆ
> ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ಚರಿತ್ರೆ ಎಂದರೆ ಕೇವಲ ಬರೆಹದ ಚರಿತ್ರೆ ಮಾತ್ರ
> ಎಂಬುದಾಗಿ ನಂಬಲಾಗಿದೆ. ಈ ಮಾತಿನಲ್ಲಿ ಸತ್ಯಾಂಶ ಇಲ್ಲ  ಎಂಬುದನ್ನು  ಅರ್ಥಮಾಡಿಕೊಳ್ಳಲು
> ಬಹಳ ವರ್ಷ ಕಾಯಬೇಕಾಯಿತು. ಚರಿತ್ರೆಯ ಭಿನ್ನ ಆಕರಗಳನ್ನು ಶೋಧಿಸುವ ಸಂದರ್ಭದಲ್ಲಿ ಇದಕ್ಕೆ
> ಉತ್ತರ ಸಿಕ್ಕಿತು ಎನ್ನಬಹುದು. ಚರಿತ್ರೆ ಎನ್ನುವುದು ಕಟ್ಪಲ್ಪಡುವಂಥದ್ದು. ಹೀಗೆ
> ಕಟ್ಪಲ್ಪಡುವ ಚರಿತ್ರೆ ಒಂದು ಸತ್ಯವನ್ನು ಮಾತ್ರ ಹೇಳುತ್ತಿರುತ್ತದೆ. ಯಾವುದೇ ಒಂದು ಘಟನೆಗೆ
> ಒಂದೇ ಸತ್ಯ ಇರುವುದಿಲ್ಲ. ಇಂತಹ ಬಹುಮುಖ ಸತ್ಯಗಳನ್ನು ಹೊಂದಿರುವ ಘಟನೆಗಳನ್ನು ಕುರಿತ
> ಚರಿತ್ರೆಗಳು ಸಹ ಹಲವಾರು. ಈವರೆಗೂ ಸಿದ್ಧಗೊಂಡಿರುವ ಚರಿತ್ರೆಯನ್ನು ಪ್ರಮುಖವಾದ ಎರಡು
> ರೂಪಗಳಲ್ಲಿ ಗುರುತಿಸಬಹುದು. ಅವುಗಳಲ್ಲಿ ಒಂದು ಮನುಷ್ಯನ ನೆನಪಿನ ಶಕ್ತಿಯ ಮಿತಿಯಿಂದಾಗಿ
> ಹುಟ್ಟಿಕೊಂಡ ಬರಹದ ಚರಿತ್ರೆ. ಇನ್ನೊಂದು ಹಿಂದಿನಿಂದಲೂ ಚಾಲ್ತಿಯಲ್ಲಿದ್ದ  ಮೌಖಿಕ
> ಚರಿತ್ರೆ.
> ಮೌಖಿಕ ಚರಿತ್ರೆಯ ಪರಿಕಲ್ಪನೆ
> ಇಂದು ಮನುಷ್ಯನ ನೆನಪಿನ ಶಕ್ತಿಯ ಮಿತಿಯಿಂದಾಗಿ ಹುಟ್ಟಿಕೊಂಡ ಬರಹದ ಚರಿತ್ರೆ (Wಡಿiಣಣeಟಿ
> ಊisಣoಡಿಥಿ) ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಮೌಖಿಕ ಚರಿತ್ರೆ (ಔಡಿಚಿಟ ಊisಣoಡಿಥಿ)ಯನ್ನು
> ಅನಧಿಕೃತ ಎನ್ನುವ ವಾತಾವರಣವನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಗಿದೆ. ಬರೆಹದ ಇತಿಹಾಸವು ರಾಜರ
> ಹುಟ್ಟು, ಹೋರಾಟ, ಸಾವು ಎನ್ನುವ ಘಟನೆಗಳನ್ನು ಪ್ರಧಾನವಾಗಿಸಿಕೊಂಡು ಇವೇ ವಸ್ತುನಿಷ್ಠ ಎಂದು
> ಭಾವಿಸುತ್ತದೆ. ಸಮಾಜವನ್ನು ಮೇಲುಸ್ತರದ ಗ್ರಹಿಕೆಗಳಿಂದ ಪರಿಭಾವಿಸುತ್ತದೆ. ಇದು
> ಲಿಖಿತತೆಯನ್ನು ತನ್ನ ಮೂಲ ಬಂಡವಾಳವನ್ನಾಗಿಸಿಕೊಂಡಿದೆ. ಮೌಖಿಕಇತಿಹಾಸವು
> ಘಟನೆಗಳನ್ನು/ವಿವರಗಳನ್ನು  ಸಮಾಜದ ಕೆಳಸ್ತರದಿಂದ ಪರಿಭಾವಿಸುತ್ತಾ ರಾಜರದಷ್ಟೇ ಚರಿತ್ರೆ
> ಅಲ್ಲ; ಪ್ರತಿಯೊಂದು ವಸ್ತು, ವ್ಯಕ್ತಿಗೂ ಒಂದು ಇತಿಹಾಸವಿದೆ. ಪ್ರತಿಯೊಂದು ಘಟನೆಗೂ
> ಕಾರ್ಯಕಾರಣ ಸಂಬಂಧವಿದೆ ಎನ್ನುವ ತಿಳುವಳಿಕೆ ಇಲ್ಲಿ ಪ್ರಧಾನವಾಗಿರುತ್ತದೆ. ಈ ಆಲೋಚನಕ್ರಮ
> ಮೌಖಿಕ ತಿಳುವಳಿಕೆ, ದಾಖಲೆಗಳನ್ನು ತನ್ನ ಪ್ರಧಾನ ಆಕರ ಸಾಮಗ್ರಿಗಳಾಗಿಸುತ್ತದೆ. ಜೊತೆಗೆ
> ಯಾವುದೇ ಒಂದು ಘಟನೆಗೆ ಮುಕ್ತಾಯವಿಲ್ಲ ಎಂಬುದಾಗಿ ಭಾವಿಸುತ್ತದೆ.
> ಈವರೆಗೂ ನಾವು ಇತಿಹಾಸವೆಂದರೆ ಬರೆಹದ ಇತಿಹಾಸವೆಂಬ ಪರಿಮಿತಿಯ ಒಳಗಡೆ ಸುತ್ತಾಡಿದ್ದೇವೆ.
> ಆದ್ದರಿಂದಲೇ ನಮ್ಮ ಆಲೋಚನೆ ಏಕಮುಖೀಯವಾಗಿದೆ. ಮಾತಿನ ಇತಿಹಾಸದ ಬಗ್ಗೆಯೇ ಯೋಚಿಸಿರುವ ನಾವು
> ಮೌನಕ್ಕೂ ಒಂದು ಇತಿಹಾಸವಿದೆ ಎಂಬ ಸತ್ಯವನ್ನು ಗ್ರಹಿಸಲಾರದೇ ಹೋಗಿದ್ದೇವೆ. ’ಮೌನಂ ಸಮ್ಮತಿ
> ಲಕ್ಷಣಂ’ ಎನ್ನುವಾಗಲೇ ಮೌನವು ಅಸಮ್ಮತಿಯ, ವಿರೋಧದ, ಹತಾಶೆಯ ಲಕ್ಷಣವೂ ಏಕಾಗಿರಬಾರದು
> ಎಂಬುದನ್ನು ಅರಿಯದವರಾಗಿದ್ದೇವೆ. ರಾಜರದು, ಬರಹ ರೂಪದ್ದು ಇತಿಹಾಸ ಎಂದು ನಂಬಿದ್ದ ನಾವು,
> ಪ್ರತಿಯೊಬ್ಬನಿಗೂ ಒಂದು ಇತಿಹಾಸವಿದೆ. ಬರವಣಿಗೆಯ ಇತಿಹಾಸಕ್ಕಿಂತ ಭಿನ್ನವಾದ, ಬರವಣಿಗೆಯ
> ಇತಿಹಾಸದ ಕೊರತೆಗಳನ್ನು ತುಂಬಬಲ್ಲ ಸಾಮರ್ಥ್ಯವುಳ್ಳ ಮೌಖಿಕ ಇತಿಹಾಸ ನಮ್ಮ ನಡುವೆ ಇದೆ ಎಂಬ
> ಕಟು ವಾಸ್ತವವನ್ನು ತಿಳಿಯಬೇಕಾಗಿದೆ. ಇಂಥ ಪ್ರಧಾನ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು
> ರೂಪುಗೊಂಡಿರುವ ಹೊಸ ಆಲೋಚನ ಕ್ರಮವೇ ನವ ಇತಿಹಾಸ. ಇದರ ಆಲೋಚನಾ ಶಾಖೆಗಳು ಹಲವು. ಅವುಗಳಲ್ಲಿ
> ದೈಹಿಕ ಚರಿತ್ರೆ, ಮಹಿಳಾ ಚರಿತ್ರೆ, ಮೌಖಿಕ ಚರಿತ್ರೆ ಮೊದಲಾದವು ಮುಖ್ಯವಾಗುತ್ತವೆ. ಈ
> ಎಲ್ಲಾ ಶಾಖಾ ವಿಧಾನಗಳು ಕೆಳಸ್ತರದಿಂದಲೇ ಇಡೀ ಚರಿತ್ರೆಯನ್ನು ಕಟ್ಟಿಕೊಳ್ಳುವಲ್ಲಿ
> ಶ್ರಮಿಸುತ್ತವೆ.
> ಪ್ರಸ್ತುತ ಮೌಖಿಕ ಇತಿಹಾಸದ (ಔಡಿಚಿಟ ಊisಣoಡಿಥಿ) ಬಗ್ಗೆ ಸ್ವಲ್ಪ ವಿವರವಾದ ವಿಶ್ಲೇಷಣೆ
> ಮಾಡಬಹುದು. ಮೌಖಿಕ ಇತಿಹಾಸ ಎನ್ನುವುದು ಮೌಖಿಕ ಪರಂಪರೆಯ ಒಳಗೂ ಸೇರಿಕೊಂಡುಬಿಟ್ಟಿದೆ. ಇಂಥ
> ಇತಿಹಾಸವನ್ನು ಕಟ್ಟಿಕೊಳ್ಳುವಾಗ ಪ್ರಧಾನ ಆಕರ ಸಾಮಗ್ರಿ ಜಾನಪದ. ಜನಪದ ಸಾಹಿತ್ಯ, ಕಲೆ,
> ಭೌತಿಕ ವಸ್ತುಗಳೂ ಸೇರಿದಂತೆ ಒಟ್ಟಾರೆ ಜೀವನ ಕ್ರಮದ ವಿವಿಧ ಆಯಾಮಗಳು ಮೌಖಿಕ ಇತಿಹಾಸ
> ರಚನೆಗೆ ಸಹಕಾರಿ. ಈವರೆಗಿನ ಪ್ರಭುತ್ವದ ಕೂಸಾದ ಇತಿಹಾಸದ ಲೋಪಗಳನ್ನು ತಿದ್ದುತ್ತಾ,
> ಕೊರತೆಗಳನ್ನು ತುಂಬುತ್ತಾ ಮುನ್ನಡೆಯಲು ಪರಂಪರೆಯ ಮೌಖಿಕಾಭಿವ್ಯಕ್ತಿಗಳನ್ನು
> ಪರಿಗಣಿಸಬೇಕಾಗುತ್ತದೆ. ಇಲ್ಲಿಯವರೆಗಿನ ಪ್ರಧಾನ ಧಾರೆಯ ಇತಿಹಾಸಗಳು ರಾಜಕೀಯ ಚೌಕಟ್ಟನ್ನೇ
> ಪ್ರಧಾನವಾಗಿರಿಸಿಕೊಂಡು ಸಾಂಸ್ಕೃತಿಕ ಚೌಕಟ್ಟನ್ನು ನಿರ್ಲಕ್ಷಿಸಿವೆ. ಮತ್ತೊಂದು ಕಡೆ ಜಾನಪದ
> ದೃಷ್ಟಿ ಸಾಂಸ್ಕೃತಿಕವಾಗಿ ಹೆಚ್ಚು ಒಲವು ತೋರಿದರೂ ರಾಜಕೀಯದ ಕಡೆ ನಿರ್ಲಕ್ಷೆ ತೋರಿಲ್ಲ
> ಎಂಬುದು ಇಲ್ಲಿ ಮಹತ್ವದ ಸಂಗತಿ.
> ನಮ್ಮ ಪ್ರಧಾನಧಾರೆಯ ಇತಿಹಾಸಗಳು ಹೇಗೆ ತಪ್ಪುಗಳನ್ನು ಮಾಡುತ್ತಾ ಬಂದಿವೆ. ಅದಕ್ಕೆ ಮೌಖಿಕ
> ಪರಂಪರೆ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಕೆಲವು ಉದಾಹರಣೆ ಮೂಲಕ
> ಸ್ಪಷ್ಟಪಡಿಸಿಕೊಳ್ಳಬಹುದು. ಬರಹದ ಇತಿಹಾಸಗಳು ’ರಾಜ ಪ್ರತ್ಯಕ್ಷ ದೇವತಾ’ ಎಂದರೆ, ಮೌಖಿಕ
> ಪರಂಪರೆ ’ರಾಜನ ಕಣ್ಣಿಗೆ ಬೀಳಬೇಡ’, ’ಅರಮನೆಯ ಮುಂದೆ ಹೋಗಬಾರದು’ ಎನ್ನುತ್ತದೆ. ಇವು ಒಂದು
> ರಾಜ ಪ್ರಭುತ್ವದ ಬಗ್ಗೆ ಅಭಿವ್ಯಕ್ತಿಗೊಂಡ ಎರಡು ಸತ್ಯಗಳು. ಇವುಗಳಲ್ಲಿ ನಾವು ’ರಾಜ
> ಪ್ರತ್ಯಕ್ಷ ದೇವತಾ’ ಎನ್ನುವ ಮಾತನ್ನು ಸ್ವೀಕರಿಸಿದ ಹಾಗೆ ಇನ್ನುಳಿದ ಮೌಖಿಕ ಪರಂಪರೆಯ ಎರಡು
> ಮಾತುಗಳನ್ನು ಸ್ವೀಕರಿಸಿಲ್ಲ ಎಂಬುದನ್ನು ಅತ್ಯಂತ ಗಂಭೀರವಾಗಿ ಚಿಂತಿಸಬೇಕಾಗಿದೆ. ಇದೇ
> ಹಿನ್ನೆಲೆಯಲ್ಲಿ ತುಳುನಾಡಿನಲ್ಲಿ ಬಹು ಪ್ರಚಲಿತ ಹಾಗೂ ಜನಪ್ರಿಯ ’ಕಲ್ಗುಡ ಕಲ್ಲುರ್ಟಿ’
> ಪಾಡ್ದನವನ್ನು ಗಮನಿಸಬಹುದು. ಗೊಮ್ಮಟೇಶ್ವರನ ಮೂರ್ತಿಯನ್ನು ಅತ್ಯಂತ ಅಭೂತಪೂರ್ವವಾಗಿ
> ಕೆತ್ತಿದವನು ಕಲ್ಕುಡ. ಇವನಿಗೆ ರಾಜ ಬಹುಮಾನ ನೀಡಿ ಗೌರವಿಸಿದ. ಈ ಅಂಶ ಗೊಮ್ಮಟೇಶ್ವರನ
> ಕುರಿತ ಶಾಸನ ಹಾಗೂ ಚರಿತ್ರೆಯ ಗ್ರಂಥಗಳಿಂದ ತಿಳಿದುಬರುತ್ತದೆ. ಆದರೆ ಪಾಡ್ದನ ಹೇಳುವಂತೆ
> ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿಸಿಕೊಂಡ ಹುಚ್ಚುದೊರೆ ತನಗಲ್ಲದೆ ಬೇರೆ ಯಾರಿಗೂ ಇಂಥ
> ಮೂರ್ತಿ ಕೆತ್ತಬಾರದೆಂದು ಕಲ್ಕುಡನ ಬಲಗೈ ಹಾಗೂ ಬಲಗಾಲನ್ನು ಕತ್ತರಿಸುತ್ತಾನೆ. ಇಂತಹ
> ವೈರುಧ್ಯದ ಸಂಗತಿಗಳು ಹೇಗೆ ಏಕೆ ದಾಖಲಾದವು ಎಂಬುದರ ಬಗ್ಗೆ ಗಂಭೀರ ಅಧ್ಯಯನಗಳು, ಚಿಂತನ
> ಮಂಥನಗಳು ನಡೆಯಬೇಕಿದೆ.
> ಇಲ್ಲಿ ಗಮನಹರಿಸಬೇಕಾದ ಮತ್ತೊಂದು ಮಹತ್ವದ ಸಂಗತಿಯೆಂದರೆ ಬರಹದ ಇತಿಹಾಸ ನಿರ್ಲಕ್ಷಿಸಿದ
> ಅನೇಕ ಐತಿಹಾಸಿಕ ಘಟನೆಗಳನ್ನು ಮೌಖಿಕ ಪರಂಪರೆ ದಾಖಲಿಸಿಕೊಳ್ಳುವ ಪ್ರಯತ್ನ ಮಾಡಿದೆ.
> ಹಾಗಾಗಿಯೇ ಪ್ರಧಾನ ಧಾರೆಯ ಇತಿಹಾಸ ಮದಕರಿನಾಯಕ, ಕಿತ್ತೂರು ರಾಣಿಚೆನ್ನಮ್ಮ, ಕೃಷ್ಣದೇವರಾಯ
> ಮೊದಲಾದ ದೊಡ್ಡವರೆಂದು ಕರೆದುಕೊಂಡವರ ವಿವರಗಳನ್ನು ಒದಗಿಸಿದರೆ, ಇಂತಹ ಹಿರಿಯರಿಗೆ
> ಬೆನ್ನೆಲುಬಾಗಿ ನಿಂತ ಗಾದ್ರಿಪಾಲನಾಯಕ, ಸಂಗೊಳ್ಳಿರಾಯಣ್ಣ, ಕುಮಾರರಾಮ, ಜುಂಜಪ್ಪನಂತಹ
> ಶೂರರನ್ನು ಕುರಿತು ಮೌಖಿಕ ಪರಂಪರೆ ಪರಿಚಯಿಸುತ್ತದೆ. ಈ ಎಲ್ಲಾ ಸಂಗತಿಗಳ ಬಗ್ಗೆ ಆಳವಾಗಿ
> ಚಿಂತಿಸುವ ಅಗತ್ಯ ತುಂಬಾ ಇದೆ. ಇಂತಹ ಆಲೋಚನೆಗೆ ಮೌಖಿಕ ಪರಂಪರೆಯ ಆಧಾರದಿಂದ ರೂಪುಗೊಂಡಿರುವ
> ಮೌಖಿಕ ಚರಿತ್ರೆಯ ಪರಿಕಲ್ಪನೆ ಸಾಕಷ್ಟು ಇಂಬುಕೊಡುತ್ತದೆ. ಇಂಥ ಮಹತ್ವಪೂರ್ಣವಾದ ಮೌಖಿಕ
> ಚರಿತ್ರೆಯನ್ನು ಕಟ್ಟಿಕೊಳ್ಳುವ ತುರ್ತು ಇದೆ. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಕೆಲವು
> ವಿದ್ವಾಂಸರು ಮೌಖಿಕ ಚರಿತ್ರೆಯ ಸ್ವರೂಪಗಳನ್ನು ಗುರುತಿಸುವ ಪ್ರಯತ್ನಮಾಡಿದ್ದಾರೆ. ಅಂಥ
> ಒಂದೆರಡು ನಿದರ್ಶಗಳನ್ನು ಇಲ್ಲಿ ವಿವರಿಸಬಹುದು
>
> ನಿದರ್ಶನ-೧
> ಶರಣ ಚಳವಳಿ - ಮಂಟೆಸ್ವಾಮಿ ಕಾವ್ಯ
>
> ಶರಣಚಳವಳಿ ೧೨ನೇ ಶತಮಾನದ ಬಹುದೊಡ್ಡ ಸಾಹಿತ್ಯಿಕ ಮತ್ತು ಸಾಮಾಜಿಕ ಕ್ರಾಂತಿ. ಇದರ ಬಗ್ಗೆ
> ಅಂದಿನಿಂದ ಇಂದಿನವರೆಗೂ ಅನೇಕಾನೇಕ ಬರೆಹದ ಇತಿಹಾಸಗಳು ದೊರೆಯುತ್ತವೆ. ಈ ಇತಿಹಾಸಗಳೆಲ್ಲ
> ಶರಣರು  ಸಮಾನತೆಯ ಸಮಾಜವನ್ನು ಕಟ್ಟಲು ಪ್ರಯತ್ನಿಸಿದ್ದನ್ನು, ಆಗಿನ ಕಲ್ಯಾಣ ಪಟ್ಟಣದ ಆದರ್ಶ
> ಗುಣಲಕ್ಷಣಗಳನ್ನು  ಹಾಗೂ ಆ ಚಳುವಳಿಯ ನಾಯಕರಾದ ಬಸವಣ್ಣ ಮೊದಲಾದ ಶರಣರ ನಡುವಿನ ಅನೋನ್ಯ
> ಸಂಬಂಧಗಳನ್ನು ದಾಖಲಿಸಿವೆ. ಆದರೆ ಇದರ ಬಗ್ಗೆ ಮೌಖಿಕ ಕಥನಗಳಲ್ಲಿ ದೊರೆಯುವ ಮಾಹಿತಿ ತೀರಾ
> ಭಿನ್ನವೆನಿಸುತ್ತದೆ. ಈ ಬಗ್ಗೆ ಪ್ರಸ್ತಾಪವಿರುವ ಮೌಖಿಕ ಕಥನಗಳಲ್ಲಿ ಮಂಟೇಸ್ವಾಮಿ ಜನಪದ
> ಮಹಾಕಾವ್ಯ ಗಮನಾರ್ಹವಾದುದು. ಆ ಕಾವ್ಯದಲ್ಲಿ ಬರುವ ವಿವರಗಳನ್ನು ಮುಂದಿನಂತೆ
> ಸಂಗ್ರಹಿಸಬಹುದು.
> ಮಂಟೇಸ್ವಾಮಿ ೧೨ನೇ ಶತಮಾನದಲ್ಲಿದ್ದ ಕೆಳವರ್ಗದ ಶಿವಶರಣ. ಬಸವಣ್ಣನ ಕಾಲದಲ್ಲೇ ಉಳುಕಾಗಿದ್ದ
> ಕಲ್ಯಾಣ ಪಟ್ಟಣದ ಶರಣ ಸಮೂಹವನ್ನು ತಿದ್ದಿ ಸರಿಪಡಿಸಲು ಕಲ್ಯಾಣ ಪಟ್ಟಣಕ್ಕೆ ಈತ
> ಹೊರಡುತ್ತಾನೆ. ಕಲ್ಯಾಣದಲ್ಲಿ ದಾಸೋಹಕ್ಕೆ ಮೊದಲು ಶುಭ್ರವಾಗಿರುವ ಮಹತ್ಮರು, ಶರಣರನ್ನು
> ಬಿಡು ಅನಂತರ ರೋಗಿ, ಭಿಕ್ಷುಕರನ್ನು ಬಿಡಬೇಕೆಂದು ಬಸವಣ್ಣನ ಆಜ್ಞೆಯಾಗಿರುತ್ತದೆ. ಇದನ್ನು
> ಮನಗಂಡ ಮಂಟೇಸ್ವಾಮಿ ಕುಷ್ಠರೋಗಿಯ ವೇಷಧಾರಿಯಾಗಿ ಕಲ್ಯಾಣ ಪಟ್ಟಣದ ಬಾಗಿಲಿಗೆ ಬರುತ್ತಾನೆ.
> ಬಾಗಿಲಲ್ಲಿದ್ದ ಕಟುಗರ ಸಂಗಯ್ಯ ಎನ್ನುವ ವ್ಯಕ್ತಿ ಮಂಟೇಸ್ವಾಮಿಯನ್ನು ತಡೆದು
> ನಿಲ್ಲಿಸುತ್ತಾನೆ. ಇದರಿಂದ ಕೋಪಗೊಂಡ ಮಂಟೇಸ್ವಾಮಿ ಬಸವಣ್ಣ ಮತ್ತು ನೀಲಾಂಬಿಕೆಯರಿಗೆ
> ಜ್ಞಾನೋದಯ ಮಾಡಿಸಿ, ಬಾಗಿಲಿಗೆ ನಮಗಿಂತ ಬಹುದೊಡ್ಡ ಶರಣ ಬಂದಿದ್ದಾನೆಂದು ತಿಳಿಯುವಂತೆ
> ಮಾಡುತ್ತಾನೆ. ಈ ವಿಷಯ ತಿಳಿದ ಬಸವಣ್ಣ-ನೀಲಾಂಬಿಕೆ ಅವರು ಬಾಗಿಲಿಗೆ ದಾವಿಸುತ್ತಾರೆ.
> ಅಷ್ಟೊತ್ತಿಗಾಗಲೇ ಮಂಟೇಸ್ವಾಮಿ ಹರಳಯ್ಯನ ತಿಪ್ಪೇಗುಂಡಿಯಲ್ಲಿ ಬಿದ್ದಿರುತ್ತಾನೆ. ಅದನ್ನು
> ಕಂಡ ಬಸವ ದಂಪತಿಗಳು ಸ್ವಾಮಿಯನ್ನು ಕೈ ಹಿಡಿದೆತ್ತಲು ಕೈ, ಕಾಲಿಡಿದೆತ್ತಲು ಕಾಲು,
> ರುಂಡವಿಡಿದೆತ್ತಲು ರುಂಡ ಕಿತ್ತು ಬರುತ್ತವೆ. ಅವುಗಳನ್ನೆಲ್ಲಾ ಪೊಟ್ಟಣ ರೀತಿ ಕಟ್ಟಿ
> ಹೊತ್ತು ತರುತ್ತಾರೆ. ಸ್ವಾಮಿಯ ಪವಾಡ ಪರಿಣಾಮದಿಂದ ಅವರು ಹೊತ್ತು ತರುವ ಆ ದೇಹದ ಭಾಗಗಳು
> ನೋಡುವ ಶರಣರಿಗೆ ಹೆಂಡದ ಗಡಿಗೆ, ಮಾಂಸದ ಪೊಟ್ಟಣದ ರೀತಿ ಕಾಣಲಾರಂಭಿಸುತ್ತವೆ. ಇಂತಹ
> ದೃಶ್ಯವನ್ನು ನೋಡಿದ ಕಲ್ಯಾಣದ ಮೇಲ್ವರ್ಗದ ಶರಣರು ನಾವು ಮತ್ತು ನಮ್ಮ ಲಿಂಗ
> ಬತ್ತಗೆಟ್ಟಂತಾಯಿತು ಎಂದು ಕಲ್ಯಾಣದಿಂದ ಓಡುತ್ತಾರೆ. ದಲಿತ ಶರಣರು ಮಾತ್ರ ಅಲ್ಲೇ ಇದ್ದರು.
> ಆಗ ಸ್ವಾಮಿ ಬಸವಣ್ಣನಿಗೆ ಬುದ್ಧಿವಾದ ಹೇಳುತ್ತಾ ನಿಜವಾದ ಶರಣರೆಂದರೆ ಇವರು (ದಲಿತರು). ಓಡಿ
> ಹೋದವರೆಲ್ಲ ಕಳ್ಳ ಜಂಗಮರು. ಉಳಿದವರನ್ನೇ ಶರಣರೆಂದು ನಂಬಿ ಗುರುಮಠ ಬೆಳೆಸು ಎನ್ನುವ
> ಮಾತುಗಳನ್ನು ಹೇಳುತ್ತಾನೆ.
> ಈ ಮೇಲಿನ ಸಾರಾಂಶ ಲಿಖಿತ ಇತಿಹಾಸಕ್ಕಿಂತ ವಿರುದ್ಧವಾದ, ಅಥವಾ ಅಲ್ಲಿ ದೊರೆಯದ ಅನೇಕ
> ಸತ್ಯಾಂಶಗಳನ್ನು ಹೊರಗೆಡಹುತ್ತಿದೆ. ಬಸವಣ್ಣ ಸಮಾನತೆಯ ಒಳಗೇನೆ ಎಂತಹ
> ಧ್ವಂಧ್ವಾತ್ಮಕವಾಗಿದ್ದ. ಹಾಗೆಯೇ ಎಂಥ ವೇಷಧಾರಿ ಜಂಗಮರು ಕಲ್ಯಾಣದಲ್ಲಿದ್ದರು,
> ಶಿವಶರಣರಲ್ಲಿದ್ದ ತಾರತಮ್ಯ ಮನೋಭಾವ ಯಾವ ತೆರನಾದುದು ಎನ್ನುವ ವಿಷಯಗಳನ್ನು ತಿಳಿಸುತ್ತಿದೆ.
> ಶಿವಶರಣರ ಈ ಜಾತಿ ತಾರತಮ್ಯ ನೀತಿಯಿಂದಾಗಿ ಕೆಳವರ್ಗದ ಶಿವಶರಣರಿಗೆ ಸರಿಯಾದ ಸ್ಥಾನ ಸಿಕ್ಕದೇ
> ಇದ್ದ ಕಾರಣದಿಂದಾಗಿ ತುಂಬಾ ಪ್ರಜ್ಞಾವಂತರಾದ ಮಂಟೇಸ್ವಾಮಿಯಂತಹ ಶರಣರು ಬಸವಣ್ಣನೂ ಸೇರಿದಂತೆ
> ಮೇಲ್ವರ್ಗದ ಶರಣರ ವಿರುದ್ಧ ದಂಗೆಯೆದ್ದು ಪರಿಸ್ಥಿತಿ ಸುಧಾರಿಸಿದ ಈ ಅಂಶ ಬಹುಶಃ ಬರಹದ ಮೂಲಕ
> ದಾಖಲಾಗುತ್ತ ಬಂದಿರುವ ಯಾವ ಇತಿಹಾಸದಲ್ಲೂ ಸಿಗಲಾರದು. ಆದ್ದರಿಂದಲೇ ಜಾನಪದ ಮತ್ತು ಇತಿಹಾಸದ
> ಸಂಬಂಧಗಳನ್ನು ಹೇಳುವಾಗ ’ಇತಿಹಾಸ ಎಲ್ಲಿ ಸೋಲುತ್ತದೆಯೋ ಅಲ್ಲಿ ಜಾನಪದ ನೆರವಿಗೆ ಬರುತ್ತದೆ’
> ಎನ್ನುವ ವಿದ್ವಾಂಸರ ಮಾತು ಸತ್ಯಕ್ಕೆ ಹತ್ತಿರವಾದುದು. ಒಂದು ಕಾಲದ ವಸ್ತುನಿಷ್ಟ
> ಇತಿಹಾಸವನ್ನು ತಿಳಿಯಬೇಕಾದರೆ ಬರಹದ ಇತಿಹಾಸದ ಜೊತೆಗೆ ಅದೇ ಕಾಲದಲ್ಲಿ ರಚನೆಯಾದ ಮೌಖಿಕ
> ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಇಲ್ಲವಾದರೆ ಏಕಪಕ್ಷಿಯ ನಿಲುವುಗಳು ಮಾತ್ರ
> ತಿಳಿಯುತ್ತವೆ. ಈವರೆಗೂ ರಚನೆಯಾಗಿರುವ ಇತಿಹಾಸಗಳ ರಚನೆಯೇ ಇದಕ್ಕೆ ಸಾಕ್ಷಿ. ಬಸವಣ್ಣ ಎಲ್ಲಾ
> ಶರಣರನ್ನು ತಿದ್ದಿ ಬೆಳಿಸಿದ ಸುದ್ದಿ ನೀಡುವ ಇತಿಹಾಸ ಎಂದೂ ಕೂಡ ದಲಿತ ಶರಣನೊಬ್ಬ
> ಬಸವಣ್ಣನನ್ನು ತಿದ್ದಿದ ಸುದ್ದಿಯನ್ನು ನೀಡಲಾರದು. ಅಂತಹ ಅದ್ಭುತ ಕೆಲಸ ಮೌಖಿಕ
> ಇತಿಹಾಸದಿಂದಲೇ ಸಾಧ್ಯ. ಇದನ್ನು ಮನಗಂಡಿರುವ ಅನೇಕ ಇತಿಹಾಸಕಾರರು ಮೌಖಿಕ ಚರಿತ್ರೆಯ ಕಡೆಗೆ
> ಗಮನ ನೀಡಿರುವುದು ಸ್ವಾಗತಾರ್ಹ.
> ಮೌಖಿಕ ಇತಿಹಾಸ, ಇತಿಹಾಸ ರಚನೆಗೆ ತುಂಬಾ ಸಹಕಾರಿ, ಅನಿವಾರ್‍ಯ ಕೂಡ ಎಂಬುದು ಸತ್ಯ. ಆದರೆ
> ಮೌಖಿಕ ಇತಿಹಾಸವನ್ನು ಇತಿಹಾಸ ರಚನೆಗೆ ಬಳಸಿಕೊಳ್ಳುವ ವಿದ್ವಾಂಸ ತುಂಬಾ
> ಪ್ರಜ್ಞಾವಂತನಿರಬೇಕು. ಕಾರಣ ಮೌಖಿಕ ಇತಿಹಾಸದಲ್ಲಿ ಅನೇಕ ಘಟನೆಗಳು ಐತಿಹ್ಯ-ಪುರಾಣಗಳಾಗಿ
> ಮಾರ್ಪಾಟಾಗಿರುತ್ತವೆ. ಈ ಐತಿಹ್ಯ-ಪುರಾಣಗಳಿಂದ ಐತಿಹಾಸಿಕ ಅಂಶಗಳನ್ನು ಬಿಡಿಸಿಕೊಳ್ಳುವ
> ಕ್ರಿಯೆ ತುಂಬಾ ಕಷ್ಟಕರ. ಆದ್ದರಿಂದ ಮೌಖಿಕ ಇತಿಹಾಸ ವಸ್ತುನಿಷ್ಟ ಇತಿಹಾಸದ ರಚನೆಗೆ ತುಂಬಾ
> ಸಹಕಾರಿ, ವಿದ್ವಾಂಸ ಮೌಖಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳುವಾಗ ಸ್ವಲ್ಪ ಎಡವಿದ್ದೇ ಆದಲ್ಲಿ
> ಅಷ್ಟೇ ಅಪಾಯಕಾರಿ.
> ನಿದರ್ಶನ-೨
> ಭಗೀರತಿ - ಬಂದಮ್ಮ
> ಕೆರೆಗೆಹಾರ ಕನ್ನಡದ ಜನಪ್ರಿಯ ಕಥನಗೀತೆ. ಇದರ ಪಾಠಾಂತರಗಳು ಕನ್ನಡ ನಾಡಿನಲ್ಲಿ ಅಷ್ಟೇ
> ಅಲ್ಲದೆ ನೆರೆಯ ಆಂದ್ರದಲ್ಲಿಯೂ ಸಿಗುತ್ತವೆ. ಈ ಕಥನಗೀತೆಯ ಬರೆಹದ ಪಾಠಾಂತರದಲ್ಲಿ ಸಮಾಜದ
> ಒಂದು ವರ್ಗದ ಉದಾರತೆ ಹಾಗೂ ತ್ಯಾಗ ಮನೋಭಾವಗಳನ್ನು ಬಿಂಬಿಸಲಾಗಿದೆ. ಇದರ ಕಥೆಯನ್ನು ಹೀಗೆ
> ಸಂಗ್ರಹಿಸಬಹುದು : ಕಲ್ಲನಕೇರಿ ಮಲ್ಲನಗೌಡ ಕೆರೆಯೊಂದು ಕಟ್ಟಿಸುತ್ತಾನೆ. ಕೆರೆಯಲ್ಲಿ
> ಸೆರೆಮುಕ್ಕ ನೀರಿಲ್ಲ . ಅದಕ್ಕೆ ಗೌಡ ಹೊತ್ತಿಗೆ ತೆಗೆಸುತ್ತಾನೆ. ಅದರಲ್ಲಿ ಗೌಡನ
> ಹಿರಿಸೊಸೆಯನ್ನು ಬಲಿಕೊಡಬೇಕೆಂದು ಹೇಳುತ್ತದೆ. ಇದರಿಂದ ಚಿಂತೆಗೊಳಗಾದ ಗೌಡ ಹಿರಿಸೊಸೆಯನ್ನು
> ಬಲಿಕೊಟ್ಟರೆ ತನ್ನ ವಂಶದ ನಾಶವಾಗುತ್ತದೆ ಎಂದು ಭಾವಿಸುತ್ತಾನೆ. ಕೊನೆಗೆ ತನ್ನ ಕಿರಿಸೊಸೆ
> ಭಗೀರತಿಯನ್ನು ಬಲಿಕೊಡಲು ತೀರ್ಮಾನಿಸುತ್ತಾನೆ. ಸೊಸೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ
> ಬಲಿಯಾಗುತ್ತಾಳೆ. ಇದರಿಂದ ಕೆರೆಗೆ ನೀರುಬರುತ್ತದೆ. ಈ ಕಥೆಗೆ ಅನೇಕ ಪ್ರತಿವಾದಗಳನ್ನು
> ಒಡ್ಡುವ ಮೂಖಿಕ ರೂಪದ ಪಾಠಾಂತರಗಳು ದೊರೆಯುತ್ತವೆ. ಅಂತಹ ಒಂದು ವಿಶಿಷ್ಟ ಪಾಠಾಂತರದ ಬಗ್ಗೆ
> ಗಂಭೀರವಾದ ಅಧ್ಯಯನಮಾಡಿರುವ ಎಸ್.ಆರ್. ಗುರುನಾಥ ಅವರು ’ಕೆರೆಗೆ ಹಾರವಾದ ಬಂದಮ್ಮನ ಇತಿಹಾಸ’
> ಎನ್ನುವ ಪುಸ್ತಕ ಪ್ರಕಟಿಸಿದ್ದು ಅದರಲ್ಲಿ ಹಲವಾರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ.
> ಕರ್ನಾಟಕವೂ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಊರಿನ ಗೌಡರು / ಪಟೇಲರು ಕೆರೆ
> ಕಟ್ಟೆಗಳನ್ನು, ಕೋಟೆ ಕೊತ್ತಲಗಳನ್ನು ಕಟ್ಟಿಸುವುದು, ಅವುಗಳು ಸುಭದ್ರವಾಗಿ ನಿಲ್ಲದೇ
> ಇರುವುದು, ಅದಕ್ಕೆ ಹೊತ್ತಗೆ ತೆಗೆಸುವುದು, ಅದರಲ್ಲಿ ಗೌಡನ / ಪಟೇಲನ ಸೊಸೆಯನ್ನು
> ಬಲಿಕೊಡಬೇಕೆಂದು ಬರುವುದು, ಕೊನೆಗೆ ಬಲಿ ಕೊಡುವುದು, ನಂತರ ಕೆರೆ ಕಟ್ಟೆ, ಕೋಟೆ
> ಕೊತ್ತಲುಗಳು ಸುಸೂತ್ರವಾಗುವುದು. ತೀರಾ ಸಾಮಾನ್ಯ ಕಥೆ. ಈ ಸಂದರ್ಭಗಳಲ್ಲಿ ಗೌಡ ನಿಜವಾಗಿ
> ತನ್ನ ಸೊಸೆಯನ್ನು ಬಲಿಕೊಟ್ಟನೇ? ಎಂಬುದು ಎಲ್ಲರಿಗೂ ಪ್ರಶ್ನೆಯಾಗಿತ್ತು. ಇದರ
> ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಆಧಾರಗಳ ಕೊರತೆ ಇತ್ತು. ಗುರುನಾಥ್ ಅವರು ಅಂಥ
> ಪ್ರಶ್ನೆಗಳು ಅನುಮಾನಗಳು ಸರಿಯಾಗಿಯೇ ಇವೆ ಎಂಬುದನ್ನು ತಮ್ಮ ಅಧ್ಯಯನದುದ್ದಕ್ಕೂ ಸ್ಪಷ್ಟ
> ಆಧಾರಗಳೊಂದಿಗೆ ಸಾಬೀತುಮಾಡಿದ್ದಾರೆ.
> ಎಸ್.ಆರ್.ಗುರುನಾಥ್ ಅವರ ಅಧ್ಯಯನದಲ್ಲಿ ತಿಳಿದುಬರುವ ಸಂಗತಿಗಳೆಂದರೆ : ಆಂಧ್ರಪ್ರದೇಶದ
> ಗಡಿಭಾಗದಲ್ಲಿರುವ ಒಂದು ಗ್ರಾಮ. ಅದರ ಹೆಸರು ’ಎರಡು ಕೆರೆ’. ಈ ಗ್ರಾಮದ ಗೌಡ ಮರಿಗೌಡ ಅಂತ.
> ಈತ ಕಟ್ಟಿಸಿದ ಕೆರೆಯೊಂದಕ್ಕೆ ತನ್ನ ಸೊಸೆಯನ್ನು ಬಲಿಕೊಡಬೇಕಾದ ಪ್ರಸಂಗ ಬಂತು. ಇದು
> ಗೌಡರನ್ನು ಚಿಂತೆಗೀಡುಮಾಡಿತು. ಹಾಗಾಗಿ ಈ ಸಂಬಂಧ ಶಾನುಭೋಗರ ಸಲಹೆ ಕೇಳಿದ. ಶಾನುಭೋಗ ನೀಡಿದ
> ಸಲಹೆ ಹೀಗಿತ್ತು. ಗೌಡರ ಮನೆಯಲ್ಲಿ ’ತಿಮ್ಮ’ ಅನ್ನುವ ಒಬ್ಬ ಜೀತದಾಳು ಇದ್ದ. ಅವನು
> ಗೌಡನನ್ನು ಅಪ್ಪ ಎಂದೇ ಕರೆಯುತಿದ್ದ. ಇದನ್ನು ಅರಿತಿದ್ದ ಶಾನುಭೋಗರು ತಿಮ್ಮ ಹೇಗಿದ್ದರೂ
> ನಿಮ್ಮ ಮಗನಂತಲ್ಲವೇ? ಹಾಗಾದರೆ ಅವನ ಹೆಂಡತಿಯು ನಿಮ್ಮ ಸೊಸೆಯೇ. ಅವಳನ್ನೇ ಬಲಿಕೊಡಿ ಎಂದರು.
> ಇದು ಗೌಡರಿಗೂ ಹೌದೆನಿಸಿತು. ಪರಿಣಾಮ ತಿಮ್ಮನ ಹೆಂಡತಿ ತುಂಬ ಬಸುರಿಯಾಗಿದ್ದರೂ ಬಲಿ
> ಕೊಡಲಾಯಿತು. ನಂತರ ದಿನಗಳಲ್ಲಿ ಬಂದಮ್ಮನ ಬಲಿಯನ್ನು ತ್ಯಾಗ ಎಂದು ಬಣ್ಣಿಸಲಾಯಿತು. ಬಂದಮ್ಮನ
> ಹಾಡು ಕೂಡ ಸೃಷ್ಟಿಯಾಯಿತು. ಆದರೆ ಈ ಹಾಡು ತುಂಬಾ ದಿನ ಆ ಊರಿನ ಜನರ ಬಾಯಲ್ಲಿ ಉಳಿಯಲೇ
> ಇಲ್ಲ. ಬಂದಮ್ಮನ ಬದಲಿಗೆ ಭಗೀರಥಿ ಬಂದಳು.
> ಇದಿಷ್ಟು ಇತಿಹಾಸವನ್ನು ಲೇಖಕರು ಅತೀ ಶ್ರದ್ಧೆ ಹಾಗೂ ಶ್ರಮದಿಂದ ಶೋಧಿಸಿದ್ದಾರೆ.
> ಪ್ರಸ್ತುತ ಘಟನೆಗಳು ನಮ್ಮನ್ನು ದಿಘ್ಮೂಢರನ್ನಾಗಿಸುತ್ತವೆ. ಏಕೆಂದರೆ ಸಾಮಾಜಿಕವಾಗಿ ಮತ್ತು
> ಆರ್ಥಿಕವಾಗಿ ತಿಮ್ಮನಂತಹವರನ್ನು ಎಂದಿಗೂ ತನ್ನ ಸಂಬಂಧಿ ಎಂಬುದಾಗಿ ಭಾವಿಸಲಾರದ
> ವ್ಯವಸ್ಥೆಯೊಂದು ತನಗೆ ಬಂದ ಕಷ್ಟದಿಂದ ಪಾರಾಗಲು ಅತ್ಯಂತ ಸುಲಭವಾಗಿ ಸಂಬಂಧವನ್ನು ಆಗು ಮಾಡಿ
> ತಿಮ್ಮನ ಹೆಂಡತಿಯಂತಹ ಅಮಾಯಕರನ್ನು ಬಲಿ ನೀಡಿದ್ದು. ಹಾಗೇನೆ ಬಲಿಯಾದ ಹೆಣ್ಣನ್ನು ಸ್ಮರಿಸುವ
> ಹಾಡುಗಳು ಕಾಲಾನಂತರ ಮೇಲ್ವರ್ಗದ ಹಿತಕ್ಕೆ ಬಲಿಬಿದ್ದು ಕಾಲ್ಪನಿಕ ಭಗೀರಥ ಬಂದದ್ದು.
> ಪ್ರಸ್ತುತ ಸಂಗತಿಗಳು ನಮ್ಮನ್ನು ವಿವಿಧ ಚಿಂತನೆಗಳಿಗೆ ಪ್ರೇರೇಪಿಸುತ್ತವೆ. ಅಲಕ್ಷಿತ
> ಅಧ್ಯಯನಗಳು ಎತ್ತಿಕೊಂಡ ಗೌಡ ತನ್ನ ಸ್ವಂತ ಸೊಸೆಯನ್ನು ನಿಜವಾಗಿ ಬಲಿಗೊಟ್ಟನೆ? ಎಂಬ
> ಪ್ರಶ್ನೆಗೆ ಸಕಾರಾತ್ಮಕ ಉತ್ತರ ಒಂದು ಕಡೆ. ಮತ್ತೊಂದು ಕಡೆ ಮೌಖಿಕ ಅಭಿವ್ಯಕ್ತಿಗಳು
> ಆಳುವವರ್ಗ ಎಸಗುವ ಲೋಪಗಳನ್ನು ಮೀರಿ ಕೆಳವರ್ಗಗಳ ಪರವಾಗಿ ನಿಲ್ಲುತ್ತವೆ ಎಂಬ ವಾದಕ್ಕೆ
> ಪ್ರತಿಯಾಗಿ ಅವೂ ಕೂಡ ಮೇಲ್ವರ್ಗದ ಆಶಯಗಳಿಗೆ ಹೊಂದಿಕೊಳ್ಳುವುದು ವಿಚಿತ್ರವಾಗಿದೆ.
> ಮೇಲಿನ ಎರಡು ನಿದರ್ಶನಗಳನ್ನು ನೋಡಿದ ಮೇಲೆ ಇತಿಹಾಸ ರಚನಾಕಾರರು ತಪ್ಪದೇ ಮೌಖಿಕ ಆಕರಗಳ
> ಕಡೆ ಮುಖ ಮಾಡಬೇಕಾದ ಅನಿವಾರ್ಯತೆ ಎದ್ದು ಕಾಣುತ್ತದೆ. ಒಂದು ಕಾಲದ ಘಟನೆಯ ಇತಿಹಾಸ
> ಪರಿಪೂರ್ಣವಾಗಬೇಕಾದರೆ ರಾಜರ ನೆರಳಿನ ಬರೆಹದ ಆಕರಗಳ ಜೊತೆಗೆ ಜನ ಸಾಮಾನ್ಯರ ಬಾಯಿಮಾತಿನ
> ಆಕರಗಳು ಕೂಡ ಪರಿಗಣಿತವಾಗಬೇಕಿದೆ. ಆದರೆ ಹೀಗೆ ಮೌಖಿಕ ಆಕರಗಳ ಮೂಲಕ ಚರಿತ್ರೆಯನ್ನು
> ಕಟ್ಟುವ ಕೆಲಸ ಅತ್ಯಂತ ಸವಾಲಿನ ವಿಷಯ. ಇಲ್ಲಿ ಹತ್ತು ಹಲವು ತೊಡಕುಗಳು ಎದುರಾಗುತ್ತವೆ.
> ಅಂತಹವುಗಳಲ್ಲಿ ಜಾನಪದಕ್ಕೆ ಸಹಜವಾಗಿ ಅಂಟಿಕೊಂಡಿರುವ ಅತಿಮಾನುಷತೆಯನ್ನು ಕಳಚುವುದು,
> ಇತಿಹಾಸಕಾರರು ಜಾನಪದ ವಿದ್ವಾಂಸರು ಅನುಸಂಧಾನ ಮಾಡಿಕೊಳ್ಳಬೇಕಾಗಿರುವುದು, ಇನ್ನೂ
> ಮೊದಲಾದವು. ಅಂತೂ ಇಂತಹ ಮಹತ್ವದ ಕಾರ್‍ಯವನ್ನು ಗಂಭೀರವಾಗಿ ತೆಗೆದುಕೊಂಡು ಪರಂಪರಾಗತ
> ಚರಿತ್ರೆಗೆ ಒಂದು ಹೊಸ ಆಯಾಮ ನೀಡಬೇಕಾಗಿದೆ.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJCvfyXQOhJfFwS5t8-TOrhCG8%2BCFnFCO7N%2B0spFKSUpiUUzmw%40mail.gmail.com
> <https://groups.google.com/d/msgid/socialsciencestf/CAJCvfyXQOhJfFwS5t8-TOrhCG8%2BCFnFCO7N%2B0spFKSUpiUUzmw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKHYmY%3D_TJ1dMc8Eh8MhUC9d26%3DikYQsMtF1T6hRzHUt6-Kb%3Dw%40mail.gmail.com.
For more options, visit https://groups.google.com/d/optout.

Reply via email to