Very nice thoughts sir On Mar 3, 2016 7:17 PM, "Siddaramappa s m Sri" <[email protected]> wrote:
> * ನಮ್ಮ ಜೀವನದಲ್ಲಿ ಸಂಭವಿಸಬಹುದಾದ ದೊಡ್ಡ ದುರಂತವೆಂದರೆ ಖಂಡಿತವಾಗಿಯೂ ಸಾವು ಅಲ್ಲ. > ನಾವು ಬದುಕಿರುವಾಗ ನಮ್ಮೊಳಗಿನ ಅಂತಃಸತ್ವವನ್ನು ಸಾಯಗೊಟ್ಟಿರುತ್ತೇವಲ್ಲ, ಅದು ನಿಜವಾಗಿಯೂ > ದೊಡ್ಡ ದುರಂತ. > > * ಪರ್ಶಿಯನ್ ಗಾದೆ ಮಾತೊಂದನ್ನು ಕೇಳಿದ ಬಳಿಕ ನನ್ನ ಜೀವನದಲ್ಲಿ ಕೊರಗು ಎಂಬುದು ಇಲ್ಲವೇ > ಇಲ್ಲ. ಅದೇನಪ್ಪಾ ಅಂದ್ರೆ- ನನಗೆ ಬೂಟುಗಳೇ ಇಲ್ಲವಲ್ಲಾ ಎಂದು ಅಳುತ್ತಿದ್ದೆ. ಅಪ್ಪನನ್ನು > ಕೇಳಿದೆ. ಆತ ತೆಗೆಸಿಕೊಡಲಿಲ್ಲ. ಒಂದು ಜೊತೆ ಬೂಟು ಖರೀದಿಸಲಾಗದ ದರಿದ್ರ ಜೀವನ ಎಂದು > ಬೇಸರಿಸಿಕೊಂಡೆ. ಇದು ಜೀವನವಾ ಅನಿಸಿತು. ಹಾಗೆ ಯೋಚಿಸುತ್ತಿರುವಾಗ ಎರಡೂ ಕಾಲುಗಳೇ ಇಲ್ಲದ, > ಆದರೆ ಸಂತಸದಿಂದ ಇರುವ ವ್ಯಕ್ತಿಯೊಬ್ಬನನ್ನು ನೋಡಿಕೊಂಡೆ. ನಾನು ಪರಮಸುಖಿಯೆನಿಸಿತು. > > * ಅಪರಿಚಿತರಾದವರಿಗೆ ಪುಟ್ಟ ಸಹಾಯ ಮಾಡಿ. ಅವರು ತಟ್ಟನೆ ನಿಮ್ಮ ಸ್ನೇಹಿತರಾಗುತ್ತಾರೆ. > ಟೋಲ್್ಗೇಟ್್ನಲ್ಲಿ ನಿಮ್ಮ ಹಿಂದಿನ ಕಾರಿನವರ ಹಣವನ್ನೂ ನೀವೇ ಪಾವತಿಸಿ ನೋಡಿ. ನೀವ್ಯಾರೆಂದು > ಆತ ಪರಿಚಯಿಸಿಕೊಳ್ಳದೇ ಹೋಗಲಿಕ್ಕಿಲ್ಲ. ಪುಟ್ಟ ಕಾರಣಕ್ಕೆ ನಿಮಗೊಂದು ಸ್ನೇಹ ದೊರಕಬಹುದು. > > * ಹೇಳುವುದು ಸುಲಭ. ಆದರೆ ಆಚರಣೆಗೆ ತರುವುದು ಕಷ್ಟ. ಅದೇನೆಂದರೆ ಚಿಂತೆ ಬಿಡಿ ಎಂಬ > ಉಪದೇಶ. ಆದರೂ ಈ ನಿಯಮ ಪಾಲಿಸಿ. ಯಾವುದಕ್ಕೆ ನಾವು ಚಿಂತಿಸುತ್ತೇವೋ ಬಹುತೇಕ ಸಂದರ್ಭಗಳಲ್ಲಿ > ಅವು ಘಟಿಸುವುದೇ ಇಲ್ಲ. ಚಿಂತಿಸಿದ್ದೊಂದೇ ‘ಲಾಭ’! > > * ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಕೊಡುಗೆಯೆಂದರೆ ಆಟಿಕೆಯಲ್ಲ. ಚಾಕೋಲೇಟ್ > ಅಲ್ಲ. ಆದರೆ ನಿಮ್ಮ ಸಮಯ. ನಾವು ಅದೊಂದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಕೊಡುತ್ತೇವೆ. > ಅಲ್ಲಿಗೆ ನಮ್ಮ ಕರ್ತವ್ಯ ಮುಗಿಯಿತೆಂದು ತಿಳಿಯುತ್ತೇವೆ. ನಿಮ್ಮ ಸಮಯಕ್ಕಿಂತ ದೊಡ್ಡ ಕೊಡುಗೆ > ಮತ್ತೊಂದಿಲ್ಲ. > > * ಜೀವನದಲ್ಲಿ ದೊಡ್ಡ ಕೆಲಸ, ಕಾರ್ಯವೆಂಬುದು ಇಲ್ಲವೇ ಇಲ್ಲ. ದೊಡ್ಡ ಪ್ರೀತಿಯಿಂದ ಮಾಡಿದ > ಎಷ್ಟೇ ಸಣ್ಣ ಕೆಲಸವಾದರೂ ಅದು ದೊಡ್ಡ ಕೆಲಸ, ಕಾರ್ಯವೇ. > > * ಜೀವನದಲ್ಲಿ ಸಣ್ಣ ಸಂಗತಿಗಳೇ ದೊಡ್ಡವು. ಮನೆಗೆಲಸದಾಕೆಗೆ ಸಂಬಳ ಕೊಡದವ ಕಚೇರಿಯಲ್ಲಿ > ಸಿಬ್ಬಂದಿಯನ್ನೂ ಸತಾಯಿಸುತ್ತಾನೆ. ನಿಮ್ಮ ಸ್ನೇಹಿತರಿಗೆ ನೀವು ಸೈಟು, ಮನೆ ಕೊಡದಿರಬಹುದು. > ಆದರೆ ಒಂದು ಪುಟ್ಟ ಕೈಗಡಿಯಾರ, ಪುಸ್ತಕ, ಪೆನ್ನು ಕೊಡದಿರುವಷ್ಟು ಯಾರೂ ಬಡವರಲ್ಲ. ಆಗಾಗ > ಗಿಫ್ಟ್್ಗಳನ್ನು ಕೊಡುತ್ತೀರಿ. > > * ನಿಮ್ಮ ಜೊತೆಗೆ ಸದಾ ಒಂದು ಪುಸ್ತಕವನ್ನಿಟ್ಟುಕೊಳ್ಳಿ. ಎಂದಿಗೂ ನೀವು ಏಕಾಂಗಿ > ಎಂದೆನಿಸುವುದಿಲ್ಲ. ಬೋರು ನಿಮ್ಮ ಸನಿಹ ಸುಳಿಯುವುದಿಲ್ಲ. > > * ನೀವು ಎಷ್ಟು ದಿನ ಬದುಕಿರುತ್ತೀರೋ, ಏನಾದರೂ ಹೊಸತನ್ನು ಕಲಿಯುತ್ತಿರಿ. ನೂರು ವರ್ಷ > ಬಾಳಿದರೂ ಅದೆಷ್ಟು ಕಡಿಮೆ ವರ್ಷ ಬದುಕಿನೆಂದು ನಿಮಗನಿಸುತ್ತದೆ. > > * ಸಾಧ್ಯವಾದರೆ ನಿಮ್ಮ ಚಪ್ಪಲಿ, ಬೂಟು ತೆಗೆದಿಟ್ಟು ಹಸಿರು ಹುಲ್ಲಿನ ಮೇಲೆ ನಡೆಯಿರಿ. > ಸ್ವಲ್ಪ ದೂರ ನಡೆಯುತ್ತಿರುವಂತೆ ನಿಮಗೆ ಹಿತವೆನಿಸುತ್ತದೆ. ಈ ಪುಟ್ಟ ಹುಲ್ಲಿನ ಗಿಡಗಳನ್ನು > ನಾನು ಸಾಯಿಸುತ್ತಿದ್ದೇನಲ್ಲ ಎಂದು ನಿಮಗೆ ಬೇಸರವಾಗುತ್ತದೆ. ಈ ಬೇಸರವೇ ನಿಜವಾದ ಕಾಳಜಿ. > > * ಹೂಗಳು ಗಿಡದಲ್ಲಿದ್ದರೆ ಚೆಂದ. ಅವನ್ನು ಕೊಯ್ದ ಬಳಿಕ ಗಿಡದ ಸೌಂದರ್ಯ ಕುಗ್ಗುತ್ತದೆ. > ಹೂವುಗಳು ಬಾಡುತ್ತವೆ. ಪ್ರಕೃತಿಯ ಸಣ್ಣ ಸಣ್ಣ ವಿಚಿತ್ರಗಳು ನಮ್ಮಲ್ಲಿ ಬೆರಗನ್ನುಂಟು > ಮಾಡಬಲ್ಲವು. > > * ಕುರಿಮಂದೆಯಂತಿರುವ ಜನಜಂಗುಳಿಯನ್ನು ಎಂದಿಗೂ ಅನುಸರಿಸಿ ನಡೆಯಬೇಡಿ. ಸಿನಿಮಾದಲ್ಲಿನ > ಜನಜಂಗುಳಿಯನ್ನು ಅನುಸರಿಸಿದರೆ ಊ್ಢ್ಝಡಿ(ನಿರ್ಗಮನ ಬಾಗಿಲು) ತಲುಪಿರುತ್ತೀರಿ. ಎಲ್ಲರೂ ಕೈ > ಎತ್ತುವಾಗ ನಾವೂ ಕೈ ಎತ್ತುವುದು ಬಹಳ ಸುಲಭ. ಎತ್ತದಿರುವುದೇ ಕಷ್ಟ. > > * ಸದಾ ಒಳ್ಳೆಯ ಕೆಲಸವನ್ನೇ ಏಕೆ ಮಾಡಬೇಕು? ಹೂವುಗಳನ್ನು ಕೊಡುವ ಕೈ ಸದಾ ಪರಿಮಳವನ್ನು > ಸೂಸುತ್ತಿರುತ್ತದೆ. ಕೈಗೆ ಜೇನುತುಪ್ಪ ಅಂಟಿಕೊಂಡಿದ್ದರೆ ಯಾರೂ ಕೈ ನೆಕ್ಕದೇ > ತೊಳೆದುಕೊಳ್ಳುವುದಿಲ್ಲ. > > * ನಿಮ್ಮೊಂದಿಗೆ ಸದಾ ಇಬ್ಬರು ವೈದ್ಯರಿದ್ದಾರೆ. ನಿಮಗೆ ಗೊತ್ತಿಲ್ಲದಂತೆ. ಒಬ್ಬರು > ಬಲಗಾಲು, ಮತ್ತೊಬ್ಬರು ಎಡಗಾಲು. ಇವರಿಬ್ಬರ ಜತೆ ನೀವು ದಿನಕ್ಕೆ ಎರಡು ಮೈಲಿ ಹೆಜ್ಜೆ ಹಾಕಿ. > ರೋಗ ನಿಮ್ಮ ಹತ್ತಿರ ಸುಳಿದರೆ ನೋಡಿ. > > * ನೀವೆಷ್ಟೇ ಪ್ರಸಿದ್ಧರಾಗಿ. ಅದು ಶಾಶ್ವತವಲ್ಲ. ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದ ಸ್ವಲ್ಪ > ದಿನಗಳ ನಂತರ ಬಂಗಾರ ಗೆದ್ದ ಕ್ರೀಡಾಪಟುಗಳನ್ನೂ ಜನ ಮರೆಯುತ್ತಾರೆ. ಚಂದ್ರನ ಮೇಲೆ ಮೊದಲಿಗೆ > ಕಾಲಿಟ್ಟವರೂ ಕೆಲ ದಿನಗಳ ಬಳಿಕ ನೇಪಥ್ಯಕ್ಕೆ ಸರಿಯುತ್ತಾರೆ. ಜನಮಾನಸದಿಂದ ದೂರವಾದ > ಮಾತ್ರಕ್ಕೆ ಜೀವನ ಮುಗಿಯಿತು ಎಂದಲ್ಲ. ಅದಕ್ಕಾಗಿ ಹೊಸ ಹೊಸ ಸಾಹಸಕ್ಕೆ ನಮ್ಮನ್ನು > ಅಣಿಗೊಳಿಸಿಕೊಳ್ಳಬೇಕು. > > * ಸದಾ ಮನೆ, ಮಂದಿಯ, ನಿಮ್ಮ ಮಕ್ಕಳ ಹಾಗೂ ನಿಮ್ಮ ಫೋಟೋ ತೆಗೆಯುತ್ತೀರಿ. ವರ್ಷಕ್ಕೆ > ಕನಿಷ್ಠ ಐದಾರು ಆಲ್ಬಮ್್ಗಳನ್ನು ಸಂಗ್ರಹಿಸಿಡಿ. 20-30 ವರ್ಷಗಳ ಬಳಿಕ ಇದೊಂದು ಅಮೂಲ್ಯ > ನೆನಪುಗಳ ಆಗರವಾಗಿರುತ್ತದೆ. ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ಉತ್ತಮ ಕೊಡುಗೆಗಳಲ್ಲಿ > ಸಿಹಿ ನೆನಪು ಸಹ ಒಂದು. > > * ಸರಿಯಾದ ಸಮಯ, ಸಂದರ್ಭ, ವ್ಯಕ್ತಿಗಳ ಮುಂದೆ ಸಿಟ್ಟು ಮಾಡಿಕೊಳ್ಳುವುದನ್ನು ಕಲಿತರೆ > ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡಿದ್ದೀರೆಂದೇ ಅರ್ಥ. ಸಿಟ್ಟು ಸಹ ಸುಂದರ ಹಾಗೂ > ಸಾರ್ಥಕವೆನಿಸುವುದು ಆಗಲೇ. > > * ವರ್ಷದಲ್ಲಿ ಒಂದು ವಾರ ಮರ, ಗಿಡ, ನದಿ, ಗುಡ್ಡ, ಬೆಟ್ಟದಲ್ಲಿ ಕಳೆಯಿರಿ. ಮನುಷ್ಯರಿಗಿಂತ > ಇವು ಇಷ್ಟೊಂದು ಸುಂದರವಾಗಿವೆಯೆಂಬುದು ಗೊತ್ತಾಗುತ್ತದೆ. > > * ನಿದ್ದೆ ಮಾಡಬೇಕೆನಿಸಿದಾಗ ಮತ್ತೇನನ್ನೂ ಮಾಡಬೇಡಿ. ಚೆನ್ನಾಗಿ ನಿದ್ದೆ ಮಾಡಿ. > ನಿದ್ದೆಗಿಂತ ಸುಖ ಇನ್ನೊಂದಿಲ್ಲ. ಆದರೆ ಇದನ್ನು ಎಷ್ಟು ಮಾಡಬೇಕೆಂಬುದು ಗೊತ್ತಿರಲಿ. > > * ಮಳೆಗಾಗಿ ಪ್ರಾರ್ಥನೆ, ಜಪ, ಯಾಗ ಮಾಡುವುದು ತಪ್ಪಲ್ಲ. ಆದರೆ ಹೀಗೆ ಮಾಡುವಾಗ > ಕೈಯಲ್ಲೊಂದು ಕೊಡೆಯಿರಲಿ. ನಾವು ಮಾಡುವ ಕೆಲಸದ ಪರಿಣಾಮವೇನೆಂಬುದು ನಮಗೆ ತಿಳಿದಿರಬೇಕು. > > * ಸಾಧ್ಯವಾದರೆ ಕೊಟೇಷನ್ ಸುಪ್ರಭಾತಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಇವುಗಳಲ್ಲಿರುವಷ್ಟು > ಜೀವನಾಮೃತ ಬೇರೆಲ್ಲೂ ಸಿಗಲಿಕ್ಕಿಲ್ಲ. ಒಂದು ಕಾದಂಬರಿ, ಪುಸ್ತಕದ ಸತ್ವ ಸುಭಾಷಿತವೊಂದರಲ್ಲಿ > ಅಡಗಿರುತ್ತದೆ. > > * ನಿಮಗೆಷ್ಟೇ ಸ್ನೇಹಿತರಿರಬಹುದು. ಸಲಹೆಗಾರರಿರಬಹುದು. ಆದರೆ ನಿಮ್ಮ ಆಪ್ತ ಸ್ನೇಹಿತ, > ಆಪ್ತ ಸಲಹೆಗಾರ ನೀವೇ ಎಂಬುದನ್ನು ಮರೆಯಬೇಡಿ. ನಿಮ್ಮ ವೈರಿಯೂ ನೀವೇ. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAJCvfyUEy6mvm7KstkCDWg9Cc9c%2BX0bPvdd3%3D-a1B4qa5cGarw%40mail.gmail.com > <https://groups.google.com/d/msgid/socialsciencestf/CAJCvfyUEy6mvm7KstkCDWg9Cc9c%2BX0bPvdd3%3D-a1B4qa5cGarw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAKoy2JzhfYJoZjL3w-cBCUp_L9WfHc5ZMsyYcxR4MiV-aJGR3A%40mail.gmail.com. For more options, visit https://groups.google.com/d/optout.
