"ಎಸ್ಮಾ ಅಂದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ" (ESMA-Essential Services Maintenance Act)
ಎಸ್ಮಾ ಅನುಸಾರ ಸೂಚಿತ ಸೇವೆಗಳಲ್ಲಿ ತೊಡಗಿರುವವರು ಇತರೆ ಇಲಾಖೆಗಳಲ್ಲಿರುವಂತೆ ಇಷ್ಟಾನುಸಾರ ಮುಷ್ಕರಕ್ಕೆ ಇಳಿಯುವಂತಿಲ್ಲ. ಆದರೆ ಇದಕ್ಕೂ ಒಂದು Exception ಇದೆ. ಏನಪಾ ಅಂದರೆ 14 ದಿನಕ್ಕೆ ಮುಂಚೆಯೇ ಲಿಖಿತ ನೋಟಿಸ್ ನೀಡಿ ಮುಷ್ಕರ ಮಾಡಬಹುದು. * ಎಸ್ಮಾಸ್ತ್ರ: ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಾರಿಗೆ ವ್ಯವಸ್ಥೆಯೂ ಅಗತ್ಯ ಸೇವೆಯಾಗಿದೆ. ಹಾಗಾಗಿ, ಕೆಎಸ್ಸಾರ್ಟಿಸಿ ನೌಕರರು ಇಷ್ಟಾನುಸಾರ ಮುಷ್ಕರ ಹೂಡುವಂತಿಲ್ಲ. * ಏಸ್ಮಾ ಎಂದರೆ.. ಜನಸಾಮಾನ್ಯರಿಗೆ ದೈನಂದಿನ ಜೀವನಕ್ಕೆ ತೊಡಕುಂಟಾಗದಂತೆ ಕೆಲವೊಂದು ಸೇವೆಗಳನ್ನು ಅಗತ್ಯ/ತುರ್ತು ಸೇವೆಗಳೆಂದು ವರ್ಗೀಕರಿಸಲಾಗಿದೆ. ಆ ಸೇವೆಗಳಲ್ಲಿ ತೊಡಗಿರುವ ನೌಕರರು ಕೆಲಸ ಬಿಟ್ಟು ಮುಷ್ಕರಕ್ಕಿಳಿದು ಜನ ಜೀವನ ಏರುಪೇರುಗೊಳಿಸಿದರೆ ಎಸ್ಮಾ ಜಾರಿಗೆ ತರಬಹುದು. ಇದಕ್ಕೆ ಸರಕಾರಕ್ಕೆ ಕಾನೂನಿನ ಬಲವೂ ಇರುತ್ತದೆ. ಭಾರತದಲ್ಲಿ 1968ರಲ್ಲಿ ಇದನ್ನು ಜಾರಿಗೆ ತರಲಾಯಿತು. ಏಸ್ಮಾ ಪ್ರಕಾರ ಅಗತ್ಯ ಸೇವೆಗಳು ಯಾವುವೆಂದರೆ... - ಸಾರ್ವಜನಿಕ ಸಂರಕ್ಷಣೆ, - ನೈರ್ಮಲ್ಯ, - ನೀರು ಸರಬರಾಜು, - ಆಸ್ಪತ್ರೆ - ದೇಶದ ರಕ್ಷಣೆಗೆ ಸಂಬಂಧಪಟ್ಟ ಸೇವೆಗಳು. - ಪೆಟ್ರೋಲಿಯಂ ಉತ್ಪನ್ನಗಳು, - ಕಲ್ಲಿದ್ದಲು, - ಉಕ್ಕು - ರಸಗೊಬ್ಬರಗಳ ತಯಾರಿಕೆ, ಸರಬರಾಜು ಮತ್ತು ವಿತರಣೆಯಲ್ಲಿ ತೊಡಗಿರುವ ಸರಕಾರಿ ಸಂಸ್ಥೆಗಳು, - ದೂರ ಸಂಪರ್ಕ - ಸಾರಿಗೆ ಸೇವೆ, - ಆಹಾರ ಸಾಮಗ್ರಿ ಖರೀದಿ/ವಿತರಣೆ ವ್ಯವಸ್ಥೆಯಡಿ ಬರುವ ಸೇವೆಗಳು. * ಹಾಗಾದರೆ ಮುಷ್ಕರ ನಡೆಸಲೇಬಾರದ...?? ಮುಷ್ಕರವೆಂಬುದು ಮೂಲಭೂತ ಹಕ್ಕು. ಆದರೆ ಮೇಲಿನ ಸೇವೆಗಳಡಿ ಬರುವ ನೌಕರರು ಅಗತ್ಯವಾಗಿ ಮುಷ್ಕರ ನಡೆಸುವಂತಿಲ್ಲ ಇದರ ಹೊರತಾಗಿಯೂ ಈ ನೌಕರರು ಮುಷ್ಕರದಲ್ಲಿ ತೊಡಗಿದರೆ ಸರಕಾರ ತನ್ನ ವಿಶೇಷ ಅಧಿಕಾರ ಬಳಸಿ, ಎಸ್ಮಾಸ್ತ್ರ ಘೋಷಿಸಿದರೆ ಅಂತಹ ಮುಷ್ಕರಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CALWUL%3D7W-HkNjkeR2sbZ_ya7e-t4LJf6zGUCCEGu3C_oX38V8w%40mail.gmail.com. For more options, visit https://groups.google.com/d/optout.
