ಇಲ್ಲ ಸರ್ ನಾನು ಮತ್ತೆ ಅದರ ಬಗ್ಗೆ ಏನೂ ಮಾತನಾಡೊದಿಲ್ಲ ಕ್ಷಮಿಸಿ.. ಅದರ ಬಗ್ಗೆ ಮಾತಾಡಿ
ಅದನ್ನು  ಬದಲಾಯಿಸಲು ಆಗಲ್ಲ ಅದರಿಂದ ಬೇಜಾರೆ ಬಿಟ್ಟರೆ ಯಾರಿಗೂ ಖುಷಿ ಇಲ್ಲ ಸರ್ ದಯವಿಟ್ಟು
ತಪ್ಪು ಭಾವಿಸಬೇಡಿ
On 1 May 2016 08:01, "Basavaraja Naika H.D." <[email protected]>
wrote:

> ಪ್ರಜ್ವಲ್ ಸರ್ ಅಭಿನಂದನೆಗಳು ಉತ್ತಮ ಶಿಕ್ಷಕ ಕವನಕ್ಕೆ
>
> ಸರ್ ನೀವು AKKS ನಲ್ಲಿ ಚರ್ಚಿಸಿರುವ ಮೀಸಲಾತಿ ಬಗ್ಗೆ Stf ನಲ್ಲಿ ಚರ್ಚಿಸಿ 4000
> ಶಿಕ್ಷಕರಿಗೆ ಮಾಹಿತಿ ಸಿಗುತ್ತದೆ  ಇಲ್ಲಿ ನಿರ್ಬಂಧ ಇಲ್ಲ
>
> ಹಲವು ಶಿಕ್ಷಕರಿಗೆ ಮೀಸಲಾತಿ ಬಗ್ಗೆ ತಪ್ಪು ತಿಳುವಳಿಕೆ ಇದೆ ಅದು ದೂರವಾಗಲಿ, ಸರಿಯಾದ
> ಮಾಹಿತಿ ಸಿಗಲಿ ಎಂಬುದು ಉದ್ದೇಶ.
> On 01-May-2016 7:50 am, "prajwal nayak" <[email protected]> wrote:
>
>> ಸೇವೆಯ ಕಹಳೆಯೂದಿ
>> ಜ್ಞಾನದ ಕುದುರೆಯೇರಿ
>> ಅಕ್ಷರದ ಖಡ್ಗಪಿಡಿದು
>> ಹೊತ್ತಗೆಯ ಗುರಾಣಿಯಿಂದ
>> ಅನಕ್ಷರತೆಯ ವೈರಿಯನ್ನು
>> ಹೊಡೆದುರುಳಿಸಿ ಸಾಕ್ಷರ
>> ಭಾರತ ನಿರ್ಮಿಸಲು
>> ಬದುಕೆಲ್ಲಾ ಹೋರಾಡುವವ
>>
>> ಕರಿಬಣ್ಣದ ಹಲಗೆಯ ಮೇಲೆ
>> ಬಿಳಿಬಣ್ಣದ ಸೀಮೆಸುಣ್ಣವ ಸವೆಸಿ
>> ಬಣ್ಣಬಣ್ಣದ ವ್ಯಕ್ತಿತ್ವ ರೂಪಿಸುವವ
>> ಒರಟು ಶಿಲೆಯಿಂದ
>> ಸುಂದರ ಮೂರ್ತಿ ಕಡೆದಂತೆ
>> ನಾಳಿನ ನಾಡ ಹಿರಿಯರ
>> ಕತ್ತಲ ಭಾಗಕ್ಕೆ ಬೆಳಕಿನ
>> ಬಣ್ಣಹಚ್ಚುವ ಕಲಾಕಾರನಿವ
>>
>> ಎಲ್ಲೂ ಸಲ್ಲದವರು
>> ಇಲ್ಲಿ ಸಲ್ಲುವವರೆಂದು
>> ಗೇಲಿ ಮಾಡುವರು
>> ಈ ಸಲ್ಲದವರ ಕೈಯಲ್ಲೇ
>> ಎಲ್ಲಾ ಕಡೆ ಸಲ್ಲುವ ವ್ಯಕ್ತಿಗಳು
>> ರೂಪುಗೊಳ್ಳುವರು
>> ಎಂಬುದನ್ನು ಮರೆಯುವರು
>>
>> ಸೈನಿಕನಾದರೇನೂ
>> ಎಳವೆಯಲ್ಲೆ ದೇಶಪ್ರೇಮ
>> ಕಲಿಸಿದವನು ಇವನಲ್ಲವೇನೂ
>> ವೈದ್ಯನಾದರೇನೂ
>> ಎಡವಿಬಿದ್ದಾಗ ಉಪಚರಿಸೋದ
>> ಹೇಳಿಕೊಟ್ಟವ ಇವನಲ್ಲವೇನೂ
>> ಅಭಿಯಂತರನಾದರೇನೂ
>> ಗೆರೆಯೆಳೆದು ವಿನ್ಯಾಸಿಸೋದ
>> ರೂಢಿಸಿದವನು ಇವನಲ್ಲವೇನೂ
>> ವಿಜ್ಞಾನಿಯಾದರೇನೂ
>> ಬೆರಗು ಕುತೂಹಲ ಮೂಡಿಸಿ
>> ಸಂಶೋಧನೆಗೆ ಪ್ರೇರಣೆ
>> ನೀಡಿದವ ಇವನಲ್ಲವೇನೂ
>> ಬಹುಮಾನ ಪ್ರಶಸ್ತಿ ಪದಕ
>> ಪುರಸ್ಕಾರ ಗೆದ್ದರೇನೂ
>> ಚೊಚ್ಚಲ ಪ್ರಶಂಸೆ ಕೊಟ್ಟವ
>> ಇವನಲ್ಲವೇನೂ
>>
>> ಗೋವಿಂದನೆಂದರು
>> ಬ್ರಹ್ಮನೆಂದರು,ವಿಷ್ಣುವೆಂದರು
>> ಪರಮೇಶ್ವರನ ಪ್ರತೀಕವೆಂದರು
>> ಕಡಲ ನೀರನ್ನು ಶಾಯಿ ಮಾಡಿ
>> ಮರಗಳೆಲ್ಲವ ಲೇಖನಿ ಮಾಡಿದರೂ
>> ನಿನ್ನ ಮಹಿಮೆ ಹಾಡಿ ಹೊಗಳಲು
>> ಅಸಾಧ್ಯವೆಂದರು
>> ದೈವತ್ವಕ್ಕೆ ಹೋಲಿಸಿ
>> ಸಾಮಾನ್ಯ ಮನುಷ್ಯನ ಕಷ್ಟ
>> ಇವನಿಗೂ ಇರುತ್ತದೆಯೆಂಬುದನ್ನು
>> ಅರಿಯದಾದರು
>>
>> ವಿಸ್ತಾರವಾದ ಬಯಲು ಭೂಮಿ
>> ಬರಡು ಭೂಮಿಯಲ್ಲ
>> ಬೆಳೆಬೆಳೆದಷ್ಟು ತನ್ನ
>> ಫಲವತ್ತತೆ ಹೆಚ್ಚಿಕೊಂಡ
>> ಜ್ಞಾನದ ಗೊಬ್ಬರವನ್ನು
>> ತನಗೆ ತಾನೇ ಹರಡಿಕೊಂಡ
>> ಇಲಾಖೆಯ ಅತಿವೃಷ್ಟಿ
>> ಅನಾವೃಷ್ಟಿ ಸಹಿಸಿಕೊಂಡ
>> ಸುತ್ತಲಿನ ಕೀಟಬಾಧೆಗೆ
>> ನಿರೋಧಕಶಕ್ತಿ ಹೆಚ್ಚಿಸಿಕೊಂಡ
>> ವಿದ್ಯಾರ್ಥಿಯೆಂಬ ಬೀಜದಿಂದ
>> ಫಸಲು ಬರಿಸಿಕೊಂಡ
>>
>> ಇವನ ಪಾಲಿಗೆ
>> ಶಾಲೆಯೇ ಮಂದಿರ
>> ಮಕ್ಕಳೇ ದೇವರು
>> ಸೀಮೆಸುಣ್ಣದ ಧೂಳೇ ಧೂಪ
>> ಮಾಡುವ ಬೋಧನೆಯೇ
>> ಕೀರ್ತನೆ,ಭಜನೆ
>> ಜ್ಞಾನವೇ ನೈವೇದ್ಯ
>> ಮಸ್ತಕ ಬೆಳಗಿದರೆ
>> ಅದೇ ಆರತಿ
>> ಶಿಷ್ಯರು ಮಹತ್ತರ ಸಾಧನೆ
>> ಮಾಡಿದಂದೆ ಇವನಿಗೆ
>> ಮಹಾಮಸ್ತಕಾಭಿಷೇಕ
>>
>> ಮಕ್ಕಳ ಫಲಿತಾಂಶಕ್ಕೆ
>> ತಾನು ನಿದ್ದೆಯಿಲ್ಲದ
>> ರಾತ್ರಿ ಕಳೆದ
>> ತಪ್ಪುಗಳಿಂದ ಶಿಷ್ಯರ
>> ಉಳಿಸಲು
>> ತನ್ನ ಶಿರವ ನೀಡಿದ
>> ಸ್ಪರ್ಧೆ ಕೂಟಗಳಲ್ಲಿ
>> ಅವರ ಗೆಲುವಿಗೆ
>> ತಾ ಹರಕೆ ಹೊತ್ತ
>> ಪ್ರವಾಸ ಹೋದಾಗ
>> ಕಣ್ಣಿಟ್ಟು ಕಾವಲು ಕಾದ
>>
>> ವಿರೋಧ ಬಂದರು
>> ಸುಧಾರಣೆ ಕೈಗೊಂಡ
>> ಮಕ್ಕಳ ವಿಷಯಕೆ
>> ಪಾಲಕರಿಂದ ಬೈಸಿಕೊಂಡ
>> ಊರಿನ ಜನರ ಕೊಂಕು
>> ಮಾತ ಸಹಿಸಿಕೊಂಡ
>> ಕಾಯಕದ ಮೂಲಕ
>> ಸಮುದಾಯದ
>> ವಿಶ್ವಾಸಗಳಿಸಿಕೊಂಡ
>>
>> ತರಗತಿಯೊಳಗೆ
>> ನಗುಮೊಗದಿಂದ
>> ಮಕ್ಕಳ ಜೊತೆ ಕುಣಿದ
>> ವೈಯಕ್ತಿಕ ತಾಪತ್ರೆಗಳ
>> ಗಂಟುಕಟ್ಟಿ ಕಾಂಪೌಂಡಾಚೆ
>> ಬೀಸಿ ಒಗೆದ
>> ಊಟ ಪರೀಕ್ಷಿಸಲು
>> ಮೊದಲು ತಾ ಸವಿದ
>> ಕಾಯಿಸಿದ ಹಾಲನ್ನೂ
>> ಅದಕಾಗಿಯೇ ಕುಡಿದ
>> ತನ್ನ ಜೀವಕ್ಕಿಂತ ಮಕ್ಕಳ
>> ಪ್ರಾಣ ಹೆಚ್ಚೆಂದು ಬಗೆದ
>> ಅಮೃತವನ್ನಷ್ಟೇ ಉಣಿಸಲು
>> ತಾ ನಂಜುಂಡನಾದ
>>
>> ಬಂಧುಗಳ ಅಗಲಿಕೆಯ
>> ನೋವು ತುಂಬಿಕೊಂಡ
>> ಕಣ್ಣೀರ ಪ್ರದರ್ಶಿಸದೆ
>> ವಾರದೊಳಗೆ
>> ಸೀಮೆಸುಣ್ಣವ ಹಿಡಿದ
>> ಮದುವೆ ಮುಂಜಿಯಾದ
>> ಎರಡೇ ದಿನಕ್ಕೆ
>> ಶಾಲೆಗೆ ಮತ್ತೆ ಹಾಜರಾದ
>> ರೋಗ ಬಾಧಿಸಿ
>> ಕೈನಡುಗಿದರು
>> ಬಲವಾಗಿ ಪುಸ್ತಕ ಹಿಡಿದ
>> ಶಾಲಾ ಉತ್ಸವಕ್ಕೆ
>> ತನ್ನ ಮನೆಯ
>> ಕಾರ್ಯವೆಂಬಂತೆ ಓಡಾಡಿದ
>> ಸರ್ಕಾರದ ಕಾರ್ಯಗಳಿಗೆ
>> ಸ್ವಂತ ಕಾರ್ಯವ ಮರೆತ
>> ಶಾಲೆಯ ಪ್ರಗತಿಗಾಗಿ
>> ಸಂಸಾರವಿದ್ದರೂ
>> ಸಂನ್ಯಾಸಿಯಂತಾದ
>> ಗ್ರಾಮ ಕುಗ್ರಾಮಗಳಲ್ಲಿ
>> ಒಂಟೆತ್ತಿನಂತೆ ದುಡಿದ
>>
>> ರಾಗ ತಾಳ
>> ಸ್ವರವಿಲ್ಲದಿದ್ದರೂ
>> ಹಾಡಲು ಕಲಿತ
>> ಗೆಜ್ಜೆಕಟ್ಟಿ ಹೆಜ್ಜೆಹಾಕಲು
>> ಬರದಿದ್ದರೂ
>> ನಾಟ್ಯವ ಕಲಿತ
>> ರೇಖೆ ಬರೆದು ಬಣ್ಣ
>> ತುಂಬಲು ಬರದಿದ್ದರೂ
>> ಚಿತ್ರಿಸೋದ ಕಲಿತ
>> ನವರಸಗಳಲ್ಲಿ
>> ಪ್ರವೀಣನಲ್ಲವಾದರೂ
>> ನಟಿಸೋದ ಕಲಿತ
>> ಆಡಲು ಓಡಲು
>> ಬರದಿದ್ದರೂ
>> ಕ್ರೀಡೆಯ ಕಲಿತ
>> ತನಗಾಗಿ ಅಲ್ಲ,
>> ಶಿಷ್ಯರ ಸರ್ವತೋಮುಖ
>> ಬೆಳವಣಿಗೆಗೆ
>> ತನಗೆ ತಾನೇ ಗುರುವಾದ
>> ತರಗತಿಯ ಹಿರಿಯ
>> ವಿದ್ಯಾರ್ಥಿಯಾದ
>>
>> ಆದರ್ಶಕ್ಕೆ ರಾಮನಾದ
>> ಅಧರ್ಮಕ್ಕೆ ಕೃಷ್ಣನಾದ
>> ಜ್ಞಾನಕ್ಕೆ ಬುದ್ಧನಾದ
>> ತತ್ವಕ್ಕೆ ಶಂಕರನಾದ
>> ಮೌಢ್ಯಕ್ಕೆ ಬಸವನಾದ
>> ವಿವೇಕಕ್ಕೆ ವಿವೇಕಾನಂದನಾದ
>> ಇವನೆಸರಲ್ಲಿ ಯಾರೂ
>> ಎಳೆಯಲಿಲ್ಲ ತೇರು
>> ಉರೂಸ್ ಉತ್ಸವಗಳು
>> ನಡೆಯಲಿಲ್ಲ ಜೋರು
>>
>> ಸೆಪ್ಟೆಂಬರ್ ಐದರೊಳಗೆ
>> ಬಂಧಿಯಾಗಿದ್ದಾನೆ ನೋಡಿ
>> ಸಮಾಜಕ್ಕೆ ಜ್ಞಾನದ ಭದ್ರತೆ
>> ಒದಗಿಸುವವನಿಗೆ
>> ಆರ್ಥಿಕ ಭದ್ರತೆಯಿಲ್ಲದೆ
>> ಹೆಣಗಾಡುತ್ತಿದ್ದಾನೆ ನೋಡಿ
>> ಇವನಿಗೂ ಸ್ವಾಭಿಮಾನದ
>> ಬದುಕ ಕಟ್ಟಿಕೊಳ್ಳಲು ಬಿಡಿ
>> ಅಂದೇ ಶಿಕ್ಷಕನಿಗೆ ನಿಜವಾದ
>> ದಿನಾಚರಣೆಯಾಗುತ್ತೆ ನೋಡಿ
>>
>> ಶುಭ ಮುಂಜಾನೆ...
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CALWUL%3D7hF3mYm5MVHo%2BgXHBMhiK8%3DfZp6ToZhP%2BacngSyhMURg%40mail.gmail.com
>> <https://groups.google.com/d/msgid/socialsciencestf/CALWUL%3D7hF3mYm5MVHo%2BgXHBMhiK8%3DfZp6ToZhP%2BacngSyhMURg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz4EB7JDHbep6bZrFjs4t_4Cuom86RPh3FNF7PSOD8%2B-6A%40mail.gmail.com
> <https://groups.google.com/d/msgid/socialsciencestf/CACwGsz4EB7JDHbep6bZrFjs4t_4Cuom86RPh3FNF7PSOD8%2B-6A%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALWUL%3D4O39mxsF4RwpS6KrEi5GNonop4g5N3JvmFwh-QE8qqAw%40mail.gmail.com.
For more options, visit https://groups.google.com/d/optout.

Reply via email to