ಮಹನಿಯರೇ...
ಮಾಹಿತಿ ತಂತ್ರಜ್ಞಾನದ ಅದಮ್ಯ ಆವಿಶ್ಕಾರವಾದ ಇಂಟರನೇಟ್, ಮೂರು ವರ್ಷದ ಮಗುವಿನಿಂದ ನೂರು
ವರ್ಷದ ನವ ಯುವಕನಿಗೂ (ಆಸಕ್ತ ಮನಸ್ಸು) ಬೆಕೆನಿಸಿದ ಮಾಹಿತಿ ಕಣಜವನ್ನೇ ತತ್ ಕ್ಷಣ
ಕಂಪ್ಯೂಟರ್ ಪರದೆಯ ಮುಂದೆ ತಂದು ನಿಲ್ಲಿಸುವದು. ಈ ನವ ತಾಂತ್ರಿಕ ಡಿಜಿಟಲ್ ಯುಗದಲ್ಲಿ
ಶಿಕ್ಷಣ ಕೇತ್ರವು ಸಹ ಮಾಹಿತಿ ಮತ್ತು ತಂತ್ರಜ್ಞಾನವು ವ್ಯವಸ್ತಿತವಾಗಿ ಗರಿಷ್ಟ ಮಟ್ಟದಲ್ಲಿ
ಬಳಸಿಕೊಳ್ಳುತ್ತಾ,ಬವಿಷ್ಯದ ನವ ನಾಗರಿಕರಿಗೆ ಜ್ಞಾನಾಮೃತ ಉಣಬಡಿಸುತ್ತಿದೆ.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದ ಕಲಿಕೆಯಲ್ಲಿ ತಂತ್ರಜ್ಞಾನದ ಹೆಚ್ಚು ಬಳಕೆಯು ವಿಜ್ಞಾನ
ವಿಷಯದಲ್ಲಿ ಮಾತ್ರ ಎಂಬುದು ಎಲ್ಲರ ಸಾಮಾನ್ಯ ನಂಬಿಕೆ .ಆದರೆ,ಸಮಾಜ ವಿಜ್ಞಾನ ವಿಷಯದಲ್ಲಿ
ತಾಂತ್ರಿಕ ಬಳಕೆ ಮಾಡುವದೆಂದರೆ, ಶಿಕ್ಷಕರಾದಿಯಾಗಿ ಅಧಿಕಾರಿ ವರ್ಗದ ವರೆಗೂ, ಅದೇಕೊ ಅಸಡ್ಯ
ಮತ್ತು  ಉದಾಸಿನ ಕೊಂಕು ಕುಹಕ  ಭಾವನೆಯೇ ಹೆಚ್ಚು .ಈ ಜಿಡ್ಡುಗಟ್ಟಿದ ಮನೋಧೋರಣೆಗೆ ಸವಾಲಾಗಿ
ಕರ್ನಾಟಕದ ಬಹು ಜಿಲ್ಲೆಗಳ ಆಯ್ದ ಸಮಾನ ಮಸಸ್ಕ ಪ್ರೌಢಶಾಲಾ ಸಮಾಜ ವಿಜ್ಞಾನ ವಿಷಯದ ಶಿಕ್ಷಕ
ಸಮೂಹವು ಒಂದು ದಿಟ್ಟ ನಿರ್ದಾರ ತಗೆದುಕೊಂಡು ನಾಲ್ಕು ತಿಂಗಳ ಕಾಲದ ನಿರಂತರ  ಸೇವಾಭಾವದ
ಪರಿಶ್ರಮದ ಫಲವಾಗಿ ,ಬೋದನೆ ಮತ್ತು ಕಲಿಕಾ ಪ್ರಕ್ರೀಯೆ ಸುಲಭ ಸರಳವಾಗಲಿ ಮತ್ತು ಮಕ್ಕಳಿಗೆ
ಪರಿಕಲ್ಪನೆ ಸ್ಪಸ್ಟವಾಗಿ ಅರ್ಥವಾಗಲಿ ಎಂಬ  ಮಹದುದ್ದೇಶದಿಂದ ಸಮಾಜ ವಿಜ್ಞಾನ ವಿಷಯದಲ್ಲಿ
ತಂತ್ರಜ್ಞಾನ ಅಳವಡಿಕೆಗಾಗಿ ತಾಂತ್ರೀಕ ಲೋಕದಲ್ಲೋಂದು ಒಂದು ವಿನೂತನ ದಿಟ್ಟ ಪುಟ್ಟಹೆಜ್ಜೆಯ
ಅಡಿ ಇಡುತ್ತಿದೆ. ತಮ್ಮ ಸ್ವಯಂ ಇಚ್ಛೆಯಿಂದ ತನು ಮನ ಧನವಾದಿಯಾಗಿ ಅಮುಲ್ಯ ಸಮಯ  ಮತ್ತು
ಬೆಲೆ ಕಟ್ಟಲಾಗದ ಶ್ರಮವನ್ನು  ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಮರ್ಪಕ ಬಳಕೆ ಮಾಡಲಾಗಿದೆ.
ಕನ್ನಡ ನಾಡಿನಲ್ಲಿ ಬೃಹತ್ ಶಿಕ್ಷಣೋದ್ಯಮಿಗಳಿಗೇನು ಕೊರತೆ ಇಲ್ಲ.ಇಂತ ವ್ಯಾಪಾರಿ ಭಾವದ
ನಡುವೆ ಸೇವಾಭಾವದ ಸಮಾನ ಮನಸ್ಕ ಶಿಕ್ಷಕ ಸಮೂಹ ಯಾವ ಸಂಘ ಸಂಸ್ಥೆ , ಇಲಾಖೆ,ಅಧಿಕಾರಿಗಳ ಸಹಾಯ
ಸಹಕಾರ ಮಾರ್ಗದರ್ಶನ ವಿಲ್ಲದೇ ಸ್ವಯಂ ಪ್ರೇರಣೆಯಿಂದ ಯಾವ ಹಮ್ಮು ಬಿಮ್ಮುಗಳಿಲ್ಲದೇ ಪ್ರಾಂಜಲ
ಮನಸ್ಸಿನಿಂದ ತಮ್ಮ ಜೇಬಿನ ಹಣ ಕರ್ಚುಮಾಡಿಕೊಂಡು ಮಕ್ಕಳ ಏಳಿಗೆಯಲ್ಲಿ ತಮ್ಮ ಆತ್ಮ
ತೃಪ್ತಿಕಾಣುವ ಮನಸ್ಸುಗಳು ಕೆಲವೇ ಕೆಲವು ಮಾತ್ರ.
ನಿತ್ಯದ ಪ್ರತಿ ಹೆಜ್ಜೆ ಯು ಸ್ವಹಿತಾಸಕ್ತಿಯಿಂದಲೇ ಅಡಿಯಿಡುವ ಜನಸ್ತೋಮ, ಹೇಗಾದರೂ
ಯಾರಿಂದಲಾದರೂ, ಯಾವ ಮಾರ್ಗದಿಂದಲಾದರೂ ,ಯಾವ ಸಂದರ್ಭ ದಿಂದಲಾದರೂ,ಕತ್ತು ಹಿಸುಕಿ
ಕೊನೆಗಾಣಿಸಿಯಾದರೂ ಹಣ ಗಳಿಸಲು ಸದಾ ಹೊಂಚುಹಾಕಿ ಸಂಚುರುಪಿಸುವ ಹಣಬಾಕ ಹೆಗ್ಗಣಗಳ
ಭ್ರಸ್ಟವ್ಯವಸ್ಥೆಯ  ನಡುವೆ , ಪ್ರಾತಸ್ಮರಣಿಯ ಕೆಲಸ ಮಾಡಲು ಅಡಿ ಇಟ್ಟಿರುವ ಸಮಾಜ ವಿಜ್ಞಾನದ
ಡಿಜಿಟಲ್ ಗ್ರುಪ್ ಶಿಕ್ಷಕ ಸಮುದಾಯದಿಂದ ಅಪೇಕ್ಷಿಸುವದು ಕೇವಲ  ನಾಲ್ಕು ಸೂಕ್ತ   ಸಲಹೆ
ಸೂಚನೆಗಳ ನುಡಿ ನಮನಗಳು .http://Socialsciencedigitalgroup.blogspot.in ಈ ಬ್ಲಾಗ್
ನಲ್ಲಿ ನಮ್ಮ ಗ್ರುಪ್ ನ ಎಲ್ಲ ಸಂಪನ್ಮೂಲವು ,ಇಡಿ ಕರ್ನಾಟಕದ ಜಾಗ್ರುತ ಆಸಕ್ತ ಕುತುಹಲದ
ಮತ್ತು ಕ್ರಿಯಾಶೀಲ ಶಿಕ್ಷಕ ಬಳಗಕ್ಕೆ ಮತ್ತು  ಕಲಿಕಾರ್ಥಿ ಬಳಗಕ್ಕೆ ಬಳಕೆಗೆ
ಲಭ್ಯವಾಗುವದೆಂದು ಹರ್ಷದಿ ಹೆಮ್ಮೆಯಿಂದ ಭಿಗಿ ಹೆಳುವೆವು.ಇದು ಸಂಪೂರ್ಣ ಉಚಿತವಾಗಿದೆ.
ಬಳಕೆಗೆ ಯಾವುದೇ ಹಣ ಯಾರಿಗೂ ನೀಡಬೇಕಿಲ್ಲ .ಯಾವೂದೇ ನಿರೀಕ್ಷೆ  ಫಲಾಪೇಕ್ಷೆಯಿಲ್ಲದೆ
ಸಂಗ್ರಹಿಸಿದ ಸಂಪನ್ಮೂಲ ಸದ್ವಿನಿಯೋಗ ಪಡಿಸಿಕೊಳ್ಳೋಣ.ಎಲ್ಲರೀಗೂ ಕಲಿಸೋಣ ಎಲ್ಲರೂ ಬೆಳೆಯೋಣ.
ಡಿಜಿಟಲ್ ಸಂಪತ್ತು ಬಳಸೋಣ ಸಮಾಜ ವಿಜ್ಞಾನ ವಿಷಯದಲ್ಲಿ ತಂತ್ರಜ್ಞಾನ ಅಳವಡಿಸೋಣ
ಅಭಿವೃದ್ದಿಯತ್ತ ಒಂದು ಹೆಜ್ಜೆ ಮುಂದಿಡೋಣ.ನೀವು ಬಳಸಿ ಆಸಕ್ತರಿಗೂ ಬಳಸಲು
ಪ್ರೋತ್ಸಾಹಿಸಿ.ಗ್ರುಪ್ ನಿಮ್ಮಿಂದ ನಿರಿಕ್ಷಿಸುವ ಒಂದು ಚಿಕ್ಕ ಸಹಕಾರ ಮಾತ್ರ.
ಇಂದ
ಪ್ರಹ್ಲಾದ್ ವಾ ಪತ್ತಾರ್

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAOouN1yd1xjmQ2e_3xxYw0_3je2-o2cGq_omEDuuJOQ-QdFLDg%40mail.gmail.com.
For more options, visit https://groups.google.com/d/optout.

Reply via email to