ಪ್ರೀತಿಯ ಶಿಕ್ಷಕರೇ,
ಕಾಗದ ಕೊರಿಯರ್ ಎಲ್ಲ ನಿಮ್ಮ ಕೈಗೆ ಸಿಗಬೇಕಾದ್ರೆ PIN ಕೋಡ್ ಯಾಕೆ ಸರಿಯಾಗಿ ಬರೀಬೇಕು ಅಂತ
ಗೊತ್ತಿರಲಿ
ಭಾರತ ತುಂಬ ದೊಡ್ಡ ದೇಶ, PIN code - ಪಿನ್ ಕೋಡ್ (Postal Index Number) - ಇದನ್ನ
ಜಾರಿಗೆ ತಂದಿದ್ದು ಆಗಸ್ಟ್ 15, 1972 ರಲ್ಲಿ. ಇದನ್ನ ಬೇರೆ ದೇಶಗಳಲ್ಲಿ ಜ಼ಿಪ್ ಕೋಡ್
ಅಂತಾನೂ ಕರೀತಾರೆ. ದೇಶದಲ್ಲಿರೋ ಯಾವುದೇ ಒಂದು
ಪ್ರದೇಶಾನ ಅಂಚೆ ಇಲಾಖೆಯೋರು ಗುರುತಿಸಕ್ಕೆ ಈ ನಂಬರನ್ನ ಬಳಸ್ತಾರೆ. ಯಾರಿಗಾದ್ರೂ ಕಾಗದ ಬರೆದಾಗ
ಅಡ್ರಸ್ಸಲ್ಲಿ ಪಿನ್ ಕೋಡ್ ಬರೀತಿವಲ್ಲ, ಅದರಿಂದ ಕಾಗದ ಸರಿಯಾದ ಜಾಗಕ್ಕೆ ಬೇಗ ಹೋಗಕ್ಕೆ ಸಹಾಯ
ಮಾಡುತ್ತೆ ಹೇಗೆ
ಗೊತ್ತಾ? ಮುಂದೆ ಓದಿ...
*ಪಿನ್ಕೋಡ್ನಲ್ಲಿ 6 ಅಂಕಿ ಇರುತ್ತೆ. *
ಮೊದಲನೇ ಅಂಕಿ ದೇಶದ ಯಾವ ವಲಯ ಅಂತ ಹೇಳುತ್ತೆ
1,2 ಇದ್ರೆ ಉತ್ತರ ಭಾರತ
3,4 ಇದ್ರೆ ಪಶ್ಚಿಮ,
5,6 ಇದ್ರೆ ದಕ್ಷಿಣ,
7,8 ಇದ್ರೆ ಪೂರ್ವ.
ಆರ್ಮಿಗೆ ಸಂಬಂಧಿಸಿದ್ದಾದ್ರೆ PIN ಕೋಡ್ "9" ಅಂತ ಶುರುವಾಗುತ್ತೆ.
ಎರಡನೇ ಅಂಕಿ ಯಾವ ರಾಜ್ಯ/ಉಪವಲಯ ಅಂತ ಹೇಳುತ್ತೆ
560001 - ಇಲ್ಲಿ ಎರಡನೇ ಅಂಕಿ 6 ಸೂಚಿಸುತ್ತಿರೋ ಊರು ಬೆಂಗಳೂರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 9 ಪಿನ್ ವಲಯಗಳಿವೆ
ಮೂರನೇ ಅಂಕಿ ಯಾವ ಜಿಲ್ಲೆ ಅಂತ ಹೇಳುತ್ತೆ
560001 - ಅನ್ನೋದ್ರಲ್ಲಿ ಮೂರನೆ ಅಂಕಿ 0 ಬೆಂಗಳೂರು ಸಿಟಿ ಸೂಚಿಸತ್ತೆ.
ಕೊನೆ 3 ಅಂಕಿಗಳು ಯಾವ ಪೋಸ್ಟ್ ಆಫೀಸ್ ಅಂತ ಹೇಳುತ್ತೆ
560001 - ಇದ್ರಲ್ಲಿ ಕೊನೆ ಮೂರು ಅಂಕಿ ಬೆಂಗಳೂರಿನ ಜೆನರಲ್ ಪೋಸ್ಟ್ ಆಫೀಸ್ (G.P.O)
ಸೂಚಿಸತ್ತೆ.
ಅಲ್ಲಿಂದ ನಿಮ್ಮ ಬೀದಿ, ಮನೆ ಅಡ್ರಸ್ ಹುಡುಕ್ಕೊಂಡು ಪೋಸ್ಟ್ ಮ್ಯಾನ್ ಬರ್ತಾರೆ...
ಮಾಹಿತಿ ಮೂಲ : http://antekante.com/964
--
*ವೆಂಕಟೇಶ್ ಟಿ ಗೌಡ Venkatesh T Gowda *|
Programme Associate | <http://www.ITforChange.net/>IT for Change
<http://www.itforchange.net/>
(/In special consultative status with the United Nations ECOSOC)
//91-80-26654134 | 9945147359 | Fax 91-80-41461055
Email: [email protected]/
Blog: http://geluvejeevana.blogspot.in////
ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ
ಪಡೆಯೋಣ...
“Let children be children,” “The work of a child is to play,” and
“Children learn best through play.”//////////
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "SocialScience STF" group.
To unsubscribe from this group and stop receiving emails from it, send an email
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit
https://groups.google.com/d/msgid/socialsciencestf/7e7b9919-0b60-04df-1abd-c15ba1ccc198%40gmail.com.
For more options, visit https://groups.google.com/d/optout.