ಒಳ್ಳೆಯ. ಮಾಹಿತಿ ಸರ್
On 02-Aug-2016 8:13 PM, "Narayana D" <[email protected]> wrote:

>
> ಹತ್ತಿ
> ಹತ್ತಿ ಗಿಡ
>
> ಸಂಗ್ರಹಕ್ಕೆ ತಯಾರಾಗಿರುವ ಹತ್ತಿ.
> ವೈಜ್ಞಾನಿಕ ವರ್ಗೀಕರಣ
> Kingdom: ಸಸ್ಯ (ಪ್ಲಾಂಟೆ)
> Division: ಹೂಬಿಡುವ ಸಸ್ಯ (ಮ್ಯಾಗ್ನೊಲಿಯೊಫೈಟ)
> Class: ಮ್ಯಾಗ್ನೊಲಿಯೊಪ್ಸಿಡ
> Order: ಮಾಲ್ವೇಲ್ಸ್
> Family: ಮಾಲ್ವೇಸೆ
> Genus: ಗಾಸಿಪಿಯಮ್
> ಹತ್ತಿ ಗಾಸಿಪಿಯಮ್ ಜಾತಿಯ ಗಿಡಗಳ ಬೀಜದ ಸುತ್ತಲು ಬೆಳೆಯುವ ಮೃದು ನಾರು. ಗಾಸಿಪಿಯಮ್
> ಗಿಡಗಳು ಅಮೇರಿಕ, ಭಾರತ ಮತ್ತು ಆಫ್ರಿಕಗಳ ಮೂಲದವು. ಆದರೆ ಇಂದು ಪ್ರಪಂಚಾದ್ಯಂತ
> ಸಾಗುವಳಿಗೆ, ಮೂಲತಃ ಅಮೇರಿಕ ಖಂಡದ ಗಾಸಿಪಿಯಮ್ ಹಿರ್ಸುಟಮ್ ಮತ್ತು ಗಾಸಿಪಿಯಮ್
> ಬಾರ್ಬಡೆನ್ಸ್ ತಳಿಗಳು ಉಪಯೋಗಿಸಲ್ಪಡುತ್ತವೆ. ಹತ್ತಿಯ ನಾರಿನಿಂದ ಸೆಣೆದ ದಾರದಿಂದ
> ಮೃದುವಾದ, ಗಾಳಿ ತೂರಬಲ್ಲ ಬಟ್ಟೆ ತಯಾರಿಸಲಾಗುತ್ತದೆ. ಹತ್ತಿ ನಾರು ಪರಿಷ್ಕರಣೆಯ ನಂತರ
> ಶುದ್ಧ ಸೆಲ್ಲ್ಯುಲೊಸ್ ಮಾತ್ರ ಉಳಿಯುತ್ತದೆ. ಈ ಸೆಲ್ಲ್ಯುಲೊಸ್‍ನ ರಚನೆ ಹತ್ತಿಗೆ ಅದರ
> ತ್ರಾಣ ಮತ್ತು ಹೀರುವಿಕೆಯನ್ನು ನೀಡುತ್ತದೆ. ಹತ್ತಿ ಪ್ರಪಂಚದಲ್ಲಿ ಬಟ್ಟೆಗಾಗಿ ಅತ್ಯಂತ
> ಹೇರಳವಾಗಿ ಉಪಯೋಗಿಸಲ್ಪಡುವ ನೈಸರ್ಗಿಕ ಪದಾರ್ಥ.
>
> ಪ್ರಜಾತಿಗಳು ಮತ್ತವುಗಳ ಇತಿಹಾಸ ಸಂಪಾದಿಸಿ
>
> ವಿಶ್ವದಲ್ಲಿ ಒಟ್ಟು ೩೯ ಹತ್ತಿ ಪ್ರಜಾತಿಗಳಿದ್ದರೂ, ಬಟ್ಟೆ ಕೈಗಾರಿಕೆಗೆ ಸರಿಹೊಂದುವ
> ಹತ್ತಿ ಪ್ರಜಾತಿಗಳು ಕೇವಲ ೪.
>
> ಗಾ. ಅರ್ಬೋರಿಯಮ ತಳಿ: ಸಂಪಾದಿಸಿ
> ಇದು ಮೂಲತಃ ಭಾರತ ಉಪಖಂಡದ ವಾಯವ್ಯ ಪ್ರದೇಶದ್ದು (ಪಾಕಿಸ್ತಾನ, ಆಫ್ಘಾನಿಸ್ತಾನ). ಇದು
> ಇಂದಿಗೂ ಇಲ್ಲಿ ವಾರ್ಷಿಕ ಬೆಳೆ. ಹರಪ್ಪ ಹಾಗೂ ಸಿಂಧೂನದಿ ತೀರದ ಸಭ್ಯತೆಯ ಕಾಲದಲ್ಲಿ, ಇದು
> ಅತ್ಯಂತ ಭಾರಿ ಪ್ರಮಾಣದಲ್ಲಿದ್ದಿತೆಂಬುದು ತಜ್ಞರ ಅಭಿಪ್ರಾಯ. ಕ್ರಿ.ಪೂ. ೨೦ನೇ ಶತಮಾನದಲ್ಲೇ
> ಪೂರ್ವ ಆಫ್ರಿಕದ ನ್ಯೂಬಿಯದ ’ಮೆರೋ’ ಜನಸಮುದಾಯ ಇದರಿಂದ ಹತ್ತಿಬಟ್ಟೆಗಳನ್ನು ತಯಾರಿಸುವಲ್ಲಿ
> ಪ್ರಾವೀಣ್ಯತೆಯನ್ನು ಹೊಂದಿದ್ದರು. ೯ನೇ ಶತಮಾನದಲ್ಲಿ ನೈಜೀರಿಯ ಕೂಡ ಹತ್ತಿ ಸಂಬಂಧದ
> ಉದ್ಯೋಗದಲ್ಲಿ ಮುಂದಿತ್ತು.
>
> ಗಾ. ಹರ್ಬೇಸಿಯಮ್ ತಳಿ: ಸಂಪಾದಿಸಿ
>
> ಗಾಸಿಪಿಯಮ್ ಹರ್ಬೇಸಿಯಮ್
> ಆಫ್ರಿಕ ಮತ್ತು ಪಶ್ಚಿಮ ಏಷಿಯಾದ ಬೆಳೆ. ಸಹರಾ ಮರುಭೂಮಿ, ಅರ್ಥಮರುಭೂಮಿ ಅರೆಬಿಯ, ಸವನ್ನ
> ಪ್ರದೇಶಗಳಲ್ಲಿ ಕಣುವ ವಾರ್ಷಿಕ ಬೆಳೆ. ದಕ್ಷಿಣ ಆಫ್ರಿಕಾದಿಂದ ಪರ್ಶಿಯ, ಆಫ್ಘಾನಿಸ್ಥಾನ,
> ಟರ್ಕಿ, ಸ್ಪೆನ್, ಯುಕ್ರೇನ್, ಟುರ್ಕಿಸ್ತಾನ್, ಭಾರತ, ಹಾಗೂ ಚೈನದ ವರೆಗೆ ಇದು ವ್ಯಾಪಕವಾಗಿ
> ಬೆಳೆದಿದೆ. ಇದು ಚೈನದಲ್ಲಿ ಕ್ರಿ.ಶ. ೬೦೦ ರಲ್ಲಿ ಹತ್ತಿಯು ವಾರ್ಷಿಕ ಬೆಳೆಯಾಗಿತ್ತೆಂದು
> ಮೂಲಗಳು ವರದಿಮಾಡಿವೆ.
>
> ಗಾ. ಹರ್ಸುಟಮ್ ತಳಿ: ಸಂಪಾದಿಸಿ
> ಹರ್ಸುಟಮ್ ಹತ್ತಿ, ಮುಖ್ಯವಾಗಿ ಮೆಕ್ಸಿಕೊ ದೇಶದ ಬೆಳೆ. ಈ ಕಾಡುಜಾತಿ ಹತ್ತಿಗಿಡಗಳು,
> ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರಗಳ ತೀರಪ್ರದೇಶಗಳಲ್ಲಿ ಬೆಳೆಯುತ್ತಿದ್ದವು. ಉತ್ತರ
> ಅಮೇರಿಕದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ, ಮತ್ತು ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ
> ಕಾಣಬರುತ್ತವೆ. ಅಲ್ಲಿನ ಜನಜಾತಿ, ತೆಹುಕಾನ್ ಕ್ರಿ.ಪೂ ೨ನೇ ಶತಮಾನದಲ್ಲೆ ಹಗ್ಗ, ಹುರಿ,
> ಬಟ್ಟೆ-ಬರೆಗಳನ್ನು ಮಾಡಿಕೊಳ್ಳುತ್ತಿದ್ದ ಬಗ್ಗೆ ಪುರಾವೆಯಿದೆ. ಮಾಯಾ ನಾಗರೀಕತೆ ಮತ್ತು
> ಅಝಟೆಕ್ ನಾಗರೀಕತೆಯ ಜನರೂ ಹತ್ತಿ ಪದಾರ್ಥಗಳನ್ನು ಮಾಡಿಕೊಳ್ಳುತ್ತಿದ್ದರು. ೨ನೇ
> ಶತಮಾನದಲ್ಲಿ ಅರಿಝೋನ ಪ್ರಾಂತ್ಯದಲ್ಲೂ, ಹತ್ತಿವಸ್ತ್ರದ ಬಳಕೆಯ ಪುರಾವೆಗಳು ಕಂಡುಬಂದಿವೆ.
> ೧೬ನೇ ಶತಮಾನದಲ್ಲಿ, ಸ್ಪಾನಿಷ್ ವಲಸೆಗಾರರು, ಮೆಕ್ಸಿಕೊ ಮತ್ತು ಅಕ್ಕ-ಪಕ್ಕದ ಪ್ರದೇಶಗಳಲ್ಲಿ
> ಹತ್ತಿಬೆಳೆ ವ್ಯವಸಾಯವನ್ನು ಮಾಡತೊಡಗಿದರು.
>
> ಗಾ. ಬಾರ್ಬಡನ್ಸ್ ತಳಿ: ಸಂಪಾದಿಸಿ
>
> ಗಾಸಿಪಿಯಮ್ ಬಾರ್ಬಡನ್ಸ್
> ಇದು ವೆಸ್ಟ್ ಇಂಡೀಸ್ನ ಬಾರ್ಬಡೋಸ್ ದ್ವೀಪಸಮುದಾಯಗಳಲ್ಲಿ ಬೆಳೆಯುವ ವಿಶ್ವದ ಅತ್ಯಂತ
> ಅಮೂಲ್ಯವಾದ ಹತ್ತಿ- ತಳಿಗಳು. ಪೂರ್ಣ ಬಿಳುಪಿಲ್ಲದ ಬೂದುಬಣ್ಣದ ನಾರನ್ನು ಹೊಂದಿರುವುದು ಈ
> ಹತ್ತಿಯ ವಿಶೇಷತೆ. ಅತಿ- ಉದ್ದವಾದ ತಂತುಗಳನ್ನು ಹೊಂದಿದ್ದು, ರೇಷ್ಮೆಯಂತೆ,
> ಮೃದುವಾಗಿರುತ್ತದೆ. ಇದನ್ನು ಉಪಯೋಗಿಸಿ ೧೨೦ ರಿಂದ, ೩೦೦ ಅಂಕಗಳ ಅತ್ಯಂತ ನವಿರಾದ, ನಜೂಕಾದ
> ಹತ್ತಿದಾರಗಳನ್ನು ನೂಲಬಹುದು. ಈ ಹತ್ತಿಯನ್ನು ಈಜಿಪ್ಟ್ನಲ್ಲಿ ಬಳಕೆಗೆ ತಂದವರು, ಬ್ರಿಟಿಷ್
> ಮತ್ತು ಅಮೆರಿಕದ ಕೃಷಿ ವೈಜ್ಞಾನಿಕರು. ಈಗ ಅಮೆರಿಕ ದೇಶದಲ್ಲಿ, ’ಪಿಮ’ ಎಂಬ ಉತ್ಕೃಷ್ಟ
> ಹತ್ತಿಯ ಆವಿಷ್ಕಾರವಾಗಿದೆ. ಪಿಮ ಹತ್ತಿಗಳಿಗೆ ವಿಶ್ವದಲ್ಲಿ ಬಹಳ ಬೇಡಿಕೆ ಇದೆ.
>
> ಅಮೆರಿಕದಲ್ಲಿ ಬೆಳೆದ ಹತ್ತಿ ಬೆಳೆಯ ಸುಮಾರು ಪಾಲು, ಅಲ್ಲಿನ ಗುಲಾಮ ಕೂಲಿಗಾರರ ಸಹಾಯದಿಂದ
> ಆಗುತ್ತಿತ್ತು. ಇದು 'ಜಿನ್ನಿಂಗ್ ಯಂತ್ರ' ದ ಆವಿಷ್ಕಾರದ ತರುವಾಯ, ಇನ್ನೂ ಹೆಚ್ಚಾಯಿತು.
> ಇದರಿಂದ ಮಾರುಕಟ್ಟೆಯಲ್ಲಿ ಮಾರಾಟಾವಾಗುತ್ತಿದ್ದ ಹತ್ತಿಬಟ್ಟೆಗಳ ಪಾಲು ಮೊದಲು ಶೇ. ೫ %
> ಇದ್ದದ್ದು ಶೇ ೭೫ % ಕ್ಕೆ ಏರಿತು. ೧೮೩೫ರಲ್ಲಿ, ಅಮೆರಿಕದ ದಕ್ಷಿಣ ಪ್ರಾಂತ್ಯಗಳು
> ಗುಲಾಮಗಿರಿಯನ್ನು ಬಹಿಷ್ಕರಿಸಿದ್ದವು. ಆದರೆ, ಅಮೆರಿಕದ ಆಗ್ನೇಯ ರಾಜ್ಯಗಳಲ್ಲಿ ಇದರ ಪ್ರಭಾವ
> ಮುಂದುವರೆಯಿತು. ೧೮೫೦ರಲ್ಲಿ, ಇಂಗ್ಲೆಂಡಿಗೆ ಸರಬರಾಜುಮಾಡುತ್ತಿದ್ದ ೮೦% ಹತ್ತಿ ರಫ್ತು , ಈ
> ರಾಜ್ಯಗಳಿಂದ ಹೋಗುತ್ತಿತ್ತು. ಆದರೆ ೧೯೬೫ರ, ಅಮೇರಿಕದ ಅಂತಃಕಲಹದ ನಂತರ, ಗುಲಾಮ
> ಕೂಲಿಗಾರರಿಗೆ ಸ್ವಾತಂತ್ರ್ಯ ಬಂದಿತು. ಈ ಕಾರಣಗಳಿಂದಾಗಿ ಹತ್ತಿ- ಬೆಳೆ, ಸ್ವಲ್ಪ ಕಾಲ
> ನಿಂತೇ ಹೋಯಿತು. ನಂತರ, ಕೂಲಿಗಾರರ ಸಹಾಯವಿಲ್ಲದೆ, ಯಂತ್ರಗಳ ಮುಖೇನ ಹತ್ತಿ ಬಿಡಿಸುವುದರಿಂದ
> ಹಿಡಿದು, ದಾರ ನೂಲುವ, ಬಟ್ಟೆತಯಾರಿಸುವ ಎಲ್ಲಾ ಪರಿಕ್ರಮಗಳೂ ಯಂತ್ರದ ಮೂಲಕವೇ ನಡೆಯುವ
> ಪರಿಪಾಠ ಪ್ರಾರಂಭವಾಯಿತು. ಈ ಎಲ್ಲಾ ಬೆಳವಣಿಗೆಗಳೂ ಇಂಗ್ಲೆಂಡಿನ ಹತ್ತಿ ಕಾರ್ಖಾನೆಗಳಿಗೆ
> ಸರಬರಾಜುಮಾಡುವ ಕಚ್ಚಾಹತ್ತಿಯ ಪ್ರಮಾಣವನ್ನು ನಿಯಂತ್ರಿಸಿದವು.
>
> ಹತ್ತಿಯ ಸಾಗುವಳಿ ಮತ್ತು ಸಂಸ್ಕರಣೆ ಸಂಪಾದಿಸಿ
>
> ೨೦೦೫ರಲ್ಲಿ ವಿಶ್ವದ ಹತ್ತಿ ಉತ್ಪಾದನೆ
> ದೇಶ ಸಾಗುವಳಿ ಪ್ರದೇಶ (ಮಿಲಿಯನ್ ಹೆಕ್ಟೇರುಗಳು) ಉತ್ಪಾದನೆ (ಮಿಲಿಯನ್ ಟನ್ಗಳು) ಪ್ರತಿ
> ಹೆಕ್ಟೇರಿಗೆ ಉತ್ಪಾದನೆ (ಕಿಲೊಗ್ರಾಂ)
> ಚೀನ ೪.೧೦ ೪.೨೦ ೧,೦೨೪
> ಅಮೇರಿಕ ದೇಶ ೫.೮೦ ೩.೯೦ ೬೭೨
> ಭಾರತ ೯.೧೦ ೨.೮೦ ೩೦೮
> ಪ್ರಪಂಚ ೩೩.೮೯ ೧೯.೬೬ ೫೭೬
>
> ೨೦೦೭ರಲ್ಲಿ ವಿಶ್ವದ ೫ ದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರಗಳು ಕ್ರಮಾಂಕದಲ್ಲಿ ಚೀನ, ಭಾರತ,
> ಅಮೇರಿಕ ಸಂಯುಕ್ತ ಸಂಸ್ಥಾನ, ಪಾಕಿಸ್ತಾನ ಮತ್ತು ಬ್ರೆಜಿಲ್ ಆಗಿವೆ. [೧] ಹತ್ತಿಯ ಬೆಳವಣೆಗೆ
> ಸಾಕಷ್ಟು ಬಿಸಿಲು ಮತ್ತು ೬-೧೨ ಸೆಂಟಿಮೀಟರ್ ಮಳೆ ಬೇಕಾಗುತ್ತದೆ. ಮಣ್ಣಿನಲ್ಲಿ ಪೋಷಕಾಂಶ
> ಅತೀವವಾಗಿ ಬೇಕಾಗಿಲ್ಲ. ಹತ್ತಿ ಬೆಳೆ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ
> ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಬೆಳೆಯಲ್ಪಡುತ್ತದೆ. ಆಧುನಿಕ ಹತ್ತಿ
> ಸಾಗುವಳಿಯಲ್ಲಿ ಕೃತಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಹೆಚ್ಚು ಬೇಕಾಗುತ್ತದೆ.
> ವಿಜ್ಞಾನಿಗಳ ಸತತ ಪ್ರಯತ್ನದಿಂದಾಗಿ ಒಂದು ಕಾಲದಲ್ಲಿ ವೃಕ್ಷವಾಗಿದ್ದ ಮರ-ಹತ್ತಿ, ಈಗ
> ಹೊಲಗಳಲ್ಲಿ ಪೊದೆಯಂತೆ ಬೆಳೆಯುತ್ತಿದೆ. ಮತ್ತು ಮೊದಲು ಬಹುವಾರ್ಷಿಕವಾಗಿದ್ದ ಈ ಬೆಳೆ ಈಗ
> ವಾರ್ಷಿಕ ಬೆಳೆಯಾಗಿದೆ.
>
> ಸಾಗುವಳಿಯಲ್ಲಿ ಯಂತ್ರೀಕರಣ ಸಂಪಾದಿಸಿ
>
> ಹತ್ತಿಯನ್ನು ಕೀಳುವ ಒಂದು ಆಧುನಿಕ ಯಂತ್ರ
> ಅಮೇರಿಕದ ಕ್ರಾಂತಿಕಾರಿ ಯುದ್ಧದ ಸಮಯದಲ್ಲಿ ಇಂಗ್ಲೆಂಡ್ಗೆ ಅಲ್ಲಿನ ವಸಾಹತುಗಳಿಂದ ಬರುವ
> ಹತ್ತಿ ಕಡಿಮೆಯಾಯಿತು. ಇದು ಇಂಗ್ಲೆಂಡಿನ ಔದ್ಯೋಗಿಕ ಕ್ರಾಂತಿಯ ಸಮಯವಾಗಿದ್ದರಿಂದ
> ಯಂತ್ರೀಕರಣಕ್ಕೆ ಹೆಚ್ಚು ಒತ್ತು ನೀಡಲಾಯಿತು. ಸ್ಪಿನ್ನಿಂಗ್ ಜೆನ್ನಿಯ ಆವಿಷ್ಕಾರ ಇದಕ್ಕೆ
> ನಾಂದಿಯಾಯಿತು. ನಂತರ, ಆರ್ಕ್ರೈಟ್‍ನ ಯಂತ್ರ ಹಾಗು, ಸ್ಯಾಮ್ಯುಯಲ್ ಕ್ರಾಂಟನ್ನ ’ಮ್ಯೂಲ್
> ಯಂತ್ರ’ ಕೂಡ ಉಪಯೋಗಕ್ಕೆ ಬಂದವು. ಹತ್ತಿ ಕೀಳುವ ಯಂತ್ರಗಳು ಕ್ರಮೇಣ ಬಲಶಾಲಿಯಾಗಿವೆ. ಕಿತ್ತ
> ಹತ್ತಿಯ ಶೇಖರಣೆಯಲ್ಲೂ ಯಾಂತ್ರಿಕತೆ ಪ್ರಭಾವ ಬೀರಿದೆ. ಹತ್ತಿ ಮಾಡ್ಯೂಲ್ ಬಿಲ್ಡರ್ ಯಂತ್ರವು
> ಸಂಗ್ರಹಿಸಲ್ಪಟ್ಟ ಹತ್ತಿಯನ್ನು ಅಡಕವಾಗಿ ದೊಡ್ಡ ಚೌಕಗಳಲ್ಲಿ ಶೇಖರಿಸುತ್ತದೆ.
>
> ಸಂಸ್ಕರಣೆ ಸಂಪಾದಿಸಿ
>
> ಸಂಗ್ರಹಿಸಲ್ಪಟ್ಟ ಹತ್ತಿಯಿಂದ ಮೊದಲು ಬೀಜವನ್ನು ತಗೆಯಲಾಗುತ್ತದೆ. ಇದನ್ನು Ginning ಎಂದು
> ಕರೆಯಲಾಗುತ್ತದೆ. ಈ ಹತ್ತಿಯನ್ನು ದಾರವಾಗಿ ಸೆಣೆಯಲಾಗುತ್ತದೆ. ಸಂಸ್ಕರಣೆಯಲ್ಲಿ ಯಂತ್ರಗಳ
> ಪಾತ್ರ ಪ್ರಮುಖ. ಅಮೇರಿಕ ದೇಶದ ಏಲ್ ವಿಶ್ವವಿದ್ಯಾಲಯದ ಎಲಿ ವಿಟ್ನಿ ೧೭೯೩ರಲ್ಲಿ ಹತ್ತಿಯ
> ಬೀಜವನ್ನು ಬೇರ್ಪಡಿಸುವ ಯಂತ್ರವನ್ನು ನಿರ್ಮಿಸಿ ಒಂದು ಕ್ರಾಂತಿಯನ್ನೇ ತಂದನು.
>
> ಹತ್ತಿಯ ಉಪಯೋಗಗಳು ಸಂಪಾದಿಸಿ
>
> ಹತ್ತಿಯು ಪ್ರಮುಖವಾಗಿ ಬಟ್ಟೆಯ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ. ಹೆಚ್ಚು ಹೀರುವಿಕೆಯ
> ಟೆರಿಕ್ಲಾತ್, ಜೀನ್ಸ್ ಅನ್ನು ತಯಾರಿಸುವ ಡೆನಿಮ್ ಬಟ್ಟೆ, ಕಾರ್ಡುರಾಯ್, ಇತ್ಯಾದಿ
> ಪ್ರಕಾರಗಳಲ್ಲಿ ಹತ್ತಿಯನ್ನು ಉಪಯೋಗಿಸಲಾಗುತ್ತದೆ. ಕೃತಕ ಪದಾರ್ಥಗಳಾದ ರೆಯಾನ್ ಮತ್ತು
> ಪಾಲಿಯೆಸ್ಟರ್ಗಳ ಜೊತೆಗೂ ಹತ್ತಿಯನ್ನು ಮಿಶ್ರಿಸಿ ಬಟ್ಟೆಯನ್ನು ತಯಾರಿಸುತ್ತಾರೆ.
> ಆಸ್ಪತ್ರೆಗೆ ಬೇಕಾಗುವ ಬ್ಯಾಂಡೇಜ್ ಹತ್ತಿ, ಬ್ಯಾಂಡೇಜ್ ಕಟ್ಟಲು ಬಳಸುವ ಸರ್ಜಿಕಲ್ ಹತ್ತಿ
> ಬಟ್ಟೆ, ಹೆಣ್ಣುಮಕ್ಕಳು ಬಳಸುವ 'ಸ್ಯಾನಿಟರಿವೇರ್‍ಗಳು' ಹತ್ತಿಯ ಇತರ ಉಪಯೋಗಗಳು.
>
> ಬಟ್ಟೆ ಕೈಗಾರಿಕೆಯಲ್ಲದೆ ಮೀನು ಜಾಲ, ಕಾಫಿ ಫಿಲ್ಟರ್, ಸಿಡಿಮದ್ದುಗಳ ತಯಾರಿಕೆಯಲ್ಲೂ
> ಹತ್ತಿಯ ಉಪಯೋಗವಿದೆ. ಹಾಸಿಗೆಗಳನ್ನು ತುಂಬಲು ಕೂಡ ಹತ್ತಿಯನ್ನು ಉಪಯೋಗಿಸಲಾಗುತ್ತದೆ.
>
> ಹತ್ತಿಯ ಬೀಜಗಳಿಂದ ಅಡಿಗೆ ಎಣ್ಣೆಯನ್ನು ತಯಾರಿಸಲಾಗುತ್ತದೆ. ಎಣ್ಣೆ ತಯಾರಕೆಯಿಂದ ಉಳಿಯುವ
> ಹಿಂಡಿಯನ್ನು ಪ್ರಾಣಿಗಳ ಆಹಾರವಾಗಿ ಬಳಸಲಾಗುತ್ತದೆ. ಹತ್ತಿ ಕಾರ್ಖಾನೆಗಳಲ್ಲಿ ಶೇಖರವಾಗುವ
> ತೀರ ನುಸಿಯಂತಹ ಪುಡಿಯಿಂದ (Micro dust) ಬಯೋಗ್ಯಾಸ್ ತಯಾರಿಸಬಹುದು. ತಿನ್ನಲು ಯೋಗ್ಯವಾದ
> ಅಣಬೆಗಳನ್ನು ಬೆಳೆಸಲು ಕೂಡ ಹತ್ತಿಯ ಉಪಯೋಗವಿದೆ. ಪಾರ್ಟಿಕಲ್ ಬೋರ್ಡ್‍, ವಿಧ-ವಿಧದ
> ಕಾಗದಗಳು, ಪ್ಯಾಕಿಂಗ್ ಮಾಡಲು ದಪ್ಪಕಾಗದ, ಕಾರುಗೇಟೆಡ್ ಪೆಟ್ಟಿಗೆಗಳು, ಮುಂತಾದವುಗಳ
> ತಯಾರಿಕೆಯಲ್ಲೂ ಹತ್ತಿಯ ಬಳಕೆಯಿದೆ.
>
> ಹತ್ತಿಯ ಗುಣಮಟ್ಟ ಹೆಚ್ಚಿಸಲು ಸಂಶೋಧನೆಗಳು ಸಂಪಾದಿಸಿ
>
> ಹತ್ತಿಯ ಸಾಗುವಳಿಯಲ್ಲಿ ಉಂಟಾದ ಮುನ್ನಡೆಗಳಂತೆ, ಹತ್ತಿಯ ನಾರಿನ ಗುಣಮಟ್ಟವನ್ನು
> ಹೆಚ್ಚಿಸಲೂ ಕೂಡ ಪ್ರಪಂಚಾದ್ಯಂತ ಪ್ರಯತ್ನಗಳು ಸಾಗಿದವು.
>
> ಬ್ರಿಟಿಷ್ ಕಾಟನ್ ಗ್ರೋಯಿಂಗ್ ಅಸೋಸಿಯೇಷನ್ (೧೯೦೪-೧೯೫೪) (BCGA) ಸಂಪಾದಿಸಿ
> ಈ ಸಂಸ್ಥೆಯ ಸ್ಥಾಪನೆಯಿಂದ ವಿಶ್ವದ ಹತ್ತಿತಳಿಗಳಲ್ಲಿ ಸುಧಾರಣೆ ಮತ್ತು ಗಮನಾರ್ಹ
> ಪ್ರಗತಿಯುಂಟಾಯಿತು. ಈ ಸಂಘವನ್ನು ಸ್ಥಾಪಿಸಿದವರು ಸರ್ ಆಲ್ಫ್ರೆಡ್ ಜೋನ್ಸ್ ಮತ್ತು ಜೆ.
> ಆರ್ಥರ್ ಹಟನ್. ಇದರ ಜೊತೆಯ "ಶರ್ಲಿ ಇನ್ಸ್ಟಿಟ್ಯೂಟ್ ಈಗ (BTTG), ಭಾರತವೂ ಸೇರಿದಂತೆ,
> ಪ್ರಪಂಚದ ಹತ್ತಿ ಸುಧಾರಿಸುವ ಕೇಂದ್ರಗಳಿಗೆಲ್ಲಾ ತಕನಿಕಿ ಮತ್ತು ವೈಜ್ಞಾನಿಕ ಸಲಹೆ, ಮತ್ತು
> ತಾಂತ್ರಿಕ ಸಹಾಯ ಒದಗಿಸಿತು. ಹತ್ತಿ ಗುಣವಿಶೇಷಣೆ ಮತ್ತು ಅದರ ಎಲ್ಲಾ ಮಾಹಿತಿಗಳಿಗೂ ವಿಶ್ವದ
> ಹತ್ತಿ ಸಂಶೋಧಕರು ಉತ್ಸುಕತೆಯಿಂದ ಇಂದಿಗೂ ಎದುರುನೋಡುತ್ತಾರೆ. ಬಿಸಿಜಿಯ ಕಾರ್ಯವ್ಯಾಪ್ತಿ,
> ಯುಗಾಂಡ, ಕಿನ್ಯಾ, ದಕ್ಷಿಣ ಆಫ್ರಿಕ, ಟ್ಯಾಂಗನಿಕ, ರೊಢೀಶಿಯ, ಸೂಡಾನ್, ಈಜಿಪ್ಟ್ ಮತ್ತು
> ಭಾರತಗಳಲ್ಲಾಯಿತು.
>
> ಕಸಾಲ ಕಾಟನ್ ಕಂಪನಿ, ಸುಡಾನ್ (KCC) ಸಂಪಾದಿಸಿ
> ಈ ಸಂಸ್ಥೆಯು ಗಿಝಿರ ದಂಡೆಯಲ್ಲಿರುವ ಹೊಲಗಳಲ್ಲಿ ನೀರಾವರಿ ವ್ಯವಸ್ಥೆಯನ್ನು ಮಾಡಿತು.
> ಅಲ್ಲಿನ ಸೆನ್ನಾರ್ ಅಣೆಕಟ್ಟನ್ನು ನಿರ್ಮಿಸಿ, ಸಾವಿರಾರು ಎಕರೆ ಭೂಮಿಗೆ ನೀರಿನ
> ಸೌಲಭ್ಯವನ್ನು ಮಾಡಿಕೊಡಲಾಯಿತು. ಬ್ರಿಟಿಶ ಜನತೆ, ಸರ್ಕಾರದ, ಆರ್ಥಿಕ ಸಹಾಯ,
> ಮುಂದಾಳತ್ವವನ್ನು ವಹಿಸಿ, ಮಾಡಿದ ಸಹಾಯದಿಂದ ಇಲ್ಲಿ ಉತ್ಪಾದಿಸುವ ಹತ್ತಿ ಗುಣಮಟ್ಟ, ಮತ್ತು
> ಉತ್ಪಾದನಾ ಸಾಮರ್ಥ್ಯ ಅತಿಹೆಚ್ಚು. ಜೊತೆಗೆ ಕಾರ್ಮಿಕರ ವಿದ್ಯಾಬ್ಯಾಸದ, ಆರೋಗ್ಯದ
> ವ್ಯವಸ್ಥೆಗಳು, ಇವುಗಳೆಲ್ಲದರ ಮುತುವರ್ಜಿವಹಿಸಿ ಮಾಡಿದ ಕಾರ್ಯಾಚರಣೆಗಳಿಂದ, ಕೇವಲ ೫೦
> ವರ್ಷಗಳಲ್ಲಿ ಬ್ರಿಟನ್ನಿನ ಕಾಲೋನಿಗಳಿಂದ ಉತ್ಪಾದನೆಯಾದ ಹತ್ತಿಯ ಪ್ರಮಾಣ - ೧ ಮಿಲಿಯ ಹತ್ತಿ
> ಬೇಲ್‍ಗಳಷ್ಟು ಆಯಿತು..
>
> ಮುಂದೆ, ಯಂತ್ರಗಳ ವಿನ್ಯಾಸ, ಹೆಚ್ಚು ಉತ್ಪಾದನೆ, ಹತ್ತಿ ಪೈಬರ್, ಹತ್ತಿದಾರ, ಬಟ್ಟೆಗಳ
> ಗುಣಮಟ್ಟ ಗಳಲ್ಲೂ ಹಲವಾರು ಸಂಶೋಧನೆಗಳು ನಡೆದವು. ಈ ಕ್ಷೇತ್ರಗಳಲ್ಲೂ, ಅಮೆರಿಕ, ಜಪಾನ್,
> ಮತ್ತು ಯೂರೋಪಿನ ರಾಷ್ಟ್ರಗಳು ಮಾಡುತ್ತಿರುವ ಅನುಸಂಧಾನಗಳು, ಹತ್ತಿ ವಸ್ತ್ರೋದ್ಯಮವನ್ನು
> ಹೆಚ್ಚು ಜನಪ್ರಿಯಗೊಳಿಸಿದವು.
>
> ಬಯೋಟೆಕ್ನಾಲಜಿಯ ಪರಿಣಾಮಗಳು ಸಂಪಾದಿಸಿ
> ಹತ್ತಿಯ ತಳಿಗಳನ್ನು ಉತ್ತಮಪಡಿಸಲು ಆಧುನಿಕ ವಿಜ್ಞಾನದ ಬಯೋಟೆಕ್ನಾಲಜಿಯ ಸಹಾಯ ಇತ್ತೀಚೆಗೆ
> ಹೆಚ್ಚಾಗುತ್ತಿದೆ. ಈ ರೀತಿಯಲ್ಲಿ ಉತ್ಪಾದಿತ ಕೆಲವು ತಳಿಗಳಲ್ಲಿ ಹತ್ತಿ ಕೀಟವಾದ ಬೊಲ್
> ‍ವರ್ಮ್, ಹತ್ತಿ- ಕಾಯಿ, ಕೊರೆಯುವ ಹುಳು ವಿನ ಪರಿಣಾಮ ತಟ್ಟುವುದಿಲ್ಲ. ವಿಶ್ವದ ಸ್ತರದಲ್ಲಿ
> ಬಯೋಟೆಕ್ ಹತ್ತಿ ಬೆಳೆಸುವ ಪ್ರಮಾಣ-‍ ೨೮%, ಭಾರತದ ಬಯೋಟೆಕ್ ಹತ್ತಿ ಬೆಳೆಯ ಪ್ರಮಾಣ-೧೫.೬%.
>
> ಮಾಹಿತಿತಂತ್ರಜ್ಞಾನದ ಪರಿಣಾಮಗಳು ಸಂಪಾದಿಸಿ
> ಮಾಹಿತಿತಂತ್ರಜ್ಞಾನದಲ್ಲಿ ಆದ ಕ್ರಾಂತಿ, ಹತ್ತಿಸಂಶೋಧನೆ, ಮತ್ತು ಅದರ
> ಕಾರ್ಯಚಟುವಟಿಕೆಗಳಲ್ಲಿ ಭಾರಿ ಪಾತ್ರವನ್ನು ಹೊಂದಿದೆ. ಮೊದಲು ಹತ್ತಿಯ ಗುಣವಿಶೇಷಗಳನ್ನು
> ಅರಿಯಲು ಕೆಲವೇ ತಜ್ಞರ ಸಹಾಯದಿಂದ ಮುಂದುವರಿಯಬೇಕಾಗಿತ್ತು. ಆದರೆ ಗಣಕಯಂತ್ರ ಮತ್ತು
> ಅಂತರಜಾಲ ಗಳಿಂದ ಈಗ ರೈತರು ಈ ಮಾಹಿತಿಯನ್ನು ತಾವಾಗೆ ಪಡೆಯಬಹುದು. ಗಿರಾಕಿಗಳಿಗೆ
> ಪ್ರತಿಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ರವಾನಿಸಬಹುದು.
>
> ಈ ಪ್ರಗತಿಯು ಹತ್ತಿಯ ಮಾರಟ ಕ್ರಿಯೆಯನ್ನೂ ಸುಧಾರಿಸಿದೆ.. ಒಂದೇ ತರಹದ ಮಾನಕಗಳಿಂದ ಕೂಡಿದ
> ಮಾಹಿತಿಗಳು, ವಿಶ್ವದ ೯೦ ಕ್ಕೂಹೆಚ್ಚು ಹತ್ತಿ ಉತ್ಪಾದಿಸುವ ರಾಷ್ಟ್ರಗಳ ಸಮಸ್ಯೆ,
> ಅನುಕೂಲ-ಪ್ರತಿಕೂಲಗಳನ್ನು ಅರಿತು ಮಾರಾಟವನ್ನು ತ್ವರಿತಗೊಳಿಸಬಹುದು.
>
> ಹತ್ತಿ ಸಂಶೋಧನೆಯ ಪ್ರಮುಖ ವೈಜ್ಞಾನಿಕರು ಸಂಪಾದಿಸಿ
> ಎಸ್.ಸಿ. ಹರ್ಲ್ಯಾಂಡ್ (ಬ್ರಿಟನ್),
> ಜೆ. ಬಿ. ಹುಚಿನ್ಸನ್ (ಬ್ರಿಟನ್),
> ಜೆ. ಒ, ಬೀಸ್ಲಿ (ಯು.ಎಸ್.ಎ),
> ಜಿ.ಎಸ್. ಜೈಟ್ಸೆವ್ (ರಶ್ಯ),
> ಜೆ. ಎಮ್. ವೆಬರ್ (ಯು.ಎಸ್.ಎ),
> ಟಿ. ಎಚ್. ಕಾರ್ನೆ,
> ಎನ್. ಐ. ವಾವ್ಲೋವ್ (ರಶ್ಯ),
> ಎ. ಸ್ಕೋವ್ಸ್ಟೆಡ್ (ರಶ್ಯ), ಹಾಗೂ
> ವಿ. ಸಂತಾನಂ (ಭಾರತ)
> ಸಿ. ಟಿ. ಪಟೇಲ್ (ಭಾರತ)
> ಮುನ್ಷೀ ಸಿಂಗ್ (ಭಾರತ)
> ಕತಾರ್ಕಿ (ಭಾರತ)
> ಮಾರಪ್ಪನ್ (ಭಾರತ)
> [೨]
>
> 'ಭಾರತದಲ್ಲಿ ಹತ್ತಿ'
>
> ಮುಖ್ಯ ಲೇಖನ: ಭಾರತದಲ್ಲಿ ಹತ್ತಿ
>
> ಆಂಧ್ರ ಪ್ರದೇಶದಲ್ಲಿ ಬೆಳೆದ ಹತ್ತಿ ಕೀಳುತ್ತಿರುವುದು
> ಹತ್ತಿಯು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅನಾದಿಕಾಲದಿಂದಲೂ ಹತ್ತಿ ಭಾರತದ
> ಜನಜೀವನದಲ್ಲಿ ಹಾಸು-ಹೊಕ್ಕಾಗಿದೆ. ಭಾರತದಲ್ಲೇ ಇದನ್ನು ತಮ್ಮ ಜೀವನಾವಲಂಬನೆಗೆ ಆರಿಸಿಕೊಂಡ
> ಜನರ ಸಂಖ್ಯೆ -೬೦ ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ. ನಮ್ಮ ದೇಶದ ಹತ್ತಿಯನ್ನು "ದೇಸಿ
> ಹತ್ತಿ" ಎಂದು ಕರೆಯುತ್ತಾರೆ. ಇದು ಗಾ. ಆರ್ಬೊರಿಯಮ್ ಮತ್ತು ಗಾ. ಹರ್ಬೆಸಿಯಮ್ ಪ್ರಜಾತಿಯ
> ಹತ್ತಿಗಳನ್ನು ಒಳಗೊಂಡಿದೆ. ಇದರ ತಂತುಗಳು ಚಿಕ್ಕದಾಗಿಯೂ ಸ್ವಲ್ಪ ಒರಟಾಗಿಯೂ ಇರುತ್ತವೆ.
> ತಂತು-ಶಕ್ತಿಯೂ ಕಡಿಮೆ. ಆದ್ದರಿಂದ ತಯಾರಾದ ಬಟ್ಟೆಗಳು ಒರಟಾಗಿರುವುದು ಸ್ವಾಭಾವಿಕ.
>
> ಭಾರತದಲ್ಲಿ ಹತ್ತಿಯ ಇತಿಹಾಸ ಸಂಪಾದಿಸಿ
> ಪ್ರಾಚೀನ ಭಾರತದ ಹತ್ತಿ ತಂತ್ರಜ್ಞಾನ ಕೌಶಲ ವಿಶ್ವಪ್ರಸಿದ್ಧವಾಗಿತ್ತು. ಯುರೋಪ್ನ
> ಸಮುದ್ರನಾವಿಕರು ನಮ್ಮ ದೇಶದ ಹತ್ತಿಬಟ್ಟೆಗಳ ಮತ್ತು ಕರಕುಶಲ ವಸ್ತುಗಳ ಬಗ್ಗೆ
> ತಿಳಿದುಕೊಂಡರು. ಮೊಘಲರ ಕಾಲದಲ್ಲಿ ಹತ್ತಿ - ವಸ್ತ್ರೋದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು.
> ೧೮೨೮ರಲ್ಲಿ, ಈಸ್ಟ್ ಇಂಡಿಯ ಕಂಪನಿಯ ಕೆಲವು ಅಧಿಕಾರಿಗಳು ಹತ್ತಿಯ ಬೀಜಗಳನ್ನು ಧಾರವಾಡದ
> ರೈತರಿಗೆ ತಲುಪಿಸಿದರು. ಆ ಹತ್ತಿ ತಳಿಗಳು- ಬೊರ್ಬೊನ್ ಎಂಬ ಬಹುವಾರ್ಷಿಕ ಮರಹತ್ತಿ. ಮುಂದೆ
> ನ್ಯೂ ಆರ್ಲಿಯನ್ಸ್ ಮತ್ತು ಜಾರ್ಜಿಯದಿಂದ ಆಗಮಿಸಿದ ಇನ್ನೆರಡು ತಳಿಗಳು ಮುಂದೆ ಧಾರವಾಡ್
> ಅಮೆರಿಕನ್-೧ ಹತ್ತಿಗಳೆಂದು ಹೆಸರುವಾಸಿಯಾದವು. ಇದೇ ರೀತಿ, ೧೯೦೬ರಲ್ಲಿ ಇಂಡೋಚೈನದಿಂದ
> ಹಡಗಿನಲ್ಲಿ ತಂದ ಹತ್ತಿಬೀಜಗಳನ್ನು ಮದ್ರಾಸಿನ ತರಿಭೂಮಿಯಲ್ಲಿ ಬಿತ್ತಿ ಸಾಗುವಳಿಮಾಡಲಾಯಿತು.
> ಇದನ್ನು "ಕ್ಯಾಂಬೋಡಿಯ ಹತ್ತಿ"ಯೆಂದು (CO2) ಕರೆಯಲಾಯಿತು. ನಮ್ಮ ದೇಶಕ್ಕೆ ಚೆನ್ನಾಗಿ
> ಹೊಂದಿಕೊಂಡ ಈ ಹತ್ತಿ ತಳಿಯನ್ನು ಉಪಯೋಗಿಸಿಕೊಂಡು, ಮಧ್ಯ ಪ್ರದೇಶ, ಗುಜರಾತ್ನ ಕಾಥೆವಾಡ,
> ಪಶ್ಚಿಮ ಬಂಗಾಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಇದನ್ನು ವಿಸ್ತರಿಸಲಾಯಿತು. ಇದೇ ತಳಿ,
> ಮದ್ರಾಸ್ ರಾಜ್ಯದ ಪ್ರಖ್ಯಾತ ಎಮ್.ಸಿ.ಯು. ಹತ್ತಿಯ ಶ್ರೇಣಿಗೆ ಪ್ರೇರಣೆಯಾಗಿ ಎಮ್.ಸಿ.ಯು-೫
> ಇಂದಿಗೂ ಪ್ರಚಾರದಲ್ಲಿದೆ.
>
> ಇಂಡಿಯನ್ ಸೆಂಟ್ರಲ್ ಕಾಟನ್ ಕಮಿಟಿ ಸಂಪಾದಿಸಿ
> ಬ್ರಿಟಿಷರು, ಬೊಂಬಯಿನಲ್ಲಿ ೧೯೧೯ ರಲ್ಲೇ, "ಇಂಡಿಯನ್ ಸೆಂಟ್ರಲ್ ಕಾಟನ್ ಕಮಿಟಿ" ಎಂಬ
> ಸಂಘವನ್ನು ಹುಟ್ಟುಹಾಕಿದರು.[೩] ದೇಶದಾದ್ಯಂತ ಬೆಳೆಸಿದ ಹತ್ತಿಯ ಹೊಲದಲ್ಲಿನ ಫಸಲನ್ನು
> ಬೊಂಬಾಯಿನ ಹವಾ-ನಿಯಂತ್ರಿತ ವೇದಶಾಲೆಯಾದ "The Technological Laboratory, C.T.R.L."
> ನಲ್ಲಿ (ಈಗ, CIRCOT) ಮೂಲ್ಯಾಂಕನ ಮಾಡಿ, ಗುಣಮಟ್ಟವನ್ನು ನಿರ್ಧರಿಸಿ, ಉತ್ತಮವಾದ
> ತಳಿಗಳನ್ನು ಮತ್ತೆ ಮುಂದುವರಿಸುವ ಪರಿಕ್ರಮವನ್ನು ಶುರುಮಾಡಲಾಯಿತು. ಈ ಹತ್ತಿ ಸಂಶೋಧನೆಯ
> ಮೂಲ ಪರಿಕ್ರಮದ ಪಾದಾರ್ಪಣೆಯನ್ನು ಡಾ. ಆರ್ಥರ್ ಜೇಮ್ಸ್ ಟರ್ನರ್, ಮತ್ತು ರಾಲ್ಫ್ ರಿಚರ್ಡ್
> ಸನ್ ರವರು ಡಿಸೆಂಬರ್ ೩, ೧೯೨೪ರಲ್ಲಿ ಪ್ರಾರಂಭ ಮಾಡಿದರು. ೧೯೬೬ರಲ್ಲಿ ಇದರ
> ಕಾರ್ಯಾಡಳಿತವನ್ನು ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ (ICAR) ವಹಿಸಿಕೊಂಡಿತು. ಭಾರತೀಯ
> ವಿಜ್ಞಾನಿಗಳಾದ, ಡಾ. ನಾಸಿರ್ ಅಹ್ಮೆದ್, ಡಾ. ಡಿ. ಎಲ್. ಸೇನ್, ಡಾ. ಸಿ. ನಂಜುಂಡಯ್ಯ,
> ಹರಿರಾವ್ ನವಕಲ್, ಡಾ. ವಿ. ಸಂತಾನಂ, ಶ್ರೀ. ಮಾರಪ್ಪನ್, ಡಾ. ಕಾತರ್ಕಿ,
> ಶ್ರೀ.ಕೃಷ್ಣಮೂರ್ತಿ ಮುಂತಾದ ಹಲವಾರು ಸಂಶೋಧಕರ ಸಹಯೋಗದಿಂದ, ಭಾರತದ ಹತ್ತಿ ಬೆಳೆ ಒಂದು
> ಮಹತ್ತರ ಹಂತವನ್ನು ಗಳಿಸಿತು. ೧೯೭೦ ರ ಹೊತ್ತಿಗೆ, ಗುಜರಾತ್ ಕೃಷಿ ವಿಶ್ವವಿದ್ಯಾಲಯದ
> ಸಿ.ಟಿ. ಪಟೇಲ್, ಭಾರತದ ಗುಜರಾತ್-೬೭ ತಳಿ ಮತ್ತು ಅಮೇರಿಕದ ನೆಕ್ಟರಿಲೆಸ್ ತಳಿಗಳ
> ಸಂಯೋಗದಿಂದ ಹೈಬ್ರಿಡ್ -೪ ಹತ್ತಿಯನ್ನು ತಯಾರಿಸಿದರು. ವಿಶ್ವದ ಪ್ರಥಮ ಹೈಬ್ರಿಡ್
> ಹತ್ತಿಗಳಲ್ಲಿ ಒಂದಾದ ಈ ಹತ್ತಿ-ತಳಿ, ಪ್ರತಿ ಹೆಕ್ಟೇರ್ಗೆ ೮೦ ರಿಂದ ೧೦೦ ಕಿ.ಗ್ರಾಂ. ಕಪಾಸ್
> ಇಳುವರಿಕೊಟ್ಟು ಒಂದು ಹೊಸ ಅಧ್ಯಾಯವನ್ನೇ ಸ್ಥಾಪಿಸಿತು. ಈ ಅನುಸಂಧಾನದಿಂದ ಪ್ರೇರಿತರಾಗಿ,
> ಧಾರವಾಡದ ಡಾ. ಕಾತರ್ಕಿಯವರು, ವರಲಕ್ಷ್ಮಿ ಹಾಗೂ ಡಿ. ಸಿ. ಎಚ್ -೩೨, ಎಂಬ ಹೈಬ್ರಿಡ್ ಗಳಿಗೆ
> ಜನ್ಮಕೊಟ್ಟರು. ಇಂದು ನಮ್ಮ ಹತ್ತಿ ಸಮುದಾಯದಲ್ಲಿ, ಸುಮಾರು ೮೭ ಹೈಬ್ರಿಡ್ ಗಳು
> ಉಪಯೋಗದಲ್ಲಿವೆ.
>
> ನವ್ಯ ಭಾರತದಲ್ಲಿ ಹತ್ತಿ ಸಂಪಾದಿಸಿ
> ವಲಯಗಳು ವಲಯದ ಮುಖ್ಯ ರಾಜ್ಯಗಳು ಸಾಗುವಳಿ ಪ್ರದೇಶ (%) ಮಿಲಿಯನ್ ಹೆಕ್ಟೇರುಗಳು ಪ್ರತಿ
> ಹೆಕ್ಟೇರಿಗೆ ಉತ್ಪಾದನೆ (ಕಿಲೊಗ್ರಾಂ)
> ಉತ್ತರ ಪಂಜಾಬ್, ಹರ್ಯಾಣ, ರಾಜಾಸ್ಥಾನ, ಉತ್ತರ ಪ್ರದೇಶ ೨೪% ೨.೨೧ ೨೨೫
> ಮಧ್ಯ ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶ ೫೭% ೫.೨೫ ೨೮೫
> ದಕ್ಷಿಣ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ೧೯% ೧.೫೦ ೩೯೫
> ಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರ ಕಾಲದಲ್ಲಿ ICARನ ಮಹಾನಿರ್ದೇಶಕರಾದ
> ಎಮ್.ಎಸ್.ಸ್ವಾಮಿನಾಥನ್ರವರ ಮುಂದಾಳತ್ವದಲ್ಲಿ ಉಂಟಾದ ಹಸಿರು ಕ್ರಾಂತಿಯ ಪ್ರಭಾವ ಹತ್ತಿ
> ಬೆಳೆಗೂ ತಟ್ಟಿತು. ಇದರ ಫಲವಾಗಿ, ದೇಶದ ಬಟ್ಟೆ ಸಮಸ್ಯೆಗಳು ಉತ್ತಮಗೊಂಡು, ಹತ್ತಿಯನ್ನು
> ರಫ್ತುಮಾಡುವ ಪರಿಸ್ಥಿತಿ ಬಂದಿತು. ಸಂಶೋಧನೆಯಿಂದ ಭಾರತಕ್ಕೆ ತಕ್ಕಂತ ತಳಿಗಳ ದೊರೆಯುವಿಕೆ
> ಇದಕ್ಕೆ ಒಂದು ಕಾರಣ. ಭಾರತ ಸರ್ಕಾರ ೨೦೦೨ ರಲ್ಲಿ ರೈತರಿಗೆ ಉಪಯೋಗಿಸಲು ಬಾಲ್ ವರ್ಮ್ನಿಂದ
> ರಕ್ಷಿತ ಬೀಟಿ ಹತ್ತಿಯ ೩ ನಮೂನೆಗಳನ್ನು ಬಿಡುಗಡೆಮಾಡಿತ್ತು. ಆಗ ಇದ್ದದ್ದು, ಒಂದು ಕಂಪೆನಿ
> ಮಾತ್ರ. ಇಂದು, ಸುಮಾರು ೪ ಬೀಜಕಂಪೆನಿಗಳು ಮುಂದೆಬಂದು, ೨೦ ಬೀ.ಟಿ ಹತ್ತಿಯ ಉತ್ತಮ
> ಬೀಜಗಳನ್ನು ಸರಬರಾಜುಮಾಡುತ್ತಿವೆ. ಈಗ ಭಾರತದ ಬಯೋಟೆಕ್ ಹತ್ತಿ ಬೆಳೆಯ ಪ್ರಮಾಣ-೧೫.೬ %.
>
> ಉಲ್ಲೇಖಗಳು ಸಂಪಾದಿಸಿ
>
> ↑ 'National Cotton Council, (provides entire cotton data)
> ↑ " Evolutionary Studies in World Cottons,"- Santanam V,Huchinson J.B,
> 1974 and " Handbook of Cottons in India," (1999), Sundaram. V et al.
> ↑ 'My_Spin_Lab'-By_Holalkere_Rangarao_Laxmivenkatesh.pdf'-೨೦೦೫
> ಇತರ ಆಧಾರಗಳು ಸಂಪಾದಿಸಿ
>
> A Seminar on 'How to improve Quality of Indian Textiles to meet
> International Standards.'IFS/CIRCOT, Feb,20, 1999.
> Seed Industry and Cotton Production-Shri. B. R. Barwale, Chairman, MAHYCO,
> Silver Jubilee Lecture series, ISCI Publication. July, 28, 2001.
> Present status of the Indian Cottons and strategies for improvement,
> Lecture by Shri.M.B.Lal, Adviser/ former CMD/ TMC Mission, CCI, Mumbai-
> Nov, 23, 2001. ISCI, Journal, Mumbai.
> Indian Cotton Trade-Past Present and Future,Silver Jubilee Lecture Series,
> ISCI Publication, April, 26, 2002.
> 'My Spin Lab', A book by, Shri. Holalkere Rangarao Laxmivenkatesh.
> Published in 2005.
> Referral Laboratory on Cotton Textiles at CIRCOT. An Insight into the
> Additional facilities. CIRCOT Publication.(Under NATP Sponsered Programme)
> Cotton Production, Technology Mission, and new plans for paradigm shift,
> ISCI Joural, 2006.
> Quality profile of the cottons- 2006, Director, CIRCOT.
> " Breeding for Fibre Quality Improvement of Cotton."-R. Krishnamourthy,
> Res Dir; Rasi seeds (P)Ltd ; Salem,T.N. Dr. V. sundaram Lecture Series,
> ISCI Publication, June, 16, 2007.
> ಹೊರಗಿನ ಸಂಪರ್ಕಗಳು
>
> ಇನ್ನೊಂದು ಭಾಷೆಯಲ್ಲಿ ಓದು
> Last edited ೧ year ago by Sanjeev bot
> ವಿಕಿಪೀಡಿಯ® ಮೊಬೈಲ್ಡೆಸ್ಕ್‌ಟಾಪ್
> ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 3.0" ರಡಿ ಲಭ್ಯವಿದೆ.
> ಗೋಪ್ಯತೆ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAKHYmYknKhiW-iepzKxqzQFN8wczA1N918aX8NtCdeyAdqyG3A%40mail.gmail.com
> <https://groups.google.com/d/msgid/socialsciencestf/CAKHYmYknKhiW-iepzKxqzQFN8wczA1N918aX8NtCdeyAdqyG3A%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz6fLt8NtamrTWFgiNJhb1%2BjyPAcpN9Q2mbA%2BFA%2BqOmZMQ%40mail.gmail.com.
For more options, visit https://groups.google.com/d/optout.

Reply via email to