Sir..idu bahuteka shikshakara maatu.. adre.. Kivuda.. Mooka.. Buddhi
maandya sarkaragalige.. Eshtu sala ..enu helidaru.... Ashte..?!
On Sep 22, 2016 8:02 PM, "Pralhada vssudeva pattar" <
pallukavipat...@gmail.com> wrote:

> ಶಿಕ್ಷಕರ ವರ್ಗಾವಣೆ ನೀತಿಯಲ್ಲಿರುವ ಮಹಾ ಮೋಸ
> ಸಾರ್ವಜನಿಕ ಶಿಕ್ಷಣ ಇಲಾಖೆಯು 2007 ರಲ್ಲಿ ಶಿಕ್ಷಕರಿಗಾಗಿಯೆ ವರ್ಗಾವಣೆ ಕಾಯ್ದೆಯನ್ನು
> ಜಾರಿಗೆ ತಂದಿತು.ಈ ನಿಯಮದ ಪ್ರಕಾರ ಕೊರಿಕೆ ವರ್ಗಾವಣೆ ಬಯಸುವ ಶಿಕ್ಷಕರಿಗೆ ಇದು
> ಪೂರಕವಾಗಿರದೇ ಹೆಚ್ಚು ಮಾರಕವಾಗಿಯೇ ಪರಿಣಾಮ ಬಿರಿದೆ .ಈ ನೀತಿಯನ್ನು ಶಿಕ್ಷಕರಿಗೆ
> ಅನುಕೂಲವಾಗುವಂತೆ ಆಮೂಲಾಗ್ರವಾಗಿ ಬದಲಾಯಿಸದೆ ,ಸರ್ಕಾರ ತನ್ನ ಅನುಕುಲಕ್ಕೆ ತಕ್ಕಂತೆ
> ಕಾಲಕಾಲಕ್ಕೆ ಚಿಕ್ಕ ಪುಟ್ಟ ಮಾರ್ಪಾಡು ಮಾಡುತ್ತಲೇ ಬರುತ್ತಿದೆ.ಸರ್ಕಾರದ ಆಡಳಿತಾತ್ಮಕ
> ಸಮಸ್ಯೆಗೆ ಶಿಕ್ಷಕರು ಬಲಿಪಶುಗಳಾಗುತ್ತಿದ್ದಾರೆ. ಗ್ರಾಮೀಣ ಭಾಗದ ಮದ್ಯಮ ಬಡ ಜನರೆ
> ಹೆಚ್ಚಾಗಿ ಶಿಕ್ಷಕ ವೃತ್ತಿ ಅರಸಿ ಆರಿಸಿಕೊಳ್ಳುವರು. ಕಾರಣಾಂತರಗಳಿಂದ ಮಾತೃವಿಭಾಗ
> ಬಿಟ್ಟು ಬೇರೆ ವಿಭಾಗಕ್ಕೆ ಅರ್ಜಿಹಾಕಿ ನಿರಂತರ ಶ್ರಮವಹಿಸಿ ಸಿ ಇ .ಟಿ .ಯಲ್ಲಿ ಹೆಚ್ಚಿನ
> ರ್ರ್ಯಾಂಕ್ ಗಳಿಸಿ ಆ ವಿಭಾಗದ ಯಾವೂದೋ ಒಂದು ಜಿಲ್ಲೆಗೆ ಆಯ್ಕೆ ಆಗುತ್ತಾರೆ . ಕಾಲಕ್ರಮೇಣ
> ತಮ್ಮ ತವರು ಜಿಲ್ಲೆಗೆ ವರ್ಗವಾಗಿ ಹೋಗಲು ಅಪೆಕ್ಷೇ ಪಟ್ಟಲ್ಲಿ, ಪ್ರಸ್ತುತ ವರ್ಗಾವಣೆ
> ನೀತಿ ಅನುಸಾರ ಬಹಳ ಕಷ್ಟಕರ. ಉದಾಹರಣೆ ಗುಲ್ಬರ್ಗಾ ವಿಭಾಗದ ಬೀದರ್ ಜಿಲ್ಲೆಯ ಓರ್ವ
> ಶಿಕ್ಷಕ ಮೈಸೂರು ವಿಭಾಗದ ಚಾಮರಾಜ ನಗರ ಜಿಲ್ಲೆಯ ಯಾವುದೋ ಒಂದು ಹಳ್ಳಿಯಲ್ಲಿ ವೃತ್ತಿ
> ಪ್ರಾರಂಭಿಸಿದಾಗ ವಯಸ್ಸು ಹೆಚ್ಚಾಗಿದ್ದು ,ಅವಿವಾಹಿತನಾಗಿದ್ದು ಅಥವಾ ಗೃಹಿಣಿಯನ್ನು ಮದುವೆ
> ಆದ ಪಕ್ಷದಲ್ಲಿ ಸೇವೆಯನ್ನು ಪೂರ್ತಿ ಅಲ್ಲೆ ಕಳೆಯಬೇಕಾಗಬಹುದು .
> ಪ್ರಸ್ತುತ ವರ್ಗಾವಣೆ ಅಧಿನಿಯಮದಲ್ಲಿ ಮುಖ್ಯವಾಗಿ ಪರಸ್ಪರ ವರ್ಗಾವಣೆ, ಮತ್ತು ಕೊರಿಕೆ
> ವರ್ಗಾವಣೆ ಎಂಬ ಎರಡು ವಿಧಗಳಿವೆ.ಪರಸ್ಪರ ವರ್ಗಾವಣೆ ಇಂದ ಇಲಾಖೆಗೆ ಯಾವುದೇ ತೊಂದರೆ
> ಯಾಗದು.ಇದರಲ್ಲಿ ಹುದ್ದೆ ಖಾಲಿ ಉಳಿಯುವ ಪ್ರಶ್ನೆ ಉದ್ಬವಿಸಲಾರದು.
> ಕೊರಿಕೆ ವರ್ಗಾವಣೆ ಅಡಿಯಲ್ಲಿ ಶಿಕ್ಷಕರಿಗೆ ಬಹಳಷ್ಟು ತಾರತಮ್ಯತೆ ಅನ್ಯಾಯಗಳಿವೆ.ಇದರಲ್ಲಿ
> ಆದ್ಯತೆ ಅನುಸಾರ (ಪ್ರೆಯಾರಿಟಿ ) ಮತ್ತು ಶೆಕಡಾವಾರು ಮಿತಿಗೆ ಒಳಪಟ್ಟು ವರ್ಗಾವಣೆಗೆ
> ಅವಕಾಶವಿದೆ. ಕೊರಿಕೆ ಮೇರೆಗೆ ಪ್ರೌಢ ಶಾಲೆ ಶಿಕ್ಷಕರು ವರ್ಗಗೊಳ್ಳಲು ಅಪೇಕ್ಷಿಸಿದಾಗ ,
> ಘಟಕದ ಒಳಗೆ ( ಜಿಲ್ಲೆ ಒಳಗೆ) ಶೇ 5% ಹಾಗೂ ಘಟಕದ ಹೊರಗೆ ( ಜಿಲ್ಲೆ ಹೊರಗೆ )ಶೇ 3%
> ಒಟ್ಟಾರೆ 8% ವರ್ಗಾವಣೆ ಮೀರಬಾರದು ಎಂಬ ನಿಯಮವಿದೆ. ( ಪರೋಕ್ಷವಾಗಿ ಇದು ಪರಸ್ಪರ
> ವರ್ಗಾವಣೆಯೇ ಆಗುತ್ತದೆ ಒಂದು ಜಿಲ್ಲೆ ತನ್ನಲ್ಲಿ ಭರ್ತಿ ಇರುವ ಹುದ್ದೆಗಳಲ್ಲಿ ಯಾವೂದೇ
> ವ್ಯತ್ಯಾಸವಾಗಲಾರದು ಶೇಕಡಾವಾರು ವರ್ಗಾವಣೆ ಅವೈಜ್ಞಾನಿಕವಾಗಿದೆ ) ಜಿಲ್ಲೆಯಲ್ಲಿ A,B,C
> ಎಂಬ ಮೂರು ಜೊನ್ ಗಳು ಮಾಡಿದ್ದು A ಜೊನ್ ನಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಒಂದು ವರ್ಷಕ್ಕೆ
> 1 ಪಾಯಿಂಟ್ ,B ಜೋನ್ ನಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ 1.5 ಪಾಯಿಂಟ್ ಮತ್ತು C ಜೊನ್
> ನಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ 2 ಪಾಯಿಂಟ್ ವೆಟೆಜ್ ನೀಡಲಾಗುತ್ತದೆ. ಪ್ರತಿ ವರ್ಷಕ್ಕೆ
> ಸಿಗುವ ವೆಟೆಜ್ ಪಾಯಿಂಟ್ ಆದರಿಸಿ ಶಿಕ್ಷಕರಿಗೆ ವರ್ಗಾವಣೆ ರ್್ಯಂಕ್ ಪಟ್ಟಿ ಸಿದ್ದಪಡಿ
> ಕ್ರಮವಾಗಿ ವರ್ಗಾವಣೆ ಮಾಡಲಾಗುವದು .
> ಶಿಕ್ಷಕರ ರ್ರಾಂಕ್ ಪಟ್ಟಿಯು 8 ರೀತಿಯ ಆದ್ಯತೆ ಅನುಸಾರ ಸಿದ್ದಪಡಿಸಿ , ಇದರ ಪ್ರಕಾರ
> ಕ್ರಮವಾಗಿ ಕೊರಿಕೆ ವರ್ಗಾವಣೆ ರ್ರಾಂಕ್ ಪಟ್ಟಿ ಸಿದ್ದಪಡಿಸಲಾಗಿತ್ತದೆ. ಇವು ಕ್ರಮವಾಗಿ
> 1 ಅತ್ಯಂತ ತೀರ್ವ ಕಾಯಿಲೆ ಪ್ರಕರಣಗಳು
> 2 ದೈಹಿಕ ಅಂಗವಿಕಲರು
> 3 ವಿದವೆ ಶಿಕ್ಷಕಿಯರು
> 4 ಸೈನಿಕ ಪ್ರಕರಣಗಳು
> 5 ವಿವಾಹಿತ ಶಿಕ್ಷಕ ,ಶಿಕ್ಷಕಿ ಪ್ರಕರಣಗಳು
> 6 ಇತರೆ ಶಿಕ್ಷಕಿಯರು
> 7 ಮನ್ನಣೆ ಪಡೆದ ರಾಜ್ಯ ಸರ್ಕಾರಿ ನೌಕರ ಸಂಘಗಳಿಗೆ ಚುನಾಯಿತ ಪ್ರತಿನಿಧಿಗಳು
> 8 ಇತರೆ ಶಿಕ್ಷಕ ಪ್ರಕರಣಗಳು ಪಟ್ಟಿ ಮಾಡಲಾಗಿದೆ.
> ಹೀಗೆ ಎಂಟು ವಿಭಾಗ ಗಳ ಅಡಿಯಲ್ಲಿ ರ್ರಾಂಕ್ ನಿಡಿ ಕ್ರಮವಾಗಿ ವರ್ಗಾವಣೆ ಮಾಡಲಾಗುವದು .
> ಗ್ರೆಡ್ 2 ಸಹ ಶಿಕ್ಷಕರನ್ನು ವಿಷಯವಾರು ಮಿಸಲಾತಿ ನೀಡದೆ ಕೊರಿಕೆ ವರ್ಗಾವಣೆ ಸಲ್ಲಿಸಿದ
> ಎಲ್ಲರನ್ನೂ ಸಾಮೂಹಿಕವಾಗಿ ಜೆಷ್ಟತಾ ಪಟ್ಟಿ ಸಿದ್ದಪಡಿಸಿ ಒಟ್ಟಾರೆ ವರ್ಗಾವಣೆಯ ಮಿತಿಗೆ
> ಒಳಪಡಿಸಲಾಗಿದೆ.ಇದು ಅವೈಜ್ಞಾನಿಕ ಮತ್ತು ತಾರತಮ್ಯ
> ಪರಸ್ಪರ ವರ್ಗಾವಣೆಗಳು ತೀವ್ರತರ ಖಾಯಿಲೆಯ ಪ್ರಕರಣಗಳು ಹಾಗೂ ಅಂಗವಿಕಲ ಪ್ರಕರಣಗಳು,ವಿಧವಾ
> ಶಿಕ್ಷಕಿಯರ ಪ್ರಕರಣಗಳು,ಸೈನಿಕ ಪ್ರಕರಣಗಳು, ಮಾನ್ಯತೆ ಪಡೆದ ಶಿಕ್ಷಕರ ಸಂಘದ ಚುನಾಯಿತ
> ಪ್ರತಿನಿಧಿಗಳು ವರ್ಗಾವಣೆಗಳನ್ನು ಹೊರತುಪಡಿಸಿ ಒಟ್ಟು ಕೋರಿಕೆ ಮೇರೆಗಿನ ಮತ್ತು ಸಾರ್ವಜನಿಕ
> ಹಿತಾಸಕ್ತಿಯ ವರ್ಗಾವಣೆಗಳ ಸಂಖ್ಯೆ ಆಯಾ ಜೇಷ್ಠತಾ ಘಟಕದ ಕೇಡರ್ನಲ್ಲಿ ಮಂಜೂರಾದ ಶಿಕ್ಷಕರ
> ಹುದ್ದೆಗಳ ಶೇ 5% ರಷ್ಟು ಹಾಗೂ ಅಂತರ್ ಘಟಕೀಯ ಜೇಷ್ಠತಾ ವರ್ಗಾವಣೆಗಳ ಸಂದರ್ಭದಲ್ಲಿ ಶೇ 3%
> ರಷ್ಟನ್ನು ಒಟ್ಟಾರೆ ಶೇ 8% ರಷ್ಟುನ್ನು ಮೀರಬಾರದು ಎಂದು ನಿಯಮ ಸ್ಪಷ್ಟವಾಗಿ ಹೇಳುವದು .
> ವಿವಾಹಿತ ಶಿಕ್ಷಕ ಮತ್ತು ಶಿಕ್ಷಕಿ ಇರ್ವರು ನೌಕರ ಪ್ರಕರಣದಲ್ಲಿ ,ಇರ್ವರಲ್ಲಿ ಒರ್ವರು
> ಘಟಕದ ಹೊರಗೆ ಕರ್ತವ್ಯ ನಿರ್ವಹಿಸುತ್ತಿದ್ದು , ಪರಸ್ಪರ ವರ್ಗಾವಣೆ ಮೂಲಕ ಘಟಕದ ಒಳಗೆ
> ವರ್ಗವಾಗಿ ,ತದನಂತರ 3 ವರ್ಷದ ಬಳಿಕ ಮತ್ತೆ ಘಟಕದ ಒಳಗೆ ( ಜಿಲ್ಲೆ ) ಜೊನ್ ಮತ್ತು
> ಪ್ರಯಾರಿಟಿ ಜೆಷ್ಠತೆ ಆದರಿಸಿ ಸುಲಭವಾಗಿ ಮತ್ತೆ ವರ್ಗಾವಣೆ ಗೊಳ್ಳಲು ಸಾದ್ಯವಾಗಿದೆ.
> ಸೋಜಿಗ ಎಂದರೆ ಇತರೆ ಶಿಕ್ಷಕರು / ಅದರ್ ಮೆನ್ಸ್ ( ಅವಿವಾಹಿತರು ,ಅಥವಾ ಹೆಂಡತಿಯ ವಿಳಾಸ
> ಪತ್ರ ದಾಖಲೆ ನೀಡದವರು ) ಮಿಸಲಾತಿ ಅಡಿಯಲ್ಲಿ C ಜೋನ್ ನಲ್ಲಿ ಸೇವೆ ಸಲ್ಲಿಸುತ್ತಿರುವ
> ಶಿಕ್ಷಕರು ಘಟಕದ ಹೊರಗೆ ವರ್ಗಾವಣೆಗೊಳ್ಳಲು ಕನಿಷ್ಟ 15 ವರ್ಷ ಅಂದರೆ 30 ವೆಟೆಜ್
> ಬರಬೇಕು.ಜೆಷ್ಟತೆಯ ರ್ರಾಂಕ್ ಪಟ್ಟಿಯಲ್ಲಿ ಇವರು ಅತ್ಯಂತ ಕೆಳಗೆ ಇರುತ್ತಾರೆ.ಕೌನ್ಸಲಿಂಗ್
> ಗೆ ಇವರ ಹೆಸರು ಬರುವಷ್ಟರಲ್ಲಿ ವರ್ಗಾವಣೆಗೆ ನಿಗದಿ ಪಡಿಸಿದ ಶೇ 5 % ಕೊಟಾ ಮೂಗಿದು
> ಹೋಗಿರುತ್ತದೆ .ಸಾಮಾನ್ಯವಾಗಿ ಈ ಪ್ರಕರಣದಲ್ಲಿ ಕೊರಿಕೆ ವರ್ಗಾವಣೆ ಅರ್ಜಿಸಲ್ಲಿಸುವ
> ಶಿಕ್ಷಕರಿಗೆ ಸೇವಾವದಿ ಕೊನೆ ವರೆಗೂ ವರ್ಗಾವಣೆ ಭಾಗ್ಯ ಸಾಗಲಾರದು .
> 15 - 20 ವರ್ಷ ಒಂದು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ವಿಭಾಗದ ಹೊರಗೆ ವರ್ಗ ಗೊಳ್ಳುವ
> ಶಿಕ್ಷಕರಿಗೆ ವರ್ಗಾವಣೆ ಗೊಂಡ ವಿಭಾಗದ ಬಡ್ತಿ ಜೆಷ್ಠತೆಯಲ್ಲಿ ಕಿರಿಯವನಾಗುತ್ತಾನೆ.
> ಇದರಿಂದ ಸೇವಾಅವದಿಯಲ್ಲಿ ಈ ಶಿಕ್ಷಕರಿಗೆ ಬಡ್ತಿ ಎನ್ನುವದು ಸಿಗಲಾರದು.
> ಒಟ್ಟಾರೆಯಾಗಿ ಈ ವರ್ಗಾವಣೆ ನಿಯಮದ ಪ್ರಕಾರ ಕೊರಿಕೆ ವರ್ಗಾವಣೆಯ ಅಡಿಯಲ್ಲಿ ಶಿಕ್ಷಕರು
> ವರ್ಗಗೊಳ್ಳಬೇಕು ಎಂದರೆ ತಿರ್ವಕಾಯಿಲೆಗೆ ಒಳಪಡಬೇಕು ಇಲ್ಲ ಸರ್ಕಾರಿ ನೌಕರರನ್ನೇ
> ಮದುವೆಯಾಗಬೇಕು ,ಸಂಘ ಸಂಸ್ಥೆಗಳ ಪ್ರತಿನಿಧಿಯಾಗಬೇಕು.ವಿಧವೆಯಾಗಿರಬೇಕು.ಇಲ್ಲ ಮಾಹಿ
> ಸೈನಿಕನಾಗಿರಬೇಕು ಸುಖವಾಗಿ ಇರವವರು ಇನ್ನಷ್ಟು ಸಂತೋಷವಾಗಿ ಇರಲು ಪ್ರರಣೆ ನಿಡಿದಂತಿದೆ.
> ಸಾಮಾನ್ಯ ವರ್ಗ ಅಡಿ ವರ್ಗ ಬಯಸುವ  ಶಿಕ್ಷಕರು ಕಷ್ಟದಲ್ಲಿ ಇರುವ ಕುಟುಂಬ ವರ್ಗಕ್ಕಾಗಲಿ,
> ದೂರ ಇರುವ ಹೆಂಡತಿ ಮಕ್ಕಳ ಜೊತೆ ವಾಸವಾಗಲು ಸಾದ್ಯವೆ ಆಗುವದಿಲ್ಲ. ಗ್ರಾಮಿಣ ಭಾಗದಲ್ಲಿ
> ಸರ್ಕಾರಿ ಸೇವೆ ಮಾಡಲು ಬಂದ ಶಿಕ್ಷಕರ ಗೋಳು ಯಾರಿಗೂ ಕೇಳುತ್ತಿಲ್ಲ. ಸದೃಢ ಸಮಾಜ ನಿರ್ಮಾಣ
> ಮಾಡಲು ಹೊರಟ ಶಿಕ್ಷಕನ ವೈಯಕ್ತಿಕ ಬದುಕು ಮುರಾಬಟ್ಟಿಯಾಗಿ ಹೋಗಿದೆ ಶಿಕ್ಷಕನ ಸಂಕಷ್ಟ
> ಕೇಳುವವರು ಯಾರೂ ಇಲ್ಲವಾಗಿದೆ .ಕಾಲ ಕಾಲಕ್ಕೆ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳಲು
> ಸಾದ್ಯವಾಗದೇ ಶಿಕ್ಷಕ ವರ್ಗವನ್ನು ಸಂಕಷ್ಟಕ್ಕೆ ತಳ್ಳಿದೆ .ವಿಭಾಗವಾರು ಶಿಕ್ಷಕ ಹುದ್ದೆ
> ಆಯ್ಕೆ ಮಾಡಿಕೊಂಡು ಒಂದು ಪಕ್ಕದ ಜಿಲ್ಲೇಗೆ ಹೋಗಬೇಕೆಂದರೂ ನಿಯಮದ ಪ್ರಕಾರ ಸಾದ್ಯವಾಗಲಾರದು .
> ಸರ್ಕಾರದ ಇತರೆ ಯಾವ ಇಲಾಖೆಗೂ ಅನ್ವಯವಾಗದ ವರ್ಗಾವಣೆ ನೀತಿ ಶಿಕ್ಷಕರಿಗೆ ಮಾತ್ರ
> ವಿಶೇಷವಾಗಿ ಹೆರಿ ಬದುಕನ್ನು ಸಂಕಷ್ಟಕ್ಕೆ ದೂಡಲಾಗಿದೆ ಇದಕ್ಕೆ ಯಾರು ಹೊಣೆ ?ಒಂದೆಬಾರಿ
> ಶಿಕ್ಷಕರ ಇಚ್ಚೆ ಅನುಸಾರ ಸ್ಥಳ ನಿಯುಕ್ತಿ ಮಾಡಿ ಖಾಲಿ ಇರುವ ಹುದ್ದೆಗಳನ್ನು ಏಕ ಕಾಲದಲ್ಲಿ
> ನೇರ ನೇಮಕಾತಿ ಮಾಡಿಕೊಳ್ಳ ಬೇಕು ಅಥವಾ ಸದ್ಯ ಚಾಲ್ತಿ ಇರುವ ವರ್ಗಾವಣೆ ಅದಿನಿಯಮ ಬದಾಗಬೇಕು
> .ಅವಕಾಶ ಸಿಕ್ಕ ಶಿಕ್ಷಕರಿಗೆ ಮತ್ತೆ ವರ್ಗಾವಣೆ ಸಿಗುವದು ತಪ್ಪಿಸಬೇಕು .ವರ್ಗಾವಣೆ
> ಹಂಬಲಿಸುವ ಶಿಕ್ಷಕರಿಗೆ ಅನುಕುಲ ಮಾಡಿಕೊಡಬೇಕು. ಪರೋಕ್ಷವಾಗಿ ಪರಸ್ಪರ ವರ್ಗಾವಣೆಯನ್ನೆ
> ಹೋಲುವ ಶೇಕಡಾ ಪ್ರಮಾಣದ ವರ್ಗಾವಣೆ ನೀತಿ ಕೈಬಿಡಬೇಕು .ವಿಭಾಗದ ಒಳಗಿನ ಯಾವೂದಾದರೂ
> ಜಿಲ್ಲೆಗಳಿಗೆ ವರ್ಗವಾಗಲು ಅವಕಾಶ ನೀಡಬೇಕು .ರಾಜ್ಯಮಟ್ಟದಲ್ಲಿ ಶಿಕ್ಷಕರ ಆಯ್ಕೆ ಪಟಿಯ
> ರ್ರ್ಯಂಕ್ ಪಟ್ಟಿ ಆದರಿಸಿ ಏಕರೀತಿಯ ಬಡ್ತಿ ನೀತಿ ಅನುಸರಿಸಬೇಕು ಈ ಮೂಲಕ ಗ್ರಾಮೀಣ
> ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಪರೋಕ್ಷವಾಗಿ ಸರ್ಕಾರಿ ಶಾಲೆಗಳು
> ಮುಚ್ಚುವ ಸ್ತಿತಿ ತಲುಪಲು ಕಾರಣ ವಾದ ಶಿಕ್ಷಕರ ವರ್ಗಾವಣೆ ನೀತಿ ಬದಲಾಗಬೇಕು .
> *******
> ಅನಿಕೇತನ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CAOouN1xZ0YVajCxhbuEAOfGZRd7PR
> onLFT%3Dqh8TZB-YaW08Pfg%40mail.gmail.com
> <https://groups.google.com/d/msgid/socialsciencestf/CAOouN1xZ0YVajCxhbuEAOfGZRd7PRonLFT%3Dqh8TZB-YaW08Pfg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ 
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAJMrDd2kwzXt%2Bq99eBGF5-EzLi5eWHQro_KEzL%2BXm2hofxNMUw%40mail.gmail.com.
For more options, visit https://groups.google.com/d/optout.

Reply via email to