*ಇಂದಿನ "ಕನ್ನಡ ಪ್ರಭ" ಪತ್ರಿಕೆಯಲ್ಲಿ ಪ್ರಕಟವಾದ ಡಾ. ಸಿ. ಎಸ್. ದ್ವಾರಕಾನಾಥ್ ಅವರ "ಮೂಕನಾಯಕ" ಅಂಕಣ..*
**"ಮಲದ ಗುಂಡಿಗಳಲ್ಲಿ ಬಿದ್ದು ಸತ್ತವರ ಬದುಕು"** * ಕಳೆದ ವಾರ ಬೆಂಗಳೂರಿನ ಅಪಾರ್ಟಮೆಂಟ್ ವೊಂದರ ಮಲದ ಗುಂಡಿಯಲ್ಲಿ ಇನ್ನೆರಡು ಜೀವಗಳು ಜೀವಕಳಕೊಂಡಿವೆ..!? ಶಿವಾಜಿನಗರದಲ್ಲಿ ಆರೆಸೆಸ್ ಕಾರ್ಯಕರ್ತರೊಬ್ಬರ ಕೊಲೆಯ ಅಬ್ಬರದಲ್ಲಿ ಈ ಸಾವುಗಳನ್ನು ಯಾರೂ ಗಮನಿಸಲಿಲ್ಲ. ಉಡುಪಿಯಲ್ಲಿ ನಡೆದಾಡಿದ ದಲಿತದಮನಿತರ ಹೆಜ್ಜೆ ಗುರುತುಗಳನ್ನೂ ಸ್ವಚ್ಚಮಾಡಲು ಹೊರಟ "ಕನಕ ನಡೆ" ಯವರಿಗೂ ಈ ಸಾವುಗಳು ಸಹಜವಾಗಿಯೇ ಕಾಣಲಿಲ್ಲ. ದಲಿತರ ಕೇರಿಗಳಲ್ಲಿ ಸುತ್ತಾಡಿ ಅವರಿಗೆ "ವೈಷ್ಣವ ದೀಕ್ಷೆ" ಕೊಟ್ಟು ದಲಿತರನ್ನು ಸ್ವಚ್ಛ ಮಾಡಲು ಹೊರಟ ಪೇಜಾವರಶ್ರೀ ಗಳ ದಿವ್ಯದೃಷ್ಟಿಗೂ ಈ ಸಾವುಗಳು ಗೋಚರಿಸಲಿಲ್ಲ, ಪೊರಕೆಯನ್ನೇ ಚುನಾವಣೆ ಚಿನ್ಹೆ ಮಾಡಿಕೊಂಡು ಅದನ್ನೇ ತಮ್ಮ ತಲೆಯಮೇಲಿನ ಟೋಪಿ ಗಳ ಮೇಲೆ ಮುದ್ರಿಸಿಕೊಂಡು ಛಾನೆಲ್ ಕ್ಯಾಮರಾಗಳ ಮುಂದೆ ಸದಾ ಕಾಣಿಸಿಕೊಳ್ಳುವ AAP ಯವರಿಗೂ ಈ ಸಾವುಗಳು ಕಾಣಲಿಲ್ಲ, ದಲಿತರ ಬಗ್ಗೆ ಸದಾ ಕಣ್ಣಲ್ಲಿ ನೀರಿಟ್ಟುಕೊಂಡೇ ಓಡಾಡುವ ದೇವೇಗೌಡ, ಕುಮಾರಸ್ವಾಮಿಯವರ ಪಕ್ಷಕ್ಕೂ ಇದು ಕಾಣಲಿಲ್ಲ, ತಮ್ಮದು ಅಂಬೇಡ್ಕರ್ ಕನಸಿದ, ಕಾನ್ಸಿರಾಂರು ಕಟ್ಟಿದ ಪಕ್ಷ ಎಂದು ಹೇಳಿಕೊಳ್ಳುವ BSP ಯವರೂ ಇದಕ್ಕೆ ಸ್ಪಂದಿಸಲಿಲ್ಲ. ಇನ್ನು ಕಾಂಗ್ರೆಸ್ ಛತ್ರಿಯಡಿ ತಣ್ಣಗೆ ಸುಖಿಸುತ್ತಿರುವ ದಲಿತ ಸಂಘಟನೆಗಳ ನಾಯಕರಿಗೆ, ಕಾಮ್ರೇಡುಗಳಿಗೆ ಈ ಜುಜುಬಿ ಸಾವುಗಳು ಹೇಗೆ ಕಾಣಿಸಿಯಾವು... ಇನ್ನು ಸ್ವಚ್ಚ ಬಾರತದ ಮೋದಿ ಭಕ್ತರು ವೀಕೆಂಡಿನಲ್ಲಿ ಕ್ರಿಕೆಟ್ ಬ್ಯಾಟ್ ನಂತೆ ಕೈಯಲ್ಲಿ ಪೊರಕೆ ಹಿಡಿದು ಗವಾಸ್ಕರ್, ತೆಂಡೂಲ್ಕರರು ಪಿಚ್ ಗೆ ಬರುವಂತೆ ಬೀದಿಗೆ ಬಂದು ಪೋಟೋ ತೆಗೆಸಿಕೊಳ್ಳುವವರಿಗೆ ಮಲದ ಗುಂಡಿಯ ಈ ಸಾವುಗಳ ಸುದ್ದಿ ಸುದ್ದಿಯೇ ಆಗಿರಲ್ಲ.! ಮೋದಿಯವರೇ ಹಿಂದೊಮ್ಮೆ ಹೇಳಿದಂತೆ ಈ ಮಲ ಬಳಿಯುವ ಕಾರ್ಯ ಮೋಕ್ಷಕ್ಕೆ ದಾರಿಯಂತೆ! ಸದಾ ದಲಿತರ, ದಮನಿತರ ಹೆಸರಲ್ಲೇ ರಾಜಕಾರಣ ಮಾಡುವ, ರಾಜ್ಯದ ಆಡಳಿತದ ಚುಕ್ಕಾಣೆ ಹಿಡಿದಿರುವ "ಅಹಿಂದ" ಮುಖ್ಯಮಂತ್ರಿ ಯ ಪಕ್ಷ ಕಾಂಗ್ರೆಸ್ಸಿನ "ದಲಿತ ಕಾಳಜಿ" ಮುಂದೆ ನೋಡಿ..!? ಮೊನ್ನೆ ಕಕ್ಕಸು ಗುಂಡಿಯಲ್ಲಿ ಸತ್ತುಬಿದ್ದ ಒಬ್ಬಾತನ ಹೆಸರು ವೆಂಕಟೇಶ, ಭೋವಿ ಜನಾಂಗಕ್ಕೆ ಸೇರಿದ ಈತನಿಗೆ 24 ವರ್ಷ ವಯಸ್ಸು, ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ, ಈತನ ಪತ್ನಿ ಈಗ ವಿಧವೆ, ಮಧುಗಿರಿಯ ಈತನ ಮುರುಕಲು ನಿವಾಸ ಇಂದು ಸಾವಿನ ಮನೆ, ಮೊದಲು ಮಲದ ಗುಂಡಿಗೆ ಇಳಿದ ವೆಂಕಟೇಶನ ಕೂಗಾಟ ಕಂಡು ಆತನನ್ನು ಉಳಿಸಲು ಹೋದ ಮಂಜುನಾಥ ಆಯತಪ್ಪಿ ಮಲದ ಗುಂಡಿಗೆ ಬಿದ್ದು ಅಸುನೀಗಿದವನು ಈತ ಕೆ.ಆರ್. ಪೇಟೆಯವನು, ಈತನಿಗೆ ಅತ್ಯಂತ ವಯಸ್ಸಾದ ಅಪ್ಪಾಅಮ್ಮಂದಿರಿದ್ದಾರೆ.. ಅಪ್ಪನಿಗೆ ಕಣ್ಣು ಕಾಣಲ್ಲ, ತಮಗೆ ಅನ್ನ ಉಣ್ಣಿಸಲು ಮಗ ಏನು ಕೆಲಸ ಮಾಡುತ್ತಾನೆಂಬುದೇ ಈ ತಾಯಿತಂದೆಯರಿಗೆ ಅರಿವಿಲ್ಲ! ಇನ್ನೂ ಆಶ್ಚರ್ಯವೆಂದರೆ ಇವರು ಲಿಂಗಾಯಿತ ಕೋಮಿನವರು! ಕಿತ್ತುತಿನ್ನುವ ಬಡತನ, ಹೊಟ್ಟೆಪಾಡಿಗಾಗಿ ಯಾವ ಕೆಲಸವನ್ನಾದರೂ ಮಾಡಿಸಿಬಿಡುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಮಂಜುನಾಥನ ತಂದೆ ತನ್ನ ಮಗನನ್ನು ಶ್ರವಣಕುಮಾರ ಎನ್ನುತ್ತಾ ನಾಳಿನ ತಮ್ಮ ಸ್ಥಿತಿ ನೆನೆದು ಮಗುವಂತೆ ಅಳತೊಡಗಿದರು. ಇನ್ನೊಂದು ವಿಚಿತ್ರ ನೋಡಿ ಸತ್ತ ಈ ಮಂಜುನಾಥ ಯಡಿಯೂರಪ್ಪನವರ ಬಂದುವೆಂದು ಅಲ್ಲಿನವರು ಮಾತಾಡುತಿದ್ದರು. ಅದು ಹೇಗೆ ಸಾಧ್ಯ? ಇಂತ ಮಲದ ಗುಂಡಿಯಲ್ಲಿ ಸಾಯುವವರು ಅದು ಹೇಗೆ ಯಡಿಯೂರಪ್ಪನವರ ಬಂದುವಾಗಲು ಸಾದ್ಯ..? ಸಹಜವಾಗಿ ಸಫಾಯಿ ಕೆಲಸವನ್ನು ಕುಲವೃತ್ತಿಯನ್ನಾಗಿ ಒಪ್ಪಿಕೊಂಡು ಮಾಡುವವರು ಭಂಗಿಗಳು, ಈ 'ಪವಿತ್ರ' ಕೆಲಸ ಮಾಡಲು ಇವರಿಗೆ ಒಪ್ಪಿಸಿದ್ದು ಸಭ್ಯ ಹಿಂದೂ ಸಮಾಜ. ಆದರೆ ಕಾಲಕ್ರಮದಲ್ಲಿ ಹಸಿವಿನ ಅನಿವಾರ್ಯತೆಯುಂಟಾಗಿ ಈ ವೃತ್ತಿಗೆ ಇಳಿದಿದ್ದಂತೂ ಇತರೆ ಕೆಲ ತಳ ಸಮುದಾಯಗಳಷ್ಟೆ. ಇಂದು ಲಭ್ಯವಿರುವ ಅಂಕಿಅಂಶಗಳ ಪ್ರಕಾರ ದಲಿತರನ್ನು ಬಿಟ್ಟರೆ ಈ ಕೆಲಸ ಮಾಡುವವರು ಮುಸಲ್ಮಾನರು! ಪವಿತ್ರ ಉಡುಪಿಯನ್ನು ಇಂದಿಗೂ ಸಫಾಯಿ ಮಾಡುವವರು ಇಲ್ಲಿನ ಕೊರಗರು, ಮೂಲತಃ ಇವರು ಕಾನನ ವಾಸಿಗಳು, ಬಿದಿರು, ಬೊಂಬು ತಂದು ಅವುಗಳಲ್ಲಿ ಮಂಕರಿ, ಬುಟ್ಟಿ ಮುಂತಾಗಿ ಮಾಡಿ ಪಟ್ಟಣದಲ್ಲಿ ಮಾರಿ ಹೊಟ್ಟೆಹೊರೆಯುವವರು. ಇವರನ್ನು ಸರ್ಕಾರ ಕಾಡಿನಿಂದ ಹೊರಹಾಕಿದಾಗ ಇವರು ಅನಿವಾರ್ಯವಾಗಿ ಸಪಾಯಿ ಕರ್ಮಚಾರಿಗಳಾದವರು. ಇವರಿಗೆ ಈ ವೃತ್ತಿಯ ಕಸಬುದಾರಿಕೆ ಗೊತ್ತಿಲ್ಲ ಈ ಕಾರಣಕ್ಕೆ ಯಾವ ಎಚ್ಚರಿಕೆಗಳನ್ನೂ ಗಮನಿಸದೆ ಸಪಾಯಿ ಕೆಲಸಮಾಡಿ ಆರೋಗ್ಯ ಕೆಡೆಸಿಕೊಂಡ ಪರಿಣಾಮ ಇಂದು ಕೊರಗ ಸಮುದಾಯವೇ ನಶಿಸಿ ಹೋಗುತ್ತಿದೆ! ಮಂಗಳೂರಿನ ಹೋಟೆಲೊಂದರ ದೊಡ್ಡ ಮಲದ ಗುಂಡಿಗೆ ಬಿದ್ದು ಮಲದಲ್ಲಿ ಮುಳುಗಿ ಸತ್ತ ಕಿಟ್ಟ ಕೊರಗ ಎಂಬುವನ ದಾರುಣ ಘಟನಾವಳಿಯನ್ನು ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆದಿದ್ದೆ. ಪುಡುವಿನ ಮಟ್ಟು ಎಂಬ ಗ್ರಾಮದ ಸ್ಟ್ಯಾನ್ಲಿ ಮತ್ತು ಬೋಜ ಎಂಬ ನಗರಪಾಲಿಕೆಯ ಹೊರಗುತ್ತಿಗೆ ಸಪಾಯಿ ಕರ್ಮಚಾರಿಗಳು ಮಲದ ಗುಂಡಿಯಲ್ಲಿ ಸತ್ತಾಗ ಮಂಗಳೂರು ನಗರಪಾಲಿಕೆ "ನಮ್ಮ ಪಾಲಿಕೆಯ ಖಾಯಂ ಕಾರ್ಮಿಕರು ಹೊರತುಪಡಿಸಿ ಬೇರೆಯವರು ಸತ್ತರೆ ನಾವು ಜವಾಬ್ದಾರರಲ್ಲ.." ಎಂದು ಬೇಜವಾಬ್ದಾರಿಯಿಂದ ಉತ್ತರಿಸಿತು. ಅದೇ ರೀತಿ ಕಕ್ಕಸ್ಸು ಗುಂಡಿಯಲ್ಲೇ ಅಸ್ವಸ್ಥತೆ ಹೊಂದಿ ಬದುಕುಳಿದು ಬಂದ ಪದ್ಮನಾಭ ಎನ್ನುವ ಯುಜಿಡಿ ಕಾರ್ಮಿಕನ ಹೃದಯಬೇನೆ ಚಿಕಿತ್ಸೆಗೂ ನಗರಪಾಲಿಕೆ ಬಿಡಿಗಾಸೂ ನೀಡಲಿಲ್ಲ! ನಾವು ಬಹಳ ಹಿಂದಕ್ಕೆ ಹೋಗುವ ಅವಶ್ಯಕತೆಯಿಲ್ಲ 'ದಲಿತ ಕಾಳಜಿ'ಯ ಈ ಸರ್ಕಾರ ಬಂದ ಮೇಲಷ್ಟೆ ಈ ಮಲದ ಗುಂಡಿಯ ಸಾವುಗಳೂ ಹೆಚ್ಚಾಗಿರುವ ಕಾರಣಗಳೇನಿರಬಹುದು.? ಕಳೆದ ವರ್ಷ ಸಮಾಜ ಕಲ್ಯಾಣ ಸಚಿವರ ಮನೆ ಎದುರಲ್ಲೇ ಎರಡು ಸಾವುಗಳಾದವು! ದುರಂತವೆಂದರೆ ರಾಜ್ಯ ವಿಜಿಲೆನ್ಸ್ ಕಮಿಟಿಯ ಅದ್ಯಕ್ಷರೇ ಸಚಿವರಾಗಿರುವುದು!! ಇದು ಅವರಿಗೆ ಗೊತ್ತೋ ಇಲ್ಲವೋ ಗೊತ್ತಿಲ್ಲ! ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಬೆಂಗಳೂರಿನಲ್ಲಿಯೇ ಸತ್ತವರ ಸಂಖ್ಯೆ 18, ಇನ್ನು ರಾಜ್ಯಾದ್ಯಂತ ಈ ಅವಧಿಯಲ್ಲೇ ಸತ್ತವರು 49 ಮಂದಿ, ಇವರ ಸಾವುಗಳಿಗೆ ಪೋಲಿಸ್ FIR ಸಲ್ಲಿಸಿದ್ದಾರೆ ಆದರೆ FIR ಹಾಕದವರನ್ನು ಸೇರಿಸಿದರೆ ಈ ಸಂಖ್ಯೆ 53ಕ್ಕೆ ಏರುತ್ತದೆ! ಸಫಾಯಿ ಕರ್ಮಚಾರಿಗಳೊಂದಿಗೆ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಪ್ರೊ.ರಾಜೇಂದ್ರ, ಓಬಳೇಶ್, ವೆಂಕಟೇಶ್, ಪುಷ್ಪಲತ ಇವರನ್ನು ಮಾತಾಡಿಸಿದಾಗ ದಂಗು ಬಡಿಯುವಂತಹ ವಾತ್ಸವಗಳನ್ನು ನಮ್ಮ ಮುಂದೆ ತೆರೆದಿಟ್ಟರು.. 2011 ರ ಸಮೀಕ್ಷೆ ಪ್ರಕಾರ ಇಡೀ ದೇಶದಲ್ಲಿ 1ಲಕ್ಷ 80,000ಸಾವಿರ ಸಫಾಯಿ ಕಾರ್ಮಿಕರಿದ್ದಾರೆ ಅವರಲ್ಲಿ 15,750 ಮಂದಿ ಕರ್ಣಾಟಕದಲ್ಲಿದ್ದಾರೆ, ಕೇವಲ ತುಮಕೂರಿನಲ್ಲೇ 3300 ಮಂದಿ ಇದಾರೆ. ಇದನ್ನು ಪುನರ್ ಪರಿಶೀಲಿಸುತ್ತೇವೆಂದು ಹೊರಟ ಕರ್ಣಾಟಕ ಸರ್ಕಾರ ಪಂಚಾಯಿತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಗಳಿಗೆ ವಹಿಸಿ ಸಫಾಯಿ ಕರ್ಮಚಾರಿಗಳೊಂದಿಗೆ ಕೂಡಿಯೇ ಈ ಪರಿಶೀಲನೆ ಮಾಡಬೇಕೆಂದು ಶರತ್ತು ವಿಧಿಸಿತು ಆದರೆ ಈ ಯಾವುದನ್ನೂ ಪರಿಗಣಿಸದ ಈ ಇಲಾಖೆಗಳು ಕಾಟಾಚಾರಕ್ಕೆ ಇವರ ಅಂಕಿಸಂಖ್ಯೆಗಳನ್ನು 15750 ರಿಂದ 477ಕ್ಕೆ ಇಳಿಸಿ ತೃಪ್ತಿಪಟ್ಟುಕೊಂಡವಷ್ಟೆ.!? "Employment of manual scavengers and construction of dry latrines (prohibition) act 1993" ಈ ಕಾಯಿದೆ ಜಾರಿಗೆ ಬಂದು ಇಪ್ಪತ್ತಮೂರು ವರ್ಷ ಕಳೆದಿದೆ ಆದರೆ ಇದನ್ನು ಸರಿಯಾಗಿ ಅನುಷ್ಟಾನಕ್ಕೆ ತರಲು ಯಾವುದೇ ರಾಜ್ಯ ಸರ್ಕಾರಕ್ಕೂ ಕೇಂದ್ರ ಸರ್ಕಾರಕ್ಕೂಸಾದ್ಯವಾಗುತ್ತಿಲ್ಲ ಯಾಕೆ? ಈ ಕಾಯಿದೆ ಪ್ರಕಾರ ಒಣ ಶೌಜಾಲಯಗಳನ್ನು, ಬಯಲು ಶೌಚಾಲಯಗಳನ್ನು, ಅಕ್ರಮವಾಗಿ ಟಾಯ್ಲೆಟ್ ಪೈಪುಗಳನ್ನು ಚರಂಡಿಗೆ ಸೇರಿಸಿರುವುದನ್ನೂ ಈ ಕಾಯಿದೆ ಬಂದ ಮೇಲೆ 90 ದಿನಗಳೊಳಗೆ ಒಡೆದು ಹಾಕಬೇಕಿತ್ತು , ಆದರೆ ಇದ್ಯಾವುದೂ ಈವರೆಗೂ ಆಗಲೇಯಿಲ್ಲ. ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಜಿಲ್ಲಾದಿಕಾರಿಗಳ ನೇತೃತ್ವದಲ್ಲಿ ವಿಜಿಲೆಂಟ್ ಕಮಿಟಿಗಳನ್ನು ನೇಮಕ ಮಾಡಬೇಕಿತ್ತು ಆದರೆ ಈವರೆಗೂ ಇದೂ ಆಗಿಲ್ಲ. ಇಷ್ಟು ಸಾವುಗಳಾದ ಮೇಲೂ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಭದ್ದತೆಯನ್ನು ಕರ್ನಾಟಕ ಸರ್ಕಾರವಾದರೂ ಯಾಕೆ ತೋರಿಲ್ಲ.? ಹಿಂದೆ 1974 ರಲ್ಲಿ ದೇವರಾಜ ಅರಸುರವರು ಮುಖ್ಯಮಂತ್ರಿ ಯಾಗಿದ್ದಾಗ ಆಗಿನ ಸಮಾಜಕಲ್ಯಾಣ ಸಚಿವರಾಗಿದ್ದ ಬಸವಲಿಂಗಪ್ಪನವರು ತಲೆಮೇಲೆ ಮಲ ಹೊರುವ ಪದ್ದತಿಯನ್ನು ವಿರೋಧಿಸಿ ಒಂದು ಆದೇಶ ಹೊರಡಿಸಿದ್ದರು. ಅದನ್ನು ಯಶಸ್ವಿಯಾಗಿ ಅನುಷ್ಟಾನಕ್ಕೂ ತಂದರು. ಇಡೀ ದೇಶದಲ್ಲೇ ಇದು ಮೊಟ್ಟ ಮೊದಲ ಪ್ರಯತ್ನವಾಗಿತ್ತು. ಇದರ ಆಧಾರದ ಮೇಲೆಯೇ 1993 ರ ಈ ಪ್ರಸಕ್ತ ಕೇಂದ್ರ ಕಾಯಿದೆ ರೂಪುಗೊಂಡದ್ದು.! ಇಡೀ ದೇಶಕ್ಕೇ ಕಾಯಿದೆ ರೂಪಿಸಲು ಕಾರಣವಾದ ರಾಜ್ಯ ಇಂದು ಮಲಗುಂಡಿ ಸಾವುಗಳ ತವರಾಗಿದೆ ಯಾಕೆ..?ನಮ್ಮ ಪುರಸಬೆ,ನಗರಸಬೆ,ಮಹಾನಗರಸಬೆಗಳೇಕೆ ಇಂತ ಸಾವುಗಳ ಬಗ್ಗೆ ನಿರ್ಲಕ್ಷ ತೋರಿವೆ.? ಕೆ.ಜಿಎಫ್ ನನ್ನ ತಾಯಿಯ ಊರು ನನ್ನ ಚಿಕ್ಕಂದಿನಲ್ಲಿ ಈ ಊರಿನ ನೆಮ್ಮದಿಯ ಬದುಕನ್ನು ಕಂಡಿದ್ದೇನೆ, ಆದರೆ ಇಂದು..? ಕೆ.ಜಿ.ಎಪ್ ನಲ್ಲಿ ಒಂದು ಕಾಲದಲ್ಲಿ ಗಣಿಯಲ್ಲಿ ಚಿನ್ನ ಬಾಚುತಿದ್ದ ಕೈಗಳು ಇಂದು ಮಲ ಬಾಚುತ್ತಿವೆ. ಅತ್ಯಂತ ಹೆಚ್ಚು ಸಾವುಗಳಾಗುವುದು ಮತ್ತು ಬಂಗಿಗಳು ಅತ್ಯಂತ ಹೀನಾಯವಾಗಿ ಬದುಕುತ್ತಿರುವುದೂ ಇಲ್ಲೇ. ಈಚೆಗೆ ಈ ಸಪಾಯಿ ಕಾರ್ಮಿಕರ ಮನೆಗಳಿಗೆ ಹೋದಾಗ ಇವರ ಬದುಕುವ ಸ್ಥಿತಿ ಕಂಡು ಕಂಗಾಲಾದೆ.! ದಿನವಿಡೀ ಮಲ ಬಾಚುವ ಈ ಜನ ತಮ್ಮ ಹೇಯಬದುಕು ಮರೆಯಲು ಸಾರಾಯಿಗೆ ಮೊರೆ ಹೋಗುತ್ತಾರೆ, ಸಾರಾಯಿಗೆ ಹಣವಿಲ್ಲದಾಗ ನಿಶೆಗಾಗಿ ಬೂಟ್ ಪಾಲಿಷ್ ಕುಡಿಯುವುದನ್ನು ಕಂಡು ದಂಗಾಗಿಹೋದೆ.! ತಮಿಳು ಭಂಗಿಗಳೇ ತುಂಬಿರುವ ಇಲ್ಲಿ ಬದುಕಿನ ಎಲ್ಲಾ ಅವಮಾನಗಳು, ಕ್ರೌರ್ಯಗಳು ಇಲ್ಲಿ ಕಣ್ಣಿಗೆ ರಾಚುತ್ತವೆ. ಒಂದು ಕಾಲದಲ್ಲಿ ಭಂಗಿಗಳ ಪರಿಸ್ಥಿತಿ ಕರ್ಣಾಟಕಕ್ಕಿಂತಲೂ ತಮಿಳುನಾಡಿನಲ್ಲೇ ಹೇಯವಾಗಿತ್ತು ಆದರೆ ಇಂದು ಆ ಸ್ಥಿತಿ ಇಲ್ಲ. ಗೊಲ್ಲಪಲ್ಲಿ ಇಸ್ರೈಲ್ ಎಂಬ ಸ್ವತಹ ಭಂಗಿಯೊಬ್ಬರು ಇದರ ವಿರುದ್ದ ಹೋರಾಡಿ ಯು.ಎನ್.ಕನ್ವೆನ್ಷನ್ ವರೆಗೂ ಹೋಗಿ ಭಂಗಿಗಳ ಪರಿಸ್ಥಿತಿ ಸುದಾರಿಸಲು ಯತ್ನಿಸಿದರು. ಇಂದು ಈತನ ಹೋರಾಟದ ಫಲ ಸರ್ಕಾರ ಕೈಯಲ್ಲಿ ಮಲ ಎತ್ತುವುದನ್ನು ಬಹುತೇಕ ನಿಷೇದಿಸಿದೆ. 2014 ರಲ್ಲಿ ಬಂದ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಪಾಲಿಸುತ್ತಿದೆ, ಅಂತೆಯೇ ಸತ್ತವರ ಕುಟುಂಬಗಳಿಗೆ ಹತ್ತು ಲಕ್ಷ ಪರಿಹಾರ ನೀಡುತ್ತಿದೆ, ಮಲದ ಗುಂಡಿಗಳನ್ನು ಶುದ್ದಿ ಮಾಡಲು ಯಂತ್ರಗಳನ್ನು ಬಳಸುತ್ತಿದೆ.! ನಾನು ಮೊನ್ನೆ ಗೊಲ್ಲಪಲ್ಲಿ ಇಸ್ರೈಲ್ ರನ್ನು ಮಾತಾಡಿದಾಗ ಈ ವಿವರಗಳನ್ನೆಲ್ಲಾ ಕೊಟ್ಟು ಖುಷಿಯಿಂದ ಮಾತಾಡುತ್ತಾ ಚೆನೈ ನ ಪ್ರತಿಷ್ಟಿತ ಲೋಯಲ ಕಾಲೇಜಿಗೆ ಕನಿಷ್ಟ ಸಾವಿರ ಮಂದಿ ಭಂಗಿಗಳ ಮಕ್ಕಳನ್ನು ಸೇರಿಸಿರುವುದರ ಬಗ್ಗೆ ಅಭಿಮಾನದಿಂದ ಹೇಳಿಕೊಂಡರು. ತಮಿಳುನಾಡಿನ ಯಾವುದೇ ಸರ್ಕಾರ ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಸ್ಪಂದಿಸಿದ್ದನ್ನು ನೆನೆದರು. ಆದರೆ ಕರ್ಣಾಟಕ ಸರ್ಕಾರಕ್ಕೆ ಏನಾಗಿದೆ.? ಎಲ್ಲಾ ಪಕ್ಷಗಳಲ್ಲಿರುವ ಕನಿಷ್ಠ ದಲಿತ ಶಾಸಕರ, ಲೋಕಸಭಾ ಸದಸ್ಯರ ಮೌನಕ್ಕೆ ಕಾರಣವೇನು.? ಈ ಮಲಹೊರುವ ಪದ್ದತಿ ಅರ್ಥಾತ್ ಜಾಡಮಾಲಿ ಹುದ್ದೆ ಇನ್ನೂ ಚಾಲ್ತಿಯಲ್ಲಿರುವುದು ಕೇಂದ್ರ ಸರ್ಕಾರಕ್ಕೆ ಸೇರಿದ ರೈಲ್ವೆ ಇಲಾಖೆಯಲ್ಲಿ . ದುರಂತವೆಂದರೆ ಕೇಂದ್ರ ಸರ್ಕಾರ ಮಾಡಿದ ಕಾಯಿದೆಯನ್ನು ಕೇಂದ್ರ ಸರ್ಕಾರದ ಪ್ರಮುಖ ಇಲಾಖೆಯೇ ಜಾರಿ ಮಾಡದಿರುವುದು ಯಾಕೋ ಯಾರ ಗಮನಕ್ಕೂ ಬಂದಂತಿಲ್ಲ ! ಮಲ ಹೊರುವ ಪದ್ದತಿಯನ್ನು ಮೊದಲಿಗೆ ನಿಲ್ಲಿಸಲು ಯತ್ನಿಸಿದ ರಾಜ್ಯದಿಂದ ಹೋಗಿ ಕೇಂದ್ರ ರೈಲ್ವೆ ಮಂತ್ರಿಗಳಾದ ಜಾಪರ್ ಷರೀಪರು, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ನವರೂ ಈ ಬಗ್ಗೆ ಚಿಂತಿಸಲಿಲ್ಲ ಯಾಕೆ..? ಸಫಾಯಿ ಕರ್ಮಚಾರಿ ಕಾರ್ಮಿಕರು ಜಾತಿಹೀನರೂ, ಬಡ ನಿರ್ಗತಿಕರೂ, ಅಸಂಘಟಿತರೂ ರಾಜ್ಯಾಧಿಕಾರವಿಲ್ಲದವರೂ ಹೌದು.. ಈ ಕಾರಣಕ್ಕೆ ಯಾರಿಗೂ ಯಾವ ಸರ್ಕಾರಕ್ಕೂ ಇವರ ಗಂಭೀರ ಅಮಾನವೀಯ ಸಮಸ್ಯೆ ಬಗೆಹರಿಸುವುದು ಬೇಕಿಲ್ಲ. ನಾವೆಲ್ಲರೂ ಕನಿಷ್ಟ ಮಾನವರಾಗಿ ನಮ್ಮಲ್ಲೂ ಹೃದಯ ಕೆಲಸಮಾಡುವ ಪ್ರಕ್ರಿಯೆ ಪ್ರಾರಂಭವಾದಾಗ ಈ ಸಮಸ್ಯೆಯನ್ನುಪಂಚೇಂದ್ರಿಯಗಳು ಗ್ರಹಿಸಿದ ನಂತರವಷ್ಟೇ ಪರಿಹಾರ ಹುಡುಕಬಹುದೇನೋ... ಕಡೆಯಲ್ಲಿ ಡಾ.ಅಂಬೇಡ್ಕರ್ ರವರ ಒಂದು ಮಾತು ನೆನಪಾಗುತ್ತಿದೆ.. " so long as you do not achieve social liberty, whatever freedom is provided by the law is of no avail to you" - ಸಿ.ಎಸ್.ದ್ವಾರಕಾನಾಥ್* *2016-10-29 16:38 GMT+05:30 Basavaraja Naika H.D. <[email protected] <[email protected]>>:* > > *ಇಂದಿನ "ಕನ್ನಡ ಪ್ರಭ" ಪತ್ರಿಕೆಯಲ್ಲಿ ಪ್ರಕಟವಾದ ಡಾ. ಸಿ. ಎಸ್. ದ್ವಾರಕಾನಾಥ್ ಅವರ > "ಮೂಕನಾಯಕ" ಅಂಕಣ..* > > **"ಮಲದ ಗುಂಡಿಗಳಲ್ಲಿ ಬಿದ್ದು ಸತ್ತವರ ಬದುಕು"** > > > > > > > > > > > > > > > > > > > > > > > > > * ಕಳೆದ ವಾರ ಬೆಂಗಳೂರಿನ ಅಪಾರ್ಟಮೆಂಟ್ ವೊಂದರ ಮಲದ ಗುಂಡಿಯಲ್ಲಿ ಇನ್ನೆರಡು ಜೀವಗಳು > ಜೀವಕಳಕೊಂಡಿವೆ..!? ಶಿವಾಜಿನಗರದಲ್ಲಿ ಆರೆಸೆಸ್ ಕಾರ್ಯಕರ್ತರೊಬ್ಬರ ಕೊಲೆಯ > ಅಬ್ಬರದಲ್ಲಿ ಈ ಸಾವುಗಳನ್ನು ಯಾರೂ ಗಮನಿಸಲಿಲ್ಲ. ಉಡುಪಿಯಲ್ಲಿ ನಡೆದಾಡಿದ ದಲಿತದಮನಿತರ > ಹೆಜ್ಜೆ ಗುರುತುಗಳನ್ನೂ ಸ್ವಚ್ಚಮಾಡಲು ಹೊರಟ "ಕನಕ ನಡೆ" ಯವರಿಗೂ ಈ ಸಾವುಗಳು ಸಹಜವಾಗಿಯೇ > ಕಾಣಲಿಲ್ಲ. ದಲಿತರ ಕೇರಿಗಳಲ್ಲಿ ಸುತ್ತಾಡಿ ಅವರಿಗೆ "ವೈಷ್ಣವ ದೀಕ್ಷೆ" ಕೊಟ್ಟು ದಲಿತರನ್ನು > ಸ್ವಚ್ಛ ಮಾಡಲು ಹೊರಟ ಪೇಜಾವರಶ್ರೀ ಗಳ ದಿವ್ಯದೃಷ್ಟಿಗೂ ಈ ಸಾವುಗಳು ಗೋಚರಿಸಲಿಲ್ಲ, > ಪೊರಕೆಯನ್ನೇ ಚುನಾವಣೆ ಚಿನ್ಹೆ ಮಾಡಿಕೊಂಡು ಅದನ್ನೇ ತಮ್ಮ ತಲೆಯಮೇಲಿನ ಟೋಪಿ ಗಳ ಮೇಲೆ > ಮುದ್ರಿಸಿಕೊಂಡು ಛಾನೆಲ್ ಕ್ಯಾಮರಾಗಳ ಮುಂದೆ ಸದಾ ಕಾಣಿಸಿಕೊಳ್ಳುವ AAP ಯವರಿಗೂ ಈ > ಸಾವುಗಳು ಕಾಣಲಿಲ್ಲ, ದಲಿತರ ಬಗ್ಗೆ ಸದಾ ಕಣ್ಣಲ್ಲಿ ನೀರಿಟ್ಟುಕೊಂಡೇ ಓಡಾಡುವ ದೇವೇಗೌಡ, > ಕುಮಾರಸ್ವಾಮಿಯವರ ಪಕ್ಷಕ್ಕೂ ಇದು ಕಾಣಲಿಲ್ಲ, ತಮ್ಮದು ಅಂಬೇಡ್ಕರ್ ಕನಸಿದ, ಕಾನ್ಸಿರಾಂರು > ಕಟ್ಟಿದ ಪಕ್ಷ ಎಂದು ಹೇಳಿಕೊಳ್ಳುವ BSP ಯವರೂ ಇದಕ್ಕೆ ಸ್ಪಂದಿಸಲಿಲ್ಲ. ಇನ್ನು ಕಾಂಗ್ರೆಸ್ > ಛತ್ರಿಯಡಿ ತಣ್ಣಗೆ ಸುಖಿಸುತ್ತಿರುವ ದಲಿತ ಸಂಘಟನೆಗಳ ನಾಯಕರಿಗೆ, ಕಾಮ್ರೇಡುಗಳಿಗೆ ಈ > ಜುಜುಬಿ ಸಾವುಗಳು ಹೇಗೆ ಕಾಣಿಸಿಯಾವು... ಇನ್ನು ಸ್ವಚ್ಚ ಬಾರತದ ಮೋದಿ ಭಕ್ತರು > ವೀಕೆಂಡಿನಲ್ಲಿ ಕ್ರಿಕೆಟ್ ಬ್ಯಾಟ್ ನಂತೆ ಕೈಯಲ್ಲಿ ಪೊರಕೆ ಹಿಡಿದು ಗವಾಸ್ಕರ್, > ತೆಂಡೂಲ್ಕರರು ಪಿಚ್ ಗೆ ಬರುವಂತೆ ಬೀದಿಗೆ ಬಂದು ಪೋಟೋ ತೆಗೆಸಿಕೊಳ್ಳುವವರಿಗೆ ಮಲದ ಗುಂಡಿಯ > ಈ ಸಾವುಗಳ ಸುದ್ದಿ ಸುದ್ದಿಯೇ ಆಗಿರಲ್ಲ.! ಮೋದಿಯವರೇ ಹಿಂದೊಮ್ಮೆ ಹೇಳಿದಂತೆ ಈ ಮಲ ಬಳಿಯುವ > ಕಾರ್ಯ ಮೋಕ್ಷಕ್ಕೆ ದಾರಿಯಂತೆ! ಸದಾ ದಲಿತರ, ದಮನಿತರ ಹೆಸರಲ್ಲೇ ರಾಜಕಾರಣ > ಮಾಡುವ, ರಾಜ್ಯದ ಆಡಳಿತದ ಚುಕ್ಕಾಣೆ ಹಿಡಿದಿರುವ "ಅಹಿಂದ" ಮುಖ್ಯಮಂತ್ರಿ ಯ ಪಕ್ಷ > ಕಾಂಗ್ರೆಸ್ಸಿನ "ದಲಿತ ಕಾಳಜಿ" ಮುಂದೆ ನೋಡಿ..!? ಮೊನ್ನೆ ಕಕ್ಕಸು ಗುಂಡಿಯಲ್ಲಿ > ಸತ್ತುಬಿದ್ದ ಒಬ್ಬಾತನ ಹೆಸರು ವೆಂಕಟೇಶ, ಭೋವಿ ಜನಾಂಗಕ್ಕೆ ಸೇರಿದ ಈತನಿಗೆ 24 ವರ್ಷ > ವಯಸ್ಸು, ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ, ಈತನ ಪತ್ನಿ ಈಗ ವಿಧವೆ, ಮಧುಗಿರಿಯ ಈತನ > ಮುರುಕಲು ನಿವಾಸ ಇಂದು ಸಾವಿನ ಮನೆ, ಮೊದಲು ಮಲದ ಗುಂಡಿಗೆ ಇಳಿದ ವೆಂಕಟೇಶನ ಕೂಗಾಟ ಕಂಡು > ಆತನನ್ನು ಉಳಿಸಲು ಹೋದ ಮಂಜುನಾಥ ಆಯತಪ್ಪಿ ಮಲದ ಗುಂಡಿಗೆ ಬಿದ್ದು ಅಸುನೀಗಿದವನು ಈತ > ಕೆ.ಆರ್. ಪೇಟೆಯವನು, ಈತನಿಗೆ ಅತ್ಯಂತ ವಯಸ್ಸಾದ ಅಪ್ಪಾಅಮ್ಮಂದಿರಿದ್ದಾರೆ.. ಅಪ್ಪನಿಗೆ > ಕಣ್ಣು ಕಾಣಲ್ಲ, ತಮಗೆ ಅನ್ನ ಉಣ್ಣಿಸಲು ಮಗ ಏನು ಕೆಲಸ ಮಾಡುತ್ತಾನೆಂಬುದೇ ಈ > ತಾಯಿತಂದೆಯರಿಗೆ ಅರಿವಿಲ್ಲ! ಇನ್ನೂ ಆಶ್ಚರ್ಯವೆಂದರೆ ಇವರು ಲಿಂಗಾಯಿತ ಕೋಮಿನವರು! > ಕಿತ್ತುತಿನ್ನುವ ಬಡತನ, ಹೊಟ್ಟೆಪಾಡಿಗಾಗಿ ಯಾವ ಕೆಲಸವನ್ನಾದರೂ ಮಾಡಿಸಿಬಿಡುತ್ತದೆ > ಎಂಬುದಕ್ಕೆ ಇದು ಸಾಕ್ಷಿ. ಮಂಜುನಾಥನ ತಂದೆ ತನ್ನ ಮಗನನ್ನು ಶ್ರವಣಕುಮಾರ ಎನ್ನುತ್ತಾ ನಾಳಿನ > ತಮ್ಮ ಸ್ಥಿತಿ ನೆನೆದು ಮಗುವಂತೆ ಅಳತೊಡಗಿದರು. ಇನ್ನೊಂದು ವಿಚಿತ್ರ ನೋಡಿ ಸತ್ತ ಈ > ಮಂಜುನಾಥ ಯಡಿಯೂರಪ್ಪನವರ ಬಂದುವೆಂದು ಅಲ್ಲಿನವರು ಮಾತಾಡುತಿದ್ದರು. ಅದು ಹೇಗೆ ಸಾಧ್ಯ? > ಇಂತ ಮಲದ ಗುಂಡಿಯಲ್ಲಿ ಸಾಯುವವರು ಅದು ಹೇಗೆ ಯಡಿಯೂರಪ್ಪನವರ ಬಂದುವಾಗಲು ಸಾದ್ಯ..? > ಸಹಜವಾಗಿ ಸಫಾಯಿ ಕೆಲಸವನ್ನು ಕುಲವೃತ್ತಿಯನ್ನಾಗಿ ಒಪ್ಪಿಕೊಂಡು ಮಾಡುವವರು > ಭಂಗಿಗಳು, ಈ 'ಪವಿತ್ರ' ಕೆಲಸ ಮಾಡಲು ಇವರಿಗೆ ಒಪ್ಪಿಸಿದ್ದು ಸಭ್ಯ ಹಿಂದೂ ಸಮಾಜ. ಆದರೆ > ಕಾಲಕ್ರಮದಲ್ಲಿ ಹಸಿವಿನ ಅನಿವಾರ್ಯತೆಯುಂಟಾಗಿ ಈ ವೃತ್ತಿಗೆ ಇಳಿದಿದ್ದಂತೂ ಇತರೆ ಕೆಲ ತಳ > ಸಮುದಾಯಗಳಷ್ಟೆ. ಇಂದು ಲಭ್ಯವಿರುವ ಅಂಕಿಅಂಶಗಳ ಪ್ರಕಾರ ದಲಿತರನ್ನು ಬಿಟ್ಟರೆ ಈ ಕೆಲಸ > ಮಾಡುವವರು ಮುಸಲ್ಮಾನರು! ಪವಿತ್ರ ಉಡುಪಿಯನ್ನು ಇಂದಿಗೂ ಸಫಾಯಿ ಮಾಡುವವರು > ಇಲ್ಲಿನ ಕೊರಗರು, ಮೂಲತಃ ಇವರು ಕಾನನ ವಾಸಿಗಳು, ಬಿದಿರು, ಬೊಂಬು ತಂದು ಅವುಗಳಲ್ಲಿ ಮಂಕರಿ, > ಬುಟ್ಟಿ ಮುಂತಾಗಿ ಮಾಡಿ ಪಟ್ಟಣದಲ್ಲಿ ಮಾರಿ ಹೊಟ್ಟೆಹೊರೆಯುವವರು. ಇವರನ್ನು ಸರ್ಕಾರ > ಕಾಡಿನಿಂದ ಹೊರಹಾಕಿದಾಗ ಇವರು ಅನಿವಾರ್ಯವಾಗಿ ಸಪಾಯಿ ಕರ್ಮಚಾರಿಗಳಾದವರು. ಇವರಿಗೆ ಈ > ವೃತ್ತಿಯ ಕಸಬುದಾರಿಕೆ ಗೊತ್ತಿಲ್ಲ ಈ ಕಾರಣಕ್ಕೆ ಯಾವ ಎಚ್ಚರಿಕೆಗಳನ್ನೂ ಗಮನಿಸದೆ ಸಪಾಯಿ > ಕೆಲಸಮಾಡಿ ಆರೋಗ್ಯ ಕೆಡೆಸಿಕೊಂಡ ಪರಿಣಾಮ ಇಂದು ಕೊರಗ ಸಮುದಾಯವೇ ನಶಿಸಿ ಹೋಗುತ್ತಿದೆ! > ಮಂಗಳೂರಿನ ಹೋಟೆಲೊಂದರ ದೊಡ್ಡ ಮಲದ ಗುಂಡಿಗೆ ಬಿದ್ದು ಮಲದಲ್ಲಿ ಮುಳುಗಿ ಸತ್ತ ಕಿಟ್ಟ ಕೊರಗ > ಎಂಬುವನ ದಾರುಣ ಘಟನಾವಳಿಯನ್ನು ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆದಿದ್ದೆ. ಪುಡುವಿನ > ಮಟ್ಟು ಎಂಬ ಗ್ರಾಮದ ಸ್ಟ್ಯಾನ್ಲಿ ಮತ್ತು ಬೋಜ ಎಂಬ ನಗರಪಾಲಿಕೆಯ ಹೊರಗುತ್ತಿಗೆ ಸಪಾಯಿ > ಕರ್ಮಚಾರಿಗಳು ಮಲದ ಗುಂಡಿಯಲ್ಲಿ ಸತ್ತಾಗ ಮಂಗಳೂರು ನಗರಪಾಲಿಕೆ "ನಮ್ಮ ಪಾಲಿಕೆಯ ಖಾಯಂ > ಕಾರ್ಮಿಕರು ಹೊರತುಪಡಿಸಿ ಬೇರೆಯವರು ಸತ್ತರೆ ನಾವು ಜವಾಬ್ದಾರರಲ್ಲ.." ಎಂದು > ಬೇಜವಾಬ್ದಾರಿಯಿಂದ ಉತ್ತರಿಸಿತು. ಅದೇ ರೀತಿ ಕಕ್ಕಸ್ಸು ಗುಂಡಿಯಲ್ಲೇ ಅಸ್ವಸ್ಥತೆ ಹೊಂದಿ > ಬದುಕುಳಿದು ಬಂದ ಪದ್ಮನಾಭ ಎನ್ನುವ ಯುಜಿಡಿ ಕಾರ್ಮಿಕನ ಹೃದಯಬೇನೆ ಚಿಕಿತ್ಸೆಗೂ ನಗರಪಾಲಿಕೆ > ಬಿಡಿಗಾಸೂ ನೀಡಲಿಲ್ಲ! ನಾವು ಬಹಳ ಹಿಂದಕ್ಕೆ ಹೋಗುವ ಅವಶ್ಯಕತೆಯಿಲ್ಲ 'ದಲಿತ > ಕಾಳಜಿ'ಯ ಈ ಸರ್ಕಾರ ಬಂದ ಮೇಲಷ್ಟೆ ಈ ಮಲದ ಗುಂಡಿಯ ಸಾವುಗಳೂ ಹೆಚ್ಚಾಗಿರುವ > ಕಾರಣಗಳೇನಿರಬಹುದು.? ಕಳೆದ ವರ್ಷ ಸಮಾಜ ಕಲ್ಯಾಣ ಸಚಿವರ ಮನೆ ಎದುರಲ್ಲೇ ಎರಡು ಸಾವುಗಳಾದವು! > ದುರಂತವೆಂದರೆ ರಾಜ್ಯ ವಿಜಿಲೆನ್ಸ್ ಕಮಿಟಿಯ ಅದ್ಯಕ್ಷರೇ ಸಚಿವರಾಗಿರುವುದು!! ಇದು ಅವರಿಗೆ > ಗೊತ್ತೋ ಇಲ್ಲವೋ ಗೊತ್ತಿಲ್ಲ! ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಬೆಂಗಳೂರಿನಲ್ಲಿಯೇ > ಸತ್ತವರ ಸಂಖ್ಯೆ 18, ಇನ್ನು ರಾಜ್ಯಾದ್ಯಂತ ಈ ಅವಧಿಯಲ್ಲೇ ಸತ್ತವರು 49 ಮಂದಿ, ಇವರ > ಸಾವುಗಳಿಗೆ ಪೋಲಿಸ್ FIR ಸಲ್ಲಿಸಿದ್ದಾರೆ ಆದರೆ FIR ಹಾಕದವರನ್ನು ಸೇರಿಸಿದರೆ ಈ ಸಂಖ್ಯೆ > 53ಕ್ಕೆ ಏರುತ್ತದೆ! ಸಫಾಯಿ ಕರ್ಮಚಾರಿಗಳೊಂದಿಗೆ ಕರ್ನಾಟಕದಲ್ಲಿ ಕೆಲಸ > ಮಾಡುತ್ತಿರುವ ಪ್ರೊ.ರಾಜೇಂದ್ರ, ಓಬಳೇಶ್, ವೆಂಕಟೇಶ್, ಪುಷ್ಪಲತ ಇವರನ್ನು ಮಾತಾಡಿಸಿದಾಗ > ದಂಗು ಬಡಿಯುವಂತಹ ವಾತ್ಸವಗಳನ್ನು ನಮ್ಮ ಮುಂದೆ ತೆರೆದಿಟ್ಟರು.. 2011 ರ ಸಮೀಕ್ಷೆ > ಪ್ರಕಾರ ಇಡೀ ದೇಶದಲ್ಲಿ 1ಲಕ್ಷ 80,000ಸಾವಿರ ಸಫಾಯಿ ಕಾರ್ಮಿಕರಿದ್ದಾರೆ ಅವರಲ್ಲಿ 15,750 > ಮಂದಿ ಕರ್ಣಾಟಕದಲ್ಲಿದ್ದಾರೆ, ಕೇವಲ ತುಮಕೂರಿನಲ್ಲೇ 3300 ಮಂದಿ ಇದಾರೆ. ಇದನ್ನು ಪುನರ್ > ಪರಿಶೀಲಿಸುತ್ತೇವೆಂದು ಹೊರಟ ಕರ್ಣಾಟಕ ಸರ್ಕಾರ ಪಂಚಾಯಿತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ > ಇಲಾಖೆಗಳಿಗೆ ವಹಿಸಿ ಸಫಾಯಿ ಕರ್ಮಚಾರಿಗಳೊಂದಿಗೆ ಕೂಡಿಯೇ ಈ ಪರಿಶೀಲನೆ ಮಾಡಬೇಕೆಂದು ಶರತ್ತು > ವಿಧಿಸಿತು ಆದರೆ ಈ ಯಾವುದನ್ನೂ ಪರಿಗಣಿಸದ ಈ ಇಲಾಖೆಗಳು ಕಾಟಾಚಾರಕ್ಕೆ ಇವರ > ಅಂಕಿಸಂಖ್ಯೆಗಳನ್ನು 15750 ರಿಂದ 477ಕ್ಕೆ ಇಳಿಸಿ ತೃಪ್ತಿಪಟ್ಟುಕೊಂಡವಷ್ಟೆ.!? > "Employment of manual scavengers and construction of dry latrines > (prohibition) act 1993" ಈ ಕಾಯಿದೆ ಜಾರಿಗೆ ಬಂದು ಇಪ್ಪತ್ತಮೂರು ವರ್ಷ ಕಳೆದಿದೆ ಆದರೆ > ಇದನ್ನು ಸರಿಯಾಗಿ ಅನುಷ್ಟಾನಕ್ಕೆ ತರಲು ಯಾವುದೇ ರಾಜ್ಯ ಸರ್ಕಾರಕ್ಕೂ ಕೇಂದ್ರ > ಸರ್ಕಾರಕ್ಕೂಸಾದ್ಯವಾಗುತ್ತಿಲ್ಲ ಯಾಕೆ? ಈ ಕಾಯಿದೆ ಪ್ರಕಾರ ಒಣ ಶೌಜಾಲಯಗಳನ್ನು, ಬಯಲು > ಶೌಚಾಲಯಗಳನ್ನು, ಅಕ್ರಮವಾಗಿ ಟಾಯ್ಲೆಟ್ ಪೈಪುಗಳನ್ನು ಚರಂಡಿಗೆ ಸೇರಿಸಿರುವುದನ್ನೂ ಈ > ಕಾಯಿದೆ ಬಂದ ಮೇಲೆ 90 ದಿನಗಳೊಳಗೆ ಒಡೆದು ಹಾಕಬೇಕಿತ್ತು , ಆದರೆ ಇದ್ಯಾವುದೂ ಈವರೆಗೂ > ಆಗಲೇಯಿಲ್ಲ. ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಜಿಲ್ಲಾದಿಕಾರಿಗಳ ನೇತೃತ್ವದಲ್ಲಿ > ವಿಜಿಲೆಂಟ್ ಕಮಿಟಿಗಳನ್ನು ನೇಮಕ ಮಾಡಬೇಕಿತ್ತು ಆದರೆ ಈವರೆಗೂ ಇದೂ ಆಗಿಲ್ಲ. ಇಷ್ಟು > ಸಾವುಗಳಾದ ಮೇಲೂ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಭದ್ದತೆಯನ್ನು ಕರ್ನಾಟಕ > ಸರ್ಕಾರವಾದರೂ ಯಾಕೆ ತೋರಿಲ್ಲ.? ಹಿಂದೆ 1974 ರಲ್ಲಿ ದೇವರಾಜ ಅರಸುರವರು > ಮುಖ್ಯಮಂತ್ರಿ ಯಾಗಿದ್ದಾಗ ಆಗಿನ ಸಮಾಜಕಲ್ಯಾಣ ಸಚಿವರಾಗಿದ್ದ ಬಸವಲಿಂಗಪ್ಪನವರು ತಲೆಮೇಲೆ ಮಲ > ಹೊರುವ ಪದ್ದತಿಯನ್ನು ವಿರೋಧಿಸಿ ಒಂದು ಆದೇಶ ಹೊರಡಿಸಿದ್ದರು. ಅದನ್ನು ಯಶಸ್ವಿಯಾಗಿ > ಅನುಷ್ಟಾನಕ್ಕೂ ತಂದರು. ಇಡೀ ದೇಶದಲ್ಲೇ ಇದು ಮೊಟ್ಟ ಮೊದಲ ಪ್ರಯತ್ನವಾಗಿತ್ತು. ಇದರ ಆಧಾರದ > ಮೇಲೆಯೇ 1993 ರ ಈ ಪ್ರಸಕ್ತ ಕೇಂದ್ರ ಕಾಯಿದೆ ರೂಪುಗೊಂಡದ್ದು.! ಇಡೀ ದೇಶಕ್ಕೇ ಕಾಯಿದೆ > ರೂಪಿಸಲು ಕಾರಣವಾದ ರಾಜ್ಯ ಇಂದು ಮಲಗುಂಡಿ ಸಾವುಗಳ ತವರಾಗಿದೆ ಯಾಕೆ..? ನಮ್ಮ > ಪುರಸಬೆ,ನಗರಸಬೆ,ಮಹಾನಗರಸಬೆಗಳೇಕೆ ಇಂತ ಸಾವುಗಳ ಬಗ್ಗೆ ನಿರ್ಲಕ್ಷ ತೋರಿವೆ.? > ಕೆ.ಜಿಎಫ್ ನನ್ನ ತಾಯಿಯ ಊರು ನನ್ನ ಚಿಕ್ಕಂದಿನಲ್ಲಿ ಈ ಊರಿನ ನೆಮ್ಮದಿಯ ಬದುಕನ್ನು > ಕಂಡಿದ್ದೇನೆ, ಆದರೆ ಇಂದು..? ಕೆ.ಜಿ.ಎಪ್ ನಲ್ಲಿ ಒಂದು ಕಾಲದಲ್ಲಿ ಗಣಿಯಲ್ಲಿ ಚಿನ್ನ > ಬಾಚುತಿದ್ದ ಕೈಗಳು ಇಂದು ಮಲ ಬಾಚುತ್ತಿವೆ. ಅತ್ಯಂತ ಹೆಚ್ಚು ಸಾವುಗಳಾಗುವುದು ಮತ್ತು > ಬಂಗಿಗಳು ಅತ್ಯಂತ ಹೀನಾಯವಾಗಿ ಬದುಕುತ್ತಿರುವುದೂ ಇಲ್ಲೇ. ಈಚೆಗೆ ಈ ಸಪಾಯಿ ಕಾರ್ಮಿಕರ > ಮನೆಗಳಿಗೆ ಹೋದಾಗ ಇವರ ಬದುಕುವ ಸ್ಥಿತಿ ಕಂಡು ಕಂಗಾಲಾದೆ.! ದಿನವಿಡೀ ಮಲ ಬಾಚುವ ಈ ಜನ ತಮ್ಮ > ಹೇಯಬದುಕು ಮರೆಯಲು ಸಾರಾಯಿಗೆ ಮೊರೆ ಹೋಗುತ್ತಾರೆ, ಸಾರಾಯಿಗೆ ಹಣವಿಲ್ಲದಾಗ ನಿಶೆಗಾಗಿ ಬೂಟ್ > ಪಾಲಿಷ್ ಕುಡಿಯುವುದನ್ನು ಕಂಡು ದಂಗಾಗಿಹೋದೆ.! ತಮಿಳು ಭಂಗಿಗಳೇ ತುಂಬಿರುವ ಇಲ್ಲಿ ಬದುಕಿನ > ಎಲ್ಲಾ ಅವಮಾನಗಳು, ಕ್ರೌರ್ಯಗಳು ಇಲ್ಲಿ ಕಣ್ಣಿಗೆ ರಾಚುತ್ತವೆ. ಒಂದು ಕಾಲದಲ್ಲಿ > ಭಂಗಿಗಳ ಪರಿಸ್ಥಿತಿ ಕರ್ಣಾಟಕಕ್ಕಿಂತಲೂ ತಮಿಳುನಾಡಿನಲ್ಲೇ ಹೇಯವಾಗಿತ್ತು ಆದರೆ ಇಂದು ಆ > ಸ್ಥಿತಿ ಇಲ್ಲ. ಗೊಲ್ಲಪಲ್ಲಿ ಇಸ್ರೈಲ್ ಎಂಬ ಸ್ವತಹ ಭಂಗಿಯೊಬ್ಬರು ಇದರ ವಿರುದ್ದ ಹೋರಾಡಿ > ಯು.ಎನ್.ಕನ್ವೆನ್ಷನ್ ವರೆಗೂ ಹೋಗಿ ಭಂಗಿಗಳ ಪರಿಸ್ಥಿತಿ ಸುದಾರಿಸಲು ಯತ್ನಿಸಿದರು. ಇಂದು > ಈತನ ಹೋರಾಟದ ಫಲ ಸರ್ಕಾರ ಕೈಯಲ್ಲಿ ಮಲ ಎತ್ತುವುದನ್ನು ಬಹುತೇಕ ನಿಷೇದಿಸಿದೆ. 2014 ರಲ್ಲಿ > ಬಂದ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಪಾಲಿಸುತ್ತಿದೆ, ಅಂತೆಯೇ ಸತ್ತವರ ಕುಟುಂಬಗಳಿಗೆ > ಹತ್ತು ಲಕ್ಷ ಪರಿಹಾರ ನೀಡುತ್ತಿದೆ, ಮಲದ ಗುಂಡಿಗಳನ್ನು ಶುದ್ದಿ ಮಾಡಲು ಯಂತ್ರಗಳನ್ನು > ಬಳಸುತ್ತಿದೆ.! ನಾನು ಮೊನ್ನೆ ಗೊಲ್ಲಪಲ್ಲಿ ಇಸ್ರೈಲ್ ರನ್ನು ಮಾತಾಡಿದಾಗ ಈ > ವಿವರಗಳನ್ನೆಲ್ಲಾ ಕೊಟ್ಟು ಖುಷಿಯಿಂದ ಮಾತಾಡುತ್ತಾ ಚೆನೈ ನ ಪ್ರತಿಷ್ಟಿತ ಲೋಯಲ ಕಾಲೇಜಿಗೆ > ಕನಿಷ್ಟ ಸಾವಿರ ಮಂದಿ ಭಂಗಿಗಳ ಮಕ್ಕಳನ್ನು ಸೇರಿಸಿರುವುದರ ಬಗ್ಗೆ ಅಭಿಮಾನದಿಂದ > ಹೇಳಿಕೊಂಡರು. ತಮಿಳುನಾಡಿನ ಯಾವುದೇ ಸರ್ಕಾರ ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ > ಸ್ಪಂದಿಸಿದ್ದನ್ನು ನೆನೆದರು. ಆದರೆ ಕರ್ಣಾಟಕ ಸರ್ಕಾರಕ್ಕೆ ಏನಾಗಿದೆ.? ಎಲ್ಲಾ > ಪಕ್ಷಗಳಲ್ಲಿರುವ ಕನಿಷ್ಠ ದಲಿತ ಶಾಸಕರ, ಲೋಕಸಭಾ ಸದಸ್ಯರ ಮೌನಕ್ಕೆ ಕಾರಣವೇನು.? ಈ > ಮಲಹೊರುವ ಪದ್ದತಿ ಅರ್ಥಾತ್ ಜಾಡಮಾಲಿ ಹುದ್ದೆ ಇನ್ನೂ ಚಾಲ್ತಿಯಲ್ಲಿರುವುದು ಕೇಂದ್ರ > ಸರ್ಕಾರಕ್ಕೆ ಸೇರಿದ ರೈಲ್ವೆ ಇಲಾಖೆಯಲ್ಲಿ . ದುರಂತವೆಂದರೆ ಕೇಂದ್ರ ಸರ್ಕಾರ ಮಾಡಿದ > ಕಾಯಿದೆಯನ್ನು ಕೇಂದ್ರ ಸರ್ಕಾರದ ಪ್ರಮುಖ ಇಲಾಖೆಯೇ ಜಾರಿ ಮಾಡದಿರುವುದು ಯಾಕೋ ಯಾರ ಗಮನಕ್ಕೂ > ಬಂದಂತಿಲ್ಲ ! ಮಲ ಹೊರುವ ಪದ್ದತಿಯನ್ನು ಮೊದಲಿಗೆ ನಿಲ್ಲಿಸಲು ಯತ್ನಿಸಿದ ರಾಜ್ಯದಿಂದ ಹೋಗಿ > ಕೇಂದ್ರ ರೈಲ್ವೆ ಮಂತ್ರಿಗಳಾದ ಜಾಪರ್ ಷರೀಪರು, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ > ನವರೂ ಈ ಬಗ್ಗೆ ಚಿಂತಿಸಲಿಲ್ಲ ಯಾಕೆ..? ಸಫಾಯಿ ಕರ್ಮಚಾರಿ ಕಾರ್ಮಿಕರು > ಜಾತಿಹೀನರೂ, ಬಡ ನಿರ್ಗತಿಕರೂ, ಅಸಂಘಟಿತರೂ ರಾಜ್ಯಾಧಿಕಾರವಿಲ್ಲದವರೂ ಹೌದು.. ಈ ಕಾರಣಕ್ಕೆ > ಯಾರಿಗೂ ಯಾವ ಸರ್ಕಾರಕ್ಕೂ ಇವರ ಗಂಭೀರ ಅಮಾನವೀಯ ಸಮಸ್ಯೆ ಬಗೆಹರಿಸುವುದು ಬೇಕಿಲ್ಲ. > ನಾವೆಲ್ಲರೂ ಕನಿಷ್ಟ ಮಾನವರಾಗಿ ನಮ್ಮಲ್ಲೂ ಹೃದಯ ಕೆಲಸಮಾಡುವ ಪ್ರಕ್ರಿಯೆ ಪ್ರಾರಂಭವಾದಾಗ ಈ > ಸಮಸ್ಯೆಯನ್ನುಪಂಚೇಂದ್ರಿಯಗಳು ಗ್ರಹಿಸಿದ ನಂತರವಷ್ಟೇ ಪರಿಹಾರ ಹುಡುಕಬಹುದೇನೋ... > ಕಡೆಯಲ್ಲಿ ಡಾ.ಅಂಬೇಡ್ಕರ್ ರವರ ಒಂದು ಮಾತು ನೆನಪಾಗುತ್ತಿದೆ.. " so long as you > do not achieve social liberty, whatever freedom is provided by the law is > of no avail to you" - ಸಿ.ಎಸ್.ದ್ವಾರಕಾನಾಥ್ > * > *-- * *Basavaraj Naika H DAsst Teacher G H S Baggavalli Tarikere TqChickmagalur Dist* -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz6sCuq8BQPFNWAK9XDhCADo4LhdU8e_xqQ2A2O3op12sw%40mail.gmail.com. For more options, visit https://groups.google.com/d/optout.
