ಎದುರು ಮಾತು -1: ಯೋಧರೆ, ಅಳಲು ತೋಡಿಕೊಂಡೀರಾ ಜೋಕೆ!
‹›
ಚೋಟಾನಾಗಪುರ: ಆದಿವಾಸಿಗಳ ಸರ್ವನಾಶದ ಹುನ್ನಾರ
By admin on February 22, 2017
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಬಹುಶ: ಅಭಿವೃದ್ದಿ ಎಂದರೆ ಆದಿವಾಸಿಗಳ ಸರ್ವನಾಶ ಎಂಬ ಅರ್ಥವಿರಬೇಕೆಂಬ ಅನುಮಾನ
ಹುಟ್ಟುವಂತೆ ಈ ನೆಲದಲ್ಲಿ ಅವರ ಹಕ್ಕುಗಳ ದಮನ ಮಾಡಲಾಗುತ್ತಿದೆ. ಅವರ
ಶ್ರೇಯೋಭಿವೃದ್ದಿಗಾಗಿ ಹೊಸ ಕಾನೂನುಗಳನ್ನು ಜಾರಿಗೆ ತರುವುದಿರಲಿ, ಈಗಿರುವ ಕಾನೂನುಗಳನ್ನೆ
ತಿದ್ದುಪಡಿ ಮಾಡುವುದರ ಮತ್ತು ರದ್ದು ಮಾಡುವುದರ ಮೂಲಕ ಅವರ ಸ್ವತಂತ್ರ ಬದುಕಿನ ಜೊತೆ ನಮ್ಮ
ಸರಕಾರಗಳು ಚೆಲ್ಲಾಟವಾಡುತ್ತಿವೆ. ಆಧುನಿಕತೆಯ ಅವತಾರದಲ್ಲಿ ಬಂದೆರಗಿರುವ ಪಶ್ಚಿಮ ಮಾದರಿಯ
ಅಭಿವೃದ್ದಿ ಪಥವನ್ನು ಅಂಧರಂತೆ ಅನುಸರಿಸುತ್ತಿರುವ ನಮ್ಮ ಆಡಳಿತ ವರ್ಗ ಆದಿವಾಸಿಗಳನ್ನು
ಶಾಶ್ವತವಾಗಿ ಇಲ್ಲವಾಗಿಸಿಬಿಡುವ ಯೋಜನೆಗಳನ್ನು ಪ್ರತಿಕ್ಷಣ ಪ್ರತಿದಿನ ಜಾರಿಗೊಳಿಸುತ್ತಲೇ
ಇದೆ.
 ನಾನು ಮಾತಾಡುತ್ತಿರುವುದು ಇತ್ತೀಚೆಗೆ ಜಾರ್ಖಂಡ್ ಸರಕಾರವು ಆದಿವಾಸಿಗಳ ಭೂಮಿಯ
ಹಕ್ಕನ್ನು ಕಾಪಾಡಲು ರಚಿತವಾಗಿದ್ದ ಶತಮಾನಗಳಷ್ಟು ಹಳೆಯದಾದ ಚೋಟಾನಾಗಪುರ್ ಗೇಣಿ
ಕಾಯಿದೆಯನ್ನು ತಿದ್ದುಪಡಿ ಮಾಡುವುದರ ಮೂಲಕ ಅವರಿಗೆ ಸೇರಿದ್ದ ಸಾವಿರಾರು ಏಕರೆ ಭೂಮಿಯನ್ನು
ಅವರಿಂದ ಕಸಿದುಕೊಳ್ಳುವ ಪ್ರಕ್ರಿಯೆಗೆ ನಾಂದಿ ಹಾಡಿದೆ. ಈ ಚೋಟಾನಾಗಪರ ಗೇಣಿ ಕಾಯಿದೆ
ಜಾರಿಗೆ ಬಂದಿದ್ದು, ಸುಮಾರು 108 ವರ್ಷಗಳ ಹಿಂದೆ ಅಂದರೆ 1908ರಲ್ಲಿ. ಇದನ್ನೇನು
ನಮ್ಮನ್ನಾಳುತ್ತಿರುವ ನಮ್ಮದೇ ಆದ ಪ್ರಜಾಸತ್ತಾತ್ಮಕ ಭಾರತೀಯ ಸರಕಾರ ಜಾರಿಗೆ ತಂದಿದ್ದಲ್ಲ.
ಬದಲಿಗೆ ಇಂತಹುದೊಂದು ಕಾನೂನನ್ನು ಜಾರಿ ಮಾಡಿದ್ದು ನಮ್ಮ ಸಂಪನ್ಮೂಲಗಳನ್ನು ಸುಲಿಗೆ
ಮಾಡಲೆಂದೇ ಬಂದಿದ್ದ ವಸಾಹತುಶಾಹಿಗಳಾದ ಬ್ರಿಟೀಷರಿಂದ. ಹಾಗಾದರೆ ಏನೀ ಈ ಕಾನೂನಿನ
ಹಿನ್ನೆಲೆ? ಈ ಚೋಟಾನಾಗಪುರ ಗೇಣಿ ಕಾಯಿದೆಯ ವಿವರಗಳನ್ನು ಮತ್ತು ಅದು ಹೇಗೆ ರಚನೆಯಾಯಿತು
ಎಂಬುದನ್ನು ನೋಡೋಣ:
ಚೋಟಾನಾಗಪುರ ಗೇಣಿಕಾಯಿದೆ(1908):
1908ರಲ್ಲಿ ಬ್ರಿಟೀಷರು ಈ ಕಾಯಿದೆಯನ್ನು ಜಾರಿಗೆ ತರಲು ಮುಖ್ಯ ಕಾರಣವಾದವನು ಕ್ರೈಸ್ತ
ಮಿಷಿನರಿ ಮತ್ತು ಸಮಾಜಸೇವಕನಾಗಿದ್ದ ಶ್ರೀ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್. ಜರ್ಮನಿಯಲ್ಲಿ
ಜನ್ಮತಳೆದ ಹಾಫ್ಮನ್ 1891ರಲ್ಲಿ ಕೊಲ್ಕತ್ತಾದಲ್ಲಿ ಫಾದರ್ ಪದವಿಗೇರಿದರು. ಆ ಸಮಯದಲ್ಲಿಯೇ
ಅವರು ಆದಿವಾಸಿ ಪಂಗಡವಾದ ಮುಂಡ್ರಾ ಬಾಷೆಯಲ್ಲಿ ಪರಿಣಿತಿ ಪಡೆದಿದ್ದರು. ಜೊತೆಗೆ ಆದಿವಾಸಿಗಳ
ಭೂಮಿಯ ಮೇಲಿನ ಹಕ್ಕನ್ನು ಅದರ ಬಗೆಗಿನ ಅವರ ಅಲಿಖಿತ ಸಾಂಪ್ರದಾಯಿಕ ಕಾನೂನುಗಳನ್ನು ಸಹ
ಅಭ್ಯಸಿಸಿದ್ದರು. ಆಗಿನ ಕಾಲದ ಜಮೀನುದಾರ ವರ್ಗ ಇಂತಹ ಕಾನೂನುಗಳನ್ನು ಉಲ್ಲಂಘಿಸಿ
ಆದಿವಾಸಿಗಳ ಭೂಮಿಯನ್ನು ಆಕ್ರಮಿಸಿಕೊಂಡಾಗಲೇ ಅದರ ವಿರುದ್ದ ಹೋರಾಟವೊಂದು ನಡೆದಿತ್ತು.
ಬಿಸ್ರಾಮುಂಡಾ ಎಂಬಾತ ಇದರ ನಾಯಕನಾಗಿದ್ದು, ಆತನ ದಂಗೆಗೆ ಮಣಿದ ಸರಕಾರ, ಹಾಫಮನ್
ಅದ್ಯಯನವನ್ನು ಬಳಸಿಕೊಂಡು ಆದಿವಾಸಿಗಳ ಭೂಮಿಯ ಹಕ್ಕನ್ನು ಸರ್ವಕಾಲಕ್ಕೂ ರಕ್ಷಿಸುವಂತಹ
ಚೋಟಾನಾಗಪುರ ಗೇಣಿ ಕಾಯಿದೆಯನ್ನು ಜಾರಿಗೆ ತಂದಿತ್ತು. ಈ ಕಾಯಿದೆಯ ಬಹಳಷ್ಟು ಭಾಗಗಳನ್ನು
ಸ್ವತ: ಹಾಫ್ಮನ್ ರಚಿಸಿದ್ದಾಗಿದೆ. ಹೀಗೆ ಸರಿಸುಮಾರು 108 ವರುಷಗಳ ಇತಿಹಾಸವಿರುವ ಒಂದು
ಕಾಯಿದೆಯಲ್ಲಿ ಏನಿದೆ ಎಂದು ನೋಡೋಣ.
ಕಾಯಿದೆಯ ಮುಖ್ಯಾಂಶಗಳು:
ಈ ಕಾಯಿದೆಯ 46 ನೇ ವಿದಿಯ ಪ್ರಕಾರ ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿಗಳ ಮತ್ತು
ಪರಿಸಿಷ್ಟ ಪಂಗಡಗಳು ಅಂದರೆ ಆದಿವಾಸಿಗಳ ಭೂಮಿಯನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಅದರ
ಪ್ರಕಾರ ಒಬ್ಬ ಆದಿವಾಸಿಯು ತಾನಿರುವ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ
ಇನ್ನೊಬ್ಬ ಆದಿವಾಸಿಗೆ ಮಾತ್ರ ತನ್ನ ಭೂಮಿಯನ್ನು ಕಾಣಿಕೆಯಾಗಿ ನೀಡಬಹುದಿತ್ತು ಅಥವಾ
ಮಾರಾಟಮಾಡಬಹುದಿತ್ತು. ಅದೇ ರೀತಿ ಪರಿಶಿಷ್ಟ ಜಾತಿಯವರು ಮತ್ತು ಹಿಂದುಳಿದ ವರ್ಗಗಳವರು ತಾವು
ವಾಸ ಮಾಡುವ ವ್ಯಾಪ್ತಿಯಲ್ಲಿಯೇ ವಾಸಿಸುತ್ತಿರುವ ತಮ್ಮದೇ ಸಮುದಾಯದವರಿಗೆ ಮಾತ್ರ
ಕಾಣಿಕೆಯಾಗಿ ಕೊಡಬಹುದಿತ್ತು ಅಥವ ಮಾರಬಹುದಿತ್ತು. ಆದರೆ ಹೀಗೆ ಮಾರಲು ಅಥವಾ ಕಾಣಿಕೆಯಾಗಿ
ನೀಡಲೂ ಸಹ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕಿತ್ತು. ಆ ಕಾಲಕ್ಕೇನೆ ಆದಿವಾಸಿಗಳಿಂದ
ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಸರಕಾರಿ ಕೃಪಾಪೋಷಿತ ಜಮೀನ್ದಾರರರಿಂದ ಆದಿವಾಸಿಗಳನ್ನು
ಕಾಪಾಡಲು ಇಂತಹ ಕಾಯಿದೆಯೊಂದನ್ನು ರಚಿಸಲಾಗಿದ್ದು, ಇದು ಪಟ್ಟಭದ್ರ ಹಿತಾಸಕ್ತಿಗಳ ಪಾಲಿಗೆ
ಕಣ್ಣುರಿ ತಂದಿತ್ತು.
ಆಗಿನಿಂದಲೂ ಈ ಕಾಯಿದೆಯನ್ನು ಪ್ರಶ್ನಿಸಿ ಹಲವು ಹಿತಾಸಕ್ತಿಗಳು ನ್ಯಾಯಾಲಯದ ಮೊರೆ
ಹೋಗುವುದು ನಡೆದೇ ಇತ್ತು. ಆದರೆ 1996 ರಲ್ಲಿ ಪಟ್ನಾ ಉಚ್ಚನ್ಯಾಯಾಲಯ ಈ ಕಾಯಿದೆರಯನ್ನು
ಸಂವಿದಾನದತ್ತವಾದುದು ಎಂದು ಘೋಷಿಸುವವರೆಗು ಈ ರೀತಿಯ ತಕರಾರು ಅರ್ಜಿಗಳು ಆದಿವಾಸಿಗಳ
ಜನ್ಮಸಿದ್ದ ಹಕ್ಕುಗಳ ಔಚಿತ್ಯವನ್ನು ಪ್ರಶ್ನಿಸುತ್ತಲೇ ಬಂದವು.
ಆದರೆ ತೊಂಭತ್ತರ ದಶಕದಲ್ಲಿ ಜಾರಿಯಾದ ಉದಾರವಾದಿ ಆರ್ಥಿಕ ನೀತಿಯು 2000ನೇ ಇಸವಿಯ ನಂತರ
ತನ್ನ ವೇಗವನ್ನು ಹೆಚ್ಚಿಸಿಕೊಂಡ ಪರಿಣಾಮವಾಗಿ ಸ್ವದೇಶಿ ಮತ್ತು ವಿದೇಶಿ ಬಹುರಾಷ್ಟ್ರೀಯ
ಕಂಪನಿಗಳ ಕಣ್ಣು ಸಂಪದ್ಭರಿತವಾದ ಆದಿವಾಸಿಗಳ ಸ್ವತ್ತಾದ ಅರಣ್ಯಭೂಮಿಯ ಮೇಲೆ ಬೀಳತೊಡಗಿತು.
ಇಡೀ ದೇಶದ ಖನಿಜ ಮೂಲಗಳಲ್ಲಿಶೇಕಡಾ 80ರಷ್ಟನ್ನು ಹೊಂದಿರುವ ಮದ್ಯಭಾರತದ ಈ ಭೂಮಿಯ
ಸಂಪನ್ಮೂಲಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಎಲ್ಲ ಕಂಪನಿಗಳು ಪೈಪೋಟಿ ನಡೆಸತೊಡಗಿದವು.
ಇವುಗಳು ನೀಡುವ ಹಣದಿಂದಲೇ ಚುನಾವಣೆಗಳನ್ನು ಎದುರಿಸುವ ಎಲ್ಲ ರಾಜಕೀಯ ಪಕ್ಷಗಳು ಸಹ ಅವುಗಳ
ತಾಳಕ್ಕೆ ಕುಣಿಯುತ್ತ ಹೇಗಾದರು ಮಾಡಿ ಆದಿವಾಸಿಗಳ ಕೈನಿಂದ ಭೂಮಿಯನ್ನು ಕಿತ್ತುಕೊಳ್ಳಲು
ಹುನ್ನಾರ ನಡೆಸ ತೊಡಗಿದವು. ಹೀಗಾಗಿಯೇ ಜಾರ್ಖಂಡ್ ಅಂತಹ ಪುಟ್ಟ ರಾಜ್ಯಗಳಲ್ಲಿ ನಡೆಯುವ
ಚುನಾವಣೆಗಳಲ್ಲಿ ಕಾಂಗ್ರೇಸ್ ಮತ್ತು ಬಾಜಪ ಸೇರಿದಂತೆ ಹಲವು ಸ್ಥಳೀಯ ಪಕ್ಷಗಳು ಆ ತೆರನಾದ
ಪೈಪೋಟಿ ನಡೆಸುತ್ತಿರುವುದು.
ಜೊತೆಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಅಲ್ಲಿನ ಸರಕಾರಗಳನ್ನು ಉರುಳಿಸಲು ಪಕ್ಷಗಳು
ನೀರಿನಂತೆ ಹಣವನ್ನು ಖರ್ಚು ಮಾಡುತ್ತಿರುವುದು. ಹೇಗಾದರು ಮಾಡಿ ತಾವು ಅಧಿಕಾರಕ್ಕೆ ಬಂದು
ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಮಾಡಿಕೊಟ್ಟು ತಾವೂ ಅದರ ಪಾಪದ ಫಲವನ್ನು ಉಣ್ಣುವ
ಹವಣಿಕೆಯಲ್ಲಿಯೇ ಎಲ್ಲ ಪಕ್ಷಗಳು ಸ್ಪರ್ದೆಗೆ ಇಳಿದಂತೆ ವರ್ತಿಸುತ್ತಿವೆ. ಎಲ್ಲಪಕ್ಷಗಳು
ಮತ್ತು ಎಲ್ಲ ಸರಕಾರಗಳು ಈ ಕಾಯಿದೆಯನ್ನು ತಿದ್ದುಪಡಿ ಮಾಡಲು ಹವಣಿಸುತ್ತಿರುವಾಗಲೇ
ಹುಟ್ಟಿಕೊಂಡಿದ್ದುಸಿ.ಎನ್.ಟಿ.ಬಚಾವೋ ಮೋರ್ಚಾ( ಚೋಟಾನಾಗಪುರ ಗೇಣಿ ಕಾಯಿದೆಯ ರಕ್ಷಣಾ
ಮೋರ್ಚಾ). ಸಿ.ಎನ್.ಟಿ. ಕಾಯಿದೆಗೆ ತಿದ್ದುಪಡಿ ತರುವ ಮೂಲಕ ನವವಸಾಹತುಶಾಹಿ ಶಕ್ತಿಗಳ,
ಬಹುರಾಷ್ಟ್ರೀಯ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಲು ಬದ್ದವಾದ ಸರಕಾರದ ವಿರುದ್ದ
ಹೋರಾಡುತ್ತಿದ್ದ ಸಿ.ಎನ್.ಟಿ.ಮೋರ್ಚಾಕ್ಕೆ ವಿರುದ್ದವಾಗಿ ಜಾರ್ಖಂಡ್ ಬಚಾವೋ
ಸಂಘರ್ಷಮೋರ್ಚಾವನ್ನು ಸ್ಥಾಪಿಸಿಕೊಂಡ ಬಂಡವಾಳಶಾಹಿ ಶಕ್ತಿಗಳು ಮತ್ತು ಅವರ ಹಿಂದೆ
ನಿಂತಿದ್ದ ರಾಜಕಾರಣಿಗಳು ಆಧುನಿಕತೆಯ ವಕ್ತಾರರೆನಿಸಿಕೊಂಡ ಕೆಲವು ಹಿತಾಸಕ್ತಿಗಳು
ಸೇರಿಕೊಂಡು ಜಾರ್ಖಂಡ್ ಬಚಾವೊ ಸಂಘರ್ಷ ಮೋರ್ಚಾ ಎಂಬ ವೇದಿಕೆಯನ್ನು ಸ್ಥಾಪಿಸಿಕೊಂಡು
ಕಾಯಿದೆಯ ತಿದ್ದುಪಡಿಗೆ ಲಾಬಿ ನಡೆಸ ತೊಡಗಿದವು. ಈ ಕಾಯಿದೆಯಿಂದ ತಮ್ಮ ತಿಜೋರಿ
ತುಂಬುತ್ತಿಲ್ಲವೆಂಬ ಹಪಾಹಪಿಗೆ ಬಿದ್ದ ರಿಯಲ್ ಎಸ್ಟೇಟ್ ಮಾಫಿಯಾ ಕೂಡ ಈ ಹುನ್ನಾರಕ್ಕೆ
ಬೆಂಬಲ ನೀಡತೊಡಗಿತು.
ಇಂತಹದೊಂದು ಕಾಯಿದೆಗೆ ತಿದ್ದುಪಡಿ ತಂದು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು
ಸರಕಾರದ ಮುಂದಿದ್ದದ್ದು ಎರಡು ದಾರಿಗಳು.ಒಂದು ದಲಿತ ಮತ್ತು ಹಿಂದುಳಿದ ಜಾತಿಗಳ ಪಟ್ಟಿಯನ್ನು
ಪರಿಷ್ಕರಿಸಿ ತನಗೆ ಬೇಕಾದ ರೀತಿಯಲ್ಲಿ ಅದನ್ನು ಸಿದ್ದಪಡಿಸಿ, ಅವರ ಭೂಮಿಯನ್ನು
ಲಪಟಾಯಿಸುವುದು. ಎರಡನೆಯದು ಪೋಲೀಸ್ ಠಾಣೆಯ ವ್ಯಾಪ್ತಿ ಮತ್ತು ಮುನಿಸಿಪಲ್ ವ್ಯಾಪ್ತಿಯೆಂಬ
ನಿಯಮಗಳನ್ನು ಸಡಿಲಿಸುವುದು. ಇದನ್ನು ಮಾಡಲು ಸಾದ್ಯವಾಗದ ಜಾರ್ಖಂಡ್ ಸರಕಾರ ಚೋಟಾನಾಗಪುರ್
ಗೇಣಿ ಕಾಯಿದೆಗೆ ಇದೀಗ ತಿದ್ದುಪಡಿ ತಂದು ಆದಿವಾಸಿಗಳ ಭೂಮಿಯ ಮೇಲಿನ ಹಕ್ಕಿಗೆ ಚ್ಯುತಿ
ತಂದಿದೆ.
ಈ ತಿದ್ದುಪಡಿಯ ಪ್ರಕಾರ ಆದಿವಾಸಿಯೊಬ್ಬ ತನ್ನ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳ
ಬದಲಿಗೆ ವಾಣಿಜ್ಯ ಉದ್ದೇಶಗಳಿಗೆ ಉಪಯೋಗಿಸ ಬಹುದಾಗಿದೆ. ಇದರಲ್ಲಿರುವ ಮೋಸವೆಂದರೆ ಆದಿವಾಸಿ
ಒಬ್ಬನಿಗೆ ಆಮೀಷಗಳನ್ನು ತೋರಿಸಿ ಅಥವಾ ಬೆದರಿಸಿ ಆತನ ಭೂಮಿಯನ್ನು ಆತನ ಹೆಸರಲ್ಲಿಯೇ
ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಸಾದ್ಯತೆ ಇದೆ. ಇಲ್ಲಿ ಆದಿವಾಸಿಯೊಬ್ಬನನ್ನು ಆಧುನಿಕತೆಯ
ಆಯುಧಗಳಾದ ಹಣದಿಂದ ಅಥವಾ ಬಂದೂಕುಗಳಿಂದ ಹೆದರಿಸಿ ಭೂ ಪರಿವರ್ತನೆಯನ್ನು ಅವನ ಹೆಸರಿನಲ್ಲಿಯೇ
ಮಾಡಿಸಿ, ಬೇರೆಯವರು ಅದನ್ನು ಬಳಸಬಹುದಾಗಿದೆ.
ಇನ್ನೊಂದು ತಿದ್ದುಪಡಿಯ ಪ್ರಕಾರ ಸರಕಾರ ಚೋಟಾನಾಗಪುರ ಪ್ರದೇಶದ ಭೂಮಿಯನ್ನು ಮೂಲಭೂತ
ಸೌಕರ್ಯಗಳಿಗಾಗಿ ಯಾವುದೇ ಅಡೆತಡೆಯಿರದೆ, ರೈಲು ಮಾರ್ಗಗಳಿಗಾಗಿ, ರಸ್ತೆಗಳಿಗಾಗಿ
ಸಂಪರ್ಕಸಂವಹನ ಕ್ರಿಯೆಗಳಿಗಾಗಿ, ಇಂದನ ಶಕ್ತಿಗಳಿಗಾಗಿ ನಡೆಸುವ ಗಣಿಗಾರಿಕೆಗಳಿಗಾಗಿ
ಆದಿವಾಸಿಗಳ ಭೂಮಿಯನ್ನು ವಶಪಡಿಸಿಕೊಳ್ಳಬಹುದಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಒಪ್ಪಿಗೆಯ
ಅಗತ್ಯ ಇರುವುದಿಲ್ಲ. ಇದರ ಹಿಂದಿರುವುದೇ ನಿಜವಾದ ಮರ್ಮ! ಇಂಧನಗಳಿಗಾಗಿ ಗಣಿಗಾರಿಕೆ ಮಾಡಲು
ಭೂಮಿ ವಶಪಡಿಸಿಕೊಳ್ಳುವ ಸರಕಾರ ತಾನೇ ಅದನ್ನು ಮಾಡುವುದಾಗಿ ಎಲ್ಲೂ ಹೇಳಿಲ್ಲ. ಭೂಮಿಯನ್ನು
ವಶಪಡಿಸಿಕೊಂಡ ಮೇಲೆ ಅದನ್ನು ಖಾಸಗಿಯವರಿಗೆ ನೀಡುವುದಿಲ್ಲವೆಂಬ ಖಾತ್ರಿಯೇನೂ ಇಲ್ಲ. ಜೊತೆಗೆ
ಮುಗ್ದ ಆದಿವಾಸಿಗಳನ್ನು ಬೆದರಿಸಿಯೊ ಹೆದರಿಸಿಯೊ ತಮಗೆ ಬೇಕಾದ ಹಾಗೆ ಅವನ ಭೂಮಿಯನ್ನು
ಪರಿವರ್ತಿಸಿಕೊಳ್ಳಲು ಈ ತಿದ್ದುಪಡಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡಲಿದೆ.
ಇದಿಷ್ಟೇ ಅಲ್ಲ ಇದುವರೆಗು ಆದಿವಾಸಿಗಳ ಸಂರಕ್ಷಣೆಯಲ್ಲಿದ್ದ ಭೂಮಿಯ ಒಡಲಲ್ಲಿನ ಅಮೂಲ್ಯ
ಖನಿಜಭಂಡಾರಗಳು ಸುರಕ್ಷಿತವಾಗಿದ್ದವು . ಆದರೆ ಈಗ ಆ ಖನಿಜ ಸಂಪತ್ತು ಉಳಿಯುವ ಯಾವ ಭರವಸೆಯೂ
ಇಲ್ಲದಂತಾಗಿದೆ. ಜೊತೆಗೆ ಈ ನೆಲದ ನಿಜವಾದ ಮೂಲನಿವಾಸಿಗಳಾದ ಆದಿವಾಸಿಗಳ ಸಂಖ್ಯೆ ದಿನೇ ದಿನೇ
ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಮುಂದೊಂದು ದಿನ ಆ ಜನಾಂಗಗಳೇ ಇಲ್ಲವಾಗಿಬಿಡುವ
ಸಾಧ್ಯತೆಯೂಇದೆ.
ಸರಕಾರದ ಪರವಿರುವ ಕಾನೂನು ತಜ್ಞರ ಪ್ರಕಾರ ಈ ತಿದ್ದುಪಡಿಯನ್ನು ಆದಿವಾಸಿಗಳ ಸಲಹಾ ಸಮಿತಿ(
ಟ್ರೈಬ್ಸ್ ಅಡ್ವೈಸರಿ ಕಮಿಡಿ-ಟಿ.ಎ.ಸಿ.)ಯ ನಿರ್ದೇಶನದಂತೆ ಮಾಡಲಾಗಿದೆಯಂತೆ. ಆದರೆ
ಜಾರ್ಖಂಡ್ ರಾಜ್ಯವು ಸಂವಿದಾನದ 5ನೇ ಶೆಡ್ಯೂಲಿನ ಅಡಿಯಲ್ಲಿರುವುದರಿಂದ ಈ ತಿದ್ದುಪಡಿಗೆ
ರಾಷ್ಟ್ರಪತಿಗಳ ಅಂಕಿತವಾಗಬೇಕಿರುವುದು ಅನಿವಾರ್ಯವಾಗಿದೆ. ಆದರೆ ಈ ತಿದ್ದುಪಡಿಯು ಮೂಲ
ಕಾಯಿದೆಯ ಆತ್ಮವನ್ನೇ ಇಲ್ಲವಾಗಿಸಿರುವುದಂತು ಸತ್ಯ.
ಇದೀಗ ವಿರೋಧಪಕ್ಷಗಳು ಈ ತಿದ್ದುಪಡಿಯನ್ನು ವಿರೋಧಿಸುತ್ತಿದ್ದು, ರಾಷ್ಟ್ರಪತಿಗಳ ಬಳಿಗೆ
ನಿಯೋಗ ಕೊಂಡೊಯ್ಯುವ ಮಾತಾಡುತ್ತಿವೆ. ಆದರೆ ಆದಿವಾಸಿಗಳು ಇದನ್ನೆಲ್ಲ ನಂಬುವ ಸ್ಥಿತಿಯಲ್ಲಿ
ಇಲ್ಲ. ಏಕೆಂದರೆ ಹೊರಜಗತ್ತಿನ ಕಣ್ಣಿಗೆ ಮಣ್ಣೆರಚಲುರಾಜಕೀಯ ಪಕ್ಷಗಳು ಈ ರೀತಿ
ನಾಟಕವಾಡುತ್ತಿವೆಯೆಂಬುದನ್ನು ಅವರು ಅರ್ಥಮಾಡಿಕೊಂಡಿವೆ, ಇದುವರೆಗೆ ನಡೆದ ಪ್ರಕ್ರಿಯೆಗಳೂ
ಹಾಗೇ ಇವೆ. ಖಾಸಗಿ ಕಂಪನಿಗಳಿಗೆ ಮತ್ತು ಭೂಮಾಲೀಕರಿಗೆ ಅನುಕೂಲ ಮಾಡಿಕೊಡುವ ವಿಷಯದಲ್ಲಿ
ಎಲ್ಲ ರಾಜಕೀಯ ಪಕ್ಷಗಳು ಏಕರೀತಿಯ ನೀತಿ ಅನುಸರಿಸುತ್ತಲೇ ಬಂದಿವೆ. ಚುನಾವಣೆ ನಡೆಸುವುದಕ್ಕೆ
ಮತ್ತು ಇತರೇ ರಾಜಕೀಯದಾಟಗಳಿಗೆ ನಿಧಿ ನೀಡುವ ಆ ವರ್ಗವನ್ನು ಶತಾಯಗತಾಯ ವಿರೋಧಿಸುವಂತಹ ಯಾವ
ಪಕ್ಷವೂ ಇಲ್ಲ.
ಇಲ್ಲಿರುವ ಮುಖ್ಯ ಪ್ರಶ್ನೆ: ಈ ಸಮಸ್ಯೆ ಇಂದು ಕೇವಲ ಆದಿವಾಸಿಗಳದ್ದು ಮಾತ್ರವಾಗಿ
ಉಳಿದಿಲ್ಲ. ಬದಲಿಗೆ ತುಂಡುಭೂಮಿಯನ್ನು ಹೊಂದಿರುವ ಈ ನಾಡಿನ ಕೋಟ್ಯಾಂತರ ರೈತರದು ಆಗಿದೆ.
ಯಾಕೆಂದರೆ ನಾವು ಆಲಂಗಿಸಿಕೊಂಡಿರುವ ಪಶ್ಚಿಮ ಮಾದರಿಯ ಅಭಿವೃದ್ದಿಯ ಪರಿಕಲ್ಪನೆಯೇ ಹಾಗಿದೆ.
ಅಗಾಧವಾದ ಪ್ರಾಕೃತಿಕ ಸಂನ್ಮೂಲಗಳನ್ನು ಮನಸೋಇಚ್ಚೆ ಬಳಸಿಕೊಂಡು, ಉಪಭೋಗ ಸಂಸ್ಕೃತಿಯ
ಗುಲಾಮನಾಗಿರುವ ಮನುಷ್ಯನನ್ನು ತಣಿಸುವ ಇರಾದೆ ಹೊಂದಿರುವ ಈ ಮಾರ್ಗಕ್ಕೆ ಆದಿವಾಸಿಗಳ ಮೂಲಭೂತ
ಹಕ್ಕಾಗಲಿ, ರೈತರಿಗಿರುವ ಭೂಮಿಯ ಮೇಲಿನ ಅಸ್ಮಿತೆಯಾಗಲಿ ಅರ್ಥವಾಗಲು ಸಾದ್ಯವಿಲ್ಲ. ಇವತ್ತು
ಚೋಟಾನಾಗಪುರದ ಆದಿವಾಸಿಗಳಿಗೆ ಆದದ್ದು ನಾಳೆ ಕೇರಳ, ಅಸ್ಸಾಂ, ಒಡಿಸ್ಸಾ, ನಾಗಾಲ್ಯಾಂಡ್
ಮೂಲನಿವಾಸಿಗಳಿಗೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದ ರೈತರಿಗೆ ಆಗುವುದಿಲ್ಲ ಎಂಬುದಕ್ಕೆ
ಯಾವ ಖಾತ್ರಿಯೂ ಇಲ್ಲ.
ಹಾಗಾಗಿ ಇದರ ಹಿಂದಿರುವ ಪಶ್ಚಿಮ ಮಾದರಿಯ ಅಭಿವೃದ್ದಿಯ ಕಲ್ಪನೆಯನ್ನು ನಿರಾಕರಿಸಿ,
ನಮ್ಮದೇ ಆದ ಒಂದು ಆರ್ಥಿಕ ನೀತಿಯನ್ನು ಅಳವಡಿಸಿಕೊಳ್ಳುವುದೊಂದೆ ನಮಗೆ ಉಳಿದಿರ ಬಹುದಾದ
ಏಕೈಕ ಮಾರ್ಗ!
Share this:
Click to email this to a friend (Opens in new window)Click to share on
Twitter (Opens in new window)Click to share on Google+ (Opens in new
window)Share on Facebook (Opens in new window)
Related
ಬುಡಕಟ್ಟುಗಳ ಅಬಿವೃದ್ಧಿ : ಮಹಾಶ್ವೇತಾದೇವಿಯವರ ಚಿಂತನೆಗಳು-2
December 24, 2016
In "ಸಮಾಜ"
ಬುಡಕಟ್ಟುಗಳ ಅಬಿವೃದ್ಧಿ : ಮಹಾಶ್ವೇತಾದೇವಿಯವರ ಚಿಂತನೆಗಳು-1
December 23, 2016
In "ಸಮಾಜ"
ಬುಡಕಟ್ಟು ಮೀಮಾಂಸೆ-4: ಆದಿವಾಸಿಗಳ ಅನನ್ಯತೆಯ ಗಾಯಗಳೂ
January 5, 2016
In "ಜಾನಪದ"
Leave a Reply
Your email address will not be published.

Name

Email

Website

Add your comment
Post Comment
 Notify me of follow-up comments by email.
 Notify me of new posts by email.
ಇತ್ತೀಚಿನದ್ದು
ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ
ಚೋಟಾನಾಗಪುರ: ಆದಿವಾಸಿಗಳ ಸರ್ವನಾಶದ ಹುನ್ನಾರ
ಭ್ರಷ್ಟ್ರರ ಬೇಟೆ:ಭ್ರಷ್ಟಾಚಾರ ವಿರೋಧಿ ಕಾನೂನುಗಳು
ಕೊಟ್ಟೂರೇಶ್ವರ – ಧರ್ಮ – ರಾಜಕೀಯ
‘ಕಾಸಿಗಾಗಿ ಸುದ್ಧಿ’ ಯಷ್ಟೇ ಅನೈತಿಕ
Categories
Uncategorized ಅಂಕಣಗಳು ಆಟೋಟ ಆಡಳಿತ ಆಹಾರ-ಆರೋಗ್ಯ ಇತಿಹಾಸ ಊರುಕೇರಿ ಕತೆ ಕಲೆ ಕವಿತೆ
ಕಾರ್ಯಾಂಗ ಕೃಷಿ-ಕೈಗಾರಿಕೆ ಚಳವಳಿ ಚಿತ್ರಕತೆ ಚಿತ್ರದ ಓದು ಜಾನಪದ ದೇಶ ಧರ್ಮ-ಆಧ್ಯಾತ್ಮ
ನ್ಯಾಯಾಂಗ ಪರಿಸರ ಪುಸ್ತಕ ಪರಿಚಯ ಪ್ರವಾಸ ಫೋಟೋಗ್ರಫಿ ಭಾಷೆ-ಶಿಕ್ಷಣ ಮನೆಮಾತು
ಯುವ-ವಿದ್ಯಾರ್ಥಿ ಚಿಂತನ ರಂಗಭೂಮಿ ರಾಜಕೀಯ-ಆರ್ಥಿಕತೆ ರಾಜ್ಯ ಲಲಿತ ಪ್ರಬಂಧ
ವಿಜ್ಞಾನ-ತಂತ್ರಜ್ಞಾನ ವಿದೇಶ ವ್ಯಂಗ್ಯಚಿತ್ರ ವ್ಯಕ್ತಿಚಿತ್ರ-ಅನುಭವಚಿತ್ರ ಶಾಸಕಾಂಗ
ಶಿಲ್ಪಕಲೆ ಸಂಗೀತ ಸಮಾಜ ಸಾಹಿತ್ಯ ವಿಮರ್ಷೆ ಸಾಹಿತ್ಯ ಸಂಸ್ಕೃತಿ ಸಿನಿಮಾ ಹಳತು-ಹೊನ್ನು
Facebook
Twitter
Google+
RSS
↑ ಅನಿಕೇತನ
Log in - Copyright © Aniketana - Developed by imcanny


--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"SocialScience STF" group.
To unsubscribe from this group and stop receiving emails from it, send an email
to [email protected].
To post to this group, send email to [email protected].
For more options, visit https://groups.google.com/d/optout.