ಸೆಕೆಂಡ್ರಿ ಸರ್ಟಿಫಿಕೆಟ್ ಒಂದೇ  ಶೈಕ್ಷಣಿಕ ಸಮಗ್ರ ಅಭಿವೃದ್ದಿಯ ದ್ವೋತಕವೆ ?
One ಕ್ರೀಟಿಕಲ್ ಥಿಂಕಿಂಗ್ ...
ಅವಾಸ್ತವ ದಿಂದ ವಾಸ್ತವದತ್ತ....  ಒಂದು ಚಿಂತನೆ ...
ಇತ್ತಿಚಿನ ವರ್ಷಗಳಲ್ಲಿ ಎಸ್. ಎಸ್ .ಎಲ್. ಸಿ. ಪರೀಕ್ಷೆಯ ಪಲಿತಾಂಶ ಸುಧಾರಣೆಗಾಗಿ,
ಹೆಚ್ಚಳಕ್ಕಾಗಿ , ಸ್ಥಾನ ಕಾಯ್ದುಳ್ಳುವದಕ್ಕಾಗಿ,,ಟಾಪ್ ಬರುವದಕ್ಕಾಗಿ, ಪ್ರತಿ ಜಿಲ್ಲೇಯ
ಆಡಳಿತ ವ್ಯವಸ್ಥೆ ಮತ್ತು ಸಾ .ಶಿ. ಇ ಯು ಪಲಿತಾಂಶವನ್ನು ಪ್ರತಿಷ್ಟೆ ಎಂಬಂತೆ
ಬಿಂಬಿಸಲಾಗುತ್ತಿದೆ. ಇದಕ್ಕಾಗಿ ಹತ್ತಾರು ಕ್ರೀಯಾ ಯೋಜನೆಗಳು ಸುಧಾರಣಾ ಕ್ರಮಗಳು ,
ಸಭೆಗಳು, ಕಿರುಹೊತ್ತಿಗೆಗಳು, ಹಿಮ್ಮಾಹಿತಿ, ಪಲಿತಾಂಶ ವಿಶ್ಲೇಷಣೆ ,ಸಮಸಲೋಚನಾಸಭೆ,   ಖಡಕ್
ವಾರ್ನಿಂಗ್ , ಶಿಕ್ಷಕರನ್ನೇ ನೇರಹೊಣೆಗಾರಿಕೆ ಮಾಡುವದು ,ಸೂಚನಾ ಪತ್ರ ನೀಡುವದು
..ಇತ್ಯಾದಿ.. ಇತ್ಯಾದಿ .. ಗಂಭಿರವಾಗಿ ಪರಿಗಣಿಸಿಕೊಂಡು  ಹತ್ತಾರೂ ಮಾಸ್ಟರ್ ಪ್ಲ್ಯಾನ್
 ಹಾಕಿ ಕೊಳ್ಳಲಾಗುತ್ತಿದೆ. ಇದು ಮಕ್ಕಳ ಮನೋವೈಜ್ಞಾನಿಕವಾಗಿ , ಸಾಮಾಜಿಕವಾಗಿ ,ಸಾಮಾಜಿಕ
ವ್ಯವಸ್ಥೆ ಯಿಂದಾಗಿ , ನಗರಹಳ್ಳಿಗಳ ತುಲನೆಯಿಂದಾಗಿ, ಶಿಕ್ಷಕರ ಮನಸ್ಥಿತಿಯಿಂದಾಗಿ, ಮಕ್ಕಳ
ಬೌದ್ದಿಕ ಸಾಮರ್ಥದಿಂದಾಗಿ , ಶಾಲೆಯ ಮೂಲಭೂತ ಅವಶ್ಯಕತೆಗಳಿಂದಾಗಿ .. ಹತ್ತಾರು
ದೃಷ್ಟಿಕೋನದಿಂದ ಚಿಂತನೆ ಮಾಡಿದರೆ ..   ಪಲಿತಾಂಶ ಪ್ರತಿಷ್ಟೆ ಎಂದು ಏಕೆ ಬಿಂಬಿಸಬೇಕು
ಎನ್ನುವ ಸಣ್ಣ ಅನುಮಾನ ಎಲ್ಲರ ಮನದಲ್ಲೂ ಹುಟ್ಟುತ್ತದೆ.
೧೦ ನೇ ತರಗತಿಯನ್ನು  ಸಿ ಸಿ ಇ ವ್ಯಾಪ್ತಿಗೆ ಒಳಪಡಿಸಿದರೂ , ಸಾಂಪ್ರದಾಯಿಕವಾಗಿ ಕೆವಲ ೬
ವಿಷಯಗಳಿಗೆ ಮಾತ್ರ ಪರೀಕ್ಷಾ ಮಂಡಳಿ ಲಿಖಿತ ಪರೀಕ್ಷೆ ಪ್ರಕ್ರೀಯೆಗೆ ಒಳಪಡಿಸುತ್ತಿದೆ .
ಅಷ್ಟಕ್ಕೂ ಇನ್ನೂಳಿದ ವಿಷಯಗಳಿಗೆ ಏಕೆ ಈ ಪ್ರಕ್ರಿಯ ಚೌಕಟ್ಟಿನೊಳಗೆ ಒಳಪಡಿಸಲು ಮನಸ್ಸು
ಮಾಡುತ್ತಿಲ್ಲ. ? ಒಂದು ಕಡೆ ಮಕ್ಕಳನ್ನು‌ ಸರ್ವತೋಮೂಖ ಅಭಿವೃದ್ದಿ  ಮತ್ತು ನಿತ್ಯ
ಜೀವನಕ್ಕೆ ಅಣಿಗೊಳಿಸುವ ಮಹದುದ್ದೇಶದ  ಮತ್ರ ಜಪಿಸಿದರೆ  ಇನ್ನೋಂದಡೆ ಕೇವಲ‌ ಆರು ವಿಷಯಗಳ
ಒಂದು ಬಾರಿ ಪಲಿತಾಂಶ ಮಾತ್ರ ವಿಜೃಂಭಣೆ ಮಾಡುವದು ಯಾವ ಪುರುಷಾರ್ಥ ಸಾಧನೆಗಾಗಿ ? ಈ
ವಿಜೃಂಭಣೆಯ ವ್ಯವಸ್ಥೆಯಲ್ಲಿ ಬಲಿಪಶುಗಳಾಗುತ್ತಿರುವದು ಪ್ರಾಮಾಣಿಕವಾಗಿ ಕಲಿಸಿಯೂ
 ಉತ್ಕೃಷ್ಟ ಪಲಿತಾಂಶ ಬಾರದೇ ಹತಾಶರಾದ ಶಿಕ್ಷಕರು  ಮತ್ತು ಅತ್ಯಂತ ಕೆಳಸ್ಥರದ ಸಮುದಾಯದಿಂದ
ಶಾಲೆಗೆ ಬರುವ ಮಕ್ಕಳು ವಿವರೀತ ಒತ್ತಡದಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳ ವಸ್ತುಸ್ತಿತಿ ಬಗ್ಗೆ ಎಲ್ಲರೂ ಬಲ್ಲರು , ಹಳ್ಳಿಯ ಸಾಮಾನ್ಯನಿಗೂ
ಕೇಳಿದರೆ ಚನ್ನಾಗಿ ವಿವರಿಸಬಲ್ಲ.ಆದರೂ ಈ ಸತ್ಯ ಮರೆಮಾಚಿ ಒತ್ತಡದ ತಂತ್ರ  ಹೇರಿ
ಶಿಕ್ಷಕರನ್ನು  ಸುಕಾಸುಮ್ಮನೆ ಸಂಕಷ್ಟಕ್ಕೆ ತಳ್ಳಿ ,ವಿಪರೀತ ಒತ್ತಡ ಉಂಟುಮಾಡಲಾಗುತ್ತಿದೆ.
ಶಿಕ್ಷಕರು ಇದನ್ನು ಉಗುಳಲು  ಆಗದೇ ನುಂಗಲೂ ಆಗದೇ , ಬಡವನ ಸಾತ್ವಿಕ ಸಿಟ್ಟು ದವಡೆಗೆ ಮೂಲ
ಎಂದು ಅರಿತು ಪರಿಣಾಮ ದಬಗ್ಗೆ ಎಲ್ಲೂ ಉಸಿರೆತ್ತದೆ ಮೂಕರಾಗಿ ಕರ್ತವ್ಯ
ಮಾಡುತ್ತಿದ್ದಾರೆ.ಇವರ ಮನದಲ್ಲಿರುವ ಆಕ್ರೋಷ,  ಸಿಟ್ಟು , ಒತ್ತಡ ,ಖಿನ್ನತೆ . ಬಿಪಿ,
ಎಲ್ಲವನ್ನೂ ನುಂಗಿಕೊಳ್ಳುತ್ತಾ ಒಂದಿಷ್ಟು .. ಕೈಲಾದ ಸೇವೆ ಮಾಡುತ್ತಾ, ಹೊಸ ಬದಲಾವಣೆಯ
ಆಶಾಭಾವದಲ್ಲಿ ನಾಲ್ಕು ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣದಲ್ಲಿ   ಕೊಂಚ ನೆಮ್ಮದಿ ಸಂತಸದ
ಹೊನಲು ನಗೆ ಮುಖದಲ್ಲಿ ಮುಡಿಸಿಕೊಂಡು ಎಲ್ಲ ಮರೆತಿದ್ದಾರೆ ಎನ್ನಬಹುದು.. .
ಶಿಕ್ಷಕರ ನಿತ್ಯ ಕೆಲಸ ಕಾರ್ಖನೆಯ ಯಂತ್ರಗಳ   ಅಥವಾ ಕಡತಗಳ ಜೊತೆಗಾಗಲಿ ಅಲ್ಲ .
ಜೀವಂತವಿರುವ ಬೌದ್ದಿಕ ಅಪಕ್ವದ ಜೀವನಾನುಭವ ವಿಲ್ಲದ ಮಕ್ಕಳ ಜೊತೆ . ಈ ಮಕ್ಕಳು ಗರಿಷ್ಟ
ಸಂಖ್ಯೆಯಲ್ಲಿ ಪಾಸಾಗಲೇ ಬೇಕು ಎಂದು ಟಾರ್ಗೆಟ್ ನೀಡಿ ಶಿಕ್ಷಕನನ್ನೇ ಇದರ ಹೊಣೆ ಮಾಡಿದರೆ ,
ಶಿಕ್ಷಕರೇನು ಮಕ್ಕಳ ಸೃಷ್ಟಿಕರ್ತರೇನು? ಮಕ್ಕಳ ಬೌದ್ದಿಕ ಶಕ್ತಿ ಮತ್ತು ಜಿನ್ಸ್  ಬದಲಾಯಿಸಿ
ಮ್ಯಾಜಿಕ್ ಮಾಡಿ ಎಲ್ಲ ತೊಂದರೆ ತಾಪತ್ರಯ ಪರಿಹರಿ ಕೇವಲ ಉತ್ಕೃಷ್ಟ ಪಲಿತಾಂಶ ನೀಡಲು ?
ಕೇವಲ ಆರೇ ಆರು ವಿಷಯ ಶಿಕ್ಷಕರ ಮನಸ್ಸಿತಿ ಅವರ ತುಡಿತ ಮಿಡಿತ ,ದೀರ್ಘ‌ ಶ್ರಮ ಒತ್ತಡದ ಮೇಲೆ
ಹಾಗೆ ಸುಮ್ಮನೆ ಕಣ್ಣಾಡಿಸಿದರೆ..ಆ ಪರಿಶ್ರಮಿ ಶಿಕ್ಷಕನ   ಮನದ ಒಳಗೆ ಮಡುಗಟ್ಟಿ ನಿಂತ
ಹತ್ತಾರೂ ಸ್ಪೋಟಕ ಕಟು ವಾಸ್ತವ ಸತ್ಯ ಸಂಗತಿಗಳು ಬಟಾಬಯಲಾಗುತ್ತವೆ.
  ಶಿಕ್ಷಕನ  ಒಳಮನಸ್ಸಿನ ಕೆಲವು ಭಾವನೆಗಳು ...
೧) ೧೪ /೧೫ ವರ್ಷದ ವರೆಗೂ  ಮಕ್ಕಳಿಗೆ  ಅನುತ್ತೀರ್ಣದ ಪರಿಕ್ಪನೆ  ಮೂಡಿಸದೇ  ತತ್ ಕ್ಷಣ
ಹತ್ತನೇ ತರಗತಿ ಕಡ್ಡಾಯವಾಗಿ ಪಾಸುಮಾಡಲೇ ಬೆಕು ಎಂದು ಮಕ್ಕಳ ಮನಸ್ಸಿಗೆ ಒತ್ತಡ ಹೇರುವದು
ಎಷ್ಟು ಸಮಂಜಸ ?
೨) ಸರ್ಕಾರಿ ಶಾಲೆಯಲ್ಲಿ  ಹತ್ತನೇ ತರಗತಿ ಓದುವ ಸರಾಸರಿ ೨೦/೩೦ ಮಕ್ಕಳಿಗೆ ಭಾಷೆ ಮತ್ತು
ಕೊರ್ ವಿಷಯಗಳ ಮೂಲಪರಿಕ್ಪನೆಯ ಜ್ಞಾನವೇ ಇಲ್ಲ ಎಂದು ಅನೇಕ  NGO ಗಳೂ ವರದಿಮಾಡಿರುವದು ಏಕೆ
ಕಡೆಗಣಿಸಲಾಗುತ್ತಿದೆ .
೩) ಪ್ರಾಥಮಿಕ ಶಾಲಾ ಹಂತದಲ್ಲೇ ನೂರಾರು ಸಮಸ್ಯೆಗಳು  ಕಣ್ಣಿಗೆ ರಾರಾಜಿಸುತ್ತಿದ್ದಾಗ್ಯೂ
 ಅದನ್ನು ಗಣನೆಗೆ ತಗೆದುಕೊಳ್ಳದೇ ಕೇವಲ ಸೆಕೆಂಡ್ರೀ ಲಿವಿಂಗ್ ಸರ್ಟಿಫಿಕೇಟ್  ಮಾತ್ರ
ಪ್ರತಿಷ್ಟೆ ಯಾಗಿ ಬಿಂಬಿಸಲಾಗುತ್ತಿದೆ ಏಕೆ
೪) ಕೆಲವು ಮಕ್ಕಳಿಗೆ ಓದು ಬರಹದ ಜ್ಞಾನ ತಲೆಗೆ ಹತ್ತದಾಗ್ಯೂ ತಮಗೆ ಆಸಕ್ತ ಕ್ಷೇತ್ರದಲ್ಲಿ
ಅದ್ಬುತ ಕ್ರೀತಾಕೌಶಲ್ಯತೆ ಇರುವದು. ಇದನ್ನು ಪ್ರೋತ್ಸಾಹಿಸಿ ಪ್ರೆರಣೆ ಉತ್ತೇಜಿಸುವ
ಬದಲ್ಲಿಗೆ ಕೇವಲ ಆರು ವಿಷಯ  ಪಾಸ್ ಮಾಡಬೇಕು ಎಂದು ವಿಪರೀತ ಒತ್ತಡ ಹೇರುವದು ಎಷ್ಟು ಸರಿಯಾದ
ಕ್ರಮವಾಗಿದೆ ?
೫) ಪಿ ಯು ಸಿ ಅಥವಾ ಪ್ರಾಥಮಿಕ ಶಿಕ್ಷಣಕ್ಕಾಗಲಿ ನಿಡದ  ಪ್ರಾಧಾನ್ಯತೆ , ಪಲಿತಾಂಶ
ಪ್ರತಿಷ್ಟೆ ಸೆಕೆಂಡ್ರಿ ಸರ್ಟಿಪಿಕೇಟ್ ಗೆ ಯಾಕೆ  ಪ್ರತಿ ಜಿಲ್ಲೆ ಹವಣಿಸುತ್ತಿವೆ ?
೬)  ಕಲಿಕೆಯಲ್ಲಿ ತೀರ್ವ ಹಿಂದುಳಿದ ಮಕ್ಕಳಿಗೆ ವಿಪರೀತ ಒತ್ತಡದ ತಂತ್ರ ಹೇರಿ ಪಾಸಾಗಲೇಬೆಕು
ಎಂದು ಹಿಂಸೆ ನೀಡುವದು , ಶಿಕ್ಷಿಸುವದು ( ಇದು ಅಪರಾಧ) ಎಷ್ಟು ಸರಿಯಾದ ಕ್ರಮವಾಗಿದೆ.
೮)  ೮ನೇ ತರಗತಿ ನಂತರ ಅದೆಷ್ಟೊ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತವೆ. ೯ ನೇ ತರಗತಿಯಲ್ಲೇ
 ೧೦ ನೇ ತರಗತಿ ಪಲಿತಾಂಶ ಹೆಚ್ಚಳಮಾಡಲು ಕೆಲವು ಸಾಲೆಗಳು ಈ ತಂತ್ರ ಅನುಸರಿಸುವದು
ಸಹಜವಾಗಿದೆ. ಒಂಭತ್ತು ವರ್ಷ ನಂತರ ಸಡನ್ ಆಗಿ ಮಕ್ಕಳಿಗೆ ಮಾಡುವ ವಂಚನೆಯಲ್ಲವೆ ?
 ೯)  ಶಿಕ್ಷಕರಿಗೂ ವೈಯಕ್ತಿಕ ಬದುಕಿದೆ . ಮಾನವ ಹಕ್ಕುಗಳಿವೆ  . ಇದಕ್ಕೆ
 ವಿರೋಧಾಬಾಸವೆಂಬಂತೆ ,ಶಾಲಾ ನಿಗದಿತ ಸಮಯಕ್ಕಿಂತ ಹೆಚ್ಚಿನ ವೆಳೆ  ದುಡಿಮೆ ಮಾಡಲು
ಪ್ರಜೋದಿಸಲಾಗಿತ್ತಿದೆ . ಮಾಡದಿದ್ದರೆ ಕರ್ತವ್ಯ ಚುತಿ ಎಂದು ಆಪಾದಿಸಲಾಗುತಚತಿದೆ.
೧೦) ಸರ್ಕಾರದ ಬೇರೆ ಇಲಾಖೆಯ ಸಿಬ್ಬಂದಿಗೂ ಶಿಲ್ಷಕರಿಗೂ ಕರ್ತವ್ಯದ ದೃಷ್ಡಿಯಲ್ಲಿ
ಸಾಮಿಪ್ಯತೆ ಬಹಳ ಕಡಿಮೆ . ಆದರೆ ಕೇವಲ  ಹತ್ತನೇ ಪಲಿತಾಂಶದ  ಕೇಂದ್ರಿಕರಿಸಿ ಕೆಲಸ ಮಾಡಬೇಕು
ಎನ್ನುವದು  ಎಷ್ಟು ಸೂಕ್ತ
೧೧) ಕೆವಲ ಪರೀಕ್ಷೆ ಪಲಿತಾಂಶವೇ ವಿಜೃಂಭಣೆ ಯಾದರೆ ಪಠ್ಯಕ್ರಮಾ ಆಶಯ ಉದ್ದೇಶ ಇಡೆರಿಸುವವರು
ಯಾರು
೧೨) ಶಿಕ್ಷಕನ ಸಾಧನೆ ಕೇವಲ ಪರೀಕ್ಷೆ ಪಲಿತಾಂಶಕ್ಕೆ ಮತ್ರ ಸಿಮಿತ ಗೊಳಿಸಿದರೆ , ಸಹಪಠ್ಯ
ಮತ್ತು ಪಠ್ಯೆತರ ಚಟುವಟಿಕೆ ಗಳ ಅಭಿವೃದ್ದಿ ಮಾಡುವರು ಗಮನಹರಿಸುವವರು ಯಾರು
೧೩) ಪಲಿತಾಂಶವೇ ಮುಖ್ಯವಾದಾಗ ಓದು ಬರಹ ಬಲ್ಲ ಮಕ್ಕಳಿಗೆ ಒಂದು ಎರಡು ತಿಂಗಳಲ್ಲಿ
ಪರೀಕ್ಷೆಗೆ ಸಿದ್ದಗೊಳಿಸಬಹುದು . ಆದರೆ ಒಂದು ವರ್ಷದ ಸುಕಾಸುಮ್ಮೆ ಸಮಯ,ರಾಷ್ಟೀಯ ಸಂಪತ್ತು
ವ್ಯರ್ಥಮಾಡುವದಾದರೂ ಯಾವಕಾರಣಕ್ಕಾಗಿ .
೧೨)  ರಾತ್ರಿ ಶಾಲೆ, ವಿಶೇಷ ತರಗತಿ ರವಿವಾರ ತರಗತಿ ಎಂದು ಮಕ್ಕಳ ಮತ್ತು ಶಿಕ್ಷಕರ  ಮೇಲೆ
ಒತ್ತಡ ಹೇರಿ ಸ್ವಾತಂತ್ರ ಹರಣ ಮಾಡಲಾಗುತ್ತಿದೆ.ಇದಕ್ಕಾಗಿ  ಮೌಖಿಕ ,ಅಲಿಖಿತ ಆದೇಶಗಳು
ಹೆರಲಾಗಿದೆ . ಶಿಕ್ಷಕರ ಅಸಹಾಯಕತೆ ದೌರ್ಬಲ್ಯವೇ ಅಸ್ತ್ರ ಮಾಡಿಕೊಂಡು ಕರ್ತವ್ಯ  ಶಿಸ್ತು
ಕ್ರಮದ ಕತ್ತಿ ಝಲಪಿಸುವದು ಏಕೆ ?
೧೩) ಶಿಕ್ಷಕರೇ ತಮ್ಮ‌ ಸಂಬಳದಲ್ಲಿ  ಮಕ್ಕಳ ಅಭಿವೃದ್ದಿಗೆ ಹಣ ಕರ್ಚು ವೆಚ್ಚ ಮಾಡುವ ಪರಿಪಾಠ
ಬೆಳೆಯುತ್ತಿದೆ. ವ್ಯವಸ್ಥೆಯ ಒತ್ತಡಕ್ಕೆ ಹೀಗೆ  ಹೆದರಿ ಮಡಿದ ಉದಾಹರಣೆಗಳಿವೆ. ಶಿಕ್ಷಕನ
ವೈಯಕ್ತಿಕ ಹಣ ಕರ್ಚುಮಾಡುವದು ಎಷ್ಟು ಸಮಂಜಸ ?
೧೪) ಖಾಸಗಿ ಶಾಲೆಗಳ ಪರೋಕ್ಷ ಮೂಲ ಉದ್ದೇಶವೆ ಬೇರೆ . ಇವುಗಳ ಗುಣ ಸ್ವಭಾವ ಲಕ್ಷಣಗಳೇ ಬೆರೆ
. ಆದರೆ ಈ ಶಾಲೆಗಳ ಜೊತೆ ಸರ್ಕಾರಿ ಶಾಲೆಗಳ ಹೊಲಿಕೆ ವ್ಯತ್ಯಾಸ ಮಾಡುವದು ಎಷ್ಟು
ಸಮಂಜಸವಾಗಿದೆ.
೧೬)ಗ್ರಾಮೀಣ ಭಾಗದಲ್ಲಿ ಇಂದಿಗೂ ಮೂಲ ಸೌಲಭ್ಯಗಳು ಮರಿಚಿಕೆಯಾಗಿರುವಾಗ , ಸಮಸ್ಯೇಗಳೇ ಹಾಸು
ಹೊಕ್ಕಾಗಿರುವಾಗ, ದಾಖಲಾದ ಮಕ್ಕಳು ನಿರಂತರ ಹಾಜರಾತಿಯೇ ಒಂದು ದೊಡ್ಡ ಸಾಧನೆ
 ಸವಾಲಾಗಿರುವಾಗ ನಗರಗಳ ಪ್ರತಿಷ್ಟಿತ ಶಾಲೆಗಳಂತೆ  ಗರಿಷ್ಟ ಪಲಿತಾಂಶ ನೀರಿಕ್ಷಿಸುವದು
ಎಷ್ಟು ಸೂಕ್ತ ?
೧೭) ಭ್ರಸ್ಟವ್ಯವಸ್ಥೆಯಲ್ಲಿ ಕಾಗದದ ದಾಖಲೆಗಳಲ್ಲಿ  ಮಾತ್ರ ಸರ್ಕಾರದ ಸಕಲ ಸೌಲಭ್ಯಗಳು
ಇರುತ್ತವೆ. ವಾಸ್ತವದಲ್ಲಿ ಅವುಗಳ ಉಪಯೋಗ ಫಲಾನುಭವ ಮಾತ್ರ ಶೂನ್ಯ .ಹೀಗಿರುವಾಗ ಶಾಲೆಯಲ್ಲಿ
ಗರಿಷ್ಟ ಪಲಿತಾಂಶ ಸುಧಾರಣೆ ಹೇಗೆ ಸಾದ್ಯ ?
೧೮) ರಾಜ್ಯದ ಅದೆಷ್ಟೋ ಶಾಲೆಗಳಲ್ಲಿ ವಿಷಯ ಶಿಕ್ಷಕರ ಕೊರತೆ ಇದೆ. ಇದ್ದ ಶಿಕ್ಷಕರ ಮೇಲೆನೆ
ಮತ್ತೊಂದು ವಿಷಯ ಭೋದನೆ ಹೊರೆ ಹಾಕಲಾಗಿದೆ. ಹೊರೆ ಹೊತ್ತ ಶಿಕ್ಷಕ ತುಟಿ ಪಿಟಕ್ ಎನ್ನದೇ
 ಯಾವ ರಾಜಕೀಯ ಓಲೈಕೆ ಮಾಡದೇ ಹೊರೆಹೊತ್ತು ನಿಭಾಯಿಸುತ್ತಿದ್ದಾರೆ  ಇಂಥವರಿಗೆ ಶಭಾಷ್ ನೀಡಿ
ಹುರುಪು ತುಂಬುವ ಬದಲು ಶೊಕಾಸ್ ನೊಟಿಸ್ ನೀಡಿದ ಉದಾ ಗಳೂ ಇವೆ .
೧೯) ಶಿಕ್ಷಣ ಇಲಾಖೆ ರಜೆ ಯುಕ್ತವಾಗಿದ್ದು ( ವೆಕೆಷನ್ ) ಶಿಕ್ಷಕರಿಗೆ 15 EL ಹೊರತಾಗಿ
 ವಿಷೇಶ ಎಂಬ ಇತರೇ ಯಾವ ಭತ್ಯ ಸೌಲಭಗಳು ಇಲ್ಲ ಆದರೂ ಇತ್ತಿಚಗೆ ಅಕ್ಟೋಬರ್ / ಬೇಸಿಗೆ
ರಜೆಯಲ್ಲಿ ತರಗತಿ ನಡೆಸಬೇಕು ಎಂಬ ಅಲಿಖಿತ ಮೌಖಿಕ ಆದೇಶಗಳ ಒತ್ತಡ ಹೇರುತ್ತಿರುವದು
ನ್ಯಾಯೋಚಿತವೆ ?
೨೦) ರಾತ್ರಿ ಶಾಲೆ ,ವಿಶೇಷ ತರಗತಿ ವೇಳೆ ಎನಾದರೂ ಆಕಸ್ಮಿಕ ಅವಗಡಗಳಾದಾಗ  ತರಗತಿ ತಗೆದು
ಕೊಂಡ ಶಿಕ್ಷಕರನ್ನೆ ಹೊಣೆಗಾರನಾಗುವನು . ಹಾಗಾದರೆ ತರಗತಿ ತಗೆದುಕೊಳ್ಳುವದು ಯಾವ
ಪುರುಷಾರ್ಥಕ್ಕಾಗಿ ?  ರಕ್ಷಣೆ ಇಲ್ಲ ವೆಂದಮೇಲೆ ಹೆಚ್ಚುವರಿ ಕೆಲಸ ಏತಕ್ಕಾಗಿ
೨೧) ಕಲಿಕೆ ಹೊರತಾಗಿ  ಗಿ‌ಹತ್ತಾರೂ ಅನಗತ್ಯ ಜವಾಬ್ದಾರಿಗಳು ಶಿಕ್ಷಕ ಹೊತ್ತಿದ್ದಾನೆ . ಉದಾ
:- ಅಕ್ಷರಸಾಸೋಹ  ಈ ಅನಗತ್ಯ ವತ್ತಡಗಳು ಏಕೆ ಹೇರಲಾಗಿದೆ .
೨೨)  ಪ್ರೌಢಶಾಲೆ ಶಿಕ್ಷಕರು ಸಾಮಾನ್ಯವಾಗಿ ಗ್ರಾಮೀಣ ಭಾಗದ  ಮದ್ಯಮ ಬಡವರ್ಗದವರೇ
ಆಗಿರುವರು. ಸರ್ಕಾರಿ ಕೆಲಸದ ಅವಕಾಶಕ್ಕಾಗಿ ಬೆರೆ ವಿಭಾಗ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಣೆ
ಮಾಡುವರು. ಇಂತವರಿಗೆ ಇತರೇ ಯಾವುದೇ ಆದಾಯದ ಮೂಲಗಳು ಇಲ್ಲದೇ ಹೋದರೆ ಸೇವೆಯ ನಿವೃತ್ತಿ
ವರೆಗೂ ಒಂದು ಚಿಕ್ಕ ಮನೆ ನಿರ್ಮಾಣ ಮಾಡಿಕೊಳ್ಳುವದು ಅಸಾದ್ಯವೇ ಸರಿ. ಹೀಗಿರುವಾಗ , ಯಾಕೆ
ಇಂಥವರ ಮೇಲೆ  ಅನಗತ್ಯ ಶೊಷಣೆ ಮಾಡಲಾಗುತ್ತಿದೆ .
೨೩)ಇತರೇ ಇಲಾಖೆಯ ಕೆಳ ದರ್ಜೆ ನೌಕರನಿಂದ ಹಿಡಿದು ವೃತ್ತಿ ಬದುಕಿನ ಉದ್ದಕ್ಕೂ ಮತ್ತು
ನಂತರವೂ ಅವರಿಗೆ ಬೆಲೆ ಸ್ತಾನ ಮಾನ ಗೌರವ ಇದ್ದೆ ಇರುವದು. ಜೊತೆಗೆ ಯಾವುದೇ  ವೃತ್ತಿಪರವಾದ
ಅಥವಾ ವೈಯಕ್ತಿಕ ಕೆಲಸ ಜಾರ್ಯಗಳಿಗೆ ಯಾರಲ್ಲಿಲೂ ಕೈ ಕಟ್ಟಿ ನಿಲ್ಲುವ ಅಗತ್ಯವಿಲ್ಲ. ಅವನ
ವೃತ್ತಿಯೇ ಅವನಿಗೆ ಶ್ರೀರಕ್ಷೆ , ಎಲ್ಲವನ್ನೂ ತಂದುಕೊಡುತ್ತದೆ . ಆದರೆ  ಶಿಕ್ಷಕ ತನ್ನ
ಸೇವೆಯ ಕೆಲಸ ಸೌಲಭ್ಯ ಪಡಿಯಬೇಕಾದರೂ ಮಾತೃ ಸಂಸ್ಥೆಯಾದಿಯಾಗಿ ಶೊಷಣೆಗೆ ಒಳಗಾಗುವನು .
ಪ್ರಮಾಣಿಕವಾಗಿ ಕೆಲಸಮಾಡುವ  ಬಡ ಶಿಕ್ಷಕರಿಗೆ ಇಂಥ ಶೋಷಣೆ ಮಾಡುವದು ಸರಿಯೇ? ಉದಾ:- ಸಂಬಳ
ಪಡೆಯಲು hrms ಗೆ 50 /100 ರೂ ಪ್ರತಿ ತಿಂಗಳು ನೀಡುವದು .
೨೪) ಖಾಸಗಿ ಕಂಪನಿಯಲ್ಲಿ  ಖಾಯಂ ಆಗಿ ದುಡಿಯುವ ನೌಕರನಿಗೆ / ಕಾರ್ಮಿಕನಿಗೆ  ಇತ್ತಿಚೆಗೆ
ಅದೇಷ್ಟೋ ಜೀವನಾಗತ್ಯ ಸೌಲಭ್ಯಗಳು ಇವೆ. ಅದಕ್ಕಿಂತ ಕಡೆಯಾದ ಸೌಲಭಗಳು ಶಿಕ್ಷಕನಿಗಿವೆ.
ವಾಸ್ತವದಲ್ಲಿ‌ಇದ್ದರೂ ಇವುಗಳು ತತ್ ಕ್ಷಣ ಸಿಗಲಾರವು. ಪಡೆದುಕೊಳ್ಳು ರಜೆಹಾಕಿ ಆಫಿಸ್ಗೆ
ಹೋಗಬೇಕು ಉದಾ :- ಸಣ್ಣ ಪುಟ್ಟ ಶಸ್ತ್ರ ಚಿಕಿತ್ಸೆ ತಗಲುವ ಕರ್ಚು ವೆಚ್ಚ
೨೫) ಕಳೆದ ವರ್ಷ ಸಾ ಶಿ ಇ ಕಾರ್ಯದರ್ಶಿ ಯಿಂದ ನಿರ್ದೇಶಕರ ವರೆಗೂ .. ಗರಿಷ್ಟ ಕನಿಷ್ಟ
ಪಲಿತಾಂಶ ಪಡೆದ ಶಿಕ್ಷಕರಿಗೆ ಪತ್ರ ರವಾನೆ ಮಾಡಲಾಗಿದೆ.  ಮನೋವೈಜ್ಣಾನಿಕ ಅಗಿ
ಅಸಮಂಜಸವಾಗಿದೆ
೨೬) ವಾಸ್ತವದಲ್ಲಿ ೧೦ ನೇ ತರಗತಿಗೆ ಇಟ್ಟು ೧೦ ವಿಷಯಗಳಿವೆ. ಇವುಗಳನ್ನು ಬೆಕಾಬಿಟ್ಟಿಯಾಗಿ
ಶಾಲಾ ಆಡಳಿತ ಮಂಡಳಿ ವಿವೆಚನೆ ಆದರಿಸಿ ಕಾಟಾಚಾರಕ್ಕೆ ಮೌಲ್ಯಮಾಪನ ಮಾಡಲಾಗುತ್ತಿದೆ .
ವಾಸ್ತವ ಹಿಗಿದ್ದಾಗ ಮಗುವಿನ ಸಮಗ್ರ ಮೌಲ್ಯನಾಪನ ಹೇಗಾಗುತ್ತದೆ ?
೨೭) ಕಳೆದ ಕೆಲವು ವರ್ಷಗಳಿಂದ  ಫೆಲ್ ಆದ ಮಕ್ಕಳಿಗೆ ಎರಡನೆ ಅವದಿ ಪರೀಕ್ಷೆ ಜೂನ್
ತಿಂಗಳಲ್ಲೇ ನಡೆಸಿ ಉತ್ತಿರ್ಣರಾದರೆ ಆ ಶೈಕ್ಷಣಿಕ ವರ್ಷದಲ್ಲೇ ವಿದ್ಯಾಭ್ಯಾಸ ಮಗು
ಮುಂದುವರಿಸಬಹುದು . ಆದರೆ ವಿಷಯ  ಶಿಕ್ಷಕರಿಗೆ ಪಲಿತಾಂಶ ಒಂದು ಬಾರಿ ಮಾತ್ರ ಪರಿಗಣಿಸುವದು
 ಹಳೆ ಸಂಪದಾಯದಂತೆ ಪರಿಗಣನೆ ಮಾಡಿ ವಿಶ್ಲೇಷಣೆ ಮಾಡುವದು ಎಷ್ಟು ಸೂಕ್ತ ?
೨೮) ಮಕ್ಕಳ  ಬರವಣಿಗೆ  ಜ್ಞಾನ ಮಾತ್ರ ಪರಿಗಣನೆ ಮಾಡಿ ಮೌಲ್ಯಮಾಪನ ಮಾಡುವದು ಎಷ್ಟು ಸೂಕ್ತ
 ಇದು ಸಿ ಸಿ ಇ ಎಂದು ಹೇಗೆ ಹೇಳಬಹುದು
೨೯)  ಗ್ರಾಮೀಣ ಭಾಗದ ಮಕ್ಕಳಿಗೆ ಅವರ ಅಗತ್ಯಕ್ಕೆ ತಕ್ಕ  ಕೌಶಲ್ಯ ಆದರಿತ ಶಿಕ್ಷಣ ನೀಡದೆ ,
ಭವಿಷ್ಯ ಹಾಳು ಮಾಡುತ್ತಿರುವದಾದರೂ ಏಕೆ ? ಕಾರಣ ೨೦೦೦ ದಿಂದ ಇತ್ತಿಚಗೆ ಗ್ರಾಮೀಣ ಭಾಗದಲ್ಲಿ
ಕನ್ನಡ ಮಾದ್ಯಮದಲ್ಲಿ ಓದಿದ ಯಾವ ವಿದ್ಯಾರ್ಥಿ ಪ್ರತಿಷ್ಟಿತ ಸರ್ಕಾರಿ / ಖಾಸಗಿ  ಹುದ್ದೆ
ಏರಲು ಸಾದ್ಯವಾಗಿದೆ ?
೩೦ ) ಸರ್ವತೋಮುಖ ಸರ್ವರ ಅಭಿವೃದ್ದಿ ಎಂದು ಮಾನವ ಅಭಿವೃದ್ದಿಗಾಗಿ ದೇಶದ ಸಮಗ್ರ
ಬದಲಾವಣೆಗಾಗಾಗಿ ಗ್ರಾಮಗಳು ಜೊತೆಗೂಡಬೇಕು ಎಂದು ಪ್ರಯತ್ನಿಸಲಾಗುತ್ತಿದೆ . ಆದರೆ
ವಾಸ್ತವದಲ್ಲಿ ಅಗತ್ಯವಾಗಿದ್ದು ಮಕ್ಕಳಿಗೆ ಒದಗಿಸದೇ ಸುಮ್ಮನೆ ಕಾಲಹರಣ ಮಾಡಲಾಗುತ್ತಿದೆ.
ಅಷ್ಟಕ್ಕೂ ಹತ್ತನೇ ಪಾಸ್ ಆದರೆ ಜೀವನ ನಿರ್ವಹಣೆ ಮಾಡಲು ವೈಯಕ್ತಿಕ ಪ್ರಗತಿ ಅಭಿವೃದ್ದಿ
ಸಾಧಿಸಲು ಸಾದ್ಯವಿದೆಯಾ ?
ಶಿಕ್ಷಣದಿಂದ ವ್ಯಕ್ತಿತ್ವ ಅರಳಬೇಕು ಬಾಳಿಗೆ ಬೆಳಕಾಗಬೇಕು . ಸರ್ವತೋಮುಖ ಏಳಿಗೆಯಾಗಬೇಕು.
ಮಾನವ ಸಂಪನ್ಮೂಲದ ನಿರ್ಮಾಣವಾಗಬೇಕು ದೇಶದ ಅಭಿವೃದ್ದಿಗೆ ಪೂರಕವಾಗಬೇಕು. ಸಂಸ್ಕೃತಿಯ
ವಾರಸದಾರರಾಗಬೇಕು..ಉತ್ಕೃಷ್ಟ ಸಮಾಜದ ನಿರ್ಮಾಣವಾಗಬೇಕು . ಮಾನವೀಯ ನೈತಿಕ ನೆಎಗಟ್ಟಿನಲ್ಲಿ
ಸಮುದಾಯದ ವಿಕಸನವಾಗಬೇಕು. ಹೊಸ ದನಾತ್ಮಕ ಬದಲಾವಣೆ ,ಎಲ್ಲರಿಗೂ ಸಮಪಾಲು ಸಮಬಾಳು ಸಿಕ್ಕು ,
ಎಲ್ಲರೊಡಗೂಡಿದ ವಿಕಸನವಾಗಬೇಕು ಎಂದು ಶಿಕ್ಷಣ ಬಯಸುತ್ತದೆ .. ಆದರೆ ವಾಸ್ತವದಲ್ಲಿ‌ಇದು
ಆಗುತ್ತಿರುವದಾದರೂ ಏನು ? ಕೇವಲ ಸೆಕೆಂಡ್ರಿ ಸರ್ಟಿಪಿಕೆಟ್ ಮಗುವಿಗೆ ವಿತರಿಸಿದ
ಮಾತ್ರಕ್ಕೆ, ಅಥವಾ ಪ್ರೌಢಸಾಲೆಯ ಕೇವಲ ಆರು ವಿಷಯದ ಪಲಿತಾಂಶ ಆದರಿಸಿ ಮಕ್ಕಳ ಭವಿಷ್ಯ
ನಿರ್ಧರಿಸಲು ಸಾಧ್ಯವೆ?  ಒಂದು ಜಿಲ್ಲೆ ಯು ಟಾಪ್ ಒನ್ ರಿಜರ್ಟ್  ಪಡೆದ ಮಾತ್ರಕ್ಕೆ ಇಡಿ
ಜಿಲ್ಲೇಯ ಶಿಕ್ಷಣ ಮಟ್ಟ ಸುಧಾರಣೆ ಮಾಡಿದಂತಾಗುತ್ತದೆಯೇ ? ಅಷ್ಟಕ್ಕೂ  ಪಾಸಾದವರೆಲ್ಲರೂ
 ಜೀವನದಲ್ಲಿ ಯಶಕಂಡುಕೊಳ್ಳಲು ಸಾದ್ಯವೆ ?
ಪ್ರಸ್ತೂತ ಸಾಮಾಜಿಕ ವ್ಯವಸ್ಥೆಗೆ ಪರಿಮಾಣಾತ್ಮಕ ಪಲಿತಾಂಶಕ್ಲಿಂತ ಗುಣಾತ್ಮಕ ಪಲಿತಾಂಶ
ಮುಖ್ಯವಾಗಿದೆ . ನಗರ ಗ್ರಾಮೀಣ ಸಮುದಾಯಗಳ ನಡುವಿನ ಅಂತರ ದಿನೆ ದಿನೆ ಹೆಚ್ಚಾಗುತ್ತಿದೆ .
ನಗರಗಳ ಮಕ್ಕಳಿಗೆ ಸಿಗಬಹುದಾದ ಸೌಲಭ್ಯ ಅವಕಾಶಗಳು ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಬೇಕಿದೆ.
ತಂತ್ರಜ್ಞಾನದ ಗರಿಷ್ಟ ಬಳಕೆ ಮಾಡಿಕೊಂಡು ಸಂಪತ್ತಿನ ಸದ್ಬಳಕೆ ಜೊತೆಗೆ ಹತ್ತಾರು ಬಯಕೆ
ಬೆಡಿಕೆ  ಅಗತ್ಯಗಳು ಪುರೈಕಸುವ  ಜೀವನಮಟ್ಟದಲ್ಲಿ ಸುಧಾರಣೆಗೆ ಬೇಕಾದ   ಹೊಸ ಜ್ಞಾನ
ಕೌಶಲ್ಯವಾದರಿತ ಶಿಕ್ಷಣ ಕ್ರಮದ ಅಗತ್ಯವಿದೆ . ಈ ಮೂಲಕ ಸರ್ವರ ವಿಕಾಸ ಎಲ್ಲರೊಡಗೂಡಿದ
ವಿಕಾಸದ ಹೊಸ ಬದಲಾವಣೆ ಬಯಸಬೇಕಿದೆ .
ಕೇವಲ ಪ್ರೌಢಶಾಲೆಯ ಆರು ವಿಷಯಗಳ ಶಿಕ್ಷಕರ ಪರಿಶ್ರಮದ ಮೇಲೆ  ಸೆಕೆಂಡ್ರಿ ಶಿಕ್ಷಣದ
ಮೌಲ್ಯಮಾಪನ ಮಾಡಿ ಪಲಿತಾಂಶ ವಿಶ್ಲೇಷಣೆ ಮಾಡುವ ಜಡತ್ವದ ಅನಾದಿಕಾಲದ ವ್ಯವಸ್ತೆಗೆ
ಹೊಸಕಾಯಕಲ್ಪ ಬೇಕಿದೆ .
ಒಂದು ವೇಳೆ ಈ ಪರಸ್ಥಿತಿ ಬದಲಾಗದೇ ಹೊದಲ್ಲಿ ಮುಂದೊಂದು ದಿನ ಈ ಆರು ವಿಷಯಗಳ ಶಿಕ್ಷಕರೇ
 ನೋವು ತಿಂದು ಬಲಳಿ ಬೆಂಡಾಗಿ ,ವ್ಯವಸ್ಥೆ ದೂಸಿಸಿ ಆಕ್ರೋಷದಿಂದ ಸಿಡಿದೆಳಬಹುದು . ಆಥವಾ
ವ್ವಸ್ಥೆಗೆ ಬಲಿಯೂ ಆಗಬಹುದು. ವ್ಯವಸ್ಥೆ ವಿರುದ್ದ ಈಜಲು ಇಚ್ಚೆ ಪಡದೇ ಹೊಸ ಸಾಮಾಜಿಕ
ಸಮಸ್ಯಗಳಿಗೆ ಸೃಷ್ಟಿಕರ್ತ ರೂ ಆಗಬಹುದು . ಆಗ ಶಾಸಕಮಗ ಸಭೆಯಲ್ಲಿ ಗದ್ದಲ ಕೋಲಾಹಲ ಮಾಡುವ
ಬದಲು . ದೇಶ ಸಮುದಾಯದ ಮುಂದಿನ ಪಿಳಿಗೆಯ ದೃಷ್ಟಿಯಿಂದ ದೂರದೃಷ್ಟಿಕೋನದ ಆಲೋಚನೆ ಮಾಡುವದು
ಎಲ್ಲರ ಹೊಣೆಯಾಗಿದೆ .
****
ಪ್ರಹ್ಲಾದ್ . ವಾ . ಪತ್ತಾರ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to