GOOD article sir

On 15-Jun-2017 6:30 am, "Siddaramappa s m Sri" <[email protected]>
wrote:

> ಯಾವಾಗಲಾದರೂ ಒಮ್ಮೆ ಹಿಮಾಲಯದ ತಪ್ಪಲು ಪ್ರದೇಶಕ್ಕೆ ಭೇಟಿ ನೀಡುವ ಅದೃಷ್ಟ ಒಲಿದರೆ,
> ಅಲ್ಲಿನ ಕಾನನಗಳಲ್ಲಿ ಜೋಡಿಗಳು ಹಾಡುವ ಇಂಪಾದ ದನಿ ನಿಮ್ಮನ್ನು ಮಂತ್ರಮುಗ್ಧಗೊಳಿಸದೆ
> ಬಿಡದು. ಪರಿಚಿತವಲ್ಲದ ಈ ಧ್ವನಿಯನ್ನು ಕೇಳಿ ನೀವು ಯಾರೋ ಸಂಗೀತಗಾರ ಪರಿಕರವನ್ನು
> ಸಿದ್ಧಪಡಿಸುತ್ತಿರಬಹುದು ಎಂದು ಭಾವಿಸಿದರೆ ತಪ್ಪಾದೀತು. ಭಾವಪರವಶಗೊಳಿಸುವಂತಹ ಈ ನಾದದ
> ಗುಟ್ಟು ಬೇರೆಯೇ ಇದೆ. ಪ್ರೇಮಿಗಳಿಬ್ಬರು ಶಿಳ್ಳೆಯನ್ನೇ ಗುಪ್ತಭಾಷೆಯನ್ನಾಗಿ ಬಳಸಿ ಪ್ರೇಮ
> ಸಲ್ಲಾಪ ನಡೆಸುವ ಪರಿ ಇದು.
>
> ಹಮಂಗ್‌ ಬುಡಕಟ್ಟು ಸಮುದಾಯದ ಜನರು ಶಿಳ್ಳೆಯನ್ನೇ ಭಾಷೆಯನ್ನಾಗಿ ಬಳಸುತ್ತಾರೆ.
> ಸಾಮಾನ್ಯವಾಗಿ ಅಲ್ಲಿನ ರೈತರು ಗದ್ದೆಗಳಲ್ಲಿ ಕೆಲಸ ಮಾಡುವಾಗ ಪರಸ್ಪರ ಸಂವಹನ ನಡೆಸಲು ಹಾಗೂ
> ಬೇಟೆಗಾರರು ಕಾಡುಗಳಲ್ಲಿ ಶಿಕಾರಿ ನಡೆಸುವಾಗ  ಒಬ್ಬರನ್ನೊಬ್ಬರು  ಕರೆಯಲು  ಶಿಳ್ಳೆಯನ್ನು
> ಬಳಸುತ್ತಾರೆ. ಆದರೆ, ಅವರ ಈ ಭಾಷೆ ಹೆಚ್ಚು ಆಪ್ಯಾಯಮಾನವಾಗಿ ವ್ಯಕ್ತವಾಗುವುದು
> ಅಪರೂಪಕ್ಕೊಮ್ಮೆ ಮಾತ್ರ ನಡೆಸುವ ಪ್ರೇಮ ನಿವೇದನೆ ಪ್ರಸಂಗಗಳಲ್ಲಿ. ಮುಸ್ಸಂಜೆಯಾಗುತ್ತಲೇ
> ಆಸುಪಾಸಿನ ಗ್ರಾಮಗಳಲ್ಲಿ ಅಂಡಲೆಯುವ ಹುಡುಗರು ಬೀದಿಗಳಲ್ಲಿ ಹಾದು ಹೋಗುವಾಗ ತಮ್ಮಿಷ್ಟದ
> ಹಾಡುಗಳನ್ನು ಶಿಳ್ಳೆಯ ರೂಪದಲ್ಲಿ ಹಾಡುತ್ತಾ ಹೋಗುತ್ತಾರೆ. ಹುಡುಗಿಯ ಕಡೆಯಿಂದಲೂ ಇದಕ್ಕೆ
> ಹಸಿರು ನಿಶಾನೆ ಸಿಕ್ಕಿತೆಂದರೆ ಮುಗಿಯಿತು; ಅಲ್ಲೇ ಅವರಿಬ್ಬರ ಪ್ರೇಮ ಸಲ್ಲಾಪ ಶುರು. ಅವರ
> ಅಷ್ಟೂ ಸರಸ ಸಲ್ಲಾಪ ನಡೆಯುವುದು ಶಿಳ್ಳೆಯ ಮೂಲಕವೇ!
>
> ಸರಸ ಸಲ್ಲಾಪಕ್ಕೆ ಪರಿಪೂರ್ಣವಾದ ಪರಿಭಾಷೆಯಾಗುವ ಈ ಮನಮೋಹಕ ಶಿಳ್ಳೆಯ ಹಾಡುಗಳಲ್ಲಿ
> ಇನ್ನೊಂದು ವೈಶಿಷ್ಟ್ಯವಿದೆ. ಜೋಡಿಗಳು ಬಳಸುವ ಈ ಭಾಷೆಯನ್ನು ಬೇರೆಯವರು ಅರ್ಥೈಸಿಕೊಳ್ಳಲು
> ಸಾಧ್ಯವೇ ಇಲ್ಲ. ಹಾಗಾಗಿ ಅವರ ಪ್ರೇಮದ ಪರಿಭಾಷೆ ಇತರರ ಪಾಲಿಗೆ ಅಜ್ಞಾತವಾಗಿಯೇ ಉಳಿಯುತ್ತದೆ.
> ‘ಈ ಜೋಡಿಗಳು ತೀರಾ ಖಾಸಗಿ ಸಂಕೇತಗಳನ್ನೂ ರೂಪಿಸಿಕೊಳ್ಳುತ್ತಾರೆ. ಕದ್ದಾಲಿಸುವ ಕಳ್ಳರಿಗೆ
> ಅವರ ಮಾತುಗಳ ಗೂಡಾರ್ಥ ತಿಳಿಯಬಾರದು ಎಂಬ ಕಾರಣಕ್ಕೆ ಕೆಲವು ಅಸಂಬದ್ಧ ಶಬ್ದಗಳನ್ನೂ
> ಪೋಣಿಸುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಪದಗಳಲ್ಲಿನ ಕೆಲವು ಅಕ್ಷರಗಳನ್ನು ಅದಲು ಬದಲು
> ಮಾಡುವ ಮೂಲಕ ಪೋಷಕರನ್ನು ಬೇಸ್ತು ಬೀಳಿಸುವಂತೆಯೇ ಇದು ಕೂಡ. ಈ ರೀತಿ ಮಾಡುವುದು ಈ  ಜೋಡಿಗಳ
> ನಡುವೆ ಆತ್ಮೀಯ  ಭಾವನೆ ಹೆಚ್ಚಿಸುತ್ತದೆ’ ಎನ್ನುತ್ತಾರೆ ದಶಕಗಳ ಹಿಂದೆ ಹಿಮಾಲಯದ
> ತಪ್ಪಲಿನಲ್ಲಿ ಪ್ರವಾಸ ಕೈಗೊಂಡಿದ್ದ ಫ್ರಾನ್ಸ್‌ನ ಗ್ರೆನೋಬಲ್‌ ವಿಶ್ವವಿದ್ಯಾಲಯದ ಸಂಶೋಧಕ
> ಜೂಲಿಯನ್‌ ಮೆಯೆರ್‌.
>
> ‘ಈ ಪದ್ಧತಿ ಮಾನವತೆಯ ಅದ್ಭುತ ಭಾಷಾ ವೈವಿಧ್ಯದ ಬಹುಮುಖ್ಯ ಅಂಶವೂ ಹೌದು. ಹಾಗೆಯೇ ಮನುಷ್ಯ
> ಸಂವಹನದ ಇತಿಮಿತಿಯನ್ನು ಅರಿತುಕೊಳ್ಳುವುದಕ್ಕೂ ಇದು ಸಹಕಾರಿ. ಅನೇಕ ಕಡೆಗಳಲ್ಲಿ ಇನ್ನೊಬ್ಬರ
> ಗಮನ ಸೆಳೆಯುವ ಕಾರ್ಯಕ್ಕಿಂತಲೂ ಹೆಚ್ಚಿನದಾದ ಉದ್ದೇಶಗಳಿಗೆ ಶಿಳ್ಳೆ ಬಳಕೆಯಾಗುತ್ತದೆ. ಅಗಾಧ
> ಅರ್ಥವನ್ನು ತುಂಬಿಕೊಡಲು ಇದು ಅತ್ಯಂತ ಸರಳವಾದ ವಿಧಾನ. ವಿಶ್ವದಾದ್ಯಂತ 70ಕ್ಕೂ ಹೆಚ್ಚು
> ಜನಾಂಗಗಳು ಭಾವನೆಗಳನ್ನು ವ್ಯಕ್ತಪಡಿಸಲು ಸಹಜ ಮಾತುಕತೆಯಷ್ಟೇ ಸುಲಲಿತವಾಗಿ ಶಿಳ್ಳೆಯನ್ನೂ
> ಬಳಸುತ್ತವೆ’ ಎನ್ನುತ್ತಾರೆ ಅವರು.
>
> 
>
> ಈ ನಿಗೂಢ ಭಾಷೆಗಳು ಹೊಸ ಸಂಕೇತ ರೂಪದ ಮಾಹಿತಿಯನ್ನು ಗ್ರಹಿಸುವ ಮಿದುಳಿನ ಅಗಾಧ
> ಸಾಮರ್ಥ್ಯಕ್ಕೂ ಕನ್ನಡಿ ಹಿಡಿಯುತ್ತವೆ. ನರವಿಜ್ಞಾನಿಗಳು ಮಿದುಳಿನ ಸಂರಚನೆ ಕುರಿತ ಮೂಲ
> ಗ್ರಹಿಕೆಯನ್ನೇ ಮತ್ತೆ ಪರಾಮರ್ಶಿಸಬೇಕಾದ ಹೊಸ ಹೊಳಹುಗಳಿಗೂ ಇವು ಕಾರಣವಾಗಿವೆ. ಅವರ ಈ
> ಸಂಶೋಧನೆ ಭಾಷೆಯ ಉಗಮದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಒಂದು ಪರಿಕಲ್ಪನೆ ಪ್ರಕಾರ, ಮಾನವನ
> ಮೊದಲ ತೊದಲ್ನುಡಿ ಹಮಂಗ್‌ ಬುಡಕಟ್ಟಿನ ಪ್ರೇಮ ನಿವೇದನೆಯ ಶಿಳ್ಳೆ ಹಾಡುಗಳಂತೆಯೇ ಇದ್ದಿರುವ
> ಸಾಧ್ಯತೆಯೂ ಇದೆ.
>
> ಕ್ಯಾನರಿ ದ್ವೀಪವೊಂದರಲ್ಲಿ ಬಳಕೆಯಲ್ಲಿದ್ದ ಸ್ಪ್ಯಾನಿಷ್‌ ಭಾಷೆಯ ‘ಸಿಲ್ಬೊ ಗೊಮೆರೊ’ ಎಂಬ
> ಶಿಳ್ಳೆಯ ಪರಿಭಾಷೆಯ ಕುರಿತು, 40 ವರ್ಷ ಹಿಂದೆ ಅಮೆರಿಕದಲ್ಲಿ ಪ್ರಕಟವಾದ ವೈಜ್ಞಾನಿಕ ಲೇಖನ
> ಓದಿದ ಬಳಿಕ ಮೆಯೆರ್‌ ಅವರಿಗೆ ಶಿಳ್ಳೆ ಭಾಷೆ ಬಗ್ಗೆ ಆಸಕ್ತಿ ಕೆರಳಿತು. ಕುರಿಗಾಹಿಗಳು
> ಕಡಿದಾದ ಕಣಿವೆಗಳ ನಡುವೆ ಸಂವಹನ ನಡೆಸಲು ಚೇತೋಹಾರಿ ಶಿಳ್ಳೆಗಳನ್ನು ಬಳಸುತ್ತಿದ್ದರು. ಅದು
> ಹೆಚ್ಚೂ ಕಡಿಮೆ, ಸ್ಥಳೀಯ ಹಕ್ಕಿಗಳ (ಬ್ಲಾಕ್‌ಬರ್ಡ್‌) ಭಾಷೆಯಂತೆಯೇ ಇತ್ತು. ಮನುಷ್ಯರ
> ಮಾತುಗಳನ್ನು ಅನುಕರಿಸುವುದಕ್ಕೆ  ಈ ಹಕ್ಕಿಗಳು ಹೆಸರುವಾಸಿ.
>
> ಈ ವಿಚಾರ ಸಹಜವಾಗಿಯೇ ಮೆಯೆರ್‌ ಅವರ ಕುತೂಹಲ ಕೆರಳಿಸಿತ್ತು. ಅವರು ಈ ವಿಷಯದ ಕುರಿತೇ
> ಪಿಎಚ್‌.ಡಿ  ಪದವಿ ಪಡೆದರು. ಇದಾಗಿ ಒಂದು ದಶಕದ ಬಳಿಕವೂ ಅವರು ಶಿಳ್ಳೆಯ ಗುಂಗಿನಿಂದ ಹೊರಗೆ
> ಬಂದಿಲ್ಲ. ‘ಮುಂದೊಂದು ದಿನ ಇದೇ ನನಗೆ ಉದ್ಯೋಗವನ್ನೂ ನೀಡುತ್ತದೆ ಎಂದು ನಾನು ಕನಸಿನಲ್ಲೂ
> ಕಲ್ಪಿಸಿರಲಿಲ್ಲ’ ಎನ್ನುತ್ತಾರೆ ಮೆಯೆರ್‌.
>
> ಮೆಯೆರ್‌ ಅವರ ಹೆಚ್ಚಿನ ಸಂಶೋಧನೆಗಳು ಜಗತ್ತಿನಾದ್ಯಂತ ಶಿಳ್ಳೆಯ ಪರಿಭಾಷೆಗಳನ್ನು
> ಗುರುತಿಸುವುದರ ಬಗ್ಗೆಯೇ ಕೇಂದ್ರೀಕೃತವಾಗಿವೆ. ಪ್ರಾಚೀನ ಇತಿಹಾಸ ಪುಸ್ತಕಗಳಲ್ಲೂ ಈ ಕುರಿತ
> ಕೆಲವು ಉಲ್ಲೇಖಗಳಿದ್ದವು. ಉದಾಹರಣೆಗೆ, ಕ್ರಿಸ್ತಪೂರ್ವ 5ನೇ ಶತಮಾನದ ಗ್ರೀಕ್‌ ಇತಿಹಾಸಕಾರ
> ಹೆರೋಡೋಟಸ್‌ ಅವರು, ಗುಹೆಗಳಲ್ಲಿ ವಾಸಿಸುತ್ತಿದ್ದ ಇಥಿಯೋಪಿಯನ್ನರ ಗುಂಪಿನ ಬಗ್ಗೆ
> ವಿವರಿಸಿದ್ದರು. ‘ಅವರ ಭಾಷೆಯಂತಹ ಇನ್ನೊಂದು ಭಾಷೆ ಜಗತ್ತಿನ ಬೇರೆಲ್ಲೂ ಇರಲು ಸಾಧ್ಯವಿಲ್ಲ.
> ಅದು ಬಾವಲಿಗಳ  ಕೀರಲು ಧ್ವನಿಯಂತೆಯೇ ಇದ್ದವು’  ಎಂದು ಅವರು ಬರೆದಿದ್ದರು. ಯಾವ ಜನಾಂಗದ
> ಬಗ್ಗೆ ಅವರು ವಿವರಿಸಿದ್ದರು ಎಂಬ ಬಗ್ಗೆ ಖಚಿತತೆ ಇಲ್ಲ. ಆದರೆ, ಮೆಯೆರ್‌ ಅವರ ಪ್ರಕಾರ
> ಇಥಿಯೋಪಿಯಾದ ಓಮೊ ಕಣಿವೆಯಲ್ಲಿ ಈಗಲೂ ಅನೇಕ ವಿಧದ ಶಿಳ್ಳೆ ಭಾಷೆಗಳು ಬಳಕೆಯಲ್ಲಿವೆ.
>
> ಜಗತ್ತಿನ ಎಲ್ಲ ಮೂಲೆಗಳಲ್ಲೂ ಶಿಳ್ಳೆ ಭಾಷೆ ಚಾಲ್ತಿಯಲ್ಲಿರುವುದನ್ನು ಮೆಯೆರ್‌
> ಗುರುತಿಸಿದ್ದಾರೆ. ಮಾತಿಗಿಂತಲೂ ಹೆಚ್ಚು ದೂರಕ್ಕೆ ಶಿಳ್ಳೆ ಕೇಳಿಸಬಲ್ಲುದು. ಮುಕ್ತ
> ವಾತಾವರಣದಲ್ಲಿ ಮಾತು 5 ಕಿ.ಮೀ ದೂರದವರೆಗೆ ಕೇಳಿಸಿದರೆ, ಶಿಳ್ಳೆ 8 ಕಿ.ಮೀ.ಯಷ್ಟು ದೂರ
> ಕೇಳಿಸಬಲ್ಲುದು. ಹಾಗಾಗಿಯೇ, ಕಣಿವೆ ಪ್ರದೇಶಗಳಲ್ಲಿ ಕುರಿಗಾಹಿಗಳು ಹಾಗೂ ರೈತರು
> ಕಣಿವೆಗಳಾಚೆಗೆ ಸಂದೇಶ ರವಾನಿಸಲು ಸಾಮಾನ್ಯವಾಗಿ ಶಿಳ್ಳೆ ಭಾಷೆಯನ್ನೇ ಬಳಸುತ್ತಾರೆ.
>
> ಶಿಳ್ಳೆಯ ಸದ್ದು ಅಮೆಜಾನ್‌ನಂತಹ ದಟ್ಟಾರಣ್ಯದೊಳಗೂ ಸರಾಗವಾಗಿ ನುಸುಳಬಲ್ಲುದು. ಇಲ್ಲಿನ
> ದಟ್ಟ ಹಸಿರು ಕಾನನದ ನಡುವೆಯೂ ಪರಸ್ಪರ ಗುರುತಿಸಿಕೊಳ್ಳಲು ಬೇಟೆಗಾರರು ಶಿಳ್ಳೆಯನ್ನೇ
> ಬಳಸುತ್ತಾರೆ. ‘ಪ್ರತಿಧ್ವನಿಗಳು ಒಂದಕ್ಕೊಂದು ಕೂಡಿಕೊಂಡು ಗೊಂದಲ ಉಂಟಾಗುವುದನ್ನು
> ತಪ್ಪಿಸಲು ಶಿಳ್ಳೆಗಳು ಸಹಕಾರಿ’ ಎನ್ನುತ್ತಾರೆ ಮೆಯೆರ್.
>
> ‘ಮಾತನಾಡಿದರೆ ಶಿಕಾರಿಯ ಪ್ರಾಣಿ ಬೆದರಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ,
> ಶಿಳ್ಳೆಯಿಂದ ಅವು ವಿಚಲಿತವಾಗುವುದಿಲ್ಲ. ಸಮುದ್ರದಲ್ಲಿ ನಡೆಸುವ ಬೇಟೆಗೂ ಈ ಭಾಷೆ ಸಹಕಾರಿ.
> ಕೆಲವು ಎಸ್ಕಿಮೊ ಜನರು ತಿಮಿಂಗಿಲಗಳನ್ನು ಬೇಟೆಯಾಡುವಾಗ ಶಿಳ್ಳೆಯ ಮೂಲಕವೇ ಪರಸ್ಪರ ಆದೇಶ
> ನೀಡುತ್ತಾರೆ’ ಎಂದು ಅವರು ಹೇಳುತ್ತಾರೆ.
>
> ಇಂತಹ ಗೂಢಭಾಷೆ ಯುದ್ಧದ ಅಸ್ತ್ರವಾಗಿ ಬಳಕೆಯಾದರೂ ಅಚ್ಚರಿ ಪಡಬೇಕಾಗಿಲ್ಲ.  ಅಟ್ಲಾಸ್
> ಪರ್ವತ ಶ್ರೇಣಿಯ ಬರ್ಬೆರ್‌ ಜನಾಂಗದವರು (ಅಮೇಜಿಗ್ ಎಂದೂ ಕರೆಯುತ್ತಾರೆ) ಫ್ರೆಂಚರ ವಿರುದ್ಧ
> ದಂಗೆ ಸಾರಿದ ಸಂದರ್ಭದಲ್ಲಿ ಸಂದೇಶಗಳನ್ನು ರವಾನಿಸಲು ಶಿಳ್ಳೆಯನ್ನೇ ಬಳಸಿದ್ದರು. ಈ ನಿಗೂಢ
> ಭಾಷೆಯನ್ನು ಜಪಾನೀ ಗೂಢಚರರು ಗ್ರಹಿಸಬಾರದು ಎಂಬ ಉದ್ದೇಶದಿಂದ ಆಸ್ಟ್ರೇಲಿಯಾದ ಸೇನೆ
> ರೇಡಿಯೊಗಳ ಮೂಲಕ ಶಿಳ್ಳೆಯ ಸಂದೇಶಗಳನ್ನು ಪ್ರಸಾರ ಮಾಡಲು ಪಪುವ ನ್ಯೂಗಿನಿಯ ಪರಿಣತರನ್ನು
> ನೇಮಿಸಿಕೊಂಡಿದೆ.
>
> ಹಮಂಗ್‌ ಜನಾಂಗದವರು ಪ್ರೇಮ ನಿವೇದನೆಗೆ ಶಿಳ್ಳೆಯನ್ನು ಮೋಹಕವಾಗಿ ಬಳಸುವಂತೆಯೇ
> ಧಾರ್ಮಿಕವಾಗಿಯೂ ಇದು ಬಳಕೆಯಲ್ಲಿದೆ. ಚೀನಾದ ಪ್ರಾಚೀನ ಸಾಹಿತ್ಯದಲ್ಲಿ ಟಾವೊ ತತ್ವಪದಗಳನ್ನು
> ಜನ ಶಿಳ್ಳೆಗಳ ಮೂಲಕವೇ ಹಾಡುತ್ತಿದ್ದರು. ಈ ಅಭ್ಯಾಸ ಅವರನ್ನು ಒಂದು ಬಗೆಯ ವಿಶಿಷ್ಟ
> ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತಿತ್ತು.  ಚೀನಾದ ದಕ್ಷಿಣ ಭಾಗದಲ್ಲಿ  ವೈವಿಧ್ಯಮಯ
> ಶಿಳ್ಳೆಗಳನ್ನು ಬಳಸುವ ಹಮಂಗ್‌ ಹಾಗೂ ಆಖಾದಂತಹ ಅನೇಕ ದೇಸಿ ಅಲ್ಪಸಂಖ್ಯಾತ ಸಮುದಾಯಗಳು ಈಗಲೂ
> ಇವೆ.
>
> ಲಕ್ಷಾಂತರ ಜನರ ಪಾಲಿಗೆ ಶಿಳ್ಳೆ ಈಗಲೂ ಅತ್ಯಂತ ಶಕ್ತಿಶಾಲಿ ಸಂವಹನ ವಿಧಾನ.  ಶಿಳ್ಳೆಯನ್ನು
> ಬಳಸುವವರು ಸಾಮಾನ್ಯವಾಗಿ ಎರಡರಲ್ಲೊಂದು ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ಮೆಯೆರ್‌
> ಕಂಡುಕೊಂಡಿದ್ದಾರೆ. ಇವೆರಡರಲ್ಲೂ, ಶ್ರುತಿಯನ್ನು ಬದಲಿಸುವ ಮೂಲಕ  ಮಾತಿನ ಭಾಷೆಯ
> ಹಂದರವನ್ನು ಮಾತ್ರ ಸೃಷ್ಟಿಸಲಾಗುತ್ತದೆ. ನಿತ್ಯವೂ ಬಳಸುವ ಮಾತು ಎಷ್ಟು ಲಯಬದ್ಧವಾಗಿದೆ
> ಎಂಬುದನ್ನು ಇದು ಅವಲಂಬಿಸಿದೆ. ಕೆಲವು ದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಏಷ್ಯಾದಲ್ಲಿ
> ಒಂದು ಪದದ, ಒಂದೊಂದು ಅಕ್ಷರದ ಶ್ರುತಿಯ ವ್ಯತ್ಯಾಸವೂ ಅರ್ಥವನ್ನೇ ಬದಲಾಯಿಸಬಲ್ಲುದು. ಇದರ
> ಪರಿಣಾಮ ಮಾತನಾಡುವ ವಾಕ್ಯದಲ್ಲಿ ಅಂತರ್ಗತವಾಗಿರುವ ಲಯವನ್ನೇ ಶಿಳ್ಳೆಯೂ ಅನುಸರಿಸುತ್ತದೆ.
> ಆದರೆ, ಸ್ಪ್ಯಾನಿಷ್‌ ಅಥವಾ ಟರ್ಕಿಯಂತಹ ಭಾಷೆಗಳು ಸಹಜವಾಗಿಯೇ ಲಯಬದ್ಧವಾಗಿಲ್ಲ. ಇಂತಹ
> ಪ್ರಕರಣಗಳಲ್ಲಿ ಶಿಳ್ಳೆ ಸ್ವರಾಕ್ಷರಗಳ ವಿಭಿನ್ನ ಧ್ವನಿಯ ಕಂಪನವನ್ನು ಅನುಕರಿಸುತ್ತದೆ.
> ವ್ಯಂಜನಗಳ ವ್ಯತ್ಯಾಸಕ್ಕೆ ಅನುಗುಣವಾಗಿ ಶ್ರುತಿಯಿಂದ ಶ್ರುತಿಗೆ ಶಿಳ್ಳೆ ಹಠಾತ್‌
> ಏರಿಳಿತವಾಗುತ್ತದೆ.
>
> ವಿಭಿನ್ನ ಪದಗಳನ್ನು ಬೇರ್ಪಡಿಸಲು ಸಹಾಯವಾಗುವ ಅನೇಕ ಸಂಕೇತಗಳು ಶಿಳ್ಳೆಯಲ್ಲಿ ಇಲ್ಲ.
> ಆದರೂ, ಅವುಗಳಲ್ಲಿ ಗ್ರಾಹ್ಯ ಸಂದೇಶಗಳು ಅಡಕವಾಗಿರುತ್ತವೆ ಎಂಬುದನ್ನು ಹೊರಗಿನವರು
> ನಂಬುವುದೂ ಕಷ್ಟ. ನುರಿತ ಶಿಳ್ಳೆಗಾರರು ವಾಕ್ಯಗಳನ್ನು ಶೇಕಡಾ 90ಕ್ಕಿಂತಲೂ ಹೆಚ್ಚು
> ನಿಖರವಾಗಿ ಗ್ರಹಿಸಬಲ್ಲರು ಎಂಬುದನ್ನು  ಮೆಯೆರ್‌ ಕಂಡುಕೊಂಡಿದ್ದಾರೆ. ಕಿಕ್ಕಿರಿದಿರುವ
> ಕೊಠಡಿಯಲ್ಲಿ ಸಂಭಾಷಣೆ ನಡೆಸುವುದಕ್ಕೆ ಅಥವಾ ಪಿಸುಮಾತನ್ನು ಅರ್ಥೈಸುವುದಕ್ಕೆ ನರಮಂಡಲ ಹೇಗೆ
> ನೆರವಾಗುತ್ತದೆಯೋ ಅದೇ ರೀತಿ ಶಿಳ್ಳೆಯ ವಿಚಾರದಲ್ಲೂ ಆಗುತ್ತದೆ ಎಂದು ಅವರು
> ವಿವರಿಸುತ್ತಾರೆ.
>
> 
>
> (ಚಿತ್ರ: ವಿಜಯ ಕುಮಾರಿ ಆರ್.)
>
> ‘ಅಡಚಣೆಗಳಿಂದ ಕರ್ಕಶವಾಗುವ ಪದಗಳ ಮರುಜೋಡಿಸುವ ಸಾಮರ್ಥ್ಯವನ್ನು ಮಿದುಳು ಹೊಂದಿದೆ’
> ಎನ್ನುತ್ತಾರೆ ಅವರು. ಬರವಣಿಗೆಯಲ್ಲೂ ಇದನ್ನು ಗಮನಿಸಬಹುದು. ಇಂಗ್ಲಿಷ್‌ ಭಾಷೆಯ ಅಕ್ಷರಗಳು
> ಅದಲುಬದಲಾದರೂ, ಅಥವಾ ಕೆಲವೊಂದು ಸ್ವರಾಕ್ಷರಗಳನ್ನು ಕೈಬಿಟ್ಟರೂ ಮಿದುಳು ಅದನ್ನು
> ಸರಿಮಾಡಿಕೊಂಡು ಓದುತ್ತದೆ.
>
> ಈ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನ ನಡೆದದ್ದೇ ಆದರೆ, ನರರೋಗ ತಜ್ಞರು
> ಮಿದುಳಿನ ಸಂರಚನೆಯ ಕುರಿತ ಗ್ರಹಿಕೆಯ ಬಗ್ಗೆಯೇ ಮರುಚಿಂತನೆ ನಡೆಸಬೇಕಾಗುತ್ತದೆ.
>
> ದಶಕಗಳ ಕಾಲ ಮಿದುಳಿನ ಪ್ರತಿಯೊಂದು ಪಾರ್ಶ್ವವೂ ನಿರ್ದಿಷ್ಟ ಸವಾಲುಗಳನ್ನು ನಿಭಾಯಿಸಲು
> ಸೀಮಿತವಾಗಿದೆ ಎಂದೇ ಸಂಶೋಧಕರು ಗ್ರಹಿಸಿದ್ದರು. ಭಾಷೆ ಕುರಿತ ಕ್ರಿಯೆಗಳು ನಡೆಯುವುದು ಎಡ
> ಪಾರ್ಶ್ವದಲ್ಲಿ ಮಾತ್ರ ಎಂಬ ಗ್ರಹಿಕೆ ಈಗಲೂ ಇದೆ. ಈ ಗ್ರಹಿಕೆ ಶಿಳ್ಳೆಗಳ ವಿಚಾರದಲ್ಲೂ
> ಅನ್ವಯವಾಗುತ್ತದೆಯೇ ಎಂಬುದನ್ನು ಪರೀಕ್ಷಿಸಲು  ಜರ್ಮನಿಯ ಬೋಚುಂನ ರುಹ್ರ್‌
> ವಿಶ್ವವಿದ್ಯಾಲಯದ ಗುಂಟುರ್‌ಕುನ್‌ ಬಯಸಿದರು.
>
> ಹಕ್ಕಿಗಳ ಗ್ರಾಮ
> ಈ ಬಗ್ಗೆ ಶೋಧ ಆರಂಭಿಸಿದ ಗುಂಟುರ್‌ಕುನ್‌, ಕಪ್ಪು ಸಮುದ್ರದ ಬಳಿಯ ಕಣಿವೆಯೊಂದರಲ್ಲಿರುವ
> ಕುಸ್ಕೋಯ್‌ಗೆ, ಅಂದರೆ ಹಕ್ಕಿಗಳ ಗ್ರಾಮಕ್ಕೆ ಪ್ರಯಾಣ ಬೆಳೆಸಿದರು.
>
> ‘ಸಿಲ್ಬೊ ಗೊಮೆರೊ’ದ ಜನರಂತೆಯೇ ಇಲ್ಲೂ ಕುರಿಗಾಹಿಗಳು ಪರ್ವತಗಳ ಪ್ರಸ್ಥಭೂಮಿಯಲ್ಲಿ ಸಂದೇಶ
> ರವಾನೆಗಾಗಿ ಶಿಳ್ಳೆ ಹೊಡೆಯುತ್ತಾರೆ. ಈ ಕಣಿವೆಯಲ್ಲಿ ಧುಮ್ಮಿಕ್ಕುವ ನದಿಯ ಗರ್ಜನೆಯ
> ನಡುವೆಯೂ ಸಂವಹನ ನಡೆಸುವುದಕ್ಕೆ ಮೀನುಗಾರರು ಶಿಳ್ಳೆಯನ್ನೇ ಬಳಸುತ್ತಾರೆ. ಶಿಳ್ಳೆಯ ಮೂಲಕ
> ನಡೆಯುವ ಸಂಭಾಷಣೆಯನ್ನು ಮೊದಲ ಬಾರಿ ವೀಕ್ಷಿಸಿದಾಗ ಆದ ರೋಮಾಂಚನವನ್ನು ಗುಂಟುರ್‌ಕುನ್‌
> ಅವರು ಇನ್ನೂ ಮರೆತಿಲ್ಲ.
>
> ‘ಮಾಮೂಲಿ ಭಾಷೆಗಿಂತ ವಿಭಿನ್ನವಾದ, ಸಾಕಷ್ಟು ಅರ್ಥಪೂರ್ಣವಾದ ಸಂಭಾಷಣೆಯನ್ನು ಆಲಿಸಿದಾಗ
> ನನ್ನೆದುರು ಜಾದೂ ನಡೆಯುತ್ತಿದೆಯೇನೋ ಎಂದು  ಅನಿಸಿತ್ತು’ ಎನ್ನುತ್ತಾರೆ ಅವರು.
>
> ಭಾರಿ ಗಾತ್ರವನ್ನು ಹೊಂದಿರುವ ಬ್ರೈನ್‌ ಸ್ಕ್ಯಾನರ್‌ ಉಪಕರಣವನ್ನು ಜರ್ಮನಿಯಿಂದ ಈ
> ಕುಗ್ರಾಮಕ್ಕೆ ಕೊಂಡೊಯ್ಯುವುದು ಸುಲಭವಾಗಿರಲಿಲ್ಲ. ಹಾಗಾಗಿ ಗುಂಟುರ್‌ಕುನ್‌ ಅವರು
> ಒಬ್ಬೊಬ್ಬರ ಕಿವಿಯಲ್ಲಿ ಬೇರೆ ಬೇರೆ ಅಕ್ಷರವನ್ನು ಉಸುರಿ, ಏನು ಕೇಳಿಸಿತು ಎಂದು ಅವರಿಂದ
> ಹೇಳಿಸುವ ಸರಳವಾದ ಶ್ರವಣ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದರು. ಎಡ ಕಿವಿಯಲ್ಲಿ
> ಕೇಳಿಸಿಕೊಂಡರೆ ಅದು ಮಿದುಳಿನ ಬಲಭಾಗವನ್ನು ತಲುಪುತ್ತದೆ. ದೇಹದ ಈ ವಿಶಿಷ್ಟ ವ್ಯೂಹ
> ವ್ಯವಸ್ಥೆಯನ್ನು ಕೇಂದ್ರೀಕರಿಸಿ ಅವರ ಪ್ರಯೋಗ ನಡೆದಿತ್ತು.
>
> ಬಲಕಿವಿಯಲ್ಲಿ ಕೇಳಿಸಿಕೊಂಡ ಅಕ್ಷರವು ಮಿದುಳಿನ ಹೆಚ್ಚು ಶಕ್ತಿಯುತವಾದ ಎಡಪಾರ್ಶ್ವಕ್ಕೆ
> ತಕ್ಷಣ ರವಾನೆಯಾಗುತ್ತದೆ. ಹಾಗಾಗಿ ಅದು ಹೆಚ್ಚು ಗಮನ ಸೆಳೆಯಬೇಕು.  ಎಡ ಕಿವಿಯಲ್ಲಿ ‘ಫ’
> ಎಂದು ಹಾಗೂ ಬಲಕಿವಿಯಲ್ಲಿ ‘ಠ’ ಎಂದು ಉಸುರಿದರೆ ನಿಮಗೆ ‘ಠ’ ಮಾತ್ರ ಕೇಳಿಸುತ್ತದೆ.
> ಏಕೆಂದರೆ ಭಾಷಾ ಪ್ರಕ್ರಿಯೆ ನಡೆಯುವ ಎಡಪಾರ್ಶ್ವಕ್ಕೆ ಅದು ತಕ್ಷಣ ತಲುಪುತ್ತದೆ. ಈಗಿನ
> ಸಿದ್ಧಾಂತ ಇರುವುದೇ ಹೀಗೆ. ಆದರೆ, ಗುಂಟುರ್‌ಕುನ್‌ ಶಿಳ್ಳೆಯ ರೂಪದ ಸ್ವರ ಹೊರಡಿಸಿದಾಗ
> ಕುಸ್ಕೋಯ್‌ ಜನರಿಗೆ ಹಾಗೆ ಆಗಲೇ ಇಲ್ಲ. ಎರಡು ಕಿವಿಗಳಲ್ಲಿ ಉಸುರಿದ ಶಿಳ್ಳೆಯ ಸ್ವರಗಳನ್ನೂ
> ಅವರು  ಪ್ರತ್ಯೇಕವಾಗಿ ಗುರುತಿಸಿದರು. ಸಂಕೇತಗಳನ್ನು ಗ್ರಹಿಸುವಾಗ ಮಿದುಳಿನ ಎರಡೂ
> ಪಾರ್ಶ್ವಗಳೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದು ಕಂಡುಬಂತು. ‘ಮಿದುಳಿನ ಅಸಮ ಪಾರ್ಶ್ವದ
> (ಎರಡು ಪಾರ್ಶ್ವಗಳು ಒಂದೇ ಸಮ ಇಲ್ಲ) ಸಿದ್ಧಾಂತ ಇಲ್ಲಿ ಸೋತುಹೋಯಿತು. ಎರಡೂ ಪಾರ್ಶ್ವಗಳು
> ಕೆಲಸವನ್ನು ಸಮನಾಗಿ ಹಂಚಿಕೊಂಡವು’ ಎನ್ನುತ್ತಾರೆ ಗುಂಟುರ್‌ಕುನ್‌.
>
> 2015ರಲ್ಲಿ ಪ್ರಕಟವಾದ ಈ ಫಲಿತಾಂಶ, ಮಿದುಳು ಒಗ್ಗಿಕೊಳ್ಳುವ ಸಾಮರ್ಥ್ಯವನ್ನು
> ಶ್ರುತಪಡಿಸುವುದಕ್ಕೆ ಮಾತ್ರ ಸೀಮಿತ ಅಲ್ಲ. ಪಾರ್ಶ್ವವಾಯುವಿಗೆ ಒಳಗಾದ ರೋಗಿಗಳು ಆ ಬಳಿಕವೂ
> ಬದುಕನ್ನು ಮತ್ತೆ ಕಟ್ಟಿಕೊಳ್ಳುವುದಕ್ಕೂ ಇದು ನೆರವಾಗಬಲ್ಲುದು. ಎಡ ಪಾರ್ಶ್ವ
> ಹಾನಿಗೊಳಗಾದರೆ ಕೆಲವರು ಮಾತನಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಆದರೆ, ಅವರು
> ಶಿಳ್ಳೆಯ ಭಾಷೆಯ ಮೂಲಕ ಮಾತನಾಡಬಹುದು ಎಂಬ ಸಾಧ್ಯತೆಯನ್ನು ಗುಂಟುರ್‌ಕುನ್‌ ಅವರು ಕಂಡುಕೊಂಡ
> ಅಂಶಗಳು ತೋರಿಸಿಕೊಟ್ಟಿವೆ.
>
> ಈ ಗ್ರಾಮದ ಹೊರಗಿನ ವ್ಯಕ್ತಿಗಳೂ ‘ಹಕ್ಕಿಗಳ ಭಾಷೆ’ಯನ್ನು ನಿರಂತರವಾಗಿ ಆಲಿಸಿದರೆ, ಅದನ್ನು
> ಕಲಿಯಲು ಸಾಧ್ಯವಿದೆ. ಗುಂಟುರ್‌ಕುನ್‌ ಅವರು ಪ್ರವಾಸ ಮುಗಿಸಿ ಹಿಂತಿರುಗುವ ವೇಳೆ ಅವರು
> ಸ್ಥಳೀಯರು ಸಂಭಾಷಣೆಗೆ ಬಳಸುವ ಶಿಳ್ಳೆ ಭಾಷೆಯ ಕೆಲವು ವಿಶಿಷ್ಟ ಪದಗಳನ್ನು ಗುರುತಿಸಲು
> ಸಾಮರ್ಥ್ಯ ಗಳಿಸಿದ್ದರು.
>
> ‘ಶಿಳ್ಳೆ ಭಾಷೆಯ ಬಗ್ಗೆ ಗಂಧಗಾಳಿ ಇಲ್ಲದವರೂ ಅದರ ನಿರ್ದಿಷ್ಟ ಸ್ವರವು ಯಾವುದಕ್ಕೆ
> ಸಂಬಂಧಿಸಿದ್ದು ಎಂಬುದನ್ನು ಕಲಿಯಬಲ್ಲರು. ಇದಕ್ಕೆ ಕುಸ್ಕೋಯ್‌ ಜನರಂತೆ ಹಕ್ಕಿಗಳ ಭಾಷೆ
> ಕಲಿಯಲು ಆ ಪ್ರದೇಶದಲ್ಲೇ ಹುಟ್ಟಿಬೆಳೆಯಬೇಕಾಗಿಲ್ಲ’ ಎಂದು ಮೆಯೆರ್‌ ಅವರು ಅಧ್ಯಯನದ ಮೂಲಕ
> ಕಂಡುಕೊಂಡಿದ್ದರು. ಗುಂಟುರ್‌ಕುನ್‌ ಅವರ ಅನುಭವವು ಇದನ್ನೂ ಪುಷ್ಟೀಕರಿಸುವಂತಿದೆ.
>
> ಶಿಳ್ಳೆಯ ಭಾಷೆ ಸಂಗೀತದ ಬಗ್ಗೆ ಅಧ್ಯಯನ ನಡೆಸುತ್ತಿರುವ ನರವಿಜ್ಞಾನಿಗಳ ಕುತೂಹಲವನ್ನೂ
> ಕೆರಳಿಸಿದೆ. ಭಾಷೆ ಮತ್ತು ಸಂಗೀತಗಳೆರಡೂ ಮಿದುಳಿನ ಒಂದೇ ಭಾಗದಲ್ಲಿ ಗ್ರಹಿಸಲ್ಪಡುತ್ತವೆ
> ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗುತ್ತಿವೆ.
>
> ಮಾನವನ ಭಾಷೆ ಬೆಳೆದುಬಂದ ಹಾದಿಯು ದೊಡ್ಡ ಜಿಗಿತಗಳ ಬದಲು ಸಣ್ಣ ಸಣ್ಣ ಹೆಜ್ಜೆಗಳನ್ನು
> ಒಳಗೊಂಡಿದೆ. ಈ ಆಲೋಚನೆ ವಿಕಾಸವಾದದ ಬೆನ್ನುಹತ್ತಿದ ಜೀವವಿಜ್ಞಾನಿಗಳಿಗೆ ಹೆಚ್ಚು
> ಆಕರ್ಷಕವಾಗಿ ಕಾಣಿಸಿದೆ. ಆಖಾ ಹಾಗೂ ಹಮಂಗ್‌ ಜನರ ಸಂಸ್ಕೃತಿಯನ್ನು ಗಮನಿಸಿದರೆ, ಆದಿ ಭಾಷೆ
> ಸಂಗೀತದ ಬದಲು ಶಿಳ್ಳೆಯೇ ಆಗಿರಬಹುದೋ ಏನೋ ಎಂದೆನಿಸುತ್ತದೆ!
>
> ಮೆಯೆರ್‌ ಅವರ ಸಂಶೋಧನೆ ಒಂದನ್ನಂತೂ ಖಚಿತವಾಗಿ ಶ್ರುತಪಡಿಸುತ್ತದೆ. ಬಹುದೂರದವರೆಗೆ ಸಂವಹನ
> ನಡೆಸಲು ಬೇಟೆ ಹಾಗೂ ಭಕ್ಷಕ ಪ್ರಾಣಿಗಳ ಗಮನಕ್ಕೆ ಬಾರದಂತೆ ಸಂವಹನ ನಡೆಸಲು ಶಿಳ್ಳೆ ಭಾಷೆ
> ಸೂಕ್ತ. ಈ ಅನುಕೂಲಗಳು ನಮ್ಮ ಪೂರ್ವಜರು ಬದುಕುಳಿಯುವುದಕ್ಕೂ ನೆರವಾಗಿರಬಹುದು. ಕ್ರಮೇಣ
> ಮನುಷ್ಯ ಧ್ವನಿಪೆಟ್ಟಿಗೆ ಮೇಲೆ ಹಿಡಿತ ಸಾಧಿಸಿರಬಹುದು. ಮಾನವನ ಬೆಳವಣಿಗೆಯ ಸಮಗ್ರ
> ಸಂಪುಟವನ್ನು ಪರಿಗಣಿಸಿದರೆ ಶಿಳ್ಳೆಯ ಭಾಷೆಗೆ ಅದರದ್ದೇ ಆದ ಮಹತ್ವವಿದೆ.
> ಆದರೆ, ಚಿಂತನೆ ಬಗ್ಗೆ ವೈಜ್ಞಾನಿಕವಾಗಿ ಒಮ್ಮತವಿಲ್ಲ.
>
> ಆಧುನೀಕರಣದ ಕಬಂಧಬಾಹು ಎಲ್ಲೋ ಕಾಡಿನ ಮೂಲೆಯಲ್ಲಿರುವ ಸಮುದಾಯಗಳನ್ನೂ
> ಆಕ್ರಮಿಸಿಕೊಳ್ಳುತ್ತಿರುವಾಗ ಇಂತಹ ಭಾಷೆಗಳನ್ನು ಕಾಪಾಡಲು ತಕ್ಷಣವೇ ಮುಂದಾಗಬೇಕಾಗುತ್ತದೆ.
> ಇತಿಹಾಸದ ಈ ಮಾರ್ದನಿಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಮುನ್ನವೇ ನಾವು
> ಎಚ್ಚೆತ್ತುಕೊಳ್ಳಬೇಕು.
> ಸಿದ್ದರಾಮಪ್ಪ. ಎಸ್.ಎಂ
> ಸ ಶಿ ಸಪ್ರೌ ಶಾಲೆ ಗಂಜಿಗೆರೆ
> ಕೆ ಆರ್ ಪೇಟೆ ತಾ ಮಂಡ್ಯ ಜಿಲ್ಲೆ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to