Thank You very much sir On Wed, Jan 2, 2019 at 11:36 AM Girish T P <[email protected]> wrote:
> *ಎಲ್ಲಾ ಹಿರಿಯರಿಗೂ ಸ್ನೇಹಿತರಿಗೂ ಹೃನ್ಮನ ನಮಸ್ಕಾರ.* > > ಹೊಸ ವರ್ಷದ ಆರಂಭದಲ್ಲಿ ಈ ಹಿಂದೆ ಒಮ್ಮೆ ಓದಿದ ಪುಸ್ತಕವೊಂದನ್ನು ಪುನಃ ಓದಬೇಕೆಂಬ > ತುಡಿತವನ್ನುಂಟು ಮಾಡುತ್ತಿರುವುದು ಈಗಿನ ತರಬೇತಿಗಳು ಮತ್ತು ಶಾಲಾ ಶಿಕ್ಷಣದಲ್ಲಿ > ನೈಜ್ಯತೆಯಿಂದ ಹಾಗೂ ಸಹಜ ಪ್ರಕ್ರಿಯೆಗಳಿಂದ ದೂರವುಳಿದು ಎದುರಿಸುತ್ತಿರುವ ಸವಾಲುಗಳು. > > ಆ ಪುಸ್ತಕವೇ > *ಪರಿಧಿಯಾಚೆಗಿನ ಪಯಣ*. > ಪುಸ್ತಕದ ಶೀರ್ಷಿಕೆಯೇ ನಾವು ತಿಳಿದು ಕಲ್ಪಿಸಿ ಭ್ರಮಿಸಿ ಹಾಕಿಕೊಂಡಿರುವ ಚೌಕಟ್ಟಿನಾಚೆಗೆ > ಅಲೋಚಿಸುವಂತೆ ಮಾಡುತ್ತದೆ. > > *ಈ ಪುಸ್ತಕದ ಮುಖ್ಯ ತಿರುಳು ಕಲಿಕಾರ್ಥಿಯ(ವಿಶೇಷವಾಗಿ ಮಗು) ಕೇಂದ್ರಿಕೃತವಾಗಿರುವುದು* > > ಅಕ್ಷರಗಳ ಗಾತ್ರ(font size) ದೊಡ್ಡದಾಗಿದ್ದು, ಉತ್ತಮವಾಗಿ ಓದಿಸಿಕೊಂಡು ಹೋಗುವ 206 > ಪುಟಗಳ ಈ ಪುಸ್ತಕವು ಒಟ್ಟು 05 ಭಾಗಗಳನ್ನು ಒಳಗೊಂಡಿದೆ. > > ೧. 'ಮಕ್ಕಳೇ' ಕೇಂದ್ರ > ೨. ಶಿಕ್ಷಕ ಸಂಬಂಧಿತ > ೩. ಶೈಕ್ಷಣಿಕ ವ್ಯವಸ್ಥೆಯೊಳಗೊಂದು ಅವಲೋಕನ > ೪. ಲಿಂಗತ್ವದ ಮಹತ್ವದೆಡೆಗೆ > ೫. ಸಮಾಜಿಕ ಕಳಕಳಿಯ ಇತರೆ ವಿಷಯಗಳು. > > ನಾವು ಅದೆಷ್ಟೋ ಸಂದರ್ಭಗಳಲ್ಲಿ ಶಿಕ್ಷಣ ತಜ್ಞರ, ಸಾಹಿತಿಗಳ ಶಿಕ್ಷಣ ಕುರಿತಾದ > ಗ್ರಂಥಗಳನ್ನು ಉಲ್ಲೇಖಿಸಿ ಮೆಚ್ಚುಗೆ ಸೂಚಿಸುತ್ತೇವೆ. > > ಅದೇ ಕೆಲಸವನ್ನು ಅಥವಾ ಅದಕ್ಕಿಂತಲೂ ವಿಶಿಷ್ಟವಾಗಿ ನಮ್ಮವರೇ ಆ ಕೆಲಸವನ್ನು ಮಾಡಿದಾಗ > ಹಿತ್ತಲ ಗಿಡ ಮದ್ದಲ್ಲವೆಂಬ ರೀತಿಯಲ್ಲಿ ಮೌನಿಯಾಗಿಬಿಡುತ್ತವೆ...! > > *ಅಂದಹಾಗೇ ಈ ಮಹತ್ವದ ಕೃತಿಯನ್ನು ರಚಿಸಿದವರು ನಮ್ಮ ಇಲಾಖೆಯ ೧೯೯೯ನೇ ಬ್ಯಾಚಿನ > ಶಿಕ್ಷಣಾಧಿಕಾರಿಗಳಾದ ಶ್ರೀಯುತ ಡಾ. ಹೆಚ್.ಬಿ.ಚಂದ್ರಶೇಖರ್ ಸರ್ ರವರು.* > > ಪ್ರಸ್ತುತ ಡಿ.ಎಸ್.ಇ.ಆರ್.ಟಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಸೇವೆ > ಸಲ್ಲಿಸುತ್ತಿದ್ದಾರೆ. > > ಪ್ರಜಾವಾಣಿ ದಿನಪತ್ರಿಕೆ ಮತ್ತು ಶಿಕ್ಷಣವಾರ್ತೆಯಲ್ಲಿ ಶ್ರೀಯುತರ ಅಂಕಣಗಳನ್ನು ನಾವು > ಓದುತ್ತಿರುತ್ತೇವೆ. ಚರ್ಚಿಸುತ್ತಿರುತ್ತೇವೆ. > > ಇಲಾಖೆಯೆ ಹೊರಗಿನವರು ಶಿಕ್ಷಣದ ಕುರಿತು ಬರೆಯುವುದಕ್ಕಿಂತ ಇಲಾಖೆಯೊಳಗಿದ್ದುಕೊಂಡೆ ತಮ್ಮ > ಅನುಭವಗಳನ್ನು ಸಂಕಲಿಸಿ ಲೇಖನ, ಪುಸ್ತಕ ಬರೆಯುವವರು ಬಹಳ ಖುಷಿ, ಹೆಮ್ಮೆ ಮತ್ತು ಬಹಳ ಅಪರೂಪ. > ಅಂತಹದ್ದರಲ್ಲಿ ಚಂದ್ರು ಸರ್ ರವರ ಈ ಹೊತ್ತಿಗೆ ಅತ್ಯಂತ ವಾಸ್ತವವಿಕವಾದುದು & > ಪ್ರಯೋಜನಕಾರಿಯಾದುದು. > > ಅವರ ಕೆಲವು ಆಯ್ದ ಅಂಕಣಗಳು ಈ ಪುಸ್ತಕದ ಭಾಗವಾಗಿವೆ. > > ಈ ಪುಸ್ತಕದಿಂದ ಪ್ರೇರಿತನಾಗಿಯೇ ನಮ್ಮ ಶಾಲಾ ಧೇಯ್ಯ ವಾಕ್ಯವಾದ > *ಸಂತಸದಾಯಕ ಕಲಿಕೆಗಾಗಿ ಪರಿಸರ ಮತ್ತು ಮಗು ಸ್ನೇಹಿ ಶಾಲೆ....ಮಗು ಮೊದಲು* ರೂಪಿಸಲು > ಸಾಧ್ಯವಾಗಿದೆ. > > ಬಹಳ ಹಿಂದೆಯೇ ಸರ್ ರವರಿಂದ ಈ ಪುಸ್ತಕವನ್ನು ಪಡೆದುಕೊಂಡಿದ್ದರು ನನ್ನ ಸೋಮಾರಿತನದಿಂದ > ಪರಿಪೂರ್ಣವಾಗಿ ಓದಲು, ಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ. > > ಈ ಪುಸ್ತಕವು ಎಲ್ಲಾ ಶಿಕ್ಷಣಾಸಕ್ತರನ್ನು ಮತ್ತು ಶಿಕ್ಷಣಾಸಕ್ತರಲ್ಲದವರನ್ನೂ ತಲುಪಬೇಕು, > ನಾವೆಲ್ಲರೂ ಲೇಖಕರು ಇಲ್ಲಿ ವ್ಯಕ್ತಪಡಿಸಿರುವ > *ಮಕ್ಕಳ ಸ್ನೇಹಿ ಶಾಲೆಗಳನ್ನು ಕಟ್ಟುವಲ್ಲಿ* ಮುಂದಡಿಯಿಡಬೇಕು. > > ಚಂದ್ರು ಸರ್ ರವರು > *ಶಿಶು ಕೇಂದ್ರಿತ ಶಿಕ್ಷಣ ಪದ್ಧತಿ* ಯನ್ನು ಯಶಸ್ವಿಯಾಗಿ ಸಮಪರ್ಕವಾಗಿ > ಅನುಷ್ಠಾನಯೋಗ್ಯಗೊಳಿಸುವ ಬಗ್ಗೆ ಮನೋ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ ಚರ್ಚಿಸಿದ್ದಾರೆ. > > ಈ ಪುಸ್ತಕವು ನಮ್ಮ ಶಾಲೆಗಳನ್ನು ಮಕ್ಕಳ ಸ್ನೇಹಿಯಾಗಿ ನಡೆಸುಕೊಂಡು ಹೋಗುವಲ್ಲಿ > ಖಂಡಿತವಾಗಿಯೂ ಸಹಕಾರಿ ಮತ್ತು ದಾರಿದೀಪವಾಗುವುತ್ತದೆ. > > *ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಚಾಮರಾಜನಗರದ ದೀನಬಂಧು ಆಶ್ರಮದ ಗೌರವ > ಕಾರ್ಯದರ್ಶಿಗಳು ಮತ್ತು ನಮ್ಮ ಶಿಕ್ಷಣ ವಾರ್ತೆಯ ಗೌರವ ಸಲಹೆಗಾರರಲ್ಲಿ ಒಬ್ಬರಾಗಿರುವ ನನ್ನ > ಪ್ರೀತಿಯ ಗುರುಗಳಾದ ಪ್ರೋ.ಜಿ.ಎಸ್.ಜಯದೇವಣ್ಣ ರವರು.* > > ಪ್ರತಿ ಶಾಲೆಯ ಪ್ರತಿ ಶಿಕ್ಷಕರು, ಶಿಕ್ಷಣ ನೀತಿ ಮತ್ತು ಯೋಜನೆಗಳನ್ನು ರೂಪಿಸುವವರು ಮತ್ತು > ಎಲ್ಲಾ ಹೆತ್ತವರು ಕಡ್ಡಾಯವಾಗಿ ಕೊಂಡು ಓದಲೇಬೇಕಾದಂತಹ ಪುಸ್ತಕ ಪರಿಧಿಯಾಚೆಗಿನ ಪಯಣ. > > *ಪುಸ್ತಕ : ಪರಿಧಿಯಾಚೆಗಿನ ಪಯಣ* > > *ಲೇಖಕರು : ಡಾ. ಹೆಚ್.ಬಿ.ಚಂದ್ರಶೇಖರ್* > > *ಪುಸ್ತಕಗಳಿಗಾಗಿ : ಮಣಿ 9686535465 ಇವರನ್ನು ಸಂಪರ್ಕಿಸಬಹುದು.* > > ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮತ್ತು ಲೇಖಕರ ಬಳಿ ಪುಸ್ತಕ ಲಭ್ಯತೆಯಿರುವುದಿಲ್ಲ ಎಂಬುದಾಗಿ > ಸ್ನೇಹಿತರು ಹೇಳುತ್ತಿದ್ದಾರೆ. > > ನಮ್ಮ ಇಲಾಖೆಯೇ ಎಲ್ಲಾ ಶಾಲೆಗೊಂದು ಪ್ರತಿಯಂತೆ ಸರಬರಾಜು ಮಾಡಿದರೆ ಚೆಂದ... > > ಗೌರವಪೂರ್ವಕ ವಂದನೆಗಳೊಂದಿಗೆ ಧನ್ಯವಾದಗಳು. > > ಗಿರೀಶ ಟಿ.ಪಿ. > 2012ರ ಬ್ಯಾಚಿನ ಮುಖ್ಯಶಿಕ್ಷಕ. > ಸ.ಪ್ರೌ.ಶಾಲೆ ಹಾದಿಕೆರೆ. ತರೀಕೆರೆ. > 9900700249 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "EnglishSTF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
