ವಿಷಯವನ್ನು ಕೇಳಿ ಬಹಳ ಸಂತೋಷವಾಯಿತು. ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಹಾರಯಿಸುತ್ತಿದ್ದೇನೆ.
Swaroop Rao 2011/5/23 Hari Prasad Nadig <[email protected]> > < > http://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:KARNATAK_UNIVERSITY.jpg > > > > ಬರುವ ಶನಿವಾರ *೨೮, ಮೇ, ೨೦೧೧*ರಂದು (28 May 2011) ಧಾರವಾಡದಲ್ಲಿ 'ವಿಕಿಪೀಡಿಯ > ಕಾರ್ಯಾಗಾರ' ಹಮ್ಮಿಕೊಳ್ಳಲಾಗಿದೆ. ಈ ಕಮ್ಮಟದಲ್ಲಿ ಕನ್ನಡ ವಿಕಿಪೀಡಿಯದಲ್ಲಿ ಬರೆಯುವ > ಸ್ವಯಂ-ಸೇವಕರು ವಿಕಿಪೀಡಿಯ ಕುರಿತು ಪರಿಚಯ ಮಾಡಿಕೊಡುವರು. ಇದು ಉತ್ತರ ಕರ್ನಾಟಕದಲ್ಲಿ > ನಡೆಯುತ್ತಿರುವ ಮೊಟ್ಟಮೊದಲ ಕಾರ್ಯಾಗಾರ. ಪ್ರತಿಷ್ಠಿತ ಕಾಮ್ ಸ್ಕೋರ್ ವರದಿಯ ಪ್ರಕಾರ > ತಿಂಗಳಿಗೆ ಭೇಟಿ ಕೊಡುವವರ ಸಂಖ್ಯೆ ಒಟ್ಟು ೩೬.೫ಕೋಟಿಗಿಂತಲೂ ಹೆಚ್ಚಿರುವ ವಿಕಿಪೀಡಿಯ > ವಿಶ್ವದ > ಐದು ಅತಿದೊಡ್ಡ ಅಂತರ್ಜಾಲ ಯೋಜನೆಗಳಲ್ಲೊಂದು. ಅವುಗಳಲ್ಲಿ ಲಾಭದ ಉದ್ದೇಶವಿಲ್ಲದೆ > ನಡೆಸಲಾಗುತ್ತಿರುವ ಏಕೈಕ ಯೋಜನೆ ಕೂಡ ಇದಾಗಿದೆ. ಪ್ರಪಂಚದ ಎಲ್ಲ ಜ್ಞಾನ ಎಲ್ಲರಿಗೂ > ಲಭ್ಯವಾಗಬೇಕು ಎಂಬ ಮಹತ್ತರವಾದ ಉದ್ದೇಶ ಇಟ್ಟುಕೊಂಡು ನಡೆಯುತ್ತಿರುವ ವಿಕಿಮೀಡಿಯದ > ಯೋಜನೆಗಳು > ಕನ್ನಡದಲ್ಲೂ ಲಭ್ಯ. ಕಳೆದ ದಶಕದಲ್ಲಿ ಪ್ರಾರಂಭವಾದ ಇಂಗ್ಲಿಷಿನ ಯೋಜನೆಯಲ್ಲಿ ಸುಮಾರು > ಮೂವತ್ತು ಲಕ್ಷಕ್ಕಿಂತಲೂ ಹೆಚ್ಚಿನ ವಿಷಯಗಳ ಪುಟಗಳಿವೆ. ೨೦೦೪ರಲ್ಲಿ ಪ್ರಾರಂಭವಾದ ಕನ್ನಡದ > ಯೋಜನೆಯಲ್ಲಿ ಈಗ ೧೦,೦೦೦ಕ್ಕೂ ಹೆಚ್ಚಿನ ವಿಷಯಗಳ ಪುಟಗಳಿವೆ. ವಿಕಿಪೀಡಿಯದಲ್ಲಿ ಜ್ಞಾನ > ಹಂಚಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿರುವುದರಿಂದ ಇದರಲ್ಲಿ ಪ್ರತಿಯೊಬ್ಬರಿಗೂ > ಪಾಲ್ಗೊಳ್ಳಲು ಆಸ್ಪದ ಉಂಟು. ವಿಕಿಪೀಡಿಯ ಇಷ್ಟು ದೊಡ್ಡ ಯೋಜನೆಯಾಗಿ, ಒಂದು ಚಳುವಳಿಯಷ್ಟೇ > ರೂಪದಲ್ಲಿ ಬೆಳದದ್ದು ಹೇಗೆ? ವಿಕಿಪೀಡಿಯ ಜಗತ್ತಿನ ಅತಿ ದೊಡ್ಡ ಅಂತರ್ಜಾಲ ಯೋಜನೆಗಳಲ್ಲಿ > ಒಂದಾಗಿದ್ದು ಹೇಗೆ ಎಂಬುದರಿಂದ ಪ್ರಾರಂಭಿಸಿ ವಿಕಿಪೀಡಿಯದಲ್ಲಿ ಭಾಗವಹಿಸುವುದರಿಂದ > ಒದಗಿಬರುವ > ಅವಕಾಶಗಳ ಕುರಿತು, ಕನ್ನಡ ಹಾಗು ಇತರೆ ಯೋಜನೆಗಳಲ್ಲಿರುವ ಸವಾಲುಗಳ ಕುರಿತು ಪುಟ್ಟದಾಗಿ > ಪರಿಚಯ ನೀಡಲಾಗುವುದು. ವಿಕಿಪೀಡಿಯದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಿವುದರ ಕುರಿತು, > ವಿಕಿಪೀಡಿಯ ಕಲ್ಪಿಸುವ ಅವಕಾಶಗಳ ಕುರಿತು ಹೆಚ್ಚಿನ ಒತ್ತು ನೀಡಲಾಗುವುದು. ಧಾರವಾಡದ > ಸುತ್ತಮುತ್ತ ನೆಲೆಸಿರುವ ಆಸಕ್ತರು ಎಲ್ಲರೂ ಭಾಗವಹಿಸಬೇಕಾಗಿ ಕೋರಿಕೊಳ್ಳುತ್ತೇವೆ. > ದಿನಾಂಕ ಮತ್ತು ಸ್ಥಳ > > *ದಿನಾಂಕ:* : ಶನಿವಾರ, *೨೮-ಮೇ-೨೦೧೧* (28 May 2011) > *ಸಮಯ:* ಬೆಳಿಗ್ಗೆ ೧೦.೩೦ ರಿಂದ ೧.೩೦ರವರೆಗೆ. > *ಸ್ಥಳ:* ಸಭಾಂಗಣ, *ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ*, *ಕರ್ನಾಟಕ > ವಿಶ್ವವಿದ್ಯಾಲಯ*, ಧಾರವಾಡ. > ಉದ್ದೇಶಿತ ಸಭಿಕರು > > ಕನ್ನಡ ವಿಕಿ ಯೋಜನೆಗಳ ಎಲ್ಲ ಆಸಕ್ತರು (ಬಳಕೆದಾರರು, ಓದುಗರು, ಬರಹಗಾರರು ಅಥವಾ ಕೇವಲ > ಆಸಕ್ತರು). ಎಲ್ಲರಿಗೂ ಸ್ವಾಗತ. > ಕಾರ್ಯಸೂಚಿ > > 1. ಕನ್ನಡದ ವಿಕಿ ಯೋಜನೆಗಳ ಬಗ್ಗೆ ಕಿರುಪರಿಚಯ ಮತ್ತು ಸದ್ಯದ ಸ್ಥಿತಿಗಳ ವಿವರ > 2. ಕನ್ನಡ ವಿಕಿಪೀಡಿಯವನ್ನು ಸಂಪಾದಿಸುವ ಬಗ್ಗೆ ಪರಿಚಯ > > ಕನ್ನಡ ವಿಕಿಪೀಡಿಯ ಬೆಳೆಸುವ ಕಾರ್ಯದಲ್ಲಿ ಭಾಗವಹಿಸಿ. ದಯವಿಟ್ಟು ಇದನ್ನು ನಿಮ್ಮ > ಗೆಳೆಯರೆಲ್ಲರೊಂದಿಗೂ ಹಂಚಿಕೊಳ್ಳಿ.. > > ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: http://bit.ly/myg0NS > > -- > Hari Prasad Nadig > http://twitter.com/hpnadig > http://flickr.com/hpnadig > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
